Author: AIN Author

ವಿಜಯಪುರ :- ಶೆಟ್ಟರ್ ಬಿಜೆಪಿಗೆ ಮರಳಿರುವುದು ಅವರ ಘನತೆಗೆ ಶೋಭೆ ತರಲ್ಲ ಎಂದು ಸಚಿವ Mb ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶೆಟ್ಟರ್ ಅವರಿಗೆ ಅನ್ಯಾಯವಾಗಿದೆ ಅಂತ ಶಾಮನೂರು ಶಿವಶಂಕರಪ್ಪ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ರಂದೀಪ್ ಸುರ್ಜೆವಾಲ ಮತ್ತು ತಾನು ಸೇರಿ ಕಾಂಗ್ರೆಸ್ ಕರೆತಂದಿದ್ದೆವು, ಅದರೆ ತಮಗ್ಯಾರಿಗೂ ವಾಸನೆ ಕೂಡ ಹತ್ತದಂತೆ ಅವರು ಬಿಜೆಪಿಗೆ ಪಲಾಯನಗೈದಿದ್ದಾರೆ ಎಂದು ಪಾಟೀಲ್ ಹೇಳಿದರು. ಶೆಟ್ಟರ್ ಅವರಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಆಮಿಶವೊಡ್ಡಲಾಗಿದೆಯೋ ಒತ್ತಡ ಹೇರಲಾಗಿತ್ತೋ ಅಂತ ಅವರೇ ಹೇಳಬೇಕು ಎಂದ ಪಾಟೀಲ್, ಜಗತ್ತು ನಂಬಿಕೆ ವಿಶ್ವಾಸದ ಮೇಲೆ ನಡೆಯುತ್ತಾದರೂ ಇಂಥ ಪ್ರಸಂಗಗಳು ನಡೆಯುತ್ತಿರುತ್ತವೆ ಎಂದರು. ಲಕ್ಷ್ಮಣ ಸವದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ, ಅವರು ಹಿರಿಯ ನಾಯಕ ಮತ್ತು ಉಪ ಮುಖ್ಯಮಂತ್ರಿಯಾಗಿದ್ದವರು ಅವರ ಬಗ್ಗೆ ಲಘುವಾಗಿ ಮಾತಾಡುವುದು ತಪ್ಪಾಗುತ್ತದೆ, ಅವರು ಕಾಂಗ್ರೆಸ್ ಬಿಡೋದಿಲ್ಲ ಎಂದರು.

Read More

ದೊಡ್ಡಬಳ್ಳಾಪುರ: ನಗರದ ಪ್ರದೇಶಗಳಲ್ಲಿ ನಡೆಯುತ್ತಿದ್ದ ಜೂಜಾಟ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಿಗೂ ಹಬ್ಬಿದೆ. ಜೂಜುಕೋರರ ಹಾವಳಿ ಮಿತಿ ಮೀರಿದ್ದು, ನಗರ ಕೇಂದ್ರಿತವಾಗಿದ್ದ ಜೂಜು ಅಡ್ಡೆಗಳು ಈಗ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗಿವೆ. ತಾಲೂಕಿನ ಮೆಳೆಕೋಟೆ, ರಾಜಘಟ್ಟ, ರಾಮಯ್ಯನಪಾಳ್ಯ, ಮೇಡಿಹಳ್ಳಿ ಹಾಗೂ ಜಕ್ಕಲಮಡಗು ರಸ್ತೆಗಳ ತೋಟದ ಮನೆಗಳು, ನೀಲಗಿರಿ ತೋಪುಗಳು ಜೂಜುಕೋರರ ಉಪಟಳದಿಂದ ನಲುಗುತ್ತಿವೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಇಸ್ಪೀಟ್, ಮಟ್ಕಾ, ಬೆಟ್ಟಿಂಗ್ ದಂಧೆಗೆ ಗ್ರಾಮೀಣ ಭಾಗದ ಯುವಜನರೇ ಹೆಚ್ಚು ದಾಸರಾಗುತ್ತಿದ್ದು, ಜೂಜಾಟಕ್ಕೆ ಬಲಿಯಾದ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೂಲಿ ಕಾರ್ಮಿಕರು ದಿನವಿಡೀ ಬೆವರು ಹರಿಸಿ ದುಡಿದ ಹಣವನ್ನು ಕ್ಷಣಾರ್ಧದಲ್ಲಿ ಜೂಜಿಗೆ ಬಳಸಿ ಖಾಲಿ ಕೈಯಲ್ಲಿ ಮನೆಗೆ ತೆರಳುವಂತಾಗಿದೆ. ಚಟಕ್ಕೆ ಬಿದ್ದ ಬಹುತೇಕರು ತೋಟ, ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ತಲೆ ಎತ್ತಿರುವ ಜೂಜು ಅಡ್ಡೆಗಳಿಗೆ ಯಲಹಂಕ, ವಿಜಯಪುರ, ದೇವನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳಿಂದ ಜೂಜು ಕೋರರು ಬರುತ್ತಾರೆ. ತೋಟದ ಮನೆ, ನೀಲಗಿರಿ ತೋಪುಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ…

Read More

ಗದಗ:- ಭಯಾನಕ ಭವಿಷ್ಯವೊಂದನ್ನು ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಅವರು ನುಡಿದಿದ್ದಾರೆ. ಜಗತ್ತಿಗೆ ಒಳ್ಳೆಯ ದಿನಗಳಿಲ್ಲ ಎಂದು ಹೇಳಿದ್ದಾರೆ. ಬಾಂಬ್ ಸಿಡಿಯುವ ಸಂಭವವಿದ್ದು, ಯುದ್ಧ ಭೀತಿ ಆವರಿಸಲಿದೆ. ಭೂಕಂಪ.. ಜಲ ಕಂಟಕವೂ ಇದೆ. ಜನರು ತಲ್ಲಣವಾಗುತ್ತಾರೆ ಎಂದು ಭವಿಷ್ಯ ತಿಳಿಸಿದ್ದಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ, ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣ.. ಅಸ್ಥಿರತೆ, ಯುದ್ಧ ಭೀತಿ.. ಅಣು ಬಾಂಬ್ ಸ್ಫೋಟವಾಗುವ ಸಾಧ್ಯತೆಗಳಿವೆ. ಜಗತ್ತಿಗೆ ವಿನಾಶ ಕಾದಿದೆ.. ರೋಗ, ಸುನಾಮಿ ಸಂಭವಿಸಲಿದೆ. ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ದೈವ ನಂಬುವುದೊಂದೆ ಪರಿಹಾರ.. ದೈವ ಮೊರೆ ಹೋಗ್ಬೇಕು ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

Read More

ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾದೇವ. ಪೋಸ್ಟರ್ ಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಟೀಸರ್ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಯಕ ವಿನೋದ್ ಪ್ರಭಾಕರ್, ನಾಯಕಿ ಸೋನಲ್, ಹಿರಿಯ ನಟಿ ಶೃತಿ, ನಿರ್ದೇಶಕ ನವೀನ್ ರೆಡ್ಡಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ನಿರ್ದೇಶಕ ತರುಣ್ ಸುಧೀರ್, ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಝೈದ್ ಖಾನ್ ಸಾಥ್ ಕೊಟ್ಟರು. ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್, ವಿನೋದ್ ನನ್ನದು ಒಂದೊಳ್ಳೆ ಬಾಂಡಿಂಗ್ ಇದೆ. ರಿಯಲ್ ಲೈಫ್ ಫೈಟರ್ ವಿನೋದ್. ಮಾದೇವ ಪ್ರಸೆಂಟೇಷನ್,ಅವರ ಲುಕ್ ಬಹಳ ಚೆನ್ನಾಗಿದೆ. ಬಿಯರ್ಡ್ ಲುಕ್ ನಲ್ಲಿ ಅವರು ಚೆನ್ನಾಗಿ ಕಾಣಿಸುತ್ತಾರೆ. ಕೆಲಸದ ವಿಚಾರದಲ್ಲಿ ಪ್ರಾಮಾಣಿಕ, ಡಿಡಿಕೇಟೇಡ್, ಹಾರ್ಡ್ ವರ್ಕರ್. ಸಿನಿಮಾಗೆ ತುಂಬಾ ಎಫರ್ಟ್ ಹಾಕಿ ಕೆಲಸ ಮಾಡುತ್ತಾರೆ. ಈ ಜಾನರ್ ತುಂಬಾ ಕಷ್ಟ. ತುಂಬಾ ವರ್ಕ್, ರಿಸರ್ಚ್ ಇರುತ್ತದೆ. ಅದ್ಭುತವಾಗಿ ತೆರೆಮೇಲೆ…

Read More

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕುಳಗಿ ರಸ್ತೆಯ ಕಾಳಿ ನದಿಯಲ್ಲಿ ಸತ್ತಿದೆ ಎಂದು ಭಾವಿಸಿ ಜೀವಂತ ಮೊಸಳೆ ಹಿಡಿಯಲು ಹೋಗಿ ಅರಣ್ಯ ಸಿಬ್ಬಂದಿ ಪೇಚಿಗೆ ಸಿಲುಕಿದ ಘಟನೆ ಜರುಗಿದೆ. ಕಾಳಿ ನದಿಯಲ್ಲಿ ಮೊಸಳೆ ತೇಲುತ್ತಿರುವುದು ಕಂಡು ಸತ್ತುಹೋಗಿದೆ ಎಂದು ಯಾರೋ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ. ದೂರದಿಂದ ನೋಡಿದಾಗ ಸೇತುವೆಯಡಿ ನದಿಯಲ್ಲಿ ಸತ್ತಂತೆ ಬಿದ್ದಿದ್ದಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಸತ್ತ ಮೊಸಳೆಯ ಮೃತದೇಹ ನದಿಯಿಂದ ಹೊರಗೆ ತರಲು ಮುಂದಾಗಿದ್ದಾರೆ. ಹಗ್ಗದೊಂದಿಗೆ ಮೂವರು ಸಿಬ್ಬಂದಿ ನದಿಗೆ ಇಳಿದಿದ್ದರು. ಸಿಬ್ಬಂದಿ ಹತ್ತಿರಬರುವವರೆಗೆ ಸತ್ತಂತೆ ತೇಲುತ್ತಿದ್ದ ಮೊಸಳೆ, ಸಿಬ್ಬಂದಿ ಬಾಲ ಹಿಡಿಯುತ್ತಿದ್ದಂತೆ ಒಮ್ಮೆಗೆ ಎಚ್ಚರಗೊಂಡ ಮೊಸಳೆ! ಮೊಸಳೆ ಬದುಕಿರುವುದು ತಿಳಿಯುತ್ತಿದ್ದಂತೆ ಬೆಚ್ಚಿಬಿದ್ದ ಸಿಬ್ಬಂದಿ. ಅದೃಷ್ಟವಶಾತ್ ದಾಳಿ ಮಾಡದೇ ಮುಂದಕ್ಕೆ ಸಾಗಿದೆ. ಘಟನೆಯಿಂದ ದಿಗಿಲುಗೊಂಡ ಸಿಬ್ಬಂದಿ. ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ. ಮೊಸಳೆಗಳು ಕೆಲವೊಮ್ಮೆ ನಿಶ್ಚಲವಾಗಿ ಮಲಗಿ ವಿರಮಿಸುವುದು ಸಾಮಾನ್ಯ. ಇನ್ನು ಕೆಲವು ವೇಳೆ ಬೇಟೆಯಾಡಲು ಅಲುಗಾಡದೇ ತೇಲುತ್ತಿರುವುದು ಹಲವು ವಿಡಿಯೋಗಳಲ್ಲಿ ಕಾಣಬಹುದಾಗಿದೆ.

Read More

ಉತ್ತರ ಪ್ರದೇಶ:- ಜೋರಾಗಿ ಹೊಟ್ಟೆ ಹಸಿವಾದಾಗ ನಮಗೆಲ್ಲಾ ನೆನಪಾಗುವುದೇ ಎರಡು ನಿಮಿಷದಲ್ಲಿ ಸಿದ್ಧವಾಗುವ ಮ್ಯಾಗಿ ನೂಡಲ್ಸ್. ಇದರಿಂದ ನೂಡಲ್ಸ್ ಅನ್ನು ಇನ್ನಷ್ಟು ಆರೋಗ್ಯಕರವಾಗಿ ತಯಾರಿಸಬಹುದು ಹಾಗೂ ಅದರ ರುಚಿಯೂ ಇಮ್ಮಡಿಗೊಳ್ಳುತ್ತದೆ. ಬೀದಿ ಬದಿ ವ್ಯಾಪಾರಿಯೊಬ್ಬರು ನದಿಯಲ್ಲಿ ನೂಡಲ್ಸ್ ತೊಳೆಯುತ್ತಿರುವ ದೃಶ್ಯ ಇದು. ಬೀದಿ ಆಹಾರ ತಯಾರಿಕೆಯ ನೈರ್ಮಲ್ಯದ ಬಗ್ಗೆ ಅನುಮಾನ ಹುಟ್ಟು ಹಾಕುವಂತಿದೆ. ಈ ಘಟನೆ ಉತ್ತರ ಪ್ರದೇಶದ ಕುಕುರ್ಘಾಟಿ ಗ್ರಾಮದಲ್ಲಿನ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಈ ನೀರು ಅತ್ಯಂತ ಕಲುಷಿತವಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ನೂಡಲ್ಸ್ ತಯಾರಿಸಲು ಮೊದಲು ಅದನ್ನು ಕುದಿಸಿ ನಂತರ ತೊಳೆಯಲಾಗುತ್ತದೆ. ಹೀಗೆ ಕುದಿಸಿದ ನೂಡಲ್ಸ್ ಅನ್ನು ತೊಳೆಯುವುದು ಅವು ಪರಸ್ಪರ ಅಂಟಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ನೂಡಲ್ಸ್ ಅನ್ನು ಹುರಿಯುವ ಮೊದಲು ಶುದ್ಧ ತಣ್ಣೀರಿನಿಂದ ತೊಳೆಯಬೇಕು ಎಂದು ತಜ್ಞರು ಸೂಚಿಸುತ್ತಾರೆ. ಆದರೆ ಈ ವ್ಯಾಪಾರಿ ಬೇಯಿಸಿದ ನೂಡಲ್ಸ್ ಅನ್ನು ಟ್ರೇಯಲ್ಲಿ ತೆಗೆದುಕೊಂಡು ಹೋಗಿ ಕಲುಷಿತ…

Read More

ಗದಗ: ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ರಾಜ್ಯ ಮತ್ತು ದೇಶಗಳ ಬೆಳವಣಿಗೆಗಳ ಬಗ್ಗೆ ಭವಿಷ್ಯ ನುಡಿಯುತ್ತಿರುತ್ತಾರೆ ಅದೇ ರೀತಿ ಈಗಲೂ ಸಹ ಮತ್ತೊಂದು ಭವಿಷ್ಯ ನುಡಿದಿದ್ದಾರೆ. 2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. 2024 ರಲ್ಲಿ ಅಣು ಬಾಂಬ್ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಯುದ್ಧದ ಭೀತಿ ಇದೆ. ಜನರು ತಲ್ಲಣ ಆಗುವಂತಹದ್ದಿದೆ. ಜಲ‌ ಕಂಠಗಳು ಹೆಚ್ಚಾಗುವ ಸಾಧ್ಯತೆ ಇದೆ ಅಂತ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ‌ಮಹಾಸ್ವಾಮಿಗಳು ಭವಿಷ್ಯ ನುಡದಿದ್ದಾರೆ. ನಗರದ ಭಕ್ತರ ಮನೆಯೊಂದರಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನ ಅತೀ ದೊಡ್ಡ ಸಂತರೊಬ್ಬರು ಕೊಲೆಗೀಡಾಗುವ ಲಕ್ಷಣ ಇದೆ. ಒಂದೆರಡು ಪ್ರಧಾನಿಗಳ ಸಾವು ಆಗಲಿವೆ ಅಂತ ಅಘಾತಕಾರಿ ವಿಷಯ ತಿಳಿಸಿದ್ದಾರೆ. ಅಸ್ಥಿರತೆ ಇದೆ, ಯುದ್ಧದ ಭೀತಿ ಇದೆ. ಅಣು ಬಾಂಬ್ ಸ್ಪೋಟದಿಂದ ಜಗತ್ತಿಗೆ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ರೋಗ ರುಜಿನಗಳು ಹೆಚ್ಚಾಗಲಿವೆ. ಒಟ್ಟಿನಲ್ಲಿ 2024 ಜಗತ್ತಿಗೆ ಅಪಾಯವಿದೆ. ಜಗತ್ತಿನಲ್ಲಿ ಭಾರತವೂ ಸೇರಿಕೊಳ್ಳುತ್ತೆ ಎಂದರು. https://ainlivenews.com/rs-3-lakh-loan-for-women-without-interest-how-to-apply-here-is-the-complete-details/ ಶ್ರೀರಾಮಂದಿರ ವಿಷಯದಲ್ಲಿ ಹಿಂದೂಗಳು ಒಂದಾಗಬೇಕು ಎಂಬ…

Read More

ಬೆಂಗಳೂರು:- ಯಾವುದೇ ಆಪರೇಷನ್ ಗುರಿ ಇಲ್ಲ, ಲೋಕಸಭಾ ಚುನಾವಣೆಯೇ ನಮ್ಮ ಗುರಿ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯಿಂದ ಯಾವುದೇ ಆಪರೇಷನ್ ಗುರಿ ಇಲ್ಲ. ಲೋಕಸಭೆ ಚುನಾವಣೆಯೊಂದೇ ನಮ್ಮ ಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್​ ಎಂಎಲ್​ಸಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ನಂತರ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿಯೇ ಬಿಜೆಪಿಯ ಟಾರ್ಗೆಟ್ ಎನ್ನಲಾಗುತ್ತಿದೆ. ಅಲ್ಲದೆ, ಆಪರೇಷನ್ ಕಮಲ ಆರಂಭವಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅವರಿಗೆ ಬೇರೆ ಕ್ಷೇತ್ರ ಕೊಟ್ಟಿ ಜೆಡಿಎಸ್​ಗೆ ಮಂಡ್ಯ ಕ್ಷೇತ್ರವನ್ನು ನೀಡುವ ಪ್ಲಾನ್ ಮಾಡಲಾಗುತ್ತಿದೆ. ಆದರೆ, ಸುಮಲತಾ ಅವರು ಬಿಜೆಪಿಯಿಂದ ಮಂಡ್ಯದಲ್ಲಷ್ಟೇ ಸ್ಪರ್ಧಿಸುತ್ತೇನೆ ಎಂದು ಕಡ್ಡಿಮುರಿದ ಹಾಗೆ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಸುಮಲತಾ ಜೊತೆ ಫೋನ್ ಕರೆ ಮಾಡಿ ಮಾತನಾಡಿದ್ದೇನೆ. ಶೀಘ್ರದಲ್ಲೇ ಸಂಸದೆ ಸುಮಲತಾ ಭೇಟಿ ಮಾಡುತ್ತೇನೆ ಎಂದರು.

Read More

ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಒತ್ತಡ, ಹೊರಗಡೆಯ ಆಹಾರ, ಎಣ್ಣೆಯುಕ್ತ ಆಹಾರ ಹಾಗೂ ಕಡಿಮೆ ನೀರು ಸೇವನೆ ಸೇರಿದಂತೆ ಒಂದೇ ಕಡೆ ಕುಳಿತು ಗಂಟೆಗಟ್ಟಲೆ ನಾವು ಕೆಲಸ ಮಾಡೋದು ಕೂಡ ಗ್ಯಾಸ್ಟ್ರಿಕ್ ಗೆ ಕಾರಣವಾಗುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಇರುವುದೇ ಇದಕ್ಕೆ ಕಾರಣ. ಗ್ಯಾಸ್ಟ್ರಿಕ್ ಎಂದ ತಕ್ಷಣ ನಾವು ವೈದ್ಯರ ಬಳಿ ಹೋಗ್ತೇವೆ. ಅವರು ನೀಡುವ ಮಾತ್ರೆಯನ್ನು ಒಂದಾದ್ಮೇಲೆ ಒಂದರಂತೆ ತೆಗೆದುಕೊಳ್ತೇವೆ. ಇದ್ರಿಂದ ಗ್ಯಾಸ್ಟ್ರಿಕ್ ತಾತ್ಕಾಲಿಕವಾಗಿ ಕಡಿಮೆಯಾಗಿದೆ ಎನ್ನಿಸಿದ್ರೂ ಅದ್ರ ಬೇರು ಹೋಗಿರೋದಿಲ್ಲ. ನಿಮಗೂ ಗ್ಯಾಸ್ ಸಮಸ್ಯೆ ಇದ್ರೆ ನೀವು ಮನೆಯಲ್ಲಿರುವ ಆಹಾರವನ್ನೇ ಬಳಸಿ ಇದ್ರಿಂದ ಮುಕ್ತಿಪಡೆಯಬಹುದು. ಅಜವಾನ/ಓಮು ಕಾಳಿನಿಂದ ಅನೇಕ ಸಮಸ್ಯೆ ದೂರ : ಕಳಪೆ ಆಹಾರ ಹಾಗೂ ಜೀವನಶೈಲಿಯಿಂದ ಹೆಚ್ಚಿನ ಮಂದಿ ಗ್ಯಾಸ್ ಎಸಿಡಿಟಿ, ಹೊಟ್ಟೆ ನೋವು, ಮಲಬದ್ಧತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ಯಾಸ್ ಸಮಸ್ಯೆಯಿಂದ ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಹೀಗಾದಾಗ ಸುಲಭವಾಗಿ ಕೈಗೆ…

Read More

ವಿಜಯಪುರ: ಸ್ವಂತ ಮನೆಯಿಂದ ಹೊರಗೆ ಹಾಕಿದಾಗ ನಿಮಗೆ ಅನ್ಯಾಯ, ಅಪಮಾನ ಆದಾಗ ಯಾಕೆ ಬಿಟ್ಟು ಬಂದ್ರಿ? ಇದನ್ನು ನಾನು ಹೇಳಬೇಕಿಲ್ಲ, ಅವರೇ ಬಿಜೆಪಿಯಿಂದ ಅನ್ಯಾಯ, ಅಪಮಾನ ಆಗಿದೆ ಅಂದಿದ್ರು. ಮೊನ್ನೆಯವರಿಗೆ ಬಿಜೆಪಿ ಅನ್ಯಾಯದ ಬಗ್ಗೆ ಹೇಳುತ್ತಾ ಬಂದಿದ್ರು ಎಂದು ಸಚಿವ ಎಂ.ಬಿ ಪಾಟೀಲ್  ಕಿಡಿಕಾರಿದರು. ಬಿಜೆಪಿ ಸ್ವಂತ ಮನೆಗೆ ಮರಳಿದೆ ಎಂದು ಜಗದೀಶ್ ಶೆಟ್ಟರ್  ಹೇಳಿಕೆಗೆ ಪ್ರತಿಕ್ರಿಯಿಸಿ, ಮಾಜಿ ಮುಖ್ಯಮಂತ್ರಿ ಆಗಿದ್ದವರಿಗೆ ಬಿಜೆಪಿ ಒಂದು ಎಂಎಲ್‍ಎ ಟಿಕೆಟ್ ಕೊಡಲಿಲ್ಲ. ನನ್ನ ಮಂತ್ರಿ ಮಾಡಬೇಡಿ ಎಂಎಲ್‍ಎ ಟಿಕೆಟ್ ಕೊಡಿ ಅಂದಿದ್ರು. ಎಂಎಲ್‍ಎ ಟಿಕೆಟ್ ಕೊಡದಿದ್ದಾಗ ನಾವು ಕರೆದು ಎಂಎಲ್‍ಎ ಟಿಕೆಟ್ ಕೊಟ್ಟೆವು. ಸೋತ ಮೇಲೆ ಅವರ ಗೌರವಕ್ಕೆ ತಕ್ಕಂತೆ ಚಿಂತಕರ ಚಾವಡಿ, ಎಂಎಲ್‍ಸಿ ಸ್ಥಾನ ಕೊಟ್ಟಿದ್ದೆವು. ಜಗದೀಶ್ ಶೆಟ್ಟರ್ ಲೋಕಸಭೆಗೆ ಬಯಿಸಿದ್ರೆ ಮುಂದೆ ಟಿಕೆಟ್ ಕನ್ಸಿಡರ್ ಮಾಡುವುದಾಗಿತ್ತು. ಇಷ್ಟೆಲ್ಲಾ ಗೌರವ ಕೊಟ್ಟ ಮೇಲೆ ಬಂದು ವಾಪಸ್ ಹೋಗಿರುವುದು ಅವರ ಘನತೆಗೆ ಶೋಭೆ ತರುವಂತಹದ್ದಲ್ಲ ಎಂದರು. https://ainlivenews.com/rs-3-lakh-loan-for-women-without-interest-how-to-apply-here-is-the-complete-details/ ಮರಳಿ ಬಿಜೆಪಿ ಸೇರ್ಪಡೆಯಾಗಿ ಜಗದೀಶ್ ಶೆಟ್ಟರ್…

Read More