Author: AIN Author

ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಾರ್ತಿಕ್ ಅವರ ಗರ್ಲ್ ಫ್ರೆಂಡ್ (Girlfriend) ಕುರಿತಂತೆ ಹಲವಾರು ರೀತಿಯಲ್ಲಿ ಚರ್ಚೆ ಮಾಡಲಾಯಿತು. ದೊಡ್ಮನೆಯಲ್ಲಿ ಮೊದ ಮೊದಲ ಕಾರ್ತಿಕ್ ಮತ್ತು ಸಂಗೀತಾ ಸ್ನೇಹದ ಬಗ್ಗೆ ಮಾತನಾಡಲಾಯಿತು. ಆಮೇಲೆ ನಮ್ರತಾ ಅವರ ಹೆಸರಿನ ಜೊತೆ ತಳುಕು ಹಾಕಲಾಯಿತು. ನಮ್ರತಾ ಸೇರಿದಂತೆ ಹಲವರು ಕಾರ್ತಿಕ್ ಅವರಿಗೆ ಗರ್ಲ್ ಫ್ರೆಂಡ್ ಇದ್ದಾಳೆ ಎಂದು ಮಾತನಾಡಿದರು. ಅದಕ್ಕೆಲ್ಲ ಕಾರ್ತಿಕ್ ಈಗ ಸ್ಪಷ್ಟನೆ ನೀಡಿದ್ದಾರೆ. ನನಗೆ ಗರ್ಲ್ ಫ್ರೆಂಡ್ ಇಲ್ಲ. ಅನೇಕ ಫ್ರೆಂಡ್ಸ್ ಇದ್ದಾರೆ. ನನ್ನ ಜೊತೆ ಬಿಗ್ ಬಾಸ್ ಮನೆಯಲ್ಲಿ ಯಾರೂ ಕನೆಕ್ಟ್ ಆಗಬಾರದು. ಹತ್ತಿರಕ್ಕೆ ಬರಬಾರದು ಎನ್ನುವ ಕಾರಣಕ್ಕಾಗಿ ಆ ರೀತಿ ಸುದ್ದಿಯನ್ನು ಹರಿಬಿಡಲಾಯಿತು ಎಂದು ಹೇಳಿದ್ದಾರೆ. ನನಗೆ ತುಂಬಾ ಕನಸುಗಳಿವೆ. ಅವುಗಳನ್ನು ಮುಂದುವರೆಸಿಕೊಂಡು ಹೋಗಬೇಕು. ಸದ್ಯಕ್ಕೆ ಗರ್ಲ್ ಫ್ರೆಂಡ್ ಕುರಿತಂತೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಕಾರ್ತಿಕ್ (Karthik) ಅವರ ಬಿಗ್‌ಬಾಸ್ (Bigg Boss Kannada) ಜರ್ನಿಯಲ್ಲಿ ವಿನಯ್ ಗೌಡ  (Vinay)ಅವರ ಪಾಲು ದೊಡ್ಡದಿದೆ. ಬಿಗ್‌ಬಾಸ್‌ ಷೋಗಿಂತಲೂ ಮೊದಲಿನಿಂದ, ಅಂದರೆ…

Read More

ವೆಂಕಟ್ ಭಾರದ್ವಾಜ್ ನಿರ್ದೇಶನದ ‘ನಗುವಿನ ಹೂಗಳ ಮೇಲೆ’ (Naguvina Hoogala Mele) ಚಿತ್ರ ಇದೇ ಫೆ.9ರಂದು ರಿಲೀಸ್ ಈಗಾಗಲೇ ಹಾಡುಗಳ ಮೂಲಕ, ಒಟ್ಟಾರೆ ಕಥೆಯ ಒಂದಷ್ಟು ಸುಳಿವುಗಳ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿರುವ ಈ ಸಿನಿಮಾ ಟ್ರೈಲರ್ ಅನ್ನು ಜ.29ಕ್ಕೆ  ಖ್ಯಾತ ನಿರ್ದೇಶಕ ಎ.ಹರ್ಷ (A.Harsha) ರಿಲೀಸ್ ಮಾಡಿದ್ದಾರೆ ‘ನಗುವಿನ ಹೂಗಳ ಮೇಲೆ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಎ.ಹರ್ಷ ಶುಭಕೋರಿದ್ದಾರೆ. ಈಗಾಲೇ ಒಂದಷ್ಟು ಭಿನ್ನ ಸಿನಿಮಾಗಳ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ವೆಂಕಟ್ ಭಾರದ್ವಾಜ್. ಅವರೀಗ ‘ನಗುವಿನ ಹೂಗಳ ಮೇಲೆ’ ಚಿತ್ರದ ಮೂಲಕ ಪರಿಶುದ್ಧವಾದ ಪ್ರೇಮಕಥಾನಕದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಪ್ರೇಮ ಕಥನದ ಚಿತ್ರಗಳೆಂದರೇನೇ ಯಾವತ್ತಿಗೂ ಮುಸುಕಾಗದಂಥಾ ಮೋಹವೊಂದು ಪ್ರೇಕ್ಷಕರಲ್ಲಿರುತ್ತದೆ. ಅದನ್ನು ಮತ್ತಷ್ಟು ಮುದಗೊಳಿಸುವ ಲಕ್ಷಣಗಳಿರೋ ಈ ಸಿನಿಮಾ ಟ್ರೈಲರ್, ಮೂಲಕ ಈ ಚಿತ್ರದ ಸಾರವನ್ನು ಪ್ರೇಕ್ಷಕರ ಮುಂದಿಟ್ಟಿದೆ. ಕಿರುತೆರೆಯಲ್ಲಿ ಒಂದಷ್ಟು ಹೆಸರು ಮಾಡಿರುವ ಅಭಿದಾಸ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಶರಣ್ಯಾ…

Read More

ಹೊಸ ಪ್ರತಿಭೆಗಳ ಸಮಾಗಮದಂತಿರುವ `ಧೀರ ಸಾಮ್ರಾಟ್’ (Dheera Samrat) ಚಿತ್ರ ಹಂತ ಹಂತವಾಗಿ ಸದ್ದು ಮಾಡುತ್ತಾ ಸಾಗಿ ಬಂದಿದೆ. ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಇದೇ 31ರಂದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj)  ಧೀರ ಸಾಮ್ರಾಟ್‌ ಟ್ರೈಲರ್‌ (Trailer) ಅನಾವರಣ ಮಾಡಲಿದ್ದಾರೆ. ಪವನ್ ಕುಮಾರ್ (ಪಚ್ಚಿ) (Pawan Kumar) ನಿರ್ದೇಶನದಲ್ಲಿ ಮೂಡಿ ಬಂದಿರುವ `ಧೀರ ಸಾಮ್ರಾಟ್’ ತನ್ನ ಶೀರ್ಷಿಕೆಯಲ್ಲಿಯೇ ರಗಡ್ ಫೀಲ್ ಅನ್ನು ಬಚ್ಚಿಟ್ಟುಕೊಂಡಂತಿರುವ ಚಿತ್ರ. ಯಾವುದಕ್ಕೂ ಸೈ ಎಂಬಂಥಾ ಹುರುಪಿನ ಹುಡುಗರ ಕಥನ ಈ ಸಿನಿಮಾದ ಜೀವಾಳ. ಈಗಾಗಲೇ ಹಾಡು ಸೇರಿದಂತೆ ನಾನಾ ರೀತಿಗಳಲ್ಲಿ ಧೀರ ಸಾಮ್ರಾಟ್ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಇನ್ನೆರಡು ದಿನದಲ್ಲಿ ಹೊರಬೀಳಲಿರುವ  ಟ್ರೈಲರ್ ನಲ್ಲಿ ಒಟ್ಟಾರೆ ಚಿತ್ರದ ಬಗೆಗಿನ ಮತ್ತಷ್ಟು ಇಂಟ್ರೆಸ್ಟಿಂಗ್‌ ಅಂಶಗಳು ಜಾಹೀರಾಗುವ ನಿರೀಕ್ಷೆಯಿದೆ. ತನ್ವಿ ಪ್ರೊಡಕ್ಷನ್ ಹೌಸ್ ಬ್ಯಾನರಿನಡಿಯಲ್ಲಿ ಗುರು ಬಂಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಕೇಶ್ ಬಿರಾದಾರ್ ಮತ್ತು ಅದ್ವಿತಿ…

Read More

ಕನ್ನಡದ ಮತ್ತೊಂದು ಹೊಸ ಬಗೆಯ ಸಿನಿಮಾ ರೆಡಿಯಾಗಿದೆ. ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ ಚಿತ್ರದ ಮತ್ತೊಂದು ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ಸಾರಾಂಶ ಎಂಬುದು ವಿಶೇಷ ಕಥಾ ಹಂದರದೊಳಗೆ ನಾನಾ ಬೆರಗುಗಳನ್ನು ಬಚ್ಚಿಟ್ಟುಕೊಂಡಿರುವ ಸಿನಿಮಾ ಎಂಬ ಸೂಚನೆ ಈ ಹಿಂದೆಯೇ ಸಿಕ್ಕಿತ್ತು. ಅದೀಗ ಈ ಹಾಡಿನ ಮೂಲಕ ಸಮ್ಮೋಹಕವಾಗಿ ಸಾಬೀತಾಗಿ ಬಿಟ್ಟಿದೆ. ಒಟ್ಟಾರೆ ಸಿನಿಮಾದ ಇಂಚಿಂಚನ್ನೂ ಹೊಸತನದೊಂದಿಗೆ ಸಿಂಗರಿಸಬೇಕೆಂಬಂಥಾ ತಪನೆ ಹೊಂದಿರುವವರು ಸೂರ್ಯ ವಸಿಷ್ಠ. ಅದಕ್ಕೆ ಉದಿತ್ ಹರಿತಾಸ್ ರಂಥಾ ಸಂಗೀತ ನಿರ್ದೇಶಕರ ಸಾಥ್ ಸಿಕ್ಕಿರೋದರಿಂದಾಗಿ ಸಾರಾಂಶದ ನಶೆಯ ನಕಾಶೆ ಚೆಂದದ ಹಾಡಿನ ಮೂಲಕ ಪಸರಿಸುವಂತಾಗಿದೆ. ನಶೆಯೋ ನಕಾಶೆಯೋ ಎಂಬ ಈ ಹಾಡು ಮಾಧುರಿ ಶೇಷಾದ್ರಿ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಮತ್ತು ಉದಿತ್ ಹರಿತಾಸ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡು ರಾಮ್ ಕುಮಾರ್ ನೃತ್ಯ ನಿರ್ದೇಶನದೊಂದಿಗೆ ಕಳೆಗಟ್ಟಿಕೊಂಡಿದೆ. ಇದರ ಮೂಲಕವೇ ಶೃತಿ ಹರಿಹರನ್ ಪಾತ್ರದ ಝಲಕ್ ಕೂಡಾ ಜಾಹೀರಾಗಿದೆ. ಈ ವೀಡಿಯೋ ಸಾಂಗ್…

Read More

ಯಂಗ್ ಡೈನಾಮಿಕ್ ಪ್ರಣಮ್ ದೇವರಾಜ್ (Pranam Devaraj) ನಟನೆಯ ‌’S/o ಮುತ್ತಣ್ಣ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಪ್ರಣಮ್ ಜನ್ಮದಿನದ ವಿಶೇಷವಾಗಿ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡ ಶುಭ ಕೋರಿದೆ. ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಯಂಗ್ ಡೈನಾಮಿಕ್ ಪ್ರಣಮ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿ, S/o ಮುತ್ತಣ್ಣ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಈ ವೇಳೆ, ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಾಯಕ ಪ್ರಣಮ್ ದೇವರಾಜ್ ಮಾತನಾಡಿ, S/o ಮುತ್ತಣ್ಣ ಶ್ರೀಕಾಂತ್ ಸರ್ ಫಸ್ಟ್ ಟೈಮ್ ಮನೆಗೆ ಬಂದಾಗ ಅವರು ಮಾತನಾಡಿದ ರೀತಿ ಕಥೆ ಹೇಳಿದ ರೀತಿಯಲ್ಲಿ ನಂಬಿಕೆ ಬಂತು. ಪ್ರಾಮಿಸ್ ಮಾಡಿದಕ್ಕಿಂತ ಸಖತ್ ಆಗಿ ಸಿನಿಮಾ ತೆಗೆದಿದ್ದಾರೆ. ಖುಷಿ ರವಿ (Kushee Ravi) ಅವರು ಎಂಥ ನಟಿ ಅನ್ನೋದು ‘ದಿಯಾ’ದಿಂದ (Dia)  ಗೊತ್ತಾಗಿದೆ. ಅವರ ಜೊತೆ ಕೆಲಸ ಮಾಡಿದ್ದು, ಖುಷಿ ಕೊಟ್ಟಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು. ನಾಯಕಿ ಖುಷಿ ರವಿ ಮಾತನಾಡಿ, S/o ಮುತ್ತಣ್ಣ…

Read More

ಪಾಕಿಸ್ತಾನ: ನ್ಯುಮೋನಿಯಾದಿಂದ 230ಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಂಡಿರುವ ಧಾರುಣ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಶೀತ ವಾತಾವರಣದಿಂದ ಈ ಸಾವುಗಳು ಸಂಭವಿಸುತ್ತಿವೆ ಎಂದು ರಾಜ್ಯ ಸರ್ಕಾರ ಬಹಿರಂಗಪಡಿಸಿದೆ. ಪ್ರಾಣ ಕಳೆದುಕೊಂಡವರಲ್ಲಿ ಹೆಚ್ಚಿನವರು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಮತ್ತು ನ್ಯುಮೋನಿಯಾ ಲಸಿಕೆ ತೆಗೆದುಕೊಳ್ಳಲಿಲ್ಲ ಎಂದು ಸ್ಥಳೀಯ ಸರ್ಕಾರ ಹೇಳಿದೆ. ಪಾಕಿಸ್ತಾನದಲ್ಲಿ ನ್ಯುಮೋನಿಯಾ ಅಂಕಿಅಂಶದ ಪ್ರಕಾರ ಜನವರಿ 1 ರಿಂದ ಪಂಜಾಬ್ ಪ್ರಾಂತ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ನ್ಯುಮೋನಿಯಾ ಪ್ರಕರಣಗಳು ವರದಿಯಾಗಿವೆ ಎಂದು ಸರ್ಕಾರ ಹೇಳಿದೆ. 230 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಘೋಷಿಸಲಾಗಿದೆ. ಅವರೆಲ್ಲರೂ ಐದು ವರ್ಷದೊಳಗಿನ ಮಕ್ಕಳು ಎಂದು ಸರ್ಕಾರ ಖಚಿತಪಡಿಸಿದೆ. ಲಾಹೋರ್ ಒಂದರಲ್ಲೇ 47 ಕಂದಮ್ಮಗಳು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಆದರೆ ನ್ಯುಮೋನಿಯಾಕ್ಕೆ ಬ್ಯಾಕ್ಟೀರಿಯಾ ಮತ್ತು ವೈರಸ್ ಕಾರಣ ಎಂದು ಸ್ಥಳೀಯ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಲಸಿಕೆ ಹಾಕಿಸಿಕೊಂಡವರಿಗೆ ಯಾವುದೇ ತೊಂದರೆ ಇಲ್ಲವೆಂದು ತಿಳಿದುಬಂದಿದೆ. ಆದರೂ, ಕೆಲವೊಮ್ಮೆ ವೈರಲ್ ನ್ಯುಮೋನಿಯಾವನ್ನು ಸಂಕುಚಿತಗೊಳಿಸುವ ಅಪಾಯವಿದೆ.  ಶಾಲೆಗಳಲ್ಲಿ ಬೆಳಗಿನ…

Read More

ಆನೇಕಲ್:- ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅಪಘಾತ ಸಂಭವಿಸಿದ್ದು, ಬ್ಯಾಟರಿ ಚಾಲಿತ ವಾಹನಕ್ಕೆ ಮಗು ಸಿಲುಕಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಝೂ ನಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಅಪಘಾತ ನಡೆದಿದೆ ಎನ್ನಲಾಗಿದೆ. ತ್ರಿಧರ್(3) ಅಪಘಾತಕ್ಕೊಳಗಾದ ಬಾಲಕ. ಬಿಜಾಪುರ ಮೂಲದ ದಂಪತಿಗಳ ಪುತ್ರ ಎನ್ನಲಾಗಿದೆ. ಬನ್ನೇರುಘಟ್ಟ ಝೂ ನೋಡಲು ಕುಟುಂಬ ಬಂದಿತ್ತು. ಝನಲ್ಲಿ ರಸ್ತೆ ಬದಿಯಲ್ಲಿ ತಾಯಿ ಜೊತೆ ಮಗು ನಿಂತಿತ್ತು. ಎಂದಿನಂತೆ ಪ್ರವಾಸಿಗರನ್ನ ಕೂರಿಸಿಕೊಂಡು ಬ್ಯಾಟರಿ ಚಾಲಿತ ವಾಹನಗಳು ಸಂಚಾರ ಮಾಡಿವೆ. ಏಕಾಏಕಿ ರಸ್ತೆಗೆ ಓಡಿ ಮಗು ಬಂದಿದೆ. ಈ ವೇಳೆ ಆಕಸ್ಮಿಕವಾಗಿ ಬ್ಯಾಟರಿ ಚಾಲಿತ ವಾಹನಕ್ಕೆ ಬಾಲಕ ಸಿಲುಕಿದ್ದಾನೆ. ಗಂಭೀರ ಗಾಯಗೊಂಡಿದ್ದ ಮಗುವನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರೈಂಬೋ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನ ಭರಿಸಿದೆ.

Read More

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಬಗ್ಗೆ ಸಾಧಕ ಬಾಧಕಗಳನ್ನು ಚರ್ಚಿಸಿದ ನಂತರ ತೀರ್ಮಾನ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ರೋಪ್ ವೇ ನಿರ್ಮಾಣ ಕುರಿತು ಪರ ವಿರೋಧ ಅಭಿಪ್ರಾಯವಿದೆ. ಸಾಧಕ ಬಾಧಕಗಳನ್ನು ಚರ್ಚಿಸಿದ ನಂತರ ತೀರ್ಮಾನಿಸುತ್ತೇವೆ ಎಂದರು. ಚಾಮುಂಡೇಶ್ವರಿ ದೇವಾಲಯದ ಅಭಿವೃದ್ಧಿಗಾಗಿ ಪ್ರಾಧಿಕಾರ ಮಾಡಿದ್ದೇವೆ. ಪ್ರಸಾದ ಯೋಜನೆಯಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 40 ಕೋಟಿ ರೂ. ಅನುದಾನದಲ್ಲಿ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದು ಅವರು ಹೇಳಿದರು. ಸೋಮನಾಥಪುರ ದೇವಾಲಯಕ್ಕೆ ಏಕ ಕಾಲಕ್ಕೆ ಮೂಲಭೂತ ಸೌಕರ್ಯ ಕೊಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸೋಣ. ಸೋಮನಾಥಪುರ ದೇವಾಲಯಕ್ಕೆ ಯಾಕೆ ಬಸ್ ಸೌಲಭ್ಯ ಕಡಿಮೆಯಾಗಿದೆ ಎಂಬುದರ ಮಾಹಿತಿ ಇಲ್ಲ. ನಾನು ಕೆ.ಎಸ್.ಆರ್.ಟಿ.ಸಿ ಎಂಡಿ ಜೊತೆ ಈ ಬಗ್ಗೆ ಮಾತನಾಡುತ್ತೇನೆ. ಸೋಮನಾಥಪುರಕ್ಕೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ರೀತಿ…

Read More

ಬೆಂಗಳೂರು:- ಇಲ್ಲಿನ ವಿವಿ ವಿದ್ಯಾರ್ಥಿಗಳ‌ ಊಟದಲ್ಲಿ ಮತ್ತೆ ಹುಳು ಪತ್ತೆ ಆಗಿದ್ದು, ಕಳಪೆ ಆಹಾರ ತಿಂದು ವಿದ್ಯಾರ್ಥಿಗಳ ಆರೋಗ್ಯ ಏರುಪೇರಾಗಿದೆ. ಊಟದಲ್ಲಿ ಹುಳ ಇದೆ ಎಂದರೆ ಅಡ್ಜೆಸ್ಟ್ ಮಾಡಿ ಎಂಬ ಉತ್ತರ ಕೊಡುತ್ತಿದ್ದಾರೆ. ಕಳಪೆ ಆಹಾರದ ಕುರಿತು ವಿದ್ಯಾರ್ಥಿಗಳು ಕವನ ಬರೆದಿದ್ದಾರೆ. ಕಟ್ಟುಪಾಡು ಬದಲಾಗದು ಎಂಬ ಶೀರ್ಷಿಕೆಯಡಿ ಕವನ ಬರೆದಿದ್ದು, ಬದಲಿಸಲು ಮುಂದೆ ಬಂದರೆ ಎತ್ತಂಗಡಿ ಕಟ್ಟಿಟ್ಟ ಬುತ್ತಿ ಎಂಬ ಸಾಲಿನಡಿ ವಿವಿ ಅವ್ಯವಸ್ಥೆ ಕುರಿತು ಕವನ ಬರೆಯಲಾಗಿದೆ. ಕವನ ಬರೆದು ಹಾಸ್ಟೆಲ್ ವಿದ್ಯಾರ್ಥಿಗಳು ಭಾರೀ ವೈರಲ್ ಆಗುತ್ತಿದ್ದಾರೆ.

Read More

ಬೆಂಗಳೂರು:- ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆದಿದ್ದು, 33 ಡಿವೈಎಸ್ಪಿಗಳು, 132 ಇನ್ಸ್​​ಪೆಕ್ಟರ್​ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯು.ಡಿ.ಕೃಷ್ಣಕುಮಾರ್-ಡಿವೈಎಸ್​ಪಿ, ಬಿಡಿಎ, ಬೆಂಗಳೂರು. ಟಿ.ಎಂ.ಶಿವಕುಮಾರ್-ಎಸಿಪಿ, ಮಡಿವಾಳ ಉಪವಿಭಾಗ. ಹೆಚ್.ಬಿ.ರಮೇಶ್ ಕುಮಾರ್-ACP, ವಿವಿ ಪುರಂ ಉಪವಿಭಾಗ. ಎಂ.ಎನ್.ನಾಗರಾಜ್-ಎಸಿಪಿ, ಸಿಸಿಬಿ ಬೆಂಗಳೂರು. ಅನುಷಾರಾಣಿ-ACP, ಡಿಸಿಆರ್​ಇ, ಮೈಸೂರು ಸೇರಿದಂತೆ ಒಟ್ಟು 33 DySPಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಸಂಪಂಗಿರಾಮನಗರ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್ ರವಿಕಿರಣ್, ರಾಮನಗರ ಕುಂಬಳಗೋಡು ಠಾಣೆ ಇನ್ಸ್​​ಪೆಕ್ಟರ್ ಮಂಜುನಾಥ್ ಜಿ ಹೂಗಾರ್. ಕಾಟನ್​ಪೇಟೆ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ನರೇಂದ್ರ ಬಾಬು, ಸಿಸಿಬಿ ಬೆಂಗಳೂರು ಇನ್ಸ್​ಪೆಕ್ಟರ್ ಕೆ.ಲಕ್ಷ್ಮೀ ನಾರಾಯಣ್, ಹಲಸೂರು ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಸಂತೋಷ್ ಕೆ, ಜಯನಗರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ದೀಪಕ್ ಆರ್ ಸೇರಿ ಒಟ್ಟು 132 ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Read More