Author: AIN Author

ಲಾಹೋರ್: ಮನೆಯ ಪೋಷಕರ ನಡುವೆಯೂ ಸಹೋದರಿ ಬೇರೊಬ್ಬ ಯುವಕನನ್ನು ಮದುವೆಯಾಗಿದಕ್ಕೆ ಕುಪಿತಗೊಂಡ ಸಹೋದರ ಹರಿತವಾದ ಚಾಕುವಿನಿಂದ ಆಕೆಯನ್ನು ಹಲವು ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 25 ವರ್ಷದ ಶಾಜಿಯಾ ಸಹೋದರನಿಂದ ಕೊಲೆಯಾದ ದುರ್ದೈವಿ. ಕೆಲವು ದಿನಗಳ ಹಿಂದೆ ಶಾಜಿಯಾ ಶೇರಕೋಟಾ ಪ್ರಾಂತದ ಯುವಕನೊಂದಿಗೆ ಪರಾರಿಯಾಗಿದ್ದರು. ಈ ವೇಳೆ ಶಾಜಿಯಾ ಸಹೋದರ ಮೊಹಮ್ಮದ್ ಇಶಾಖ್ ನನ್ನ ಸಹೋದರಿಯನ್ನು ಯುವಕನೊಬ್ಬ ಅಪಹರಿಸಿದ್ದಾನೆ ಎಂದು ನಾಪತ್ತೆ ಮತ್ತು ಅಪಹರಣ ದೂರನ್ನು ದಾಖಲಿಸಿದ್ದನು. ದೂರು ದಾಖಲಾದ ನಂತರ ಶಾಜಿಯಾ ಯುವಕನೊಂದಿಗೆ ಮದುವೆಯಾಗಿ ಹಿಂದುರುಗಿ ಬಂದಿದ್ದರು. https://ainlivenews.com/rs-3-lakh-loan-for-women-without-interest-how-to-apply-here-is-the-complete-details/ ಶಾಜಿಯಾ ಹಿಂದುರಿಗಿದ ಕಾರಣ ಎರಡು ಕುಟುಂಬಗಳು ರಾಜಿ ಮೂಲಕ ದೂರನ್ನು ಹಿಂಪಡೆದಿದ್ದವು. ಶಾಜಿಯಾ ಮನೆಯಲ್ಲಿದ್ದಾಗ ಸಹೋದರ ಇಶಾಖ್ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿ ಕುಟುಂಬದ ಮರ್ಯಾದೆಯನ್ನು ತೆಗೆದಿದ್ದಿ ಎಂದು ಹೇಳಿ ಹರಿತವಾದ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ. ಶಾಜಿಯಾ ಕೊಲೆಯಾಗುವ ವೇಳೆ ಮನೆಯಲ್ಲಿ ಆಕೆಯ ಪೋಷಕರಿದ್ರು, ಇಶಾಖ್…

Read More

ವಿದೇಶಗಳಲ್ಲಿ ಬಹುತೇಕ ಮಾರುಕಟ್ಟೆಯಲ್ಲಿ ಚಿನ್ನ ದುಬಾರಿಯಾಗಿದ್ದು, ಅಮೆರಿಕದ ಆರ್ಥಿಕತೆ ವೃದ್ಧಿ ಕಂಡ ಪರಿಣಾಮ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವಂತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,050 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,660 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,350 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 28ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,800 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,050 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,800 ರೂ 24 ಕ್ಯಾರಟ್​ನ…

Read More

6 ಫೈನಲಿಸ್ಟ್‌ಗಳ ಜೊತೆ ಎಲಿಮಿನೇಟ್ ಆಗಿರೋ ಸ್ಪರ್ಧಿಗಳು ಕೂಡ ಬಿಗ್ ಬಾಸ್ ವೇದಿಕೆಗೆ ಆಗಮಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ. ಸುದೀಪ್ (Sudeep) ವೇದಿಕೆಗೆ ಬರುತ್ತಿದ್ದಂತೆ ಎಲ್ಲ ಹಳೆಯ ಸ್ಪರ್ಧಿಗಳನ್ನು ಮಾತನಾಡಿಸುತ್ತಾ ಹೇಗಿದ್ದೀರಿ? ಎಂದು ಕೇಳಿದರು. ರಕ್ಷಕ್ ಬಳಿ ಬರುತ್ತಿದ್ದಂತೆ, ಮೊದಲಿಗೆ ನಿಮ್ಮ ಕ್ಷಮೆ ಕೇಳಬೇಕು ನಾನು ಎಂದರು ರಕ್ಷಕ್. ಅದೆಲ್ಲ ಇರಲಿ ಪರವಾಗಿಲ್ಲ, ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ ಎಂದು ಸುದೀಪ್‌ ಪ್ರಶ್ನೆ ಮಾಡಿದ್ದರು ನೀವು ಎದುರಿಗೆ ಇದ್ದೀರಲ್ಲ, ಅದಕ್ಕೆ ಗೌರವ ತುಸು ಹೆಚ್ಚು ಎಂದು ರಕ್ಷಕ್‌ ಮಾತನಾಡಿದ್ದರು. ಇರಲಿ, ನಿಮಗೆ ಯಾರ ಬಗ್ಗೆಯಾದರೂ ಮಾತನಾಡುವ ಅಧಿಕಾರ ಇದೆ. ಮಾತನಾಡಿ, ಸಮಸ್ಯೆಯಿಲ್ಲ. ಕ್ಷಮೆ ಎಲ್ಲ ಕೇಳಬೇಡಿ ಎಂದು ಕಿಚ್ಚ ಸುದೀಪ್‌ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೆ ರಕ್ಷಕ್, ಇಲ್ಲ ಅಣ್ಣ, ನನ್ನ ಉದ್ದೇಶ ಅದಾಗಿರಲಿಲ್ಲ ಎಂದು ಸ್ಪಷ್ಟನೆ ಕೊಡಲು ಪ್ರಯತ್ನಿಸಿದರು. ಆದರೆ ಸುದೀಪ್, ಪರವಾಗಿಲ್ಲ ಬಿಡಿ, ನಿಮ್ಮ ಜೀವನದಲ್ಲಿ ನಿಮಗೆ ಒಳ್ಳೆಯದಾಗಲಿ ಎಂದು ಮುಂದುವರೆದರು. ಬಿಗ್ ಬಾಸ್ ಸೀಸನ್ 10’ರಲ್ಲಿ…

Read More

ಕೆಲವರು ಮಲಗುವಾಗ ಬಾಯಿ ತೆರೆದು ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸ ಮಕ್ಕಳಲ್ಲಿ ಮಾತ್ರವಲ್ಲ, ವಯಸ್ಕರಲ್ಲೂ ಕಾಣಸಿಗುತ್ತದೆ. ಇದು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಕ್ಷೇಮದ ಮೇಲೆ ತೀವ್ರ ಋಣಾತ್ಮಕ ಪರಿಣಾಮ ಬೀರಬಹುದು. ದೀರ್ಘಕಾಲದ ಬಾಯಿ ಉಸಿರಾಟವು ನಿದ್ರಾಹೀನತೆಯ ಪ್ರಾಥಮಿಕ ಲಕ್ಷಣಗಳಲ್ಲಿ ಒಂದಾಗಿದೆ. ಈ ಸ್ಥಿತಿಯು ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ​ಬಾಯಿ ತೆರೆದು ಮಲಗುವುದು ಆರೋಗ್ಯಕ್ಕೆ ಕೆಟ್ಟದೇ?​ ಬಾಯಿ ತೆರೆದು ಮಲಗುವುದು ರೋಗಿಗಳ ಆರೋಗ್ಯಕ್ಕೆ ಕೆಟ್ಟದು. ಇದು ಮೌಖಿಕ ಆರೋಗ್ಯ ಮತ್ತು ಒಟ್ಟಾರೆ ದೈಹಿಕ ಆರೋಗ್ಯ ಎರಡನ್ನೂ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಬಾಯಿಯ ಉಸಿರಾಟದ ಪ್ರತಿಕೂಲ ಪರಿಣಾಮಗಳು ಕುಳಿಗಳಿಂದ ಹಿಡಿದು ಹೃದ್ರೋಗದವರೆಗೆ ಎಲ್ಲದಕ್ಕೂ ಕಾರಣವಾಗಬಹುದು. ರೋಗಿಗಳು ತಮ್ಮ ಬಾಯಿಯ ಮೂಲಕ ಉಸಿರಾಡಿದಾಗ, ಅದು ಬಾಯಿಯಲ್ಲಿ ಲಾಲಾರಸವನ್ನು ಒಣಗಿಸುತ್ತದೆ. ಬಾಯಿಯ ಆರೋಗ್ಯಕ್ಕೆ ಲಾಲಾರಸ ಅತ್ಯಗತ್ಯ. ಇದು ಹಲ್ಲಿನ ಕೊಳೆತವನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುವ ಖನಿಜಗಳನ್ನು ಹೊಂದಿರುತ್ತದೆ ಮತ್ತು ಇದು ಕುಹರವನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು…

Read More

ಗುಜರಾತ್‌: ಗುಜರಾತ್‌ನ ಖೇಡಾದಲ್ಲಿ ಮಹಿಳೆಯೊಬ್ಬರನ್ನು ತನ್ನ ವಯಸ್ಸಾದ ಮಾವನನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ವಿದೇಶಕ್ಕೆ ಹೋಗಲು 2 ಲಕ್ಷ ರೂಪಾಯಿ ನೀಡಲು ನಿರಾಕರಿಸಿದ್ದರಿಂದ ಆಕೆ ಹೀಗೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಆರೋಪಿ ಸೊಸೆ ಆತನ ಖಾಸಗಿ ಅಂಗಗಳನ್ನು ಕತ್ತರಿಸಿ ತಲೆಬುರುಡೆಗೆ ಬಲವಾಗಿ ಹೊಡೆದಿದ್ದಾಳೆ. ಪೊಲೀಸ್ ವಿಚಾರಣೆ ವೇಳೆ, ಸೊಸೆ ಅಪರಾಧವನ್ನು ಒಪ್ಪಿಕೊಂಡಿದ್ದು 75 ವರ್ಷದ ಮಾವ ಆಗಾಗ ತನ್ನೊಂದಿಗೆ ದೈಹಿಕ ಸಂಬಂಧ ನಡೆಸುತ್ತಿದ್ದರು. ಅವರ ಅಕ್ರಮ ಸಂಬಂಧಕ್ಕೆ ಬದಲಾಗಿ ಹಣವನ್ನು ನೀಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ತಾನು ಫೇಸ್‌ಬುಕ್‌ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ ವಿದೇಶಕ್ಕೆ ಹೋಗಲು ಬಯಸಿದ್ದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆರೋಪಿ ಮಾವ ಬಳಿ ಹಣ ಕೇಳಿದ್ದಕ್ಕೆ ಹಣ ಕೊಡಲು ನಿರಾಕರಿಸಿದ್ದ. ಹೀಗಾಗಿ ಕೊಲೆ ಮಾಡಿದ್ದಾಗಿ ಪೊಲೀಸರ ಬಳಿ ಹೇಳಿದ್ದಾಳೆ.  ಸುಮಾರು ಮೂರು ದಿನಗಳಿಂದ ಮೃತರು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಮೊದಲು ಹಿರಿಯ ಮಗ ರಾಜಸ್ಥಾನದಲ್ಲಿರುವ ಅವರ ಸಂಬಂಧಿಕರ…

Read More

ಫಿನಾಲೆ ವೇದಿಕೆಯಲ್ಲಿ ಸುದೀಪ್ ಮಾತನಾಡುವಾಗ ಕಾರ್ತಿಕ್ ಮಹೇಶ್ ವಿನ್ನರ್ ಎನ್ನುವ ಸುಳಿವು ನೀಡಿದ್ರಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಕಾರ್ತಿಕ್ ವಿನ್ನರ್ ಎಂದೇ ಹರಿದಾಡುತ್ತಿದೆ. ಅದಕ್ಕೆ ಪೂರಕವಾಗಿ ಸುದೀಪ್ ಅವರು ಕಾರ್ತಿಕ್ ಮಾತನಾಡುವ ರೀತಿ ನೋಡಿ ವಿನ್ನರ್ ಯಾರು ಎಂದು ಸುಳಿವು ನೀಡಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾರ್ತಿಕ್ ಮಹೇಶ್ ಕೂಡ ದೊಡ್ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ. ವಿನಯ್, ಸಂಗೀತಾರಂತಹ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟು ಆಟವಾಡಿದ್ದಾರೆ. ಇದೀಗ ಕಾರ್ತಿಕ್ ಮಹೇಶ್ ಬಗ್ಗೆ ಹೊರಗಡೆ ಒಳ್ಳೆ ಹೆಸರೂ ಇದೆ. ಜನರ ಕೂಡ ಕಾರ್ತಿಕ್ ವಿನ್ನರ್ ಅಂತಲೇ ಹೇಳುತ್ತಿದ್ದಾರೆ. ಈ ಒಂದು ವಿಚಾರವನ್ನ ಸುದೀಪ್ ಇಲ್ಲಿ ಕಾರ್ತಿಕ್‌ಗೆ ಹೇಳಿದ್ರು. ಆಗ ಕಣ್ಣೀರು ಹಾಕಿದ ಕಾರ್ತಿಕ್ ಧನ್ಯವಾದ ಹೇಳಿದ್ರು. ನನ್ನ ಅಭಿನಯದ ಮೂಲಕವೇ ಎಲ್ಲರಿಗೂ ಉತ್ತರವನ್ನೂ ಕೊಡುತ್ತೇನೆ ಅಂತಲೂ ಕಾರ್ತಿಕ್ ಮಹೇಶ್ ಹೇಳಿದ್ದರು. ಕಾರ್ತಿಕ್ ಮಹೇಶ್ ಅವರೇ ಅಳಬೇಡಿ, ಕೂಲ್ ಆಗಿಯೇ ಇದ್ದು ಬಿಡಿ. ಹೊರಗಡೆ ಬಂದ್ಮೇಲೆ ಜನರು ನಿಮಗೆ ತೋರಿದ…

Read More

ಹಾವೇರಿ:- ಪಕ್ಷದಿಂದ ಹೋಗುವ ಮನಸ್ಸಿರುವವರು ಹೋಗಲಿ, ತಡೆಯಲು ಆಗಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಯಾರು ಹೋಗುತ್ತಾರೋ ಬಿಡುತ್ತಾರೋ ನಮ್ಮ ಕೈಯಲ್ಲಿ ಇಲ್ಲ. ಹೋಗುವ ಮನಸಿದ್ದರೆ ತಡೆಯಲು ಆಗಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈಗ BJPಗೆ ಹೋಗಿದ್ದಾರೆ. ಮುಂದೆ ಯಾರು ಹೋಗುತ್ತಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಎಲ್ಲರು ಇರುತ್ತಾರೆ ಅನ್ನೋ ಆಶಾಭಾವನೆ ಅಷ್ಟೇ ನಮ್ಮದು. ನಮ್ಮದೇ ಪಕ್ಷವಿದೆ, ನಮ್ಮದೇ ಆದ ವೋಟ್ ಬ್ಯಾಂಕ್ ಇದೆ. ನಮ್ಮ ಸ್ವಂತ ಶಕ್ತಿಯಿಂದ ರಾಜ್ಯದಲ್ಲಿ ಗೆದ್ದಿದ್ದೇವೆ. ಅವರಿಂದ ಅಧಿಕಾರಕ್ಕೆ ಬಂತು, ಇವರಿಂದ ಬಂತು ಅಂತ ಹೇಳಲಿಕ್ಕೆ ಆಗಲ್ಲ, ಪಕ್ಷದಿಂದ ಗೆದ್ದಿದ್ದೇವೆ ಅಷ್ಟೇ ಎಂದರು. ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ್ದು, ಬಿಜೆಪಿ ಪಕ್ಷದಿಂದ ಯಾರಾದರು ನಿಲ್ಲಲ್ಲೇ ಬೇಕು ನಿಲ್ಲುವುದು ಬಿಡುವುದು ಅವರ ಪಕ್ಷಕ್ಕೆ ಬಿಟ್ಟಿದ್ದು, ನಮಗೆ ಸಂಬಂಧವಿಲ್ಲದ ವಿಷಯ. ಶೆಟ್ಟರ್ ಸ್ಪರ್ಧೆಯಿಂದ ಬಿಜೆಪಿಗೆ ಲಾಭ, ಲಿಂಗಾಯತ ಮತಗಳು ಭದ್ರ ಎನ್ನುವ ಚರ್ಚೆ ವಿಚಾರ, ಚುನಾವಣೆ ಬಂದಾಗ…

Read More

ಬೆಂಗಳೂರು:- MP ಎಲೆಕ್ಷನ್ ನಲ್ಲಿ ಬಿಜೆಪಿಗೆ 400 ಸೀಟುಗಳು ಸಿಗುವುದು ಖಚಿತ ಎಂದು ಭೂಪೇಂದ್ರ ಯಾದವ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಧ್ವಂಸ ಮಾಡಿ ಬಿಜೆಪಿ ಅಧಿಕಾರಕ್ಕೆ ಏರಬೇಕು ಎಂದರು ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈಗಾಗಲೇ ಕೆಲಸ ಆರಂಭಿಸಿದ್ದಾರೆ ಎಂದ ಕೇಂದ್ರ ಸಚಿವರು, ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್​​ನ ಸುಳ್ಳುಗಳು ಜನರಿಗೆ ಗೊತ್ತಾಯಿತು. ಹಾಗಾಗಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲಾಯಿತು. ಕಾಂಗ್ರೆಸ್​ನ ಗ್ಯಾರಂಟಿಗಳು ವಿಫಲವಾಗಿವೆ ಎಂದರು. ಕಾಂಗ್ರೆಸ್ ಕೇವಲ ಗಾಂಧಿ ಪರಿವಾರ ಹಾಗೂ ಅಲ್ಪಸಂಖ್ಯಾತರಿಗೆ ಸೀಮಿತವಾಗಿ ಅಧಿಕಾರ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನ ಗೆಲ್ಲೋದು ಪಕ್ಕಾ ಎಂದರು.

Read More

ಕೌಲಾಲಂಪುರ: ಸಮುದ್ರದದಲ್ಲಿ ಹಡುಗಗಳಲ್ಲಿ ಜನರು ಜೀವನ ಮಾಡುವುದು ನಿಮಗೆ ಗೊತ್ತೆ ಇದೆ. ಆದರೆ ಮಲೇಷಿಯಾದಲ್ಲಿರುವ ಒಂದು ಬುಡಕಟ್ಟು ಜನಾಂಗದ ಸದಸ್ಯರು ವರ್ಷಪೂರ್ತಿ ಸಮುದ್ರದಲ್ಲಿ ಮೇಲೆ ಮನೆ ಮಾಡುತ್ತಿದ್ದಾರೆ. ಹೌದು, ಮಲೇಷ್ಯಾದ ಬಜೌ ಬುಡಕಟ್ಟು ಸಮುದಾಯದ ಸದಸ್ಯರು ಸಮುದ್ರದ ಮೇಲೆ ಸಣ್ಣ ಮನೆಯನ್ನು ನಿರ್ಮಿಸಿ ತಮ್ಮ ಜೀವನವನ್ನು ಕಳೆಯುತ್ತಾರೆ. ಸಣ್ಣ ಸಮುದಾಯವಾಗಿರುವ ಇವರು ಭೂಮಿಮೇಲೆ ನೆಲೆಸುವುದಿಲ್ಲ. ಬರೀ ನೀರಿನ ಮೇಲೆ ಬುದುಕುವುದು ಇವರ ವಿಶೇಷತೆ. ಸಮುದ್ರದ ಅಂಚಿನಲ್ಲಿ ನೀರಿನೊಳಗೆ ಮನೆಕಟ್ಟಿ ಜೀವನ ನಡೆಸುವ ಸಂಪ್ರದಾಯ ಅನಾದಿಕಾಲದಿಂದ ಬಂದಿದೆ. https://ainlivenews.com/rs-3-lakh-loan-for-women-without-interest-how-to-apply-here-is-the-complete-details/ ನಾಗರಿಕತೆಗಳು ಬೆಳೆದಿದ್ದರೂ ಇನ್ನೂ ಯಾಕೆ ಇಲ್ಲೆ ಇದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ, ನಮ್ಮ ಹಿರಿಯರು ಈ ವ್ಯವಸ್ಥೆಯಲ್ಲಿ ನೆಲೆಸಿದ್ದರು. ನಾವು ಈ ರೀತಿಯ ಮನೆಯಲ್ಲಿ ನೆಲೆಸಿ ಹಿರಿಯರ ಸಂಪ್ರದಾಯವನ್ನು ಮುಂದುವರೆಸುತ್ತಿದ್ದೇವೆ ಎಂದು ಉತ್ತರಿಸುತ್ತಾರೆ. ಮೀನು ಹಿಡಿಯುವ ಇವರು ಮೂಲತಃ ಫಿಲಿಪೈನ್ಸ್ ಮೂಲದವರಾಗಿದ್ದು, ಇನ್ನು ಮಲೇಷ್ಯಾ ಸರ್ಕಾರ ಇವರಿಗೆ ಪೌರತ್ವ ನೀಡಿಲ್ಲ.

Read More

ಅಥಣಿ : ತಾಲೂಕಿನ ಜಂಬಗಿ ಗ್ರಾಮದ ಹೊರ ವಲಯದಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಅಪಘಾತ ಸಂಭವಿಸಿದೆ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಇಂದು ಸಾಯಂಕಾಲ 6 ಗಂಟೆ ಸುಮಾರಿಗೆ ಸಂಬರಗಿ ಗ್ರಾಮದಿಂದ ಅಥಣಿ ಮಾರ್ಗವಾಗಿ ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದೆ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಬಂದಿಲ್ಲ. ಸ್ಥಳಕ್ಕೆ ಆಗಮಿಸಿದ 108 ಅಂಬುಲೆನ್ಸ್ ಸಿಬ್ಬಂದಿಗಳು ಅಪಘಾತಕ್ಕಿಡಾದ ವ್ಯಕ್ತಿಯನ್ನ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Read More