Author: AIN Author

ಮಂಡ್ಯದಲ್ಲಿ ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯ ಕಟ್ಟಡದ ಮೇಲೆ ಕಲ್ಲು ತೂರಿ ಕಿಟಕಿ ಗಾಜುಗಳನ್ನು ಧ್ವಂಸಗೊಳಿದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ದಾವಣಗೆರೆಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ದಾವಣಗೆರೆ ಜಿಲ್ಲಾ ಕುರುಬರ ಸಂಘ ಹಾಗೂ ಸಮಾಜದ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದು, ಕೂಡಲೇ ದುಷ್ಕರ್ಮಿಗಳ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜನವರಿ 29 ರಂದು ಮಧ್ಯಾಹ್ನ ಸುಮಾರು ಎರಡು ಗಂಟೆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಾಜಿ ಸಚಿವರಾದ ಸಿಟಿ ರವಿ ರವರ ನೇತೃತ್ವದಲ್ಲಿ ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ನಡೆದ ಹನುಮಧ್ವಜದ ವಿವಾದದ ಪ್ರತಿಭಟನೆಯ ಮೆರವಣಿಗೆ ಸಮಯದಲ್ಲಿ ಮಂಡ್ಯ ನಗರದ ಬಿಎಂ ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಕುರುಬರ ಸಂಘದ ಸಾರ್ವಜನಿಕ ವಿದ್ಯಾರ್ಥಿ ನಿಲಯ ಕಟ್ಟಡದ ಮೇಲೆ ಕಲ್ಲುತೂರಾಟ ಮಾಡಿ ಕಟ್ಟಡದ ಕಿಟ್ಟಿಕಿ ಗಾಜುಗಳನ್ನು ಧ್ವಂಸಗೊಳಿಸಿ ಹಾನಿ ಮಾಡಿದ ಇಂಥ…

Read More

ಪ್ರತಿಯೊಬ್ಬರೂ ವಿಶೇಷವಾಗಿ ಪಾಲಕರು ಮತ್ತು ವಿದ್ಯಾರ್ಥಿಗಳು ಅಗತ್ಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಅರಿತು ಪಾಲಿಸಬೇಕೆಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಅವರು ತಿಳಿಸಿದರು ರಸ್ತೆ ಸುರಕ್ಷತಾ ಮಾಸ ದಿನಾಚರಣೆ ಅಂಗವಾಗಿ ಮಿನಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಪಾದಚಾರಿಗಳು ರಸ್ತೆಯ ಬಲಬದಿಯಲ್ಲಿ ನಡೆಯಬೇಕು ಹಾಗೂ ಸುರಕ್ಷತಾ ನಡಿಗೆಯ ನಿಯಮವನ್ನು ಪಾಲಿಸಿ ಎಂದರು. ಜೀವ ಅಮೂಲ್ಯ ಇದನ್ನು ಅರಿತು ಪ್ರತಿಯೊಬ್ಬರು ವಾಹನ ಚಲಿಸುವಾಗ ಕಡ್ಡಾಯವಾಗಿ ಹೆಲ್ಮೆಟನ್ನು ಧರಿಸಬೇಕೆಂದರು. ನೀವುಗಳು ದುಡಿಕಿ ಮಾಡುವ ಒಂದು ಸಣ್ಣ ತಪ್ಪಿನಿಂದ ಒಂದು ಜೀವ ಹೋಗುವುದು ಜೊತೆಗೆ ಅವರ ಸಂಸಾರ ಬೀದಿಗೆ ಬರುತ್ತದೆ. ಇದಕ್ಕೆ ಹೊಣೆಗಾರರು ನೀವೆ ಆಗುತ್ತಿರಿ ಎಂದರು. ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳನ್ನು ಕಾರ್ಪೊರೇಷನ್ ಅವರು ತೆರುವುಗೊಳಿಸಿ ಸಾರ್ವಜನಿಕರ ಸುಗುಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದರು. ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಮತ್ತು ಅಮಲು ಪದಾರ್ಥಗಳನ್ನು ಮಾರಾಟ ಮಾಡುವವರು ಮತ್ತು ಸೇವಿಸುವವರು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕೆಂದರು. ಮುಖ್ಯ…

Read More

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಿನ್ನೆ ತಡರಾತ್ರಿ ಭೀಕರ ಕೊಲೆಯಾಗಿದೆ. ಯುವಕನೋರ್ವನನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಸುಟ್ಟು ಹಾಕಲು ಯತ್ನಿಸಿದ ಅಮಾನವೀಯ ಘಟನೆ ಕಾರವಾರ ರಸ್ತೆಯ ಎಂಟಿಎಸ್ ಕಾಲೊನಿಯಲ್ಲಿ ಪಾಳು ಜಾಗದಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಮಾರುತಿನಗರದ ನಿವಾಸಿ ವಿಜಯ ಬಸವ(25) ಎಂದು ಗುರುತಿಸಲಾಗಿದೆ‌. ನಿನ್ನೆ ತಡರಾತ್ರಿವರೆಗೂ ಯುವಕರು ಎಂಟಿಎಸ್ ಕಾಲೋನಿಯ ಪಾಳು ಜಾಗದಲ್ಲಿ ಮದ್ಯಸೇವನೆ ಮಾಡಿದ್ದಾರೆ. ಬಳಿಕ ಯುವಕರ ನಡುವೆ ಜಗಳ‌ ನಡೆದು‌ ಕೊಲೆ ಮಾಡಿ‌ ಪರಾರಿಯಾಗಿದ್ದಾರೆ. ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿ ಸುಟ್ಟು ಹಾಕಲು ಯತ್ನಿಸಿದ್ದಾರೆ. ಕೊಲೆಗೆ ಅನೈತಿಕ ಸಂಬಂಧ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹಳೆಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Read More

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೊಸ ಅತಿಥಿ ಆಗಮನವಾಗಿದೆ.. ಆನೆ ಮರಿಯಾ ಜನನದಿಂದಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ ಮರಿ ಆನೆಯನ್ನು ನೋಡಲು ಪ್ರವಾಸಿಗರನ್ನು ಕೈಬೀಸಿ ಕರಿತಿದೆ.. ಪಶು ವೈದ್ಯರ ಆರೈಕೆಯಲ್ಲಿ ತಾಯಿ ಮಗು ಆರೋಗ್ಯವಾಗಿದ್ದು 26ಕ್ಕೆ ಕಾಡಾನೆಗಳ ಸಂಖ್ಯೆ ಏರಿಕೆಯಾಗಿದೆ… ಹೀಗೆ ತಾಯಿಯ ಜೊತೆ ಆಟವಾಡುತ್ತಾ ಸ್ವಚ್ಛಂದವಾಗಿ ವಿಹರಿಸುತ್ತಿರುವ ಮರಿಯಾನೆ. ತಾಯಿ ಮತ್ತು ಮರಿಯಾನೆಯನ್ನು ಮುತುವರ್ಜಿಯಿಂದ ಪಾಲನೆ ಮಾಡುತ್ತಿರುವ ಕಾವಾಡಿ ಮಾವುತರು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸೀಗೆಕಟ್ಟೆಯಲ್ಲಿ…ಹೌದು ಅಪರೂಪದ ವನ್ಯಜೀವಿಗಳ ಆಶ್ರಯ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿ ಆಗಮನವಾಗಿದೆ. ಸಾಕಾನೆ ವೇದಾ ಗಂಡು ಮರಿಗೆ ಜನ್ಮ ನೀಡಿದ್ದಾಳೆ ಹೀಗಾಗಿ ಬನ್ನೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಒಟ್ಟು ಆನೆಗಳ ಸಂಖ್ಯೆ ಕೂಡ 26ಕ್ಕೆ ಏರಿಕೆಯಾಗಿದೆ. ಗಣರಾಜ್ಯೋತ್ಸವದಂದೇ ಮರಿ ಆನೆ ಹುಟ್ಟಿದ್ದರಿಂದ ಸ್ವತಂತ್ರ ಹೋರಾಟಗಾರರ ಹೆಸರು ನಾಮಕರಣ ಮಾಡಲಾಗುವುದು ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ…

Read More

ಬೆಂಗಳೂರು: ಪೀಣ್ಯ ಫ್ಲೈ ಓವರ್ ಬಳಸೋ ವಾಹನ ಸವಾರರಿಗೆ ಗುಡ್ ನ್ಯೂಸ್ ಇದೆ. ಬೆಂಗಳೂರಿನಿಂದ ರಾಜ್ಯದ 22 ಜಿಲ್ಲೆಗಳು ಸೇರಿದಂತೆ ಗೋವಾ, ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಈ ಮೇಲ್ ಸೇತುವೆ ಆಗಾಗ್ಗೆ ದುರಸ್ತಿ ಕಾರಣಕ್ಕೆ ಬಂದ್ ಆಗುತ್ತಿತ್ತು. ಇನ್ಮುಂದೆ ಅಂತ ಪರಿಸ್ಥಿತಿ ಎದುರಾಗಲ್ಲವಂತೆ. ಫೆಬ್ರವರಿಯಿಂದ ಎಲ್ಲ ವಾಹನಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ. ಎರಡು ವರ್ಷದಿಂದ ಗ್ರಹಣ ಹಿಡಿದ್ದಿದ್ದ ಪೀಣ್ಯ ಫ್ಲೈ ಓವರ್ ಗೆ‌ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. ಪೀಣ್ಯ ಪ್ಲೈಓವರ್ ಮೇಲೆ‌ ಎಲ್ಲಾ ವಾಹನಗಳ ಸಂಚಾರಕ್ಕೆ ಐಐಎಸ್ ಸಿ ಗ್ರೀನ್ ಸಿಗ್ನಲ್ ನೀಡಿದೆ. ಫೆಬ್ರವರಿ ಮೊದಲ ವಾರದಿಂದಲ್ಲೇ ಬಸ್ಸು, ಲಾರಿಗಳ ಹೆವಿ ವೈಕಲ್ ಸಂಚಾರ ಆರಂಭ ಆರಂಭವಾಗಲಿದೆ. ಹೌದು..ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶದ ಬಳಿ 120 ಪಿಲ್ಲರ್ ಹೊಂದಿರುವ 4.4 ಕಿ.ಮೀಟರ್ ಉದ್ದ ಇರುವ ಪೀಣ್ಯ ಪ್ಲೈ ಓವರ್ ಆಗಾಗ ದುರಸ್ಥಿ ಕಾರ್ಯ ನಡೆಯುತ್ತಲೇ ಇತ್ತು. ಕಳೆದ ಎರಡು ವರ್ಷದ ಹಿಂದೆ ಪಿಲ್ಲರ್ ನಂಬರ್ 101 ಮತ್ತು 102 ಪಿಲ್ಲರ್…

Read More

ಬೆಂಗಳೂರು: ಬಡಜನರ ಬಾಳಿನ ಆಶಾಕಿರಣರಾದ ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಮಂಜುನಾಥ್‌ ಅವರು ಇಂದು (ಬುಧವಾರ) ನಿವೃತ್ತರಾಗಲಿದ್ದಾರೆ. ಹೃದ್ರೋಗಿಗಳ ಪಾಲಿನ ಹೃದಯವಂತ ಡಾಕ್ಟರ್ ಮಂಜುನಾಥ್ ಅವರ ನಿವೃತ್ತಿ ಜೀವನ ಸುಖ ಸಂತೋಷದಿಂದಿರಲಿ. ನಿಮ್ಮ ಸಮಾಜ ಸೇವೆ ಮುಂದುವರಿಯಲಿ ಎಂದು ಪರಿಷತ್‌ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ 16 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತರಾಗುತ್ತಿರುವ ನಾಡಿನ ಪ್ರಖ್ಯಾತ ವೈದ್ಯರಾದ ಡಾ.ಸಿ.ಎನ್.ಮಂಜುನಾಥ್ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಮನಸಾರೆ ಶುಭ ಹಾರೈಸುತ್ತೇನೆ ಎಂದಿದ್ದಾರೆ. ಲಕ್ಷಾಂತರ ಹೃದ್ರೋಗಿಗಳ ಪಾಲಿಗೆ ಸಾಕ್ಷಾತ್ ಮಂಜುನಾಥನಂತೆ ಕಂಡವರು ಜಯದೇವದ ಡಾ. ಸಿ.ಎನ್ ಮಂಜುನಾಥ್. ಆರೋಗ್ಯ ಕ್ಷೇತ್ರದಲ್ಲಿ ಸೇವಾ ಮನೋಭಾವ ಬಹಳ ಮುಖ್ಯ. ಮಾನವೀಯತೆಯನ್ನೇ ಆಧಾರವಾಗಿಟ್ಟುಕೊಂಡು ಜಯದೇವ ಸಂಸ್ಥೆಯನ್ನ ಇಷ್ಟು ದೊಡ್ಡಮಟ್ಟಕ್ಕೆ ಬೆಳೆಸಿದ್ದಾರೆ. ಅವರ ನಿವೃತ್ತಿ ಜೀವನ ಸುಖ ಸಂತೋಷದಿಂದಿರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

Read More

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುದಿಲ್ಲ. 5 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಸೋತರೆ ಗ್ಯಾರಂಟಿ ಯೋಜನೆ ರದ್ದಾಗುತ್ತದೆ ಎಂಬ ಶಾಸಕ ಬಾಲಕೃಷ್ಣ ಅವರ ವಿವಾದಿತ ಹೇಳಿಕೆಗೆ ವಿವರಣೆ ನೀಡಿ ತೇಪೆ ಹಚ್ಚಿದ್ದಾರೆ. ಲೋಕಸಭಾ ಚುನಾವಣೆ ಆದ ಮೇಲೆ ಗ್ಯಾರಂಟಿ ಯೋಜನೆ ಕೊಡಲ್ಲ ಎಂಬುದನ್ನು ಬಾಲಕೃಷ್ಣ ಹೇಳಿರೋದಲ್ಲ. ಬಿಜೆಪಿಯವರು ಹಾಗೆ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ https://ainlivenews.com/guarantee-schemes-will-not-be-stopped-for-any-reason-cm-siddaramaiah/ ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ರದ್ದು ಮಾಡ್ತಾರೆ ಎಂದು ಬಿಜೆಪಿಯವರು ಹೇಳಿದ್ದಾರೆ. ನೀವು ಎಚ್ಚರಿಕೆಯಿಂದ ಇರಿ ಎಂದು ಬಾಲಕೃಷ್ಣ ಹೇಳಿದ್ದಾರೆ ಅಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ. ಗ್ಯಾರಂಟಿ ಯೋಜನೆ ಕರ್ನಾಟಕದಲ್ಲಿ ರದ್ದು ಮಾಡೋದಿಲ್ಲ. ರಾಜ್ಯದಲ್ಲಿ 5 ವರ್ಷ ಗ್ಯಾರಂಟಿ ಯೋಜನೆ ಇರಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಶಾಸಕರು ಹೇಳಿದ್ದೇನು..?: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ರದ್ದು…

Read More

ಲಕ್ನೋ: ಜ್ಞಾನವಾಪಿ ಮಸೀದಿಯ ಒಳಗಡೆ ಸಿಕ್ಕ ಮೂರ್ತಿಗಳಿಗೆ ಪೂಜೆ ಮಾಡಲು ವಾರಣಾಸಿ ಹಿಂದೂಗಳಿಗೆ ವಾರಣಾಸಿ ಕೋರ್ಟ್‌ ಅನುಮತಿ ನೀಡಿದೆ. ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ಸಿಕ್ಕಿದ ದೊಡ್ಡ ಜಯ ಇದಾಗಿದ್ದು, ಮುಂದಿನ 7 ದಿನಗಳಲ್ಲಿ ಮಸೀದಿಯ ನೆಲ ಮಹಡಿಯಲ್ಲಿ ಸಿಕ್ಕ ವಿಗ್ರಹಗಳಿಗೆ ಪೂಜೆ ಆರಂಭವಾಗಲಿದೆ. https://twitter.com/ANI/status/1752631382034338207?ref_src=twsrc%5Etfw%7Ctwcamp%5Etweetembed%7Ctwterm%5E1752631382034338207%7Ctwgr%5Ee642c0af03dd0b732f1c9ba54de4ef41cf7d8fa2%7Ctwcon%5Es1_&ref_url=https%3A%2F%2Fpublictv.in%2Fhindus-allowed-to-worship-in-sealed-basement-of-varanasis-gyanvapi-mosque%2F ಮಸೀದಿಯ ಕೆಳಗಿರುವ 10 ಮೊಹರು ನೆಲಮಾಳಿಗೆಗಳಲ್ಲಿ ಹಿಂದೂ ಪೂಜೆಗಳು ಇನ್ನು 7 ದಿನಗಳಲ್ಲಿ ಪ್ರಾರಂಭವಾಗಲಿವೆ. ಇದಕ್ಕೆ ಬೇಕಾದ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಹಿಂದೂ ಕಡೆಯವರು ‘ವ್ಯಾಸ್ ಕಾ ತೆಖಾನಾ’ದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ್ದಾರೆ. ಏಳು ದಿನಗಳಲ್ಲಿ ಪೂಜೆ ಪ್ರಾರಂಭವಾಗಲಿದೆ. ಎಲ್ಲರಿಗೂ ಪೂಜೆ ಮಾಡುವ ಹಕ್ಕಿದೆ. ಜಿಲ್ಲಾಡಳಿತ 7 ದಿನಗಳಲ್ಲಿ ವ್ಯವಸ್ಥೆ ಮಾಡಬೇಕಿದೆ” ಎಂದು ಹಿಂದೂ ಪರ ಅರ್ಜಿದಾರರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. https://ainlivenews.com/big-shock-5-free-guarantee-cancellation-kai-mlas-explosive-statement/ ಇತ್ತೀಚೆಗಷ್ಟೇ ಪುರಾತತ್ವ ಇಲಾಖೆ ಮಸೀದಿಯಲ್ಲಿ ಸರ್ವೆ ನಡೆಸಿತ್ತು. ಅದರ ವರದಿಯು ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು. ಮಂದಿರವನ್ನು ಕೆಡವಿ ಮಸೀದಿ ಕಟ್ಟಲಾಗಿಲ್ಲ, ಮಂದಿರದ ಮೇಲ್ಗಡೆ…

Read More

ಬೆಂಗಳೂರು: ರಾಜ್ಯದಲ್ಲಿ ಕನ್ನಡ ಭಾಷೆಯ ನಾಮಫಲಕಗಳಿಗೆ ಶೇ.60% ರಷ್ಟು ಬಳಕೆ ಕಡ್ಡಾಯದ ಸುಗ್ರೀವಾಜ್ಞೆಗೆ ಹಿನ್ನಡೆಯಾಗಿದ್ದು ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​ ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ವಾಪಾಸ್​ ಕಳಿಸಿದ್ದಾರೆ. https://ainlivenews.com/guarantee-schemes-will-not-be-stopped-for-any-reason-cm-siddaramaiah/ ಈ ಕುರಿತು ಸಿಎಂ ಸಿದ್ದರಾಮಯ್ಯ ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಲು ಹೊರಡಿಸಿದ್ದ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ಮಾನ್ಯ ರಾಜ್ಯಪಾಲರಿಗೆ ಕಳಿಸಲಾಗಿತ್ತು. ಆದರೆ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕುವ ಮುಂಚೆಯೇ ಅಧಿವೇಶನ ಪ್ರಾರಂಭವಾದ ಕಾರಣ ವಾಪಸ್ಸು ಕಳಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Read More

ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆ ಆಗುವ ಮೊದಲೇ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು. ನಗರದಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದೆ ಇದ್ದರೆ ಗ್ಯಾರಂಟಿಗಳು ರದ್ದು ಕುರಿತ ಮಾಗಡಿಯ ಕಾಂಗ್ರೆಸ್ ಶಾಸಕರ ಹೇಳಿಕೆಯನ್ನು ಗಮನಿಸಿದ್ದೇನೆ ಎಂದ ಅವರು, ಕಾಂಗ್ರೆಸ್ ಮುಖಂಡರು ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳಲ್ಲಿ ಗೆಲ್ಲುವ ಭ್ರಮೆಯಲ್ಲಿದ್ದರು. ವಾಸ್ತವ ಸ್ಥಿತಿ ಅವರಿಗೆ ಈಗ ಅರ್ಥ ಆಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಒಗ್ಗೂಡಿ 28ರಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಹೇಳಿದರು. ಕಾಂಗ್ರೆಸ್ ಮುಖಂಡರಲ್ಲೂ ತಮ್ಮ ಹೇಳಿಕೆ ಕುರಿತು ಅನುಮಾನ ಶುರುವಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ ಚುನಾವಣಾ ಫಲಿತಾಂಶ ಹಾಗೂ ಬಿಜೆಪಿ ಗೆಲುವು, ಮತ್ತೊಂದು ಕಡೆ ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಆದ ನಂತರ ಇಡೀ ದೇಶದಲ್ಲಿ, ಕರ್ನಾಟಕ ರಾಜ್ಯದಲ್ಲೂ…

Read More