Author: AIN Author

ತೈವಾನ್: ಚೀನಾ ಸ್ವಯಂ ಆಡಳಿತದ ತೈವಾನ್ ಅನ್ನು ತನ್ನ ಭೂಪ್ರದೇಶವೆಂದು ಹೇಳಿಕೊಳ್ಳುತ್ತದೆ. ಚೀನಾ ಆಕ್ರಮಣ ಮಾಡಿದರೆ, ತೈವಾನಿನ ಅಧಿಕಾರಿಗಳು ಮತ್ತು ಸೈಬರ್ ಭದ್ರತಾ ತಜ್ಞರು ಅದು ತನ್ನ ದಾಳಿಯನ್ನು ಭದ್ರತಾ ಪಡೆಗಳು ಮತ್ತು ರಕ್ಷಣಾ ಮೂಲಸೌಕರ್ಯಕ್ಕೆ ಸೀಮಿತಗೊಳಿಸುವುದಿಲ್ಲ, ಆದರೆ ದ್ವೀಪವನ್ನು ಪ್ರಪಂಚದಿಂದ ಪರಿಣಾಮಕಾರಿಯಾಗಿ ಸಂಪರ್ಕ ಕಡಿತಗೊಳಿಸುತ್ತದೆ ಎಂದು ಹೇಳುತ್ತಾರೆ. ಮೂಲಸೌಕರ್ಯಕ್ಕೆ ನುಗ್ಗುವುದಕ್ಕಾಗಿ ಕಂಪ್ಯೂಟರ್ ನೆಟ್‌ವರ್ಕ್‌ಗಳಿಗೆ ಪ್ರವೇಶವನ್ನು ಪಡೆಯುವ ರಹಸ್ಯ ದಾಳಿಕೋರರಿಂದ ತೈವಾನ್ ನಿರಂತರ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ತೈವಾನ್‌ನ ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಡಿಫೆನ್ಸ್ ಮತ್ತು ಸೆಕ್ಯುರಿಟಿ ರಿಸರ್ಚ್‌ನ ಸೈಬರ್‌ಸೆಕ್ಯುರಿಟಿ ಸಂಶೋಧಕ ಕ್ರಿಸ್ಟಲ್ ತು ಹೇಳಿದ್ದಾರೆ. ಸಂಘರ್ಷದ ಸಮಯದಲ್ಲಿ ಅವರು ಹೆಚ್ಚು ಸಕ್ರಿಯವಾಗಿರಬಹುದು ಎಂದು ತು ಎಎಫ್‌ಪಿಗೆ ಹೇಳಿದ್ದಾರೆ. ಶನಿವಾರದ ಅಧ್ಯಕ್ಷೀಯ ಚುನಾವಣೆಗೆ ಮುಂಚಿನ ವರ್ಷದಲ್ಲಿ ತೈವಾನ್ ವಿರುದ್ಧದ ಸೈಬರ್ ದಾಳಿಗಳು ಹೆಚ್ಚಿವೆ. ದ್ವೀಪದ 23 ಮಿಲಿಯನ್ ಜನರಿಗೆ ಯುದ್ಧ ಮತ್ತು ಶಾಂತಿಯ ನಡುವಿನ ಆಯ್ಕೆ ಎಂದು ಚೀನಾ ಬಣ್ಣಿಸಿದೆ. ಸರ್ಕಾರಿ ಏಜೆನ್ಸಿಗಳು ದಿನಕ್ಕೆ ಅಂದಾಜು ಐದು ಮಿಲಿಯನ್ ಸೈಬರ್ ದಾಳಿಗಳನ್ನು…

Read More

ಭಾರತದ ಮಾಜಿ ನಾಯಕ, ರನ್ ಮೆಷಿನ್ ವಿರಾಟ್ ಕೊಹ್ಲಿ ಅವರು 2023ರ ‘ವರ್ಷದ ಏಕದಿನ ಕ್ರಿಕೆಟಿಗ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿರಾಟ್ ಕೊಹ್ಲಿ ಹೊರತುಪಡಿಸಿ ಮೊಹಮ್ಮದ್ ಶಮಿ ಮತ್ತು ಶುಭ್​ಮನ್ ಗಿಲ್ ಏಕದಿನ ಕ್ರಿಕೆಟಿಗ ಪ್ರಶಸ್ತಿ ರೇಸ್​ನಲ್ಲಿದ್ದರು. ಆದರೆ, ಇಬ್ಬರನ್ನು ಹಿಂದಿಕ್ಕಿ ವಿರಾಟ್ ಕೊಹ್ಲಿ ಈ ಗೌರವಕ್ಕೆ ಭಾಜನರಾಗಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ನಾಲ್ಕನೇ ಬಾರಿಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿರಾಟ್ ಕೊಹ್ಲಿ ಇದಕ್ಕೂ ಮೊದಲು ಮೂರು ಬಾರಿ ಈ ಪ್ರಶಸ್ತಿ ಗೆದ್ದಿದ್ದರು. ನಾಲ್ಕನೇ ಬಾರಿಗೆ ಈ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬಾರಿ ವರ್ಷದ ಏಕದಿನ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಖವಾಜಾಗೆ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ಅವರು 2023ರ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಶ್ವಿನ್, ಜೋ ರೂಟ್ ಹಾಗೂ ಟ್ರಾವಿಸ್ ಹೆಡ್​ ಸ್ಪರ್ಧೆಯಲ್ಲಿದ್ದರೂ ಖವಾಜಾಗೆ ಈ ಪ್ರಶಸ್ತಿ ಒಲಿದಿದೆ. ಖವಾಜಾ ಕಳೆದ…

Read More

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭಗೊಂಡ ಟೀಂ ಇಂಡಿಯಾ (Team India) ಹಾಗೂ ಇಂಗ್ಲೆಂಡ್ (England) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ (IND vs ENG 1st Test) ಮೊದಲ ಇನ್ನಿಂಗ್ಸ್‌ನ 64.3 ಓವರ್‌ಗಳಲ್ಲಿ 246 ರನ್‍ಗಳಿಗೆ ಪ್ರವಾಸಿ ತಂಡ ಸರ್ವಪತನ ಕಂಡಿದೆ. ಈ ಮೂಲಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡಕ್ಕೆ ಟೀಂ ಇಂಡಿಯಾ ಶಾಕ್ ನೀಡಿದೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಂದ್ಯದ ಆರಂಭದಿಂದಲೇ ಭಾರತೀಯ ಬೌಲರ್‌ಗಳ ದಾಳಿಗೆ ಬೆಚ್ಚಿದ ಇಂಗ್ಲೆಂಡ್ ತಂಡ ಕೇವಲ 64.3 ಓವರ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. 246 ರನ್‍ಗೆ ಅಲೌಟ್ ಆಗಿದೆ. ಭಾರತದ ಬೌಲರ್‌ಗಳಾದ ಆರ್.ಅಶ್ವಿನ್ 21 ಓವರ್‌ಗಳಿಗೆ 68 ರನ್ ನೀಡಿ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 18 ಓವರ್‍ಗೆ 88 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ…

Read More

ಹೈದರಾಬಾದ್: ಗುರುವಾರ ಹೈದರಾಬಾದ್‌ನಲ್ಲಿ (Hyderabad) ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳಾದ ಆರ್. ಅಶ್ವಿನ್ (R.Ashwin) ಮತ್ತು ರವೀಂದ್ರ ಜಡೇಜಾ (Ravindra Jadeja) ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ಬೌಲಿಂಗ್ ಜೋಡಿ ಎನಿಸಿಕೊಂಡಿದ್ದಾರೆ. ಈ ಜೋಡಿ 54 ಪಂದ್ಯಗಳಲ್ಲಿ 501 ವಿಕೆಟ್‌ಗಳನ್ನು ಗಳಿಸಿದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರ ದಾಖಲೆ ಮುರಿದು 504 ವಿಕೆಟ್‌ಗಳನ್ನು ಪಡೆದಿದೆ 138 ಟೆಸ್ಟ್ ಪಂದ್ಯಗಳಲ್ಲಿ 1,039 ವಿಕೆಟ್‌ಗಳನ್ನು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಜೋಡಿ ಕಬಳಿಸಿದೆ. ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಈ ಜೋಡಿ ಬರೆದಿದೆ. ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ 81 ಟೆಸ್ಟ್‌ಗಳಲ್ಲಿ 643 ವಿಕೆಟ್‌ಗಳನ್ನು ಪಡೆದು ದಾಖಲೆಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭಗೊಂಡ ಟೀಂ ಇಂಡಿಯಾ (Team India) ಹಾಗೂ ಇಂಗ್ಲೆಂಡ್ (England) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ (IND vs…

Read More

ಬೆಂಗಳೂರಿನ ಬೆಡಗಿ ರುಕ್ಮಿಣಿ ವಸಂತ್ ಅವರು ಇದೀಗ ತೆಲುಗು ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾರನ್ನು (Sreeleela) ಬಿಟ್ಟು ರುಕ್ಮಿಣಿ ವಸಂತ್‌ಗೆ (Rukmini Vasanth) ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಅರಸಿ ಬರುತ್ತಿದೆ. ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ತೆಲುಗು ವರ್ಷನ್ ಟಾಲಿವುಡ್‌ನಲ್ಲಿ ಹವಾ ಕ್ರಿಯೇಟ್ ಮಾಡಿದೆ. ರುಕ್ಮಿಣಿ ನಟಿಸಿದ ಪುಟ್ಟಿ ಪಾತ್ರ ತೆಲುಗು ಮಂದಿಗೆ ಮೋಡಿ ಮಾಡಿದೆ. ಹಾಗಾಗಿಯೇ ತೆಲುಗಿನಲ್ಲಿ ಕನ್ನಡದ ಬೆಡಗಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ವಿಜಯ್ ದೇವರಕೊಂಡ (Vijay Devarakonda) ನಟನೆಯ ಮುಂದಿನ ಚಿತ್ರದಲ್ಲಿ ನಟಿಸುವ ಅವಕಾಶ ರುಕ್ಮಿಣಿಗೆ ಸಿಕ್ಕಿದೆ ಎನ್ನಲಾಗಿತ್ತು. ಈ ಸುದ್ದಿ ಬೆನ್ನಲ್ಲೇ ತೆಲುಗಿನ ಮತ್ತೊಬ್ಬ ಸ್ಟಾರ್ ರವಿತೇಜಾ (Ravi Teja)  ಜೊತೆ ರುಕ್ಮಿಣಿ ನಟಿಸುತ್ತಾರೆ. ಈ ಚಿತ್ರದ ಬಗ್ಗೆ ಮಾತುಕತೆ ಆಗಿದೆ ಎನ್ನಲಾಗುತ್ತಿದೆ. ರವಿತೇಜಾ (Ravi Reja) ನಟನೆಯ ಮುಂಬರುವ ಹೊಸ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆ ಆಗಿರುವ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ಚಿತ್ರಕ್ಕೆ ನಟಿ…

Read More

ಗಣರಾಜ್ಯೋತ್ಸವದ ಮುನ್ನಾ ದಿನ 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು (Padma Awards 2024) ಪ್ರಕಟಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿ ದೊರೆತಿದೆ. ಸಾಧಕರಿಗೆ ಪದ್ಮ ವಿಭೂಷಣ, ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ಅದರಂತೆ ಹಲವು ವರ್ಷಗಳಿಂದ ಕಲಾ ಸೇವೆ ಮಾಡಿರುವ ಮೆಗಾಸ್ಟಾರ್ ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ಕಲೆ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಭಾಜನರಾದವರು 1. ವೈಜಯಂತಿಮಾಲಾ ಬಾಲಿ (ತಮಿಳುನಾಡು) 2.ಮೆಗಾಸ್ಟಾರ್ ಚಿರಂಜೀವಿ (ಆಂಧ್ರಪ್ರದೇಶ) 3.ಪದ್ಮ ಸುಬ್ರಹ್ಮಣ್ಯಂ (ತಮಿಳುನಾಡು) ಕಲೆ ಕ್ಷೇತ್ರದಲ್ಲಿ ಪದ್ಮ ಭೂಷಣ ಪ್ರಶಸ್ತಿ ಭಾಜನರಾದವರು ಮಿಥುನ್ ಚಕ್ರವರ್ತಿ ದತ್ತಾತ್ರೇಯ ಅಂಬಾದಾಸ್ ಮೇಲು ಉಷಾ ಉತ್ತುಪ್ ತಮಿಳಿನ ನಟ ವಿಜಯಕಾಂತ್

Read More

ಗಾಂಧೀನಗರ: ಗುಜರಾತ್‍ನ ಸೂರತ್ ಮೂಲದ ವಜ್ರ ವ್ಯಾಪಾರಿ 11 ಕೋಟಿ ರೂ. ಮೌಲ್ಯದ ಕಿರೀಟವನ್ನು  ರಾಮಲಲ್ಲಾ ಮೂರ್ತಿಗೆ  ದೇಣಿಗೆ ನೀಡಿದ್ದಾರೆ. ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿ ಮಾಲೀಕರಾದ ಮುಕೇಶ್ ಪಟೇಲ್ ದೇಣಿಗೆ ನೀಡಿರುವ ವ್ಯಕ್ತಿ. ಸೂರತ್‍ನಲ್ಲಿ ವಜ್ರ ವ್ಯಾಪಾರಿಯಾಗಿರುವ ಮುಕೇಶ್ ಅವರು ಪ್ರಭು ಶ್ರೀರಾಮನಿಗಾಗಿ 6 ಕೆ.ಜಿ ತೂಕದ ಚಿನ್ನ ಮತ್ತು ವಜ್ರಗಳಿಂದ ತಯಾರಿಸಿರುವ ಕಿರೀಟವನ್ನು ಕೊಡುಗೆಯಾಗಿ ನೀಡಿದ್ದಾರೆ. ಅಯೋಧ್ಯೆಯ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ  ಇಡೀ ದೇಶವೇ ಸಾಕ್ಷಿಯಾಗಿತ್ತು. ಪ್ರಭು ಶ್ರೀರಾಮ ಚಿನ್ನದ ಅಭರಣಗಳಿಂದ ಕಂಗೊಳಿಸುತ್ತಿದ್ದನು. ಇದೇ ಹೊತ್ತಲ್ಲಿ ಸೂರತ್‍ನ  ವಜ್ರ ವ್ಯಾಪಾರಿ ನೀಡಿರುವ 11 ಕೋಟಿ ರೂಪಾಯಿ ಮೌಲ್ಯ ಬೆಲೆ ಬಾಳುವ ಚಿನ್ನ ಮತ್ತು ವಜ್ರಗಳಿಂದ ತಯಾರಿಸಿರುವ ಕಿರೀಟ ದಾನ ಮಾಡಿದ್ದಾರೆ .  ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಮುಕೇಶ್ ಪಟೇಲ್ ಅಯೋಧ್ಯೆಗೆ ಆಗಮಿಸಿದ್ದರು. ಬಳಿಕ ಖುದ್ದಾಗಿ ಮಂದಿರದ ಪ್ರಧಾನ ಅರ್ಚಕರು ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಗಳಿಗೆ ಸೂಕ್ಷ್ಮವಾಗಿ ರಚಿಸಲಾದ ಕಿರೀಟವನ್ನು ಹಸ್ತಾಂತರ ಮಾಡಿದ್ದಾರೆ. ಹಲವಾರು…

Read More

ಭಾರತದ ವಿವಿಧ ಭಾಗಗಳಲ್ಲಿ ಮೊಮೊಸ್ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ನೇಪಾಳದಿಂದ ಆರಂಭವಾದ ಈ ಖಾದ್ಯ ದೇಶದ ಮೂಳೆ ಮೂಲೆಗಳಿಗೂ ಹಬ್ಬಿದೆ. ಸಂಜೆಯಾಗುತ್ತಿದ್ದಂತೆಯೇ ರಸ್ತೆ ಬದಿಗಳಲ್ಲಿ ಮೊಮೊಸ್ ಸ್ಟಾಲ್‌ಗಳು  ಎದ್ದು ನಿಲ್ಲುತ್ತವೆ. ಈ ಖಾದ್ಯ ತಿನ್ನಲು ಬಲು ರುಚಿ. ಈ ರುಚಿಯ ಕಾರಣದಿಂದಲೇ ಇದನ್ನು ಎಷ್ಟು ತಿಂದರೂ ಕಡಿಮೆ ಎಂದೆನಿಸುತ್ತದೆ.    ಆದರೆ ರಸ್ತೆ ಬದಿಯಲ್ಲಿ ತರಾತುರಿಯಲ್ಲಿ ತಿನ್ನುವ ಮೊಮೊಸ್ ನಿಮ್ಮ ದೇಹಕ್ಕೆ ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಅದರಲ್ಲಿ ಎಣ್ಣೆ ಮತ್ತು ಮಸಾಲೆಗಳಿಲ್ಲ ಎಂದು ನಮಗೆ ಅನಿಸುತ್ತದೆ. ಎಣ್ಣೆ ಮತ್ತು ಮಸಾಲೆ ಇಲ್ಲದಿರುವಾಗ ಇದು ಹೇಗೆ ಅಪಾಯಕಾರಿ ಎಂದು ಹಲವರು ಕೇಳುತ್ತಾರೆ. ಎಷ್ಟೇ ತಿಂದರೂ ಅದು ದೇಹಕ್ಕೆ ಹಾನಿಕಾರಕವಲ್ಲ ಎಂದು ಭಾವಿಸುವುದು ತುಂಬಾ ತಪ್ಪು. ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತೆ: ಮೊಮೊಸ್ ತಯಾರಿಸಲು ಮೈದಾ ಬಳಸಲಾಗುತ್ತದೆ.  ಮೈದಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಪಿಷ್ಟದಿಂದಾಗಿ ಸ್ಥೂಲಕಾಯದ (obesity) ಅಪಾಯ ಹೆಚ್ಚಾಗುತ್ತದೆ. ಇದಲ್ಲದೆ, ಮೈದಾ ತಿನ್ನುವುದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ (ಕೆಟ್ಟ ಕೊಲೆಸ್ಟ್ರಾಲ್) ಮಟ್ಟವನ್ನು…

Read More

ಒಂದು ವಾರದಲ್ಲಿ ರೈತರಿಗೆ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಒಂದು ವಾರದಲ್ಲಿ ರೈತರಿಗೆ ಬರ ಪರಿಹಾರದ ಮೊದಲ ಕಂತಿನ ಹಣ ಪಾವತಿಯಾಗುತ್ತದೆ. ಈ ಹಿಂದೆ ಬರ ಪರಿಹಾರ, ಅತೀವೃಷ್ಟಿ ಪರಿಹಾರ ನೀಡುವಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದವು. ಎಷ್ಟೋ ಜನ ಬೆಳೆಯನ್ನೇ ಇಡದಿದ್ದರೂ ಅವರಿಗೂ ಪರಿಹಾರ ಸಿಗುತ್ತಿತ್ತು. ಬೆಳೆ ಹಾನಿಯಾದವರಿಗೆ ಪರಿಹಾರ ಸಿಗುತ್ತಿರಲಿಲ್ಲ ಎಂದರು. ಹಿಂದಿನ ಸರ್ಕಾರ ಇದ್ದಾಗ, ನಾನು ಕೃಷಿ ಸಚಿವನಿದ್ದಾಗಲೂ ನೋಡಿದ್ದೇನೆ. ಯಾರದ್ದೋ ಜಮೀನು ಮತ್ತೊಬ್ಬರಿಗೆ ಹಣ ಪಾವತಿಯಾಗಿತ್ತಿತ್ತು. ರೈತರ ಬೆಳೆಯೇ ಬೇರೆ ಪರಿಹಾರ ಬರುವುದೇ ಬೇರೆ ಬೆಳೆಗೆ. ಅಧಿಕಾರಿಗಳು ಮಾಹಿತಿ ಸೇರಿಸುವಾಗ ತಪ್ಪುಗಳಾಗುತ್ತಿದ್ದವು. ಇದೆಲ್ಲಾ ಸರಿಮಾಡಿ ಬೆಳೆಸಮೀಕ್ಷೆ ಆಧಾರದಲ್ಲಿ ಹಣ ಪಾವತಿಯಾಗುತ್ತದೆ ಎಂದರು. ವ್ಯವಸ್ಥೆ ಸರಿಪಡಿಸಲು ಎರಡು ತಿಂಗಳು ತಡವಾಗಿದೆ. ಒಂದು ವಾರದಲ್ಲಿ ಮೊದಲ ಕಂತಿನ ಹಣ ಬರುತ್ತದೆ. 12 ಲಕ್ಷ ಜನರಿಗೆ ಆರ್‌ಬಿಐಗೆ ಪೇಮೆಂಟ್ ಆರ್ಡರ್ ಕಳುಹಿಸಿದ್ದೇವೆ. ಇನ್ನೂ 20 ಲಕ್ಷ…

Read More

ಮೈಸೂರು: 2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ (Padma Awards 2024) ಆಯ್ಕೆಯಾಗಿರುವವರ ಪಟ್ಟಿ ಗುರುವಾರ ಪ್ರಕಟಗೊಂಡಿದೆ. ಕರ್ನಾಟಕದ ಇಬ್ಬರು ಸೇರಿ ಒಟ್ಟು 34 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೆ ಮೈಸೂರಿನ  ಆದಿವಾಸಿ ಮುಖಂಡನಿಗೆ ಒಲಿದ ಪದ್ಮಶ್ರೀ ಪ್ರಶಸ್ತಿ  ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಮೊತ್ತ ಹಾಡಿಯ ನಿವಾಸಿ. ಜೇನು ಕುರುಬ ಸಮುದಾಯದ ಸೋಮಣ್ಣನಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಸೋಮಣ್ಣ: ಮೈಸೂರಿನ ಬುಡಕಟ್ಟು ಕಲ್ಯಾಣ ಕಾರ್ಯಕರ್ತ ಸೋಮಣ್ಣ ಅವರು 4 ದಶಕಗಳಿಂದ ಜೇನು ಕುರುಬ ಜನಾಂಗದ ಉನ್ನತಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಮಾಜಕಾರ್ಯ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

Read More