Author: AIN Author

ಬೆಂಗಳೂರು:- 64ನೇ ಹುಟ್ಟು ಹಬ್ಬವನ್ನು ನಾಳೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆದರಿಸಿಕೊಳ್ಳುತ್ತಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಲಿದ್ದಾರೆ. ಜನ್ಮದಿನದ ಪ್ರಯುಕ್ತ ಶಿಗ್ಗಾವಿ ಹಾಗೂ ಸವಣೂರಿನಲ್ಲಿ ಈಗಾಗಲೇ ಐ ಕ್ಯಾಂಪ್, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಕಾರ್ಯಕ್ರಮ ನೆರವೇರಿಸಲಾಗಿದೆ. ಅಲ್ಲದೇ ತಮ್ಮ ಟ್ರಸ್ಟ್ ವತಿಯಿಂದ 250 ವಿದ್ಯಾರ್ಥಿಗಳಿಗೆ ತಲಾ 5000 ಶಿಷ್ಯವೇತನ ನೀಡಿದ್ದಾರೆ. ಬುದ್ದಿಮಾಂದ್ಯ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದು, ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಸಂಜೆ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ನೀಡಲಾಗುತ್ತದೆ. ನಂತರ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆಯುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Read More

ಫಿನಾಲೆಯ ಅಂತಿಮ ಹಂತದಲ್ಲಿ ದೊಡ್ಮನೆಯ ಆಟದಿಂದ ತುಕಾಲಿ ಸಂತು ಎಲಿಮಿನೇಟ್ ಆಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಹಾಸ್ಯ ನಟ ತುಕಾಲಿ ಸಂತು ದೊಡ್ಮನೆಗೆ ಕಾಲಿಟ್ಟ ದಿನದಿಂದ ಸ್ಪರ್ಧಿಗಳನ್ನು, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಸಂತು ಇದ್ದಾರೆ ಅಂದರೆ ಅಲ್ಲಿ ನಗುವಿಗೆ ಕೊರತೆ ಇಲ್ಲ ಎಂದರ್ಥ. ಅಷ್ಟರ ಮಟ್ಟಿಗೆ ತುಕಾಲಿ ಸಂತು ಮೋಡಿ ಮಾಡಿದ್ದಾರೆ. ಹೀಗಿರುವಾಗ ಫಿನಾಲೆಯ ದಿನ ತುಕಾಲಿ ಸಂತು ಬಿಗ್ ಬಾಸ್ ಆಟದಿಂದ ಔಟ್‌ ಆಗಿದ್ದಾರೆ ಎನ್ನಲಾಗುತ್ತಿದೆ. ಹಳೆಯ ಸೀಸನ್‌ಗಳ ರೆಕಾರ್ಡ್ ಬ್ರೇಕ್ ಮಾಡಿದ ಸೀಸನ್ ಅಂದರೆ ಅದು ‘ಬಿಗ್ ಬಾಸ್ ಸೀಸನ್ 10’ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಷನ್ ಮೂಡಿಸಿದ ಸೀಸನ್ ಎಂದರೆ ತಪ್ಪಾಗಲಾರದು. ಇನ್ನೂ ಕಳೆದ ವಾರ ನಮ್ರತಾ ಎಲಿಮಿನೇಷನ್ ನಡೆದ ನಂತರ ಇದೀಗ ತುಕಾಲಿ ಸಂತು ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

Read More

ಬಿಗ್ ಬಾಸ್ ಸೀಸನ್ 10 ರ ಫಿನಾಲೆ ವೇದಿಕೆಯ ಮೇಲೆ ಸುದೀಪ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಹತ್ತು ಸೀಸನ್‌ನಲ್ಲಿ ಇಷ್ಟು ಸುದ್ದಿ ಮಾಡಿದ ಸೀಸನ್ ಬೇರೆ ಇಲ್ಲ ಎಂದು ಸ್ವತಃ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿದ್ದ ಸಂಗತಿಯನ್ನು ಸುದೀಪ್ ರಿವೀಲ್ ಮಾಡುತ್ತಿದ್ದ ಹಾಗೆಯೇ ಮನೆಯೊಳಗಿನ ಉಳಿದ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ ಮೂಡಿದರೆ, ವರ್ತೂರು ಸಂತೋಷ್ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಹೊರಗೆ ಕೂತಿದ್ದ ವರ್ತೂರು ಸಂತೋಷ್ ಅಮ್ಮನೂ ಸೆರಗಿನಲ್ಲಿ ಕಣ್ಣೀರು ಒರೆಸಿಕೊಂಡರು.‌ ಹುಲಿ ಉಗುರಿನ ಕೇಸ್‌ ಬಗ್ಗೆ ಮಾತನಾಡುತ್ತಿದ್ದಂತೆ ಸಂತೋಷ್‌ ತಾಯಿ ಭಾವುಕರಾದರು. ಡ್ರೋನ್ ಪ್ರತಾಪ್ ತಾಯಿ, ನಮ್ಮ ಮಗನನ್ನು ನಮಗೆ ಕೊಟ್ಟಿದ್ದೀರಾ. ಈ ವೇದಿಕೆಗೆ ಚಿರಋಣಿ ಎಂದು ಭಾವುಕರಾಗಿದ್ದಾರೆ. ಎಲ್ಲರ ಮುಖದಲ್ಲಿಯೂ ಬಿಗ್‌ ಬಾಸ್ ವೇದಿಕೆಯ ಕುರಿತು ಕೃತಜ್ಞತೆಯ ಭಾವ ತುಂಬಿದೆ. ಇನ್ನಷ್ಟು ಪರ್ಫಾರ್ಮೆನ್ಸ್, ಕಲರ್‌ಫುಲ್ ಡಾನ್ಸ್, ಕಚಗುಳಿಯ ಮಾತುಕತೆ ಎಲ್ಲವೂ ತುಂಬಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 10’…

Read More

ದಕ್ಷಿಣ ಕನ್ನಡ :- ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪದಲ್ಲಿ ದೈವ ನರ್ತನ ಮುಗಿಸುತ್ತಿದ್ದಂತೆ ಖ್ಯಾತ ದೈವ ನರ್ತಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜರುಗಿದೆ. ಅಶೋಕ್ ಬಂಗೇರ ಸಾವನ್ನಪ್ಪಿದ ದೈವ ನರ್ತಕ(47). ನಿನ್ನೆ ಹಳೆಯಂಗಡಿ ಸಮೀಪ ರಕ್ತೇಶ್ವರಿ ದೈವ ನೇಮ ಹಮ್ಮಿಕೊಳ್ಳಲಾಗಿತ್ತು. ದೈವ ನರ್ತನದ ವೇಳೆಯೇ ಎದೆನೋವು ಲಘುವಾಗಿ ಕಾಣಿಸಿಕೊಂಡಿದೆ. ಇನ್ನು ಎದೆನೋವು ತೀವ್ರವಾಗಿ ಕಾಣಿಸಿಕೊಂಡಿದ್ದರಿಂದ ದೈವ ನೇಮ ಅರ್ಧಕ್ಕೆ ನಿಲ್ಲಿಸಿದ ಅಶೋಕ ಬಂಗೇರಾ ಅವರು ದೈವ ವೇಷವನ್ನು ತೆಗೆದು ಆಸ್ಪತ್ರೆಗೆ ‌ತೆರಳಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ದೈವ ನರ್ತಕ ಕೊನೆಯುಸಿರೆಳೆದಿದ್ದಾರೆ.

Read More

ಹುಬ್ಬಳ್ಳಿ:- ಧಾರವಾಡ ಲೋಕಸಭೆ ಟಿಕೆಟ್ ವಿಚಾರದಲ್ಲಿ ಯಾವ ಉಹಾಪೋಹ ಇಲ್ಲ. ನಮ್ಮ ನಾಯಕರು ಜೋಶಿ ಅವರೇ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಜೋಶಿ ಅವರೇ ನಮ್ಮ ಲೋಕಸಭೆ ಅಭ್ಯರ್ಥಿ. ಟಿಕೆಟ್ ಅವರಿಗೆ ಸಿಗಲಿದೆ ದೊಡ್ಡ ಅಂತರದಿಂದ ಅವರು ಗೆಲ್ಲಲ್ಲಿದ್ದಾರೆ ಎಂದು ಜೋಶಿ‌ಪರ ಬ್ಯಾಟ್ ಮಾಡಿದರು. ಶೆಟ್ರ ನಿಮ್ಮ ನಾಯಕರ ಅಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ‌ನೀಡಿದ ಅವರು, ನಾನ ಹಾಗೆ ಹೇಳಿಲ್ಲ. ಆದ್ರೆ ನಾನ ಹೇಳೋದ ಪ್ರಲ್ಹಾದ್ ಜೋಶಿ ಬಿಟ್ಟರೆ ಯಾರೂ ಇಲ್ಲ. ನನಗೆ ಶೆಟ್ಟರ್ ಸೇರ್ಪಡೆ ಅಸಮಾಧಾನ ಇಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ. ಶೆಟ್ಟರ್ ಘರವಾಪ್ಸಿ ನಂತರ ಯಾವ ಬಣಗಳು ಆಗೋದಿಲ್ಲ. ಶೆಟ್ಟರ್ ವಾಪಸ್ ಬರೋ ಬಗ್ಗೆ ನಾವ ಯೋಚನೆ ಮಾಡಿರಲಿಲ್ಲ. ಬರ್ತೀದಾರೆ ಅಂತಾ ನಾಯಕರು ಹೇಳಿದ್ರು,ಸ್ವಾಗತ ಮಾಡಿದ್ದೇವೆ ಎಂದರು .

Read More

ಚಾಮರಾಜನಗರ:- ಕನಕ ಜಯಂತಿ ಆಚರಣೆ ವೇಳೆ ಭಾರಿ ಹೈಡ್ರಾಮಾ ನಡೆದ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಜರುಗಿದೆ. ಸಿಎಂ ಪುತ್ರ ಯತೀಂದ್ರ ವೇದಿಕೆ ಮೇಲೆ ಮಾತಾಡುವಾಗ ಯುವಕನೊಬ್ಬ ಬಾಯಿಗೆ ಬಂದಂತೆ ಬೈದು ಬೈಕ್‌‌ನಲ್ಲಿ ಎಸ್ಕೇಪಾಗಿದ್ದಾರೆ. ಕನಕ ಜಯಂತಿ ಆಚರಣೆ ವೇಳೆ ಯತೀಂದ್ರ ಸಿದ್ದರಾಮಯ್ಯ ರಾಮಮಂದಿರದ ಬಗ್ಗೆ ಮಾತನಾಡುತ್ತಿದ್ದರು. ಬಿಜೆಪಿಯವರು ರಾಮನನ್ನ ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ ಅಂತಿದ್ದರು. ಈ ವೇಳೆ ಬುಲೆಟ್‌ಬೈಕ್‌‌‌ನಲ್ಲೇ ಸೀದಾ ಮೈದಾನದೊಳಕ್ಕೆ ಬಂದ ಯುವಕ ರಂಜಿತ್ ಎಂಬಾತ ಯತೀಂದ್ರರನ್ನ ಬಾಯಿಗೆ ಬಂದಂತೆ ಬೈದು ಬೈಕ್‌‌ನಲ್ಲಿ ಎಸ್ಕೇಪ್ ಆಗಿದ್ದ. ಆತ ಯಾರು ಅಂತ ಹುಡುಕೋಷ್ಟರಲ್ಲಿ ಮತ್ತೆ ಅದೇ ಯುವಕ ಬೈಕ್‌‌ನಲ್ಲಿ ಮೈದಾನಕ್ಕೆ ಬಂದಿದ್ದಾನೆ. ಕೂಡಲೇ ಅಲ್ಲಿದ್ದ ಪೊಲೀಸರು ಯುವಕನ್ನು ಹಿಡಿದುಕೊಂಡು ವಶಕ್ಕೆ ಪಡೆದಿದ್ದಾರೆ. ಯುವಕನ್ನ ವಶಕ್ಕೆ ಪಡೆದ ಪೊಲೀಸರು ದರದರನೇ ಎಳೆದೊಯ್ದಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ವಿರುದ್ದ ಅವಾಚ್ಯ ಶಬ್ದದಿಂದ ನಿಂದನೆ ಪ್ರಕರಣ ಸಂಬಂಧ ಸಚಿವ ಭೈರತಿ ಸುರೇಶ್, ನಿಂದನೆ ಮಾಡಿದ ವ್ಯಕ್ತಿಯನ್ನು ಬಂಧಿಸುವಂತೆ ಎಸ್​ಪಿಗೆ ವೇದಿಕೆ ಮೇಲೆಯೇ ಸೂಚನೆ ನೀಡಿದ್ದಾರೆ. ಇದು ಪ್ರಜಾಪ್ರಭುತ್ವ ಅಶ್ಲೀಲ…

Read More

ಚಾಮರಾಜನಗರ:- ಶಿವಮೊಗ್ಗದಲ್ಲಿ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಪರ ಬ್ಯಾಟ್ ಬೀಸಿದ್ದ ಶ್ಯಾಮನೂರು ಶಿವಶಂಕರಪ್ಪ ಹೇಳಿಕೆಗೆ ಮಾಜಿ ಸಚಿವ ಹೆಚ್ ವಿಶ್ವನಾಥ್ ಕೆಂಡಾಮಂಡಲ ಆಗಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಶ್ಯಾಮನೂರು ಶಿವಶಂಕರಪ್ಪ ಯಾವ ಹಿರಿಯ ಮುತ್ಸದ್ದಿಯೂ ಅಲ್ಲ ಜಾತಿವಾದಿ ಮುತ್ಸದ್ದಿಗಳು. ಕಾಂಗ್ರೆಸ್ ಜೀವಂತವಾಗಿದ್ರೆ ಮೊದ್ಲು ಅವನನ್ನ ಪಾರ್ಟಿಯಿಂದ ಸಸ್ಪೆಂಡ್ ಮಾಡ್ಸಿ. ಶ್ಯಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಇಂದ ಟಿಕೆಟ್ ಪಡೆದು ಶಾಸಕರಾಗಿ ಮಗ ಮಂತ್ರಿಯಾಗಿ. ನೀನು ಕಾಂಗ್ರೆಸ್ ನಲ್ಲಿ ಇದ್ದುಕೊಂಡೆ ನೀನು ಕಾಂಗ್ರೆಸ್ ಅಧಿಕಾರ ಅನುಭವಿಸಿಕೊಂಡೆ ಬೇರೆ ಪಾರ್ಟಿಗೆ ಕ್ಯಾನ್ವಸ್ ಮಾಡ್ತಿಯಲ್ಲ ಏನ್ ಹೇಳ್ಬೇಕು ನಿನಗೆ. ನೀನು ದೇಶವಾದಿನೊ ಇಲ್ಲ ಜಾತಿ ವಾದಿನೊ..? ಎಂದು ಪ್ರಶ್ನಿಸಿದರು. ಇನ್ನೂ ನಿಗಮ ಮಂಡಳಿ ವಿಚಾರದಲ್ಲಿ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿ, ಎಂ.ಎಲ್.ಎ ಗಳಿಗೆ ಬೋರ್ಡ್ಸ್ ಎಂಡ್ ಕಾರ್ಪೋರೇಷನ್ ಕೊಡ್ಬೇಡಿ ಅಂತ ವೀರೆಂದ್ರ ಪಾಟೀಲರ ಕಾಲದಲ್ಲೇ ಹೇಳಿದ್ದೆ ನಾನು ಎಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

Read More

ಚಾಮರಾಜನಗರ:- ನಿಗಮ ಮಂಡಳಿ ಹಂಚಿಕೆ ವಿಚಾರದಲ್ಲಿ ಕೆಲ ಶಾಸಕರ ಅಸಮಾಧಾನ ವಿಚಾರವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಾರ್ಟಿ ಸಮುದ್ರ. ದದ್ದಲ್ ಆಗ್ಲಿ ಯಾರೇ ಆಗ್ಲಿ ಸ್ನೇಹಿತರೆ ಕುಳಿತುಕೊಂಡು ಮಾತನಾಡುತ್ತೇವೆ ಎಂದರು. ಇನ್ನೂ ಬಿ.ವೈ ರಾಘವೇಂದ್ರ ಪರ ಶ್ಯಾಮನೂರು ಶಿವಶಂಕರಪ್ಪ ಬ್ಯಾಟ್ ಬೀಸಿದ ವಿಚಾರವಾಗಿ ಮಾತನಾಡಿ, ಇದನ್ನ ಯಾವ ಉದ್ದೇಶ ಇಟ್ಕೊಂಡು ಹೇಳಿದ್ದಾರೊ ಎಲ್ಲಿ ಹೇಳಿದ್ದಾರೊ ನನಿಗೆ ಗೊತ್ತಿಲ್ಲ ಅವರನ್ನೆ ಕೇಳ್ಬೇಕು ಎಂದರು. ಇನ್ನೂ ಲಕ್ಷ್ಮಣ ಸವದಿಗೆ ಬಿಜೆಪಿಯಿಂದ ಒತ್ತಡವಿರುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರು ಈ ರೀತಿ ಹೇಳುತ್ತಲೇ ಬರುತ್ತಿದ್ದಾರೆ. ಸರ್ಕಾರ ಒಂದು ತಿಂಗಳಲ್ಲಿ ಬೀಳುತ್ತೆ ನಾಲ್ಕುತಿಂಗಳಲ್ಲಿ ಬೀಳುತ್ತೆ ಅಂತ ಈಗ 9 ತಿಂಗಳಾಗಿದೆ ಸರ್ಕಾರಕ್ಕೆ ಏನಾದ್ರು ಆಯ್ತ..? ಏನು ಆಗಿಲ್ಲ ಜಗದೀಶ್ ಶೆಟ್ಟರ್ ರವರು ಎಂ ಎಲ್ ಸಿ ಆದ್ರೆ ಎಂಎಲ್ಎ ಹೋಗ್ಬೇಕಲ್ಲಾ ನಾವು ಸರ್ಕಾರ ರಚನೆ ಮಾಡಿರುವುದು ಎಂ ಎಲ್ ಎ…

Read More

ಬೆಳಗಾವಿ:- ಗ್ರಾ. ಪಂ. ಡಾಟಾ ಎಂಟ್ರಿ ಆಪರೇಟರ್ ನಿಂದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದಲ್ಲಿ ಜರುಗಿದೆ. ಡಾಟಾ ಎಂಟ್ರಿ ಆಪರೇಟರ್ ಸಂತೋಷ ಪಾಟೀಲ್ ಅವರು ಶೂ ಧರಿಸಿ ಧ್ವಜ ಕಟ್ಟೆ ಹತ್ತಿ ಧ್ವಜದ ಹಗ್ಗ ಕಟ್ಟಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಟಗುಂದಿ ಗ್ರಾ. ಪಂ ನಲ್ಲಿ ಘಟನೆ ಜರುಗಿದ್ದು, ಸಂತೋಷ ಪಾಟೀಲ್ ವಿರುಧ್ಧ ಸಾರ್ಜನಿಕ ವಲಯದಲ್ಲಿ ತೀವ್ರ ಅಕ್ರೋಶ ವ್ಯಕ್ತವಾಗಿದೆ. ಕೂಡಲೇ ಶಿಸ್ತು ಕ್ರಮ ಜರುಗಿಸಲು ಆಗ್ರಹಿಸಲಾಗಿದೆ. ವರದಿ:- ಬಾಳು ತೇರದಾಳ AIN NEWS ಬೆಳಗಾವಿ

Read More

ಬೆಂಗಳೂರು:- ಕಾಂಗ್ರೆಸ್ ಸರ್ಕಾರ ದಲಿತ ಮತ್ತು ಬಡವರ ವಿರೋಧಿ ಆಗಿದೆ ಎಂದು ಮಾಜಿ ಸಿಎಂ BS ಯಡಿಯೂರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಮಗೆ ಮೋದಿಯೇ ಗ್ಯಾರಂಟಿ. ಹತ್ತು ವರ್ಷದ ಅವಧಿಯಲ್ಲಿ ಕರ್ನಾಟಕಕ್ಕೆ ರೈಲ್ವೆ, ಹೆದ್ದಾರಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಲೋಕಸಭಾ ಸಮರವು ನಮ್ಮೆಲ್ಲರಿಗೆ ಬಹುದೊಡ್ಡ ತಿರುವಿನ ಸತ್ವ ಪರೀಕ್ಷೆಯಾಗಿದೆ. ಈ ಬಾರಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿಯವರಿಗೆ ನಮ್ಮದೇ ಆದ ಕೊಡುಗೆ ನೀಡಬೇಕಿದೆ ಎಂದು ಯಡಿಯೂರಪ್ಪ ಕರೆ ಕೊಟ್ಟರು.

Read More