Author: AIN Author

ಸಾಸ್‌ನಲ್ಲೂ ಈಗ ನಾನಾ ವೆರೈಟಿಯ ಸಾಸ್‌ಗಳು ಇದೆ. ಹಾಟ್‌ ಸಾಸ್‌, ಸ್ವೀಟ್‌ ಸಾಸ್‌, ಟ್ಯಾಂಗಿ ಹೀಗೆ ಆಹಾರದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ ಎನ್ನುವ ಕಾರಣಕ್ಕಾಗಿ ಇವೆಲ್ಲಾ ನಮ್ಮ ತಟ್ಟೆಯಲ್ಲೊಂದು ಜಾಗಮಾಡಿಕೊಂಡಿದೆ. ಕೆಲವರು ಹಾಟ್‌ ಸಾಸ್‌ ಒಳ್ಳೆಯದೇ ಎಂದರೂ ಕೆಲವರು ಆರೋಗ್ಯಕ್ಕೆ ಒಳ್ಳೆಯದಲ್ಲವೆನ್ನುತ್ತಾರೆ. ಹಾಗಾದರೆ ಹಾಟ್‌ ಸಾಸ್‌ ತಿನ್ನಲೇಬಾರದಾ..? ತಿಂದರೆ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎನ್ನುವ ಮಾಹಿತಿ ಇಲ್ಲಿದೆ. ಹಾಟ್‌ ಸಾಸ್‌ ಸ್ವೀಟ್‌ ಸಾಸ್‌ಗಿಂತ ಒಳ್ಳೆಯದು.. ಸಕ್ಕರೆ ಬೆರೆಸಿದ ಸ್ವೀಟ್‌ಸಾಸ್‌ಗಿಂತ, ಮಸಾಲೆ ಬೆರೆಸಿದ ಹಾಟ್‌ ಸಾಸ್‌ ಉತ್ತಮ. ಇದರಿಂದ ಕೆಲವೊಂದು ಆರೋಗ್ಯ ಪ್ರಯೋಜನಗಳೂ ಇದೆ. ಆದರೆ ಅತಿಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆ ಬರೋದಂತು ಖಂಡಿತಾ. ಮೆಣಸಿನ ಕಾಯಿಯಲ್ಲಿ ಕಂಡುಬರುವ ಕ್ಯಾಪ್ಸೆಸಿನ್‌ ಎನ್ನುವ ರಾಸಾಯನಿಕ ಖಾರದ ಅನುಭವ ನೀಡುತ್ತದೆ. ಹಾಗಾಗಿ ಮೆಣಸಿನಿಂದ ತಯಾರಿಸಿದ ಹಾಟ್‌ ಸಾಸ್‌ ತಿಂದಾಗ ನಾಲಗೆಯ ಗ್ರಂಥಿಗಳಿಗೆ ಖಾರ ತಗಲುತ್ತದೆ, ಬಾಯಿ ಉರಿದಂತೆ ಅನುಭವವಾದರೂ ಇದರಿಂದ ಆರೋಗ್ಯ ಪ್ರಯೋಜನಗಳಿವೆ ಎನ್ನುತ್ತಾರೆ. ಆರೋಗ್ಯ ಪ್ರಯೋಜನಗಳು ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್‌ ಹೆಚ್ಚಿನ ಮಟ್ಟದ ಆಂಟಿ…

Read More

ಪ್ರತಿ ದಿನ ನೆನೆಸಿದ ಒಣ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಗೋಡಂಬಿ ತಿನ್ನುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. 1) ಗೋಡಂಬಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. 2) ಗೋಡಂಬಿಯಲ್ಲಿ ಜಿಯಾಕ್ಸಾಂಥಿನ್ ಎಂಬ ಆಯಂಟಿಆಕ್ಸಿಡೆಂಟ್ ಇದೆ. ಇದರಿಂದ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. 3) ಗೋಡಂಬಿ ತಿಂದರೆ ತೂಕ ಹೆಚ್ಚುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಗೋಡಂಬಿಯನ್ನು ಮಿತವಾಗಿ ಸೇವಿಸಿದರೆ ತೂಕ ಕಡಿಮೆಯಾಗುವುದು ಖಂಡಿತ. 4) ಗೋಡಂಬಿ ತಿನ್ನುವುದರಿಂದ ರಕ್ತ ಸಂಚಾರವೂ ಉತ್ತಮಗೊಳ್ಳುತ್ತದೆ. ದೇಹದ ಎಲ್ಲಾ ಭಾಗಗಳು ಇದರೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. 5) ಮಧುಮೇಹದಿಂದ ಬಳಲುತ್ತಿರುವವರು ಗೋಡಂಬಿಯನ್ನು ತಿನ್ನುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. 6) ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರೂ ಗೋಡಂಬಿ ತಿಂದರೆ ಆರೋಗ್ಯವಂತರಾಗಿರುತ್ತಾರೆ. ಇದರಲ್ಲಿರುವ ಮೆಗ್ನೀಸಿಯಮ್ ಮೈಗ್ರೇನ್ ಅನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ.

Read More

ಶನಿವಾರ ದಿನ ಉಗುರು ಮತ್ತು ಕೂದಲು ಕತ್ತರಿಸುವುದರಿಂದ ನಮಗೆ ದುರಾದೃಷ್ಟ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಕೆಲವರು ಇದರ ಹಿಂದೆ ವೈಜ್ಞಾನಿಕ ಕಾರಣವೂ ಇರಬಹುದು. ಕೆಲವರು ಇದನ್ನು ನಂಬುವುದಿಲ್ಲ. ಆದರೆ ಈ ದಿನ ಉಗುರು ಮತ್ತು ಕೂದಲು ಕತ್ತರಿಸುವುದರಿಂದ ಶನಿಯ ಅವಕೃಪೆಗೆ ಪಾತ್ರರಾಗುತ್ತೇವೆ ಅಂತಾ ಹೇಳಲಾಗುತ್ತದೆ. ಇನ್ನು ಶನಿ ಮತ್ತು ಕಬ್ಬಿಣಕ್ಕೂ ಸಂಬಂಧವಿದೆ ಎನ್ನುತ್ತಾರೆ. ರಸ್ತೆಯಲ್ಲಿ ಸಿಕ್ಕ ಕಬ್ಬಿಣವನ್ನು ಮನೆಗೆ ತಂದರೆ, ಮನೆಗೆ ಶನಿ ವಕ್ಕರಿಸುತ್ತಾನೆ ಅಂತಾರೆ, ಹಾಗಾಗಿ ದಾರಿಯಲ್ಲಿ ಸಿಕ್ಕ ಕಬ್ಬಿಣವನ್ನು ಮನೆಗೆ ತರುವುದಿಲ್ಲ. ಇನ್ನು ಹೊಸ ವಾಹನ ಖರೀದಿಸಿದಾಗ, ಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ, ಶನಿದೇವನಿಗೂ ಪೂಜೆ ಸಲ್ಲಿಸಿದರೆ, ಅಪಘಾತವಾಗದಂತೆ ಶನಿ ನಮ್ಮನ್ನು ರಕ್ಷಿಸುತ್ತಾನೆಂದು ಹೇಳಲಾಗುತ್ತದೆ. ಇನ್ನು ಸಾಡೇಸಾಥಿ ಇದ್ದವರಿಗೆ ಹೆಚ್ಚಾಗಿ ಅಪಘಾತವಾಗುತ್ತದೆ. ಹಾಗಾಗಿ ನಾವು ಶನಿಗೂ ಕಬ್ಬಿಣಕ್ಕೂ ಸಂಬಂಧವಿದೆ ಅನ್ನೋದನ್ನ ನಂಬಬಹುದು. ಶನಿವಾರದ ದಿನ ಕಬ್ಬಿಣವನ್ನು ಮನೆಗೆ ತಂದರೆ, ದುರಾದೃಷ್ಟ ತಂದಹಾಗೆ ಎನ್ನಲಾಗಿದೆ.

Read More

ಖರ್ಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ಖರ್ಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಯಾಕೆಂದರೆ ಇದರಲ್ಲಿ ಫೈಬರ್ ಹೆಚ್ಚಾಗಿದ್ದು, ಇದು ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಹಾಗೇ ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ. ಹಾಗೇ ಖರ್ಜೂರದಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವ ಕಾರಣ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಇದು ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. ಹಾಗಾಗಿ ಇದು ಗರ್ಭಿಣಿಯರಿಗೂ ಉತ್ತಮ. ಹಾಗಾಗಿ ಗರ್ಭಿಣಿಯರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1-2 ಖರ್ಜೂರವನ್ನು ಸೇವಿಸಿ

Read More

ಬೆಂಗಳೂರು: ಲೋಕಸಭಾ ಚುನಾವಣೆಗೆ ತಯಾರಿಗಳು ಭರದಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್‌ ಇದೀಗ ರಾಜ್ಯವಾರು ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಈ ಸಂಬಂಧ ಬಿಜೆಪಿ ಹೈಕಮಾಂಡ್‌ ರಾಜ್ಯಾವಾರು ಸ್ತುವಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ ಡಾ.ರಾಧ ಮೋಹನ್ ದಾಸ್ ಅಗ್ರವಾಲ್ ಮತ್ತು ಸುಧಾಕರ್ ರೆಡ್ಡಿ ಅವರನ್ನ ಉಸ್ತುವಾರಿಗಳಾಗಿ ನೇಮಕ ಮಾಡಿದೆ. ಕೇರಳಕ್ಕೆ ಪ್ರಕಾಶ್‌ ಜಾವ್ಡೇಕರ್‌, ಪುದುಚೇರಿಗೆ ನಿರ್ಮಲ್ ಕುಮಾರ್ ಸುರಾನ ಚುನಾವಣಾ ಉಸ್ತುವಾರಿಯಾಗಿ ಬಿಜೆಪಿ ಹೈಕಮಾಂಡ್‌ ನೇಮಿಸಿದೆ.

Read More

ಬೆಂಗಳೂರು: ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ ವಿಚಾರ ಬಗ್ಗೆ  ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಎಲ್ಲಾದರೂ ನಿಂತುಕೊಳ್ಲಲಿ ನಮಗೇನು ಟೆನ್ಷನ್ ಇಲ್ಲ ಮಂಡ್ಯ ಅಂದ್ರೆ ಇಂಡಿಯಾ ಅಂತಾರೆ ಮಂಡ್ಯದ ಸೌಂಡ್ ಇದ್ದೇ ಇರುತ್ತದೆ . ಯಾವ ಅಭ್ಯರ್ಥಿಯನ್ನು ಅವರು ಹಾಕಿದ್ರೂ ಹಾಕಲಿ ಎಂದು ಹೇಳಿದರು https://ainlivenews.com/the-list-of-appointment-of-corporation-boards-has-been-released-by-the-congress-government-of-the-state/ ಸುಮಲತಾ ಅವರನ್ನು ಕಾಂಗ್ರೆಸ್ ಗೆ ಕರೆತರುವ ವಿಚಾರ ಬಗ್ಗೆ ಮಾತನಾಡಿದ ಅವರು,  ಈ ವಿಚಾರ ನನಗೆ,ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ ಮೇಡಂ ಜೊತೆ ನಾನು ಮಾತಾಡಿಲ್ಲ ಯಾರು ಮಾತಾಡಿದ್ದಾರೆ ಅಂತ ಮೇಡಂ ಗೆ ಕೇಳಬೇಕು ಮೊನ್ನ ಅವ್ರೇ ಮೀಟಿಂಗ್ ಮಾಡಿದ್ದಾರೆ ಮಂಡ್ಯ ಸೀಟ್ ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ ಮೈತ್ರಿಯಲ್ಲಿ ಗೊಂದಲವಿರೋ ವಿಚಾರ ಬಗ್ಗೆ ಮಾತನಾಡಿದ ಅವರು,  ಅವರ ಗೊಂದಲವನ್ನು ಅವರೇ ಸರಿ ಮಾಡಬೇಕು ಬಿಜೆಪಿಯ ಗೊಂದಲ ಸರಿ ಮಾಡಲು ಹರ ಸಾಹಸ ಪಡ್ತಿದ್ದಾರೆ ಸೋಮಣ್ಣನ ಕರೆದು ಮಾತಾಡಿದ್ರು ಇನ್ನು ಏನೇನ್ ಮಾಡ್ತಾರೋ ಮಾಡಲಿ ಬಿಜೆಪಿ, ಜೆಡಿಎಸ್ ಹಾಕ್ತಾರೋ ನೋಡೋಣ ಒಂದು ಗುಂಪು ಪ್ರಬಲವಾಗಿ ಸುಮಲತಾ ಪರವಾಗಿ…

Read More

ಚಾಮರಾಜನಗರ:  ಕೆಎಸ್ಆರ್ ಟಿಸಿ ಬಸ್ ಮತ್ತು ಟಾಟಾ ಏಸ್ ನಡುವೆ ಡಿಕ್ಕಿಯಾಗಿದ್ದು  ಟಾಟಾ ಏಸ್ ಚಾಲಕ ಸಿದ್ದರಾಜು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಬಳಿ ನಡೆದಿದೆ. ಘಟನೆಯಲ್ಲಿ  ಏಳು ಮಂದಿಗೆ ಗಂಭೀರ ಗಾಯಗಳಾಗಿದ್ದು  ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಂಗಳ ಗ್ರಾಮದಿಂದ ಚಿಕ್ಕಲ್ಲೂರು ಜಾತ್ರೆಗೆ ತೆರಳುತ್ತಿದ್ದ ಟಾಟಾ ಏಸ್. ಚಾಮರಾಜನಗರದಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್. ಮಹಿಳೆಯರು ಸೇರಿದಂತೆ ಏಳು ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ. ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Read More

ಬೆಂಗಳೂರು: ಕ್ರಿಕೆಟ್ ಆಡುತ್ತಿದ್ದ ವೇಳೆ ಯುವಕ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೃದಯಾಘಾತದಿಂದ ರಾಬಿನ್ ( 22 )ಮೃತ ಯುವಕನಾಗಿದ್ದು  ನಿನ್ನೆ ಮಧ್ಯಾಹ್ನ 3:00 ಗಂಟೆಗೆ ನಡೆದ ಘಟನೆಯಾಗಿದೆ. ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಬಹುಮಾನ ಪಡೆಯೋ ವೇಳೆ ಕುಸಿದು ಬಿದ್ದ ರಾಬಿನ್ ಗಣರಾಜ್ಯೋತ್ಸವ ಹಿನ್ನೆಲೆ ಕ್ರಿಕೆಟ್‌ ಪಂದ್ಯಾವಳಿ ನಡೆಸಲಾಗಿತ್ತು ಎರಡು ಮೂರು ಮ್ಯಾಚ್ ಗಳಲ್ಲಿ ಆಡಿ ಪಂದ್ಯ ಗೆಲುವಿಗೆ ಕಾರಣಕರ್ತನಾಗಿದ್ದ ರಾಬಿನ್ ಟೂರ್ನಿ ಸಂಬಂಧ ಬಹುಮಾನ ಕಾರ್ಯಕ್ರಮ ವೇಳೆ ಹೃದಯಾಘಾತ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೀತಿತ್ತು ವೇದಿಕೆ ಮೇಲೆ ಬಹುಮಾನ ಪಡೆಯೋವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದ ರಾಬಿನ್ ಡಿ ಹೈಡ್ರೇಟ್ ಆಗಿ ಕುಸಿದು ಬಿದ್ದಿದ್ದ ರಾಬಿನ್ ಕೂಡಲೇ ರಾಬಿನ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವು ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ವೈದ್ಯರು ಮಾಹಿತಿ

Read More

ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ನಿಂದ ಕಲೆಕ್ಷನ್ ಹೋಗುತ್ತಿದೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ತೆಲಂಗಾಣ ಚುನಾವಣೆಗೆ ರಾಜ್ಯದಲ್ಲಿ ಹಣ ಸಂಗ್ರಹ ಮಾಡಿದಂತೆ, ಲೋಕಸಭೆ ಚುನಾವಣೆಗೂ ವಸೂಲಿ ಶುರುವಾಗಿದೆ. ಇದು ಕಲೆಕ್ಷನ್ ಸರ್ಕಾರ ಎಂದು ಆರೋಪಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ’ ಇಲಾಖೆಯು ನಗದು ಅಭಿವೃದ್ಧಿಗೆ ಸಿಕ್ಕಸಿಕ್ಕ ಕಡೆ ಸುಲಿಗೆಗೆ ಇಳಿದಿದೆ. ದಂಧೆಗೆ ಯಾವ ಹುಲ್ಲುಗಾವಲಾದರೇನು? ಹೈಕಮಾಂಡ್ ಗೆ ಕಪ್ಪ ಸಲ್ಲಿಸಬೇಕೆಂದು ಹಾದಿಬೀದಿಯಲ್ಲಿ ಹೇಳಿಕೊಂಡು ಸಿಕ್ಕಿದ ಕಡೆಯೆಲ್ಲಾ ವಸೂಲಿ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಕೈಗಾರಿಕೆ, ಉದ್ಯಮ ಚಟುವಟಿಕೆಗೆ ಒಪ್ಪಿಗೆ ಕೊಡಲು KIADB ಇದೆ. ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ಪ್ರಕ್ರಿಯೆ ನಿರಾತಂಕವಾಗಿ ನಡೆಯುತ್ತಿದೆ. ಅದಕ್ಕೂ ಮುನ್ನ ಉನ್ನತಮಟ್ಟದ ಹೂಡಿಕೆ ಅನುಮೋದನೆ ಸಮಿತಿ ಒಪ್ಪಿಗೆಯನ್ನೂ ಕೊಡುತ್ತದೆ. ಇಷ್ಟೆಲ್ಲ ಇದ್ದ ಮೇಲೆ ಇಲ್ಲಿ BDA ಕೆಲಸ ಏನು? ಯಾರ ಕಿಸೆ ಭರ್ತಿ ಮಾಡಲಿಕ್ಕೆ BDA ಇಂಥ ಅಡ್ಡದಾರಿ ತುಳಿದಿದೆ? ಎಂದು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ.

Read More

ಬೆಂಗಳೂರು: ನೇರಳೆ ಮಾರ್ಗದಲ್ಲಿ (Purple Line) ಕೆಲಕಾಲ ವ್ಯತ್ಯಯವಾಗಿದ್ದ ಮೆಟ್ರೋ ಸಂಚಾರ  ಮತ್ತೆ  ಪುನರ್‌ ಆರಂಭವಾಗಿದೆ. ಎಂಜಿ ರೋಡ್- ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಕರೆಂಟ್‌ ಸಮಸ್ಯೆಯಿಂದ ಕೆಲ ಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ ಶೀಘ್ರವೇ ಸಮಸ್ಯೆ ಪರಿಹರಿಸುವುದಾಗಿ ಬಿಎಂಆರ್‌ಸಿಎಲ್‌ ಪ್ರಕಟಣೆ ಹೊರಡಿಸಿತ್ತು. ಅಂತೆಯೇ ಸಮಸ್ಯೆ ಪರಿಹರಿಸಲಾಗಿದ್ದು, ಎಂಜಿ ರೋಡ್ ಮತ್ತು ಚಲ್ಲಘಟ್ಟ ನಡುವೆ ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ  ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬೆಳಿಗ್ಗೆ 11.00 ಗಂಟೆಯಿಂದ ರೈಲು ಸೇವೆಗಳು ಎಂದಿನಂತೆ ಪುನರ್ ಆರಂಭಿಸಲಾಗಿದೆ.

Read More