Author: AIN Author

ಹುಬ್ಬಳ್ಳಿ:- ಕರ್ನಾಟಕದಲ್ಲಿ 2018ರಿಂದ 2023ರ ಅವಧಿಯಲ್ಲಿ ಒಟ್ಟು 1,331 ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಗಿದ್ದು, ಈ ಪೈಕಿ 775 ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪೋಷಕರು 103 ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ಅಲ್ಲದೆ, ರಾಜ್ಯದ ದತ್ತು ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ತಜ್ಞರು ಹೇಳುವ ಪ್ರಕಾರ, ಈ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳೇ ಇರಲು ಪ್ರಮುಖ ಕಾರಣವೆಂದರೆ ಸಾಮಾಜಿಕ ಪೂರ್ವಾಗ್ರಹ ಮತ್ತು ಪೋಷಕರು ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಆದ್ಯತೆ ಹೆಚ್ಚು ನೀಡುವುದು. ದತ್ತು ಸ್ವೀಕಾರದಲ್ಲಿ ದೇಶದಲ್ಲೇ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಮಹಾರಾಷ್ಟ್ರವು ದೇಶದಲ್ಲಿ ಅತಿ ಹೆಚ್ಚು ಮಕ್ಕಳನ್ನು ದತ್ತು ನೀಡಿದೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ನಂತರದ ಸ್ಥಾನದಲ್ಲಿದೆ. ಮಕ್ಕಳ ದತ್ತು ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ ಪ್ರಕಾರ, 2018 ಮತ್ತು 2023 ರ ನಡುವೆ 18,177 ಮಕ್ಕಳು ಭಾರತ ಮತ್ತು ವಿದೇಶಗಳಲ್ಲಿ ಹೊಸ ಕುಟುಂಬವನ್ನು ಸೇರಿದ್ದಾರೆ. ಈ ಪೈಕಿ…

Read More

ರಷ್ಯಾ: ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ‘ರಷ್ಯನ್ ವಿದ್ಯಾರ್ಥಿ ದಿನ’ದ ಪ್ರಯುಕ್ತ ಕಲಿನಿನ್‌ಗ್ರಾಡ್ ಪ್ರದೇಶದ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್, ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿದೆ ಎಂದರು. ಪ್ರಸ್ತುತ ಪ್ರಧಾನ ಮಂತ್ರಿಯ ನಾಯಕತ್ವದ ಗುಣಗಳಿಂದಾಗಿ ಭಾರತವು ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಯ ದರವನ್ನು ಹೊಂದಿದೆ ಎಂದು ಪುಟಿನ್ ಹೇಳಿದ್ದಾಗಿ ರಷ್ಯಾ ಮೂಲದ ಮಾಧ್ಯಮ ನೆಟ್ವರ್ಕ್ ರಷ್ಯಾ ಟುಡೆ (ಆರ್ಟಿ) ವರದಿ ಮಾಡಿದೆ. ಭಾರತವು ವಿಶ್ವದಲ್ಲೇ ಅತ್ಯಧಿಕ ಆರ್ಥಿಕ ಅಭಿವೃದ್ಧಿ ಮತ್ತು ಬೆಳವಣಿಗೆಯ ದರವನ್ನು ಹೊಂದಿದೆ ಮತ್ತು ಅದು ಕೂಡ ಪ್ರಸ್ತುತ ಪ್ರಧಾನ ಮಂತ್ರಿಯ ನಾಯಕತ್ವದ ಗುಣಗಳಿಂದಾಗಿ. ಅವರ ನಾಯಕತ್ವದಲ್ಲಿ ಭಾರತವು ಅಂತಹ ವೇಗವನ್ನು ತಲುಪಿತು ಎಂದು ಅವರು ಪ್ರಧಾನಿ ಮೋದಿಯನ್ನು ಶ್ಲಾಘಿಸಿದರು. ಪ್ರಧಾನಿ ಮೋದಿಯವರ ನೀತಿಗಳನ್ನು ಮೆಚ್ಚಿದ ಪುಟಿನ್, ಭಾರತ ಮತ್ತು ರಷ್ಯಾ ನಡುವೆ ನಿರಂತರವಾಗಿ ಬೆಳೆಯುತ್ತಿರುವ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ಭಾರತ…

Read More

ಭಾರತದಲ್ಲಿ ಚಿನ್ನದ ದರ ಇಳಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,300 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 29ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,700 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,950 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 760 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,700 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,950 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 730…

Read More

ಹಾವು-ಮುಂಗುಸಿ ಆ ಜನ್ಮದ ಶತ್ರುಗಳೆಂದೇ ಹೆಸರುವಾಸಿಯಾಗಿವೆ. ಉಭಯ ಜೀವಿಗಳು ಯಾವುದೇ ಕ್ಷಣದಲ್ಲಿ ಎದುರು-ಬದುರಾದರೆ ಸಾಕು ಅಲ್ಲೊಂದು ಯುದ್ಧ ನಡೆದೇ ತೀರುತ್ತದೆ. ಅಷ್ಟಕ್ಕೂ ಹಾವು-ಮುಂಗುಸಿ ನಡುವೆ ಇಷ್ಟೊಂದು ದ್ವೇಷ ಯಾಕೆ? ಇಬ್ಬರ ಮಧ್ಯೆ ಶಾಶ್ವತ ಪೈಪೋಟಿ ಏಕೆ? ಒಬ್ಬರನ್ನೊಬ್ಬರು ನೋಡಿ ಏಕೆ ಆಕ್ರಮಣ ಮಾಡುತ್ತವೆ? ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಅತ್ಯಂತ ಸರಳ ಉತ್ತರವೆಂದರೆ ಕೆಲವು ಅಧ್ಯಯನಗಳ ಪ್ರಕಾರ, ಹಾವುಗಳು ಮತ್ತು ಮುಂಗುಸಿಗಳು ನೈಸರ್ಗಿಕ ಶತ್ರುಗಳು ಎಂದು ಹೇಳಲಾಗಿದೆ. ಸರ್ವೈವಲ್ ಆಫ್ ಫಿಟ್ಟೆಸ್ಟ್ ಎಂಬ ಚಾರ್ಲ್ಸ್​ ಡಾರ್ವಿನ್​ ಸಿದ್ಧಾಂತದ ಪ್ರಕಾರ ತಮ್ಮ ಪ್ರಾಣ ಉಳಿಸಿಕೊಳ್ಳಲು ಉಭಯ ಜೀವಿಗಳು ಪರಸ್ಪರ ಆಕ್ರಮಣ ಮಾಡುತ್ತವೆ. ಹಾವು ಮುಂಗುಸಿಯನ್ನು ಕೊಂದು ಬದುಕಲು ಬಯಸುತ್ತದೆ. ಅಂತೆಯೇ, ಮುಂಗುಸಿಯು ಹಾವನ್ನು ಕೊಲ್ಲಲು ಬಯಸುತ್ತದೆ. ಮತ್ತೊಂದು ಉತ್ತರ ಪ್ರಕಾರ ಮುಂಗುಸಿಯ ಮರಿಗಳು ಹೆಚ್ಚಾಗಿ ಹಾವಿಗೆ ಬಲಿಯಾಗುತ್ತವೆ ಎಂದು ಹೇಳಲಾಗಿದೆ. ಹಾವು ಹೆಚ್ಚಾಗಿ ಮುಂಗುಸಿಯ ಮರಿಗಳನ್ನು ತಿನ್ನುತ್ತವೆ. ಆದ್ದರಿಂದ, ಮುಂಗುಸಿಯು ತನ್ನ ಮರಿಗಳನ್ನು ರಕ್ಷಿಸಲು ಹಾವಿನ ಮೇಲೆ…

Read More

ತೆಂಗಿನ ಎಣ್ಣೆಯ ಆರೋಗ್ಯ ಪ್ರಯೋಜನಗಳು ಹಿಂದೆ ಯೋಚಿಸಿದಷ್ಟು ಉತ್ತಮವಾಗಿಲ್ಲ ಎಂದು ಕೆಲವರು ವಾದಿಸುತ್ತಾರೆ. ಇದಕ್ಕೆ ಕಾರಣಗಳೇನು ತಿಳಿಯೋಣ. ಹೆಚ್ಚಿನ ಕೊಬ್ಬು ತೆಂಗಿನ ಎಣ್ಣೆಯು ಹೆಚ್ಚಿನ ಮಟ್ಟದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ದೇಹದಲ್ಲಿ LDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಕೊಬ್ಬಿನಾಮ್ಲಗಳ ಉತ್ತಮ ಮೂಲ ಒಮೆಗಾ -3 ಮತ್ತು ಒಮೆಗಾ -6 ನಂತಹ ಅಗತ್ಯ ಕೊಬ್ಬಿನಾಮ್ಲಗಳು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಅಗತ್ಯ. ಆದರೆ ಅವುಗಳು ಗಮನಾರ್ಹ ಪ್ರಮಾಣದಲ್ಲಿ ತೆಂಗಿನ ಎಣ್ಣೆಯಲ್ಲಿ ಕಂಡುಬರುವುದಿಲ್ಲ. ಆದ್ದರಿಂದ ಆರೋಗ್ಯಕರ ಕೊಬ್ಬಿನ ದೈನಂದಿನ ಸೇವನೆಗೆ ತೆಂಗಿನ ಎಣ್ಣೆಯನ್ನು ಮಾತ್ರ ಅವಲಂಬಿಸುವುದರಿಂದ ಕೊರತೆಯಾಗಬಹುದು. ಹೆಚ್ಚಿನ ಕ್ಯಾಲೋರಿ ತೆಂಗಿನ ಎಣ್ಣೆಯನ್ನು ಇತರ ಅಡುಗೆ ಎಣ್ಣೆಗಳಿಗೆ ‘ಆರೋಗ್ಯಕರ’ ಎಂದೇ ಹೇಳಲಾಗುತ್ತದೆ. ಆದರೆ ಇದರಲ್ಲಿ ಕೊಬ್ಬಿನಂಶ ಹೆಚ್ಚಾಗಿದೆ. ಇದು ಹೆಚ್ಚಿನ ಸಂಖ್ಯೆಯ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಅಗತ್ಯ ಪೋಷಕಾಂಶಗಳ ಕೊರತೆ ತೆಂಗಿನ ಎಣ್ಣೆಯು ವಿಟಮಿನ್‌ ಇ ಮತ್ತು ಲಾರಿಕ್ ಆಮ್ಲದಂತಹ ಕೆಲವು ಪ್ರಯೋಜನಕಾರಿ ಪೋಷಕಾಂಶಗಳನ್ನು ಹೊಂದಿದೆ. ಆದರೆ ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅನೇಕ…

Read More

ಕೆಲವರಲ್ಲಿ ಅತಿಯಾಗಿ ಟೀ ಕುಡಿದರೆ ಚರ್ಮ ಕಪ್ಪಾಗುತ್ತದೆ ಎಂಬ ನಂಬಿಕೆ ಇದು. ಈ ಬಗ್ಗೆ ಸಂಶೋಧನೆ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಚಹಾ ಕುಡಿಯುವಯದರಿಂದ ಚರ್ಮದ ಬಣ್ಣದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲವಂತೆ. ಚಹಾ ಚರ್ಮವನ್ನು ಕಪ್ಪಾಗಿಸುತ್ತದೆ ಎಂಬುದು ತಪ್ಪು ವಿಚಾರ. ಆದರೆ ಅತಿಯಾಗಿ ಟೀ ಕುಡಿಯುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ತುಟಿ ಮತ್ತು ಚರ್ಮ ನಿರ್ಜಲೀಕರಣದಿಂದ ಮಂದವಾಗಿ ಕಾಣಬಹುದು. ಆದರೇ ಟೀಯನ್ನು ಅತಿಯಾಗಿ ಸೇವಿಸಬಾರದು. ಯಾಕೆಂದರೆ ಇದು ದೇಹದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮಗೆ ಹಲವು ಸಮಸ್ಯೆಗಳು ಕಾಡುತ್ತದೆಯಂತೆ. ಹಾಗಾಗಿ ನೀವು ಚಹಾ ಕುಡಿದರೆ ಸಾಕಷ್ಟು ನೀರನ್ನು ಸೇವಿಸಿ.

Read More

ಹರಿಯಾಣ: ದೆಹಲಿಯ ಖ್ಯಾತ ಎಸಿಪಿ ಪುತ್ರನನ್ನು ಮದುವೆಗೆಂದು ಕೆರದುಕೊಂಡು ಹೋಗಿ ಆತನ ಸ್ನೇಹಿತರೇ (Friends)  ಕೊಲೆ ಮಾಡಿರುವ ಘಟನೆ ಸೋನೆಪತ್‌ನಲ್ಲಿ (Sonepat)  ನಡೆದಿದೆ. ಲಕ್ಷ್ಯ ಚೌಹಾಣ್ (24) ಮೃತ ವ್ಯಕ್ತಿ. ದೆಹಲಿಯ ಸಹಾಯಕ ಪೊಲೀಸ್ ಆಯುಕ್ತ ಯಶ್‌ಪಾಲ್ ಸಿಂಗ್ (Assistant Commissioner of Police)  ಅವರ ಪುತ್ರನಾದ ಚೌಹಾಣ್ ತೀಸ್ ಹಜಾರಿ ನ್ಯಾಯಾಲಯದ ವಕೀಲರಾಗಿದ್ದರು. ಲಕ್ಷ್ಯ ಸ್ನೇಹಿತರಾದ, ವಿಕಾಸ್ ಭಾರದ್ವಾಜ್ ಮತ್ತು ಸಹಚರ ಅಭಿಷೇಕ್ ಕಾಲುವೆಗೆ ತಳ್ಳಿ ಕೊಲೆ ಮಾಡಿ ಪರಾರಿಯಾಗಿದ್ದರು.  ನಡೆದಿದ್ದೇನು..?: ಸೋಮವಾರದಂದು ಲಕ್ಷ್ಯ ಅವರು ತಮ್ಮ ಸ್ನೇಹಿತರೊಂದಿಗೆ ಸೋನೆಪತ್‌ನಲ್ಲಿ ಮದುವೆಗೆಂದು ಅವರ ಸ್ನೇಹಿತರ ಜೊತೆ ಹೋಗಿದ್ದರು. ಆದರೆ ಅವರು ಮನೆಗೆ ಬಾರದ ಕಾರಣ ತಂದೆ ಯಶ್‌ಪಾಲ್ ಸಿಂಗ್ ಅವರು ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ದೂರು ದಾಖಲಿಸಿಕೊಂಡು ಶೋಧ ಕಾರ್ಯ ನಡೆಸಿದಾಗ ಚೌಹನ್ ಅವರ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೊಲೆಗೆ ಕಾರಣವೇನು..?: ಚೌಹಣ್ ಅವರು ಭಾರದ್ವಾಜ್ ಬಳಿ ಸಾಲ ಪಡೆದಿದ್ದು, ಹಣವನ್ನು ಮರುಪಾವತಿಸಿರಲಿಲ್ಲ. ಇದನ್ನು…

Read More

ಸಾಮಾನ್ಯವಾಗಿ ಮನೆಗಳಲ್ಲಿ ಮನೆಯವರೆಲ್ಲಾ ಒಂದೇ ಸಾಬೂನನ್ನು ಬಳಸುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಅಭ್ಯಾಸವಾಗಿದೆ. ಆದರೆ ಇತ್ತೀಚೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ, ವೈಯಕ್ತಿಕ ನೈರ್ಮಲ್ಯದ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಗಳು ತಮ್ಮದೇ ಆದ ಸಾಬೂನನ್ನು ಬಳಸಲು ಇಷ್ಟಪಡುತ್ತಾರೆ. ತಮ್ಮ ಸಾಬೂನನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ​ಈ ಅಭ್ಯಾಸ ಆರೋಗ್ಯಕರವಲ್ಲ​ ಮನೆಯವರೆಲ್ಲಾ ಒಂದೇ ಸಾಬೂನನ್ನು ಬಳಸುವುದು ಉತ್ತಮ ಅಭ್ಯಾಸವಲ್ಲ ಎಂದು ಚರ್ಮ ತಜ್ಞರು ಎಚ್ಚರಿಸುತ್ತಾರೆ. ಸಾಬೂನುಗಳಿಂದ ಹೆಚ್ಚಿನ ಚರ್ಮ ರೋಗಗಳು ಹರಡಲು ಪ್ರಾರಂಭಿಸಬಹುದು, ಇದು ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು ಎಂದು ಅವರು ಹೇಳುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಗುಣಪಡಿಸಬಹುದಾದರೂ, ಈ ಸೋಂಕುಗಳು ಹಾನಿಕಾರಕವಾಗಿ ವಿಕಸನಗೊಳ್ಳುವ ಸಾಧ್ಯತೆ ಇದೆ. ​ಬಳಸುವ ಮೊದಲು ಸೋಪ್ ಅನ್ನು ತೊಳೆಯಿರಿ​ ನೀವು ಸ್ನಾನಕ್ಕಾದರೂ ಬಳಸಿ ಅಥವಾ ಬರೀ ಕೈ ತೊಳೆಯಲಾದರೂ ಇತರರ ಸೋಪು ಬಳಸಿದರೂ ಸೂಕ್ಷ್ಮ ಜೀವಿಗಳ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಸಾಬೂನಿನಲ್ಲಿ ಇರುವ ಜಿಗುಟಾದ ಪದರವು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಂಭಾವ್ಯ ವಾತಾವರಣವಾಗಿದೆ. ಆದ್ದರಿಂದ, ಸೋಪ್ ಅನ್ನು ಇತರರೊಂದಿಗೆ…

Read More

ಚಾಮರಾಜನಗರ: ರಾಜ್ಯ ಸರ್ಕಾರವು ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ವರ್ಷವಿಡಿ ನಾಡು ನುಡಿ ಕುರಿತು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ರೇಷ್ಮೆ, ಪಶುಸಂಗೋಪನೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ಅವರು ತಿಳಿಸಿದರು. ನಗರದ ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಖ್ಯಾತ ಕನ್ನಡ ಚಲನಚಿತ್ರ ಗಾಯಕರು,ಸಂಗೀತ ನಿರ್ದೇಶಕರ ಸಂಗೀತೋತ್ಸವ ಹಾಗೂ ಹಾಸ್ಯ ಕಲಾವಿದರ ಹಾಸ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯವು ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ್ದು ಇದರ ಸಂಭ್ರಮವನ್ನು ರಾಜ್ಯ ಸರ್ಕಾರ ವರ್ಷವಿಡೀ ಅನೇಕ ಕನ್ನಡ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ.ಮುಖ್ಯಮಂತ್ರಿಗಳು ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮ ಅದ್ದೂರಿ ಆಚರಣೆಗೆ ಘೋಷಣೆ ಮಾಡಿದ್ದು ಇದರ ಅಂಗವಾಗಿ ರಾಜ್ಯದ ಎಲ್ಲೆಡೆ ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಇದೇ ಆಗಸ್ಟ್ 8 ರಂದು ಜಿಲ್ಲೆಗೆ ಕನ್ನಡ ರಥ ಆಗಮಿಸಲಿದ್ದು ಎಲ್ಲಾ ತಾಲೂಕುಗಳಲ್ಲಿ ಸಂಚರಿಸಲಿದೆ.ಕನ್ನಡದ ಬಗೆಗಿನ ಪ್ರೇಮ,ನಾಡು,ನುಡಿ ಜಾಗೃತಿ ಮೂಡಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು…

Read More

ಯಾದಗಿರಿ:- ಮಂಡ್ಯದಲ್ಲಿ ಹನುಮಧ್ವಜ ತೆರವು ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಕೆರಗೋಡು ಗ್ರಾಮ ಪಂಚಾಯಿತಿ ಸದಸ್ಯರು 108 ಅಡಿಯ ಧ್ವಜಸ್ಥಂಭದಲ್ಲಿ ಹನುಮಧ್ವಜ ಹಾರಿಸಲು ತೀರ್ಮಾನಿಸಿದ್ದರು. ಪೊಲೀಸರು ನುಗ್ಗಿ ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್ ಮಾಡಿ ಧ್ವಜ ಇಳಿಸಿದ್ದಾರೆ. ಸರ್ಕಾರ ಪೊಲೀಸರಿಂದ ರಾಜ್ಯದಲ್ಲಿ ಗೂಂಡಾಗಿರಿ ನಡೆಸುತ್ತಿದೆ. ಅಮಾಯಕರ ಮೇಲೆ ಇವತ್ತು ಲಾಠಿ ಚಾರ್ಜ್ ಮಾಡಿದ್ದಾರೆ ಇದು ಖಂಡನೀಯ ಎಂದಿದ್ದಾರೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಪ್ರೀತಂ ಗೌಡ ಅವರು ಭೇಟಿ ನೀಡಿದಾಗ ಮತ್ತೊಮ್ಮೆ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಅವರನ್ನು ಅರೆಸ್ಟ್ ಮಾಡಿಸಿರೋದು ಖಂಡನೀಯ. ಈ ಘಟನೆ ಖಂಡಿಸಿ ನಾಳೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮನವಿ ಕೊಡಲಿದ್ದೇವೆ. ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಕೈಗೊಳ್ಳಬೇಕು ಎಂಬುದನ್ನ ಚರ್ಚಿಸುತ್ತೇವೆ ಎಂದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಪೊಲೀಸರು ಹೋಗಿ ಏಕಾಏಕಿ ಲಾಠಿ…

Read More