Author: AIN Author

ಅಭಿಮಾನಿಗಳ ಜೊತೆ ಸಂವಾದಿಸುವುದಕ್ಕಾಗಿ ಕಿಚ್ಚ ಸುದೀಪ್ (Sudeep) ಇಂದು ‘ಆಸ್ಕ್ ಮಿ ಎನಿಥಿಂಗ್’ ಎಕ್ಸ್ ಪೋಸ್ಟ್ ಮಾಡಿದ್ದರು. ಅಲ್ಲಿ ಸಾಕಷ್ಟು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಸುದೀಪ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದರು. ಅದರಲ್ಲೊಬ್ಬ ಅಭಿಮಾನಿ ದರ್ಶನ್ ಅವರ ಕುರಿತಾಗಿ ಪ್ರಶ್ನೆ ಮಾಡಿದ್ದ. ದರ್ಶನ್ (Darshan) ಕುರಿತಾಗಿ ಒಬ್ಬ ಅಭಿಮಾನಿ ಪ್ರಶ್ನೆ ಕೇಳುತ್ತಿದ್ದಂತೆಯೇ, ಅಂಥದ್ದೇ ಮತ್ತೊಂದು ಪ್ರಶ್ನೆ ಕೂಡ ತೇಲಿ ಬಂತು. ಹಾಗಾಗಿ ಅಭಿಮಾನಿ ಕೇಳಿದ ಪ್ರಶ್ನೆಗೆ ಸಖತ್ತಾಗಿಯೇ ಉತ್ತರ ನೀಡಿದ್ದಾರೆ ಸುದೀಪ್.  ಎಲ್ಲರಿಗೂ ಗೊತ್ತಿರುವಂತೆ ಸುದೀಪ್ ಮತ್ತು ದರ್ಶನ್ ಸ್ನೇಹದಲ್ಲಿ ಬಿರುಕಿದೆ. ಅದು ಗೊತ್ತಿರೋ ವಿಚಾರ. ಹಾಗಾಗಿ ಅದೇ ಕುರಿತಂತೆ ಅಭಿಮಾನಿ ಪ್ರಶ್ನೆ ಕೇಳಿದ್ದರು. ಸರ್ ನಿಮ್ದು ಮತ್ತೆ ದರ್ಶನ್ ಅವರದು ಸಮಸ್ಯೆ ಯಾವಾಗ ಸಾಲ್ವ್ ಮಾಡ್ಕೋತೀರಾ ಎಂದು ನೇರವಾಗಿಯೇ ಅಭಿಮಾನಿ ಪ್ರಶ್ನೆ ಮಾಡಿದ್ದ. ಅದಕ್ಕೆ ಅಷ್ಟೇ ಮಾರ್ಮಿಕವಾಗಿ ಉತ್ತರಿಸಿದ್ದರು ಸುದೀಪ್. ಸಮಸ್ಯೆ ಏನು ಅಂತ ಇಬ್ಬರೂ ಹುಡುಕ್ತಾ ಇದ್ದೀವಿ ಎಂದು ಹೇಳಿ ಅಭಿಮಾನಿಗೆ ಶಾಕ್ ನೀಡಿದ್ದಾರೆ ಸುದೀಪ್ ಅಂಬರೀಶ್ ಮತ್ತು…

Read More

ಬೆಂಗಳೂರು: ತುಮಕೂರು ಜಿಲ್ಲೆ ಎರಡನೇ ಬೆಂಗಳೂರಾಗಿ ಪರಿಪರ್ವನೆ ಆಗುತ್ತೆ ಎಂಬ ನಂಬಿಕೆ ಇದೆ. ಇಂತಹ ಮಟ್ಟವಾದ ಪ್ರದೇಶ, ನೆಲ ಜಲಕ್ಕೆ ತನ್ನದೇ ಆದ ಶಕ್ತಿ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಮುಂದಿನ 50 ವರ್ಷದಲ್ಲಿ ಹೊಸ ಬೆಂಗಳೂರು ನಿರ್ಮಾಣದ ತಯಾರಿ ಮಾಡಬೇಕು. ಬೆಂಗಳೂರು ಬೆಳಸಲು ಬಂದಾಗ ರಾಮನಗರ, ಚನ್ನಪಟ್ಟಣ, ನೆಲಮಂಗಲ ಆದ ಮೇಲೆ ತುಮಕೂರನ್ನೇ ನೋಡಬೇಕು ಎಂದು ತಿಳಿಸಿದರು. ಬಸವರಾಜು ಅವರು ಹೋರಾಟ ಮಾಡಿ ಹೆಚ್ಎಎಲ್​ನ ತರೋದಕ್ಕೆ ಪ್ರಯತ್ನ ಮಾಡಿದ್ರು, ಅದನ್ನು ಮರೆಯೋದಕ್ಕೆ ಸಾಧ್ಯವಿಲ್ಲ. ಕೈಗಾರಿಕಾ ಪ್ರದೇಶವನ್ನ ಈ ಕಾರಿಡಾರ್ ಅನ್ನ ಈ ಸರ್ಕಾರದಲ್ಲಿ ಹೆಚ್ಚು ಒತ್ತುಕೊಡುತ್ತದೆ. ಐದು ಗ್ಯಾರಂಟಿ ಕೊಟ್ಟಿದ್ವಿ, ಐದು ಗ್ಯಾರಂಟಿ ಕೊಟ್ಟು ಕೈ ಮುಷ್ಟಿ ಆಯ್ತು. ಹೆಣ್ಣು ಮಕ್ಕಳ ಅಭಿವೃದ್ಧಿಗೆ ಇದು ಸಾಕ್ಷಿ ಆಯ್ತು ಎಂದು ಹೇಳಿದರು. ಅನ್ನಭಾಗ್ಯ ಸಿದ್ದರಾಮಯ್ಯ ಕನಸಿನ ಭಾಗ್ಯ. ಈ ಗ್ಯಾರಂಟಿಗಳಿಂದ ರಾಜ್ಯದಲ್ಲಿ ದೊಡ್ಡ ಬದಲಾವಣೆಯಾಗಿ ಅರ್ಥಿಕವಾಗಿ ಶಕ್ತಿ ತುಂಬುವ ಕೆಲಸವಾಗಿದೆ. ನಾವು ಗ್ಯಾರಂಟಿಗಳ ಬಗ್ಗೆ ಆಲೋಚನೆ ಮಾಡ್ತಾ ಇಲ್ಲ.…

Read More

ದಾವಣಗೆರೆ: 500 ವರ್ಷಗಳ ಹೋರಾಟದ ಪ್ರತಿಫಲ ರಾಮ ಮಂದಿರವಾಗಿದೆ. ಇದನ್ನ ಕಂಡು ಕಾಂಗ್ರೆಸ್ ನವರು ಹತಾಶರಾಗಿದ್ದಾರೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು. ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು,ಈ ಸರ್ಕಾರಕ್ಕೆ ಲೋಕಸಭೆಯಲ್ಲಿ ಎರಡು ಸಲ ಬಹುಮತ ಇಲ್ಲ, ಈ ದೇಶದ ಜನ ಕಾಂಗ್ರೆಸ್​ನ್ನು ತಿರಸ್ಕರಿಸಿದ್ದಾರೆ. 500 ವರ್ಷಗಳ ಹೋರಾಟದ ಪ್ರತಿಫಲ ರಾಮಮಂದಿರ ಆಯಿತು. ಸಿದ್ದರಾಮಯ್ಯ, ಡಿಕೆಶಿ ನಮ್ಮ ತಂದೆ ತಾಯಿ ನಮಗೆ ದೇವರ ಹೆಸರಿಟ್ಟಿದ್ದಾರೆಂದು ಹೇಳ್ತಿರಾ, ಡಿಕೆಶಿಯವರೇ ನಿಮ್ಮ ಹೆಸರಿನಲ್ಲಿ ಶಿವ ಇದ್ದಾನೆ. ಅದ್ರೇ ನಿಮ್ಮ ಕೊರಳಿನಲ್ಲಿ ಮಿಡಿ ನಾಗರಹಾವು ಇದೆ. ನೀವು ಮತ್ತು ಸಿದ್ದರಾಮಯ್ಯಯವರು ಹಿಂದುಗಳನ್ನು ದ್ವೇಷ ಮಾಡ್ತಿರಾ ಎಂದು ಪ್ರಶ್ನಿಸಿದರು. ಹಿಂದೂಗಳ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯವರಿಗೆ ಟಿಪ್ಪು, ಘಜಿನಿ ಮೊಹಮ್ಮದ್, ಬಾಬರ್ ಭಾವಚಿತ್ರ ಕಂಡ್ರೆ ಅವರಿಗೆ ತುಂಬಾ ಪ್ರೀತಿ. ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಕರಸೇವಕರನ್ನು ಬಂಧಿಸಿದರು. ರೈತರನ್ನು ಬೀದಿಗಿ ನಿಲ್ಲಿಸಿದ್ದು, ಇದೇ ಸರ್ಕಾರ ಎಂದು ಆರೋಪಿಸಿದರು. ಹನುಮಧ್ವಜ…

Read More

ಕೋಲಾರ: ಕೊಲೆ ಪ್ರಕರಣ , ಹಾಗೂ ಅಫಘಾತಗಳು ಹೆಚ್ಚಾಗಲು ಅಬಕಾರಿ ಇಲಾಖೆ ಕಾರಣ ಎಂದು ಆರೋಪಿಸಿ ನಚಿಕೇತನ ನಿಲಯದಿಂದ ಅಬಕಾರಿ ಕಚೇರಿ ವರೆಗೂ ಅಂಬೇಡ್ಕರ್ ಸ್ವಾಬಿಮಾನಿ ಬಳಗ ವತಿಯಿಂದ ಪಾದಯಾತ್ರೆ ಮಾಡಲಾಯಿತು. ಬಾರ್ ಗಳು ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮದ್ಯ ಮಾರಾಟದ ಆರೋಪವಾಗಿದ್ದು, ತಮಟೆ ಚಳುವಳಿ ಮೂಲಕ ಅಬಕಾರಿ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನೂ ಕೂಗಿ ಅಂಬೇಡ್ಕರ್ ಬಾವಚಿತ್ರಕ್ಕೆ ನಮನ ಸಲ್ಲಿಸಿ ದರಣಿ ಕುಳಿತರು. ಬಾರ್ ಗಳ ಮೇಲೆ ಅಧಿಕಾರಿಗಳು ನಿಯಂತ್ರಣ ಸಾದಿಸಲು, ಅಕ್ರಮ ಮಾರಟಕ್ಕೆ ಕಡಿವಾಣ ಹಾಕಿ ಜನರನ್ನು ರಕ್ಷಿಸಬೇಕು. ಸಿಎಲ್ 2 ಹಾಗೂ ಸಿ ಎಲ್ 7 ಬಾರ್ ಲೈಸೆನ್ಸ್ ದುರುಪಯೋಗ ನಿಲ್ಲಿಸಬೇಕು, ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ , ದಾಸ್ತಾನು ಮಾಡುವವರ ಮೇಲೆ ಕ್ರಮಕ್ಕೆ ಅಂಬೇಡ್ಕರ್ ಸ್ವಾಬಿಮಾನಿ ಬಳಗ ಅದ್ಯಕ್ಷ ಮಂಜುನಾಥ್, ಯುವ ಶಕ್ತಿ ಸುಭ್ಬರಾಜು ನೇತೃತ್ವದಲ್ಲಿ ಆಗ್ರಹಿಸಿದ್ದಾರೆ.

Read More

ಬೆಂಗಳೂರು: ಸರ್ಕಾರ ಜನರ ಭಾವನೆಗಳಿಗೆ ಬೆಲೆ ಕೊಟ್ಟು ಕೆರಗೋಡಿನಲ್ಲಿ (Keragodu) ಭಗವಾನ್ ಧ್ವಜ ಹಾರಿಸಲು ಅವಕಾಶ ಕೊಡಬೇಕು ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (CN Ashwath Narayan) ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೆರಗೋಡಿನ ಗ್ರಾಮಸ್ಥರು ಸ್ವಂತ ಹಣದಲ್ಲಿ ಧ್ವಜಸ್ತಂಭ ನಿಲ್ಲಿಸಿದ್ದಾರೆ. ಪಂಚಾಯತ್‌ನಿಂದ ನಿರ್ಣಯ ಮಾಡಿದ್ದಾರೆ. ರಾಷ್ಟ್ರಧ್ವಜ, ನಾಡಧ್ವಜ, ಭಗವಾನ್ ಧ್ವಜ ಹಾರಿಸಲು ಅನುಮತಿ ಪಡೆದಿದ್ದಾರೆ. ದೇಶದಲ್ಲಿ, ರಾಜ್ಯದಲ್ಲಿ ಯಾವ ಕಡೆಯೂ ಭಗವಾನ್ ಧ್ವಜ ಹಾಕಿಲ್ಲ. ಈ ಸರ್ಕಾರಕ್ಕೆ ಇದೊಂದೆ ಧ್ವಜಸ್ತಂಭ ಕಂಡಿದ್ದಾ? ಭಗವಾನ್ ಧ್ವಜ ಹಾರಿಸಿದ್ದು ಕಾನೂನಿನಲ್ಲಿ ತಪ್ಪು ಇದ್ದರೆ ನೋಟಿಸ್ ಕೊಡಬಹುದಿತ್ತು. ಆದರೆ ಇವರು ಏಕಾಏಕಿ ಬಂದು ಭಗವಾನ್ ಧ್ವಜ ಇಳಿಸಿದರು ಎಂದು ಕಿಡಿಕಾರಿದರು ರಾಷ್ಟ್ರಧ್ವಜ ಹಾರಾಟ ಮಾಡಲು ಅಧಿಕಾರಿಗಳು ಕಾನೂನು ಪಾಲನೆ ಮಾಡಿಲ್ಲ. ಎಸಿ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ. ಗ್ರಾಮಸ್ಥರು ಎಸಿ ವಿರುದ್ಧ ದೂರು ಕೊಟ್ಟಿದ್ದಾರೆ. ತಕ್ಷಣ ಅವರ ಮೇಲೆ ಕ್ರಮ ಆಗಬೇಕು. ಎಫ್‌ಐಆರ್ ಹಾಕಬೇಕು. ಎಸಿ ವಿರುದ್ಧ ಕ್ರಮ ಆಗಬೇಕು. ಭಗವಾನ್…

Read More

ಬಳ್ಳಾರಿ: ಮಂಡ್ಯಜಿಲ್ಲೆ ಕೆರಹಲಗೋಡು ಗ್ರಾಮದಲ್ಲಿ ಹನುಮ ಧ್ವಜ ಆರೋಹಣಕ್ಕೆ ಸರ್ಕಾರದ ವಿರೋಧ ಮತ್ತು ಬಿಜೆಪಿ ಕಾರಗಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಖಂಡಿಸಿ ಗಣಿನಾಡು ಬಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ ನೇತೃತ್ವದಲ್ಲಿ ಪಕ್ಷದ ಮುಖಂಡರಾದ ಎಸ್.ಗುರುಲಿಂಗನಗೌಡ,  ಗುತ್ತಿಗನೂರು ವಿರೂಪಾಕ್ಷಗೌಡ ಶ್ರೀನಿವಾಸ್ ಮೋತ್ಕರ್, ಇಬ್ರಾಹಿಂ ಬಾಬು, ಗಣಪಾಲ್ ಐನಾಥರೆಡ್ಡಿ ಮೊದಲಾದವರು ಸೇರಿ ಮನವ ಸರಪಳಿ ಮಾಡಿ ಸರ್ಕಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿ ಪೊಲೀಸರ್ ದೌರ್ಜನ್ಯ ಖಂಡಿಸಿ ಘೋಷಣೆ ಕೂಗಿದರು. ಆರಂಭದಲ್ಲಿ ಇದಕ್ಕೆ ಪೊಲೀಸರು ಅಡ್ಡಿ ಪಡಿಸಲು ಮುಂದಾದಾಗ ಮುಖಂಡರು ಶಾಂತಿಯುತವಾಗಿ ನಡೆಸುವ ಪ್ರತಿಭಟನೆಗೆ ಅಡ್ಡಿ ಪಡಿಸಬೇಡಿ ಎಂದಾಗ 17 ನಿಮಿಷ ಕಾಲ ಪ್ರತಿಭಟನೆ ನಡೆಸಲಾಯ್ತು.  ಪಾಲಿಕೆ ಸದಸ್ಯರು, ಮುಖಂಡರಾದ  ಎಸ್.ಮಲ್ಲನಗೌಡ,   ಹೆಚ್.ತಿಪ್ಪಣ್ಣ, ಹನಮಂತ, ಕುಂಟನಾಳ್ ಮಲ್ಲಿಕಾರ್ಜುನಸ್ವಾಮಿ, ಶರಣ, ವೆಂಕಟೇಶ್, ರಾಮಾಂಜಿನಿ ಮೊದಲಾದವರು ಇದ್ದರು.

Read More

ಬೆಂಗಳೂರು: ಬಿಜೆಪಿಯವ್ರು ಹನಮ ಧ್ವಜದ ವಿಚಾರವನ್ನೇ ಇಟ್ಟುಕೊಂಡು ಜನರನ್ನು ಹತ್ತಿಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಟೀಕಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲದೆ ಬಿಜೆಪಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಹನುಮ ಧ್ವಜ ವಿಚಾರ ಇಟ್ಟುಕೊಂಡು ಜನರನ್ನು ಎತ್ತಿಕಟ್ಟಲು ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು. https://ainlivenews.com/why-have-you-not-learned-manners-in-the-matter-of-language-are-you-not-obeying-hdk-to-cm/ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಬಿಜೆಪಿಯವರು ನಡೆಸಿದ್ದಾರೆ. ದೇಶದ ಕಾನೂನಿಗೆ ನಾವು ಗೌರವ ಕೊಡಬೇಕು. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಹಾಗಾಗಿ ಜೆಡಿಎಸ್ ಜತೆ ಸೇರಿಕೊಂಡು ರಾಜಕೀಯ ನೆಲೆ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಇದರಿಂದ ಏನೂ ಲಾಭ ಆಗಲ್ಲ ಮಂಡ್ಯದ ಜನಕ್ಕೆ ಎಲ್ಲವೂ ಗೊತ್ತಿದೆ. ಮಂಡ್ಯದ ಜನ ಜಾತ್ಯಾತೀತರು ಹಾಗೂ ಸಹಿಷ್ಣುತೆ ಉಳ್ಳವರು ಇಂತಹ ವಿಚಾರಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

Read More

ಬಳ್ಳಾರಿ: ಬಳ್ಳಾರಿಯಲ್ಲಿ ಸಾಲ ವಸೂಲಾತಿ ಪದ್ಧತಿ ಖಂಡಿಸಿ ರೈತರಿಂದ ಸಂಕಲ್ಪ ಯಾತ್ರೆ ನಡೆಸಲಾಯಿತು. ಸಾಲ ಕಟ್ಟದ ರೈತರ ಮೇಲೆ ಕೇಸ್ ದಾಖಲಿಸಲು ಕೇಂದ್ರ ಸಚಿವರ ಹೇಳಿಕೆಗೆ ರೈತರು ಗರಂ ಆಗಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್’ನಿಂದ ಆಗುತ್ತಿರುವ ಅನ್ಯಾಯ ಖಂಡಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲದ ಮೊತ್ತಕ್ಕಿಂದ 4 ಪಟ್ಟು ಹೆಚ್ಚು ಹಣವನ್ನು ಪಾವತಿಸುವಂತೆ ಬ್ಯಾಂಕ್’ನಿಂದ ರೈತರಿಗೆ ನೋಟೀಸ್ ನೀಡಲಾಗಿದೆ. ಅನ್ನ ನೀಡುವ ರೈತರ ಮೇಲೆ ದಾವೆ ಹೂಡವ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಉದ್ಯಮಿದಾರರಿಗೆ ಸಾಲ ಮನ್ನಾ ಮಾಡಿದಂತೆ ರೈತರ ಸಾಲ ಮನ್ನಾ ಮಾಡಲು ನೀತಿ ರೂಪಿಸಲು ರೈತರು ಒತ್ತಾಯ ಮಾಡಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್ ಅವೈಜ್ಞಾನಿಕ ಸಾಲ ವಸೂಲಾತಿ ನೀತಿಯನ್ನು ಅನುಸರಿಸಿದೆ, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ರೈತ ಸಂಕಲ್ಪ ಯಾತ್ರೆ ರೈರು ಕೈಗೊಂಡಿದ್ದಾರೆ.

Read More

ಬೆಂಗಳೂರು: ಸಾರ್ವಜನಿಕ ಸಭೆಯಲ್ಲಿ ರಾಷ್ಟ್ರಪತಿಗಳನ್ನು ವಿವೇಚನೆ ಇಲ್ಲದೆ ಏಕವಚನದಲ್ಲಿ ಸಂಬೋಧಿಸಿ, ಈಗ ವಿಷಾದ ವ್ಯಕ್ತಪಡಿಸಿದರೆ ಆಗುತ್ತದೆಯೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು; ಅಂಕೆ ಮೀರಿದ ಭಂಡತನಕ್ಕೆ ಮುಖ್ಯಮಂತ್ರಿ ನೀವೇ ಅತ್ಯುತ್ತಮ ಉದಾಹರಣೆ ಸಿದ್ದರಾಮಯ್ಯನವರೇ. ಭಾವುಕನಾಗಿ ಮಾತನಾಡುವ ಭರದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಬೋಧಿಸಿದೆ ಎಂದು ನೀವು ಕೊಟ್ಟಿರುವ ಸಮಜಾಯಿಷಿ ಮೊಸಳೆಯನ್ನೂ ನಾಚಿಸುವಂತಿದೆ ಎಂದಿದ್ದಾರೆ ಅಲ್ಲದೆ, ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಸೊಗಡಿನ ವ್ಯಕ್ತಿತ್ವ ನನ್ನದು. ನಾನು ಮಾತನಾಡುವುದೇ ಹಾಗೆ..” ಎಂದು ನೀವು ಸಮರ್ಥಿಸಿಕೊಳ್ಳುತ್ತಿರಿ. ಸಮರ್ಥನೆಗೂ ಒಂದು ಅಳತೆ, ಗೌರವ ಇರುತ್ತದೆ. ಅದಾವುದನ್ನೂ ನೀವು ಲೆಕ್ಕಕ್ಕೇ ಇಟ್ಟಿಲ. ಹೌದಲ್ಲವೇ? ಎಂದು ಸಿಎಂ ಅವರನ್ನು ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ ಅವರು; 2ನೇ ಸಲ ಸಿಎಂ ಆಗಿ ಎಲ್ಲಾ ರೀತಿಯ ಶಿಷ್ಟಾಚಾರದ ಸುಖ ಅನುಭವಿಸುತ್ತಿದ್ದೀರಿ ಮತ್ತು ಪಾಲಿಸುತ್ತಿದ್ದೀರಿ, ಸರಿ. ಆದರೆ; ಭಾಷೆ ವಿಚಾರದಲ್ಲಿ ನೀವು ಯಾಕೆ ಶಿಷ್ಟಾಚಾರ…

Read More

ಗದಗ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಸಂಘರ್ಷ ತಾರಕಕ್ಕೇರಿದೆ. ಕೆರಗೋಡು ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ರಾಜ್ಯಾದ್ಯಂತ ಹೋರಾಟದ ಕಿಚ್ಚು ಹೆಚ್ಚಾಗಿದೆ. ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ನೇತೃತ್ವದಲ್ಲಿ ಹಿಂದೂ ವಿರೋಧಿ ಸರ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹನುಮಧ್ವಜವನ್ನು ಮತ್ತೆ ಅದೇ ಜಾಗದಲ್ಲಿ ಹಾರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

Read More