Author: AIN Author

ಮೈಸೂರು: ನಾಪತ್ತೆಯಾಗಿದ್ದ ಮಹಿಳೆ ಶವವು 13 ತಿಂಗಳ ಬಳಿಕ ಪತ್ತೆಯಾಗಿದ್ದು, ಮಗಳೇ ತಾಯಿಯನ್ನು ಕೊಂದು ಸ್ಮಶಾನದಲ್ಲಿ ಹೂತು ಹಾಕಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಮಗಳು ಮತ್ತು ಅಳಿಯನನ್ನು ಮೈಸೂರು ತಾಲೂಕಿನ ವರುಣ ಠಾಣೆಯ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಂಡ್ಯ ಜಿಲ್ಲೆ ಮತ್ತು ತಾಲೂಕು ಹೆಬ್ಬಕವಾಡಿ ಗ್ರಾಮದ ಲೇಟ್ ದೇವರಾಜಾಚಾರಿ ಎಂಬವರ ಪತ್ನಿ ಶಾರದಮ್ಮ(45) ತನ್ನ ಮಗಳಿಂದ ಹತ್ಯೆಯಾದವರು. ಇವರನ್ನು ಪುತ್ರಿ ಅನುಷಾ ಮತ್ತು ಆಕೆಯ ಪತಿ ದೇವರಾಜು ಸೇರಿ ಕೊಲೆ ಮಾಡಿ, ಸ್ಮಶಾನದಲ್ಲಿ ಹೂತು ಹಾಕಿದ್ದು, ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಶಾರದಮ್ಮ ಪತಿ ನಿಧನದ ಬಳಿಕ ಹೆಬ್ಬಕವಾಡಿಯಲ್ಲಿ ಒಂಟಿಯಾಗಿ ವಾಸುತ್ತಿದ್ದು, ಇತ್ತೀಚೆಗೆ ಕಣ್ಣಿನ ತೊಂದರೆಯಿಂದ ನರಳುತ್ತಿದ್ದರು. ಈ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಂತೆ ಪುತ್ರಿ ಅನುಷಾಗೆ ಹೇಳಿದ್ದಾರೆ. ಆದರೆ, ಹಣದ ತೊಂದರೆಯಿಂದ ಚಿಕಿತ್ಸೆ ಕೊಡಿಸಲು ಅನುಷಾ ವಿಳಂಬ ಮಾಡಿದ್ದಾರೆ. 2022ರ ನಂವಬರ್ ನಲ್ಲಿ ತಾಯಿಗೆ ಕಣ್ಣಿನ ಚಿಕಿತ್ಸೆ ಕೊಡಿಸಿ ಹೆಬ್ಬಕವಾಡಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿ…

Read More

ಅಲೋವೆರಾವನ್ನು ಮಹಿಳೆಯರು ಹೆಚ್ಚಾಗಿ ತ್ವಚೆ ಹಾಗೂ ಕೂದಲಿನ ಸೌಂದರ್ಯ ಕಾಪಾಡಲು ಬಳಸುತ್ತಾರೆ. ಅನಾದಿ ಕಾಲದಿಂದಲೂ ಈ ಅಲೋವೆರಾವನ್ನು ಔಷಧಿಯಾಗಿ ಬಳಕೆ ಮಾಡಲಾಗುತ್ತಿದೆ. ಈ ಅಲೋವೆರಾದಲ್ಲಿ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಅಲೋವೆರಾದಲ್ಲಿ ವಿಟಮಿನ್ ಎ, ಸಿ, ಇ ಮತ್ತು ಬಿ ಕಾಂಪ್ಲೆಕ್ಸ್ ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಸತು ಮತ್ತು ಅಮೈನೋ ಆಮ್ಲಗಳು ಹೇರಳವಾಗಿದ್ದು, ದೇಹ, ತ್ವಚೆ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಲೋವೆರಾ ಜ್ಯೂಸ್ ಸೇವನೆ ಮಾಡುವುದರಿಂದ ಆರೋಗ್ಯ ಲಾಭಗಳು ಅಧಿಕವಾಗಿದೆ. ಅಲೋವೆರಾ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳು * ತೂಕ ನಷ್ಟಕ್ಕೆ ಸಹಕಾರಿ: ಅಲೋವೆರಾ ಆಹಾರವನ್ನು ಜೀರ್ಣವಾಗುವಂತೆ ಮಾಡಿ ಕೊಬ್ಬನ್ನು ಶೇಖರಿಸುವುದನ್ನು ತಪ್ಪಿಸುತ್ತದೆ. ಈ ಮೂಲಕ ತೂಕ ನಷ್ಟಕ್ಕೂ ಸಹಕಾರಿಯಾಗಿದೆ. * ಜೀರ್ಣ ಕ್ರಿಯೆಯ ಸುಧಾರಣೆಗೆ ಸಹಾಯಕ : ಈ ಅಲೋವೆರಾ ಅಥವಾ ಲೋಳೆಸರದಲ್ಲಿನ ಕಿಣ್ವಗಳು ಹಾಗೂ ನಾರುಗಳು ಜೀರ್ಣಕ್ರಿಯೆ ಪ್ರಕ್ರಿಯೆ ಸುಧಾರಿಸುತ್ತದೆ. ಹೊಟ್ಟೆಯನ್ನು ಹೊಟ್ಟೆಯನ್ನು ಸ್ವಚ್ಛಗೊಳಿಸಿ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಯನ್ನು ದೂರ ಮಾಡುತ್ತದೆ. *…

Read More

ಹುಬ್ಬಳ್ಳಿ:- ಮೋದಿಗೆ ಮತ ಹಾಕಿದರೆ ಮಾತ್ರ ದೇಶ ಅಭಿವೃದ್ಧಿ ಆಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೋದಿಯವರ ಆಡಳಿತದಲ್ಲಿ ದೇಶ ಬಲಿಷ್ಠವಾಗಿದೆ. ಒಂದು ಕಾಲದಲ್ಲಿ ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ಆದರೆ ಇಂದು ಭಯೋತ್ಪಾದಕರನ್ನು ಹುಡುಕಿ ಹೊಡೆಯುವ ಕೆಲಸವಾಗಿದೆ. ದೇಶದಲ್ಲಿ ಶಾಂತಿ ಇರುವ ಕಾರಣಕ್ಕೆ ರಾಮಮಂದಿರ ನಿರ್ಮಾಣವಾಗಿದೆ. ಭಾರತ ದೇಶವನ್ನು ಬಲಿಷ್ಠ ಮಾಡಲು ನಾವು ಸಂಕಲ್ಪ ಮಾಡಬೇಕು. ಮೋದಿಗೆ ಮತ ಹಾಕಿದರೆ ಮಾತ್ರ ದೇಶ ನಂಬರ್ ಒನ್ ಆಗಲಿದೆ. ತೀಸ್ರೀ ಬಾರ್ ಮೋದಿ ಸರ್ಕಾರ ಬರಬೇಕು. ನೀವೇ ಜನತಾ ಜನಾರ್ದನ, ಶ್ರೀಮನ್ನಾರಾಯಣ, ಪಾಂಡುರಂಗ ಎನ್ನುವ ಮೂಲಕ ಹುಬ್ಬಳ್ಳಿಯಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ನೆರೆದಿದ್ದವರನ್ನು ಜೋಶಿ ಹಾಡಿಹೊಗಳಿದರು.

Read More

ಮುಂಬೈ: 38 ವರ್ಷದ ಕಾಮುಕನೋರ್ವ 68 ವರ್ಷದ ವೃದ್ಧೆಯ ಮೇಲೆ ಆಕೆಯ ಮನೆಯಲ್ಲೇ ಅತ್ಯಾಚಾರವೆಸಗಿ ಆಕೆಯ ಮೇಲೆ ಅಮಾನುಷ ಹಲ್ಲೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು 38 ವರ್ಷದ ಕಾಮುಕನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಈ ಹಿಂದೆಯೂ ಲೈಂಗಿಕ ಕಿರುಕುಳವೆಸಗಿದ ಪ್ರಕರಣ ದಾಖಲಾಗಿತ್ತು. ಈಗ ಮತ್ತದೇ ಕೃತ್ಯ ಪುನರಾವರ್ತನೆಯಾಗಿದ್ದು, ಆರೋಪಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.  ಮುಂಬೈನ ಪೂರ್ವ ಉಪನಗರದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭವೊಂದರ ಹೊರಗೆ ಈ 68 ವರ್ಷದ  ಮಹಿಳೆ ಸರಕುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಈ ಧಾರ್ಮಿಕ ಸಮಾರಂಭಕ್ಕೆ ಆರೋಪಿಯೂ ಹೋಗಿದ್ದು, ಈ ವೇಳೆ ಮಹಿಳೆಯ ಜೊತೆ ಚೆನ್ನಾಗಿಯೇ ಮಾತನಾಡಿ ನಂಬಿಕೆ ಕುದುರಿಸಿದ ಆರೋಪಿ ಆಕೆಯನ್ನು ಮನೆಗೆ ಡ್ರಾಪ್ ಮಾಡುವುದಾಗಿ ಮಲವೊಲಿಸಿದ್ದ. ಹೀಗೆ ಆಕೆಯನ್ನು ಮನೆಗೆ ತಲುಪಿಸುವ ದಾರಿ ಮಧ್ಯೆ ಅವರು ರಾತ್ರಿಯ ಊಟಕ್ಕೆ ಆಹಾರವನ್ನು ಕೂಡ ಪ್ಯಾಕ್ ಮಾಡಿ ತೆಗೆದುಕೊಂಡು ಹೋಗಿದ್ದರು.  ನಂತರ ಆಕೆಯ ಮನೆ ತಲುಪಿ ಊಟ ಮಾಡಿದ ನಂತರ ಆರೋಪಿ…

Read More

ಕಲಬುರಗಿ:  ಫ್ಲೈಟ್ ನೆಟ್ವರ್ಕ್ ಸೈಟ್‍ನಲ್ಲಿ ವರ್ಕ್ ಫ್ರಮ್ ಹೋಮ್ ರಿಮೋಟ್ ಬೇಸ್ಡ್ ಜಾಬ್ ಇದ್ದು, ಫ್ಲೈಟ್ ಸೀಟ್ ಟಿಕೆಟ್ ಬುಕಿಂಗ್ ಸೈಟ್ ಮೂಲಕ ಟಿಕೆಟ್ ಬುಕಿಂಗ್ ಮಾಡಿ ಪ್ರತಿದಿನ 7 ಸಾವಿರ ರು. ಗಳಿಸಬಹುದು ಎಂದು ನಂಬಿಸಿ ಮಹಿಳೆಯೊಬ್ಬರಿಗೆ 89,12,395 ರು. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಮಹಾತ್ಮ ಬಸವೇಶ್ವರ ಕಾಲೋನಿಯ ಪ್ರತಿಮಾ ಅಲಿಯಾಸ್ ಪ್ರೀತಿ ಗಿರೀಶ್ ಅಣಕಲ್ ಎಂಬುವವರೆ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ. ಬಿಬಿಎಂ ಮುಗಿಸಿರುವ ಪ್ರತಿಮಾ ಅವರು ಮನೆಯಲ್ಲೇ ಕುಳಿತು ಆನ್‍ಲೈನ್‌ ಜಾಬ್ ಮಾಡಲು ಸಾಮಾಜಿ ಜಾಲತಾಣಗಳಲ್ಲಿ ವರ್ಕ್ ಫ್ರಮ್ ಜಾಬ್‍ಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅವರ ಮೊಬೈಲ್‍ಗೆ ನಿಖಿತಾ ಬನ್ಸಾಲ್ ಎಂಬುವವರಿಂದ ಮೆಸೇಜ್ ಬಂದಿದೆ. ಫ್ಲೈಟ್ ನೆಟ್ವರ್ಕ್ ಸೈಟ್‍ನಲ್ಲಿ ಸೀಟ್ ಬುಕಿಂಗ್ ಮಾಡಿದರೆ ಪ್ರತಿದಿನ 7 ಸಾವಿರ ರು.ಗಳಿಸಬಹುದು, ಇದನ್ನು ಪ್ರಾರಂಭಿಸಲು 10,848 ರು. ಜಮಾ ಮಾಡಿ ಎಂದು ಹೇಳಿದ್ದಾರೆ. ಆಗ ಪ್ರತಿಮಾ ಅವರು ಬ್ಯಾಂಕಿನಿಂದ ಹಣ ಜಮಾ ಮಾಡಿದ್ದಾರೆ.…

Read More

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ವಾಂತಿ ಕಾಣಿಸಿಕೊಂಡರೆ ಭಯಪಡುವ ಅಗತ್ಯವಿಲ್ಲ, ಇದು ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದ ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಇದನ್ನು ಮನೆಮದ್ದುಗಳಿಂದ ಗುಣಪಡಿಸಬಹುದು ವಾಂತಿಗೆ ಕಾರಣ ಏನಿರಬಹುದು? ನಿಮ್ಮ ಹೊಟ್ಟೆಯಲ್ಲಿ ಅವಳಿ ಮಕ್ಕಳಿದ್ದರೆ, ನೀವು ವಾಂತಿ ಮಾಡುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದಲ್ಲದೆ, ಮಹಿಳೆಯರಲ್ಲಿ ಹೆಚ್ಚಿದ ಈಸ್ಟ್ರೊಜೆನ್ ಹಾರ್ಮೋನುಗಳು ವಾಕರಿಕೆಗೆ ಕಾರಣವಾಗಬಹುದು. ಇದರ ಜೊತೆಗೆ, ಮೈಗ್ರೇನ್ ಅಥವಾ ತಲೆನೋವು ಸಂಭವಿಸಬಹುದು. ಕಿತ್ತಳೆ ಸೇವಿಸಿ: ಕಿತ್ತಳೆಯಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲ ಸಮೃದ್ಧವಾಗಿದೆ. ಇದರ ತೊಗಟೆಯ ಪರಿಮಳವು ವಾಕರಿಕೆಯನ್ನು ನಿವಾರಿಸುತ್ತದೆ. ನೀವು ಬಯಸಿದರೆ, ನೀವು ಕಿತ್ತಳೆ ರಸವನ್ನು ಕುಡಿಯಬಹುದು ಅಥವಾ ನೀವು ಅದರ ಸಿಪ್ಪೆಯ ಪುಡಿಯನ್ನು ತಿನ್ನಬಹುದು ಶುಂಠಿ ಚಹಾ: ಚಹಾದಲ್ಲಿರುವ ಶುಂಠಿಯ ಪ್ರಮಾಣವು ವಾಂತಿಯನ್ನು ನಿಲ್ಲಿಸಲು ಕೆಲಸ ಮಾಡುತ್ತದೆ, ಆದರೆ ಆಮ್ಲೀಯತೆಯನ್ನು ಸರಿಪಡಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಹೆಚ್ಚು ನೀರು ಕುಡಿಯಿರಿ: ಗರ್ಭಾವಸ್ಥೆಯಲ್ಲಿ ನಿರ್ಜಲೀಕರಣಗೊಳ್ಳುವುದನ್ನು ತಡೆಯಿರಿ. ಗರ್ಭಾವಸ್ಥೆಯಲ್ಲಿ ನೀವು ವಾಂತಿ ಅನುಭವಿಸುತ್ತಿದ್ದರೆ,…

Read More

ಬೆಂಗಳೂರು:- ರಾಮಭಕ್ತರನ್ನು ಅಯೋಧ್ಯೆಗೆ ಕಳುಹಿಸಿಕೊಡಲು ನಿಶ್ಚಯಿಸಲಾಗಿದೆ ಎಂದು ಅಶ್ವಥ್‌ ನಾರಾಯಣ್‌ ತಿಳಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅಯೋಧ್ಯೆಗೆ ರಾಮಭಕ್ತರನ್ನು ಕಳಿಸಿಕೊಡಲು ಈಗಾಗಲೇ ನಿಶ್ಚಯಿಸಲಾಗಿದೆ. ಪ್ರತೀ ಮಂಡಲ, ಜಿಲ್ಲೆಗಳಲ್ಲಿ ರಾಮಭಕ್ತರನ್ನು ಅಯೋಧ್ಯೆಗೆ ಕಳಿಸಿಕೊಡಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ. ಫೆ.3, 4, 5 ರಂದು ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ಮಾಡಲು ನಿಶ್ಚಯಿಸಲಾಗಿದೆ. ಕೇಂದ್ರ ಸರ್ಕಾರದಿಂದ ಬಂದಿರುವ, ಕೇಂದ್ರದ ಯೋಜನೆಗಳ ಫಲಾನುಭವಿಗಳಾಗಿರುವ ಮಹಿಳಾ ಸಂಘಗಳು, ಸ್ವಸಹಾಯ ಸಂಘಗಳ ನಾರಿ ವಂದನ ಹೆಸರಲ್ಲಿ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ಮತ್ತೊಮ್ಮೆ ಮೋದಿ ಎಂದು ಬೂತ್‌ಗಳಲ್ಲಿ ಗೋಡೆ ಬರಹ ಬರೆಯಲು ನಿರ್ಧರಿಸಲಾಗಿದೆ. ಜ.30 ರಂದು ಜಿಲ್ಲಾ, ಮಂಡಲ, ಬೂತ್ ಪದಾಧಿಕಾರಿಗಳು ಆಂದೋಲನದ ಮಾದರಿಯಲ್ಲಿ ಪ್ರತೀ ಬೂತ್‌ಗಳಲ್ಲೂ ಗೋಡೆ ಬರಹ ಆಂದೋಲನ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಗ್ರಾಮ್ ಚಲೋ‌ ಕಾರ್ಯಕ್ರಮವೂ ನಿಶ್ಚಯ ಆಗಿದೆ. ಎಲ್ಲ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್ ವೈಫಲ್ಯಗಳು, ಕೇಂದ್ರದ ಸಾಧನೆಗಳ ಪ್ರಚಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರೇ…

Read More

ಬಿಗ್ ಬಾಸ್ ಮನೆಯಲ್ಲಿ 6 ಫೈನಲಿಸ್ಟ್​ಗಳ ಪೈಕಿ ತುಕಾಲಿ ಸಂತೋಷ್​ ಅವರು ಔಟ್​ ಆಗಿದ್ದಾರೆ. ಅವರು ಎಮಿಲಿನೇಟ್​ ಆಗಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ‘ನಿಮ್ಮ ಬಿಗ್​ ಬಾಸ್​ ಪಯಣ ಇಲ್ಲಿಗೆ ಅಂತ್ಯ’ ಎಂದು ಹೇಳಿದಾಗ ತುಕಾಲಿ ಸಂತೋಷ್​ ಅವರು ಹೆಚ್ಚೇನೋ ಬೇಸರ ಮಾಡಿಕೊಳ್ಳಲಿಲ್ಲ. ನಗುನಗುತ್ತಲೇ ಅವರು ದೊಡ್ಮನೆ ತೊರೆದಿದ್ದಾರೆ. ಅಷ್ಟಕ್ಕೂ ಈ ಜರ್ನಿಯಲ್ಲಿ ಅವರು ಮಾಡಿದ ತಪ್ಪು ಏನು? ಫಿನಾಲೆ ತನಕ ಬಂದವರು ಟ್ರೋಫಿ ಗೆಲ್ಲಲು ಯಾಕೆ ಸಾಧ್ಯವಾಗಲಿಲ್ಲ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.. ತುಕಾಲಿ ಸಂತೋಷ್​ ಅವರಿಗೂ ಬಿಗ್​ ಬಾಸ್​ ಟ್ರೋಫಿ ಗೆಲ್ಲುವ ಸಾಮರ್ಥ್ಯ ಇತ್ತು. ಆದರೆ ಅವರು ಸರಿಯಾಗಿ ಬಳಕೆ ಮಾಡಿಕೊಳ್ಳಲಿಲ್ಲ ಎನ್ನಬಹುದು. ಬಿಗ್​ ಬಾಸ್​ಗೆ ಶೋಗೆ ಬರುವುದಕ್ಕೂ ಮೊದಲು ಕಿರುತೆರೆಯ ಕಾಮಿಡಿ ಶೋಗಳ ಮೂಲಕ ಜನರಿಗೆ ಅವರ ಪರಿಚಯ ಆಗಿತ್ತು. ತಮ್ಮ ಶಕ್ತಿಯೇ ಕಾಮಿಡಿ ಎಂಬುದನ್ನು ಸಂತೋಷ್​ ಅವರು ಹೆಚ್ಚು ಅರ್ಥ ಮಾಡಿಕೊಳ್ಳಲಿಲ್ಲ. ಆಗೊಮ್ಮೆ ಈಗೊಮ್ಮೆ ಮಾತ್ರ ನಗಿಸುತ್ತಿದ್ದರು. ಉಳಿದ ಸಮಯದಲ್ಲಿ ಸುಮ್ಮನಿರುತ್ತಿದ್ದರು. ಅವರಿಗೆ ಕಡಿಮೆ…

Read More

ದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಆದ ಬಳಿಕ ಇದರ ನೆನಪಿಗಾಗಿ  ಪ್ರಧಾನಿ ನರೇಂದ್ರ ಮೋದಿ ಅವರು ಸೂರ್ಯೋದಯ ಯೋಜನೆಯನ್ನು ಘೋಷಿಸಿದ್ದಾರೆ. ನಮ್ಮ ಸರ್ಕಾರವು 1 ಕೋಟಿ ಮನೆಗಳಿಗೆ ಮೇಲ್ಛಾವಣಿಯ ಸೋಲಾರ್ ಅನ್ನು ಸ್ಥಾಪಿಸುವ ಗುರಿಯೊಂದಿಗೆ “ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ” ಅನ್ನು ಪ್ರಾರಂಭಿಸುತ್ತದೆ. ಇದು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದಲ್ಲದೆ, ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಮೋದಿ ಹೇಳಿದ್ದಾರೆ. ಈ ಯೋಜನೆಯು ಬಡವರು ಮತ್ತು ಮಧ್ಯಮ ವರ್ಗದ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೆ, ಭಾರತದ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ಗುರಿಯನ್ನು ಹೊಂದಿದೆ. ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ವಾರ್ಷಿಕ ಆದಾಯ 1 ಅಥವಾ 1.5 ಲಕ್ಷ ರೂ.ಗಳನ್ನು ಮೀರಬಾರದು. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಿಖರವಾಗಿ ಸಲ್ಲಿಸಬೇಕು ಅಥವಾ ಅಪ್ಲೋಡ್ ಮಾಡಬೇಕು. ಅರ್ಜಿದಾರರು ಯಾವುದೇ ಸರ್ಕಾರಿ ಸೇವೆಯೊಂದಿಗೆ…

Read More

ಬೆಂಗಳೂರು:- ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ಕ್ರೌರ್ಯ ಮೆರೆದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಇನ್ನೂ ನಾಯಿ ಮೇಲೆ ಕಾರು ಹತ್ತಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಾರ್ಕಿಂಗ್ ಜಾಗದಲ್ಲಿ ನಾಯಿ ಮಲಗಿತ್ತು. ಈ ವೇಳೆ ನಾಯಿಯ ಮೇಲೆ ಕಾರಿನ ಮುಂದಿನ ಟಯರ್ ಹರಿದಿದೆ. ನಾಯಿಯ ಮೇಲೆ‌‌ ಕಾರು ಹೋಗಿದೆ ಅಂತ ಗೊತ್ತಿದ್ದರು ಸಹ ವಾಹನವನ್ನು ಚಾಲಕ ಚಲಾಯಿಸಿದ‌್ದಾನೆ. ಮಿಷನ್ ರೋಡ್ ನಲ್ಲಿ ಇದೇ ತಿಂಗಳ 25 ನೇ ತಾರೀಖಿನಂದು ನಡೆದಿರುವ ಘಟನೆ ಇದಾಗಿದ್ದು, ಕಾರು ಹತ್ತಿ ಸ್ವಲ್ಪ ಸಮಯದಲ್ಲೇ ನಾಯಿ ಸಾವನ್ನಪ್ಪಿದೆ. ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

Read More