Author: AIN Author

ನಟ ನಾಗಭೂಷಣ್  ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಬಹುಕಾಲದ ಗೆಳತಿ, ನಟಿ ಪೂಜಾ ಪ್ರಕಾಶ್ ಜೊತೆ ಇಂದು ಬೆಳಗಾವಿಯಲ್ಲಿ ಅವರು ಮದುವೆ ಆಗಿದ್ದು, ಡಾಲಿ ಧನಂಜಯ್, ವಾಸುಕಿ ವೈಭವ್, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಈ ಮದುವೆಯಲ್ಲಿ ಗೆಳೆಯ ನಾಗಭೂಷಣ್ ಅವರಿಗಾಗಿಯೇ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ ಸೊಗಸಾದ ಗೀತೆಗಳನ್ನು ಹಾಡಿದ್ದಾರೆ. ಜೊತೆಗೆ ಹೊಸ ಜೀವನಕ್ಕೆ ವಾಸುಕಿ ದಂಪತಿ ಸಮೇತ ಶುಭ ಹಾರೈಸಿದ್ದಾರೆ. ಟಗರು ಪಲ್ಯ ಸೇರಿದಂತೆ ಅನೇಕ ಚಿತ್ರಗಳಿಗೆ ನಾಯಕನಾಗಿ ನಟಿಸಿರುವ ನಾಗಭೂಷಣ್, ನಾನಾ ಚಿತ್ರಗಳಲ್ಲಿ ನಟಿಸಿದ್ದಾರೆ. https://ainlivenews.com/loan-from-central-government-for-business-people-get-rs-10-lakh-easily/  ಇತ್ತೀಚೆಗಷ್ಟೇ ಇವರ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾವನ್ನು ಡಾಲಿ ಧನಂಜಯ್ ಅವರೇ ನಿರ್ಮಾಣ ಮಾಡುತ್ತಿರುವುದು ವಿಶೇಷ. ನಾಗಭೂಷಣ್ ಮದುವೆ ಆಗುತ್ತಿರುವ ಪೂಜಾ ಪ್ರಕಾಶ್ ಚಿತ್ರಕಲೆ ಮತ್ತು ಗ್ರಾಫಿಕ್ಸ್ ಡಿಸೈನ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂದು ಬೆಳಗಾವಿಯಲ್ಲಿ ಇವರ ವಿವಾಹ ನಡೆದಿದ್ದು, ಫೆಬ್ರವರಿ 2 ರಂದು ಮೈಸೂರಿನಲ್ಲಿ ಆರತಕ್ಷತೆ…

Read More

ಬೆಂಗಳೂರು:  “ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೆ ಅಧಿಕಾರ ಸಿಗಲಿ ಎಂದು ನಿಗಮ ಮಂಡಳಿಗಳಿಗೆ ಎರಡು ವರ್ಷ ಅವಧಿಯ ಸೂತ್ರವನ್ನು ಹೈಕಮಾಂಡ್ ಮಾಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಭಾನುವಾರ ಮಾಧ್ಯದವರಿಗೆ ಪ್ರತಿಕ್ರಿಯೆ ನೀಡಿದರು. ನಿಗಮ ಮಂಡಳಿ ಅಧಿಕಾರವಧಿಯನ್ನು ಎರಡು ವರ್ಷ ಮೀಸಲಿಗೆ ಒಂದಷ್ಟು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಅವರು ಹೇಳಿದ್ದಿಷ್ಟು; “ಪಕ್ಷದ ಎಲ್ಲರಿಗೂ ಅವಕಾಶ ದೊರೆಯಬೇಕು. ಇತರರಿಗೂ ಅಧಿಕಾರ ಹಂಚಬೇಕು. ಆದ ಕಾರಣ 2 ವರ್ಷ ಮಾತ್ರ ಅಧಿಕಾರವಧಿ ಎಂದು ಹೇಳಿದ್ದೇವೆ. ಹೈಕಮಾಂಡ್ ಕೊಟ್ಟಿರುವ ಸೂತ್ರವನ್ನು ನಾವು ಜಾರಿಗೆ ತಂದಿದ್ದೇವೆ. ಇಲ್ಲಿ ಸಿದ್ದರಾಮಯ್ಯ ಅವರದ್ದು ಏನೂ ಇಲ್ಲ, ಡಿ.ಕೆ.ಶಿವಕುಮಾರ್ ಅವರದ್ದೂ ಏನೂ ಇಲ್ಲ. ಪಕ್ಷ ಅಧಿಕಾರಕ್ಕೆ ಬರಲು ಸಾಕಷ್ಟು ಕಾರ್ಯಕರ್ತರು ದುಡಿದಿದ್ದಾರೆ. ಆದ ಕಾರಣ ಎಲ್ಲರಿಗೂ ಅವಕಾಶ ನೀಡಬೇಕು.” https://ainlivenews.com/loan-from-central-government-for-business-people-get-rs-10-lakh-easily/ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಯ ಬಗ್ಗೆ ಕೇಳಿದಾಗ, “ಕರ್ನಾಟಕದಲ್ಲಿ…

Read More

ಬೆಂಗಳೂರು: ಶಾಮನೂರು ಶಿವಶಂಕರಪ್ಪನವರು  ದೇಶಕ್ಕೆ ಒಂದೊಳ್ಳೆ ಸಂದೇಶ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರನ್ನು ಒಪ್ಪಿದ್ದಾರೆ. ಮೋದಿ ಮತ್ತೆ ಪ್ರಧಾನಿ ಆಗಬೇಕು ಅನ್ನೋದನ್ನ ಸೂಕ್ಷ್ಮವಾಗಿ ಹೇಳಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ ರವಿ (CT Ravi) ಶ್ಲಾಘಿಸಿದ್ದಾರೆ.  ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ಸಚಿವ ಸಿ.ಟಿ ರವಿ ಅವರು, https://ainlivenews.com/loan-from-central-government-for-business-people-get-rs-10-lakh-easily/ ಬಿ.ವೈ ರಾಘವೇಂದ್ರ (BY Raghavendra) ಅವರನ್ನು ಗೆಲ್ಲಿಸಬೇಕು ಎನ್ನುವ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಶಾಮನೂರು ಶಿವಶಂಕರಪ್ಪನವರು ದೇಶಕ್ಕೆ ಒಂದೊಳ್ಳೆ ಸಂದೇಶ ಕೊಟ್ಟಿದ್ದಾರೆ. ದೇಶದ ಹಿತದೃಷ್ಟಿಯಿಂದ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಬೇಕು ಎಂಬ ಸಂದೇಶ ಕೊಟ್ಟಿದ್ದಾರೆ. ಅವರ ಹೇಳಿಕೆಯನ್ನ ಸ್ವಾಗತ ಮಾಡ್ತೀನಿ ಎಂದಿದ್ದಾರೆ.  

Read More

ದೊಡ್ಡಬಳ್ಳಾಪುರ: ರಾಜ್ಯ ತೆಂಗಿನ ನಾರು ಸಹಕಾರ ಮಹಾಮಂಡಿ ಅಧ್ಯಕ್ಷ ಹಾಗೂ ತೂಬಗೆರೆ ಹೋಬಳಿ ಜೆಡಿಎಸ್ ಮುಖಂಡ ಎಸ್.ಎಲ್.ವೆಂಕಟೇಶಬಾಬು ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ವರಿಷ್ಠರು ಸೂಕ್ತ ಕ್ರಮ ಜರುಗಿಸಬೇಕು ಎಂದು ತೂಬಗೆರೆ ಹೋಬಳಿ ಗಂಟಿಗಾನಹಳ್ಳಿ ಜೆಡಿಎಸ್ ಮುಖಂಡ ಸಂದೀಪ್ ಒತ್ತಾಯಿಸಿದರು. ಗಂಟಿಗಾನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ವೆಂಕಟೇಶ್ ಬಾಬು ಅವರು ಕಾಂಗ್ರೆಸ್, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದರಿಂದ ಹೋಬಳಿಯಲ್ಲಿ ಜೆಡಿಎಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ವೆಂಕಟೇಶ್ ಬಾಬು ವಿರುದ್ದ ಕೂಡಲೇ ವರಿಷ್ಠರು ಶಿಸ್ತುಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸ್ಥಳೀಯ ಮುಖಂಡರು ಪರ್ಯಾಯ ದಾರಿ ಕಂಡುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಮ ಪಂಚಾಯ್ತಿ, ವಿಧಾನಸಭೆ ಹಾಗೂ ಗಂಟಿಗಾನಹಳ್ಳಿ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ವೆಂಕಟೇಶಬಾಬು ಅವರು ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಸೇರಿ ಪಕ್ಷಕ್ಕೆ ಹಿನ್ನೆಡೆಯುಂಟು ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಕುರಿತು ತಾಲೂಕು ಹಾಗೂ…

Read More

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮರಳಿ ಭಾರತೀಯ ಜನತಾ ಪಕ್ಷಕ್ಕೆ ಬಂದ ಹಿನ್ನೆಲೆಯಲ್ಲಿ, ಜಗದೀಶದ ಶೆಟ್ಟರ್ ವಿರುದ್ದ ಲಿಂಗಾಯತ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗೋಷ್ಠಿ ಏರ್ಪಡಿಸಿದ ಲಿಂಗಾಯತ ನಾಯಕರು, ನಮ್ಮ ಸಮುದಾಯಕ್ಕೆ ಜಗದೀಶ್ ಶೆಟ್ಟರ್ ಮೋಸ ಮಾಡಿ ಹೋಗಿದ್ದಾರೆ. ಲಿಂಗಾಯತ ‌ಮುಖಂಡ ಮೋಹನ ಲಿಂಬಿಕಾಯಿ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಸರ್ಕ್ಯೂಟ್ ಹೌಸ್ ದಲ್ಲಿ ಮಾಧ್ಯಮಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಯಾಕೆ ಬಿಜೆಪಿಗೆ ಹೋದ್ರು ಅನ್ನೋದೆ ನಿಗೂಢವಾಗಿದೆ. ಇಂತವರಿಂದ ಯುವಕರಿಗೆ ಏನೂ ಸಂದೇಶ ಹೋಗತ್ತೆ. ಶೆಟ್ಟರ್ ಹೋಗಿರೋದು ಸಮಾಜಕ್ಕೆ ಅನ್ಯಾಯ ಆಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಒಬ್ಬ ನೀತಿಶ್ ಕುಮಾರ್ ಹುಟ್ಟಿದ್ದಾರೆ. ನಾವ ಬಿಹಾರಕ್ಕೆ ಹೋಗೋದು‌ ಬೇಡಾ, ಜಗದೀಶ್ ಶೆಟ್ಟರ್ ಮತ್ತೊಬ್ಬ ನಿತೀಶ್ ಕುಮಾರ್ ಎಂದ ಮೋಹನ ಲಿಂಬಿಕಾಯಿ. ಸ್ವಾರ್ಥಕ್ಕಾಗಿ ಇವತ್ತು ಇಲ್ಲೆ ನಾಳೆ ಮತ್ತೊಂದು ಕಡೆ ಅನ್ನೋದಕ್ಕೆ ದೇಶದಲ್ಲಿ ಜಗದೀಶ್ ಶೆಟ್ಟರ್ ಉದಾಹರಣೆ. ನೀತಿಗೆಟ್ಟ ರಾಜಕಾರಣ ಮಾಡೋರ ಹಿಂದೆ ಸಮಾಜ ಇಲ್ಲ ಎಂದ ಮೋಹನ…

Read More

ಹುಬ್ಬಳ್ಳಿ: ತಮಿಳುನಾಡಿನಲ್ಲಿ ನಮ್ಮ ಅಪ್ರೋಚ್ ಬೇರೆ ಇದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಕೇಶ್ವಾಪುರದ ಆಕ್ಸ್ಫರ್ಡ್ ಕಾಲೇಜು ಹತ್ತಿರ ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಹುಬ್ಬಳ್ಳಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವದ ವೇದಿಕೆಯಲ್ಲಿ ಬಿಜೆಪಿಯ ಮುಖಂಡರೊಂದಿಗೆ ಪ್ರಧಾನಮಂತ್ರಿ ಯವರ ಮನ್ ಕೀ ಬಾತ್ ಕಾರ್ಯಕ್ರಮದ 109ನೇ ಆವೃತ್ತಿಯನ್ನು ವೀಕ್ಷಿಸಿ ಅವರು ಮಾತನಾಡಿದರು, ಬಿಹಾರದಲ್ಲಿ ನಮ್ಮ ಪಕ್ಷದ ಸ್ವಂತ ಶಕ್ತಿಯಿದ್ದ ಎರಡನೆ ಬಾರಿ ಆರ್‌ಜೆಡಿ ಜೊತೆ ಹೋಗಿ ನಿತೀಶ್‌ಕುಮಾರ್‌ಗೆ ಅರಿವು ಮೂಡಿದೆಆರ್‌ಜೆಡಿ ಜೊತೆ ಏಗಲು ಇನ್ನು ಆಗಲ್ಲಾ ಅನ್ನೋದು ಗೊತ್ತಾಗಿದೆಬಿಹಾರದಲ್ಲಿ ಆರ್‌ಜೆಡಿ, ಜೆಡಿಯು ಕಚ್ಚಾಟ ನಡೆಯುತ್ತಿದೆಆರ್‌ಜೆಡಿ ಮತ್ತು ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ, ಪರಿವಾರವಾದ, ಸ್ವಜನ ಪಕ್ಷಪಾತವಿದೆದೇಶದ ಹಿತಕ್ಕೆ ಮಾರಕವಾದ ಅಂಶಗಳೆಲ್ಲಾ ಆರ್‌ಜೆಡಿ ಮತ್ತು ಕಾಂಗ್ರೆಸ್‌ನಲ್ಲಿವೆ. ಹೀಗಾಗಿ ತಲೆಕೆಟ್ಟು ನಿತೀಶ್ ಕುಮಾರ್ ಹೊರಗೆ ಬಂದಿದ್ದಾರೆ. ಆದರೆ ನಮಗೆ ಸಪೋರ್ಟ್ ಅಂತಾ ಯಾರೂ ಹೇಳಿಲ್ಲ, ಎನ್‌ಡಿ‌ಎ ಜೊತೆ ಬರ್ತಾರಾ ಅನ್ನೋದು ಆಮೇಲೆ ಗೊತ್ತಾಗುತ್ತೆ ಎಂದರು. ದೇಶದಾದ್ಯಂತ ಆಗುತ್ತಿರುವ ಭಾರತೀಯರ…

Read More

ದಾವಣಗೆರೆ: ಪ್ರಧಾನಿ ಮೋದಿ ಹತ್ತು ವರ್ಷ ಉತ್ತಮ ಸರ್ಕಾರ ಕೊಟ್ಟಿದ್ದಾರೆ. ಮತ್ತೊಮ್ಮೆ ಅವರು ಪ್ರಧಾನ ಮಂತ್ರಿಯಾಗಬೇಕೆನ್ನುವ ಬಯಕೆ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತೆ ಸೇರಿದ್ದು ಖುಷಿಯಾಗಿದೆ. ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಲು ಎಲ್ಲರೂ ಕೈ ಜೋಡಿಸಬೇಕು. ಅದರಲ್ಲಿ ನಮ್ಮದು ಅಳಿಲು ಸೇವೆ ಇರಲಿ ಎಂಬ ಉದ್ದೇಶದಿಂದ ಪಾರ್ಟಿ ಸೇರಿದ್ದೇನೆ ಎಂದರು. ಇನ್ನೂ ಲೋಕಸಭೆಗೆ ನಿಲ್ಲಲು ಕ್ಷೇತ್ರ ಹಂಚಿಕೆ ವಿಚಾರಕ್ಕೆ ಕೇಂದ್ರದ ವರಿಷ್ಠರು ಏನು ನಿರ್ದೇಶನ ಮಾಡುತ್ತಾರೆ ನೋಡಬೇಕು. ಶೆಟ್ಟರೆ ಈ ಜವಾಬ್ದಾರಿ ಮಾಡಿ ಎಂದ್ರೆ ಅದನ್ನೇ ಮಾಡುತ್ತೇನೆ. ಅವರು ನನ್ನ ಸಂಪರ್ಕದಲ್ಲಿಲ್ಲ. ಕಾಂಗ್ರೆಸ್ ಬಿಟ್ಟಿದ್ದು ನನಗೆ ಯಾವುದೇ ಪಾಪ ಪ್ರಜ್ಞೆ ಕಾಡುತ್ತಿಲ್ಲ. ಶಾಮನೂರು ಶಿವಶಂಕರಪ್ಪ ರಾಘವೇಂದ್ರ ಗೆಲ್ಲಲಿ ಅಂತ ಹೇಳಿದ್ದು ಒಳ್ಳೆಯದೇ ಆಯಿತು. ಲಕ್ಷ್ಮಣ ಸವಧಿ ಏನು ಮಾಡುತ್ತಾರೆ ಗೊತ್ತಿಲ್ಲ,  ಬಿಜೆಪಿಗೆ ಬರುವಂತೆ ನಾವೇನು ಅವರ ಸಂಪರ್ಕ ಮಾಡಿಲ್ಲ. ಮತ್ತೆ ನಮ್ಮ ಮನೆಗೆ ಬಂದಿದ್ದೇನೆ ಖುಷಿಯಿಂದ ಇದ್ದೇನೆ ಎಂದು…

Read More

ಹಾವೇರಿ: ಮಂಡ್ಯದಲ್ಲಿ ಹನುಮಧ್ವಜ ತೆರವು ಹಿನ್ನಲೆ ಹಾವೇರಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೇ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪದೇಪದೆ ಒಂದು ಮಾತು ಹೇಳ್ತಿರ್ತಾರೆ ಸರ್ವ ಜನಾಂಗದ ಶಾಂತಿಯ ತೋಟ ಎಂದು ಯಾವಾಗಲೂ ಹೇಳ್ತಿರ್ತಾರೆ. ಎಲ್ಲಿದೆ ಸರ್ವ ಜನಾಂಗದ ತೋಟ? ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲೂ ಹಲವು ಕಡೆ ಅಡೆತಡೆ ಗಳಾದವು, ಅರೆಸ್ಟ್ ಆಗಿವೆ. ಎಲ್ಲ ಕಡೆ ಸಮಸ್ಯೆ ಆಗುತ್ತಿದೆ. ರಾಮಮಂದಿರ ಶೋಭಾಯಾತ್ರೆ ವೇಳೆ ಕಲ್ಲು ತೂರಿದ್ದಾರೆ. ಇಂಥ ಸಮಾಜಘಾತುಕರನ್ನು ಬಂಧಿಸುವ ಬದಲು ಸರ್ಕಾರ ಅಂತವರಿಗೆ ರಕ್ಷಣೆ ನೀಡುತ್ತಿದ್ದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಇವರು ಎಸ್‌ಐಟಿ ರಚನೆ ಮಾಡಲಿಲ್ಲ. ಹೀಗಾಗಿ ನಾವೇ ಒಂದು ಪಿಐಎಲ್ ಹಾಕುತ್ತೇವೆ. ಅತ್ಯಾಚಾರ ಮಾಡಿದವರು ಯಾವ ಕೋಮಿನವರು ಎಂಬುದರ ಕೇಸ್ ದಾಖಲಿಸುತ್ತದೆ. ಮುಸ್ಲಿಂ ಓಲೈಕೆಯಿಂದಲೇ, ಏನೇ ಮಾಡಿದರೂ ಶಿಕ್ಷೆಯಾಗುವುದಿಲ್ಲ ಕನಿಷ್ಠ ಪಕ್ಷ ಬಂಧಿಸುವುದಿಲ್ಲ ಎಂಬುದು ದುಷ್ಕರ್ಮಿಗಳಿಗೆ ಗೊತ್ತಿರುವುದರಿಂದ ಇಂಥ ಕೃತ್ಯಗಳು ಪದೇಪದೆ ನಡೆಯುತ್ತಿದೆ. ಇದು ತುಂಬಾ ಅಪಾಯಕಾರಿಯಾಗಿದೆ ಎಂದು…

Read More

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಒಲೀ ಪೋಪ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅವರು 278 ಎಸೆತಗಳಲ್ಲಿ 196 ರನ್‍ಗಳನ್ನು ಗಳಿಸಿದ್ದಾರೆ. 163 ರನ್‍ಗಳಿಗೆ 5 ವಿಕೆಟ್ ನಷ್ಟ ಅನುಭವಿಸಿದ್ದ ಇಂಗ್ಲೆಂಡ್‍ಗೆ ಆಸರೆಯಾಗಿ ನಿಂತ ಪೋಪ್ 3ನೇ ದಿನದಾಟದಲ್ಲಿ 154 ಎಸೆತಗಳಲ್ಲಿ ಶತಕ ಬಾರಿಸಿದ್ದರು. ನಾಲ್ಕನೇ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 196 ರನ್‍ಗಳಿಸಿ ವಿಕೆಟ್ ಒಪ್ಪಿಸಿದ ಅವರು, ಕೇವಲ 4 ರನ್‍ಗಳಿಂದ ದ್ವಿಶತಕ ವಂಚಿತರಾದರು.  https://ainlivenews.com/loan-from-central-government-for-business-people-get-rs-10-lakh-easily/ ಇನ್ನೂ ಈ ಮೊದಲು ಭಾರತದ ನೆಲದಲ್ಲಿ ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‍ನಲ್ಲಿ ಅತ್ಯಧಿಕ ರನ್‍ಗಳಿಸಿದ ಇಂಗ್ಲೆಂಡ್ ಬ್ಯಾಟರ್ ಅಲಿಸ್ಟರ್ ಕುಕ್ ಹೆಸರಿನಲ್ಲಿದ್ದ ದಾಖಲೆಯನ್ನು ಒಲೀ ಪೋಪ್ ಮುರಿದಿದ್ದಾರೆ. 2012 ರಲ್ಲಿ ಅಹಮದಾಬಾದ್‍ನಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಕುಕ್ 176…

Read More

ದೊಡ್ಮನೆಯ 112 ದಿನಗಳ ಆಟಕ್ಕೆ ತೆರೆ ಬೀಳುವ ಸಮಯ ಬಂದಿದೆ. ಗ್ರ್ಯಾಂಡ್ ಫಿನಾಲೆಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಬಿಗ್ ಬಾಸ್ ಕನ್ನಡ 10 ವಿನ್ನರ್ ಘೋಷಣೆಗೆ ಕೌಂಟ್‌ಡೌನ್ ಶುರುವಾಗಿದೆ. ತುಕಾಲಿ ಸಂತು ಎಲಿಮಿನೇಟ್ ಆಗ್ತಿದ್ದಂತೆ ವರ್ತೂರು ಸಂತೋಷ್ ಕೂಡ ಎಲಿಮಿನೇಟ್ (Elimination) ಆಗಿದ್ದಾರೆ ಎನ್ನಲಾಗುತ್ತಿದೆ. ಹಳ್ಳಿಕಾರ್ ವರ್ತೂರು ಸಂತೋಷ್ ಅವರು ಟಾಪ್ 2ನಲ್ಲಿ ಇರುತ್ತಾರೆ ಎಂದೇ ಭಾವಿಸಲಾಗಿತ್ತು. ಇದೀಗ ತುಕಾಲಿ ಸಂತು ಆಪ್ತ ಸ್ನೇಹಿತ ವರ್ತೂರು ಸಂತೋಷ್‌ಗೆ ದೊಡ್ಮನೆಯ ಆಟ ಅಂತ್ಯವಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. https://ainlivenews.com/loan-from-central-government-for-business-people-get-rs-10-lakh-easily/ ವರ್ತೂರು ಸಂತೋಷ್ ಅವರ ವಿಚಾರದಲ್ಲಿ ಅದೇನೇ ವಿವಾದವಾಗಿದ್ದರೂ ಕೂಡ ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಟಫ್ ಫೈಟ್ ನೀಡಿದ್ದರು. ಸದ್ಯ ವರ್ತೂರು ಎಲಿಮಿನೇಟ್ ಎಂಬ ಹರಿದಾಡುತ್ತಿರೋ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಸುದ್ದಿ ಸುಳ್ಳಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡ್ತಿದ್ದಾರೆ.

Read More