Author: AIN Author

ಹೈದರಾಬಾದ್: ಇಲ್ಲಿ ನಡೆಯುತ್ತಿರುವ ಭಾರತದ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ 28 ರನ್‌ಗಳ ಜಯ ಸಾಧಿಸಿತು. ಟಾಮ್‌ ಹಾರ್ಟ್ಲಿ 7 ವಿಕೆಟ್‌ ಕಬಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 231 ರನ್‌ ಗುರಿ ನೀಡಿದ್ದ ಇಂಗ್ಲೆಂಡ್‌ 202 ರನ್‌ಗಳಿಗೆ ಆಲೌಟ್‌ ಮಾಡಿತು. 5 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿತು. ಟೀಂ ಇಂಡಿಯಾದ ರೋಹಿತ್‌ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್‌ ಉತ್ತಮ ಆರಂಭ ನೀಡಲು ಯತ್ನಿಸಿದರು. ರೋಹಿತ್‌ 39 ರನ್‌ಗಳಿಸಿ ಔಟಾದರು. ನಂತರ ಬಂದ ಯಾವೊಬ್ಬ ಬ್ಯಾಟರ್‌ ಕೂಡ ಉತ್ತಮ ರನ್‌ ಕಲೆ ಹಾಕುವಲ್ಲಿ ವಿಫಲರಾದರು. 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಒಲೀ ಪೊಪ್‌ ಅಮೋಘ ಬ್ಯಾಟಿಂಗ್‌ ಮಾಡಿದರು. 196 ರನ್‌ ಗಳಿಸಿದ ಅವರು ಕೇವಲ 4 ರನ್‌ಗಳಿಂದ ದ್ವಿಶತಕ ವಂಚಿತರಾದರು. ಇಂಗ್ಲೆಂಡ್‌ ಬೌಲರ್‌ ಟಾಮ್‌ ಹಾರ್ಟ್ಲಿ 7 ವಿಕೆಟ್‌ ಉರುಳಿಸಿ ತಂಡದ ಗೆಲುವಿಗೆ ಕಾರಣರಾದರು. ಸಂಕ್ಷಿಪ್ತ ಸ್ಕೋರ್‌ ಇಂಗ್ಲೆಂಡ್‌: 246 & 420 ಭಾರತ: 436…

Read More

ಬಾಗಲಕೋಟೆ: ಶಾಲಾ ಬಸ್ ಹಾಗೂ ಟ್ಯಾಕ್ಟರ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿರುವ ಘಟನೆ ಬಾಗಲಕೋಟೆಯ ಜಿಲ್ಲೆ ಜಮಖಂಡಿ ತಾಲ್ಲೂಕಿನ ಅಲಗೂರು ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ನಡೆದ ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು  ಸಾವನ್ನಪ್ಪಿದ್ದು, 8ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸಾಗರ ಕಡಕೋಳ (17), ಶ್ವೇತಾ (13), ಗೋವಿಂದ(13), ಬಸವರಾಜ (17) ಮೃತ ವಿದ್ಯಾರ್ಥಿಗಳು. https://ainlivenews.com/are-you-thinking-of-buying-a-home-low-interest-home-loan-available-in-these-banks/ ಮೃತರು ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ಇಬ್ಬರು ಪಿಯುಸಿ, ಮತ್ತಿಬ್ಬರು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಭಾನುವಾರ ಸ್ನೇಹಿತರೊಟ್ಟಿಗೆ ಕಾರ್ಯಕ್ರಮ ಮುಗಿಸಿಕೊಂಡು ಕವಟಗಿ ಗ್ರಾಮದ ಕಡೆಗೆ ಸ್ಕೂಲ್‌ಬಸ್ ಹೊರಟಿತ್ತು. ರಾತ್ರಿ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸದ್ಯ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Read More

ಅಂಡರ್​-19 ವಿಶ್ವಕಪ್​ ಟೂರ್ನಿಯ ಮೂರನೇ ಪಂದ್ಯದಲ್ಲಿ ಮತ್ತೆ ಘರ್ಜಿಸಿದ ಭಾರತ ಯಂಗ್ ಟೈಗರ್ಸ್ ಅಮೆರಿಕ ತಂಡವನ್ನು ಉಡೀಸ್ ಮಾಡಿದೆ. ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಿದ ಭಾರತ 201 ರನ್​ಗಳ ಬೃಹತ್ ಜಯ ಸಾಧಿಸಿದೆ. ಇದರೊಂದಿಗೆ ಲೀಗ್ ಸುತ್ತಿನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಸೂಪರ್ ಸಿಕ್ಸ್ ಹಂತಕ್ಕೆ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 326 ರನ್ ಗಳಿಸಿತ್ತು. ಅರ್ಶಿನ್ ಕುಲಕರ್ಣಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 108 ರನ್ ಸಿಡಿಸಿದರು. ಮುಶೀರ್ 73, ನಾಯಕ ಉದಯ್ ಸಾಹರನ್ 35, ಪ್ರಿಯಾಂಶು ಮೊಲಿಯಾ 27, ಸಚಿನ್ ದಾಸ್ 20 ರನ್ ಗಳಿಸಿದರು. 327 ರನ್​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಅಮೆರಿಕ ತಂಡ 8 ವಿಕೆಟ್ ಕಳೆದುಕೊಂಡು ಕೇವಲ 125 ರನ್​ ಗಳಿಸಲಷ್ಟೇ ಶಕ್ತವಾಯಿತು. ಅಮೆರಿಕ ಬ್ಯಾಟರ್ ಉತ್ಕರ್ಷ್ ಶ್ರೀವಾಸ್ತವ 40 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್ ಸಹ ಉತ್ತಮ ಪ್ರದರ್ಶನ…

Read More

ಕ್ಯಾನ್ಬೆರಾ: ವಿಶ್ವ ಟೆನಿಸ್‌ನ ನಂ.1 ಡಬಲ್ಸ್‌ ಆಟಗಾರ, ಕನ್ನಡಿಗ ರೋಹನ್‌ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್‌ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ (Australian Open 2024) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರೋಹನ್ ಬೋಪಣ್ಣ (RohanBopanna) ಮತ್ತು ಮ್ಯಾಥ್ಯೂ ಎಬ್ಡೆನ್ (Matthew Ebden) ಜೋಡಿಯು ಶನಿವಾರ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸ್ಸೋರಿ ಜೋಡಿಯನ್ನು ಮಣಿಸಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಚಾಂಪಿಯನ್‌ ಆಗಿದ್ದಾರೆ. ಆ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 1 ಗಂಟೆ 39 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಟಲಿ ಜೋಡಿಯು ವಿರುದ್ಧ ಭಾರತ ಮತ್ತು ಆಸ್ಟ್ರೇಲಿಯಾ ಜೋಡಿಯು 7-6 (0), 7-5 ಅಂತರದಲ್ಲಿ ಜಯ ಸಾಧಿಸಿತು. ಬೋಪಣ್ಣ ಪುರುಷರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫೈನಲ್‌ ತಲುಪಲು ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯನ್ ಜೊತೆಗಾರ ಎಬ್ಡೆನ್, ಚೀನಾದ ಜಾಂಗ್ ಝಿಜೆನ್ ಮತ್ತು ಜೆಕ್ ಗಣರಾಜ್ಯದ ತೋಮಸ್ ಮಚಾಕ್ ಜೋಡಿಯನ್ನು ಕೇವಲ ಎರಡು ಗಂಟೆಗಳಲ್ಲಿ 6-3,…

Read More

ಬಿಗ್‌ಬಾಸ್‌ (Bigg Boss Kannada) ಕನ್ನಡ 10ನೇ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್‌ (Karthik) ಅವರು ವಿನ್ನರ್ (Winner) ಆಗಿ ಹೊರಹೊಮ್ಮಿದ್ದಾರೆ. ಮೊದಲಿನಿಂದಲೂ ಆತ್ಮವಿಶ್ವಾಸದಿಂದಲೇ ಇದ್ದ ಕಾರ್ತಿಕ್ ಅವರು ಕೊನೆಯ ಕ್ಷಣದಲ್ಲಿ ಟೆನ್ಷನ್‌ಗೆ ಒಳಗಾದಂತೆ ಕಾಣಿಸುತ್ತಿದ್ದರು.  ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್‌ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು. ಮುಖ್ಯವೇದಿಕೆಯಲ್ಲಿ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ಕಿಚ್ಚ ಘೋಷಿಸಿದರು. ನಂತರ ವೇದಿಕೆಯ ಮೇಲೆ ಉಳಿದಿದ್ದು ಕಾರ್ತಿಕ್ ಮತ್ತು ಡ್ರೋಣ್ ಪ್ರತಾಪ್. ಕಿಚ್ಚನ ಒಂದು ಕೈಯಲ್ಲಿ ಕಾರ್ತಿಕ್ ಕೈ ಮತ್ತೊಂದು ಕೈಯಲ್ಲಿ ಪ್ರತಾಪ್‌ ಕೈ ಇತ್ತು. ಆ ಟೆನ್ಷನ್‌ ಅನ್ನು ಮಾತುಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಡೀ ಕರ್ನಾಟಕವೇ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಗಳಿಗೆ ಅದು. ಇಬ್ಬರ ಕೈಯಲ್ಲಿ ಕಿಚ್ಚ…

Read More

ಮಂಗಳೂರು: ವೇಣೂರು ಬಳಿ ಭೀಕರ ಸ್ಪೋಟ ಪ್ರಕರಣ ಸಂಬಂಧಿಸಿದಂತೆ ಆರೋಪಿ ಸಯ್ಯದ್ ಬಷೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವೇಣೂರಿನಿಂದ ಪರಾರಿಯಾಗುತ್ತಿದ್ದ ಬಶೀರ್‌ನನ್ನು ಪೊಲಿಸರು ಸುಳ್ಯದಲ್ಲಿ ಅರೆಸ್ಟ್ ಮಾಡಿದ್ದಾರೆ. ಸದ್ಯ ಬಶೀ‌ರ್ ಪೊಲೀಸರ ವಶದಲ್ಲಿದ್ದು, ಅಜ್ಞಾತ ಸ್ಥಳದಲ್ಲಿ ಆತನನ್ನು ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆ ಬಳಿಕ ನಿಜ ಸಂಗತಿ ಏನೆಂಬುದು ಬಯಲಾಗಲಿದೆ. ಏನಿದು ಪಟಾಕಿ ಸ್ಫೋಟ ಪ್ರಕರಣ ? ನಿನ್ನೆ ಬೆಳ್ತಂಗಡಿ ತಾಲೂಕಿನ ವೇಣೂರು ಗೋಳಿಯಂಗಡಿ ಸಮೀಪದ ಪಟಾಕಿ ತಯಾರಿಕ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಐದು ಬಾರಿ ಸ್ಫೋಟ ಸಂಭವಿಸಿದ್ದರಿಂದ ಮೂವರು ಕಾರ್ಮಿಕರು ದುರ್ಮಣಕ್ಕೀಡಾಗಿದ್ದರು. ಆದ್ರೆ ಈ ಸ್ಫೋಟದ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಹೀಗಾಗಿ ಪೊಲೀಸರು ಸಮಗ್ರ ತನಿಖೆಗೆ ಇಳಿದಿದ್ದರು, ಪಟಾಕಿ ತಯಾರಿಕ ಘಟಕದ ಮಾಲೀಕ ಸಯ್ಯದ್ ಬಶೀರ್‌ನನ್ನು ವಿಚಾರಣೆ ನಡೆಸಲು ಮುಂದಾದರು. ಆದರೆ ಬಶೀರ್ ಪರಾರಿಯಾಗುತ್ತಿದ್ದ ವಿಚಾರ ತಿಳಿದು ಆತನನ್ನು ಪೊಲೀಸರು ಬಂಧಿಸಿದ್ದಾರೆ. 50 ಸೆಂಟ್ಸ್ ಜಾಗದಲ್ಲಿ ಪಟಾಕಿ ಉತ್ಪಾದನೆಗೆ ಲೈಸೆನ್ಸ್‌ ಪಡೆದಿದ್ದ ಬಶೀರ್…

Read More

ಮಾಲ್ಡೀವ್ಸ್ ಸರ್ಕಾರದ “ಭಾರತ ವಿರೋಧಿ ನಿಲುವು” ದ್ವೀಪ ರಾಷ್ಟ್ರದ ಅಭಿವೃದ್ಧಿಗೆ ಹಾನಿಕಾರಕವಾಗ ಬಹುದು ಎಂದು ಎರಡು ಪ್ರಮುಖ ವಿರೋಧ ಪಕ್ಷಗಳು ಎಚ್ಚರಿಸಿವೆ. ಚೀನಾದ ಹಡಗಿಗೆ ತಮ್ಮ ದೇಶದ ಜಲ ಪ್ರದೇಶಗಳಲ್ಲಿ ತಂಗಲು ಅವಕಾಶ ಕೊಟ್ಟಿದ್ದಕ್ಕೂ ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಮಾಲ್ಡೀವ್ಸ್‌ – ಭಾರತ 2 ನೆರೆಹೊರೆಯ ದೇಶಗಳಾಗಿದ್ದು, ಇವರಿಬ್ಬರ ನಡುವಿನ ಸಂಬಂಧಗಳು ಹಳಸುತ್ತಿದೆ. ಹಾಗೂ, ಚೀನಾದ ಕಡೆಗೆ ಮಾಲ್ಡೀವ್ಸ್‌ನ ಬಾಂಧವ್ಯ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಂಭಾವ್ಯ ಮಹತ್ವದ ಭೌಗೋಳಿಕ ರಾಜಕೀಯ ಮತ್ತು ಮಿಲಿಟರಿ ಬದಲಾವಣೆಯ ನಡುವೆ 2 ವಿರೋಧ ಪಕ್ಷಗಳು ಮಾಲ್ಡೀವ್ಸ್‌ ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿವೆ.  ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು 2023 ರ ಚುನಾವಣೆಯನ್ನು ಭಾರತ ವಿರೋಧಿ ಹಾಗೂ ಮೋದಿ ವಿರೋಧಿ ನಿರೂಪಣೆಯ ಮೇಲೆ ಗೆದ್ದಿದ್ದಾರೆ. ಆದರೆ, ಇತರೆ ಪಕ್ಷಗಳು ಭಾರತದ ಪರ ನೀತಿಯನ್ನು ಅನುಸರಿಸುತ್ತಿದ್ದರು.  MDP ಮತ್ತು ಡೆಮೋಕ್ರಾಟ್‌ ಎರಡೂ ಪಕ್ಷಗಳು ಯಾವುದೇ ಅಭಿವೃದ್ಧಿ ಪಾಲುದಾರರನ್ನು ದೂರವಿಡುವುದು, ಮತ್ತು ವಿಶೇಷವಾಗಿ ದೇಶದ ದೀರ್ಘಾವಧಿಯ ಮಿತ್ರ ರಾಷ್ಟ್ರದ…

Read More

ಕಲಬುರ್ಗಿ:- ರಾಷ್ಟ್ರಪತಿ ಬಗ್ಗೆ ಸಿಎಂ ಸಿದ್ರಾಮಯ್ಯ ಏಕವಚನದಲ್ಲಿ ಮಾತಾಡಬಾರ್ದು ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ವಿಜಯೇಂದ್ರ ಈ ರೀತಿಯ ಯಾರು ನಿರೀಕ್ಷೆ ಮಾಡಲ್ಲ ಮುಖ್ಯಮಂತ್ರಿ ಬಾಯಿಂದ ಈ ಪದ ಯಾಕೆ ಹೊರಡ್ತು ಅನ್ನೋದು ಆಶ್ಚರ್ಯ ಅಂದ್ರು. ರಾಷ್ಟ್ರಪತಿ ಸ್ಥಾನಕ್ಕೆ ಸಿದ್ದರಾಮಯ್ಯ ಅಗೌರವ ತೋರಿಸ್ತಿದ್ದಾರೆ ಇದೊಂದು ಅಕ್ಷಮ್ಯ ಅಪರಾಧ. ಈ ವಿಚಾರ ಸಿಎಂ ಅಷ್ಟೇ ಅಲ್ಲ ಕಾಂಗ್ರೆಸ್ ನ ಎಲ್ಲರಿಗೂ ನೋವು ಕಾಡ್ತಿದೆ. ಇದು ಬಾಯಿ ತಪ್ಪಿ ಬಂದಿದೆ ಅಂತಾ ನನಗೆ ಅನ್ನಿಸ್ತಿಲ್ಲ ಅವರ ಮನಸ್ಸಲ್ಲಿರುವ ಭಾವನೆ ವ್ಯಕ್ತಪಡಿಸಿದ್ದಾರೆ ಅಂತಾ ಅನ್ಸುತ್ತೆ ಅಂತ ಹೇಳಿದ್ರು…

Read More

ಹುಬ್ಬಳ್ಳಿ: ಲಕ್ಷ್ಮಣಸವದಿ ಅವರು ಬಿಜೆಪಿಗೆ ಅವರು ಹೋಗ್ತಾರೋ ಇಲ್ವೋ ನೀವು ಅವರನ್ನೇ ಕೇಳ್ಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಶೆಟ್ಟರ್ ಅವರನ್ನು ಉಳಿಸಿಕೊಳ್ಳೋ ಕೆಲಸ ಮಾಡಿಲ್ಲ ಎಂಬ ಸವದಿ ಹೇಳಿಕೆಗೆ, ಅವರು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳುವಂತದ್ದು ಏನಿದೆ ಹೇಳಿ? ಅವರಿಗೆ ನಮ್ಮ ಪಕ್ಷ ಕರ್ಕೊಂಡು ಟಿಕೆಟ್ ಕೊಟ್ಟಿದೆ. ಅವರಿಗೆ ಎಂಎಲ್ಸಿ ಮಾಡಿದ್ದೀವಿ ಉಳಿಸಿಕೊಳ್ಳಬೇಕು ಅಂದ್ರೆ ಯಾವ ರೀತಿ ಉಳಿಸಿಕೊಳ್ಳಬೇಕು? ನನಗೆ ಗೊತ್ತಿಲ್ಲ. ಬಿಜೆಪಿ ಒಪರೇಷನ್ ಕಮಲದ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಅವರುನಾವು 136 ಇದೀವಿ, ಅವರಿಬ್ಬರೂ ಸೇರಿದ್ರೆ 85 ಇದ್ದಾರೆ. ಲೆಕ್ಕ ಪ್ರಕಾರ ಹೋದ್ರೆ 53 ಜನ ಹೋಗ್ಬೇಕು 53 ಜನ ಹೋದ್ರೆ ಮಾತ್ರ ಏನಾದ್ರೂ ಆಗಬಹುದು ಎಂದರು. ಪದೇ ಪದೇ ಇದೆ ಮಾತಾಡಿ ಸಾಕಾಗಿ ಹೋಗಿದ್ದು ಶ್ರೀಲಂಕಾ, ಬಾಂಗ್ಲಾ, ಅಫ್ಘಾನಿಸ್ತಾನ್ ಸರ್ಕಾರ ಬಿಳಿಸೋಕೆ ಹೇಳಿ ಅವರಿಗೆ ಯಾಕಂದ್ರೆ ವಿಶ್ವ ಗುರು ಅಲ್ಲ ಅದನ್ನು ಮಾಡಲಿಕ್ಕೆ ಹೇಳಿ. ಈ ದೇಶದ ಮೇಲೆ…

Read More

ಬೆಳ್ಳುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು, ಬೆಳ್ಳುಳ್ಳಿ ಕೆಜಿಗೆ 400 ರಿಂದ 500 ರೂ. ತಲುಪಿದೆ. ಕಳೆದ ವಾರ ಕೆ.ಜಿಗೆ 200 ರಿಂದ 300 ರೂ. ಇದ್ದ ಬೆಳ್ಳುಳ್ಳಿ ದರ ಈಗ 400- 500 ರೂ.ವರೆಗೆ ಏರಿಕೆಯಾಗಿದೆ. ಸದ್ಯಕ್ಕೆ ಬೆಳ್ಳುಳ್ಳಿ ಬೆಲೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ಫೆಬ್ರವರಿವರೆಗೂ ಬೆಳ್ಳುಳ್ಳಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ಎರಡು ತಿಂಗಳಿಣಿಂದ ಏರುಗತಿಯಲ್ಲೇ ಇರುವ ಬೆಳ್ಳುಳ್ಳಿ ದರ ಇದೀಗ ಒಂದು ಕೆಜಿಗೆ 400 ರಿಂದ 500 ರೂ. ವರೆಗೆ ಮುಟ್ಟಿದೆ. ಟೊಮೆಟೊ, ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

Read More