Author: AIN Author

ದೆಹಲಿ:- ರಾಜ್ಯಗಳು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಇಂದು ನಾವು ಮತ್ತೊಂದು ಬದಲಾವಣೆಗೆ ಸಾಕ್ಷಿಯಾಗಿದ್ದೇವೆ. ಈ ಹಿಂದೆ ಸದನದ ಯಾವುದೇ ಸದಸ್ಯರ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ ಎಲ್ಲರೂ ಅವರಿಂದ ದೂರವಾಗುತ್ತಿದ್ದರು. ಆದರೆ ಇಂದು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಭ್ರಷ್ಟರನ್ನೂ ಸಾರ್ವಜನಿಕವಾಗಿ ವೈಭವೀಕರಿಸುವುದನ್ನು ನೋಡುತ್ತೇವೆ. ಇದು ಕಾರ್ಯಾಂಗಕ್ಕೆ ಮಾಡಿದ ಅವಮಾನ, ನ್ಯಾಯಾಂಗಕ್ಕೆ ಮಾಡಿದ ಅವಮಾನ, ಭಾರತದ ಶ್ರೇಷ್ಠ ಸಂವಿಧಾನಕ್ಕೆ ಮಾಡಿದ ಅವಮಾನಚರ್ಚೆ ಮತ್ತು ದೃಢವಾದ ಸಲಹೆಗಳು ಈ ವಿಷಯದ ಕುರಿತು ಈ ಸಮ್ಮೇಳನದಲ್ಲಿ ಭವಿಷ್ಯದ ಹೊಸ ರಸ್ತೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದ್ದಾರೆ. ಆಲ್ ಇಂಡಿಯಾ ಪ್ರಿಸೈಡಿಂಗ್ ಆಫೀಸರ್ಸ್ ಸಮ್ಮೇಳನಕ್ಕೆ ನಿಮ್ಮೆಲ್ಲರಿಗೂ ಶುಭಾಶಯಗಳು. ಈ ಬಾರಿಯ ಈ ಸಮ್ಮೇಳನ ಇನ್ನಷ್ಟು ವಿಶೇಷವಾಗಿದ್ದು, ಭಾರತದ 75ನೇ ಗಣರಾಜ್ಯೋತ್ಸವದ ನಂತರ ಈ ಸಮ್ಮೇಳನ ನಡೆಯುತ್ತಿದೆ. ನಮ್ಮ ಸಂವಿಧಾನವು 75 ವರ್ಷಗಳ ಹಿಂದೆ ಜನವರಿ 26 ರಂದು ಜಾರಿಗೆ ಬಂದಿತು.…

Read More

ಪಟ್ನಾ:- ನಿತೀಶ್ ಬಿಜೆಪಿ ಜೊತೆ ಹೋದರೆ ಡಿಸಿಎಂ ತೇಜಸ್ವಿ ಯಾದವ್ ಅವರ ಗತಿಯೇನು ಎಂಬ ಪ್ರಶ್ನೆ ಎದ್ದಿದೆ. ಜತೆಗೆ, ತೇಜಸ್ವಿ ಯಾದವ್ ಮುಂದೇನು ಮಾಡಬಹುದು? ಸಾಧ್ಯಾಸಾಧ್ಯತೆಗಳೇನು ಎಂಬ ವಿಚಾರವೂ ಚರ್ಚೆಯಲ್ಲಿದೆ. ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನಡುವೆ ಎಲ್ಲವೂ ಸರಿಯಾಗಿ ಇದ್ದಂತಿಲ್ಲ. ಶುಕ್ರವಾರ ನಡೆದ ಗಣರಾಜ್ಯೋತ್ಸವದ ಸಮಾರಂಭದಲ್ಲಿಯೂ ಇದಕ್ಕೆ ಉದಾಹರಣೆ ಕಂಡುಬಂದಿತ್ತು. ಇಬ್ಬರ ನಡುವಿನ ಅಂತರ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ಒಂದು ಸೀಟು ಖಾಲಿ ಉಳಿದಿತ್ತು. ಈ ಕಾರ್ಯಕ್ರಮದಲ್ಲಿ ಇಬ್ಬರೂ ಏನೂ ಮಾತನಾಡಿರಲಿಲ್ಲ. ಸದ್ಯದ ಬಿಹಾರದ ಪರಿಸ್ಥಿತಿಯನ್ನು ನೋಡಿದರೆ, ಇಡೀ ರಾಜ್ಯದಲ್ಲಿ ನಿತೀಶ್‌ಗಿಂತ ತೇಜಸ್ವಿ ಅವರ ವರ್ಚಸ್ಸು ಉತ್ತಮವಾಗಿದೆ. 2020 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತೇಜಸ್ವಿ ಅವರು ಬೃಹತ್ ರ‍್ಯಾಲಿಗಳನ್ನು ನಡೆಸಿದ್ದರು. ಲಾಲು ಅನುಪಸ್ಥಿತಿಯಲ್ಲಿ ತೇಜಸ್ವಿ ಅವರ ಆರ್‌ಜೆಡಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಹಾರದ ಜನರ ಮನಸ್ಸಿನಲ್ಲಿ ಯಾರಿದ್ದಾರೆ ಎಂಬುದು ಇದರಿಂದ…

Read More

ಬೆಂಗಳೂರು:- ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ಖಚಿತ ಎಂದು ಭೂಪೇಂದ್ರ ಯಾದವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸೀಟುಗಳು ಸಿಗೋದು ಖಚಿತ. ಮತ್ತೆ ಮೋದಿಯವರು ಪ್ರಧಾನಿ ಆಗುವುದು ಖಚಿತ ಎಂದರು. ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೇಂದ್ರದಿಂದ ಅನೇಕ ಅನುದಾನಗಳು, ಜಿಎಸ್‍ಟಿ ಬಾಕಿ ಬಂದರೂ ಅಭಿವೃದ್ಧಿ ಶೂನ್ಯ. ಗ್ಯಾರಂಟಿ ಹೆಸರಿನಲ್ಲಿ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಜನರಿಗೆ ವಂಚಿಸುತ್ತಿದೆ ಎಂದು ಆರೋಪಿಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 28 ಕ್ಷೇತದಲ್ಲೂ ಜಯಿಸಲಿದೆ. ಬಳಿಕ ರಾಜ್ಯದಲ್ಲಿ ಕಮಲ ಅರಳುವುದು ಗ್ಯಾರಂಟಿ. ಪಶ್ಚಿಮ ಬಂಗಾಳ ಹಾಗೂ ಬಿಹಾರದ ಬೆಳವಣಿಗೆಯಿಂದ ಕಾಂಗ್ರೆಸ್ ಮತ್ತಷ್ಟು ಕುಗ್ಗಿದೆ ಎಂದು ಭೂಪೇಂದ್ರ ಯಾದವ್ ಹೇಳಿದರು.

Read More

ಬೆಂಗಳೂರು:- ರೌಡಿಶೀಟರ್ ಮಿಲ್ಟ್ರಿ ಸತೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಪ್ರಶಾಂತ್, ದನುಷ್, ಕಾಮ್ಲೆಟ್ ಮತ್ತು ಸುನೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು 18 ರಿಂದ 20 ವರ್ಷ ವಯಸ್ಸಿನವರಾಗಿದ್ದು, ವೈಯಕ್ತಿಕ ದ್ವೇಷದಿಂದ ಸತೀಶ್​ನನ್ನು ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಸತೀಶ್ ಕೊಲೆಯಾಗುವ ಒಂದು ದಿನದ ಮೊದಲು ಬಾರ್​ನಲ್ಲಿ ರೌಡಿಶೀಟರ್​ ಆರೋಪಿಯನ್ನು ನಿಂದಿಸಿದ್ದನು. ಇದರಿಂದ ಕೋಪಗೊಂಡಿದ್ದ ಆರೋಪಿಗಳು ಸತೀಶ್‌ ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಅದರಂತೆ ಬೆಂಗಳೂರಿನ ವಿವೇಕನಗರದ ಮಾಯಾಬಜಾರ್ ಸ್ಲಂನಲ್ಲಿರುವ ತಮ್ಮ ಮನೆಯ ಹೊರಗೆ ಮಲಗಿದ್ದ ಸತೀಶ್​ನನ್ನು ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಹೆಚ್ ತೆಕ್ಕನವರ್ ಹೇಳುವ ಪ್ರಕಾರ, ಸತೀಶ್ ಒಬ್ಬ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಸತೀಶ್‌ನನ್ನು ಕೊಲೆ ಮಾಡಿದ ಆರೋಪಿಗಳು ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದರು. ಸತೀಶ್ ತನ್ನ ಮನೆಯಲ್ಲಿ ಕೊಲೆಯಾದ ನಂತರ…

Read More

ಬೆಂಗಳೂರು:- ಬಿಜೆಪಿ ಸರ್ಕಾರ ಮತ್ತೊಮ್ಮೆ ಬರಬೇಕು ಎಂಬುವುದನ್ನು ಶಾಮನೂರು ಸೂಕ್ಷ್ಮವಾಗಿ ಹೇಳಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ. ಬಿ.ವೈ ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎನ್ನುವ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಶಾಮನೂರು ಶಿವಶಂಕರಪ್ಪನವರು ದೇಶಕ್ಕೆ ಒಂದೊಳ್ಳೆ ಸಂದೇಶ ಕೊಟ್ಟಿದ್ದಾರೆ. ದೇಶದ ಹಿತದೃಷ್ಟಿಯಿಂದ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಬೇಕು ಎಂಬ ಸಂದೇಶ ಕೊಟ್ಟಿದ್ದಾರೆ. ಅವರ ಹೇಳಿಕೆಯನ್ನ ಸ್ವಾಗತ ಮಾಡ್ತೀನಿ ಎಂದಿದ್ದಾರೆ. ಶಾಮನೂರು ಅವರು ಮೋದಿಯನ್ನು ಒಪ್ಪಿದ್ದಾರೆ. ಮತ್ತೆ ಮೋದಿ ಪ್ರಧಾನಿ ಆಗಲಿ ಎಂಬುದನ್ನ ಪರೋಕ್ಷವಾಗಿ ಮತ್ತು ಅಷ್ಟೇ ಸೂಕ್ಮವಾಗಿ ಹೇಳಿದ್ದಾರೆ. ಶಾಮನೂರು ಅವರ ಹೇಳಿಕೆಯಂತೆ ಮೋದಿಗೆ ಎಲ್ಲರೂ ಮತ ಹಾಕಬೇಕು, ಬಿಜೆಪಿಯನ್ನ ಗೆಲ್ಲಿಸಬೇಕು. ಅಭಿವೃದ್ಧಿ ಆಗಬೇಕು ಎಂದರೆ ಮೋದಿ ಬೇಕು. ಹಾಗಾಗಿ ಪ್ರತಿಯೊಬ್ಬರೂ ಬಿಜೆಪಿಗೆ ಮತ ಹಾಕಿ, ಮೋದಿಯನ್ನ ಮತ್ತೊಮ್ಮೆ ಪ್ರಧಾನಿ ಮಾಡಿ ಎಂದು ಮನವಿ ಮಾಡಿದ್ದಾರೆ. ಲಕ್ಷ್ಮಣ ಸವದಿ ಸಹ ಬಿಜೆಪಿಗೆ ಬರ್ತಾರಾ ಅನ್ನೋ ಹೇಳಿಗೆ ಪ್ರತಿಕ್ರಿಯಿಸಿ, ಲಕ್ಷ್ಮಣ ಸವದಿ ಜೊತೆಗೆ ಸ್ನೇಹ…

Read More

ಬಿಗ್ ಬಾಸ್ ಸೀಸನ್ 10 ರ ಗ್ರ್ಯಾಂಡ್ ಫಿನಾಲೆಗೆ ಕೌಂಟ್ ಡೌನ್ ಶುರುವಾಗಿದೆ. ಇದೀಗ ಕಿಚ್ಚನ ಹೊಸ ಲುಕ್ ರಿವಿಲ್ ಆಗಿದೆ. ಬಿಳಿ ಮಿಶ್ರಿತ ಕಾಸ್ಟ್ಯೂಮ್ ಅನ್ನು ಕಿಚ್ಚ ಧರಿಸಿದ್ದು, ಆ ಶರ್ಟ್ ಮೇಲೆ ಬಾದ್ ಶಹಾ ಎಂದು ಬರೆಯಲಾಗಿದೆ. ಕಿಚ್ಚ ಲುಕ್ ಕಂಡ ಅಭಿಮಾನಿಗಳು ಖಂಡಿತಾ ಖುಷಿ ಪಟ್ಟಿರುತ್ತಾರೆ. ಬಿಗ್ ಬಾಸ್ ಫಿನಾಲೆ ವೇದಿಕೆ ರಂಗು ರಂಗಾಗಿದೆ. ನೂರು ಚಿಲ್ರೆ ದಿನಗಳನ್ನು ಪೂರೈಸಿ ಕೊನೆಗೂ ಬಿಗ್ ಬಾಸ್ ಫಿನಾಲೆಗೆ ಬಂದು ತಲುಪಿದೆ. ಇಂದು ಸಂಜೆಯಿಂದ ಫಿನಾಲೆ ಸಂಚಿಕೆಯನ್ನು ಪ್ರಸಾರ ಮಾಡಲು ವಾಹಿನಿಯು ಸಿದ್ಧ ಮಾಡಿಕೊಂಡಿದೆ. ಸಂಜೆ 7.30ರಿಂದ ಫಿನಾಲೆ ಸಂಚಿಕೆಯನ್ನು ವೀಕ್ಷಿಸಬಹುದಾಗಿದೆ. ಫಿನಾಲೆ ಕಾರಣದಿಂದಾಗಿ ತಮ್ಮದೇ ಆದ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ ಬಿಗ್ ಬಾಸ್ ಟೀಮ್. ಈಗಾಗಲೇ ನಾಮಿನೇಟ್ ಆಗಿರುವ ಸ್ಪರ್ಧಿಗಳನ್ನು ವೇದಿಕೆಗೆ ಕರೆಯಿಸಿಕೊಂಡು ಭರ್ಜರಿ ಸ್ಟೆಪ್ ಹಾಕಿಸಿದೆ. ಶೂಟಿಂಗ್ ಸ್ಥಳದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಚಿತ್ರೀಕರಣದ ಯಾವುದೇ ವಿಷಯಗಳು ಬಹಿರಂಗವಾಗ ಬಾರದು ಎನ್ನುವ ಕಾರಣಕ್ಕಾಗಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು…

Read More

ಹುಬ್ಬಳ್ಳಿ:- ಪ್ರಹ್ಲಾದ್ ಜೋಶಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಧಾರವಾಡ ಲೋಕಸಭಾ ಅಭ್ಯರ್ಥಿ ನಾನೇ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಮ್ಮ ಪಕ್ಷದಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಈಗಾಗಲೇ ಚುನಾವಣೆಗೆ ತಯಾರಿ ನಡಸಿದ್ದೇನೆ. ಜೋಶಿನೇ ಅಭ್ಯರ್ಥಿ ಮತ್ತೆ ಇನ್ನೇನು ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಅರವಿಂದ್ ಬೆಲ್ಲದ್, ಜೋಶಿ ಅವರೇ ನಮ್ಮ ನಾಯಕರು ಸುಮ್ಮನೆ ಏನೇನೋ ಹೇಳಬೇಡಿ ಅಂದ್ರು. ಬಳಿಕ ಮಾತು ಮುಂದುವರಿಸಿದ ಜೋಶಿ, ಶಾಸಕರು, ನಗರ ಘಟಕ ಅಧ್ಯಕ್ಷರು, ಕಾರ್ಯಕರ್ತರು ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಯಾಕೋ ರಾಷ್ಟ್ರೀಯ ಅಧ್ಯಕ್ಷ ಅಂತ ಹೇಳುತ್ತಿದ್ದಾರೆ. ಪುಣ್ಯಕ್ಕೆ ರಾಷ್ಟ್ರಪತಿ ಆಗುತ್ತಾರೆ ಅಂದಿಲ್ಲ, ಜೋಶಿ ರಾಷ್ಟ್ರಪತಿ ಆಗುತ್ತಾರೆ, ಶೆಟ್ಟರ್ ಅಭ್ಯರ್ಥಿ ಆಗುತ್ತಾರೆ ಅಂತ ಹೇಳುತ್ತಿಲ್ಲ ಅಂದ್ರು. ಶೆಟ್ಟರ್ ಪಕ್ಷಕ್ಕೆ ವಾಪಸ್ ಆಗಿದ್ದು ಸಂತೋಷ, ಒಳ್ಳೆಯದು. ಶೆಟ್ಟರ್ ಬಂದಿದ್ದು ಸಂತೋಷ ತಂದಿದೆ. ಈ ಭಾಗದಲ್ಲಿ ಎಲ್ಲರೂ ಒಂದುಗೂಡಿ ಪಕ್ಷ ಬಲವರ್ಧನೆ ಮಾಡುತ್ತೇವೆ. ನನ್ನದು ಯಾವುದೇ ವಿರೋಧ ಇಲ್ಲ…

Read More

ಚಾಮರಾಜನಗರ:- ಕನಕ ಜಯಂತಿ ವೇಳೆ ಯತೀಂದ್ರ ಸಿದ್ದರಾಮಯ್ಯಗೆ ಯುವಕನಿಂದ ನಿಂದನೆ ಮಾಡಲಾಗಿದ್ದು, ಬಳಿಕ ಪರಾರಿ ಆಗಿದ್ದಾನೆ. ಕನಕ ಜಯಂತಿ ಕಾರ್ಯಕ್ರಮದ ವೇಳೆ ಗುಂಡ್ಲುಪೇಟೆ ಮೈದಾನದಲ್ಲಿ ಫುಲ್ ಹೈಡ್ರಾಮ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಬೈಕ್​ನಲ್ಲಿ ಬಂದಿದ್ದ ಯುವಕ ರಂಜಿತ್ ಎಂಬಾತ ಅವಾಚ್ಯ ಶಬ್ದದಿಂದ ನಿಂಧಿಸಿ ಪರಾರಿಯಾದ ಘಟನೆ ನಡೆದಿದೆ. ಯತೀಂದ್ರ ಸಿದ್ದರಾಮಯ್ಯ ಭಾಷಣ ಮಾಡುವಾಗ ಕೇಂದ್ರ ಸರ್ಕಾರ ಹಾಗೂ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುವಾಗ ಅವಾಚ್ಯ ಶಬ್ದದಿಂದ ನಿಂದಿಸಿ ಹೋಗಿದ್ದವ ಪುನಃ ಮೈದಾನಕ್ಕೆ ಬಂದಾಗ ಪೊಲೀಸರು ಬಂಧಿಸಿದ್ದಾರೆ.

Read More

ಬೆಂಗಳೂರು:- ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶೆಟ್ಟರ್ ಅವರು ಇಲ್ಲಿದ್ದಾಲೂ ಹಾಗೆಯೇ ಮಾತಾಡುತ್ತಿದ್ದರು, ಬಿಜೆಪಿಯನ್ನು ನಿರ್ನಾಮಗೊಳಿಸಬೇಕು ಅನ್ನುತ್ತಿದ್ದರು ಎಂದು ನಗುತ್ತಾ ಹೇಳಿದರು. ಇನ್ನೂ ನಮ್ಮ ರಾಜಕಾರಣಿಗಳು ಎಷ್ಟು ಬೇಗ ಬಣ್ಣ ಬದಲಾಯಿಸುತ್ತಾರಲ್ಲಾ ಅಂತ ಆಶ್ಚರ್ಯವಾಗುತ್ತದೆ. ಮಾಜಿ ಮುಖ್ಯಮಂತ್ರಿ ಮತ್ತು ಈಗ ಪುನಃ ಬಿಜೆಪಿಯ ನಾಯಕನಾಗಿರುವ ಜಗದೀಶ್ ಶೆಟ್ಟರ್ ಕಳೆದ ವಾರದವರೆಗೆ ಮಾಧ್ಯಮ ಪ್ರತಿನಿಧಿಗಳನ್ನು ತಮ್ಮ ಮನೆಗೆ ಕರೆದು ಬಿಜೆಪಿ ನಾಯಕರನ್ನು ತೆಗಳುತ್ತಿದ್ದರು. ಆರ್ ಅಶೋಕ್ ವಿರೋಧ ಪಕ್ಷದ ನಾಯಕನಾದಾಗ, ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾದಾಗ ಅವರ ಕಟು ಟೀಕೆಗಳನ್ನು ಮಾಡಿದ್ದರು. ವಿಪಕ್ಷ ನಾಯಕನ ಆಯ್ಕೆ ನಡೆಯುವ ಮೊದಲು ಅವರು ಹೊಸ ಸರ್ಕಾರ ರಚನೆನಯಾಗಿ 7 ತಿಂಗಳಾದರೂ ಬಿಜೆಪಿ ನಾಯಕರಿಗೆ ಒಬ್ಬ ವಿರೋಧ ಪಕ್ಷನನ್ನು ಆಯ್ಕೆ ಮಾಡಿವುದು ಸಾಧ್ಯವಾಗಿಲ್ಲ ಅಂತ ಮೂದಲಿಸುತ್ತಿದ್ದರು. ಬಿಜೆಪಿಗೆ ವಾಪಸ್ಸು ಹೋದ ಕೇವಲ ಎರಡ…

Read More

ಬಿಗ್ ಬಾಸ್ ಸೀಸನ್ 10 ರ ಗ್ರ್ಯಾಂಡ್ ಫಿನಾಲೆ ಇಂದು ಮತ್ತು ನಾಳೆ ನಡೆಯಲಿದೆ. ಈ ಬಾರಿ ಫಿನಾಲೆಗೆ 6 ಮಂದಿ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಇದೀಗ ಬಾಟಮ್ 3ರಲ್ಲಿ ವಿನಯ್‌, ವರ್ತೂರು ಸಂತೋಷ್, ತುಕಾಲಿ ಸಂತು ಇದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರತಿ ಬಾರಿ ಫಿನಾಲೆ ಸಮಯದಲ್ಲಿ 5 ಜನ ಸ್ಪರ್ಧಿಗಳು ಇರುತ್ತಿದ್ದರು. ಆದರೆ ಈ ಬಾರಿ 6 ಜನ ಸ್ಪರ್ಧಿಗಳು ಫಿನಾಲೆಗೆ ಟಿಕೆಟ್ ಪಡೆದಿದ್ದಾರೆ. 6 ಜನರ ಶ್ರಮ, ಪೈಪೋಟಿ ಗಮನಿಸಿ ಸುದೀಪ್ (Sudeep) ಸ್ಪರ್ಧಿಗಳಿಗೆ ಸೂಪರ್ ಗಿಫ್ಟ್ ನೀಡಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತು, ವಿನಯ್, ಕಾರ್ತಿಕ್, ಪ್ರತಾಪ್, ಸಂಗೀತಾ ಫಿನಾಲೆ ಕಣದಲ್ಲಿದ್ದಾರೆ. ‘ಬಿಗ್ ಬಾಸ್’ ಶೋ ಕುರಿತು ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಇಂದು ಫಿನಾಲೆಯ ಮೊದಲ ದಿನವಾಗಿದ್ದು, 6 ಜನರಲ್ಲಿ ಇಬ್ಬರನ್ನು ಎಲಿಮಿನೇಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲಿ ವರ್ತೂರು ಸಂತೋಷ್, ತುಕಾಲಿ , ವಿನಯ್ ಡೇಂಜರ್ ಝೋನ್‌ನಲ್ಲಿದ್ದಾರೆ ಹೀಗೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.…

Read More