Author: AIN Author

ಬೆಂಗಳೂರು: ಮಂಡ್ಯದ (Mandya) ಕೆರಗೋಡಿನಲ್ಲಿ (Keragodu) ಹನುಮ ಧ್ವಜ ತೆರವುಗೊಳಿಸಿದ ಪ್ರಕರಣ ಖಂಡಿಸಿ ಇಂದು (ಸೋಮವಾರ) ರಾಜ್ಯಾದ್ಯಂತ ಬಿಜೆಪಿಯಿಂದ (BJP) ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲೂ (Mysuru Bank Circle) ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆ ವೇಳೆ ಭಾರೀ ಹೈಡ್ರಾಮಾ ಕಂಡುಬಂದಿತು. ರಾಷ್ಟ್ರಧ್ವಜಕ್ಕೆ ಸರ್ಕಾರದಿಂದ ಅಪಮಾನ ಹಾಗೂ ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಐವರು ಇನ್ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಆಯೋಜಿಸಲಾಗಿದೆ. ಪ್ರತಿಭಟನೆಗೆ ಅವಕಾಶ ನಿರಾಕರಿಸಿ ನೊಟೀಸ್ ಜಾರಿ ಮಾಡಲಾಗಿದೆ. ಆದರೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಶಾಸಕರು ಪ್ರತಿಭಟನೆಗೆ ಧುಮುಕಿದ್ದಾರೆ. ಬ್ಯಾರಿಕೇಡ್ ಮತ್ತು ಪೊಲೀಸ್ ದಿಗ್ಬಂಧನದ ನಡುವೆ ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೇ ಜೈ ಶ್ರೀರಾಮ್ ಘೋಷಣೆ ಮೊಳಗಿಸುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತಳ್ಳಾಟ,…

Read More

ಬೆಂಗಳೂರು: ಶಾಮನೂರು ಶಿವಶಂಕರಪ್ಪನವರು ದೇಶಕ್ಕೆ ಒಂದೊಳ್ಳೆ ಸಂದೇಶ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರನ್ನು ಒಪ್ಪಿದ್ದಾರೆ. ಮೋದಿ ಮತ್ತೆ ಪ್ರಧಾನಿ ಆಗಬೇಕು ಅನ್ನೋದನ್ನ ಸೂಕ್ಷ್ಮವಾಗಿ ಹೇಳಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ ರವಿ (CT Ravi) ಶ್ಲಾಘಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ಸಚಿವ ಸಿ.ಟಿ ರವಿ ಅವರು, Govt Scheme: ಬ್ಯುಸಿನೆಸ್ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಲೋನ್.! ಸುಲಭವಾಗಿ ಪಡೆಯಿರಿ 10 ಲಕ್ಷ ರೂ. ಬಿ.ವೈ ರಾಘವೇಂದ್ರ (BY Raghavendra) ಅವರನ್ನು ಗೆಲ್ಲಿಸಬೇಕು ಎನ್ನುವ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಶಾಮನೂರು ಶಿವಶಂಕರಪ್ಪನವರು ದೇಶಕ್ಕೆ ಒಂದೊಳ್ಳೆ ಸಂದೇಶ ಕೊಟ್ಟಿದ್ದಾರೆ. ದೇಶದ ಹಿತದೃಷ್ಟಿಯಿಂದ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಬೇಕು ಎಂಬ ಸಂದೇಶ ಕೊಟ್ಟಿದ್ದಾರೆ. ಅವರ ಹೇಳಿಕೆಯನ್ನ ಸ್ವಾಗತ ಮಾಡ್ತೀನಿ ಎಂದಿದ್ದಾರೆ.

Read More

ಬೆಂಗಳೂರು: ಮಂಡ್ಯ (Mandya) ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಶನಿವಾರ ರಾತ್ರಿ ಹನುಮಧ್ವಜ (Hanuma Dhwaja) ಹಾರಿಸಿದ್ದು, ಪೊಲೀಸರನ್ನು ಬಳಸಿ ಕೆಳಗೆ ಇಳಿಸಿದ್ದನ್ನು ಖಂಡಿಸುತ್ತೇನೆ. ಒಂದು ಧ್ವಜ ಇಳಿಸಿದ್ರೆ, ಸಾವಿರಾರು ಧ್ವಜ ಹಾರಿಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸುನೀಲ್‍ಕುಮಾರ್ (Sunil Kumar) ಎಚ್ಚರಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು  ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದಕ್ಕೆ ಗೃಹ ಇಲಾಖೆ ನೇರ ಹೊಣೆ ಆಗಲಿದೆ ಅಂತಾ ಸರ್ಕಾರಕ್ಕೆ ಎಚ್ಚರಿಸುತ್ತೇವೆ. ಸ್ಥಳೀಯ ಅಧಿಕಾರಿಗಳು ದೊಡ್ಡ ವಿವಾದ ಮಾಡಲು ಹೊರಟಿದ್ದಾರೆ. ಇದು ಆಕ್ಷೇಪಾರ್ಹ ಎಂದು ತಿಳಿಸಿದರು. ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನ ಎಲ್ಲರೂ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ಸಹಜವಾಗಿ ಎಲ್ಲರ ಮನೆ ಮೇಲೆ ಕೇಸರಿ ಧ್ವಜ ಹಾರಿಸಿದ್ದಾರೆ. ಜೊತೆಗೆ ನಂದಾ ದೀಪ ಹಚ್ಚಿದ್ದಾರೆ. ಆ ಗ್ರಾಮದಲ್ಲಿ ಕೂಡ ಧ್ವಜ ಹಾರಿಸಿ, ರಾಮನ ಫೋಟೋ ಹಾಕಿ ಪೂಜೆ ಮಾಡಿದ್ದಾರೆ. ಇದನ್ನು ಸರ್ಕಾರ ಸಹಿಸುತ್ತಿಲ್ಲ, ಇನ್ಯಾವುದನ್ನು ಸಹಿಸ್ತೀರಾ…

Read More

ಶಿವಮೊಗ್ಗ: ಶಿವಮೊಗ್ಗ ಟ್ರೀ ಪಾರ್ಕ್​ ನಲ್ಲಿ ಸಿಮೆಂಟ್ ಜಿಂಕೆ ಮೇಲೆ ಕುಳಿತಿದ್ದ ಆರು ವರ್ಷದ ಮಗುವೊಂದು , ಸಿಮೆಂಟಿನ ಕಲಾಕೃತಿ ಮುರಿದು ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ.  ಶಿವಮೊಗ್ಗ  ಜಿಲ್ಲೆಯ ಮುದ್ದಿನಕೊಪ್ಪದಲ್ಲಿ ಟ್ರೀ ಪಾರ್ಕ್​ ಇದೆ. ನಿನ್ನೆ ಭಾನುವಾರವಾದ್ದರಿಂದ ಮಗುವೊಂದನ್ನ ಕುಟುಂಬಸ್ಥರು ಅಲ್ಲಿಗೆ ಕರೆದೊಯ್ದಿದ್ದರು. ಮಗು ಅಲ್ಲಿ ಆಟವಾಡುತ್ತಿತ್ತು. ಈ ವೇಳೆ ಅಲ್ಲಿಯೇ ಇದ್ದ ಸಿಮೆಂಟ್​ನಲ್ಲಿ ಮಾಡಲಾಗಿದ್ದ ಕಲಾಕೃತಿ ಜಿಂಕೆಯ ಮೇಲೆ ಮಗುವನ್ನ ಕೂರಿಸಿದ್ದರು. ಈ ವೇಳೆ ಕಲಾಕೃತಿ ಮುರಿದುಬಿದ್ದಿದೆ.ಪರಿಣಾಮ ಕೆಳಕ್ಕೆ ಬಿದ್ದ ಮುಗುವಿಗೆ ಪೆಟ್ಟು ಬಿದ್ದಿದೆ. ತಕ್ಷಣವೆ ಮಗುವನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಸದ್ಯ ಘಟನೆ ಸಂಬಂಧ ಕುಂಸಿ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. https://ainlivenews.com/are-you-thinking-of-buying-a-home-low-interest-home-loan-available-in-these-banks/ ಮಗುವಿನ ಮಲೆಯೇ ಕಲಾಕೃತಿ ಬಿದ್ದಿದ್ದರಿಂದ ಮಗುವಿಗೆ ತೀವ್ರವಾಗಿ ಪೆಟ್ಟಾಗಿತ್ತು. ಗಾಂಧಿಬಜಾರ್​ನ ನಿವಾಸಿಯೊಬ್ಬರ ಮಗುವಾದ ಸಮೀಕ್ಷಾ ಮೃತ ದುರ್ದೈವಿ. ಘಟನೆಯಲ್ಲಿ ಮಗುವಿಗೆ ಪೆಟ್ಟು ಬಿದ್ದಾಗಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಮಗುವಿನ ತಾಯಿ ಹರಸಾಹಸ ಪಟ್ಟಿದ್ದು, ತಕ್ಷಣಕ್ಕೆ…

Read More

ಬೆಂಗಳೂರು: ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಸರಿ ಧ್ವಜ ಹಾರಿಸಲು ಅನುಮತಿ ನೀಡಿರಲಿಲ್ಲ. ಹಾಗಾಗಿ ಪಂಚಾಯಿತಿ ಅಧಿಕಾರಿಗಳು ಕೇಸರಿ ಧ್ವಜ ತೆಗೆದು, ರಾಷ್ಟ್ರಧ್ವಜ ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡರು. ಇದರಿಂದ ಗಲಾಟೆಯಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಬೇರೆ ಬೇರೆ ಕಡೆಯಲ್ಲಿ ಕೇಸರಿ ಧ್ವಜ ಹಾರಿಸಲು ಯಾರದ್ದು ತಕರಾರು ಇಲ್ಲ. ಆದರೆ ಸರ್ಕಾರಿ ಜಾಗದಲ್ಲಿ ಹಾರಿಸಬಾರದು.ಇದು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ‘ಕಾಂಗ್ರೆಸ್‌ನವರು ಹಿಂದೂ ವಿರೋಧಿಗಳು ಎಂದು ಬಿಂಬಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ನಾವು ಸಹ ಹಿಂದೂಗಳೇ, ನೀವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಎಂದು ಹೇಳುತ್ತಿದ್ದೇವೆ. ರಾಜ್ಯದ ಕಾನೂನು ಮುರಿಯುವ ಕೆಲಸ ಮಾಡಬೇಡಿ ಅಂತ ಹೇಳಿದರೂ ಅವರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ಪರಮೇಶ್ವರ ಬೇಸರ ವ್ಯಕ್ತಪಡಿಸಿದರು.

Read More

ಬೆಂಗಳೂರು ಗ್ರಾಮಾಂತರ:  ನಿರ್ಮಾಣ ಹಂತದ ಕಟ್ಟಡಕ್ಕೆ ಆಕ್ರಮವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದ ಮಹಿಳೆಯನ್ನು ಬೆಸ್ಕಾಂ ಸಿಬ್ಬಂದಿ ಪ್ರಶ್ನೆ ಮಾಡಿದ್ದಕ್ಕೆ ಕಪಾಳ ಮೋಕ್ಷ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ನಡೆದಿದೆ. ಇನ್ನೂ ಈ ಘಟನೆ 24ನೇ ತಾರೀಕು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹಳೆ ಚಂದಾಪುರ ಮೂಲದ ರೂಪ ಹಲ್ಲೆ ಮಾಡಿದ ಮಹಿಳೆ ಎನ್ನಲಾಗಿದೆ.. ಹರೀಶ್ ಹಲ್ಲೆಗೊಳಗಾದ ಬೆಸ್ಕಾಂ ಸಿಬ್ಬಂದಿ.. ಹೌದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ಕಳೆದ 24 ನೇ ತಾರೀಖಿನಂದು ಮಧ್ಯಾಹ್ನ 12:30ಕ್ಕೆ ವೀರಸಂದ್ರ ಬೆಸ್ಕಾಂ ಸಬ್ ಡಿವಿಷನ್ ಅಧಿಕಾರಿಗಳು ನಿರ್ಮಾಣ ಹಂತದ ಕಟ್ಟಡಕ್ಕೆ ಆಕ್ರಮವಾಗಿ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದ ಮಹಿಳೆಯನ್ನು ಮನೆ ಬಳಿ ಹೋಗಿದ್ದಾರೆ ಆ ವೇಳೆ ಮಹಿಳೆ ಲೈನ್ ಮ್ಯಾನ್ ಹರೀಶ್ ಪ್ರಶ್ನೆ ಮಾಡಿದ್ದಾರೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ ..ವಿಚಾರ ತಿಳಿದು ವಿದ್ಯುತ್ ಲೈನ್ ಕಟ್ ಮಾಡಿದಕ್ಕೆ ಬೆಸ್ಕಾಂ ಸಿಬ್ಬಂದಿಯ ಮೇಲೆ ಅವಾಚ್ಯ ಶಬ್ದಗಳಿಂದ…

Read More

ಚಿತ್ರದುರ್ಗ: ಕ್ವಿಂಟಾಲ್‌ಗಟ್ಟಲೇ ಚಿಕನ್ ಬಿರಿಯಾನಿ ನೆಲದ ಪಾಲಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಶದಲ್ಲಿ ಬೆಳಕಿಗೆ ಬಂದಿದೆ. ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶಕ್ಕೆ ಬರುವ ಜನರಿಗೆ ವಿತರಿಸಲೆಂದು ಸಿದ್ಧಪಡಿಸಿದ್ದ ಬಿರಿಯಾನಿ ನೆಲದಪಾಲಾಗಿದೆ. ಸಮಾವೇಶಕ್ಕೆ ನಿರೀಕ್ಷೆಯಷ್ಟು ಜನರು ಬಾರದ ಹಿನ್ನೆಲೆಯಲ್ಲಿ ಉಳಿದ ಚಿಕನ್ ಬಿರಿಯಾನಿ ಹಾಗೂ ಪಲಾವ್ ಸಂಪೂರ್ಣವಾಗಿ ನೆಲದ ಪಾಲಾಗಿದೆ. ಜನರು ಸೇರುವ ನಿರೀಕ್ಷೆಯಿಂದ ಮೂರುವರೆ ಲಕ್ಷಕ್ಕೂ ಅಧಿಕ ಜನರಿಗೆಂದು ಬಿರಿಯಾನಿ ತಯಾರಿಸಲಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಜನರು ಆಗಮಿಸದ ಹಿನ್ನಲೆ ತಯಾರಿಸಲು ತಂದಿದ್ದ ಕೆಲವು ಆಹಾರ ಸಾಮಗ್ರಿಗಳನ್ನು ಆಯೋಜಕರು ಅಲ್ಲಿಯೇ ಬಿಟ್ಟುಹೋಗಿದ್ದಾರೆ. ಉಳಿದ ಅನ್ನ, ಚಿಕನ್ ಎಲ್ಲವನ್ನು ನೆಲಕ್ಕೆ ಹಾಕಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.  https://ainlivenews.com/are-you-thinking-of-buying-a-home-low-interest-home-loan-available-in-these-banks/ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಭಾಗಿಯಾಗಿದ್ದರು. ಹಸಿವಿನಿಂದ ಜನ ಇರಬಾರದು ಅಂತ ಹೇಳಿ ಬಿರಿಯಾನಿಯನ್ನು ತಯಾರಿಸಲಾಗಿತ್ತು. ಈ ಸಂದರ್ಭದಲ್ಲಿ ಅನ್ನವನ್ನು ನೆಲದ ಪಾಲು ಮಾಡಿರುವ ಆಯೋಜಕರ ವಿರುದ್ಧ ಜನಸಾಮನ್ಯರು ಕಿಡಿಕಾರಿದ್ದಾರೆ. ಉಳಿದ…

Read More

ಬೆಂಗಳೂರು: ನಾನೂ ಒಬ್ಬ ಹಿಂದೂ, ಎಲ್ಲಾ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ. ಸಂವಿಧಾನದಲ್ಲಿ ಹೇಳಿರುವಂತೆ ಜಾತ್ಯತೀತತೆ ಎಂದರೆ ಸಹಬಾಳ್ವೆ ಸಹಿಷ್ಣುತೆ. ನಮಗೆ ಅದರಲ್ಲಿ ನಂಬಿಕೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಲಲಿತ್ ಅಶೋಕ್ ನಲ್ಲಿ ಆಯೋಜಿಸಿದ್ದ GAFX ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. https://ainlivenews.com/cm-siddaramaiah-disrespects-president-what-did-hdk-say/ ಭಾಗವಧ್ವಜ ಹಾರಿಸಲು ನಮ್ಮ ವಿರೋಧವಿಲ್ಲ. ಬಿಜೆಪಿಯವರು ಅನಗತ್ಯವಾಗಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಭಾಗವಧ್ವಜ ಹಾರಿಸಲು ನಮ್ಮ ವಿರೋಧವಿಲ್ಲ. ರಾಷ್ಟ್ರ ಧ್ವಜವನ್ನು ಹಾರಿಸಲು ಅವರು ಅನುಮತಿ ಪಡೆದಿದ್ದು ಅದನ್ನೇ ಹಾರಿಸಬೇಕು. ಜಿಲ್ಲಾಡಳಿತ ಅದಕ್ಕೆ ಕ್ರಮ ವಹಿಸಿದೆ ಎಂದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಜೆಡಿ ಎಸ್. ಮುಖಂಡ ಹೆಚ್.ಡಿ.ಕುಮಾರಸ್ವಾಮಿಯವರು ಮಂಡ್ಯಕ್ಕೆ ಭೇಟಿ ನೀಡಿ ಪ್ರಚೋದನೆ ನೀಡುತ್ತಿದ್ದಾರೆ. ಪ್ರಚೋದನೆ ಯಾಕೆ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಚುನಾವಣೆ ಹತ್ತಿರ ಬರುತ್ತಿದ್ದು, ಅದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದರು. ಪಂಚಾಯತಿಯವರು ನೀಡಿದ್ದ ಅನುಮತಿಯಂತೆ ನಡೆದುಕೊಂಡಿದ್ದಾರೆ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡುತ್ತಿರಲಿಲ್ಲ ಎಂದರು. ಸಿದ್ದರಾಮಯ್ಯ ಹಿಂದೂ ವಿರೋಧಿ…

Read More

ಬೆಂಗಳೂರು: ರಾಷ್ಟ್ರಪತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅಗೌರವದ ಹೇಳಿಕೆ ವಿಚಾರ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು,   ಮುಖ್ಯಮಂತ್ರಿಗಳು ರಾಷ್ಟ್ರಪತಿ ಬಗ್ಗೆ ಅಗೌರವದ ಪದ ಬಳಕೆ ಮಾಡಿದ್ದಾರೆ ಶೋಷಿತ ವರ್ಗದ ಸಮಾವೇಶದಲ್ಲಿ ಈರೀತಿ ಹೇಳಿಕೆ ನೀಡಿದ್ದು ಖಂಡನೀಯ ಸಂವಿಧಾನ ತಜ್ಞ, ಅಹಿಂದ ಎಂದು ಹೇಳಿಕೊಳ್ಳುವ ವ್ಯಕ್ತಿ ಹೀಗೆ ಹೇಳಿದ್ದಾರೆ ಎಂದು ಕಿಡಿ ಕಾರಿದ್ದಾರೆ. https://ainlivenews.com/mallikarjuna-kharges-inappropriate-use-of-words-file-fir-against-chakraborty-sulibele/ ಕುರಿ ಕಾಯುವ ಸಮುದಾಯದವರು, 14 ಬಜೆಟ್ ನೀಡಿದ್ದೇನೆಂದಿದ್ದಾರೆ ಈವರೆಗೆ ಎಷ್ಟು ಶೋಷಿತ ವರ್ಗಕ್ಕೆ ಬಜೆಟ್‌ ನೆರವಾಗಿದೆ ಎಂದು ಹೇಳಲಿ ರಾಷ್ಟ್ರಪತಿ ಬಗ್ಗೆ ಅಗೌರವ ತೋರಿ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಗ್ರಾಮೀಣ ಸೊಗಡಿನಲ್ಲಿ ಹಾಗೆ ಮಾತಾಡಿದ್ದೇನೆ ಎಂದು ಹೇಳಿದ್ದಾರೆ ಈಗ ಅಚಾತುರ್ಯದಿಂದ ಆದ ಪ್ರಮಾದಕ್ಕೆ ವಿಷಾದ ಎಂದಿದ್ದೀರಿ ವಿಷಾದ ವ್ಯಕ್ತಪಡಿಸುವ ಸೌಜನ್ಯ ತೋರಿಸಿದ್ದೀರಿ, ಸಂತೋಷ -HDK ಆದರೆ ನಿಮ್ಮ ನಂಜಿನ ವಿಷ ರಾಜ್ಯ ಹಾಗೂ ದೇಶವನ್ನೆಲ್ಲಾ ವ್ಯಾಪಿಸಿದೆ  ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ತೀವ್ರ…

Read More

ಬೆಂಗಳೂರು: Gruha Jyoti ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಗೃಹಜ್ಯೋತಿ ಯೋಜನೆಯ ಲಾಭ ಎಷ್ಟು ಜನರಿಗೆ ತಲುಪಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದೆ. https://ainlivenews.com/shakthi-scheme-that-has-given-life-to-the-life-of-bangalore-income-of-five-and-a-half-crores/ ಗೃಹಜ್ಯೋತಿ ಯೋಜನೆಗೆ 1,40,31,320 ಗ್ರಾಹಕರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 74,08,769 ಮಂದಿಗೆ ಶೂನ್ಯ ಬಿಲ್ ನೀಡಲಾಗಿದೆ. ಆದರೆ, 45,29,633 ಜನರು ಸರಾಸರಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದ್ದಾರೆ. ಸುಮಾರು 21 ಲಕ್ಷ ಜನರು 200 ಯೂನಿಟ್​ಗಿಂತ ಹೆಚ್ಚು ಬಳಕೆ ಮಾಡಿ ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾಗಿದ್ದಾರೆ. ರಾಜ್ಯ ಸರ್ಕಾರವು 1 ಕೋಟಿ 19 ಲಕ್ಷ ಜನರಿಗೆ ಗೃಹಜ್ಯೋತಿ ಬಿಲ್ ನೀಡಿದ್ದು, ಇದರಲ್ಲಿ ಶೇ.62.06 ರಷ್ಟು ಅಂದರೆ, 74 ಲಕ್ಷದ 8 ಸಾವಿರ ಜನರು ಸರ್ಕಾರ ನೀಡಿರುವ ಸರಾಸರಿ ಹಾಗೂ ಅದಕ್ಕಿಂತ ಕಡಿಮೆ ಯೂನಿಟ್ ಬಳಸಿದ್ದಾರೆ. ಇನ್ನು, ಈಗಾಗಲೇ ಜುಲೈ ತಿಂಗಳ‌ ಶೂನ್ಯ ಬಿಲ್​​ಗಾಗಿ ಸರ್ಕಾರದಿಂದ ಎಲ್ಲಾ ಎಸ್ಕಾಂಗಳಿಗಾಗಿ ಒಟ್ಟು 650 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವದ…

Read More