Author: AIN Author

ಬೀದರ್‌: ಬೀದರ್‌ನಲ್ಲಿ ನಾಗರಿಕ ವಿಮಾನಯಾನ ಸೇವೆ ರದ್ದುಗೊಂಡಿದ್ದು ಅತ್ಯಂತ ದುರದೃಷ್ಟಕರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್‌ ನಲ್ಲಿ ನಾಗರಿಕ ವಿಮಾನಯಾನ ಸೇವೆ ರದ್ದುಗೊಂಡಿದ್ದು ಅತ್ಯಂತ ದುರದೃಷ್ಟಕರ. ಇಲ್ಲಿನ ಪ್ರವಾಸೋದ್ಯಮ, ಕೈಗಾರಿಕೋದ್ಯಮ ಸೇರಿ ನಾಗರಿಕರ ಪ್ರಯಾಣಕ್ಕೆ ಸಾಕಷ್ಟು ಅನುಕೂಲವಾಗಿತ್ತು. ಇದೀಗ ಅದು ಹಠಾತ್‌ ರದ್ದಾಗಿದೆ. ಈ ಕುರಿತಂತೆ ರಾಜ್ಯದ ಹಿರಿಯ ಅಧಿಕಾರಿಗಳಷ್ಟೇ ಅಲ್ಲ ಕೇಂದ್ರದ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ನಾಗರಿಕ ವಿಮಾನಯಾನ ಆರಂಭಕ್ಕೆ ಕ್ರಮವಹಿಸ ಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಇನ್ನು  ನಾನಂತೂ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ. ಪಕ್ಷದ ಹೈಕಮಾಂಡ್‌ ತೀರ್ಮಾನ ಪಾಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಕೆಲ ಸಚಿವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಹೈಕಮಾಂಡ್‌ ಚಿಂತಿಸಿದೆ ಎಂಬುವದು ಊಹಾಪೋಹ ಅಂಥದ್ಯಾವುದೇ ಚರ್ಚೆಯಾಗಲಿ ನಿರ್ಧಾರವಾಗಲಿ ಆಗಿಲ್ಲ. ಚುನಾವಣಾ ಕಣಕ್ಕಿಳಿಸುವ ವಿಚಾರ ಹೈಕಮಾಂಡ್‌ ನಿರ್ಧರಿಸುತ್ತದೆ ಯಾರೇ ನಿಂತರೂ ನಾವೆಲ್ಲ ಸೇರಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು…

Read More

ತುಮಕೂರು: ಬಿಎಸ್‌ ಯಡಿಯೂರಪ್ಪ ಬೆಳೆಸಿದ ಕೂಸು ನಾನು, ದಾವಣಗೆರೆ ಲೋಕಸಭೆ ಟಿಕೆಟ್‌ ಆಕಾಂಕ್ಷಿ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ತುಮಕೂರಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು, ದಾವಣಗೆರೆ ಕ್ಷೇತ್ರದಿಂದ ನಾನು ಆಕಾಂಕ್ಷಿಯಾಗಿದ್ದೇನೆ. ಸಮೀಕ್ಷೆ ಮಾಡಿ ಲೋಕಸಭೆ ಟಿಕೆಟ್ ಕೊಡಲಿ ಎಂದು ಹೇಳಿದರು. ಇನ್ನು ಜಗದೀಶ್ ಶೆಟ್ಟರ್‌ ಯಾವುದೋ ಕಾರಣಕ್ಕೆ ಪಕ್ಷ ಬಿಟ್ಟು ಹೋಗಿದ್ದರು. ದೇಶದಲ್ಲಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡಬೇಕು. ಆ ಉದ್ದೇಶದಿಂದ ಸಂಘಟನೆ ಮಾಡಲು ಜಗದೀಶ್‌ ಶೆಟ್ಟರ್‌ ಬಂದಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು. ಲೋಕಸಭೆಯ 28 ಕ್ಷೇತ್ರಗಳನ್ನು ಗೆಲ್ಲಿಸಲು ಜಗದೀಶ್ ಶೆಟ್ಟರ್ ಪುನರ್ ಸೇರ್ಪಡೆಯಾಗಿದ್ದಾರೆ. ಇಡೀ ರಾಜ್ಯದ ಮುಖಂಡರು ಮತ್ತು ಕಾರ್ಯಕರ್ತರಿಗೆ ಜಗದೀಶ ಶೆಟ್ಟರು ವಾಪಸ್ ಬಂದಿರುವುದಕ್ಕೆ ಸಂತಸವಿದೆ. ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಾಗ ನಾನು ಯಾವತ್ತೂ ವಾಗ್ದಾಳಿ ಮಾಡಿರಲಿಲ್ಲ. ಅವರಿಗೆ ಟಿಕೆಟ್ ಸಿಗದಿದ್ದಕ್ಕೆ ನನಗೂ ನೋವಿತ್ತು. ಅವರ ವಿರುದ್ಧ ನಾನು ಮಾತಾಡಿದ್ದಿದ್ರೆ ರಾಜಕಾರಣವನ್ನೇ ಬಿಡ್ತೀನಿ. ಅವರು ಸೋತ ನಂತರ ನಾನು ನಿರಂತರವಾಗಿ ಅವರ‌ ಸಂಪರ್ಕದಲ್ಲಿ ಇದ್ದೆ…

Read More

ಚಿಕ್ಕಮಗಳೂರು:- ಬೀಟಮ್ಮ ಗ್ಯಾಂಗ್ ಓಡಿಸಲು ಅಭಿಮನ್ಯು ಆ್ಯಂಡ್ ಟೀಮ್ ಅಖಾಡಕ್ಕಿಳಿದಿದೆ. ಪ್ರತಿಷ್ಠಿತ ಆ್ಯಂಬರ್ ವ್ಯಾಲಿ ಖಾಸಗಿ ವಸತಿ ಶಾಲೆ ಆವರಣದಲ್ಲಿ ಈ ಬೀಟಮ್ಮ ಗ್ಯಾಂಗ್ ಉಪಟಳಕ್ಕೆ ಬ್ರೇಕ್ ಹಾಕಲು ಸಾಕಾನೆ ಅಭಿಮನ್ಯು ನೇತೃತ್ವದ ತಂಡ ಅಖಾಡಕ್ಕಿಳಿದಿದೆ. ಅಭಿಮನ್ಯು ನೇತೃತ್ವದಲ್ಲಿ ಬೀಟಮ್ಮ ಗ್ಯಾಂಗ್ ಕಾರ್ಯಚರಣೆ ನಡೆಯಲಿದೆ. ಅಭಿಮನ್ಯುಗೆ ಮಹೇಂದ್ರ ಸುಗ್ರೀವ, ಭೀಮ, ದುಬಾರೆ ಹಾಗೂ ನಾಗರಹೊಳೆಯಿಂದ ಆಗಮಿಸಿರುವ 8 ಕುಮ್ಕಿ ಆನೆಗಳು ಸಾಥ್ ನೀಡಲಿವೆ. ಸದ್ಯ ಅಭಿಮನ್ಯು ಮತ್ತು ತಂಡ ಮತ್ತಾವರ ಅರಣ್ಯ ಇಲಾಖೆಯ ವಸತಿ ಗೃಹದ ಆವರಣಕ್ಕೆ ಬಂದಿಳಿದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ಬಳಿಕ ಕಾರ್ಯಚರಣೆ ಆರಂಭಗೊಳ್ಳಲಿದ್ದು, ಮಧ್ಯಾಹ್ನದ ಬಳಿಕ ಕಾರ್ಯಚರಣೆ ಆರಂಭಿಸುವ ಸಾಧ್ಯತೆ ಇದೆ. ಸದ್ಯ, ಬೀಟಮ್ಮ ಗ್ಯಾಂಗ್ ಚಲನೆಯ ಮೇಲೆ ನಿಗಾ ಇಟ್ಟಿರುವ ಅರಣ್ಯ ಇಲಾಖೆಯು ಬಂದ ದಾರಿಯಲ್ಲೇ ಅವುಗಳನ್ನು ವಾಪಸ್ ಕಳಿಸಲು ಪ್ಲಾನ್ ಮಾಡಿಕೊಂಡಿದೆ. ಸದ್ಯ, ಕೆಆರ್​ ಪೇಟೆ ಪೇಟೆ ಗ್ರಾಮದ ಶಾಲೆಯ ಹಿಂಭಾಗದ ಪ್ಲಾಂಟೇಶನ್​ನಲ್ಲಿ 30 ಕಾಡಾನೆಗಳೊಂದಿಗೆ ಪ್ಲಾಂಟೇಶನ್​ನಲ್ಲಿ ಬೀಟಮ್ಮ ಬೀಟು ಬಿಟ್ಟಿದೆ. ಆ್ಯಂಬರ್…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಕೊಡಿಗೆಹಳ್ಳಿ ಬಳಿಯ ಎನ್.ಟಿ‌.ಐ ಲೇಔಟ್​ನಲ್ಲಿ ಸೈಟ್‌ ವಿಚಾರಕ್ಕೆ ಗಲಾಟೆ ಮಾಡಿ ನಂತರ ಮನೆಗೆ ಹೋಗಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಜರುಗಿದೆ. ಪ್ರಕಾಶ್ ಮೃತ ರ್ದುದೈವಿ ಎಂದು ತಿಳಿದು ಬಂದಿದೆ. ಪ್ರಕಾಶ್ ಎಂಬುವವರಿಗೆ ಸೇರಿದ ಸೈಟ್ ಎನ್.ಟಿ.ಐ ಕಾಲೋನಿಯಲ್ಲಿದೆ.ಈ ಸೈಟ್​ ವಿಚಾರವಾಗಿ ಸಾಕಷ್ಟು ದಿನಗಳಿಂದ ನಾಗರಾಜ್ ಮತ್ತು ಪ್ರಕಾಶ್​ರವರ ಮಧ್ಯೆ ಈ ವಿಚಾರವಾಗಿ ಗಲಾಟೆಯಾಗುತ್ತಿತ್ತು. ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕೂಡ ಪ್ರಕಾಶ್ , ನಾಗರಾಜ್​ ಎಂಬಾತನ ನಡುವೆ ಜಮೀನು ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಗಲಾಟೆ ಮಾಡಿಕೊಳ್ಳಬೇಡಿ. ಕೋರ್ಟ್ ವಿಚಾರ ಕೋರ್ಟ್​ನಲ್ಲಿ ಬಗೆಹರಿಸಿ ಎಂದು ಸೂಚಿಸಿ ವಾಪಸ್ಸು ಕಳಿಸಿದ್ದಾರೆ ಇನ್ನು ಪೊಲೀಸರು ಜಗಳವನ್ನು ಶಾಂತ ಮಾಡಿ ಮನೆಗೆ ಕಳುಹಿಸಿದ್ದಾರೆ. ನಂತರ ಮನೆಗೆ ಹೋದಾಗ ಪ್ರಕಾಶ್​ ಅವರು ಎದೆ ನೋವು ಎಂದು ಹೇಳಿಕೊಂಡಿದ್ದಾರೆ. ಕೂಡಲೇ ಹತ್ತಿರದ ಉಮಾಶಂಕರ್ ಎಂಬ ಕ್ಲಿನಿಕ್​ಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಇಲ್ಲ ಆಗಲ್ಲ ಎಂದು ಬೇರೊಂದು ಆಸ್ಪತ್ರೆಗೆ…

Read More

ಬೆಂಗಳೂರು:- ಬಿಬಿಎಂಪಿ 2024-25ನೇ ಸಾಲಿನ ಆಯವ್ಯಯ ಮಂಡನೆಗೆ ಬಿಬಿಎಂಪಿ ಅಧಿಕಾರಿಗಳಿಂದ ಭರ್ಜರಿ ತಯಾರಿ ನಡೆದಿದೆ. ಫೆಬ್ರವರಿ 16ರಂದು ರಾಜ್ಯ ಸರ್ಕಾರದಿಂದ ಆಯವ್ಯಯ ಮಂಡನೆ ಆಗಲಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 8050 ಕೋಟಿ ರೂ ಅನುದಾನ ಅಪೇಕ್ಷಿಸಿದ್ದು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ.ಸಂಚಾರ ದಟ್ಟಣೆ ನಿವಾರಣೆ ಸಲುವಾಗಿ ಸುರಂಗ ರಸ್ತೆ ನಿರ್ಮಾಣ ಕಾರ್ಯ, ಇಂದಿರಾ ಕ್ಯಾಂಟೀನ್‌ಗಳ ಸಮರ್ಪಕ ಕಾರ್ಯ ನಿರ್ವಹಣೆ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳಿಗೆ ಅಗತ್ಯ ಅನುದಾನ ಒದಗಿಸುವಂತೆ ಈ ಪ್ರಸ್ತಾವನೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸಂಚಾರ ದಟ್ಟಣೆ, ಕಸ, ರಸ್ತೆ ಗುಂಡಿ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲಸೌಕರ್ಯ ಸಮಸ್ಯೆಗಳ ವಿರುದ್ಧ ಸೆಣಸುತ್ತಲೇ ಇರುವ ಬಿಬಿಎಂಪಿಯು, ರಾಜ್ಯ ಸರಕಾರದ 2024-25ನೇ ಸಾಲಿನ ಆಯವ್ಯಯದಲ್ಲಿ8050 ಕೋಟಿ ರೂಪಾಯಿ ಅನುದಾನ ಅಪೇಕ್ಷಿಸಿದೆ. ರಾಜ್ಯ ಸರಕಾರವು ಫೆ.16ರಂದು ಬಜೆಟ್‌ ಮಂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯ ಅಭಿವೃದ್ಧಿಗೆ ಪಾಲಿಕೆಯು 8050 ಕೋಟಿ ರೂಪಾಯಿ…

Read More

ದಿಸ್ಪುರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋದ ಕಡೆಗಳಲ್ಲಿ ಕಾಂಗ್ರೆಸ್ ಸೋತಿದೆ. ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಪ್ರಚಾರಕ ಎಂದು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ. ಭಾರತ್ ಜೋಡೋ ನ್ಯಾಯ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರಲ್ಲಿ ನಾಯಕತ್ವದ ಗುಣಗಳಿಲ್ಲ. ಎಲ್ಲೆಲ್ಲಿ ರಾಹುಲ್ ಗಾಂಧಿ ಹೋಗಿದ್ದಾರೋ, ಅಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ರಾಹುಲ್ ಗಾಂಧಿಯಿಂದ ಯಾರೂ ಪ್ರೇರಣೆ ಪಡೆಯುತ್ತಿಲ್ಲ. ರಾಹುಲ್ ಗಾಂಧಿ ಬಿಜೆಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಐ.ಎನ್.ಡಿ.ಐ.ಎ ಮೈತ್ರಿ ಒಕ್ಕೂಟ ರಚನೆಯಾದಾಗಲೇ ಇದು ಹೆಚ್ಚಿನ ದಿನ ಇರುವುದಿಲ್ಲ ಎಂದು ನಾನು ಹೇಳಿದ್ದೆ. ಕಾರಣ ಸೈದ್ಧಾಂತಿಕ ಭಿನ್ನಭಿಪ್ರಾಯ ಇದ್ದರೂ ಸರಿಹೋಗಬಹುದು. ಆದರೆ ಬಹುತೇಕ ಪಾರ್ಟಿಗಳಲ್ಲಿ ಅಜೆಂಡಾ, ಸೈದ್ಧಾಂತಿಕ ವಿಚಾರಧಾರೆಯೇ ಇಲ್ಲ. ಅಧಿಕಾರಕ್ಕಷ್ಟೇ ಮೈತ್ರಿ, ಎಲ್ಲರಿಗೂ ಪ್ರಧಾನಿ ಮೋದಿಯವರನ್ನು ಸೋಲಿಸಬೇಕು ಎಂಬ ಗುರಿ ಇದೆ. ಬಿಜೆಪಿ ಆಡಳಿತದಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂದರೆ ಅವರ ಬಳಿ ಉತ್ತರ ಇಲ್ಲ ಎಂದಿದ್ದಾರೆ.

Read More

ಬೆಂಗಳೂರು:- ನೈಸ್ ರಸ್ತೆಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಚಲಿಸುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಎಸ್ಕೇಪ್ ಆಗಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ಜರುಗಿದೆ. ಸುಂಕದಕಟ್ಟೆಯಿಂದ ಕೆಂಗೇರಿ ಮಾರ್ಗದಲ್ಲಿ ಘಟನೆ ಜರುಗಿದೆ. ಘಟನೆಯಲ್ಲಿ ಮೂರ್ನಾಲ್ಕು ಕಾರು ಮತ್ತು ಮೂರ್ನಾಲ್ಕು ಲಾರಿಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಜ್ಙಾನಭಾರತಿ ಪೊಲೀಸರು ಭೇಟಿ,ಪರಿಶೀಲನೆ ಮಾಡಿದ್ದಾರೆ.

Read More

ಬೆಂಗಳೂರು:- ಮಂಡ್ಯ ಬಿಟ್ಟರೆ ಬೇರೆಲ್ಲೂ ಸ್ಪರ್ಧಿಸಲು ನನಗೆ ಅಸಕ್ತಿ ಇಲ್ಲ ಎಂದು ಸುಮಲತಾ ಹೇಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾದ ಮೇಲೆ ಯಾರ ಜೊತೆಗೂ ಚರ್ಚಿಸಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ನನಗೆ ಫೋನ್ ಮಾಡಿದ್ದರು. ಮಾತನಾಡಲು ಬರುತ್ತೇನೆ ಎಂದು ಅವರು ಹೇಳಿದ್ದರು. ಆದರೆ, ನಾಳೆಯಿಂದ ಸಂಸತ್‌ನಲ್ಲಿ ಅಧಿವೇಶನ ನಡೆಯಲಿದೆ. ಹೀಗಾಗಿ ಬುಧವಾರ ನಾನು ದೆಹಲಿಗೆ ಹೋಗುತ್ತಿದ್ದೇನೆ ಎಂದು ಸುಮಲತಾ ಹೇಳಿದ್ದಾರೆ. ಬಿಜೆಪಿಯಲ್ಲಿ ಕೂಡ ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್ ಕೊಟ್ಟರೆ ಸ್ಪರ್ಧಿಸಲು ನನಗೆ ಅಸಕ್ತಿ ಇಲ್ಲ. ನನಗೆ ಮಂಡ್ಯದ ಸೇವೆ ಮಾಡಬೇಕು ಎಂಬ ಹಂಬಲ ಇನ್ನೂ ಇದೆ. ಮಂಡ್ಯದ ಜನ ನನ್ನನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಟ್ಟಿದ್ದಾರೆ. ನನ್ನ ಸ್ವಾರ್ಥಕ್ಕೆ ನಾನು ಮಂಡ್ಯದಿಂದ ದೂರ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.

Read More

ಹಾಸನ: ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರೇ ಮುಂದಿನ ಲೋಕಸಭೆ ಚುನಾವಣೆ ಜೆಡಿಎಸ್‌ ಅಭ್ಯರ್ಥಿ ಎಂದು ದೇವೇಗೌಡ ಹೇಳಿಕೆ ನೀಡಿರುವುದು ತಪ್ಪಲ್ಲ. ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಅಭ್ಯರ್ಥಿ ಆಗುತ್ತಾರೆ. ಆದರೆ, ಎನ್‌ಡಿಎ ಅಭ್ಯರ್ಥಿಯಾಗಿ ಇನ್ನು ಅವರನ್ನು ಆಯ್ಕೆಮಾಡಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಟು ಹಂಚಿಕೆ ವೇಳೆಯಲ್ಲಿ ಎನ್‌ಡಿಎ ಅಭ್ಯರ್ಥಿ ಯಾರೆಂದು ತೀರ್ಮಾನ ಆಗಲಿದೆ ಎಂದು ತಿಳಿಸಿದರು. ದೇವೇಗೌಡರು ಹಿರಿಯರು ಮಾಜಿ ಪ್ರಧಾನಿಗಳು. ಅವರು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ 28 ಕ್ಕೆ 28 ಗೆಲ್ಲಬೇಕು ಮೋದಿಯವರು ಮತ್ತೆ ಪ್ರಧಾನಿಯಾ ಗಬೇಕೆಂಬುದು ಅವರ ಬದ್ಧತೆಯಾಗಿದೆ. ಹಾಸನಕ್ಕೆ ಪ್ರಜ್ವಲ್ ರೇವಣ್ಣರಿಗೆ ಸೀಟು ಕೊಡೋದಿಲ್ಲ ಎನ್ನಲ್ಲ. https://ainlivenews.com/are-you-thinking-of-buying-a-home-low-interest-home-loan-available-in-these-banks/ ಆದರೆ, ಕೊಟ್ಟಿದ್ದಾರೆ ಎನ್ನೋ ಮಾತು ಸತ್ಯ ಅಲ್ಲ ಎಂದು ಸ್ಪಷ್ಟಪಡಿಸಿದರು. ಸೀಟು ಹಂಚಿಕೆ ಚರ್ಚೆ ಹಂತದಲ್ಲಿ ಇದೆ. ಯಾರಿಗೆ ಈ ಕ್ಷೇತ್ರ ಎಂದು ಹಿರಿಯರು ತೀರ್ಮಾನ ಮಾಡ್ತಾರೆ. ನಾವು ಅಭ್ಯರ್ಥಿ ಆಗಬೇಕು ಎಂದರೆ ಜೆಡಿಎಸ್ ಅವರ…

Read More

ನೆಲಮಂಗಲ:- ಬೆಂಗಳುರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ ಬೇಗೂರು ಗ್ರಾಮದಲ್ಲಿತನ್ನನ್ನು ಗುರಾಯಿಸಿ ನಿಂದಿಸಿದ್ದಾಗಿ ವ್ಯಕ್ತಿಯೊಬ್ಬ ಯುವಕನಿಗೆ ಚಾಕು ಇರಿದ ಘಟನೆ ಜರುಗಿದೆ ತಾಲೂಕಿನ ಟಿ ಬೇಗೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಯಾಗಿರುವ ಮಂಜುನಾಥ್ ಕೊಲೆ ಯತ್ನ ಮಾಡಿದ ಆರೋಪಿಯಾಗಿದ್ದು, ಅಶ್ವತ್ಥ್​ ಕುಮಾರ್ (30)​ ಚಾಕು ಇರಿತಕ್ಕೊಳಗಾದ ಯುವಕನಾಗಿದ್ದಾನೆ. ಅಶ್ವತ್ಥ್ ಕುಮಾರ್ ಸೂರ್ಯ ಗ್ಯಾಸ್ ಎಂಬ​ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ತನ್ನನ್ನು ಗುರಾಯಿಸಿದ್ದಲ್ಲದೆ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಮಂಜುನಾಥ್ ತನ್ನ ಡಿಯೋ ಬೈಕ್​ನಲ್ಲಿ ಬಂದು ಅಶ್ವತ್ಥ್​ ಕುಮಾರ್​ಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಗಾಯಾಳು ಅಶ್ವತ್ಥ್ ಕುಮಾರ್​ ಅವರನ್ನು ಕೂಡಲೇ ಸಿದ್ದಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಅಸ್ಪತ್ರೆ ಬಳಿ ಆಗಮಿಸಿದ ಗಾಯಳು ಅಶ್ವಥ್ ಕುಮಾರ್ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ತನಿಖೆ ಆರಂಭಿಸಿದ್ದಾರೆ.

Read More