Author: AIN Author

ಪಾಟ್ನ: ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಅವರು ಬಿಜೆಪಿಯ ಬೆಂಬಲದೊಂದಿಗೆ ಭಾನುವಾರ ಒಂಬತ್ತನೇ ಬಾರಿಗೆ ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ (ಜ.28 ರಂದು) ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ 2 ಡಿಸಿಎಂ ಸ್ಥಾನಗಳನ್ನು ಪಡೆದುಕೊಳ್ಳುತ್ತವೆ ಎನ್ನಲಾಗಿದೆ. ಸಿಎಂ ನಿತೀಶ್‌ ಕುಮಾರ್‌ ಕಾಂಗ್ರೆಸ್-ಆರ್‌ಜೆಡಿ ಜೊತೆಗೆ ಇರುವ ಮೈತ್ರಿಕೂಟಕ್ಕೆ ವಿದಾಯ ಹೇಳಿ, ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಚರ್ಚೆ ನಡೆದಿತ್ತು. ಇದರ ಬೆನ್ನಲ್ಲೇ, ನಿತೀಶ್‌ ಬಿಜೆಪಿ-ಜೆಡಿಯು ಸರ್ಕಾರದ ಸಿಎಂ ಆಗಲಿದ್ದಾರೆ ಎಂದು ವರದಿಯಾಗಿದೆ ನಿತೀಶ್ ಕುಮಾರ್ ಅವರು ಶನಿವಾರ ಬೆಳಗ್ಗೆ 10 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸರ್ಕಾರದಲ್ಲಿ ಆಗಬಹುದಾದ ಬದಲಾವಣೆಯ ವರದಿಗಳ ನಡುವೆ ಬಿಹಾರದಲ್ಲಿ ಜಿಲ್ಲಾಧಿಕಾರಿಗಳ ದೊಡ್ಡ ಪ್ರಮಾಣದ ವರ್ಗಾವಣೆ ನಡೆಯುತ್ತಿದೆ. ಈ ಸಮಯದಲ್ಲಿ ಅಸೆಂಬ್ಲಿಯನ್ನು ವಿಸರ್ಜಿಸಲಾಗುವುದಿಲ್ಲ ಮತ್ತು ಮತದಾನವನ್ನು ನಡೆಸಲಾಗುವುದಿಲ್ಲ ಎನ್ನಲಾಗಿದೆ. ಬಿಹಾರದಲ್ಲಿ ಮುಂದಿನ ವರ್ಷ ಮತದಾನ ನಡೆಯಲಿದೆ. ಆದ್ದರಿಂದ ಎರಡೂ ಪಕ್ಷಗಳು ಅವಸರದಲ್ಲಿಲ್ಲ ಎಂಬುದು ಅರ್ಥವಾಗುವಂತಹದ್ದಾಗಿದೆ. ಏಪ್ರಿಲ್‌/ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ…

Read More

ಮೈಸೂರು : ಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಹಾಗೂ ಕುಟುಂಬಸ್ಥರು ಮೈಸೂರು ರಾಜ ವಂಶಸ್ಥ ಯದುವೀ‌ರ್ ಒಡೆಯ‌ರ್ ಅವರನ್ನು ಭೇಟಿಯಾದರು. ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿರುವ ಬಾಲರಾಮನ ಮೂರ್ತಿ ಕೆತ್ತನೆ ಮಾಡಿರುವ ಶಿಲ್ಪಿ ಅರುಣ್ ಯೋಗಿರಾಜ್ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದರು. ಇಂದು ಮೈಸೂರಿಗೆ ವಾಪಸ್‌ ಆಗಿದ್ದಾರೆ. ಮೈಸೂರಿಗೆ ಬರುತ್ತಿದ್ದಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್‌ ಯೋಗಿರಾಜ್‌, ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡಿದೆ. ಅದಷ್ಟೇ ನನ್ನ ಕೈಯಲ್ಲಿ ಇದ್ದಿದ್ದು. ಆದರೆ, ದೇಶದ ಜನ, ಮೈಸೂರಿನ ಜನ ಸೇರಿದಂತೆ ಎಲ್ಲರಿಂದ ತುಂಬ ಪ್ರೀತಿ ಸಿಕ್ಕಿದೆ. ನಾನು ಮೈಸೂರಿಗೆ ಬಂದ ಕೂಡಲೇ ಯದುವೀರ ಒಡೆಯರ್‌ ಅವರನ್ನು ಭೇಟಿ ಮಾಡಿ ಬಂದೆ. ಕಾರಣ ಏನಂದ್ರೆ, ಮಹಾರಾಜರು ನಮ್ಮ ಮನೆತನಕ್ಕೂ ಗುರುಗಳಿಗೂ ಆಶ್ರಯ ಅವಕಾಶ ಕೊಟ್ಟಿದ್ದರು. ಮಹಾರಾಜರ ಮನೆತನವನ್ನು ನೆನಪಿಸಿಕೊಳ್ಳುವುದು ಮುಖ್ಯ, ಅದಕ್ಕಾಗಿ ಹೋಗಿದ್ದೆ. ಸುತ್ತೂರು ಸ್ವಾಮೀಜಿಗಳನ್ನೂ ಭೇಟಿ ಮಾಡಲಿದ್ದೇನೆ ಎಂದು…

Read More

ಬೆಂಗಳೂರು: ಕಾಂಗ್ರೆಸ್ (Congress) ಪಕ್ಷ ಸಮುದ್ರವಿದ್ದಂತೆ. ನೂರಾರು ನಾಯಕರು ಬರುತ್ತಾರೆ, ಹೋಗುತ್ತಾರೆ. ಯಾರೇ ಬರಲಿ, ಯಾರೇ ಹೋಗಲಿ ಪಕ್ಷಕ್ಕೆ ಅದರಿಂದ ನಷ್ಟವಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ (Jagadish Shettar)  ಅವರು ಬಿಜೆಪಿ (BJP) ಆಂತರಿಕ ವಿಚಾರದಿಂದ ಬೇಸತ್ತು ಆ ಪಕ್ಷದ ವಿರುದ್ಧ ದೊಡ್ಡ ಆರೋಪ ಮಾಡಿ ಕಾಂಗ್ರೆಸ್ ಸೇರಿದ್ದರು. ಅವರಿಗೆ ಪಕ್ಷದ ಟೆಕೆಟ್ ನೀಡಿದ್ದೆವು. 35 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಆದರೂ ಅವರಿಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿದ್ದೆವು. ಕಳೆದ 2-3 ತಿಂಗಳಿನಿಂದ ಬಿಜೆಪಿ ನಾಯಕರು ಅವರನ್ನು ಸಂಪರ್ಕ ಮಾಡುತ್ತಿದ್ದರು. ಮೊನ್ನೆ ಕೂಡ ಬಿಜೆಪಿ ಸೇರುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ಗುರುವಾರ ಏಕಾಏಕಿ ಪಕ್ಷ ತೊರೆದಿದ್ದಾರೆ ಎಂದರು ನಮ್ಮ ಪಕ್ಷ 136 ಸೀಟು ಗೆದ್ದಿದೆ. ನಮ್ಮ ತಪ್ಪಿನಿಂದ 6-7 ಸೀಟು ಸೋತಿದ್ದೇವೆ. ಈಗಲೂ ಬಹಳ ಮಂದಿ ನಮ್ಮ ಪಕ್ಷ ಸೇರಲು…

Read More

ಕೊಪ್ಪಳ:  ಗಂಗಾವತಿ ರೀಡ್ಸ್ ಸಂಸ್ಥೆಯ ಕಛೇರಿಯಲ್ಲಿ ಯುವತಿಯರಿಗೆ ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯನ್ನು ರೀಡ್ಸ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕರಾದ ಸಿ .ತಿಪ್ಪೇಶಪ್ಪ ಸರ್ ರವರು ತರಬೇತಿ ನೀಡಿದರು. ತರಬೇತಿಯಲ್ಲಿ ವ್ಯಾಪಾರದ ಗುಣಲಕ್ಷಣಗಳ ಬಗ್ಗೆ ತಿಳಿಸಿದರು. 1) ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯವನ್ನು ಮಾಡುವ ಬಗ್ಗೆ. 2) ವ್ಯಾಪಾರದಲ್ಲಿ ಹೊಸತನವನ್ನು ಬಳಸಿಕೊಂಡು ಆದಾಯವನ್ನು ಹೆಚ್ಚಿಸುವುದು. 3) ಅನ್ವೇಷಣೆ. 4) ವ್ಯಾಪಾರದಲ್ಲಿ ತಾಳ್ಮೆ ಮತ್ತು ಉತ್ತಮವಾದ ಮಾತನಾಡುವ ಕೌಶಲ್ಯ ಗಳನ್ನು ಹೊಂದಿದರೆ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ತರಬೇತಿ ನೀಡಿದರು. 5) ನಾವು ಮಾಡುವ ವೃತ್ತಿಯನ್ನು ಗೌರವಿಸಬೇಕು. 6) ಸ್ವಪ್ರೇರಣೆ ಇರಬೇಕು  ಮತ್ತು ಸತತವಾಗಿ ಪ್ರಯತ್ನ ಪಟ್ಟರೆ ಯಶಸ್ಸು ಜೀವನದಲ್ಲಿ ಸಿಗುತ್ತದೆ ಎಂದು ತಿಳಿಸಿದರು. ಕೊಪ್ಪಳ ತಾಲ್ಲೂಕ ಮತ್ತು ಗಂಗಾವತಿ ತಾಲ್ಲೂಕು ಯುವತಿಯರಿಗೆ ಮತ್ತು ರೀಡ್ಸ್ ಸಿಬ್ಬಂದಿಗಳು ಸೇರಿ ಒಟ್ಟು 32 ಜನ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Read More

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರ ಕೊನೆಗೂ ನಿಗಮ-ಮಂಡಳಿಗಳ ನೇಮಕದ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಎನ್.ಎ.ಹ್ಯಾರಿಸ್, ಕೆಎಂ ಶಿವಲಿಂಗೇಗೌಡ, ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 36 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇಲ್ಲಿದೆ ನಿಗಮ ಮಂಡಳಿ ಅಧಿಕಾರಿಗಳ ಪಟ್ಟಿ ಹಂಪನಗೌಡ ಬಾದರ್ಲಿ: ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಪ್ಪಾಜಿ ಸಿ.ಎಸ್.ನಾಡಗೌಡ: ಕೆಎಸ್​ಡಿಎಲ್ ರಾಜು ಕಾಗೆ: ಹುಬ್ಬಳ್ಳಿ ಸಾರಿಗೆ ನಿಗಮ (ವಾಯವ್ಯ ಸಾರಿಗೆ ನಿಗಮ) ಹೆಚ್.ವೈ.ಮೇಟಿ: ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ ಎಸ್.ಆರ್.ಶ್ರೀನಿವಾಸ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸವರಾಜ ನೀಲಪ್ಪ ಶಿವಣ್ಣನವರ್: ಅರಣ್ಯ ಅಭಿವೃದ್ಧಿ ನಿಗಮ ಬಿ.ಜಿ.ಗೋವಿಂದಪ್ಪ: ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹೆಚ್.ಸಿ.ಬಾಲಕೃಷ್ಣ: ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಜಿ.ಎಸ್.ಪಾಟೀಲ್: ಖನಿಜ ಅಭಿವೃದ್ಧಿ ನಿಗಮ ನಿಯಮಿತ ಎನ್.ಎ.ಹ್ಯಾರಿಸ್: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೌಜಲಗಿ ಮಹಾಂತೇಶ್ ಶಿವಾನಂದ: ಹಣಕಾಸು ಸಂಸ್ಥೆ ಸಿ.ಪುಟ್ಟರಂಗಶೆಟ್ಟಿ: ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿಮಿಟೆಡ್ ಬೀಳಗಿ ಶಾಸಕ ಜೆ.ಟಿ.ಪಾಟೀಲ್: ಹಟ್ಟಿ ಚಿನ್ನದ ಗಣಿ ರಾಜಾ ವೆಂಕಟಪ್ಪ…

Read More

ಮಹೀಂದ್ರ ಬಿಇ.05 ಎಲೆಕ್ಟ್ರಿಕ್ ಎಸ್‌ಯುವಿ ಇತ್ತೀಚೆಗೆ ನಾಸಿಕ್‌ನಲ್ಲಿ ಪರೀಕ್ಷೆ ನಡೆಸುತ್ತಿದೆ. ಭಾರತೀಯ ವಾಹನ ತಯಾರಕರು ಭಾರತೀಯ EV ಮಾರುಕಟ್ಟೆಯನ್ನು ಚಂಡಮಾರುತದಿಂದ ತೆಗೆದುಕೊಳ್ಳಲು ತಯಾರಿ ನಡೆಸುತ್ತಿರುವಾಗ ಇದನ್ನು ಅನೇಕ ಸಂದರ್ಭಗಳಲ್ಲಿ ಗುರುತಿಸಲಾಗಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಇದು 5 SUV ಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ ಎಂಬುದನ್ನು ನೆನಪಿಡಿ. ಇವುಗಳು ಅಸ್ತಿತ್ವದಲ್ಲಿರುವ ICE ಮಾದರಿಗಳಿಂದ ಪಡೆದ ಎಲೆಕ್ಟ್ರಿಕ್ SUV ಗಳ ಮಿಶ್ರಣವಾಗಿದೆ, ಹಾಗೆಯೇ ಮೀಸಲಾದ INGLO ಪ್ಲಾಟ್‌ಫಾರ್ಮ್ ಅನ್ನು ಬಳಸುವ ಜನ್ಮ-ಎಲೆಕ್ಟ್ರಿಕ್ SUVಗಳಾಗಿವೆ. ಈ ಇತ್ತೀಚಿನ ಪ್ರಕರಣದ ವಿವರಗಳನ್ನು ನೋಡೋಣ. ಇದು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಹೆದ್ದಾರಿಯಲ್ಲಿ ಕೂಪ್ ಆಕಾರದೊಂದಿಗೆ ಎಲೆಕ್ಟ್ರಿಕ್ SUV ಅನ್ನು ಸೆರೆಹಿಡಿಯುತ್ತದೆ. ಪರೀಕ್ಷಾ ಹೇಸರಗತ್ತೆಯಾಗಿರುವುದರಿಂದ, ಇಡೀ ದೇಹವು ಭಾರೀ ಮರೆಮಾಚುವಿಕೆಗೆ ಒಳಗಾಗುತ್ತದೆ. ಇನ್ನೂ, SUV ಯ ಸಿಲೂಯೆಟ್ ಸ್ಪಷ್ಟವಾಗಿದೆ. ಹಿಂಭಾಗದಲ್ಲಿ, ವಿಸ್ತೃತ ಟೈಲ್‌ಗೇಟ್‌ನೊಂದಿಗೆ ಪ್ರಮುಖ ಸ್ಪಾಯ್ಲರ್ ಇದೆ. ಸೈಡ್ ಪ್ರೊಫೈಲ್ ಆಧುನಿಕ ಮತ್ತು ದೊಡ್ಡ ಮಿಶ್ರಲೋಹದ ಚಕ್ರಗಳೊಂದಿಗೆ ಆಕರ್ಷಕವಾಗಿದೆ. ಹತ್ತಿರದಿಂದ ನೋಡಿದಾಗ, ಅನುಕ್ರಮ ತಿರುವು ಸೂಚಕಗಳನ್ನು ಸಹ ಗುರುತಿಸಬಹುದು.…

Read More

ಗರ್ಭಿಣಿ ಮಹಿಳೆಯರ ಆಹಾರ ಪದ್ಧತಿ ತುಂಬಾ ಆರೋಗ್ಯಕರವಾಗಿರುತ್ತದೆ. ವೈದ್ಯರ ಸಲಹೆ ಮೇರೆಗೆ ಸೇವನೆ ಮಾಡುವ ಕೆಲವೊಂದು ಆಹಾರಗಳು ಗರ್ಭಿಣಿ ಮಹಿಳೆಗೆ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಒದಗಿಸುತ್ತದೆ. ಬಾದಾಮಿ ಬೀಜಗಳು: ಗರ್ಭಿಣಿ ಮಹಿಳೆಯರು ಪ್ರತಿದಿನ ಒಂದು ಹಿಡಿ ನೆನೆಸಿದ ಬಾದಾಮಿ ಬೀಜಗಳನ್ನು ಸೇವನೆ ಮಾಡಬೇಕು. ಬಾದಾಮಿ ಬೀಜಗಳು ಪ್ರತಿಯೊಬ್ಬರ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಗರ್ಭಿಣಿ ಮಹಿಳೆಯರ ದೇಹದ ಆರೋಗ್ಯದ ಮೇಲೆ ಇವುಗಳ ಪ್ರಭಾವ ತುಂಬಾ ಹೆಚ್ಚಾಗಿರುತ್ತದೆ. ಬೆಳಗಿನ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ಬೀಜಗಳನ್ನು ಸೇವನೆ ಮಾಡುವುದರಿಂದ ಗರ್ಭಕೋಶದಲ್ಲಿ ಬೆಳವಣಿಗೆಯಾಗುತ್ತಿರುವ ಮಗುವಿಗೆ ಅಲರ್ಜಿ ಸಮಸ್ಯೆ ಉಂಟಾಗುವ ಸಾಧ್ಯತೆ ತಪ್ಪುತ್ತದೆ. ಗರ್ಭಿಣಿ ಮಹಿಳೆಯರಿಗೆ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಬಾದಾಮಿ ಬೀಜಗಳು ಕೆಲಸ ಮಾಡುತ್ತವೆ. ಪಿಸ್ತಾ ಬೀಜಗಳು ಪಿಸ್ತ ಬೀಜಗಳಲ್ಲಿ ಪ್ರೋಟೀನ್ ಅಂಶ, ಫೈಬರ್ ಅಂಶ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ. ಇವುಗಳಲ್ಲಿ ತುಂಬಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಇರುವ ಕಾರಣ ಮಧುಮೇಹ ಸಮಸ್ಯೆಯಿಂದ…

Read More

ಮಲೆನಾಡಿನಲ್ಲಿ ಕಳೆದ ವರ್ಷ ಅಡಕೆ ತೋಟಗಳನ್ನು ನಲುಗಿಸಿದ್ದ ಎಲೆಚುಕ್ಕಿ ಮತ್ತು ಇತರೆ ರೋಗಗಳನ್ನು ಈ ಬಾರಿ ಪ್ರಕೃತಿಯೇ ನಿಯಂತ್ರಣದಲ್ಲಿಟ್ಟಿದೆ. ಹವಾಮಾನದಲ್ಲಿ ವಿಪರೀತ ಬದಲಾವಣೆಗಳಾದಾಗ ಪ್ರಕೃತಿಯು ತನ್ನನ್ನು ತಾನೆ ನಿಯಂತ್ರಿಸಿಕೊಳ್ಳುವಂತೆ ಅಡಕೆ ತೋಟಗಳನ್ನು ಬಾಧಿಸಿದ್ದ ಹಲವು ರೋಗಗಳನ್ನು ಪ್ರಕೃತಿ ನಿಯಂತ್ರಣದಲ್ಲಿಟ್ಟಿದೆ. ಕಳೆದ ವರ್ಷ ಅತಿಯಾದ ಮಳೆಯಿಂದಾಗಿ ಎಲೆಚುಕ್ಕಿ, ಕೊಳೆ, ಹಳದಿ ಎಲೆ, ಹಿಂಗಾರು ಒಣಗು, ಕಾಂಡಕೊರಕ, ಬೇರು ಹುಳ ಮತ್ತು ಇತರೆ ರೋಗಗಳು ತೋಟಗಳನ್ನು ಆವರಿಸಿಕೊಂಡು ಅಡಕೆ ಮರಗಳನ್ನು ನಲುಗಿಸಿದ್ದವು. ಕೇವಲ ತೋಟಗಳಲ್ಲದೆ ರೋಗ ನಿಯಂತ್ರಣದ ಪ್ರಯತ್ನದಲ್ಲಿರೈತರು ಸಹ ಸಂಕಷ್ಟಕ್ಕೀಡಾಗಿದ್ದರು. ಅತಿಯಾದ ಮಳೆಯಿಂದಾಗಿ ಥಂಡಿ ಮತ್ತು ವಾತಾವರಣದಲ್ಲಿನ ಅತಿಹೆಚ್ಚು ತೇವಾಂಶವು ಎಲೆಚುಕ್ಕಿ ರೋಗ ಉಲ್ಬಣಗೊಳ್ಳಲು ಕಾರಣವಾಗಿತ್ತು. ಈ ವರ್ಷ ವಾಡಿಕೆಗಿಂತ ಕಡಿಮೆಯಾದ ಮಳೆಯು ರೋಗಕ್ಕೆ ಕಡಿವಾಣ ಹಾಕಿದೆ. ರೋಗ ಸಂಪೂರ್ಣವಾಗಿ ನಿವಾರಣೆಯಾಗದಿದ್ದರೂ ಹತೋಟಿಯಲ್ಲಿದೆ. ಮಳೆ ಹೆಚ್ಚಾದಾಗಲೆಲ್ಲ ಕಾಣಿಸಿಕೊಳ್ಳುತ್ತಿದ್ದ ಕೊಳೆ ರೋಗದ ಸದ್ದು ಸಹ ಈ ಬಾರಿ ಕೇಳಿ ಬಂದಿಲ್ಲ. ರೋಗ ಬಾಧೆಯಿಂದ ತೋಟ ನೋಡಲು ಸಹ ಬೇಸರವಾಗುತ್ತಿತ್ತು. ಈ ವರ್ಷ ಸ್ವಲ್ಪ ಸುಧಾರಿಸಿವೆ…

Read More

ಭಾರತ ವಿರುದ್ದ ಇಲ್ಲಿನ ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಮೊದಲನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 29 ರನ್‌ ಗಳಿಸಿದ ಇಂಗ್ಲೆಂಡ್‌ ಮಾಜಿ ನಾಯಕ ಜೋ ರೂಟ್‌ ಅವರು ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿತ್ತು. ಸಚಿನ್‌ ಇಂಡೋ-ಆಂಗ್ಲ 32 ಟೆಸ್ಟ್‌ ಪಂದ್ಯಗಳಿಂದ 2535 ರನ್‌ಗಳನ್ನು ಗಳಿಸಿದ್ದಾರೆ. ಸಚಿನ್‌ ತೆಂಡೂಲ್ಕರ್‌ ಇದರಲ್ಲಿ 7 ಶತಕಗಳು ಹಾಗೂ 13 ಅರ್ಧಶತಕಗಳನ್ನು ಸಿಡಿಸಿದ್ದರು. ಭಾರತ vs ಇಂಗ್ಲೆಂಡ್‌ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರು ಜೋ ರೂಟ್‌-2554* ಸಚಿನ್‌ ತೆಂಡೂಲ್ಕರ್‌-2535 ಸುನೀಲ್‌ ಗವಾಸ್ಕರ್‌-2348 ಸರ್‌ ಅಲ್‌ಸ್ಟೈರ್‌ ಕುಕ್‌- 2431 ವಿರಾಟ್‌ ಕೊಹ್ಲಿ-1991

Read More

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲೀಡಿಂಗ್ ರನ್ ಸ್ಕೋರರ್ (765 ರನ್) ಆಗಿದ್ದ ವಿರಾಟ್ ಕೊಹ್ಲಿ 2023ರ ವರ್ಷದ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2012, 2017 ಹಾಗೂ 2018ರಲ್ಲೂ ವಿರಾಟ್ ಕೊಹ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಈ ವರ್ಷದ ಪ್ರಶಸ್ತಿ ರೇಸ್‌ನಲ್ಲಿ ಶುಭಮನ್ ಗಿಲ್, ಮೊಹಮ್ಮದ್ ಶಮಿ ಸೇರಿದಂತೆ ನಾಲ್ವರು ಆಟಗಾರರು ಕಾಣಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಲ್ಕನೇ ಬಾರಿ ಐಸಿಸಿ ಏಕದಿನ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ (3 ಬಾರಿ) ಅವರ ದಾಖಲೆ ಮುರಿದಿದ್ದಾರೆ. ಕಳೆದ ಎರಡೂವರೆ ವರ್ಷಗಳ ಹಿಂದೆ ತಮ್ಮ ಬ್ಯಾಟಿಂಗ್ ಖದರ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ, 2022ರಲ್ಲಿ ಮತ್ತೆ ತಮ್ಮ ನೈಜ ಫಾರ್ಮ್ ಕಂಡುಕೊಂಡು 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ರನ್ ಹೊಳೆ ಹರಿಸಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 11 ಇನಿಂಗ್ಸ್‌ಗಳಿಂದ 6 ಅರ್ಧಶತಕ ಹಾಗೂ 3 ಶತಕದ ನೆರವಿನಿಂದ…

Read More