Author: AIN Author

 ಬೆಂಗಳೂರು:  ಸಿಲಿಕಾನ್‌ ಸಿಟಿಯಲ್ಲಿ  ಪಾದಚಾರಿ ಮೇಲೆ ಬಿದ್ದ ಶ್ರೀ ರಾಮನ ಕಟೌಟ್ ಈ ಘಟನೆ  ಎಚ್ಎಎಲ್ ಏರ್ಪೋರ್ಟ್ ರೋಡ್ ನಲ್ಲಿ ನಡೆದಿದೆ. ಹೆಚ್ ಎಎಲ್ ವಿಮಾನ ನಿಲ್ದಾಣದ ಪಕ್ಕದಲ್ಲೆ ಹಾಕಲಾಗಿದ್ದ ಶ್ರೀರಾಮನ ಬೃಹತ್ ಕಟೌಟ್ ಶ್ರೀರಾಮ ಮಂದಿರ ಉದ್ಘಾಟನೆ ದಿನದಂದು ಹಾಕಲಾಗಿದ್ದ ಕಟೌಟ್ಕಾರ್ಯಕ್ರಮ ಮುಗಿದು 10 ದಿನಗಳಾದ್ರು ಕಟೌಟ್ ತೆರವುಗೊಳಿಸದ ಹಿನ್ನೆಲೆ ಅವಘಡ ಕಟೌಟ್ ಬಿದ್ದ ಸಮಯದಲ್ಲಿ ಪಾದಚಾರಿ ಮಾರ್ಗದಲ್ಲಿ ಸಾಗುತ್ತಿದ್ದವರ ಮೇಲೆ ಬಿದ್ದ ಕಟೌಟ್ ಮೂರು ಜನ ಪಾದಚಾರಿಗಳು ಗಂಭೀರ ಗಾಯ ಮೂರು ಜನರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು

Read More

ರಾಯಚೂರು: ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅವಮಾನ ಮಾಡಿದ ಘಟನೆ ರಾಯಚೂರು ಜಿಲ್ಲೆ ಸಿರವಾರ ಪಟ್ಟಣದಲ್ಲಿ ನಡೆದಿದೆ. ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಅಪಮಾನ ಹಿನ್ನೆಲೆ ಸಿರವಾರದಲ್ಲಿ ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಿರವಾರದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ರಾತ್ರೋರಾತ್ರಿ ಕೆಲ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದಾರೆ. ಸದ್ಯ ಸಿರವಾರ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನಾಕಾರರು ರಸ್ತೆ ಮಧ್ಯದಲ್ಲಿ ಕುಳಿತು ಆಕ್ರೋಶ ಹೊರ ಹಾಕುತ್ತಿದ್ದಾರೆ. ಪೊಲೀಸರು ಸ್ಥಳದಲ್ಲಿ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಟಿಪ್ಪು ಸುಲ್ತಾನ್‌ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳ ಪತ್ತೆಗೆ ಸ್ಥಳೀಯ ಸಿಸಿ ಟಿವಿ ಫೂಟೇಜ್‌ ಗಳ ಪರಿಶೀಲನೆ ಸೇರಿದಂತೆ ಅಗತ್ಯ ತನಿಖಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.  

Read More

ಬೆಂಗಳೂರು: ಕೆರಗೋಡಿನಲ್ಲಿ ಧ್ವಜಸ್ತಂಭದಿಂದ ಹನುಮಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ವಿಧಾನಸಭಾ ವಿಪಕ್ಷ ನಾಯಕ ಆರ್‌.ಅಶೋಕ್‌ (R.Ashok) ಠಕ್ಕರ್‌ ಕೊಟ್ಟಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಆರ್‌.ಅಶೋಕ್‌, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ (Hanuma Flag) ಇಳಿಸಿದ ಮೇಲೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರ ಈಗ ದಿಢೀರನೆ ರಾಷ್ಟ್ರ ಧ್ವಜದ ಮೇಲೆ ಎಲ್ಲಿಲ್ಲದ ಭಕ್ತಿ ಉಕ್ಕಿ ಹರಿಯುತ್ತಿದೆ. 2011ರಲ್ಲಿ ಗಣರಾಜ್ಯೋತ್ಸವದ ದಿನದಂದು ಜಮ್ಮು-ಕಾಶ್ಮೀರದ ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಜೆಪಿ ಏಕ್ತಾ ಯಾತ್ರೆ ಕೈಗೊಂಡಿದ್ದಾಗ ರಾಷ್ಟ್ರಧ್ವಜ ಹಾರಿಸಲು ಬಿಡದೆ ಬಿಜೆಪಿ ನಾಯಕರನ್ನು ಬಂದಿಸಿದ್ದು ಇದೇ ಕಾಂಗ್ರೆಸ್ ಪಕ್ಷದ ಸರ್ಕಾರ ಎಂದು ಕಿಡಿಕಾರಿದ್ದಾರೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡುವುದನ್ನೂ ತಡೆದಿದ್ದು ಕೂಡ ಇದೇ ಕಾಂಗ್ರೆಸ್ ಪಕ್ಷ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ 75 ವರ್ಷಗಳ ನಂತರ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಿದ್ದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ. ಕೇಸರಿ, ಕುಂಕುಮ ಕಂಡರೆ ನನಗೆ ಭಯ ಅಂತ…

Read More

ನವದೆಹಲಿ: ಅಮಾನತುಗೊಂಡ ಸಂಸತ್ ಸದಸ್ಯರ ಅಮಾನತು ಹಿಂಪಡೆಯಲು ಸಭಾಧ್ಯಕ್ಷರು ಮತ್ತು ಸಭಾಪತಿಗಳಿಗೆ ಸರ್ಕಾರದ ಪರವಾಗಿ ಮನವಿ ಮಾಡಿದ್ದೇವೆ ಎಂದು ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದರು. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಬಂಧಪಟ್ಟ ವಿಶೇಷಾಧಿಕಾರ ಸಮಿತಿಯೊಂದಿಗೆ ಚರ್ಚಿಸಿ ಅಮಾನತುಗೊಂಡಿರುವ ಎಲ್ಲಾ ಸದಸ್ಯರ ಅಮಾನತು ಹಿಂಪಡೆಯುವಂತೆ ಸರ್ಕಾರದ ಪರವಾಗಿ ಕೋರಲಾಗಿದೆ ಎಂದು ಹೇಳಿದರು. https://ainlivenews.com/big-shock-5-free-guarantee-cancellation-kai-mlas-explosive-statement/ INDIA ಮೈತ್ರಿ ಬ್ರೈನ್ ಡೆಡ್ ಸ್ಥಿತಿಯಲ್ಲಿದೆ. ಕಾಂಗ್ರೆಸ್ ನ ಜಗಳದಿಂದಲೇ ಅದರ ಮಿತ್ರ ಪಕ್ಷಗಳೊಂದಿಗಿನ ಮೈತ್ರಿ ಅಂತ್ಯ ಕಂಡಿದೆ ಎಂದು ಸಚಿವ ಜೋಶಿ ಲೇವಡಿ ಮಾಡಿದರು.‌ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ನಡುವಿನ ಮೈತ್ರಿ ಹೋರಾಟ ಅಂತ್ಯ ಕಂಡಿದೆ. ಈಗಾಗಲೇ ಸಂಪೂರ್ಣ ಮುರಿದು ಬಿದ್ದಿದೆ ಎಂದು ಹೇಳಿದರು.  ಇದು ಅಸ್ವಾಭಾವಿಕ ಮೈತ್ರಿ. ಫೋಟೋಶೂಟ್‌ಗೆ ಸೀಮಿತ ಎಂದು ಹಿಂದೆಯೇ ಹೇಳಿದ್ದೇವೆ. ಇದೀಗ ಅದರ ಬ್ರೈನ್ ಡೆಡ್ ಆಗಿದೆ. INDIA ಮೈತ್ರಿ ಬೇಗ ಸಾಯುವುದು ಖಚಿತ ಎಂದು ಜೋಶಿ ಹೇಳಿದರು. ಮೈತ್ರಿ ಪಕ್ಷಗಳೊಂದಿಗೆ ಹೊಡೆದಾಡಿಕೊಂಡು ಒಡೆಯುವುದು ಕಾಂಗ್ರೆಸ್‌ನ ಸ್ವಭಾವ.…

Read More

ಬೆಂಗಳೂರು: ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಜನರಿಗೆ ಭರವೆಸಗಳನ್ನು ನೀಡಿದ್ದಾರೆ ಅದೆಲ್ಲಾ ಈಗ ಬೋಗಸ್​ ಭರವಸೆಗಳಾಗಿವೆ ಎಂದು ಟೀಕಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಕಸ್ಮಕವಾಗಿ ಅಧಿಕಾರಕ್ಕೆ ಬಂದಿದ್ದಾರೆ.ಇವರು ಚುನಾವಣೆಗೋಸ್ಕರ ಕೇವಲ ಐದು ಗ್ಯಾರಂಟಿ ಭರವಸೆಗಳನ್ನು ಮಾತ್ರ ನೀಡಿಲ್ಲ ಸುಮಾರು ಭರವಸೆಗಳನ್ನೂ ನೀಡಿದ್ದಾರೆ. ಕಾಂಗ್ರೇಸ್ ಸರ್ಕಾರ 10  ಅಕ್ಕಿಯನ್ನು ಜನರಿಗೆ ನೀಡುತ್ತೇವೆ ಎಂದು ಹೇಳಿದ್ದರು.ಆದರೆ ಕೇವಲ 3ಕೆ.ಜಿ ಅಕ್ಕಿ ಹಾಗೂ 174ರೂಪಾಯಿಗಳನ್ನು ನೀಡಿದ್ದಾರೆ.ಗೃಹಲಕ್ಷ್ಮೀಗೆ ಶೇ 60ರಷ್ಟು ಮಹಿಳೆಯರಿಗೆ ಯೋಜನೆಯ ಸದುಪಯೋಗವೇ ಆಗಿಲ್ಲ.ಯುವನಿಧಿ ಯೋಜನೆಯಿಂದ 5 ಲಕ್ಷ ಯುವಕರಿಗೆ ನೀಡುತ್ತೇವೆ ಎಂದು ಹೇಳಿದ್ದರು.ಆದರೆ ಕೇವಲ 3,5000 ಯುವಕರಿಂದ ಮಾತ್ರ ನೊಂದಣಿಯಾಗಿದೆ.ಈ ಯೋಜನೆಯೂ ಕೂಡ ಫೇಲ್​ ಆಗಿದೆ. ಇನ್ನೂ ಶಕ್ತಿ ಯೋಜನೆ ಜಾರಿ ಮಾಡಿದ್ರು ಆದರೆ ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿ ನಗರ ಸಭೆಗಳಲ್ಲಿ ಮಾತ್ರ ಸರ್ಕಾರಿ ಬಸ್ ಓಡಾಡುತ್ತೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್​ಗಳೇ ಬರುವುದಿಲ್ಲ.ಇವರು ಹೆಚ್ಚುವರಿ ಬಸ್ ಬಿಡಬೇಕಿತ್ತುಆದರೆ ಬಿಟ್ಟಿಲ್ಲ. ಗೃಹಜ್ಯೋತಿನೂ ಅಷ್ಟೇ ಫೇಲ್ಯೂರ್ ಆಗಿದೆ. ನಾವು ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ…

Read More

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ  ಅವರು ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿ ಕಲಾಪಕ್ಕೆ ಅಡ್ಡಿಪಡಿಸದಂತೆ ಮನವಿ ಮಾಡಿದ್ದಾರೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಿತ್ತುಕೊಳ್ಳುವ ಅಭ್ಯಾಸವಿರುವ ಸಂಸದರು ತಮ್ಮ ಸಂಸತ್ತಿನ ಸದಸ್ಯರಾಗಿದ್ದ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.  ಸಂಸತ್ತಿಗೆ ಸಕಾರಾತ್ಮಕವಾಗಿ ಕೊಡುಗೆ ನೀಡಿದವರನ್ನು ಎಲ್ಲರೂ ಸ್ಮರಿಸುತ್ತಾರೆ. ಆದರೆ ಅಡ್ಡಿಪಡಿಸಿದ ಸದಸ್ಯರನ್ನು ನೆನಪಿಸಿಕೊಳ್ಳುವುದಿಲ್ಲ. ಈ ಬಜೆಟ್ ಅಧಿವೇಶನವು ಪಶ್ಚಾತ್ತಾಪ ಮತ್ತು ಸಕಾರಾತ್ಮಕ ಹೆಜ್ಜೆಗುರುತುಗಳನ್ನು ಬಿಡಲು ಒಂದು ಅವಕಾಶವಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ನಾನು ಎಲ್ಲ ಸಂಸದರನ್ನು ಕೋರುತ್ತೇನೆ ಎಂದಿದ್ದಾರೆ. https://ainlivenews.com/big-shock-5-free-guarantee-cancellation-kai-mlas-explosive-statement/ ದೇಶವು ಪ್ರಗತಿಯ ಹೊಸ ಎತ್ತರಗಳನ್ನು ಮುಟ್ಟುತ್ತಿದೆ. ದೇಶವು ಪ್ರಗತಿಯಲ್ಲಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ದೇಶವು ಸರ್ವತೋಮುಖ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಅನುಭವಿಸುತ್ತಿದೆ ಎಂದು ಮೋದಿ ತಿಳಿಸಿದ್ದಾರೆ. ಬಜೆಟ್‌ ಅಧಿವೇಶನ ಇಂದಿನಿಂದ ಆರಂಭಗೊಂಡಿದೆ. ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದ್ದಾರೆ. ಫೆ.1…

Read More

ಬೆಂಗಳೂರು: ನಾವು ಗ್ಯಾರಂಟಿ (Guarantee Scheme) ಕೊಟ್ಟಿದ್ದು ಚುನಾವಣೆಗಾಗಿಯೇ. ಲೋಕಸಭೆಯಲ್ಲಿ (Lok Sabha Election) ಜನ ಮತ ಹಾಕಿಲ್ಲ ಎಂದರೆ ಗ್ಯಾರಂಟಿ ಅವಶ್ಯಕತೆ ಇಲ್ಲಾ ಎಂದರ್ಥ ಎಂದು ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್  (Congress) ಪಕ್ಷ ಸೋತರೆ ಗ್ಯಾರಂಟಿಗಳು ರದ್ದಾಗಬಹುದು ಎಂಬ ಬಾಲಕೃಷ್ಣ ಅವರ ಹೇಳಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಮಾಧ್ಯಮಗಳ  ಜೊತೆ ಮಾತನಾಡಿದ ಅವರು, ಗ್ಯಾರಂಟಿ ಬದಲು ಅಭಿವೃದ್ಧಿಗೆ ಹಣ ಬಳಸಲಿ ಅನ್ನೋದು ನನ್ನ ವೈಯುಕ್ತಿಕ ಅಭಿಪ್ರಾಯ. ನಾವು ಗ್ಯಾರಂಟಿ ಕೊಟ್ಟಿರೋದೇ ಚುನಾವಣೆ ಗೆಲ್ಲೋಕೆ. ಅವರು ದೇವಸ್ಥಾನ ಉದ್ಘಾಟನೆ ಮಾಡಿದ್ದು, ಮಂತ್ರಾಕ್ಷತೆ ಕೊಟ್ಟಿದ್ದು ಚುನಾವಣೆ ಗೆಲ್ಲೋಕೆ. ಬಿಜೆಪಿಯವರು (BJP) ಲೋಕಸಭೆ ಚುನಾವಣೆ ದೃಷ್ಟಿಯಿಂದ ದೇವಸ್ಥಾನ ಉದ್ಘಾಟನೆ ಮಾಡಿದರು. ನಮ್ಮ ದೀಪ ನಾವೆ ಹಚ್ಚಬೇಕು. ನಮ್ಮ ಕುಂಕುಮ ನಮಗೆ ನಾಮ ಹಾಕಿ ಅವರು ಅಧಿಕಾರಕ್ಕೆ ಬಂದರು ಎಂದು ಕಿಡಿಕಾರಿದರು. ಪೂರ್ತಿ ಆಗದ ದೇವಸ್ಥಾನವನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ಚುನಾವಣೆಗಾಗಿ. ಅವರು…

Read More

ಶಿವಮೊಗ್ಗ: 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರೀಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ (bg krishnamurthy) 2021 ರ ಡಿಸೆಂಬರ್​ ತಿಂಗಳು ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ.ಇದೀಗ ಅವರನ್ನ ಶಿವಮೊಗ್ಗ ಜಿಲ್ಲೆಯ ಪೊಲೀಸರು ಬಾಡಿ ವಾರಂಟ್ ಮೇಲೆ ಶಿವಮೊಗ್ಗಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಇವತ್ತು ಬಿಜಿಕೆ ಶಿವಮೊಗ್ಗ ಜಿಲ್ಲೆಗೆ ಬರಲಿದ್ದು  ಪ್ರಕ್ರಿಯೆಗಳು ಮುಗಿದ ಬಳಿಕ  ಕೋರ್ಟ್​ಗೆ ಹಾಜರುಪಡಿಸುವ ಸಾಧ್ಯತೆ ಇದೆ. ತೀರ್ಥಹಳ್ಳಿ ಪೊಲೀಸರ ತಂಡವೊಂದು ಈ ಸಂಬಂಧ ಕೇರಳ ಪೊಲೀಸರ ಮೂಲಕ ಬಾಡಿವಾರಂಟ್ ಮೇಲೆ ಬಿ.ಜಿ.ಕೃಷ್ಣಮೂರ್ತಿ ಯವರನ್ನ ಕರೆದುಕೊಂಡು ಬರಲು ನಿನ್ನೆಯೆ ಎಎನ್​ಎಫ್ ಟೀಂನ ಜೊತೆಗೆ ತೆರಳಿತ್ತು. ನಕ್ಸಲ್ ಬಿಜಿ ಕೃಷ್ಣಮೂರ್ತಿ ವಿರುದ್ಧ ಚಿಕ್ಕಮಗಳೂರು , ಉಡುಪಿ ಹಾಗೂ ಶಿವಮೊಗ್ಗದಲ್ಲಿ ಕೇಸ್​ಗಳು ದಾಖಲಾಗಿದ್ದವು. ಈ ಪ್ರಕರಣಗಳ ಸಂಬಂಧ ಈಗಾಗಲೇ ಉಡುಪಿ ಹಾಗೂ ಚಿಕ್ಕಮಗಳೂರು ಪೊಲೀಸರು ಬಿಜಿಕೆಯನ್ನು ಕೋರ್ಟ್​ಗೆ ಹಾಜರುಪಡಿಸಿವೆ. ಇದೀಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೊಲೀಸರು ಹಾಜರುಪಡಿಸುತ್ತಿದ್ದಾರೆ. ವಿಶೇಷ ಅಂದರೆ ಎಲ್​ಎಲ್​ಬಿ ಓದಿರುವ ಬಿಜಿಕೆ ತನ್ನ ವಿರುದ್ಧದ ಪ್ರಕರಣಗಳಲ್ಲಿ ತಾನೇ ಕೋರ್ಟ್​ನಲ್ಲಿ ವಾದ ಮಂಡಿಸುತ್ತಿದ್ದಾನೆ. ಆಗುಂಬೆ ಪೊಲೀಸ್…

Read More

ಬೆಂಗಳೂರು: ಕಾಲೇಜಿನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಹೊಸರೋಡ್ ಬಳಿಯ ಪಿಇಎಸ್ ಕಾಲೇಜಿನಲ್ಲಿ ನಡೆದಿದೆ. ಬೆಂಗಳೂರಿನ ಹೊಸರೋಡ್ ಬಳಿಯಿರುವ ಪಿಇಎಸ್ ಕಾಲೇಜ್ https://ainlivenews.com/bmrcl-master-plan-to-curb-rude-behavior-in-our-metro/ ನಿನ್ನೆ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು  ಹೊಸರೋಡ್ ಬಳಿಯ ಪಿಇಎಸ್ ಕಾಲೇಜಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ವಿಘ್ನೇಶ್ ಕೆ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ಹೊಂಗಸಂದ್ರದ ರಾಘವೇಂದ್ರ ಲೇಔಟ್ ನಿವಾಸಿ ಮೃತ ವಿದ್ಯಾರ್ಥಿಯಾಗಿದ್ದು  ಬಿಬಿಎ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಇಂಜಿನಿಯರಿಂಗ್ ವಿಭಾಗದ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Read More

ಬೆಂಗಳೂರು:  ಮೆಟ್ರೋದಲ್ಲಿ ಮಹಿಳೆಯರಿಗೆ ಸಾಲು ಸಾಲು ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಬಳಿಕ ಎಚ್ಚೆತ್ತಕೊಂಡ BMRCL ನಮ್ಮ ಮೆಟ್ರೋದಲ್ಲಿ ಅಸಭ್ಯ ವರ್ತನೆಗೆ ಕಡಿವಾಣ ಹಾಕಲು ಮಾಸ್ಟರ್​ ಪ್ಲಾನ್​ ರೂಪಿಸಿದೆ. ಮೆಟ್ರೋದಲ್ಲಿ ಮಹಿಳೆಯರಿಗೆ ಸಾಲು ಸಾಲು ಲೈಂಗಿಕ ಕಿರುಕುಳ ಬಳಿಕ ಎಚ್ಚೆತ್ತುಕೊಂಡ BMRCL ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ್ರೆ ಕಟ್ಬೇಕು ಭಾರೀ ದಂಡ ಕೊಡಬೇಕು ಹಾಗೆ ದಂಡ ಪರಿಷ್ಕರಣೆ ಮಾಡಿ BMRCL ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ದಂಡ ಪರಿಷ್ಕರಣೆ ಮಾಡಿದ ನಮ್ಮ ಮೆಟ್ರೋ ಇತ್ತೀಚೆಗೆ ನಮ್ಮ ಮೆಟ್ರೋದಲ್ಲಿ ಹೆಚ್ಚಾಗ್ತಿರುವ ಮಹಿಳೆಯರ ಮೇಲಿನ ಅನುಚಿತ ವರ್ತನೆ ಕಳೆದ ಕೆಲ ದಿನಗಳ ಹಿಂದೆ ಮೆಟ್ರೋ ಪ್ರಯಾಣದ ವೇಳೆ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಅಸಭ್ಯ ವರ್ತನೆ ತೋರಿದ ಪ್ರಯಾಣಿಕ ಬ್ಯಾಕ್ ಟು ಬ್ಯಾಕ್ ಘಟನೆಗಳ ಬಳಿಕ ಮೆಟ್ರೋ ಹತ್ತೋಕೆ ಮಹಿಳಾ ಪ್ರಯಾಣಿಕರು ಹಿಂದೇಟು ಹೀಗಾಗಿ ಅನುಚಿತ ವರ್ತನೆ ಮಾಡುವವರ ಮೇಲೆ ದಂಡಾಸ್ತ್ರ ಪ್ರಯೋಗಿಸಿದ ಬಿಎಂಆರ್ಸಿಎಲ್ ಇನ್ಮೇಲೆ ಮಹಿಳೆಯರ…

Read More