Author: AIN Author

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1ರಂದು ಬಜೆಟ್ ಮಂಡಿಸುತ್ತಿ ದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ಇರುವುದರಿಂದ ಇದು ಮಧ್ಯಂತರ ಬಜೆಟ್ ಎಂದು ಪರಿಗಣಿಸ ಲಾಗುತ್ತದೆ. ಅಂದರೆ ಇದು ಇಡೀ ವರ್ಷಕ್ಕೆ ಅನ್ವಯ ಆಗುವುದಿಲ್ಲ. ಚುನಾವಣೆ ಮುಗಿದು ಹೊಸ ಸರ್ಕಾರ ಬಂದು ಹೊಸ ಬಜೆಟ್ ಮಂಡನೆ ಆಗುವವರೆಗೂ ಈ ಮಧ್ಯಂತರ ಬಜೆಟ್ ಹಣಕಾಸು ಬಳಕೆಗೆ ಕೀಲಿ ಒದಗಿಸುತ್ತದೆ. ಬಜೆಟ್ ಮಂಡನೆ ದಿನ ಮತ್ತು ಸಮಯ ಹಿಂದೆಲ್ಲಾ ಫೆಬ್ರುವರಿ ತಿಂಗಳ ಕೊನೆಯ ಕಾರ್ಯದಿನದಂದು ಬಜೆಟ್ ಮಂಡನೆ ಆಗುತ್ತಿತ್ತು. ಬ್ರಿಟಿಷರ ಕಾಲದಿಂದ ಬಂದ ರೂಢಿಯನ್ನೇ ಮುಂದುವರಿಸಲಾಗಿತ್ತು. ಆದರೆ, ಕೆಲ ವರ್ಷಗಳ ಹಿಂದೆ ಬಜೆಟ್ ದಿನವನ್ನು ಫೆಬ್ರುವರಿ 1ಕ್ಕೆ ನಿಗದಿ ಮಾಡಲಾಗಿದೆ. ಏಪ್ರಿಲ್​ನಿಂದ ಶುರುವಾಗುವ ಹಣಕಾಸು ವರ್ಷಕ್ಕೆ ಬಜೆಟ್ ಅಂಶಗಳನ್ನು ಅಳವಡಿಸಲು ಸಾಕಷ್ಟು ಸಮಯಾವಕಾಶ ಸಿಗುತ್ತದೆ. ಈ ಬಾರಿಯದ್ದು ಮಧ್ಯಂತರ ಬಜೆಟ್ ಆದರೂ ಫೆಬ್ರುವರಿ 1ಕ್ಕೆಯೇ ಇರುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬೆಳಗ್ಗೆ 11ಗಂಟೆಗೆ ಜಂಟಿ…

Read More

ಬೆಂಗಳೂರು: ಲೋಕಸಭೆಯಲ್ಲಿ ಸೋತರೆ ಗ್ಯಾರಂಟಿ ರದ್ದುಎಂದು ಕಾಂಗ್ರೆಸ್‌ ಶಾಸಕ ಬಾಲಕೃಷ್ಣ  ಹೇಳಿಕೆ ವಿಚಾರಕ್ಕೆ ಟ್ವೀಟ್ ಮೂಲಕ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ ತಮ್ಮ ಎಕ್ಸ್‌ ಖಾತೆಯಲ್ಲಿ  ಕಾಂಗ್ರೆಸ್‌ ಶಾಸಕ ಬಾಲಕೃಷ್ಣ ಅವರೇ ಯುದ್ದಕ್ಕೂ ಮುನ್ನ ಶಸ್ತ್ರತ್ಯಾಗ ಮಾಡಿ ಎನ್ನುವ ರೀತಿ ಆಗಿದೆ ಹಾಗೆ  ಪ್ರಧಾನಿ ನರೇಂದ್ರ ಮೋದಿಗೆ ಶರಣಾಗುವ ಮುನ್ಸೂಚನೆ  ಕೂಡ ನೀಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ https://ainlivenews.com/big-shock-5-free-guarantee-cancellation-kai-mlas-explosive-statement/ ಕಾಂಗ್ರೆಸ್ ಗ್ಯಾರಂಟಿ ಕೇವಲ ಜನರ ಮತ ಸೆಳೆಯಲು ಸೃಷ್ಟಿಸಿದ ಗಾಳ ಆಗಿದ್ದು  ಅವರ ಗ್ಯಾರಂಟಿ ಜನರ ಬದುಕು ರೂಪಿಸುವ ಶಾಶ್ವತ ಯೋಜನೆಗಳಲ್ಲ ಮೋಸ ಎಂದು ಈಗ ಅವರಿಗೂ ಅರ್ಥ ಆಗುತ್ತಿದೆ ಹಾಗೆ  ಭಾರತೀಯರ, ಕನ್ನಡಿಗರ ವಿಶ್ವಾಸ, ನಂಬಿಕೆ ಮೋದಿ ಗ್ಯಾರಂಟಿ ಮೇಲೆ ಅಷ್ಟೇ  ಕಾಂಗ್ರೆಸ್ಸಿನ ಗ್ಯಾರಂಟಿ ಮೇಲೆ ಜನ ನಂಬಿಕೆ ಇಟ್ಟುಕೊಂಡಿಲ್ಲ ಎಂದು ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ವಿರುದ್ದ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

Read More

ರಾಂಚಿ: ಜಾರ್ಖಂಡ್ ರಾಜಕೀಯ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೀತಿದೆ. ಭೂಹಗರಣದಲ್ಲಿ ಸಿಲುಕಿರೋ ಸಿಎಂ ಹೇಮಂತ್ ಸೋರೆನ್ ಬಂಧನ ಭೀತಿ ಎದುರಿಸ್ತಿದ್ದಾರೆ. ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ವಿಚಾರಣೆಗೆ ಧಾವಿಸಿದ್ದ ಸಂದರ್ಭದಲ್ಲಿ ಅಧಿಕೃತ ನಿವಾಸ ತೊರೆದಿದ್ದ ಸಿಎಂ ಹೇಮಂತ್ ಸೋರೆನ್ 30 ಗಂಟೆಗಳ ಕಾಲ ಯಾರ ಕೈಗೂ ಸಿಕ್ಕಿರಲಿಲ್ಲ. ಈ ಸಂಬಂಧ ಸ್ವತಃ ರಾಜ್ಯಪಾಲರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ಬಿಜೆಪಿಗರಂತೂ (BJP) ಸಿಎಂ ಎಸ್ಕೇಪ್ ಆಗಿದ್ದಾರೆ. ರಣಹೇಡಿ ಸಿಎಂ ಎಂದು ಲೇವಡಿ ಮಾಡಿದ್ರು. ಸಿಎಂ ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಟ್ಟವರಿಗೆ 11ಸಾವಿರ ನಗದು ಬಹುಮಾನ ಎಂದು ಮಾಜಿ ಸಿಎಂ ಬಾಬುಬಾಲ್ ಮರಂಡಿ ಪ್ರಕಟಣೆ ಹೊರಡಿಸಿದ್ರು. ಕೋರ್ಟ್‍ಗೆ ಹೇಬಿಯಸ್ ಕಾರ್ಪಸ್ ಅರ್ಜಿಗಳು ಕೂಡ ಸಲ್ಲಿಕೆ ಆದವು. https://ainlivenews.com/big-shock-5-free-guarantee-cancellation-kai-mlas-explosive-statement/ ಕೊನೆಗೆ ಮಂಗಳವಾರ ಮಧ್ಯಾಹ್ನ ಸಾರ್ವಜನಿಕವಾಗಿ ಕಾಣಿಸಿಕೊಂಡ ಹೇಮಂತ್ ಸೋರೆನ್, ಪಕ್ಷದ ಶಾಸಕರ ಜೊತೆ ತುರ್ತು ಸಭೆ ನಡೆಸಿದ್ರು. ಈ ಸಭೆಯಲ್ಲಿ ಸೋರೆನ್ ಪತ್ನಿ ಕಲ್ಪನಾ ಕೂಡ ಇದ್ದರು. ಹೀಗಾಗಿ ಹೇಮಂತ್ ಸೋರೆನ್ ತಮ್ಮ ಪತ್ನಿಯನ್ನು ಸಿಎಂ…

Read More

ಬೆಂಗಳೂರು: ಹೊಟೇಲ್ ಬಳಿ ಯುವತಿಯನ್ನ ಟಚ್ ಮಾಡಿ ವಿಕೃತಿ ಮೆರೆದಿದ್ದ ಆರೋಪಿಯನ್ನ  ವಿಜಯನಗರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ನಗರದ ಹಂಪಿನಗರ ನಿವಾಸಿ ಚಂದನ್ ಬಂಧಿತ ಆರೋಪಿಯಾಗಿದ್ದು  ಗ್ಯಾಸ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಚಂದನ್ ಪೊಲೀಸರ ವಿಚಾರಣೆ ವೇಳೆ ಕಿಡಿಗೇಡಿಗಳ ಸವಾಲ್ ಸಿಕ್ರೇಟ್ ಬೆಳಕಿಗೆ ಯುವತಿಯನ್ನ ಟಚ್ ಮಾಡಲು ಸವಾಲ್ ಹಾಕಿದ್ದನಂತೆ ಇನ್ನೊಬ್ಬ ಯುವಕ ಡಿಸೆಂಬರ್ 30ರಂದು  ಮೂವರು ಕಾಮುಕರು ಹೋಟೆಲ್​ಗೆ ಬರುವ ಯುವತಿಯರು, ಮಹಿಳೆಯರನ್ನು ಟಾರ್ಗೆಟ್ ಮಾಡಿ ಬೇಕು ಬೇಕು ಅಂತಲೇ ಟಚ್ ಮಾಡಿ ವಿಕೃತಿ ಮೆರೆಯುತ್ತಿದ್ದದ್ದು ಪತ್ತೆಯಾಗಿದೆ. ಬೇಕು ಬೇಕಂತಲೇ ಯುವತಿಯನ್ನು ಟಚ್ ಮಾಡಿ ವಿಕೃತಿ ಮೆರೆದ ಕಾಮುಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿಯನ್ನ ಟಚ್ ಮಾಡೋ ಮೊದಲು ಮೂವರು ಕಾಮುಕರು ಪ್ಲಾನ್ ಮಾಡಿಕೊಂಡಿದ್ದು ಒಬ್ಬ ಟಚ್ ಮಾಡೋ ಉದ್ದೇಶದಿಂದ ಹೋದ್ರೆ, ಮತ್ತಿಬ್ಬರು ವಾಚ್ ಮಾಡ್ತಾರೆ. ಬಳಿಕ ಏನಾದ್ರು ಗಲಾಟೆಯಾದ್ರೆ ಏನು ತಪ್ಪಿಲ್ಲ ಎಂಬಂತೆ ಎಸ್ಕೇಪ್ ಆಗ್ತಾರೆ. ಇದೇ ರೀತಿ ವಿಜಯನಗರದ ನಮ್ಮೂಟ ಹೋಟೆಲ್ ಬಳಿ ಯುವತಿಯನ್ನು…

Read More

ಮಾಗಡಿ:- MP ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಗ್ಯಾರಂಟಿ ರದ್ದು ಮಾಡೋದು ಒಳ್ಳೆಯದು ಎಂದು ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಹೇಳಿದರು. ಶ್ರೀಗಿರಿಪುರದಲ್ಲಿ ನಿನ್ನೆ ನಡೆದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಧರ್ಮ ರಾಜಕಾರಣದ ಮಂತ್ರಾಕ್ಷತೆ ಬೇಕೋ ಅಥವಾ ಜನಸಾಮಾನ್ಯರ ಜೀವನ ಬದಲಿಸುತ್ತಿರುವ ಕಾಂಗ್ರೆಸ್‌ನ ಗ್ಯಾರಂಟಿ ಬೇಕೊ ಎಂದು ಜನ ಈ ಚುನಾವಣೆಯಲ್ಲಿ ತೀರ್ಮಾನ ಮಾಡಬೇಕು’ ಎಂದರು ನಾವೆಲ್ಲರೂ ಹಿಂದೂಗಳು. ಆದರೆ, ದೇವರು ಮತ್ತು ದೇವಸ್ಥಾನದ ಹೆಸರಿನಲ್ಲಿ ರಾಜಕಾರಣ ಮಾಡಿ ಮತ ಪಡೆಯೋದು ಸರಿಯಲ್ಲ. ಹಾಗಾಗಿ, ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಅವುಗಳ ಆಧಾರದ ಮೇಲೆಯೇ ಜನರ ಬಳಿ ಮತ ಕೇಳುತ್ತೇವೆ’ ಎಂದು ತಿಳಿಸಿದರು. ‘ಒಂದು ವೇಳೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವೇನಾದರೂ ಕಡಿಮೆ ಸ್ಥಾನ ಗಳಿಸಿದರೆ, ಜನ ಗ್ಯಾರಂಟಿಗಳನ್ನು ತಿರಸ್ಕರಿಸಿದ್ದಾರೆ ಎಂದರ್ಥ. ಆಗ, ಅವುಗಳನ್ನು ರದ್ದು ಮಾಡಿ ನಾವೂ ಅವರಂತೆ ಮಂದಿರದ ರಾಜಕಾರಣ ಮಾಡಬೇಕಾಗುತ್ತದೆ’ ಎಂದರು.

Read More

ಸೌದಿ ಅರೇಬಿಯಾ: ಸೌದಿ ಅರೇಬಿಯಾದ ಉತ್ತರ ಭಾಗದಲ್ಲಿರು ಒಭುರ್ ಪ್ರೇದಶದಲ್ಲಿ ಜೆದ್ಹಾ ಟವರ್ ನಿರ್ಮಾಣವಾಗುತ್ತಿದೆ. ಕೆಂಪು ಸಮುದ್ರದ ಕರಾವಳಿ ತೀರದಲ್ಲಿರುವ ಈ ಜೆದ್ಹಾ ಟವರ್, ಮುಸ್ಲಿಮರ ಪವಿತ್ರ ಮೆಕ್ಕಾ ಹಾಗೂ ಮದೀನಾ ನಡುವಿದೆ. ಬುರ್ಜ್ ಖಲೀಫಾ ಕಟ್ಟಡ ನಿರ್ಮಾಣ ಹಾಗೂ ವಿನ್ಯಾಸ ಮಾಡಿದ ವಾಸ್ತುಶಿಲ್ಪಿ ಆ್ಯಡ್ರಿನ್ ಸ್ಮಿತ್ ಇದೀಗ ಜೆದ್ಹಾ ಟವರ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.  14 ವರ್ಷದಲ್ಲಿ ಇದೀಗ ಬುರ್ಜ್ ಖಲೀಫಾ ನಂಬರ್ 1 ಸ್ಥಾನ ಕಳೆದುಕೊಳ್ಳುತ್ತಿದೆ. ಬುರ್ಜ್ ಖಲೀಫಾಗಿಂತ ಎತ್ತರದ ಕಟ್ಟಡ ನಿರ್ಮಾಣವಾಗುತ್ತಿದೆ. ಜೆದ್ಹಾ ಟವರ್ ಶೀಘ್ರದಲ್ಲೇ ವಿಶ್ವದ ಅತೀ ಎತ್ತರದ ಕಟ್ಟಡ ಅನ್ನೋ ದಾಖಲೆ ಬರೆಯಲಿದೆ. ಜೆದ್ಹಾ ಟವರ್ ಎತ್ತರ 1,000 ಮೀಟರ್. ಅಂದರೆ ಬರೋಬ್ಬರಿ 3,280 ಅಡಿ ಎತ್ತರವಿದೆ. ಈ ಕಟ್ಟಡ ಒಟ್ಟು 5.30 ಲಕ್ಷ ಚದರ ಅಡಿ ವಿಸ್ತೀರ್ಣ ಪ್ರದೇಶದಲ್ಲಿ ಐತಿಹಾಸಿಕ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಕಟ್ಟದ ಅಂದಾಜು ವೆಚ್ಚ 20 ಬಿಲಿಯನ್ ಅಮೆರಿಕನ್ ಡಾಲರ್. ಜೆದ್ಹಾ ಟವರ್ 170 ಮಹಡಿಗಳನ್ನು ಹೊಂದಿರಲಿದೆ. 200 ಕೊಠಡಿಗಳ…

Read More

ರಾಮನಗರ : ಗ್ಯಾರಂಟಿ ಯೋಜನೆ ರದ್ದು ಮಾಡಲಾಗುತ್ತದೆ ಎಂದು ಕೈ ಶಾಸಕ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹೌದು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ನೀಡದಿದ್ದರೆ ಗ್ಯಾರಂಟಿ ಯೋಜನೆ ರದ್ದು ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣಹೇಳಿದ್ದಾರೆ. ಸದ್ಯ ಶಾಸಕರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮತದಾರರಿಗೆ ಮತ್ತೆ ಬ್ಲ್ಯಾಕ್ ಮೇಲ್ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಮಾಗಡಿ ತಾಲೂಕಿನ ಶ್ರೀಗಿರಿಪುರದ ಜನಸಂಪರ್ಕ ಸಭೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ ಸುರೇಶ್ ಪರ ಮತ ನೀಡುವಂತೆ ಶಾಸಕರು ತಾಕೀತು ಮಾಡಿದ್ದಾರೆ. ಶಾಸಕರು ಹೇಳಿದ್ದೇನು..?: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ರದ್ದು ಮಾಡಲಾಗುವುದು. ಬಿಜೆಪಿಯವರು ಅಕ್ಷತೆ ಕಾಳು ನೀಡಿ ಮತ ಕೇಳುತ್ತಿದ್ದಾರೆ. ನಾವು ಐದು ಗ್ಯಾರಂಟಿಗಳನ್ನ ನೀಡಿ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್  ಹೆಚ್ಚು ಸ್ಥಾನ ಗೆಲ್ಲದಿದ್ರೆ ಜನರಿಗೆ ಐದು ಗ್ಯಾರಂಟಿಗಳು ಇಷ್ಟ ಇಲ್ಲ ಅಂತ ಅರ್ಥ. ಹಾಗಾಗಿ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆಯೂ ಚರ್ಚೆ ಮಾಡಿದ್ದೇನೆ ಎಂದರು. ನಿಮ್ಮ ಮತ ಅಕ್ಷತೆ…

Read More

ಬೆಳಗಾವಿ: ಲಕ್ಷ್ಮಣ  ಸವದಿಯವರು ಬಿಜೆಪಿಗೆ ಮರಳಿ ಬಂದರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ. ಲಕ್ಷ್ಮಣ ಸವದಿ ಬಿಜೆಪಿಗೆ ಸೇರ್ತಾರೆ ಎಂಬ ವಿಚಾರ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಲಕ್ಷ್ಮಣ  ಸವದಿಯವರು ಬಿಜೆಪಿಗೆ ಬರುವ ಕುರಿತು ಈಗಾಗಲೇ ಚರ್ಚೆ ಶುರುವಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಚರ್ಚೆ ಪ್ರಾರಂಭ ಆಗಿದೆ. ನಮ್ಮನ್ನೂ ಕೂಡ ವರಿಷ್ಠರು ಕರೆದು ಮಾತನಾಡಿಸಿ ಅಭಿಪ್ರಾಯ ಕೇಳಿದ್ದಾರೆ. ಸವದಿಯವರನ್ನ ಕರೆತರುವ ಚರ್ಚೆಯಲ್ಲಿ ನಾನು ಕೂಡ ಒಬ್ಬ ಎಂದಿದ್ದಾರೆ. https://ainlivenews.com/if-you-save-%e2%82%b92-per-day-you-will-get-a-pension-of-%e2%82%b936000-every-year-apply-today/ ಸವದಿ ಅವರಿಗೆ ಸ್ಥಾನಮಾನ ಕೊಡುವ ಬಗ್ಗೆ ಮಾತನಾಡಿದ ಅವರು, ಸ್ಥಾನಮಾನಕ್ಕಾಗಿ ಯಾರೂ ಬರುವುದಿಲ್ಲ. ಕಾಂಗ್ರೆಸ್‌ಗೆ ಹೋದಾಗ ಏನು ಸ್ಥಾನಮಾನ ಕೇಳಿ ಹೋಗಿದ್ದರು ಅವರು ಏನು ಕೊಟ್ಟರೊ. ನಮ್ಮ ಪಕ್ಷಕ್ಕೆ ಬಂದರೆ ಏನು ಕೊಡಬೇಕು ಎಂಬುದನ್ನು ನಮ್ಮನ್ನ ಕರೆದು ನಿರ್ಣಯ ಮಾಡ್ತಾರೆ. ರಾಜ್ಯ ಮತ್ತು ರಾಷ್ಟ್ರೀಯ ವರಿಷ್ಠರು ಹೇಳಿದಂತೆ ಗೌರವಯುತವಾಗಿ ಅವರನ್ನ ಬರಮಾಡಿಕೊಳುತ್ತೇವೆ ಎಂದು ಪರೋಕ್ಷವಾಗಿ ಸವದಿಯನ್ನ ಕರೆತರುವ ವಿಚಾರ ಫೈನಲ್ ಹಂತಕ್ಕೆ ತಲುಪಿದೆ…

Read More

ತುಮಕೂರು:- ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ತುಮಕೂರಿನ ಶಿರಾ ಗೇಟ್ ಬಳಿಯಿರುವ KRDL ಇಂಜಿನಿಯರ್​ ಹನುಮಂತರಾಯಪ್ಪ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ. ಕೊರಟಗೆರೆಯ ಕಚೇರಿ, ಮಿಡಿಗೇಶಿಯ ಫಾರಂ ಹೌಸ್ ಮೇಲೆ ದಾಳಿ ನಡೆದಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ.

Read More

ಮಂಡ್ಯ:- ಇಲ್ಲಿನ ಲೋಕೋಪಯೋಗಿ ಇಲಾಖೆ ಇಇ ಆಗಿರುವ ಹರ್ಷಾ ಅವರ ಕಚೇರಿ, ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಮನೆ, ಮಂಡ್ಯ ಜಿಲ್ಲೆಯಲ್ಲಿರುವ ಸಂಬಂಧಿಕರ ಮನೆಗಳು, ಮಂಡ್ಯದ ಕಚೇರಿ, ಕಲ್ಲಹಳ್ಳಿಯಲ್ಲಿರುವ ಮಾವನ ಮನೆ, ನಾಗಮಂಗಲದಲ್ಲಿರುವ ಫಾರ್ಮ್​ಹೌಸ್​​ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸಜೀತ್ ನೇತೃತ್ವದಲ್ಲಿ ದಾಳಿ ನಡೆದಿದೆ

Read More