Author: AIN Author

ನವದೆಹಲಿ: 2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ (Padma Awards 2024) ಆಯ್ಕೆಯಾಗಿರುವವರ ಪಟ್ಟಿ ಗುರುವಾರ ಪ್ರಕಟಗೊಂಡಿದೆ. ಕರ್ನಾಟಕದ ಇಬ್ಬರು ಸೇರಿ ಒಟ್ಟು 34 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತೆ ಪ್ರೇಮ ಧನರಾಜ್‌ (Prema Dhanraj) ಹಾಗೂ ಬುಡಕಟ್ಟು ಸಮುದಾಯದ ಮೈಸೂರಿನ ಜೇನುಕುರುಬ ಸೋಮಣ್ಣ (Somanna) ಸೇರಿ ಒಟ್ಟು 34 ಮಂದಿಗೆ ಪದ್ಮಶ್ರೀ (Padma Shri) ಪ್ರಶಸ್ತಿ ದಕ್ಕಿದೆ. ಸೋಮಣ್ಣ: ಮೈಸೂರಿನ ಬುಡಕಟ್ಟು ಕಲ್ಯಾಣ ಕಾರ್ಯಕರ್ತ ಸೋಮಣ್ಣ ಅವರು 4 ದಶಕಗಳಿಂದ ಜೇನು ಕುರುಬ ಜನಾಂಗದ ಉನ್ನತಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಮಾಜಕಾರ್ಯ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರೇಮ ಧನರಾಜ್: ಪ್ಲಾಸ್ಟಿಕ್‌ ಸರ್ಜನ್‌ ವೈದ್ಯೆ, ಸಮಾಜ ಸೇವಕಿ, ಬೆಂಕಿಯಲ್ಲಿ ಸುಟ್ಟುಹೋದ ದೇಹಗಳನ್ನು ಸರ್ಜರಿ ಮೂಲಕ ಸರಿಪಡಿಸುವುದು, ಅವರಲ್ಲಿ ಮತ್ತೆ ಜೀವನೋತ್ಸಾಹ ತುಂಬುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಸುಟ್ಟಗಾಯ ತಡೆಗಟ್ಟುವಿಕೆ ಜಾಗೃತಿ ಮತ್ತು ನೀತಿ ಸುಧಾರಣೆಗಾಗಿ ಹೋರಾಡುತ್ತಿದ್ದಾರೆ. ವೈದ್ಯಕೀಯ (ಸ್ಥಳೀಯ ಸುಟ್ಟಗಾಯಗಳು) ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Read More

ನವದೆಹಲಿ: 2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವವರ ಪಟ್ಟಿ ಗುರುವಾರ ಪ್ರಕಟಗೊಂಡಿದೆ. ಕರ್ನಾಟಕದ 9 ಮಂದಿ ಸೇರಿ ಒಟ್ಟು 132 ಸಾಧಕರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. 5 ಜನರಿಗೆ ಪದ್ಮ ವಿಭೂಷಣ, 17 ಜನರಿಗೆ ಪದ್ಮಭೂಷಣ ಹಾಗೂ 110 ಜನರು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ʼಪದ್ಮ’ ಪ್ರಶಸ್ತಿ ಭಾಜನರಾದ 9 ಕನ್ನಡಿಗರು ಪದ್ಮಭೂಷಣ ಪ್ರಶಸ್ತಿಗೆ ಕನ್ನಡಿಗರಾದ ಸೀತಾರಾಮ್‌ ಜಿಂದಾಲ್‌ (ವ್ಯಾಪಾರ ಮತ್ತು ಕೈಗಾರಿಕೆ) ಭಾಜನರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ರೋಹನ್‌ ಮಾಚಂಡ ಬೋಪಣ್ಣ (ಕ್ರೀಡೆ), ಪ್ರೇಮಾ ಧನರಾಜ್‌ (ವೈದ್ಯಕೀಯ), ಅನುಪಮಾ ಹೊಸಕೆರೆ (ಕಲೆ), ಶ್ರೀಧರ್‌ ಮಕಮ್‌ ಕೃಷ್ಣಮೂರ್ತಿ (ಸಾಹಿತ್ಯ ಮತ್ತು ಶಿಕ್ಷಣ), ಕೆ.ಎಸ್‌.ರಾಜಣ್ಣ (ಸಾಮಾಜಿಕ ಕಾರ್ಯ), ಚಂದ್ರಶೇಖರ್‌ ಚನ್ನಪಟ್ಟಣ ರಾಜಣ್ಣಾಚಾರ್‌ (ವೈದ್ಯಕೀಯ), ಸೋಮಣ್ಣ (ಸಾಮಾಜಿಕ ಕಾರ್ಯ), ಶಶಿ ಸೋನಿ (ವ್ಯಾಪಾರ ಮತ್ತು ಕೈಗಾರಿಕೆ).

Read More

ನಮ್ಮ ದೈನಂದಿನ ಬಹುತೇಕ ಚಟುವಟಿಕೆಗಳಿಗೆ ಸ್ಮಾರ್ಟ್ ಫೋನ್ ನೆರವಾಗುತ್ತದೆ. ಹೀಗೆ ನಿರಂತರ ಸ್ಮಾರ್ಟ್ ಫೋನ್ ಬಳಕೆ ಸಹಜವಾಗಿಯೇ ಬ್ಯಾಟರಿಯನ್ನು ಖಾಲಿ ಮಾಡುತ್ತದೆ. ಹೀಗಾಗಿ, ಆಗಾಗ ಬ್ಯಾಟರಿ ಚಾರ್ಜ್ ಕೂಡಾ ಮಾಡುತ್ತಲೇ ಇರಬೇಕಾಗುತ್ತದೆ. ಆದರೆ, ನಮ್ಮ ಆಂಡ್ರಾಯ್ಡ್ ಫೋನ್ನ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಕೆಲವೊಂದು ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳೂ ಇವೆ. ಅವುಗಳ ಬಗ್ಗೆ ಇಲ್ಲಿ ನೋಡೋಣ ಬ್ರೈಟ್ನೆಸ್ ಕಡಿಮೆ ಮಾಡಿ ಸ್ಕ್ರೀನ್ನ ಬ್ರೈಟ್ನೆಸ್ ಕಡಿಮೆ ಮಾಡುವುದು ಬಹಳ ಉತ್ತಮ ಕ್ರಮಗಳಲ್ಲಿ ಒಂದು. ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ಡಿವೈಜ್ಗಳಲ್ಲಿ ಡಿಸ್ಪ್ಲೇ ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ ಹಾಗೂ ಬೇಗ ಬ್ಯಾಟರಿ ಖಾಲಿಯಾಗುವಂತೆ ಮಾಡುತ್ತದೆ. ಹೀಗಾಗಿ ನಿಮ್ಮ ಆಂಡ್ರಾಯ್ಡ್ ಫೋನ್ನಲ್ಲಿ ಸಾಧ್ಯವಾದಷ್ಟು ಬ್ರೈಟ್ನೆಸ್ ಕಡಿಮೆ ಇಟ್ಟುಕೊಳ್ಳುವುದರಿಂದ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುತ್ತದೆ ಟರ್ನ್ ಆಫ್ ಸಮಯ ಕಡಿಮೆ ಮಾಡಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳ ಸ್ಕ್ರೀನ್ ಆಟೋಮ್ಯಾಟಿಕ್ ಆಗಿ ಟರ್ನ್ ಆಫ್ ಆಗುತ್ತದೆ. ಆದರೆ, ಹೀಗೆ ಟರ್ನ್ ಆಫ್ ಆಗುವ ಸಮಯವನ್ನು ಸೆಟ್ ಮಾಡುವ ಅವಕಾಶ ಕೂಡಾ ಬಳಕೆದಾರರಿಗೆ…

Read More

ಸಮಂತಾ (Samantha) ಮತ್ತೆ ಸುದ್ದಿಯಲ್ಲಿದ್ದಾರೆ. ಸ್ಯಾಮ್ ಮತ್ತೆ ಸಿನಿಮಾ ಮಾಡಲು ರೆಡಿಯಾಗ್ತಿದ್ದಾರೆ ಅಂತ ಫ್ಯಾನ್ಸ್ ಫುಲ್ ಖುಷಿಯಲ್ಲಿದ್ದಾರೆ. ಇದು ನಮ್ಮ ಸಮಂತಾ ಅಂತ ಸ್ಮೈಲ್ ಕೊಡ್ತಿದ್ದಾರೆ. ಫ್ಯಾನ್ಸ್ ಖುಷಿಗೆ ಕಾರಣ ಏನು? ಅಸಲಿಗೆ ಸಿನಿಮಾ ಒಪ್ಪಿಕೊಂಡ್ರಾ ಸಮಂತಾ? ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಆರೋಗ್ಯದ ಸಮಸ್ಯೆಯಿಂದ ನಟಿ ಸಮಂತಾ ಕೆಲವು ತಿಂಗಳುಗಳಿಂದ ಸಿನಿಮಾಗಳಿಗೆ ಬ್ರೇಕ್ ಹಾಕಿದ್ದರು. ಏರ್‌ಪೋರ್ಟ್‌ನಲ್ಲಿ ಪೋಸ್ ಕೊಟ್ಟಿದ್ದ ಒಂದು ಫೋಟೋ ಹಾಕಿ ಅಭಿಮಾನಿಗಳಿಗೆ ಅಪ್‌ಡೇಟ್ ಕೊಟ್ಟಿದ್ದರು. ಐಸ್ ಬಾತ್‌ನಲ್ಲಿ ಕುಳಿತಿದ್ದ ಫೋಟೋ ಶೇರ್ ಮಾಡಿ ಹುಡುಗರು ನಡುಗುವಂತೆ ಸ್ಯಾಮ್ ಮಾಡಿದ್ದರು. ಸಿನಿಮಾ ಮಾಡಲಿ ಬಿಡಲಿ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಜೊತೆ ಸಮಂತಾ (Samantha) ಕನೆಕ್ಟ್ ಆಗಿರುತ್ತಿದ್ದರು. ಫ್ಯಾನ್ಸ್ ಕೂಡ ಈಕೆಯ ಪ್ರತಿಯೊಂದು ಅಪ್‌ಡೇಟ್ ನೋಡಿ ಖುಷಿ ಪಟ್ಟು, ಒಳ್ಳೆದಾಗಲಿ ಅಂತ ಒಂದು ರಾಶಿ ಕಾಮೆಂಟ್ ಬರೆಯುತ್ತಿದ್ದರು. ಸದ್ಯ ಸಮಂತಾ ಹೊಸ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿವೆ. ಮಿರ ಮಿರ ಮಿಂಚ್ತಿರುವ ಬಟ್ಟೆಗಳಲ್ಲಿ ಸ್ಯಾಮ್‌ನ ನೋಡಿ ಇದು ನಮ್ಮ…

Read More

ಬೆಂಗಳೂರು : ರಾಷ್ಟ್ರಧ್ವಜ ಅಥವಾ ತ್ರಿವರ್ಣ ಧ್ವಜ ನಮ್ಮ ಹೆಮ್ಮೆಯ ಸಂಕೇತ. ಇದು ನಮ್ಮ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತದೆ. ದೇಶದ ರಾಷ್ಟ್ರಪತಿಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (ಕೆಂಪು ಕೋಟೆ ಮೇಲೆ) ರಾಷ್ಟ್ರಧ್ವಜ ಹಾರಿಸಿದಾಗ ನಾನು ‘ಭಾರತೀಯ’ ಎಂಬ ಭಾವನೆ ಮೂಡುತ್ತದೆ. ಇಂದು 75ನೇ ಗಣರಾಜ್ಯೋತ್ಸವ (ಜನವರಿ 26). ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡುವುದಿಲ್ಲ. ಬದಲಿಗೆ, ಈ ಗೌರವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದನ್ನು ಕಡ್ಡಾಯ. ಹೀಗಾಗಿ, ರಾಷ್ಟ್ರಧ್ವಜ ಸಂಹಿತೆ ಜಾರಿಗೊಳಿಸಲಾಗಿದೆ. ಹಾಗಿದ್ರೆ, ರಾಷ್ಟ್ರಧ್ವಜ ಗೌರವಕ್ಕೆ ನಾವು ಯಾವ ಮುನ್ನೆಚ್ಚರಿಕೆ ಅನುಸರಿಸಬೇಕು? ಇಲ್ಲಿದೆ ನೋಡಿ ಮಾಹಿತಿ. ಧ್ವಜಾರೋಹಣ ಮಾಡುವಾಗ ಮೇಲೆ ಕೇಸರಿ ಬಣ್ಣ ಬರುವಂತೆ ನೋಡಿಕೊಳ್ಳಬೇಕು. ಪ್ರತಿ ಧ್ವಜವು 3:2 ಅಳತೆಯ ಅನುಪಾತವನ್ನು ಹೊಂದಿರಬೇಕು. ಕೇಸರಿ-ಬಿಳಿ-ಹಸಿರು ಬಣ್ಣಗಳ ನಡುವೆ 24 ಗೆರೆಗಳನ್ನು ಹೊಂದಿದ ಅಶೋಕ ಚಕ್ರವಿರಬೇಕು. ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ನೇತು ಹಾಕಬಾರದು. ಧ್ವಜದ ಮೇಲೆ ಏನನ್ನೂ ಬರೆಯಬಾರದು. ವಸ್ತುಗಳು, ಕಟ್ಟಡಗಳು ಇತ್ಯಾದಿಗಳನ್ನು ಮುಚ್ಚಲು…

Read More

2024ರ ಐಪಿಎಲ್ ಟೂರ್ನಿಯ ಮಿನಿ ಹರಾಜಿನಲ್ಲಿ ಸ್ಥಳೀಯ ತಂಡವಾದ ಆರ್ ಸಿಬಿ ಸೇರಿದಂತೆ ಯಾವುದೇ ಫ್ರಾಂಚೈಸಿಯ ಗಮನ ಸೆಳೆಯುವಲ್ಲಿ ಕನ್ನಡಿಗ ಕರುಣ್ ನಾಯರ್ ವಿಫಲರಾಗಿದ್ದರು. ಈಗ 2024ರ ಕೌಂಟಿ ಚಾಂಪಿಯನ್ ಶಿಪ್ ನಲ್ಲಿ ನಾರ್ತ್‌ಹ್ಯಾಂಪ್ಟನ್‌ಶೈರ್‌ ಪರ ಆಡಲು ಕನ್ನಡಿಗ ಸಜ್ಜಾಗಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ 2024ರ ಕೌಂಟಿ ಚಾಂಪಿಯನ್ ಶಿಪ್ ನಲ್ಲಿ 32 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟರ್ ನಾರ್ತ್‌ಹ್ಯಾಂಪ್ಟನ್‌ಶೈರ್‌ ಪರ ಆಡಲು ಹೊರಟಿದ್ದು, 2023ರಲ್ಲಿ ನಡೆದಿದ್ದ ಚಾಂಪಿಯನ್ ಶಿಪ್ ನಲ್ಲಿ ಇದೇ ತಂಡದ ಪರ ಆಡಿದ್ದ ಕರುಣ್ ನಾಯರ್ 3 ಇನಿಂಗ್ಸ್ ನಲ್ಲಿ 78,150 ಹಾಗೂ 21 ರನ್ ಗಳಿಸಿ ಗಮನ ಸೆಳೆದಿದ್ದರು. “ನಾವು ಮತ್ತೊಮ್ಮೆ ಕರುಣ್ ನಾಯರ್ ಅವರ ಹೆಸರನ್ನು ತಂಡದ ಬೋರ್ಡ್ ಮೇಲೆ ಹಾಕಲು ತುಂಬಾ ಹೆಮ್ಮೆ ಪಡುತ್ತೇವೆ. ಈ ಬಾರಿಯೂ ಆತ ತಂಡದ ಬಹುಮೌಲ್ಯ ಆಟಗಾರನಾಗಿರುತ್ತಾನೆ ಎಂಬ ಭರವಸೆ ನನಗಿದೆ” ಎಂದು ಜಾನ್ ಸ್ಯಾಡ್ಲರ್ ಹೇಳಿದ್ದಾರೆ. “ಕೌಂಟಿ ಚಾಂಪಿಯನ್ ಶಿಪ್ ನಲ್ಲಿ ಮತ್ತೊಮ್ಮೆ…

Read More

ಅಮೆರಿಕ: ವಿಚಾರಣೆ ಸಮಯದಲ್ಲಿ ಅಪರಾಧಿಯೊಬ್ಬ ನ್ಯಾಯಧೀಶೆಯ ಮೇಲೆ ದಾಳಿ ಮಾಡಿದ್ದಾನೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​​​ ಆಗಿದೆ. ಈ ವ್ಯಕ್ತಿಯನ್ನು 30 ವರ್ಷದ ಡಿಯೋಬ್ರಾ ರೆಡ್ಡೆನ್ ಎಂದು ಗುರುತಿಸಲಾಗಿದೆ. ಅಪರಾಧಿಯನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿದೆ. ಆತನ ಮೇಲಿರುವ ಆರೋಪದ ಬಗ್ಗೆ ವಿಚಾರಣೆ ನಡೆಸಬೇಕಾದರೆ ಈ ಘಟನೆ ನಡೆದಿದೆ. ಈ ಅಪರಾಧಿ ಮೇಲೆ ಅನೇಕ ಪ್ರಕರಣಗಳಿದ್ದು, ಈಗಾಗಲೇ ಶಿಕ್ಷೆಯನ್ನು ಅನುಭವಿಸಿದ್ದಾನೆ.  ಬ್ಯಾಟರಿ ದಂಧೆಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಿ ಕೋರ್ಟ್​​​ ಮುಂದೆ ಹಾಜರುಪಡಿಸಿದಲಾಗಿದೆ. ವಿಚಾರಣೆ ಸಮಯದಲ್ಲಿ ನ್ಯಾಯಧೀಶರ ಟೆಬಲ್​​ ಮೇಲೆ ಹಾರಿ ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಮೇಲೆ ಹಲ್ಲೆ ನಡೆಸಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಡಿಯೋಬ್ರಾ ರೆಡ್ಡೆನ್ ನ್ಯಾಯಧೀಶರು ಇರುವ ಟೆಬಲ್​​​​ ಮೇಲೆ ಹಾರಿದ ವೇಳೆ ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಅವರು ಕೆಳಗೆ ಬಿದ್ದು ತಲೆ ಗಾಯಗಳಾಗಿವೆ, https://www.youtube.com/watch?v=YfEdZ5dZ1VE&ab_channel=9NEWS ಇನ್ನು ನ್ಯಾಯಧೀಶೆ ಮೇರಿ ಕೇ ಹೋಲ್ತಸ್ ಅವರನ್ನು ಕಾಪಾಡಲು ಬಂದ ಕೋರ್ಟ್​​​​​​ ಮಾರ್ಷಲ್​​​​ಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.…

Read More

2024 ಭಾರತೀಯ ಆಟೋಮೊಬೈಲ್ ಉದ್ಯಮಕ್ಕೆ ಒಂದು ಉತ್ತೇಜಕ ವರ್ಷವಾಗಿದೆ. ಕಳೆದೆರಡು ವರ್ಷಗಳಿಂದ ಸಾಂಕ್ರಾಮಿಕ ಮತ್ತು ಅರೆವಾಹಕ ಪೂರೈಕೆ ಕೊರತೆಯಿಂದಾಗಿ ದೀರ್ಘ ಕುಸಿತದಿಂದ ಈಗಾಗಲೇ ಚೇತರಿಸಿಕೊಂಡಿದೆ. ಈ ವರ್ಷ, ಮಾರಾಟವು ಧನಾತ್ಮಕ ಮತ್ತು ಉತ್ತೇಜಕವಾಗಿದೆ. ವಾಸ್ತವವಾಗಿ, ಹಬ್ಬದ ಋತುವನ್ನು ಒಳಗೊಂಡಿರುವ ಕಳೆದ ಎರಡು ತಿಂಗಳುಗಳು ಮಾರಾಟದ ಚಾರ್ಟ್‌ಗಳಿಗೆ ವಿಶೇಷವಾಗಿ ಆರೋಗ್ಯಕರವಾಗಿವೆ. ಆದ್ದರಿಂದ, ಮುಂದಿನ ವರ್ಷವೂ ಆವೇಗವನ್ನು ಮುಂದುವರಿಸುವ ನಿರೀಕ್ಷೆಯಲ್ಲಿದ್ದೇನೆ. ಜಪಾನಿನ ಕಾರು ತಯಾರಕರು 2024 ರಲ್ಲಿ ಪ್ರಾರಂಭಿಸಬಹುದಾದ ಪ್ರಮುಖ ಮಾದರಿಗಳ ವಿವರಗಳನ್ನು ನಾವು ಪರಿಶೀಲಿಸೋಣ. ಟೊಯೋಟಾ ಟೈಸರ್ ರೋಸ್ಟರ್‌ನಲ್ಲಿ ಮೊದಲನೆಯದು ಟೊಯೋಟಾ ಟೈಸರ್ ಕ್ರಾಸ್ಒವರ್. ಮಾರುತಿ ಸುಜುಕಿ ಫ್ರಾಂಕ್ಸ್‌ಗೆ ಟೊಯೋಟಾದ ಪ್ರತಿರೂಪವಾಗಿ ಸೇವೆ ಸಲ್ಲಿಸುತ್ತಿರುವ ಈ ಮಾದರಿಯು ಟೊಯೋಟಾ ಮತ್ತು ಸುಜುಕಿ ನಡುವಿನ ಸಹಯೋಗದ ಪ್ರಯತ್ನಗಳ ಭಾಗವಾಗಿದೆ. ಬ್ಯಾಡ್ಜ್ ಎಂಜಿನಿಯರಿಂಗ್‌ನ ಅವರ ಅಭ್ಯಾಸವನ್ನು ಗಮನಿಸಿದರೆ, ಪ್ರತಿ ವಾಹನ ತಯಾರಕರು ಇತರರ ಕಾರುಗಳನ್ನು ಅದರ ಬ್ರಾಂಡ್ ಲೋಗೋ ಅಡಿಯಲ್ಲಿ ಮಾರಾಟ ಮಾಡುತ್ತಾರೆ, ಬಾಹ್ಯ ವಿನ್ಯಾಸ, ಆಂತರಿಕ ವಿನ್ಯಾಸ, ವೈಶಿಷ್ಟ್ಯಗಳು ಅಥವಾ ಪವರ್‌ಟ್ರೇನ್‌ಗಳ ವಿಷಯದಲ್ಲಿ ನಾವು…

Read More

ಬಣ್ಣ ಬಣ್ಣದ ಲಿಪ್ಸ್ಟಿಕ್ಗಳು ತುಟಿಗೆ ರಂಗು ನೀಡೋದಷ್ಟೇ ಅಲ್ಲ ನಿಮ್ಮ ಕಾನ್ಫಿಡೆನ್ಸ್ ಕೂಡ ಹೆಚ್ಚಿಸುತ್ತದೆ. ಆದ್ರೆ ನೇರಳೆ ಬಣ್ಣದ ಲಿಪ್ಸ್ಟಿಕ್ ಹಚ್ಚಿದ ಐಶ್ವರ್ಯಾ ರೈ ನೋಡಿ ಜನ ಏನಂದ್ರು ಅಂತ ಮತ್ತೆ ಹೇಳ್ಬೇಕಿಲ್ಲ. ಹೀಗಾಗಿ ನಿಮ್ಮ ಮುಖಕ್ಕೆ ಸರಿಹೊಂದೋ ಬಣ್ಣ ಆರಿಸಿಕೊಳ್ಳೋದು ಮುಖ್ಯ. ಆದ್ರೆ ಅಂಗಡಿಯಲ್ಲಿರೋ ಹಲವಾರು ಬಣ್ಣಗಳ ಲಿಪ್ಸ್ಟಿಕ್ಗಳಲ್ಲಿ ನಿಮಗೆ ಸರಿಹೊಂದುವ ಬಣ್ಣ ಯಾವುದು ಅನ್ನೋ ಗೊಂದಲದಲ್ಲಿದ್ದೀರಾ? ಡೋಂಟ್ ವರಿ…. ನಿಮ್ಮ ಮುಖದ ಬಣ್ಣಕ್ಕೆ ಹೊಂದಿಕೆಯಾಗೋ ಲಿಪ್ಸ್ಟಿಕ್ ಆರಿಸೋದು ಹೇಗೆ ಅನ್ನೋದಕ್ಕೆ ಇಲ್ಲಿದೆ ಟಿಪ್ಸ್. 1. ನೀವು ಮಿಲ್ಕಿ ಬ್ಯೂಟಿಯಾಗಿದ್ರೆ ಈ ಬಣ್ಣಗಳನ್ನ ಆರಿಸಿಕೊಳ್ಳಿ ನೀವು ಹಾಲಿನಂತೆ ಬೆಳ್ಳಗಿದ್ದರೆ ಆರೆಂಜ್, ಪೀಚ್, ಕೋರಲ್, ಪಿಂಕ್ ಅಥವಾ ಕೆಂಪು ಬಣ್ಣದ ಲಿಪ್ಸ್ಟಿಕ್ ಆರಿಸಿಕೊಳ್ಳಿ. ತೀರಾ ಗಾಢ ಬಣ್ಣದ ಲಿಪ್ಸ್ಟಿಕ್ ನಿಮ್ಮ ಮುಖಕ್ಕೆ ಚೆನ್ನಾಗಿ ಕಾಣುವುದಿಲ್ಲ. ಹಗಲು ಹೊತ್ತಿನಲ್ಲಿ ನಿಮ್ಮ ತುಟಿಯ ಬಣ್ಣಕ್ಕಿಂತ ಕೊಂಚ ಗಾಢವಾದ ತಿಳಿ ಶೇಡ್ನ ಲಿಪ್ಸ್ಟಿಕ್ ಹಚ್ಚಿಕೊಳ್ಳಿ. ರಾತ್ರಿಯ ಪಾರ್ಟಿ ಅಥವಾ ಸಮಾರಂಭಕ್ಕಾಗಿ ಕೆಂಪು ಬಣ್ಣದ ಲಿಪ್ಸ್ಟಿಕ್ ಬೆಸ್ಟ್…

Read More

ಬೆಂಗಳೂರು: 2006ರ ನಂತರ ನೇಮಕಾತಿಗೊಂಡ 13,000 ಸರ್ಕಾರಿ ನೌಕರರ ಬೇಡಿಕೆಯಂತೆ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸಿ ಸರ್ಕಾರ ಆದೇಶಿಸಿದೆ. ಎನ್​ಪಿಎಸ್​ ಅನ್ನು ಹಿಂಪಡೆದು ಹಳೆ ಪಿಂಚಣಿ (ಓಪಿಎಸ್) ವ್ಯವಸ್ಥೆ ಜಾರಿಗೊಳಿಸಿ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಅರುಳ್ ಕುಮಾರ್ ಅವರು ಅಧಿಕೃತ ಆದೇಶದ ನಡಾವಳಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ, ಸರ್ಕಾರ ಹಳೆಯ ಪಿಂಚಣಿ ಯೋಜನೆಗೆ ಒಳಪಡಲು ಆರು ಷರತ್ತುಗಳನ್ನು ವಿಧಿಸಿದೆ. ಸರ್ಕಾರದ ಷರತ್ತುಗಳೇನು? * 01-04-2006 ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಸರ್ಕಾರಿ ನೌಕರರು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಲು ಇಚ್ಛಿಸಿದಲ್ಲಿ ತಮ್ಮ ಅಭಿಮತವನ್ನು ನಿಗದಿತ ನಮೂನೆಯಲ್ಲಿ ದಿನಾಂಕ 30.06.2024 ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೇರವಾಗಿ ಸಲ್ಲಿಸತಕ್ಕದ್ದು. ಈ ಆಯ್ಕೆಯನ್ನು ಒಂದು ಬಾರಿಗೆ ಮಾತ್ರ ಚಲಾಯಿಸಲು ಅವಕಾಶವಿರುತ್ತದೆ. * ಒಂದು ಬಾರಿ ಮಾಡಿಕೊಂಡ ಆಯ್ಕೆಯನ್ನು ಬದಲಾಯಿಸಲು ಅವಕಾಶವಿಲ್ಲ. * ಮೇಲಿನ 1ರಂತೆ…

Read More