Author: AIN Author

ಚಾಂಪಿಯನ್ ಟ್ರೋಫಿಯಲ್ಲಿ ಭಾನುವಾರ ಪಾಕಿಸ್ತಾನ್ ಹಾಗೂ ಭಾರತ ಮುಖಾಮುಖಿಯಾಗಿದ್ದವು. ಇದರಲ್ಲಿ ಭಾರತ ಬದ್ಧ ವೈರಿ ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. https://ainlivenews.com/dont-ignore-drooling-while-sleeping-this-is-a-sign-of-this-disease/ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಅವರು, ವಿಶ್ವ ದಾಖಲೆ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಹೊಡಿಬಡಿ ಆಟದ ಮೂಲಕ ಪಾಕ್ ಬೌಲರ್​ಗಳ ಬೆವರಿಳಿಸಿದರು. ಆದರೆ 20 ರನ್​ಗಳಿಗೆ ರೋಹಿತ್ ಇನ್ನಿಂಗ್ಸ್ ಅಂತ್ಯಗೊಂಡಿತು. ಆದಾಗ್ಯೂ ತಮ್ಮ ಅಲ್ಪ ಇನ್ನಿಂಗ್ಸ್​ನಲ್ಲೂ ಏಕದಿನದಲ್ಲಿ ರೋಹಿತ್ ಶರ್ಮಾ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. 2013 ರಲ್ಲಿ ಸಾಮಾನ್ಯ ಆರಂಭಿಕ ಆಟಗಾರನಾಗಿ ಆಡಲು ಪ್ರಾರಂಭಿಸಿದ ರೋಹಿತ್, ಅಂದಿನಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದರ ನಂತರ ಒಂದರಂತೆ ಅನೇಕ ದೊಡ್ಡ ದಾಖಲೆಗಳನ್ನು ಮಾಡಿದ್ದಾರೆ. ಇದೀಗ ವಿಶೇಷ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಖಾತೆ ತೆರೆದ ತಕ್ಷಣ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ 9000 ರನ್‌ಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದರು.…

Read More

ಏಕದಿನ ಕ್ರಿಕೆಟ್​​ನಲ್ಲಿ ವಿರಾಟ್​ ಕೊಹ್ಲಿ ಅವರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ತಾನು ಆಡಿರೋ 287 ಏಕದಿನ ಇನ್ನಿಂಗ್ಸ್​ನಲ್ಲಿ 14 ಸಾವಿರ ರನ್​​ ಪೂರೈಸಿದ್ದಾರೆ. ಪಾಕ್​​ ವಿರುದ್ಧದ ಏಕದಿನ ಪಂದ್ಯದಲ್ಲೇ ಕೊಹ್ಲಿ ಈ ದಾಖಲೆ ಸೃಷ್ಟಿಸಿದ್ದಾರೆ. https://ainlivenews.com/a-terrible-accident-in-mangalore-car-plowed-into-pedestrians-one-dead/ ಪ್ರಸ್ತುತ ಕಾಲದ ಅತ್ಯುತ್ತಮ ಏಕದಿನ ಬ್ಯಾಟರ್‌ಗಳಲ್ಲಿ ವಿರಾಟ್ ಕೊಹ್ಲಿ ಒಬ್ಬರು. ಇವರು ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾ ಮಾಜಿ ಕ್ಯಾಪ್ಟನ್​ ಕುಮಾರ್ ಸಂಗಕ್ಕಾರ ಅವರಿಂದ ಸಾಧ್ಯವಾಗದ ಸಾಧನೆಯನ್ನು ಮಾಡಿದ್ದಾರೆ. ಕಿಂಗ್ ವಿರಾಟ್ ಕೊಹ್ಲಿ ಅವರು, ಚಾಂಪಿಯನ್ ಟ್ರೋಫಿಯಲ್ಲಿ ಎರಡು ವಿಶೇಷ ದಾಖಲೆ ಬರೆದಿದ್ದಾರೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 158 ಕ್ಯಾಚ್‌ಗಳನ್ನು ಪಡೆಯುವ ಮೂಲಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್ ದಾಖಲೆ ಬರೆದರು 47ನೇ ಓವರ್‌ನಲ್ಲಿ ಕುಲದೀಪ್ ಯಾದವ್ ಅವರ ಬೌಲಿಂಗ್ ನಲ್ಲಿ ನಸೀಮ್ ಶಾ ಅವರ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.…

Read More

ಚಿಕ್ಕಬಳ್ಳಾಪುರ:- ಗೌರಿಬಿದನೂರು ತಾಲೂಕಿನ ಹಾಲಗಾನಹಳ್ಳಿಯಲ್ಲಿ ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಜರುಗಿದೆ. ಅಲ್ಲದೇ ಘಟನೆಯಲ್ಲಿ ತಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. https://ainlivenews.com/dont-ignore-drooling-while-sleeping-this-is-a-sign-of-this-disease/ ಮೃತ ಮಗುವನ್ನು ಪೃಥ್ವಿರಾಜ್ ಎಂದು ಗುರುತಿಸಲಾಗಿದೆ. ಗರ್ಭಿಣಿ ತಾಯಿ ಮೋನಿಕಾ ಕಾಲಿಗೆ ಗಂಭೀರ ಗಾಯಗಳಾಗಿವೆ. ಗರ್ಭಿಣಿ ಮೋನಿಕಾ 15 ದಿನಗಳ ಹಿಂದೆ ಹೆರಿಗೆಗಾಗಿ ತವರು ಮನೆ ಹಾಲಗಾನಹಳ್ಳಿಗೆ ಬಂದಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ. ಭಾನುವಾರ ಮನೆಯ ಮುಂದೆ ಇದ್ದ ತೆಂಗಿನ ಮರ ಮುರಿದು ಬಿದ್ದಿದೆ. ಪರಿಣಾಮ ಮಗು ಸಾವನ್ನಪ್ಪಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಮಂಗಳೂರು:- ಮಂಗಳೂರಿನ ಹೊರವಲಯದ ಕುಳಾಯಿ ಎಂಬಲ್ಲಿ ಭಾನುವಾರ ಅಪಘಾತ ಸಂಭವಿಸಿದೆ. ಸಿನಿಮೀಯ ಶೈಲಿಯಲ್ಲಿ ಮೂವರು ಪಾದಚಾರಿಗಳ ಮೇಲೆ ಕಾರು ಹರಿದ ಪರಿಣಾಮ ಓರ್ವ ಸಾವನ್ನಪ್ಪಿದ್ದಾರೆ. https://ainlivenews.com/pm-modi-praises-karnatakas-tiger-disguise-in-mann-ki-baat/ 50 ವರ್ಷದ ದೀಪುಗೌಡ ಮೃತ ವ್ಯಕ್ತಿ. ಗಾಯಗೊಂಡಿರುವ ಕೊಪ್ಪಳದ ಕರಟಗಿಯ ಪ್ರದೀಪ್ ಕೊಲ್ಕಾರ್, ಮಂಗಳೂರಿನ ಕೋಡಿಕೆರೆ ನಿವಾಸಿ ನಾಗರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಳಾಯಿಯ ಶಂಕರ ಭವನ ಹೋಟೆಲ್‌ನಿಂದ ಹೊರಬಂದು 66ನೇ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದರು. ಈ ವೇಳೆ ಉಡುಪಿ ಕಡೆಯಿಂದ ಬಂದ ಕೆಎ-19-ಎಎ-0746 ನಂಬರ್‌ನ ಪಿಕಪ್ ವಾಹನ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಮುಂದೆ ತಳ್ಳಲ್ಪಟ್ಟು, ರಸ್ತೆ ದಾಟುತ್ತಿದ್ದ ಮೂವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಮೂವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮಾರ್ಗ ಮಧ್ಯೆ ಓರ್ವ ಸಾವನ್ನಪ್ಪಿದ್ದಾನೆ. ಇನ್ನುಳಿದ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಬೆಂಗಳೂರು:- ತೃಪ್ತಿ ಅನ್ನೋದು ಅಧಿಕಾರದಲ್ಲಿ ಇರಲ್ಲ ಎಂದು ಟಿ.ಬಿ ಜಯಚಂದ್ರ ಹೇಳಿದ್ದಾರೆ. https://ainlivenews.com/a-terrible-accident-in-mangalore-car-plowed-into-pedestrians-one-dead/ ಈ ಸಂಬಂಧ ಮಾತನಾಡಿದ ಅವರು, ಸಚಿವ ಸಂಪುಟ ಪುನರ್‌ರಚನೆ ಆಗಬೇಕಾ? ಬೇಡ್ವಾ? ಎಂಬುದನ್ನು ವರಿಷ್ಠರು ತೀರ್ಮಾನ ಮಾಡ್ತಾರೆ. ಮಲ್ಲಿಕಾರ್ಜುನ ಖರ್ಗೆಯವರು ಸುದೀರ್ಘ ರಾಜಕಾರಣ ಮಾಡಿಕೊಂಡು ಬರ್ತಿದ್ದಾರೆ. ಅವರು ಇಡುತ್ತಿರೋ‌ ಹೆಜ್ಜೆ ಏನು ಅನ್ನೋದು ಗೊತ್ತಿಲ್ಲ. ನಾನು ಅವರನ್ನು ಭೇಟಿ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ. ನೀರಾವರಿ ಸಚಿವರೊಂದಿಗೆ ಭೇಟಿ ಮಾಡುತ್ತೇವೆ, ಡಿ.ಕೆ ಶಿವಕುಮಾರ್ ಸಹ ಬರ್ತಾರೆ.‌ ಅಧಿಕಾರದಲ್ಲಿ ತೃಪ್ತಿ ಎಲ್ಲಿಯೂ ಇಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೊಟ್ಟಿರೋ ಹುದ್ದೆಯಲ್ಲಿ ಸಾಗುತ್ತಿದ್ದೇವೆ. ಏನಾದರೂ ಖರ್ಗೆಯವರು ಸಂಪುಟ ವಿಸ್ತರಣೆ ಆಗುತ್ತೆ ಅಂದ್ರೆ ಪ್ರತಿಕ್ರಿಯೆ ನೀಡುತ್ತೇವೆ ಎಂದಿದ್ದಾರೆ.

Read More

ಹಾವೇರಿ:- ಜಾತ್ರೆಗೆ ಹೋಗೋದಾಗಿ ಹೇಳಿದ್ದ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ಜರುಗಿದೆ. https://ainlivenews.com/dont-ignore-drooling-while-sleeping-this-is-a-sign-of-this-disease/ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದ ಮಹಿಳೆಯ ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆದಿದೆ. ಇದು ಸಹಜ ಸಾವಾ ಅಥವಾ ರೇಪ್ ಆ್ಯಂಡ್​ ಮರ್ಡರ್ ಮಾಡಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಮೃತ ಮಹಿಳೆ ಹೆಸರು ಪಕ್ಕಿರವ್ವ ನಿಂಗಪ್ಪ ಸಣ್ಣತಮ್ಮಣ್ಣನವರ. ಕೋಡ ಗ್ರಾಮದಲ್ಲಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಮಕ್ಕಳು ಮರಿ ಯಾರು ಇಲ್ಲಾ, ಗಂಡ ಸಾವನ್ನಪ್ಪಿದ ನಂತರ ಏಕಾಂಗಿಯಾಗಿ ಬದುಕು ಕಟ್ಟಿಕೊಂಡಿದ್ದರು. ಫೆಬ್ರುವರಿ 15 ರಂದು ಕೋಡ್ ಗ್ರಾಮದಿಂದ ಜಾತ್ರೆಗೆ ಹೋಗುತ್ತೇನೆಂದು ಹೋಗಿದ್ದ ಮಹಿಳೆ, ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಹಿರೇಕೆರೂರು ಪಟ್ಟಣದ ಹೊರವಲಯದಲ್ಲಿರೋ ದುರ್ಗಾದೇವಿ ದೇವಾಲಯದ ಬಳಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಒಟ್ಟಾರೆ ಸಾವಿನ ಸುತ್ತ ಸಾಕಷ್ಟು ಅನುಮಾನಗಳ ಹುತ್ತ ಮೂಡಿದೆ.

Read More

ಸೂರ್ಯೋದಯ – 6:41 AM ಸೂರ್ಯಾಸ್ತ – 6:17 PM ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ಉತ್ತರ ಅಯಣ, ಶುಕ್ಲ ಪಕ್ಷ, ಶಿಶಿರ ಋತು, ಮಾಘ ಮಾಸ, ತಿಥಿ – ಏಕಾದಶಿ ನಕ್ಷತ್ರ – ಪೂರ್ವಾಷಾಢ ಯೋಗ – ಸಿದ್ಧಿ ಕರಣ – ಬಾಲವ ರಾಹು ಕಾಲ – 07:30 ದಿಂದ 09:00 ವರೆಗೆ ಯಮಗಂಡ – 10:30 ದಿಂದ 12:00 ವರೆಗೆ ಗುಳಿಕ ಕಾಲ – 01:30 ದಿಂದ 03:00 ವರೆಗೆ ಬ್ರಹ್ಮ ಮುಹೂರ್ತ – 5:05 ಬೆ.ದಿಂದ 5:53 ಬೆ.ವರೆಗೆ ಅಮೃತ ಕಾಲ – 2:06 ಮ.ದಿಂದ 3:43 ಮ.ವರೆಗೆ ಅಭಿಜಿತ್ ಮುಹುರ್ತ – 12:06 ಮ.ದಿಂದ 12:52 ಮ.ವರೆಗೆ ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403…

Read More

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ ಟ್ರೋಫಿ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕ್ ತಂಡವನ್ನು ಟೀಮ್ ಇಂಡಿಯಾ ಹೀನಾಯವಾಗಿ ಸೋಲಿಸಿದೆ. https://ainlivenews.com/dont-ignore-drooling-while-sleeping-this-is-a-sign-of-this-disease/ ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಭಾರತ ಭರ್ಜರಿಯಾಗಿ ಗೆದ್ದಿದ್ದು, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಪಾಕ್​ ಪರ ಮಾಜಿ ಕ್ಯಾಪ್ಟನ್​​ ಬಾಬರ್ ಆಜಂ ಮತ್ತು ಯುವ ಬ್ಯಾಟರ್​​ ಇಮಾಮ್-ಉಲ್-ಹಕ್ ಜೋಡಿ ಓಪನಿಂಗ್​ ಮಾಡಿತು. ಬಾಬರ್​ ಅಜಂ ತಾನು ಎದುರಿಸಿದ 26 ಬಾಲ್​ನಲ್ಲಿ 5 ಫೋರ್​ ಸಮೇತ 23 ರನ್​ ಸಿಡಿಸಿ ಔಟಾದ್ರು. ಇಮಾಮ್-ಉಲ್-ಹಕ್ ಕೇವಲ 10 ರನ್​ಗೆ ವಿಕೆಟ್​​ ಒಪ್ಪಿಸಿದರು. ಬಳಿಕ ಕ್ರೀಸ್​ಗೆ ಬಂದ ಸೌದ್ ಶಕೀಲ್ ಉತ್ತಮ ಇನ್ನಿಂಗ್ಸ್​ ಆಡಿದರು. 76 ಎಸೆತಗಳಲ್ಲಿ 5 ಫೋರ್​ ಸಮೇತ 62 ರನ್​ ಚಚ್ಚಿದ್ರು. ಇವರಿಗೆ ಸಾಥ್​ ನೀಡಿದ ಕ್ಯಾಪ್ಟನ್​​ ಮೊಹಮ್ಮದ್​ ರಿಜ್ವಾನ್​ ಅವರು 77 ಬಾಲ್​ನಲ್ಲಿ 3 ಫೋರ್​ ಸಮೇತ 46 ರನ್​​ ಸಿಡಿಸಿದ್ರು.…

Read More

ಮಕ್ಕಳು ನಿದ್ರೆಯ ಸಮಯದಲ್ಲಿ ಜೊಲ್ಲು ಸುರಿಸುವುದು ಸಾಮಾನ್ಯ. ಆದರೆ ದೊಡ್ಡವರು ಸಹ ನಿದ್ರೆ ಮಾಡುವಾಗ ಜೊಲ್ಲು ಸುರಿಸಲು ಪ್ರಾರಂಭಿಸುತ್ತಾರೆ. ಹೊರಗಡೆ ಹೋದಾಗ ಹೀಗಾದರಂತೂ ಭಾರೀ ಮುಜುಗರವಾಗುವುದು ಸಹಜ. ಮಕ್ಕಳು ಜೊಲ್ಲು ಸುರಿಸಲು ಅನೇಕ ಕಾರಣಗಳಿವೆ. ಅವರಿಗೆ ಬಾಯಿ ಮತ್ತು ಇಂದ್ರಿಯಗಳ ಮೇಲೆ ಸರಿಯಾದ ನಿಯಂತ್ರಣವಿರುವುದಿಲ್ಲ. ಆದರೆ, ವಯಸ್ಕರಾದ ಮೇಲೂ ಜೊಲ್ಲು ಸುರಿಸಿದರೆ ನಿಜವಾಗಿಯೂ ಪರಿಹಾರ ಕಂಡುಕೊಳ್ಳಬೇಕಾಗಿದೆ. https://ainlivenews.com/pm-modi-praises-karnatakas-tiger-disguise-in-mann-ki-baat/ ಕೆಲವು ಜನ ನಿದ್ದೆ ಮಾಡುವಾಗ ಬಾಯಿಂದ ಜೊಲ್ಲು ಸುರಿಸುತ್ತಾರೆ. ಇದಕ್ಕೆ ವೈದ್ಯಕೀಯ ಪದ ಬಹಿರ್ಮುಖ ಗ್ರಂಥಿ ಅಂತ ಹೇಳ್ತಾರೆ. ಬಾಯಿಂದ ಜೊಲ್ಲು ಸೋರುವುದು ಕೆಲವೊಮ್ಮೆ ಗಂಭೀರ ಕಾಯಿಲೆಗಳ ಸೂಚನೆ ಆಗಿರಬಹುದು. ಉದಾಹರಣೆಗೆ, ಸೈನಸ್ ಸಮಸ್ಯೆ ಇರುವವರಲ್ಲಿ ಲಾಲಾರಸ ಸಂಗ್ರಹವಾಗಿ ಹೊರಗೆ ಬರುತ್ತದೆ ಹೊಟ್ಟೆಯಲ್ಲಿ ಗ್ಯಾಸ್ ಜಾಸ್ತಿ ಆದಾಗಲೂ ಬಾಯಲ್ಲಿ ನೀರು ಸೋರುವ ಸಾಧ್ಯತೆ ಇದೆ. ಸ್ಲೀಪ್ ಅಪ್ನಿಯಾ ಅನ್ನೋ ಉಸಿರಾಟದ ಸಮಸ್ಯೆಯಿಂದ ನಿದ್ದೆಯಲ್ಲಿ ಉಸಿರಾಟ ಸ್ಥಗಿತಗೊಂಡಾಗಲೂ ಬಾಯಿಂದ ನೀರು ಸೋರಬಹುದು. ಇದು ಗಂಭೀರ ಸಮಸ್ಯೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ. ನಿಮ್ಮ ದೇಹದಲ್ಲಿ…

Read More

ಬೆಂಗಳೂರು:- ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ್ ಮುಖಾಮುಖಿ ಆಗಿದ್ದಾವೆ. ಇದೇ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಇಡಿ ದೇಶ ಇಂದು ಎದುರು ನೋಡ್ತಿದೆ.ಚಾಂಪಿಯನ್ಸ್ ಟ್ರೋಪಿ ಪಂದ್ಯ ನಡೆಯುತ್ತಿದೆ. ಭಾರತ ಪಾಕಿಸ್ತಾನದ ನಡುವೆ ಪಂದ್ಯ ಅಲ್ಲ, ಇದು ಯುದ್ದ ಭಾರತಕ್ಕೆ ಶುಭವಾಗಲಿ ಎಂದಿದ್ದಾರೆ. https://ainlivenews.com/pm-modi-praises-karnatakas-tiger-disguise-in-mann-ki-baat/ ಇದೇ ವೇಳೆ ನಿನ್ನೆ ಹ್ಯಾರಿಸ್ ಬೆಂಬಲಿಗನ ಹತ್ಯೆ ಪ್ರಕರಣಕ್ಕೆ ಉತ್ತರಿಸಿ, ಇದಕ್ಕೆ ಸರಕರಾವೇ ಹೊಣೆ. ಇಂದು ಬೆಂಗಳೂರು ಸೇಫ್ ಇಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಾನು ರಾಜೀನಾಮೆ ನೀಡುತ್ತೇ‌ನೆ ಎನ್ನುವ ದಾಟಿಯಲ್ಲಿ ಗೃಹ ಮಂತ್ರಿ ಮಾತಾಡಿದ್ರೆ ದೇಶ ದ್ರೋಹಿಗಳಿಗೆ ಆನೆ ಬಲ ಬಂದಂತೆ ಆಗುತ್ತದೆ. ನಿಮ್ಮನ್ನು ಜನ ಆಯ್ಕೆ ಮಾಡಿದ್ದು ಒಳ್ಳೆಯ ಆಡಳಿತ ನೀಡಲು ಎಂದರು. ಇದೇ ವೇಳೆ ಕಂಡೆಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಮಾತನಾಡಿ, ಈ ನೆಲದ ಗಾಳಿ ನೀರು ಕುಡಿದು ಈ ರೀತಿ ನಡೆದುಕೊಳ್ಳೋಕೆ ಸಾಧ್ಯವಿಲ್ಲ. ಇದನ್ನು ಕ್ಷಮಿಸೋಕೆ ಸಾಧ್ಯವಿಲ್ಲ. ಕನ್ನಡಿಗರು ದನಿ ಎತ್ತಬೇಕು ಇಂತವರನ್ನು ಹತ್ತಿಕ್ಕುವ…

Read More