Author: AIN Author

ಬೆಂಗಳೂರು: ರಾಜ್ಯದಲ್ಲಿ ಇಂದು 76 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 5,037 ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, 76 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು ಯಾವುದೇ ಸಾವು ನೋವು ವರದಿಯಾಗಿಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ 349 ಸಕ್ರಿಯ ಪ್ರಕರಣಗಳಿವೆ. ನಿನ್ನೆಗಿಂತ ಇಂದು ಗುಣಮುಖರಾಗಿರುವವರ ಸಂಖ್ಯೆ ಹೆಚ್ಚಿದೆ. ಇನ್ನುಳಿದಂತೆ ಇಂದು ಕೋವಿಡ್‌ನಿಂದ ಗುಣಮುಖರಾಗಿ 349 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಪಾಸಿಟಿವಿಟಿ ದರ ಶೇ. 1.50 ಇದೆ. ಬೆಂಗಳೂರಿನಲ್ಲಿ ಇಂದು 25 ಪಾಸಿಟಿವ್‌ ಕೇಸ್‌ಗಳು ವರದಿಯಾಗಿದೆ. ಮೈಸೂರಿನಲ್ಲಿ 9, ಮಂಡ್ಯದಲ್ಲಿ 6, ತುಮಕೂರಿನಲ್ಲಿ 5, ದಕ್ಷಿಣ ಕನ್ನಡದಲ್ಲಿ 2 ಪ್ರಕರಣಗಳು ದಾಖಲಾಗಿದೆ.

Read More

ಬೆಂಗಳೂರು: 75ನೇ ಗಣರಾಜ್ಯೋತ್ಸವದ  ಅಂಗವಾಗಿ ಕೆಪಿಸಿಸಿ ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಮಾತಾಡಿದ ಖರ್ಗೆ ಅವರು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ತತ್ವ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳಲ್ಲ, ದೇಶದ ಐಕ್ಯತೆಗಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರು ತಮ್ಮ ಪ್ರಾಣಗಳನ್ನು ಬಲಿದಾನ ಮಾಡಿದ್ದನ್ನು ಯಾರೂ ಮರೆಯಬಾರದು, ಕಾಂಗ್ರೆಸ್ ಬಡವರು, ದಲಿತರು, ಕೃಷಿಕರು, ಶೋಷಿತರು ಮತ್ತು ಮಹಿಳೆಯರ ಬಗ್ಗೆ ಕಾಳಜಿ ಮತ್ತು ಗೌರವ ಹೊಂದಿರುವ ಪಕ್ಷ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಜೊತೆಗೆ ಆರ್‌ಎಸ್‌ಎಸ್ ನವರು ನಾವೇ ದೇಶ ಕಾಪಾಡುವವರು. ಬೇರೆ ಯಾರೂ ಇಲ್ಲ ಅಂತ ದೇಶಭಕ್ತಿ ಬಗ್ಗೆ ಮಾತಾಡ್ತಾರೆ. ಸ್ವಾತಂತ್ರ‍್ಯ ಬಂದಿದ್ದು, ತಂದಿದ್ದು ಕಾಂಗ್ರೆಸ್ ಪಕ್ಷ. ಕರ್ನಾಟಕದ ಅನೇಕ ಮಹಾಪುರುಷರು ಇದಕ್ಕೆ ಹೋರಾಟ ಮಾಡಿ ಸ್ವಾತಂತ್ರ‍್ಯವನ್ನು ತಂದಿದ್ದಾರೆ. ಆದರೆ ಇವತ್ತು ಈ ಬಿಜೆಪಿ, ಪ್ರಧಾನಮಂತ್ರಿ ಮತ್ತು ಗೃಹ ಮಂತ್ರಿ ಸೇರಿ ತಮ್ಮ ಕೈಗೊಂಬೆನ್ನಾಗಿ ಮಾಡಿಟ್ಟುಕೊಳ್ಳಬೇಕು ಅಂತ ಸರ್ವ ಪ್ರಯತ್ನ ನಡೆದಿದೆ.…

Read More

ಮೈಸೂರು: ಪ್ರಾರಂಭಿಕ ಹಂತದಲ್ಲಿಯೇ ಕುಷ್ಠರೋಗದ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಕ್ಷಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಜಿಲ್ಲೆಯನ್ನು ಕುಷ್ಟ ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ ವಿ ರಾಜೇಂದ್ರ ಅವರು ತಿಳಿಸಿದರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ -2024 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಹದ ಯಾವುದೇ ಭಾಗದಲ್ಲಿ ತಾಮ್ರ ಬಣ್ಣದ ಸ್ಪರ್ಶ ಜ್ಞಾನವಿಲ್ಲದ ಬಿಳಿ ಮಚ್ಚೆಗಳು, ತ್ವಚೆಯ ಮೇಲೆ ಕೆಂಪಾದ ಬಾವು, ಕಣ್ಣು ಮುಚ್ಚುವಲ್ಲಿ ತೊಂದರೆ ಇತ್ಯಾದಿ ಲಕ್ಷಣಗಳು ಕಂಡುಬಂದರೆ ಸಾರ್ವಜನಿಕರು ತಮ್ಮ ಹತ್ತಿರದ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಕುಷ್ಟ ರೋಗ ಗುಣಪಡಿಸುವ ಕಾಯಿಲೆಯಾಗಿದೆ. ಕುಷ್ಟ ರೋಗಿಗಳನ್ನು ಪ್ರತೀಕವಾಗಿ ಕಾಣದೆ ಅವರನ್ನು ಸಾಮಾನ್ಯರಂತೆ ಕಾಣಬೇಕು. ಇದು ಚರ್ಮದಿಂದ ಚರ್ಮಕ್ಕೆ ಹರಡುವುದಿಲ್ಲ ಎಂದು ತಿಳಿಸಿದರು. https://ainlivenews.com/rs-3-lakh-loan-for-women-without-interest-how-to-apply-here-is-the-complete-details/ ಕುಷ್ಟ ರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ…

Read More

ಬೆಂಗಳೂರು: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ವೇಳೆ ಅಪರಿಚಿತ ವ್ಯಕ್ತಿಯೋರ್ವ ಸಿಎಂ ಸಿದ್ದರಾಮಯ್ಯ ಬಳಿ ನುಗ್ಗಲು ಯತ್ನಿಸಿರುವ ಘಟನೆ ನಡೆದಿದೆ. ಮೈಸೂರು ಮೂಲದ ಪರಶುರಾಮ್​ ಕರ ಪತ್ರ ಹಿಡಿದು ಸಿಎಂ ಬಳಿ ನುಗ್ಗಲು ಯತ್ನಿಸಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ. KPSC ಆರ್ಡರ್ ವಿಳಂಬದ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲು ಬಂದಿದ್ದ ಪರಶುರಾಮ್ ಅವರನ್ನು ಸಿಎಂ ಬಳಿ ಬಿಡದಿದ್ದಕ್ಕೆ ಏಕಾಏಕಿ ನುಗ್ಗಲು ಯತ್ನಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. KPSC ಆರ್ಡರ್ ವಿಳಂಬದ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲು ಪರಶುರಾಮ್ ಬಂದಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋಗಲು ಪೊಲೀಸರು ಬಿಡದಿದ್ದಾಗ ಪರಶುರಾಮ್ ಗಣರಾಜ್ಯೋತ್ಸವ ಪರೇಡ್ ಮಧ್ಯೆದಲ್ಲೇ ನುಗ್ಗಲು ಯತ್ನಿಸಿದ್ದಾರೆ. ಗಣರಾಜ್ಯೋತ್ಸವ ಪರೇಡ್ ಮಧ್ಯೆದಲ್ಲಿ ಮನವಿ ಪತ್ರ ಪ್ರದರ್ಶಿಸಿದ್ದಾರೆ. ಪರಶುರಾಮ್ ಮನವಿ ಪತ್ರ ಪ್ರದರ್ಶಿಸುತ್ತಿದ್ದ ಹಾಗೇ ಪೊಲೀಸರು ಅವರನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದುಕೊಂಡು ಹೋಗಲಾಗಿದೆ.

Read More

ನವದೆಹಲಿ: 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ ಎಂದು ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ (Emmanuel Macron) ಘೋಷಿಸಿದ್ದಾರೆ. 75ನೇ ಗಣರಾಜ್ಯೋತ್ಸವ ಆಚರಣೆಯ (Republic Day) ಮುಖ್ಯ ಅತಿಥಿಯಾಗಿ ಮ್ಯಾಕ್ರನ್ ಭಾರತಕ್ಕೆ ಆಗಮಿಸಿದ್ದಾರೆ. ಗಣರಾಜ್ಯೋತ್ಸವ ಆಚರಣೆಗೂ ಮುನ್ನ ಶುಕ್ರವಾರ ಬೆಳಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಮ್ಯಾಕ್ರನ್‌ ಈ ರೀತಿಯಾಗಿ ಬರೆದುಕೊಂಡಿದ್ದಾರೆ. https://ainlivenews.com/rs-3-lakh-loan-for-women-without-interest-how-to-apply-here-is-the-complete-details/ ಎಕ್ಸ್‌ನಲ್ಲೇನಿದೆ..?: 2030ರ ವೇಳೆಗೆ ಸುಮಾರು 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಲು ಆಹ್ವಾನಿಸುವುದಾಗಿ ನಿರ್ಧರಿಸಿದ್ದೇನೆ. ಇದು ಬಹಳ ಮಹತ್ವಾಕಾಂಕ್ಷೆಯ ಗುರಿಯಾಗಿದೆ, ಆದರೆ ನಾನು ಅದನ್ನು ಮಾಡಲು ತೀರ್ಮಾನಿಸಿರುವುದಾಗಿ ಮ್ಯಾಕ್ರನ್‌ ತಿಳಿಸಿದ್ದಾರೆ. ಭಾರತಕ್ಕೆ ಆಗಮಿಸಿರುವ ಮ್ಯಾಕ್ರನ್‌ ಅವರು ಜೈಪುರಕ್ಕೆ ಆಗಮಿಸಿದ್ದು ಈ ವೇಳೆ ಅವರನ್ನು ನರೇಂದ್ರ ಮೋದಿ (Narendra Modi) ಅವರು ಸ್ವಾಗತಿಸಿದ್ದರು. ಬಳಿಕ ಪ್ರಧಾನಿ ಜೊತೆ ಜೈಪುರದಲ್ಲಿ ಭರ್ಜರಿ ರೋಡ್ ಶೋ ನಲ್ಲಿ ಭಾಗಿಯಾಗಿದ್ದರು. ಗಣರಾಜ್ಯೋತ್ಸವದ ಬಳಿಕ ಅವರು ಫ್ರಾನ್ಸ್‌ ರಾಯಭಾರ ಕಚೇರಿಗೆ ಭೇಟಿ ನೀಡಲಿರುವ ಅವರು, ಅಲ್ಲಿನ ಸಿಬ್ಬಂದಿ ಜೊತೆ ಮಾತುಕತೆ ನಡೆಸಲಿದ್ದಾರೆ. ಸಂಜೆ 7.10ಕ್ಕೆ ರಾಷ್ಟ್ರಪತಿ…

Read More

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿನ ಮುಸ್ಲಿಮರ ಓಲೈಕೆ, ಹಿಂದೂ ಕಡೆಗಣನೆ ನೋಡಿ ಶೆಟ್ಟರ್ ವಾಪಸ್​ ಬಿಜೆಪಿಗೆ ಬಂದಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇದೇನೂ ಆಪರೇಷನ್ ಕಮಲ ಅಲ್ಲ. ಜಗದೀಶ ಶೆಟ್ಟರ್ ಅವರು ಸಂಘ ಪರಿವಾರದ ಹಿನ್ನೆಲೆಯಿಂದ ಬೆಳೆದು ಬಂದಿದ್ದಾರೆ. ಅವರು ಮುಸ್ಲಿಮರನ್ನು ಓಲೈಸುವ ಪಕ್ಷಕ್ಕೆ ಏಕಾಏಕಿ ಸೇರಿಬಿಟ್ಟಿದ್ದರು‌. ರಾಮನವಮಿಗೂ ಇಮಾಮ್ ಸಾಬಿಗೂ ಏನು ಸಂಬಂಧ ಎನ್ನುವಂತೆ ಆಗಿತ್ತು. ಮುಸ್ಲಿಮರ ಓಲೈಕೆ ಹಾಗೂ ಹಿಂದೂಗಳ ಕಡೆಗಣನೆಯನ್ನು ನೋಡಿ ಅವರಿಗೆ ಉಸಿರುಗಟ್ಟುವ ವಾತಾವರಣ ಉಂಟಾಗಿತ್ತು. ಶೆಟ್ಟರ್ ಅವರು ಮರಳಿ ಗೂಡಿಗೆ ಬಂದಿರುವುದನ್ನು ತುಂಬು ಹೃದಯದಿಂದ ಸ್ವಾಗತ ಮಾಡಿದ್ದೇವೆ ಎಂದರು. ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ, ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮೊದಲಾದ ಕಾರಣಗಳಿಂದ ಇನ್ನಷ್ಟು ನಾಯಕರು ಬಿಜೆಪಿ ಕಡೆ ಬರಲಿದ್ದಾರೆ. ಇನ್ನೇನಿದ್ದರೂ ‘ಕಾಂಗ್ರೆಸ್ ಚೋಡೊ’ ಎಂಬ ಘೋಷಣೆ ಕೇಳಿಬರಲಿದೆ. ಆಮ್ ಆದ್ಮಿ ಪಕ್ಷ, ಮಮತಾ ಬ್ಯಾನರ್ಜಿಯವರ ಪಕ್ಷ ಕಾಂಗ್ರೆಸ್ ನಾಲಾಯಕ್ ಎಂದು ಓಡಿಸಿದೆ. ಕಾಂಗ್ರೆಸ್ ಪಕ್ಷವನ್ನು…

Read More

‘ಕಾಟೇರ’ ಸಕ್ಸಸ್​ನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟ ಚಿಕ್ಕಣ್ಣರಿಗೆ ಶಾಕಿಂಗ್ ಗಿಫ್ಟ್​ ನೀಡಿದ್ದಾರೆ. ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ‘ಉಪಾಧ್ಯಕ್ಷ’ ಸಿನಿಮಾ ಬಿಡುಗಡೆ ಹಿನ್ನೆಲೆ ಸ್ವತಃ ದರ್ಶನ್ ಅವರೇ 60 ಅಡಿ ಎತ್ತರದ ಕಟೌಟ್​ ಮಾಡಿಸಿದ್ದಾರೆ. ಚಿತ್ರ ರಿಲೀಸ್ ವೇಳೆ ಚಿತ್ರತಂಡ ಕಟೌಟ್ ಮಾಡಿಸುವುದು ಸಾಮಾನ್ಯ. ಅದರೆ, ನಟ ದರ್ಶನ್ ಕಟೌಟ್​ ಮಾಡಿಸಿರುವ ವಿಚಾರವನ್ನು ಸೀಕ್ರೆಟ್ ಆಗಿಯೇ ಇಟ್ಟಿದ್ದರು. ಇದು ಉಪಾಧ್ಯಕ್ಷ ಚಿಕ್ಕಣ್ಣರಿಗೆ ತಿಳಿದಿದ್ದು, ಅಚ್ಚರಿಯಾಗಿದ್ದಾರೆ. ಆನಂದ್​ ಆರ್ಟ್ಸ್​ ತಂಡದವರು 60 ಅಡಿ ಕಟೌಟ್​ ಸಿದ್ಧಪಡಿಸುತ್ತಿದ್ದು, ನಾಳೆ ಚಿತ್ರ ಪ್ರದರ್ಶನಗೊಳ್ಳುವ ಗಾಂಧಿನಗರದ ಮುಖ್ಯ ಚಿತ್ರಮಂದಿರದ ಮುಂದೆ ತಲೆ ಎತ್ತಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಚಿಕ್ಕಣ್ಣ, ನಿಜಕ್ಕೂ ಈ ವಿಷಯ ತಿಳಿದು ಅಚ್ಚರಿ ಆಗಿದೆ. ನನ್ನ ಸ್ವಂತ

Read More

ಬೆಂಗಳೂರು : ನಾನು ವಿತ್ ಔಟ್ ಪಾರ್ಟಿ, ಸಿಂಬಲ್ ಗೆದ್ದು ಬಂದಿದ್ದೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸ್ಪಷ್ಟವಾಗಿ ಹೇಳ್ತಿನಿ.. ಖಂಡಿತ ನನಗೆ ಬಿಜೆಪಿ ಸೀಟು ಕೊಡ್ತಾರೆ ಎಂಬ ನಂಬಿಕೆ ಇದೆ. ಕೆಲಸ ಹಾಗೂ ಗೌರವ ಉಳಿಸಿಕೊಂಡಿದ್ದೇವೆ, ಅದನ್ನ ಗುರುತಿಸ್ತಾರೆ ಅಂದುಕೊಂಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಂಬರೀಶ್ ಅವರು ದಾಖಲೆಯಲ್ಲಿ ನಾಲ್ಕು ಬಾರಿ ಗೆದ್ದಿದ್ದರು. ನಾನು ವಿತ್ ಔಟ್ ಪಾರ್ಟಿ, ಸಿಂಬಲ್ ಗೆದ್ದು ಬಂದಿದ್ದೇನೆ. ನಾನು ಮಂಡ್ಯದಲ್ಲಿ ನಿಲ್ಲಬೇಕು, ಬೇರೆ ಕಡೆ ನಿಲ್ಲುವ ಅನಿವಾರ್ಯ ಇಲ್ಲ. ಅಂಬರೀಶ್ ಅವರು ಹೋಗ್ತಾ ನನಗು ಜವಾಬ್ದಾರಿ ಬಿಟ್ಟುಹೋಗಿದ್ದಾರೆ. ಅಂಬರೀಶ್ ಕನಸನ್ನು ನಾನು ಪೂರೈಸಬೇಕು. ಅದಕ್ಕೆ‌ ಮಂಡ್ಯ ಜನ ಅವಕಾಶ ಕೊಟ್ಟಿದ್ದಾರೆ ಎಂದು ತಿಳಿಸಿದರು. ಎರಡು ದಿನದ ಹಿಂದೆನೇ ಎಲ್ಲಾ ಬಿಜೆಪಿ ಸ್ಥಳೀಯ ನಾಯಕರು ಬಂದಿದ್ದರು. ಮುಂದೆ ಬಿಜೆಪಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬ ಕುರಿತು ಚರ್ಚೆಯಾಗಿದೆ. ಮೈತ್ರಿಯಾಗಿದ್ರೂ ಸಿಟ್ಟಿಂಗ್ ಎಂಪಿಗೆ ಟಿಕೆಟ್ ಕೊಡುವ ಪದ್ದತಿಯಿದೆ. ಅವರು…

Read More

ಬೆಂಗಳೂರು: ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀಮತಿ ಲೀಲಾ ದೇವಿ ಆರ್, ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಮತ್ತು ಬೆಂಗಳೂರು ನಗರದ ಎಲ್ಲ ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು

Read More

ಬೆಂಗಳೂರು : ಸುಮಲತಾ ಅಂಬರೀಶ್ ಜೊತೆಗೆ ಮಾತನಾಡಿದ್ದೇವೆ. ಮಂಡ್ಯದಿಂದಲೇ ಸ್ಪರ್ಧೆ ಮಾಡ್ತೇನೆ ಎಂದು ಮೇಡಂ ಹೇಳಿದ್ದಾರೆ. ಬೇರೆ ಕಡೆ ಹೋಗಲ್ಲ ಎಂದು ಹೇಳಿದ್ದಾರೆ, ಖುಷಿಯಾಗಿದೆ ಎಂದು ಮಾಜಿ ಸಚಿವ ನಾರಾಯಣಗೌಡ ಹೇಳಿದರು. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಭೇಟಿ ಬಳಿಕ ಮಾಜಿ ಸಚಿವ ನಾರಾಯಣಗೌಡ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್​ಗೂ ಮನವಿ ಮಾಡುತ್ತೇವೆ ಎಂದು ತಿಳಿಸಿದರು. ದೇವೇಗೌಡರು, ಕುಮಾರಸ್ವಾಮಿ ಮಂಡ್ಯದಿಂದ ಹುಟ್ಟಿ ಬೆಳೆದವರಲ್ಲ. ರಾಮನಗರ ಅವರ ಲಕ್ಕಿ ಪ್ಲೇಸ್. ಕುಮಾರಸ್ವಾಮಿಯವರು ರಾಮನಗರದಿಂದ ಸ್ಪರ್ಧೆ ಮಾಡಲಿ. ಮಂಡ್ಯ ಜಿಲ್ಲೆಯಿಂದ ಸುಮಲತಾ ಅವರೇ ಮುಂದುವರಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

Read More