Author: AIN Author

ಧಾರವಾಡ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆದ ಧ್ವಜ ಗಲಾಟೆಯನ್ನು ರಾಜಕೀಯವಾಗಿ ಎಳೆಯಬಾರದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಈ ಧ್ವಜ ಗಲಾಟೆಗೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಉತ್ತರ ಕೊಟ್ಟಿದ್ದಾರೆ. ಇದನ್ನು ಹಿಂದೂ, ಮುಸ್ಲಿಂ ಗಲಾಟೆ ಮಾಡುವುದು ಸರಿಯಲ್ಲ. ಸಿಎಂಗೆ ಟಿಪ್ಪು ಸುಲ್ತಾನ್ ಎನ್ನುವುದು ಎಷ್ಟು ಸರಿ? ಹೀಗೆಲ್ಲ ಬಿಜೆಪಿ ಆರೋಪ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೀಗೆಲ್ಲ ಮಾಡುವುದು ಸರಿಯಲ್ಲ ಎಂದರು. ರಾಷ್ಟ್ರಪತಿಗಳಿಗೆ ಸಿಎಂ  ಏಕವಚನ ಪದ ಬಳಕೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಲಾಡ್, ಸಿಎಂ ಅದನ್ನು ಬಾಯಿತಪ್ಪಿ ಮಾತನಾಡಿದ್ದಾರೆ. ಉದ್ದೇಶಪೂರ್ವಕವಾಗಿ ಹೇಳಿದ ಮಾತು ಅದಲ್ಲ. ಆದರೆ, ಇದರ ಹಿಂದೆ ಸಿಎಂ ಹೇಳಿದ ವಿಷಯನ್ನೂ ನೋಡಬೇಕಲ್ಲವೇ? ಅವರು ಮಹತ್ವದ ವಿಷಯ ಹೇಳಿದ್ದಾರೆ. ಸಂಸತ್ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಕರೆದಿಲ್ಲ. https://ainlivenews.com/are-you-thinking-of-buying-a-home-low-interest-home-loan-available-in-these-banks/  ಅವರೊಬ್ಬ ವಿಧವೆ ಹೆಣ್ಣು ಮಗಳು, ಬುಡಕಟ್ಟು ಸಮಾಜದವರು ಅದೇ ಕಾರಣಕ್ಕೆ ಅವರನ್ನು ಸಂಸತ್ ಉದ್ಘಾಟನೆಗೆ ಕರೆದಿಲ್ಲ. ರಾಮ ಪ್ರಾಣ ಪ್ರತಿಷ್ಠಾಪನೆ ಪೂಜೆ…

Read More

ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಳಿಕ ನಂದಿ ಗಿರಿಧಾಮಕ್ಕೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಒಂದೂವರೆ ತಿಂಗಳ ಬಳಿಕ ಆತನ ಶವ ಪತ್ತೆಯಾಗಿದೆ. ಚಿಕ್ಕಬಳ್ಳಾಪುರದ ಜಾತವಾರ ಹೊಸಹಳ್ಳಿ ಗ್ರಾಮದ ನಾರಾಯಣಸ್ವಾಮಿ (37) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ. ನಂದಿ ಗಿರಿಧಾಮದ 38ನೇ ತಿರುವಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ವಿಷಯ ತಿಳಿದ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ವ್ಯಕ್ತಿಯ ಬ್ಯಾಗ್‍ನಲ್ಲಿ ಆಧಾರ್ ಕಾರ್ಡ್ ಲಭ್ಯವಾಗಿದ್ದರಿಂದ ಮೃತನ ಗುರುತು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟ್ರ್ಯಾಕ್ಟರ್ ಚಾಲಕನಾಗಿದ್ದ ನಾರಾಯಣಸ್ವಾಮಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಇನ್ನೂ ಸಾಯುವುದಕ್ಕೂ ಮುನ್ನ ತಿರುಪತಿಗೆ ತೆರಳಿ ದೇವರ ದರ್ಶನ ಪಡೆದು ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ.  ಕಳೆದ ಡಿ.15ರ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ತೊರೆದಿದ್ದ. ನಂತರ, ನಾನು ನಂದಿಬೆಟ್ಟದಲ್ಲಿದ್ದು ನನ್ನನ್ನ ಮರೆತುಬಿಡಿ, https://ainlivenews.com/are-you-thinking-of-buying-a-home-low-interest-home-loan-available-in-these-banks/…

Read More

ಬೆಂಗಳೂರು: ಕರ್ನಾಟಕ ಮಾತ್ರವಲ್ಲ ದೇಶದ ಬಹುತೇಕ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಮುಚ್ಚೋ ಸ್ಥಿತಿಗೆ ಬಂದು ನಿಂತಿವೆ. ನಷ್ಟದ ಮೇಲೆ ನಷ್ಟದಾಖಲಿಸ್ತಾ ಸಾಗ್ತಿವೆ. ಏರ್ ಇಂಡಿಯಾದಿಂದ ಹಿಡಿದು ಬಿಎಂಟಿಸಿವರೆಗೂ ಇದೇ ಕತೆ ಆಗಿತ್ತು. ಆದ್ರೆ ಇದೀಗ ಶಕ್ತಿ ಯೋಜನೆ ಜಾರಿ ಆಗಿ ಆರು ತಿಂಗಳ ಬಳಿಕ ಬೆಂಗಳೂರು ಜೀವನಾಡಿ ಲಾಭದ ಹಳಿಗೆ ಏರಿದೆ. ನಿತ್ಯ ಹಣ ಗಳಿಸ್ತಾ ಹೊಸ ಶಕೆ ಆರಂಭಿಸಿದೆ. ಹಾಗಾದ್ರೆ ಬಿಎಂಟಿಸಿ ಆರ್ಥಿಕವಾಗಿ ಸ್ಟಾಂಗ್ ಆಯ್ತು ಬನ್ನಿ ತೋರಿಸ್ತೀವಿ.. ದೇಶದ ಬಹುತೇಕ ಸಾರಿಗೆ ಸಂಸ್ಥೆಗಳು ಬಾಗಿಲು ಮುಚ್ಚೋ ಸ್ಥಿತಿಗೆ ಬಂದು ತಲುಪುತ್ತಿದೆ.ಜೊತೆಗೆ ರಾಜ್ಯದ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಯೂ ಹೆಚ್ಚೇನು ಸದೃಢ ಇರಲಿಲ್ಲ.ಈ ಮೊದಲು ಬರ್ತಿರೋ ಆದಾಯದಲ್ಲಿ ,ಡಿಸೇಲ್ ,ಬಿಡಿಭಾಗಗಳ ಖರೀದಿ,ನೌಕರರಿಗೆ ಸಂಬಳ ನೀಡೋಕ್ಕೂ ನಿಗಮಗಳ ಬಳಿ ದುಡ್ಡು ಇರಲಿಲ್ಲ. ಅಷ್ಟೋದು ದಿವಾಳಿ ಆಗಿದ್ವು ರಾಜ್ಯ ಸಾರಿಗೆ ನಿಗಮಗಳು.ಆದ್ರೆ ಸರ್ಕಾರ ಯಾವಾಗ ಗ್ಯಾರಂಟಿಗಳಲ್ಲಿ ಒಂದಾಗಿರೋ ಶಕ್ತಿ ಯೋಜನೆ ಅನುಷ್ಠಾನ ಮಾಡ್ತೋ ಆಗಿನಿಂದ್ಲೇ ನಿಗಮಗಳೀಗೆ ಬೂಸ್ಟರ್ ಡೋಸ್ ಸಿಕ್ಕಿದ್ದಂತೆ ಆಯ್ತು. ಹೌದು..ಶಕ್ತಿ…

Read More

ಬೆಂಗಳೂರು: ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ(Chakravarti Sulibele) ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ರಾಯಚೂರು  ಪೊಲೀಸರು (Raichur Police)  ಎಫ್‌ಐಆರ್ ದಾಖಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ (Priyank Kharge) ವಿರುದ್ಧ ಚಕ್ರವರ್ತಿ ಸೂಲಿಬೆಲೆ, ಅಯೋಗ್ಯ ಪದವನ್ನು ಬಳಕೆ ಮಾಡಿದ್ದರು. ಇದೇ ಪ್ರಕರಣದಲ್ಲಿ ರಾಯಚೂರು ಪೊಲೀಸರು ಅವರ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ರಾಯಚೂರಿನ ಪೊಲೀಸರು ಸೂಲಿಬೆಲೆ ಅವರಿಗೆ ನೋಟಿಸ್ ನೀಡಲೆಂದು ಬೆಂಗಳೂರಿಗೆ ಬಂದಿದ್ದರು. ಬಸವೇಶ್ವರ ನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿ ನೋಟಿಸ್ ನೀಡಬೇಕೆಂದು ಬಂದಿದ್ದರು. ಆದರೆ ಈ ಸಮಯದಲ್ಲಿ ಅವರು ಮನೆಯಲ್ಲಿ ಇರಲಿಲ್ಲ. ರಾಮಮಂದಿರ ಉದ್ಘಾನೆಯ ಹಿನ್ನಲೆ ಅವರು ಅಯೋಧ್ಯೆಗೆ ಹೋಗಿದ್ದರು. ಚಕ್ರವರ್ತಿ ಅಯೋಧ್ಯೆಯಲ್ಲಿ ಇದ್ದಿದ್ದರಿಂದ ಅವರ ಮನೆಗೆ ನೋಟಿಸ್ ನೀಡಿ ಪೊಲೀಸರು ರಾಯಚೂರಿಗೆ ವಾಪಸ್ ಆಗಿದ್ದರು. ಇದೀಗ ಅವರ ವಿರುದ್ಧ ರಾಯಚೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇ

Read More

ವಿಷ್ಣುಪ್ರಿಯ (Vishnupriya)  1990ರ  ಕಾಲದಲ್ಲಿ ನಡೆದಂಥ ಮಾಸ್ ಲವ್ ಸ್ಟೋರಿ. ಕನ್ನಡದಲ್ಲಿ ಭರವಸೆಯ  ನಾಯಕನಾಗಿ ಗುರುತಿಸಿಕೊಂಡಿರುವ ಯುವನಟ ಶ್ರೇಯಸ್ ಮಂಜು ಈ ಚಿತ್ರದಲ್ಲಿ  ಲವರ್ ಬಾಯ್ ವಿಷ್ಣು ಆಗಿ  ಪ್ರೇಕ್ಷಕರೆದುರು ಬರಲು ಅಣಿಯಾಗಿದ್ದಾರೆ. ಅಲ್ಲದೆ ಪ್ರಿಯಾ ಪಾತ್ರದಲ್ಲಿ ಮಲಯಾಳಂನ ಪ್ರಿಯಾ ವಾರಿಯರ್ ನಟಿಸಿದ್ದಾರೆ. ತೊಂಭತ್ತರ ದಶಕದಲ್ಲಿ ನಡೆದಂಥ ಒಂದು ಇನ್ ಟೆನ್ಸ್ ಲವ್ ಸ್ಟೋರಿಯನ್ನು ಈ ಚಿತ್ರದ ಮೂಲಕ  ನಿರ್ದೇಶಕ ವಿ.ಕೆ. ಪ್ರಕಾಶ್  ಅವರು ನಿರೂಪಿಸಿದ್ದಾರೆ‌. ವಿಷ್ಣುಪ್ರಿಯ ಸಿನಿಮಾದ ಮೊದಲ ಪ್ರೇಮ ಗೀತೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಟ ಶರಣ್ ಹಾಗೂ ನಟಿ ರುಕ್ಮಿಣಿ ವಸಂತ್ ಸೇರಿ  ನಾಗೇಂದ್ರ ಪ್ರಸಾದ್ ರಚನೆಯ ಚಿಗುರು ಚಿಗುರು ಸಮಯ ಹಾಡನ್ನು ಲಾಂಚ್ ಮಾಡಿದರು. ನಿರ್ಮಾಪಕರಾದ ರಮೇಶ್ ರೆಡ್ಡಿ, ಚೇತನ್ ಕುಮಾರ್ , ಸೂರಪ್ಪಬಾಬು, ಅಲ್ಲದೆ ನಿರ್ದೇಶಕರಾದ ಗುರು ದೇಶಪಾಂಡೆ, ದಯಾಳ್ ಪದ್ಮನಾಬನ್, ಭರ್ಜರಿ ಚೇತನ್, ಸತ್ಯಪ್ರಕಾಶ್, ಮಹೇಶ್ ಕುಮಾರ್,  ನಟ ವಿಕ್ರಂ ರವಿಚಂದ್ರನ್ ಮುಂತಾದವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನಟ ಶರಣ್ ಮಾತನಾಡುತ್ತ ಕೆಲವು ಹಾಡುಗಳು…

Read More

ಮೈಸೂರು: ಕಾರು ಢಿಕ್ಕಿ ಹೊಡೆದ ಪರಿಣಾಮ ಭಾರಿ ಗಾತ್ರದ ಹುಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ನಡೆದಿದೆ. ಘಟನೆಯಲ್ಲಿ ಗಂಡು ಹುಲಿ ಸಾವನ್ನಪ್ಪಿದ್ದು ಅರಣ್ಯಾಧಿಕಾರಿಗಳು ಹುಲಿಯ ಮೃತದೇಹವನ್ನ ವಶಕ್ಕೆ ಪಡೆದಿದ್ದಾರೆ. ನಿನ್ನೆ ತಡರಾತ್ರಿ ಸುಮಾರು 12 ಗಂಟೆ ವೇಳೆಗೆ ಘಟನೆ ನಡೆದಿದೆ. ಇಟಿಯೋಸ್ ಕಾರ್ ಹುಲಿಗೆ ಢಿಕ್ಕಿ ಹೊಡೆದಿದೆ.ಕಾರಿನ ಮುಂಭಾಗಕ್ಕೂ ಹಾನಿಯಾಗಿದೆ.ಘಟನೆ ನಡೆದ ಸ್ಥಳಕ್ಕೆ ಅರಣ್ಯಾಧಿಕಾರಿಗಳಾದ ಮಾಲತಿ ಪ್ರಿಯ,ಲಕ್ಷ್ಮಿನಾರಾಯಣ್,ಸುರೇಂದ್ರ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. https://ainlivenews.com/are-you-thinking-of-buying-a-home-low-interest-home-loan-available-in-these-banks/ ಇತ್ತೀಚಿನ ದಿನಗಳಲ್ಲಿ ನಂಜನಗೂಡು ಹಾಗೂ ಸುತ್ತ ಮುತ್ತ ಹುಲಿ ಕಾಣಿಸಿಕೊಂಡು ಭೀತಿ ಸೃಷ್ಟಿಸಿತ್ತು.ಇದೇ ಹುಲಿ ಅಪಘಾತದಲ್ಲಿ ಸಿಲುಕಿ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ. ಅಪಘಾತವಾದ ಕಾರನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ಪ್ರಯಾಣಿಕರನ್ನ ವಿಚಾರಣೆ ನಡೆಸುತ್ತಿದ್ದಾರೆ..

Read More

ದರ್ಶನ್ ಮುಖ್ಯಭೂಮಿಕೆಯ ಡೆವಿಲ್ ಸಿನಿಮಾದ ಮೊದಲ ಹಂತದ ಶೂಟಿಂಗ್ (shooting) ಮುಕ್ತಾಯವಾಗಿದೆ ಎಂದು ಸ್ವತಃ ನಿರ್ದೇಶಕ ಪ್ರಕಾಶ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಎರಡನೇ ಹಂತದ ಚಿತ್ರೀಕರಣವನ್ನು ಫೆಬ್ರವರಿ 2 ತಾರೀಖಿನಿಂದ ಆರಂಭಿಸೋದಾಗಿ ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ‘ಡೆವಿಲ್’ (Devil) ಚಿತ್ರದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೆರವೇರಿತ್ತು. ಪೂಜೆ ಮುಗಿದಿದ್ದೆ ತಡ ಡೆವಿಲ್ ಹೆಸರಿನಲ್ಲಿ ಪೋಸ್ಟರ್ ಹರಿದಾಡಿದವು. ಆದರೆ, ಈ ಕುರಿತು ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದರು. ಡೆವಿಲ್ ಸಿನಿಮಾದ ಯಾವುದೇ ಮಾಹಿತಿ ನಂಬಬೇಡಿ. ನಾವೇ ಕೊಡುತ್ತೇವೆ ಎಂದಿದ್ದರು. ಶುಭದಿನವೆಂದು ಡೆವಿಲ್ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿದ್ದೇವೆ. ಆದರೆ, ಚಿತ್ರದ ಫಸ್ಟ್ ಲುಕ್ (First Look) ಆಗಲಿ, ಪೋಸ್ಟರ್ ಆಗಲಿ ಯಾವುದು ನಾವು ಬಿಡುಗಡೆ ಮಾಡಿಲ್ಲ. ಕಾಟೇರ ಚಿತ್ರದ ನಂತರ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ‌. ನಮ್ಮ ವೈಷ್ಣೊ ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ ಡೆವಿಲ್ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದರು.…

Read More

ಟಗರು ಪಲ್ಯ ಖ್ಯಾತಿಯ ನಟ ನಾಗಭೂಷಣ್ (Nagabhushan) ಇಂದು ಹೊಸ ಜೀವನಕ್ಕೆ ಕಾಲಿಟ್ಟಿರು. ಬಹುಕಾಲದ ಗೆಳತಿ, ನಟಿ ಪೂಜಾ ಪ್ರಕಾಶ್ (Pooja Prakash) ಜೊತೆ ಇಂದು ಬೆಳಗಾವಿಯಲ್ಲಿ ಅವರು ಮದುವೆ (marriage) ಆಗಿದ್ದು, ಡಾಲಿ ಧನಂಜಯ್, ವಾಸುಕಿ ವೈಭವ್, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಈ ಮದುವೆಯಲ್ಲಿ ಗೆಳೆಯ ನಾಗಭೂಷಣ್ ಅವರಿಗಾಗಿಯೇ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ ಸೊಗಸಾದ ಗೀತೆಗಳನ್ನು ಹಾಡಿದ್ದಾರೆ. ಜೊತೆಗೆ ಹೊಸ ಜೀವನಕ್ಕೆ ವಾಸುಕಿ ದಂಪತಿ ಸಮೇತ ಶುಭ ಹಾರೈಸಿದ್ದಾರೆ. ಟಗರು ಪಲ್ಯ ಸೇರಿದಂತೆ ಅನೇಕ ಚಿತ್ರಗಳಿಗೆ ನಾಯಕನಾಗಿ ನಟಿಸಿರುವ ನಾಗಭೂಷಣ್, ನಾನಾ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಇವರ ಹೊಸ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾವನ್ನು ಡಾಲಿ ಧನಂಜಯ್ ಅವರೇ ನಿರ್ಮಾಣ ಮಾಡುತ್ತಿರುವುದು ವಿಶೇಷ. ನಾಗಭೂಷಣ್ ಮದುವೆ ಆಗುತ್ತಿರುವ ಪೂಜಾ ಪ್ರಕಾಶ್ ಚಿತ್ರಕಲೆ ಮತ್ತು ಗ್ರಾಫಿಕ್ಸ್ ಡಿಸೈನ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂದು ಬೆಳಗಾವಿಯಲ್ಲಿ ಇವರ ವಿವಾಹ…

Read More

ಬಿಗ್‌ಬಾಸ್‌ (Bigg Boss Kannada) ಕನ್ನಡ 10ನೇ ಸೀಸನ್‌ನಲ್ಲಿ ಡ್ರೋಣ್‌ ಪ್ರತಾಪ್‌ (Drone Pratap) ಅವರು ರನ್ನರ್ ಅಪ್ (Runner Up) ಆಗಿ ಹೊರಹೊಮ್ಮಿದ್ದಾರೆ. ಅವರೇ ಹೇಳಿಕೊಂಡಂತೆ ಅವರು ಇದನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಅವರು ಕ್ರಮವಾಗಿ ಮನೆಯಿಂದ ಹೊರಹೋಗುತ್ತಿದ್ದಂತೆಯೇ ಮನೆಯಲ್ಲಿ ಉಳಿದಿದ್ದವರು ಕಾರ್ತಿಕ್, ಸಂಗೀತಾ ಮತ್ತು ಪ್ರತಾಪ್. ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್‌ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು. ಮುಖ್ಯವೇದಿಕೆಯಲ್ಲಿ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ಕಿಚ್ಚ ಘೋಷಿಸಿದರು. ನಂತರ ವೇದಿಕೆಯ ಮೇಲೆ ಉಳಿದಿದ್ದು ಕಾರ್ತಿಕ್ ಮತ್ತು ಡ್ರೋಣ್ ಪ್ರತಾಪ್. ಕಿಚ್ಚನ ಒಂದು ಕೈಯಲ್ಲಿ ಕಾರ್ತಿಕ್ ಕೈ ಮತ್ತೊಂದು ಕೈಯಲ್ಲಿ ಪ್ರತಾಪ್‌ ಕೈ ಇತ್ತು. ಆ ಟೆನ್ಷನ್‌ ಅನ್ನು ಮಾತುಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಡೀ ಕರ್ನಾಟಕವೇ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಗಳಿಗೆ ಅದು. ಅದರಲ್ಲಿ ಸುದೀಪ್‌ ಅವರು…

Read More

ಚಿಕ್ಕಬಳ್ಳಾಪುರ: ಕುಮಾರಸ್ವಾಮಿಯವರ ಸಹವಾಸ ಮಾಡಿದವರು ಯಾರೂ ಉದ್ಧಾರವಾದ ಇತಿಹಾಸ ಇಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ (Veerappa Moily) ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕಥೆ ಇತಿಹಾಸ ಹೇಳುತ್ತಾ ಹೋದರೆ ಹಲವು ವರ್ಷಗಳೆ ಬೇಕು. ಅವರ ಸಹವಾಸದಿಂದ ಸುಖವಿಲ್ಲ. ಅವರನ್ನು ನಂಬಿದವರಿಗೆ ದೇವರೇ ಗತಿ. ನನಗೆ ಸಿಎಂ ಆಗಿ, ರಾಜಕೀಯದಲ್ಲಿ 50-55 ವರ್ಷದ ರಾಜಕೀಯ ಅನುಭವವಿದೆ. ನನ್ನ ರಾಜಕೀಯ ಇತಿಹಾಸದಲ್ಲಿ ಈ ಅನುಭವ ಇದೆ ಎಂದಿದ್ದಾರೆ. https://ainlivenews.com/are-you-thinking-of-buying-a-home-low-interest-home-loan-available-in-these-banks/ ಕುಮಾರಸ್ವಾಮಿಯವರ ತಂದೆಯವರ ಜೊತೆ ನಾನು ಚೆನ್ನಾಗಿ ಇದ್ದ ಕಾಲವೂ ಇದೆ. ಅದೇ ಪ್ರಕಾರ ಕಷ್ಟ ನಷ್ಟ ಅನುಭವಿಸಿದ್ದು ಇದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕುಮಾರಸ್ವಾಮಿ ಜೊತೆ ಬಹಳ ಜನ ಸ್ನೇಹ ಮಾಡಿದ್ರು, ಯಾರೂ ಉದ್ಧಾರ ಆಗಿಲ್ಲ. ಅವರ ಜೊತೆ ಸ್ನೇಹ ಮಾಡಿದವರು ಗುಂಡಿಗೆ ಬೀಳುತ್ತಾರೆ. ಬಿಜೆಪಿ (BJP) ಉದ್ಧಾರ ಆಗುವುದಾದರೆ ಆಗಲಿ ಎಂದಿದ್ದಾರೆ.

Read More