Author: AIN Author

ಸೂರ್ಯೋದಯ: 06:53, ಸೂರ್ಯಾಸ್ತ : 06:04 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ , ಕೃಷ್ಣ ಪಕ್ಷ, ಉತ್ತರಾಯಣಂ, ಹೇಮಂತ ಋತು, ತಿಥಿ: ದ್ವಿತೀಯ, ನಕ್ಷತ್ರ: ಆಶ್ಲೇಷ , ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ:01:30 ನಿಂದ 03:00 ತನಕ ಗುಳಿಕ ಕಾಲ:06:00 ನಿಂದ 07:30 ಬತನಕ ಅಮೃತಕಾಲ: ಬೆ.11:15 ನಿಂದ ಮ.1:01 ತನಕ ಅಭಿಜಿತ್ ಮುಹುರ್ತ: ಮ.12:06 ನಿಂದ ಮ.12:51 ತನಕ ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ಕಾಂಟ್ರಾಕ್ಟರ್ ವ್ಯವಹಾರಸ್ತರಿಗೆ ಮತ್ತು ಮಧ್ಯವರ್ತಿಗಳಿಗೆ ಧನ ಆಗಮನ, ವಿವಾಹ ಆಕಾಂಕ್ಷಿಗಳಿಗೆ ಶುಭ ಸಂದೇಶ, ಭೂ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಪ್ರಗತಿಯಾಗಲಿದೆ. ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಯೋಗ ಕೂಡಿ ಬರಲಿದೆ. ಮಾತಾಪಿತೃ ಆರೋಗ್ಯದಲ್ಲಿ…

Read More

ಕಲಬುರ್ಗಿ:-ಜಗದೀಶ್ ಶೆಟ್ಟರ್ ಒಬ್ಬ ಮಾಜಿ ಮುಖ್ಯಮಂತ್ರಿ ಅಂಥವರು ನಮ್ಮ ಪಕ್ಷಕ್ಕೆ ಬರ್ತೀನಿ ಅಂದಾಗ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಸಂಘಟನೆ ಆಗ್ತದೆ ಅಂತ ತಗೊಂಡ್ವಿ ಅಂತ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಹೇಳಿದ್ದಾರೆ.. ಕಲಬುರಗಿಯಲ್ಲಿ ಮಾತನಾಡಿದ ಅಜಯ್ ಸಿಂಗ್ ಶೆಟ್ಟರ್ ಅಷ್ಟೇಅಲ್ಲ ಅಲ್ಲ ಯಡಿಯೂರಪ್ಪ ಅವರೂ ಸಹ ಬರ್ತೀನಿ ಅಂದ್ರೆ ಸಹ ನಮ್ಮ ಪಕ್ಷಕ್ಕೆ ತಗೋತಿದ್ವಿ. ಈಗ ಏಳೆಂಟು ತಿಂಗಳಲ್ಲೇ ಪಕ್ಷ ಬಿಟ್ಟು ಮತ್ತೆ ಬಿಜೆಪಿಗೆ ಹೋಗಿದ್ದಾರೆ.ನಮಗಂತೂ ಏನೂ ತೊಂದರೆ ಆಗಲ್ಲ ಯಾಕಂದ್ರೆ ನಮ್ಮಲ್ಲಿರೋ 136 ಶಾಸಕರ ಪೈಕಿ ಯಾವ ಶಾಸಕರೂ ಹೋಗಿಲ್ಲ ಹೀಗಾಗಿ ಪಕ್ಷಕ್ಕೆ ಏನೂ ಹಾನಿ ಆಗಲ್ಲ ಅಂತ ಹೇಳಿದ್ರು…

Read More

ಹೊಸಕೋಟೆ:- ಶಾಸಕ‌‌ ಶರತ್ ಬಚ್ಚೇಗೌಡ ಅವರು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ಅಧ್ಯಕ್ಷ ರಾಗಿ ನೇಮಕ ಆಗಿದ್ದಾರೆ. ರಾಜ್ಯದಲ್ಲೆ ಅತಿಹೆಚ್ಚು ಮತದಾನವಾಗುವ ಕ್ಷೇತ್ರ ಹೊಸಕೋಟೆ ಆಗಿದ್ದು, ಹೊಸಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಸಲ ಶರತ್ ಬಚ್ಚೇಗೌಡ ಶಾಸಕರಾಗಿ ಆಯ್ಕೆ ಆಗಿದ್ದಾರೆ. 2018ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಆಗ ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ.ನಾಗರಾಜ್ ವಿರುದ್ಧ ಸೋಲು ಕಂಡಿದ್ದರು. 2019ರಲ್ಲಿ ಎಂಟಿಬಿ ನಾಗರಾಜ್ ಅಪರೇಷನ್ ಕಮಲಕ್ಕೊಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ಪಕ್ಷದಿಂದ ಎಂಟಿಬಿ ನಾಗರಾಜ್ ಸ್ಪರ್ದಿಸಿದರೆ ಶರತ್ ಬಚ್ಚೇಗೌಡ ಸ್ವಾಭಿಮಾನಿ ಪಕ್ಷದಿಂದ ಸ್ಪರ್ದಿಸಿ ಗೆದ್ದಿದ್ದರು. ಈಗ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿ ಗೆಲುವು ಸಾಧಿಸಿದ್ದಾರೆ. ಹೊಸಕೋಟೆಯಿಂದ ಎರಡನೇ ಸಲ ಶಾಸಕರಾಗಿದ್ದ ಶರತ್ ಬಚ್ಚೇಗೌಡ ರಿಗೆ ಈಗ ಕಿಯೋನಿಕ್ಸ್ ಅಧ್ಯಕ್ಷ ಸ್ಥಾನ ನೀಡಲಾಗಿದೆ.

Read More

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಕಟ್ಟೆಯಲ್ಲಿ ಹೊರನಾಡು, ಶೃಂಗೇರಿ ಪ್ರವಾಸಕ್ಕೆ ಬಂದಿದ್ದವರ ಕಾರುಗಳ ನಡುವೆ ಡಿಕ್ಕಿಯಾಗಿದ್ದು, ಗಾಯಾಳುಗಳಿಗೆ ಕೊಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಿರಿದಾದ ಹಾಗೂ ತಿರುವುಗಳಿರುವ ಶೃಂಗೇರಿ-ಹೊರನಾಡು ಪರ್ಯಾಯ ರಸ್ತೆ ಇದಾಗಿದ್ದು, ಸರಣಿ ಅಪಘಾತದಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸುವ ಸ್ಥಿತಿ ಇದಾಗಿದೆ.

Read More

ಕಲಬುರ್ಗಿ:- ಆಳುವ ಸರ್ಕಾರವಲ್ಲ, ನಮ್ಮದು ಆಲಿಸುವ ಸರ್ಕಾರ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆಗ್ರಹಿಸಿ ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆಯ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿನಿರತ ನೂರಾರು ಮಹಿಳೆಯರ ಅಹವಾಲು ಆಲಿಸಿ ಅವರು ಮಾತನಾಡಿದರು. ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ. ನಿಮ್ಮ ಸಲಹೆ, ಸೂಚನೆಗಳನ್ನು ಕೇಳಲಿಕ್ಕೆ ಸರ್ಕಾರದ ಬಾಗಿಲು ಸದಾ ತೆರೆದಿದೆ’ ಎಂದರು. 371(ಜೆ) ಕಾಯ್ದೆ ಅನುಷ್ಠಾನದ ಉಪ ಸಮಿತಿಯ ಅಧ್ಯಕ್ಷ ನಾನೇ ಇರುವೆ. ಎಲ್ಲ ಇಲ್ಲಾಖೆಗಳಲ್ಲಿ ಎಲ್ಲಿ ಮುಂಬಡ್ತಿ ಸಿಗಬೇಕು. ಎಲ್ಲಿ ಖಾಲಿ ಹುದ್ದೆಗಳ ಭರ್ತಿ ಆಗಬೇಕು. ಅದೆಲ್ಲವನ್ನೂ ಒಂದು ವರ್ಷದಲ್ಲಿ ತುಂಬಲು ತೀರ್ಮಾನಿಸಿದ್ದೇವೆ. ಇವೆಲ್ಲ ನೀತಿ ನಿರೂಪಣೆ ಕಾರ್ಯಗಳಾಗಿದ್ದು, ತುಸು ವಿಳಂಬ ಆಗುತ್ತದೆ. ಅದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮೊಟ್ಟಮೊದಲ ಬಾರಿಗೆ ಕೆಕೆಆರ್‌ಡಿಬಿಯಿಂದ ಶಿಕ್ಷಣ ಇಲಾಖೆಗೆ ಹೊರಗುತ್ತಿಗೆ ಆಧಾರದಲ್ಲಿ ಮಾನವ ಸಂಪನ್ಮೂಲ ತೆಗೆದುಕೊಳ್ಳಲಾಗಿದೆ’ ಎಂದರು. ಮಾದರಿ ಶಾಲೆ ಬೇಡಿಕೆ ಕುರಿತು…

Read More

ನವದೆಹಲಿ:- ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಶ್ಲಾಘಿಸಿದ್ದಾರೆ. ರಷ್ಯನ್ ವಿದ್ಯಾರ್ಥಿ ದಿನ’ದ ಪ್ರಯುಕ್ತ ಕಲಿನಿನ್‌ಗ್ರಾಡ್ ಪ್ರದೇಶದ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್, ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದರು. ಪ್ರಸ್ತುತ ಪ್ರಧಾನ ಮಂತ್ರಿಯ ನಾಯಕತ್ವದ ಗುಣಗಳಿಂದಾಗಿ ಭಾರತವು ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಯ ದರವನ್ನು ಹೊಂದಿದೆ. ಭಾರತವು ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಯ ದರವನ್ನು ಹೊಂದಿದೆ ಮತ್ತು ಅದು ಕೂಡ ಪ್ರಸ್ತುತ ಪ್ರಧಾನ ಮಂತ್ರಿಯ ನಾಯಕತ್ವದ ಗುಣಗಳಿಂದಾಗಿ. ಅವರ ನಾಯಕತ್ವದಲ್ಲಿ ಭಾರತವು ಅಂತಹ ವೇಗವನ್ನು ತಲುಪಿತು ಎಂದು ಅವರು ಪ್ರಧಾನಿ ಮೋದಿಯನ್ನು ಶ್ಲಾಘಿಸಿದರು. ಪ್ರಧಾನಿ ಮೋದಿಯವರ ನೀತಿಗಳನ್ನು ಮೆಚ್ಚಿದ ಪುಟಿನ್, ಭಾರತ ಮತ್ತು ರಷ್ಯಾ ನಡುವೆ ನಿರಂತರವಾಗಿ ಬೆಳೆಯುತ್ತಿರುವ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ಭಾರತ ಮತ್ತು ರಷ್ಯಾ ನಡುವೆ ಬೆಳೆಯುತ್ತಿರುವ ನಿಕಟತೆ ಮತ್ತು ಬಲವಾದ ಬಾಂಧವ್ಯಕ್ಕೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ನೀತಿಗಳು…

Read More

ಬೆಂಗಳೂರು:- ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕರೇಕಲ್ 2ನೆ ಕ್ರಾಸ್‍ನಲ್ಲಿ ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ತಂದೆಯೇ ಮಗನನ್ನು ಗುಂಡು ಹಾರಿಸಿ ಕೊಲೆಗೈದ ಘಟನೆ ಜರುಗಿದೆ. ನರ್ತನ್ ಬೋಪಣ್ಣ (32) ಎಂಬಾತನನ್ನು ಆತನ ತಂದೆ ಸುರೇಶ್ ಕೊಲೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಕೊಡಗು ಮೂಲದವರಾದ ನರ್ತನ್ ಬೋಪಣ್ಣ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾ ಕರೇಕಲ್‍ನಲ್ಲಿ ಪೋಷಕರೊಂದಿಗೆ ವಾಸವಿದ್ದರು. ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೆ, ತಂದೆ ಸುರೇಶ್ ಮದ್ಯಪಾನದ ಗೀಳಿಗೆ ದಾಸರಾಗಿದ್ದರು. ಸದಾ ಕುಡಿಯಲು ಹಣ ಬೇಕು ಎಂದು ಮಗನನ್ನು ಪೀಡಿಸುತ್ತಿದ್ದ ಸುರೇಶ್, ಜ.25ರ ಗುರುವಾರ ಸಂಜೆಯೂ ಕುಡಿತಕ್ಕೆ ಹಣ ಬೇಕೆಂದು ಪೀಡಿಸುತ್ತಾ ಹೊಡೆಯಲು ಮುಂದಾಗಿದ್ದರು. ಇದೆಲ್ಲದರಿಂದ ಬೇಸತ್ತ ನರ್ತನ್ ತಂದೆಯನ್ನು ಒಂದು ಕೋಣೆಯೊಳಗೆ ತಳ್ಳಿ ಬಾಗಿಲು ಹಾಕಿದ್ದಾರೆ. ಆದರೂ ಸಹ ಕೋಣೆಯೊಳಗಿನಿಂದಲೇ ಸುರೇಶ್ ಬೆದರಿಕೆಯೊಡ್ಡಿದ್ದಾರೆ. ಸ್ವಲ್ಪ ಹೊತ್ತು ಕಳೆದ ಬಳಿಕ ಸಿಟ್ಟಿಗೆದ್ದ ಸುರೇಶ್ ತಮ್ಮ ಬಳಿ ಇದ್ದ ಲೈಸೆನ್ಸ್ ಹೊಂದಿದ ಸಿಂಗಲ್ ಬ್ಯಾರಲ್ ಗನ್‍ನಿಂದ ಬಾಗಿಲಿನತ್ತ ಗುಂಡು ಹಾರಿಸಿದ್ದಾರೆ…

Read More

ಬೆಂಗಳೂರು:- ರಾಜ್ಯದಲ್ಲಿ 3,456 ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, 52 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು ಯಾವುದೇ ಸಾವು ನೋವು ವರದಿಯಾಗಿಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ 341 ಸಕ್ರಿಯ ಪ್ರಕರಣಗಳಿವೆ. ಇನ್ನುಳಿದಂತೆ ಇಂದು ಕೋವಿಡ್‌ನಿಂದ ಗುಣಮುಖರಾಗಿ 60 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಪಾಸಿಟಿವಿಟಿ ದರ ಶೇ. 1.50 ಇದೆ. ಬೆಂಗಳೂರಿನಲ್ಲಿ ಇಂದು 12 ಪಾಸಿಟಿವ್‌ ಕೇಸ್‌ಗಳು ವರದಿಯಾಗಿದೆ. ಮೈಸೂರಿನಲ್ಲಿ 5, ಮಂಡ್ಯದಲ್ಲಿ 7, ತುಮಕೂರಿನಲ್ಲಿ 3, ದಕ್ಷಿಣ ಕನ್ನಡದಲ್ಲಿ 1 ಪ್ರಕರಣಗಳು ದಾಖಲಾಗಿದೆ. ಅದೇ ರೀತಿ ದಾವಣಗೆರೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ, ಉಡುಪಿ, ವಿಜಯಪುರ, ಯಾದಗಿರಿ, ರಾಮನಗರ, ಕೊಪ್ಪಳ, ಚಾಮರಾಜನಗರ, ಬೀದರ್‌, ಬಳ್ಳಾರಿಯಲ್ಲಿ ಇಂದು ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ.

Read More

ಬೆಂಗಳೂರು:- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು 75ನೇ ಗಣರಾಜ್ಯೋತ್ಸವದಂದ ತಮ್ಮ ಶಾಸಕರ ಕಚೇರಿಯಲ್ಲಿ ಮಹಿಳಾ ಪೌರ ಕಾರ್ಮಿಕರೊಬ್ಬರಿಂದ ಧ್ವಜಾರೋಹಣ ನೆರವೇರಿಸಲು ಅವಕಾಶ ಕಲ್ಪಿಸಿಕೊಡುವ ಮೂಲಕ ಪೌರ ಕಾರ್ಮಿಕರನ್ನ ಗೌರವಿಸಿದ್ದಾರೆ. ಪೌರ ಕಾರ್ಮಿಕರು ಸದಾ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಶ್ರಮಿಕ ವರ್ಗದವರು. ಅಂಥವರನ್ನು ಗುರುತಿಸಿ ತಮ್ಮ ಕಚೇರಿಯಲ್ಲಿ‌ ಗಣರಾಜ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಲು ಸಚಿವರು ಸೂಚನೆ ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲಾ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ಚೀಕರಿಸಿದ ಸಚಿವರು, ತಮ್ಮ ಸ್ವ ಕ್ಷೇತ್ರದಲ್ಲಿ ತಮ್ಮ ಅನುಪಸ್ಥಿತಿಯಲ್ಲಿ ಪೌರ ಕಾರ್ಮಿಕರಿಂದ ಧ್ವಜರೋಹಣ ಕಾರ್ಯ ನೆರವೇರಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಸಮಾರಂಭದಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರ ಪುತ್ರಿ ಅನನ್ಯ ರಾವ್ ಅವರು ಪಾಲ್ಗೊಂಡು ಧ್ವಜವಂದನೆ ಸಲ್ಲಿಸಿದರು. ಧ್ವಜಾರೋಹಣದ ಬಳಿಕ ಪೌರ ಕಾರ್ಮಿಕರನ್ನ ಸನ್ಮಾನಿಸಿ, ಗೌರವಿಸಲಾಯಿತು.

Read More

ಚಾಮರಾಜನಗರ:- ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಆಕ್ಸಿಜನ್ ದುರಂತ ದಲ್ಲಿ ಒಂದೇ ರಾತ್ರಿ 32 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಆಗಿನ ಸರ್ಕಾರ ಅಲ್ಪ ಸ್ವಲ್ಪ ಪರಿಹಾರ ಕೊಟ್ಟು ಕೈ ತೊಳೆದುಕೊಂಡಿತು. ನಂತರ ಕಾಂಗ್ರೆಸ್, ಆಕ್ಸಿಜನ್ ದುರಂತದಲ್ಲಿ ಸತ್ತಿದ್ದು 24 ಅಲ್ಲ 32 ಮಂದಿಯೆಂದು ಕೆಪಿಸಿಸಿ ವತಿಯಿಂದ ತಲಾ ಒಂದು ಲಕ್ಷ ಪರಿಹಾರ ಕೊಟ್ಟಿತ್ತು.ಇನ್ನು ರಾಜ್ಯದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಸಂತ್ರಸ್ತರ ಜೊತೆಗೆ ಸಂವಾದ ನಡೆಸಿ ಸರ್ಕಾರಿ ಉದ್ಯೋಗದ ಭರವಸೆ ಕೊಟ್ಟಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಬಳಿಕವೂ ಸಿಎಂ ಸಿದ್ದರಾಮಯ್ಯ, ಡಿಕೆಶಿ ಇಬ್ಬರು ಕೂಡ ಸಂತ್ರಸ್ತ ಕುಟುಂಬಕ್ಕೆ ಉದ್ಯೋಗದ ಭರವಸೆ ಕೊಟ್ಟಿದ್ದರು. ಇದೀಗ ಚಾಮರಾಜನಗರ ಉಸ್ತುವಾರಿ ಸಚಿವ ವೆಂಕಟೇಶ್ ಗಣರಾಜ್ಯೋತ್ಸವ ದಿನದಂದೆ ಗುತ್ತಿಗೆ ಆಧಾರದ ಮೇಲೆಯೇ ಕೆಲಸ ಕೊಡುವ ಘೋಷಣೆ ಮಾಡಿದ್ದಾರೆ. ಜೊತೆಗೆ ಫೆಬ್ರವರಿ 1 ರಿಂದ ಕೆಲಸಕ್ಕೆ ಹಾಜರಾಗುವಂತೆ ಸಂತ್ರಸ್ತ ಕುಟುಂಬದ ಒಬ್ಬ ವ್ಯಕ್ತಿಗೆ ಕೆಲಸ‌ ಕೊಡುವ…

Read More