Author: AIN Author

ತುಮಕೂರು:- ಸರ್ಕಾರಿ ಜಾಗದಲ್ಲಿ ಹನುಮಾನ್‌ ಧ್ವಜ ಹಾರಿಸಲು ಅವಕಾಶವಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಷ್ಟ್ರಧ್ವಜ ಹಾರಿಸುತ್ತೇವೆಂದು ಗ್ರಾಮ ಪಂಚಾಯಿತಿ ನಿಂದ ಅನುಮತಿ ಪಡೆದಿದ್ದರು. ಆದರೆ ರಾಷ್ಟ್ರಧ್ವಜ ಬದಲು ಹನುಮ ಧ್ವಜ ಹಾರಿಸಿದ್ದಾರೆ. ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದರಿಂದ ತೆರವುಗೊಳಿಸಿದ್ದಾರೆ ಎಂದು ಇದಾದ ಬಳಿಕ ಕೆಲ ಪ್ರತಿಭಟನೆಗಳು, ಬೇರೆಲ್ಲಾ ಆಗಿವೆ ಎಂದು ಹೇಳಿದ್ದಾರೆ. ಲಘು ಲಾಠಿಪ್ರಹಾರ ನಡೆಸಿ ರಾಷ್ಟ್ರೀಯ ಧ್ವಜವನ್ನ ಹಾರಿಸಲಾಗಿದೆ. ಸಮಾಜದಲ್ಲಿ ಇದು ಒಂದು ರೀತಿಯಲ್ಲಿ ಶಾಂತಿ ಕದಡುವ ಕೆಲಸವಾಗಿದೆ. ಕಾನೂನಿಗೆ ವಿರುದ್ಧವಾದ ಕೆಲಸವೆಂದು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ವಿಚಾರವಾಗಿ ಮಾತನಾಡಿದ ಅವರು, ಪದೇ ಪದೇ ಇದನ್ನ ಹೇಳುತ್ತಿದ್ದಾರೆ. ಅದಕ್ಕೇನು ಹೆಚ್ಚು ಅರ್ಥ ಕಲ್ಪಿಸುವುದು ಇಲ್ಲ. ಪದೇ ಪದೇ ಕಾಂಗ್ರೆಸ್​ನವ್ರು, ರಾಜ್ಯ ಸರ್ಕಾರ ಹಿಂದೂ ವಿರೋಧಿಗಳು ಅಂತಾ ಹೇಳುತ್ತಿದ್ದಾರೆ. ಆದರೆ ನಾವು ಕೂಡ ಹೇಳುತ್ತಿದ್ದೇವೆ. ನಾವು ಕೂಡ ಹಿಂದೂಗಳೇ, ನಾವೇನು ಬೇರೆಯವರಲ್ಲ.…

Read More

ಭಾರತದ ವಿರುದ್ಧ ಇಂಗ್ಲೆಂಡ್‌ಗೆ 28 ರನ್‌ಗಳ ಜಯ ಸಿಕ್ಕಿದೆ. ಟಾಮ್‌ ಹಾರ್ಟ್ಲಿ 7 ವಿಕೆಟ್‌ ಕಬಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 231 ರನ್‌ ಗುರಿ ನೀಡಿದ್ದ ಇಂಗ್ಲೆಂಡ್‌ 202 ರನ್‌ಗಳಿಗೆ ಆಲೌಟ್‌ ಮಾಡಿತು. 5 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿತು. ಟೀಂ ಇಂಡಿಯಾದ ರೋಹಿತ್‌ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್‌ ಉತ್ತಮ ಆರಂಭ ನೀಡಲು ಯತ್ನಿಸಿದರು. ರೋಹಿತ್‌ 39 ರನ್‌ಗಳಿಸಿ ಔಟಾದರು. ನಂತರ ಬಂದ ಯಾವೊಬ್ಬ ಬ್ಯಾಟರ್‌ ಕೂಡ ಉತ್ತಮ ರನ್‌ ಕಲೆ ಹಾಕುವಲ್ಲಿ ವಿಫಲರಾದರು. 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಒಲೀ ಪೊಪ್‌ ಅಮೋಘ ಬ್ಯಾಟಿಂಗ್‌ ಮಾಡಿದರು. 196 ರನ್‌ ಗಳಿಸಿದ ಅವರು ಕೇವಲ 4 ರನ್‌ಗಳಿಂದ ದ್ವಿಶತಕ ವಂಚಿತರಾದರು. ಇಂಗ್ಲೆಂಡ್‌ ಬೌಲರ್‌ ಟಾಮ್‌ ಹಾರ್ಟ್ಲಿ 7 ವಿಕೆಟ್‌ ಉರುಳಿಸಿ ತಂಡದ ಗೆಲುವಿಗೆ ಕಾರಣರಾದರು.

Read More

ಬಿಗ್ ಬಾಸ್ ಕನ್ನಡ 10 ವಿನ್ನರ್ ಘೋಷಣೆಗೆ ಕ್ಷಣಗಣನೆ ಶುರುವಾಗಿದ್ದು, ತುಕಾಲಿ ಸಂತು ಎಲಿಮಿನೇಟ್ ಆಗ್ತಿದ್ದಂತೆ ವರ್ತೂರು ಸಂತೋಷ್ ಕೂಡ ಎಲಿಮಿನೇಟ್ ಆಗಿದ್ದಾರೆ. ಹಳ್ಳಿಕಾರ್ ವರ್ತೂರು ಸಂತೋಷ್ ಅವರು ಟಾಪ್ 2ನಲ್ಲಿ ಇರುತ್ತಾರೆ ಎಂದೇ ಭಾವಿಸಲಾಗಿತ್ತು. ಇದೀಗ ತುಕಾಲಿ ಸಂತು ಆಪ್ತ ಸ್ನೇಹಿತ ವರ್ತೂರು ಸಂತೋಷ್‌ಗೆ ದೊಡ್ಮನೆಯ ಆಟ ಅಂತ್ಯವಾಗಿದೆ. ವರ್ತೂರು ಸಂತೋಷ್ ಅವರ ವಿಚಾರದಲ್ಲಿ ಅದೇನೇ ವಿವಾದವಾಗಿದ್ದರೂ ಕೂಡ ಬಿಗ್ ಬಾಸ್ ಮನೆಯಲ್ಲಿ ಟಫ್ ಫೈಟ್ ನೀಡಿದ್ದರು. ಮನೆಯಿಂದ ಹೊರಗೆ ಮತ್ತು ದೊಡ್ಮನೆಯಲ್ಲಿ ಸಾಕಷ್ಟು ಏಳು- ಬೀಳು ಕಂಡಿದ್ದರು ವರ್ತೂರು. ಅದನ್ನೆಲ್ಲಾ ಮೀರಿ ವರ್ತೂರು ಸಂತೋಷ್ ಸಖತ್ ಆಗಿ ಆಟ ಆಡಿದ್ದರು. ಕೊನೆ ದಿನಗಳಲ್ಲಿ ವರ್ತೂರು ಸಂತೋಷ್ ಅವರ ನಟನೆ, ಮಿಮಿಕ್ರಿ ಎಲ್ಲವೂ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈಗ ದೊಡ್ಮನೆಯಿಂದ ವರ್ತೂರು ಸಂತೋಷ್ ಹೊರಬಂದಿದ್ದಾರೆ.

Read More

ಹುಬ್ಬಳ್ಳಿ:- ಹೈಕಮಾಂಡ್ ಸೂಚಿಸಿದರೆ ಲೋಕಸಭೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೂರು ನಾಲ್ಕು ತಿಂಗಳಿಂದ ನಾನು ಪ್ರವಾಸ ಮಾಡಿದಾಗ ಅನೇಕರು ಬಿಜೆಪಿಗೆ ವಾಪಸ್ ಬರಬೇಕು ಅಂತ ಸಲಹೆ ನೀಡುತ್ತಿದ್ದರು. ಎಲ್ಲಿ ಪ್ರವಾಸ ಮಾಡಿದರೂ ನಮಗೆ ಒತ್ತಡ ಬರುತ್ತಿತ್ತು. ಹಿರಿಯರಾಗಿ ಮನೆಗೆ ಬರಬೇಕು ಎಂದು ಹೇಳುತ್ತಿದ್ದರು. ಮುಂದೆ ವಿಜಯೇಂದ್ರ ಅಧ್ಯಕ್ಷರಾದ ಮೇಲೆ ನನ್ನ ಜೊತೆ ಮಾತನಾಡಿದ್ದರು ಎಂದರು. ರಾಷ್ಟ್ರೀಯ ನಾಯಕರು ಮನಸು ಮಾಡಿದ ಮೇಲೆ ನಾನು ದೆಹಲಿಗೆ ಹೋಗಿದ್ದೆ. ಅಮಿತ್ ಶಾ, ಜೆಪಿ ನಡ್ಡಾ ಅವರನ್ನು ಭೇಟಿಯಾದಾಗ ಹಿಂದೆ ಆಗಿರೋದನ್ನ ಮರೆತು ಬಿಡಿ ಎಂದಿದ್ದರು. ನಿಮಗೆ ಗೌರವ ಕೊಡುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ಬಿಜೆಪಿ ಸೇರಿದ್ದೇನೆ. ನಿನ್ನೆ ಕಾರ್ಯಕಾರಿಣಿ ಸಭೆಯಲ್ಲಿ ಅನೇಕರು ಸಿಕ್ಕಿದ್ದರು. ಎಲ್ಲರೂ ಪ್ರೀತಿ ವಿಶ್ವಾಸ ತೋರಿದರು. ನಂಗೂ ಬಹಳ ಖುಷಿಯಾಯ್ತು ಎಂದರು. ತುಮಕೂರ, ದಾವಣಗೇರಿಯಲ್ಲಿ ನನಗೆ ಸ್ವಾಗತ ಮಾಡಿದರು. ಎಲ್ಲ ಕಡೆ ಕಾರ್ಯಕರ್ತರು ಪ್ರೀತಿ ತೋರಿದರು. ಹಾವೇರಿ ಜಿಲ್ಲೆಯಲ್ಲಿ…

Read More

ಬೆಂಗಳೂರು:- ಕಾರಿನ ಟೈಯಲ್ ಬ್ಲಾಸ್ಟ್ ಆಗಿ ಕಾಂಪೌಂಡ್ ಗೆ ಇನೋವಾ ಕಾರು ಗುದ್ದಿದ ಘಟನೆ ಲಾಲ್ ಬಾಗ್ ರಸ್ತೆಯಲ್ಲಿ ಜರುಗಿದೆ. ಭಾರೀ ಅನಾಹುತವೊಂದು ತಪ್ಪಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ಜರುಗಿದೆ. ಲಾಲ್ ಬಾಗ್ ಕಡೆಯಿಂದ ಜಯನಗರ ಕಡೆ ಕಾರು ಚಾಲಕ ಹೋಗುತ್ತಿದ್ದ. ಇದ್ದಕ್ಕಿದ್ದಂತೆ ಕಾರಿನ ಟಯರ್ ಬ್ಲಾಸ್ಟ್ ಆಗಿದೆ ಆಗ ಕಾರನ್ನು ನಿಯಂತ್ರಿಸಲು ಹೋಗಿ ಕಾರು ಗೋಡೆಗೆ ಗುಡ್ಡಿದೆ. ಕಾರು ಗುದ್ದಿದ ರಭಸಕ್ಕೆ ಕಾಂಪೌಂಡ್ ಧ್ವಂಸವಾಗಿದೆ. ನಂತರ ಪಕ್ಕದಲ್ಲಿಯೇ ಇದ್ದ ಆಟೋ ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ವಿವಿಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Read More

ಬಿಗ್ ಬಾಸ್ ಶೋನಿಂದ ಡ್ರೋನ್ ಪ್ರತಾಪ್ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್‌ಗೆ ಕಾಲಿಡುವ ಮುನ್ನ ಡ್ರೋನ್ ಪ್ರತಾಪ್ ಸಾಕಷ್ಟು ಕಾಂಟ್ರವರ್ಸಿ, ಟ್ರೋಲ್‌ಗೆ ಗುರಿಯಾಗಿದ್ದರು. ಸಾಕಷ್ಟು ನಿಂದನೆಗೆ ಪ್ರತಾಪ್ ಒಳಗಾಗಿದ್ದರು. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಘಟಾನುಘಟಿ ಸ್ಪರ್ಧಿಗಳ ನಡುವೆ ಫಿನಾಲೆಗೆ ಹೋಗುವ ಮೂಲಕ ಠಕ್ಕರ್ ಕೊಟ್ಟಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ಮಾಹಿತಿ ಪ್ರಕಾರ, ಡ್ರೋನ್ ಪ್ರತಾಪ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಟಾಪ್ 2ನಲ್ಲಿ ಸಂಗೀತಾ, ಕಾರ್ತಿಕ್ ಇದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ ಎಂಬುದನ್ನು ಬಿಗ್ ಬಾಸ್ ಫಿನಾಲೆ ಎಪಿಸೋಡ್ ಪ್ರಸಾರವಾಗುವವರೆಗೂ ಕಾಯಬೇಕಿದೆ. ಸದ್ಯ ಪ್ರತಾಪ್ ದೊಡ್ಮನೆ ಆಟದಿಂದ ಔಟ್ ಆಗಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

Read More

ಬಳ್ಳಾರಿ:- ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದ ಬಳಿಯ ಸರ್ಕಾರಿ ಜಾಗದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆದಿದೆ. ಭಾನುವಾರ ಒಂದು ಜೆಸಿಬಿ ಯಂತ್ರದ ಸಹಾಯದಿಂದ ಮೂರು ಟ್ರ್ಯಾಕ್ಟರ್ ವಾಹನಗಳಲ್ಲಿ ಅಕ್ರಮವಾಗಿ ಮಣ್ಣು ಸಂಗ್ರಹ ಮಾಡಲಾಗುತ್ತಿತ್ತು.ಇದನ್ನು ಗಮನಿಸಿದ ಸಿರುಗುಪ್ಪ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಪೊಲೀಸರು ಗಸ್ತಿನಲ್ಲಿದ್ದಾಗ ಜೆಸಿಬಿ ವಾಹನ ಸಂಖ್ಯೆ ಕೆಎ-34, ಬಿ-0925, ಟ್ರ್ಯಾಕ್ಟರ್ ವಾಹನಗಳ ಸಂಖ್ಯೆ, ಸ್ವರಾಜ್ ಟ್ರ್ಯಾಕ್ಟರ್ ವಾಹನ ಸಂಖ್ಯೆ ಕೆಎ-34, ಟಿಎ-6322, ಇನ್ನೊಂದು ಸ್ವರಾಜ್ ಟ್ಯಾಕ್ಟರ್ ವಾಹನ ಕೆಎ-34, ಟಿಎ-7602 ಮತ್ತು ನಂಬರ್ ಪ್ಲೇಟ್ ಇಲ್ಲದ ಮಹೇಂದ್ರ ಟ್ರ್ಯಾಕ್ಟರ್ ಸಹ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸಿರುಗುಪ್ಪ ಪೊಲೀಸರು, ಠಾಣಾ ಆವರಣದಲ್ಲಿ ವಾಹನ ನಿಲ್ಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Read More

ಬೆಂಗಳೂರು:- ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರಧ್ವಜ ಹಾರಿಸಲಷ್ಟೇ ಅವಕಾಶ ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಬಹುದು. ಅದನ್ನು ಹೊರತುಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ. ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸೋದು ತಪ್ಪು. ಸೋಮವಾರ ಬೆಳಗ್ಗೆ ಡಿಸಿ ಕಚೇರಿ ಮುಂದೆ ಹಾರಿಸುತ್ತೇನೆ ಎನ್ನುತ್ತಾರೆ. ಆಗ ಅವಕಾಶ ಕೊಡಲು ಆಗುತ್ತಾ? ಇದು ಒಂದು ಕಡೆ ಅವಕಾಶ ಕೊಟ್ಟರೆ ಎಲ್ಲಾ ಕಡೆ ಕೇಳುತ್ತಾರೆ. ಇದು ತಪ್ಪು ಎಂದರು ಸ್ಥಳೀಯ ಯುವಕರು ಒಳ್ಳೆಯವರೇ, ಅವರನ್ನ ದಾರಿ ತಪ್ಪಿಸುತ್ತಿದ್ದಾರೆ. ಎಲ್ಲಾ ಯುವಕರ ಜೊತೆ ಮಾತನಾಡುತ್ತೇನೆ. ಖಾಸಗಿ ಜಾಗದಲ್ಲಿ ಅಥವಾ ದೇವಾಲಯದ ಮುಂದೆ ಹನುಮಾನ್ ಧ್ವಜ ಹಾರಿಸಲು ಅವಕಾಶ ಕೊಡೋಣ. ಆದರೆ ಸರ್ಕಾರಿ ಕಚೇರಿ ಮುಂದೆ ಬೇಡ ಎಂದು ಹೇಳಿದರು.

Read More

ಚಿಕ್ಕಬಳ್ಳಾಪುರ:- ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ನಂದಿಬೆಟ್ಟದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದೂವರೆ ತಿಂಗಳ ಬಳಿಕ ಶವ ಪತ್ತೆಯಾದ ಘಟನೆ ಜರುಗಿದೆ. ನಾರಾಯಣಸ್ವಾಮಿ (37) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ. ನಂದಿ ಗಿರಿಧಾಮದ 38ನೇ ತಿರುವಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ವಿಷಯ ತಿಳಿದ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿಯ ಬ್ಯಾಗ್‍ನಲ್ಲಿ ಆಧಾರ್ ಕಾರ್ಡ್ ಲಭ್ಯವಾಗಿದ್ದರಿಂದ ಮೃತನ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟ್ರ್ಯಾಕ್ಟರ್ ಚಾಲಕನಾಗಿದ್ದ ನಾರಾಯಣಸ್ವಾಮಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಇನ್ನೂ ಸಾಯುವುದಕ್ಕೂ ಮುನ್ನ ತಿರುಪತಿಗೆ ತೆರಳಿ ದೇವರ ದರ್ಶನ ಪಡೆದು ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ. ಕಳೆದ ಡಿ.15ರ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ತೊರೆದಿದ್ದ. ನಂತರ, ನಾನು ನಂದಿಬೆಟ್ಟದಲ್ಲಿದ್ದು ನನ್ನನ್ನ ಮರೆತುಬಿಡಿ, ನಾನು ವಿಷ ಸೇವಿಸಿ ಸಾಯುತ್ತಿದ್ದೇನೆ ಎಂದು ಮನೆಯವರಿಗೆ ವಾಯ್ಸ್ ಮೆಸೇಜ್ ಕಳಿಸಿದ್ದ ಎಂದು…

Read More

ಬೆಂಗಳೂರು:- ರಾಷ್ಟ್ರಪತಿಗೆ ಏಕವಚನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಹುದ್ದೆಯಿಂದ ಕೂಡಲೇ ವಜಾ ಮಾಡುವಂತೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ X ಮಾಡಿರುವ ಅವರು, ನಿನ್ನೆಯ ದಿನ ಚಾಮರಾಜನಗರದಲ್ಲಿ ಇದೇ ಸಿದ್ದರಾಮಯ್ಯನವರ ಸುಪುತ್ರ ಯತೀಂದ್ರ ಭಾಷಣ ಮಾಡುತ್ತಿದ್ದಾಗ ಯಾರೋ ಒಬ್ಬರು ಏಕವಚನದಲ್ಲಿ ಪ್ರಶ್ನಿಸಿದರೆಂಬ ಕಾರಣಕ್ಕೆ ಪೊಲೀಸರು ಆತನನ್ನು ಅಟ್ಟಾಡಿಸಿಕೊಂಡು ಹೋಗಿ ಬಂಧಿಸಿ ದರದರನೇ ಎಳೆದುಕೊಂಡು ಹೋದರು. ಹಾಗಿದ್ದರೆ, ರಾಷ್ಟ್ರಪತಿಗಳನ್ನೇ ಏಕವಚನದಲ್ಲಿ ಸಂಬೋಧಿಸಿದ ಈ ಮುಖ್ಯಮಂತ್ರಿಗೇನು ಶಿಕ್ಷೆ ಎಂದು ಪ್ರಶ್ನಿಸಿದ್ದಾರೆ. ಈ ಡೋಂಗೀ ಪ್ರಜಾಪ್ರಭುತ್ವವಾದಿಯ ಅಸಲಿ ಮುಖ ಕಳಚಿಬಿದ್ದಿದೆ. ಒಂದು ಕ್ಷಣವೂ ಮುಖ್ಯಮಂತ್ರಿ ಪದವಿಯಲ್ಲಿ ಇರಲು ಅವರು ಅರ್ಹರಲ್ಲ. ಕೂಡಲೇ ತಾವೆಸಗಿರುವ ಅಪಚಾರಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಅಥವಾ ಮಾನ್ಯ ರಾಜ್ಯಪಾಲರೇ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕಿತ್ತೆಸೆಯಬೇಕು. ಇದು ನನ್ನ ಆಗ್ರಹ. ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂದು ದಾಸರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಆಚಾರ ಹತ್ತಿರಕ್ಕೂ ಸುಳಿಯದ ವಿಚಾರ. ಶೋಷಿತ ಬುಡಕಟ್ಟು ಸಮುದಾಯದಿಂದ ಬಂದ ದೇಶದ ಮೊತ್ತ ಮೊದಲ…

Read More