Author: AIN Author

ಮಡಿಕೇರಿ:- 28 ವರ್ಷದ ಯುವಕ ಮೊಣ್ಣಪ್ಪ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಖಾಸಗಿ ಲಾಡ್ಜ್​​ನಲ್ಲಿ ಜರುಗಿದೆ. ತಾಲೂಕಿನ ಆರ್ಜಿ ಗ್ರಾಮದ ನಿವಾಸಿ ಮೊಣ್ಣಪ್ಪ ಖಾಸಗಿ ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದನು. ಇಂದು ಲಾಡ್ಜ್​ನಲ್ಲಿ ವಿಷ ಕುಡಿದು, ಫ್ಯಾನ್​ಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಮಡಿಕೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ವಿಮಾನದಲ್ಲಿ ನೀರು ಕುಡಿದು ಅಸ್ವಸ್ಥ ಹಿನ್ನೆಲೆ, ಮಯಾಂಕ್‌ ಅಗರ್ವಾಲ್‌ ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಕರ್ನಾಟಕ ರಣಜಿ ತಂಡದೊಂದಿಗೆ ತ್ರಿಪುರಾದ ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ಅಗರ್ವಾಲ್‌ ಪ್ರಯಾಣ ಬೆಳೆಸಿದ್ದರು. ವಿಮಾನದಲ್ಲಿ ಕುಳಿತಿದ್ದ ಮಯಾಂಕ್‌, ಸೀಟಿನ ಮುಂಭಾಗದಲ್ಲಿ ಇಟ್ಟಿದ್ದ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದಾರೆ. ನೀರು ಕುಡಿಯುತ್ತಿದ್ದಂತೆ ಮಯಾಂಕ್‌ ನಾಲಿಗೆ, ಬಾಯಿಗೆ ಸುಟ್ಟ ಅನುಭವವಾಗಿದೆ. ಪರಿಣಾಮ ಅವರು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಅಗರ್ತಲಾದ ಐಎಲ್‌ಎಸ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಯಿತು. ತ್ರಿಪುರ ವಿರುದ್ಧ ಸೋಮವಾರ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿತ್ತು. ಮುಂದಿನ ಪಂದ್ಯಕ್ಕಾಗಿ ಸೂರತ್‌ಗೆ ಪ್ರಯಾಣ ಬೆಳೆಸಲಾಗಿತ್ತು.

Read More

ಚಿಕ್ಕಮಗಳೂರು:- ರಾಜಕೀಯವಾಗಿ ನರೇಂದ್ರ ಸ್ವಾಮಿ Is Seedless ಎಂದು ಮಾಜಿ ಶಾಸಕ ಸಿ.ಟಿ ರವಿ ಗುಡುಗಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ತನ್ನ ವಿರುದ್ಧ ಅವಹೇಳನ ಹೇಳಿಕೆ ನೀಡಿದ್ದ ನರೇಂದ್ರ ಸ್ವಾಮಿ, ರಾಜಕೀಯವಾಗಿ ನವ್ ಹೀ ಈಸ್ ಸೀಡ್ ಲೆಸ್ ಎಂದರು. ನರೇಂದ್ರ ಸ್ವಾಮಿ ಮಂತ್ರಿಗಿರಿಗಾಗಿ ಅರ್ಜಿ ಮೇಲೆ ಅರ್ಜಿ ಹಾಕಿ, ಗಮನ ಸೆಳೆಯುತ್ತಿದ್ದಾರೆ. ನವ್ ಹೀ ಈಸ್ ಸೀಡ್ ಲೆಸ್ ಯಾರು ಅದೇ ರೀತಿ ಇರ್ತಾರೆ, ಅವರು ಮಾತ್ರ ಅಂತಹ ಪದ ಬಳಕೆ ಮಾಡ್ತಾರೆ. ಅವರ ಮಾತಿನ ಧಾಟಿ ನೋಡಿದರೆ ನವ್ ಹೀ ಈಸ್ ಸೀಡ್ ಲೆಸ್. ಆ ಕಾರಣಕ್ಕೆ ಅವರ ಬಾಯಿಂದ ಅಂತಹ ಮಾತು ಬಂದಿದೆ. ಸೀಡ್ ಲೆಸ್ ಅಂದ್ರೆ ಗೊತ್ತಲ್ಲ, ಅದರಲ್ಲಿ ಬೀಜ ಇರಲ್ಲ ಮತ್ತು ಹುಟ್ಟಲ್ಲ. ರಾಜಕೀಯವಾಗಿ ನವ್ ಹೀ ಈಸ್ ಸೀಡ್ ಲೆಸ್. ಅದಕ್ಕೆ ಅವರು ಆ ಪದ ಬಳಸಿದ್ದಾರೆ ಎಂದು ರವಿ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಜ್ಞಾನವ್ಯಾಪಿ ಮಸೀದಿ ಕುರಿತು ಮಾತನಾಡಿದ ಅವರು,…

Read More

ಬೆಂಗಳೂರು:- ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯ 218 ಪಿಎಸ್‌ಐಗಳನ್ನು ವರ್ಗಾವಣೆ ಮಾಡಿ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ ಈ ಬಗ್ಗೆ ನಗರ ಪೊಲೀಸ್‌ ಆಯುಕ್ತರ ಪರವಾಗಿ ಐಪಿಎಸ್‌ ಅಧಿಕಾರಿ ರಮನ್‌ ಗುಪ್ತಾ ಅವರು ಆದೇಶ ಹೊರಡಿಸಿದ್ದು, ಸಂಬಂಧಪಟ್ಟ ಘಟಕಾಧಿಗಳು ವರ್ಗಾವಣೆಗೊಂಡ ಪಿಎಸ್‌ಐಗಳನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ, ನಿಯುಕ್ತಿಗೊಳಿಸಿರುವ ಸ್ಥಳಗಳಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಶಿವಪ್ಪ ಎಂ.ನಾಯ್ಕರ್‌-ರಾಮಮೂರ್ತಿನಗರ ಠಾಣೆ, ಶಿವಪ್ಪ -ವೈಟ್‌ಫೀಲ್ಡ್‌ ಠಾಣೆ, ರಮಾದೇವಿ ಬಿ.ಎಸ್‌.ಮಹದೇವಪುರ ಠಾಣೆ, ಮೂರ್ತಿ- ಮಲ್ಲೇಶ್ವರಂ ಠಾಣೆ, ಪ್ರಭುಗೌಡ ಎಸ್‌. ಪಾಟೀಲ್‌-ಆಡುಗೋಡಿ ಸಂಚಾರ ಠಾಣೆ, ವಿನೂತ್‌ ಎಚ್‌.ಎಂ.-ಬಸವನಗುಡಿ ಠಾಣೆ, ಶ್ರೀನಿವಾಸ್‌ ಪ್ರಸಾದ್- ಹುಳಿಮಾವು ಠಾಣೆಗೆ ಸೇರಿ 218 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

Read More

ರಾಯಚೂರು:- ಅಬಕಾರಿ ಸಚಿವ ತಿಮ್ಮಾಪುರ ಅವರು ಮದ್ಯದ ದರ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ, ತಮಿಳುನಾಡು ಮತ್ತು ಆಂಧ್ರ ಪ್ರದೇಶ‌‌ಕ್ಕೆ ಹೋಲಿಕೆ ಮಾಡಿದರೇ ಕ್ವಾಲಿಟಿ ಡ್ರಿಂಕ್ಸ್ ನಮ್ದೆ. ಆಮದು ಆಗದೆ ರೀತಿ ನಾವು ತಡೆಯುತ್ತೇವೆ. ಅಕ್ರಮವಾಗಿ ಆಮದು ಮಾಡಿಕೊಂಡವರ ಮೇಲೆ ಕೇಸ್​ ಅನ್ನು ಈಗಾಗಲೇ ಹಾಕುತ್ತಿದ್ದೇವೆ ಎಂದರು. ಇನ್ನೂ ಕರ್ನಾಟಕ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಮತ್ತೊಮ್ಮೆ ಹೆಚ್ಚಿಸಲು ಪ್ರಸ್ತಾಪಿಸಿರುವುದಾಗಿ ವರದಿಯಾಗಿದೆ. ಪ್ರತಿ 650 ಮಿಲಿ ಬಿಯರ್ ಬಾಟಲಿಗೆ 8-10 ರೂ. ವರೆಗೆ ದರ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ‘ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕಗಳು) ನಿಯಮಗಳು, 1968’ಕ್ಕೆ ತಿದ್ದುಪಡಿ ಮಾಡಲು ಕರಡು ಅಧಿಸೂಚನೆ ರೂಪಿಸಲಾಗಿದ್ದು, ಇದರಲ್ಲಿ ದರ ಹೆಚ್ಚಳವನ್ನು ಪ್ರಸ್ತಾಪಿಸಲಾಗಿತ್ತು. ದರ ಹೆಚ್ಚಳಕ್ಕೆ ಅವಕಾಶ ನೀಡುವ ಹೊಸ ನಿಯಮಗಳು ಈ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಸರ್ಕಾರದ ಐದು ಉಚಿತ ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕಾಗಿ…

Read More

ವಿಶೇಷವಾಗಿ ವಿಟಮಿನ್ ಎ ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಕಣ್ಣಿನ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ರೆಟಿನಾದ ಆರೋಗ್ಯವನ್ನು ಸುಧಾರಿಸುವ ಮತ್ತು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವ ಪೋಷಕಾಂಶಗಳ ಬಗ್ಗೆ ಕಲಿಯೋಣ.ಸತು, ಲ್ಯೂಟಿನ್ ಮತ್ತು ಜಿಯೊಸ್ಕಾಂಟಿನ್ ನಂತಹ ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಕಣ್ಣಿನ ಆಂತರಿಕ ಕೋಶಗಳಿಗೆ ಹಾನಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ➔ ಕುಂಬಳಕಾಯಿ ಬೀಜಗಳಲ್ಲಿ, ಸೆಣಬಿನ ಬೀಜಗಳ ಸೇವನೆಯು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ವಿಟಮಿನ್ ಸಿ ಮತ್ತು ವಿಟಮಿನ್ ಇ ಸಹ ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತದೆ. ಈ ಜೀವಸತ್ವಗಳು ಸೂರ್ಯಕಾಂತಿ ಬೀಜಗಳಲ್ಲಿ ಕಂಡುಬರುತ್ತವೆ. ➔ ಪಾಲಕ್ ಮತ್ತು ಪಾಲಕ್ ನಂತಹ ಎಲೆಗಳ ತರಕಾರಿಗಳು ನಿಮ್ಮ ದೃಷ್ಟಿಯನ್ನು ಸುಧಾರಿಸುತ್ತವೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದರ ಉರಿಯೂತ ನಿವಾರಕ ಗುಣಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಣ್ಣಿನ ಸಮಸ್ಯೆಗಳಿಂದ ರಕ್ಷಿಸುತ್ತವೆ. ➔ ಡ್ರೈ ಪ್ರೂಟ್ಸ್ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತವೆ ಮತ್ತು ಕಣ್ಣಿನ ಸಮಸ್ಯೆಗಳನ್ನು ದೂರವಿಡುತ್ತವೆ. ಒಣ ಹಣ್ಣುಗಳಲ್ಲಿ…

Read More

ಊಟದ ಬಳಿಕ ಪಾನ್ ತಿನ್ನುದಕ್ಕೆ ಆಧ್ಯಾತ್ಮಿಕ ಕಾರಣವಿದೆ. ಪಾನ್ ಎಲೆಯಿಂದ ಸೂಕ್ಷ್ಮ ವಾಯು ಪ್ರಕ್ಷೇಪಿತವಾಗುತ್ತದೆ. ಇದರಿಂದ ದೇಹದಲ್ಲಿರುವ ಪ್ರಾಣ ದೇಹ ಮತ್ತು ಪ್ರಾಣಮಯ ಕೋಶದ ಕ್ಷಮತೆ ಹೆಚ್ಚುತ್ತದೆ. ಶರೀರದಲ್ಲಿನ ಪಂಚಪ್ರಾಣದ ಕಾರ್ಯಕ್ಕೆ ಬಲ ಸಿಗುತ್ತದೆ ಮತ್ತು ಅನ್ನದಲ್ಲಿನ ರಜ-ತಮ ಕಣಗಳ ಬಿಗಡನೆ ಮಾಡಲು ಸಹಕರಿಸುತ್ತದೆ. ಪಾನಿನಿಂದ ಸ್ತೂಲ ಮತ್ತು ಸೂಕ್ಷ್ಮ ರೀತಿಯಿಂದ ಜೀರ್ಣಪ್ರಕ್ರಿಯೆ ನಡೆಯುತ್ತದೆ.ದೇಹದಲ್ಲಿನ ಸೂಕ್ಷ್ಮ ವಾಯು ಸರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ.

Read More

Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್ Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್ Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್ Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್ Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್ Pre Wedding Photoshoot: ಕೆಸರಿನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್

Read More

ಪೃಥ್ವಿ ಅಂಬಾರ್ ಒಂದರ ಹಿಂದೊಂದು ವಿಶಿಷ್ಠ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಹೊಸ ಸಿನಿಮಾವೊಂದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಆ ಸಿನಿಮಾವೇ ‘ಜೂನಿ’. ಟೈಟಲ್ನಿಂದಲೇ ಗಮನ ಸೆಳೆಯುತ್ತಿರುವ ಈ ಚಿತ್ರದ ಟ್ರೇಲರ್, ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿದೆ. ಈ ವೇಳೆ ಚಿತ್ರತಂಡ ಮಾಧ್ಯಮದರೊಂದಿಗೆ ಮಾಹಿತಿ ಹಂಚಿಕೊಂಡಿದೆ. ನಾಯಕ ಪೃಥ್ವಿ ಅಂಬಾರ್ ಮಾತನಾಡಿ, ವೈಭವ್ ಎಷ್ಟು ಕ್ಲಾರಿಟಿಯಾಗಿ ಮಾತನಾಡಿದರೋ, ಅಷ್ಟೇ ಕ್ಲಾರಿಟಿಯಾಗಿ ಸಿನಿಮಾ ಮಾಡಿದ್ದಾರೆ. ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಬುದ್ಧಿವಂತಿಕೆ,ಅನುಭದಲ್ಲಿ ತುಂಬಾ ದೊಡ್ಡವರು. ಈ ಸಿನಿಮಾದಲ್ಲಿ ಕ್ರಿಕೆಟ್ ಟೀಂ ಎಂದುಕೊಂಡರೆ ಅತಿ ಹೆಚ್ಚು ಸ್ಕ್ರೋರ್ ಮಾಡುವವರು ವೈಭವ್. ಅವರಷ್ಟೇ ಸ್ಕ್ರೋರ್ ಮಾಡುವವರು ರಿಷಿಕಾ. ಎರಡೂವರೆ ತಿಂಗಳ ಬಹಳಷ್ಟು ರಿಹರ್ಸಲ್ ಮಾಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎಂದು ತುಂಬಾ ಡೆಡಿಕೇಟೆಡ್ ಆಗಿ ಚಿತ್ರ ಮಾಡಿದ್ದಾರೆ. ನನ್ನದು 50% ಪರಿಶ್ರಮಅಷ್ಟೇ ಇರುವುದು. ಎಲ್ಲರದ್ದೂ 100ರಷ್ಟು ಇದೆ ಎಂದು ತಿಳಿಸಿದರು. ನಾಯಕಿ ರಿಷಿಕಾ ಮಾತನಾಡಿ, ನಾವು 2022ರಲ್ಲಿ ಈ ಚಿತ್ರದ ಶೂಟಿಂಗ್ ಶುರು…

Read More

ವಿಜಯಪುರ: ಲೇಡಿ ಕಂಡಕ್ಟರ್ ಗೆ ಅವಾಚ್ಯ ಶಬ್ದ ಬಳಿಸಿದ ಪ್ರಯಾಣಿಕನಿಗೆ ಶೂ ಸೇವೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಚಿಲ್ಲರೆ ಹಣ ಕೊಡುವ ವಿಷಯವಾಗಿ ಪ್ರಯಾಣಿಕ ಲೇಡಿ ಕಂಡಕ್ಟರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.‌ ಇದರಿಂದ ಕುಪಿತಗೊಂಡ ಲೇಡಿ ಕಂಡಕ್ಟರ್ ಬೂಟಿನಿಂದ ಧರ್ಮದೇಟು ನೀಡಿದ್ದಾರೆ. ಬಳಿಕ ಲೇಡಿ ಕಂಡಕ್ಟರ್ ಗೆ ಜನ ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ಈ ವೇಳೆ ಲೇಡಿ ಕಂಡಕ್ಟರ್ ಥಳಿಸುತ್ತಿರೋ ದೃಶ್ಯಗಳನ್ನು ಸ್ಥಳೀಯರು ವಿಡಿಯೋ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

Read More