Author: AIN Author

ದಾವಣಗೆರೆ:- ಲೋಕಸಭೆ ಚುನಾವಣೆಯಲ್ಲಿ ಪಂಚಮಸಾಲಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಕಾಂಗ್ರೆಸ್ ಹಾಗೂ ಬಿಜೆಪಿಗೆ ವಚನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ. ಪೀಠದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳ ಜತೆ ವಚನಾನಂದ ಶ್ರೀ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ. ಲೋಕ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ದಾವಣಗೆರೆಯಿಂದ ಬಾಗಲಕೋಟೆ, ವಿಜಯಪುರ, ಗದಗ ಬೆಳಗಾವಿ, ಸೇರಿದಂತೆ ಉತ್ತರ ಕರ್ನಾಟಕದಲ್ಲಿ ನಮ್ಮವರೆ ಹೆಚ್ಚಾಗಿದ್ದಾರೆ. ಲಿಂಗಾಯತರಲ್ಲಿ ಅತಿ ಹೆಚ್ಚಿರುವುದು ಪಂಚಮಸಾಲಿ ಸಮುದಾಯ. ಸುಮಾರು 80 ಲಕ್ಷಕ್ಕೂ ಹೆಚ್ಚು ಸಮುದಾಯವಿದೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ರಾಜಕೀಯವಾಗಿ ಮಾನ್ಯತೆ ಸಿಕಿಲ್ಲ. ಹೀಗಾಗಿ, ಲೋಕಸಭೆ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯ ಸಿಗಬೇಕು. ಈ ಕೆಲಸವನ್ನ ಎರಡು ರಾಷ್ಟ್ರೀಯ ಪಕ್ಷಗಳು ಮಾಡಬೇಕು. ಯಾವ ಕ್ಷೇತ್ರಕ್ಕೆ ಕೊಡ್ತಾರೋ, ಯಾವ ವ್ಯಕ್ತಿಗೆ ಕೊಡ್ತಾರೋ ಅದು ಪಕ್ಷಕ್ಕೆ ಬಿಟ್ಟಿದ್ದು, ಪಕ್ಷಕ್ಕೆ ನಿಷ್ಠರಿದ್ದವರಿಗೆ ಯೋಗ್ಯರಿಗೆ ಟಿಕೆಟ್ ನೀಡಲಿ. ನಮ್ಮ ಸೋದರ ಸಮುದಾಯಗಳು ಜನಸಂಖ್ಯೆ ಕಡಿಮೆ ಇದ್ದರೂ ಹೆಚ್ಚಿನ ಪಾಲನ್ನ ಪಡೆಯುತ್ತಿದ್ದಾರೆ. ನಮ್ಮ ಸಮುದಾಯ ಕೇವಲ ಮತಕ್ಕೆ ಮಾತ್ರ ಸೀಮಿತವಾದಂತಿದೆ. ಹೀಗಾಗಿ,…

Read More

ಗದಗ: ನ್ಯಾಯಮೂರ್ತಿ ಎಜೆ ಸದಾಶಿವ ವರದಿ ಜಾರಿಗೆ ಮುಂದಾಗಿರೋ ರಾಜ್ಯ ಸರ್ಕಾರದ ನಡೆಗೆ ಸದಾಶಿವ ಆಯೋಗ ವಿರೋಧಿ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಬಂಜಾರ, ಕೊರಮ, ಕೊರಚ ಸಮುದಾಯನ್ನೊಳಗೊಂಡ ಸಮಿತಿ ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ವರದಿ ಜಾರಿಗೋಳಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿರೋ ರಾಜ್ಯ ಸರ್ಕಾರದ ನಡೆಯನ್ನ ಖಂಡಿಸಿದೆ. ವರದಿ ಜಾರಿಗೆ ಮುಂದಾದ್ರೆ ಸಚಿವ ಸಂಪುಟದ ಎಲ್ಲ ಸದಸ್ಯರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ವಿರೋಧಿ ಸಮಿತಿ ಸದಸ್ಯ ರವಿಕಾಂತ್ ಅಂಗಡಿ ಎಚ್ಚರಿಕೆ ನೀಡಿದ್ದಾರೆ. ಸದಾಶಿವ ಆಯೋಗದ ವರದಿ ದುರಹಂಕಾರದಿಂದ ಕೂಡಿದೆ. ಈ ವರದಿ ಸೋರಿಕೆಯಾಗಿದೆ. ದಲಿತ ಸಮುದಾಯದ ಒಳಗೆ ಪರಸ್ಪರ ದ್ವೇಷ ಬಿತ್ತುತ್ತಿರುವುದು ಒಂದು ಕಡೆಯಾದರೇ, ರಾಜಕೀಯ ಪಕ್ಷಗಳ ಒಡೆದು ಆಳುವ ನೀತಿಯಿಂದ ಬಂಜಾರ, ಭೋವಿ, ಕೊರಚ, ಕೊರಮ ಸೇರಿದಂತೆ ಪರಿಶಿಷ್ಟ ಜಾತಿಯ 101ಜಾತಿಗಳ ಜನಾಂಗಕ್ಕೆ ಅನ್ಯಾಯವಾಗಿದೆ. ಹೀಗಾಗಿ ವರದಿ ಜಾರಿ ನಿರ್ಧಾರವನ್ನ ಕೂಡ್ಲೆ ಕೈ ಬಿಡ್ಬೇಕು ಇಲ್ಲವಾದಲ್ಲಿ ತೀವ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಆಂತಾ ಅವ್ರು ಎಚ್ಚರಿಕೆ ನೀಡಿದ್ರು.

Read More

ಬೆಂಗಳೂರು:- ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಫೆಬ್ರವರಿ 29ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಸಿದ್ದರಾಮಯ್ಯನವರ ಸರ್ಕಾರ ಕಾತರಾಜ್ ಅವರ ಜಾತಿ ಗಣತಿ ವರದಿ ಸ್ವೀಕರಿಸುವುದು ಖಚಿತವಾದಂತಾಗಿದ್ದು, ಮೂಲಗಳ ಪ್ರಕಾರ ಇನ್ನು 15 ದಿನದಲ್ಲಿ ಜಾತಿ ಗಣತಿ ವರದಿಯು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಂದಿದೆ. ಕಳೆದ 2023ರ ನವೆಂಬರ್‌ನಲ್ಲಿ ಅವಧಿ ಮುಕ್ತಾಯವಾಗುವ ಸಂದರ್ಭದಲ್ಲಿ ಎರಡು ತಿಂಗಳವರೆಗೆ ಅಧಿಕಾರಾವಧಿಯನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಅದರನ್ವಯ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಹಾಗೂ ಐವರು ಸದಸ್ಯರ ಅಧಿಕಾರವನ್ನು 2024ರ ಜನವರಿ 31ರವರೆಗೆ ಮುಂದುವರಿಸಲಾಗಿತ್ತು. ಈಗ ಜನವರಿ 31ಕ್ಕೆ ಅವಧಿ ಮುಕ್ತಾಯವಾಗುತ್ತಲಿತ್ತು. ಈ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಿ ಸರ್ಕಾರ ಆದೇಶವನ್ನು ಹೊರಡಿಸಿದೆ. ಜಾತಿ ಗಣತಿ ವರದಿಯನ್ನು ಅಂತಿಮಗೊಳಿಸುವ ಸಂಬಂಧ ಫೆ‌. 15ರವರೆಗೆ ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗವು ಮನವಿ…

Read More

ಚಿಕ್ಕಬಳ್ಳಾಪುರ:- ನಗರದ ದೊಡ್ಡಭಜನೆ ಮನೆ ರಸ್ತೆಯಲ್ಲಿ ಮನೆಯ ಕಾಂಪೌಂಡ್​ಗೆ ಧ್ವಜಸ್ತಂಭ ನಿರ್ಮಿಸಿ ಹಸಿರು ಬಾವುಟ ಹಾರಿಸಿದ ಘಟನೆ ನಡೆದಿದೆ. ಈ ಹಿನ್ನಲೆ ಹಸಿರು ಬಾವುಟ ತೆರವುಗೊಳಿಸುವಂತೆ ಸ್ಥಳೀಯರು ದೂರು ನೀಡಿದ್ದು. ಸ್ಥಳಕ್ಕೆ ನಗರಠಾಣೆ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಬಾವುಟ ತೆರವುಗೊಳಿಸುವಂತೆ ಮನೆಯ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

Read More

ಉತ್ತರ ಕನ್ನಡ :- ಜಿಲ್ಲೆಯ ತಾಲೂಕಿನ ಕಾಸರಕೋಡು ಬಳಿ ಚತುಷ್ಪಥ ರಸ್ತೆ ನಿರ್ಮಾಣ ವಿರೋಧಿಸಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಎಎಸ್‌ಪಿ ಭೇಟಿ ನೀಡಿದ್ರೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಪ್ರತಿಭಟನೆ ಹತ್ತಿಕ್ಕಲು 200ಕ್ಕೂ ಹೆಚ್ಚು ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದಾರೆ. ಈ ವೇಳೆ ಮಹಿಳೆಯರು ಹಾಗೂ ಪುರುಷರಿಗೆ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಹೊನ್ನಾವರ ಸಮೀಪ ನಿರ್ಮಾಣ ಆಗುತ್ತಿರುವ ಹೊಸ ಬಂದರಿಗೆ ಹೋಗಲು 4 ಲೈನ್‌ ರಸ್ತೆ ನಿರ್ಮಾಣಕ್ಕೆ ಸರ್ವೆ ಕಾರ್ಯ ಆರಂಭಿಸಲಾಗಿದೆ. ಇದರಿಂದ ಮನೆ ಕಳೆದುಕೊಳ್ಳುವ ಭೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ‘ಒಂದು ವೇಳೆ ಮನೆಗಳಿಗೆ ಬೇರೆಡೆ ಜಾಗ ನೀಡಿದರೆ,ನಮ್ಮ ಮೀನುಗಾರಿಕೆಗೆ ಸಮಸ್ಯೆ ಆಗುತ್ತದೆ. ಈ ಹಿನ್ನಲೆ ಮನೆ ಇರುವ ಕಡೆ ರಸ್ತೆ ನಿರ್ಮಿಸದಂತೆ ಮೀನುಗಾರರು ಒತ್ತಾಯಿಸಿದ್ದಾರೆ.

Read More

ಬೆಂಗಳೂರು:- ಬೆಂಗಳೂರಿನ ಹೊಸ ರೋಡ್ ಬಳಿಯ ಪಿಇಎಸ್​ ಕಾಲೇಜಿನಲ್ಲಿ ಕಟ್ಟಡದಿಂದ ಜಿಗಿದು ಬಿಬಿಎ ವಿದ್ಯಾರ್ಥಿ ಸೂಸೈಡ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ವಿಘ್ನೇಶ್.ಕೆ(19) ಮೃತ ದುರ್ದೈವಿ. ಹೊಂಗಸಂದ್ರದ ರಾಘವೇಂದ್ರ ಲೇಔಟ್ ನಿವಾಸಿ. ಬಿಬಿಎ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಕುರಿತಾಗಿ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬ ಹೇಳಿಕೆ ನೀಡಿದ್ದು, ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಲೇಜಿಗೆ ಹೋಗಿದ್ದ. ನಿನ್ನೆ ಸಂಜೆ‌ 4.30 ರ ಸುಮಾರಿಗೆ ಫ್ರೆಂಡ್ಸ್ ಜೊತೆ ಕಾಫಿ ಕುಡಿದಿದ್ದಾನೆ ಅದಾದ ಮೇಲೆ 6 ಗಂಟೆ ಸುಮಾರಿಗೆ ತಾನು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದು ಮಾಹಿತಿ ಬಂದ ಕೂಡಲೇ ನಮ್ಮ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸದ್ಯಕ್ಕೆ ವಿದ್ಯಾರ್ಥಿ ಸಾವಿಗೆ ಯಾವ ಕಾರಣ ಗೊತ್ತಾಗಿಲ್ಲ. ಮನೆಯನ್ನ ಪರಿಶೀಲನೆ ಮಾಡಲಾಗಿದೆ.…

Read More

ಕಲಬುರ್ಗಿ:- ಶಾಲಾ ವಾಹನ ಬಸ್ ಹರಿದು ಎರಡು ವರ್ಷದ ಮಗು ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಸಂಗಮೇಶ್ವರ ಬಡಾವಣೆಯಲ್ಲಿ ಘಟನೆ ನಡೆದಿದ್ದು ಎರಡು ವರ್ಷದ ಮನೋಜ್ ಸಾವನ್ನಪ್ಪಿದ ದುರ್ದೈವಿ..ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ಸೇರಿದ ವಾಹನದಿಂದ ಅವಘಡ ನಡೆದಿದ್ದು ಘಟನೆ ನಂತ್ರ ಬಸ್ ಚಾಲಕ ಪರಾರಿಯಾಗಿದ್ದಾನೆ. ರೊಚ್ಚಿಗೆದ್ದ ಜನ ಬಸ್ ಮೇಲೆ ಕಲ್ಲುತೂರಾಟ ಮಾಡಿ ಗಾಜು ಪುಡಿಪುಡಿ ಮಾಡಿದ್ದಾರೆ..ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ..

Read More

ಬೆಂಗಳೂರು:- ಈಗಾಗಲೇ ನಮ್ಮ ಮೆಟ್ರೋದಲ್ಲಿ ಹಲವು ನಿಮಯಗಳಿದ್ದು, ಅದನ್ನು ಮೀರಿದವರಿಗೆ ದಂಡ ಕೂಡ ವಿಧಿಸಲಾಗುತ್ತಿದೆ. ಇನ್ನು ದಂಡದ ದರವನ್ನು ನಮ್ಮ ಮೆಟ್ರೋ ರೈಲುಗಳಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಹಾಕಲಾಗಿದೆ ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳಿಗೆ ಬ್ರೇಕ್‌ ಹಾಕುವಂತೆ ಬಿಎಂಆರ್‌ಸಿಎಲ್‌ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಹೀಗಾಗಿ ನಮ್ಮ ಮೆಟ್ರೋ ಸಂಸ್ಥೆಯು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಮಹಿಳಾ ಪ್ರಯಾಣಿಕರ ಮೇಲಾಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಬ್ರೇಕ್‌ ಹಾಕಲು ನಮ್ಮ ಮೆಟ್ರೋ ಈ ದಂಡದ ಮೊತ್ತವನ್ನು ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಮ್ಮ ಮೆಟ್ರೋ ಅಸಭ್ಯ ವರ್ತನೆಗೆ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಈ ಮೊದಲು 500 ರೂಪಾಯಿ ಇದ್ದ ದಂಡವನ್ನು 10,000 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ವರದಿಯಾಗಿದೆ. ನಮ್ಮ ಮೆಟ್ರೋದಲ್ಲಿ ಕಿರುಕುಳ ನೀಡುವ ಕಾಮುಕರಿಗೆ ಇನ್ನುಮುಂದೆ ಬರೋಬ್ಬರಿ 10,000 ರೂಪಾಯಿ ದಂಡ ಬೀಳಲಿದೆ. ಇನ್ನು ಈ ಹಿಂದೆಯೇ…

Read More

ನಿದ್ರೆಯ ಕೊರತೆ– ಭವಿಷ್ಯದಲ್ಲಿ ಮಧುಮೇಹ, ಬೊಜ್ಜು, ಗ್ಯಾಸ್ಟ್ರಿಕ್, ಸಂಧಿವಾತದಂತಹ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಕಾಯಿಲೆಗಳೂ ಹೆಚ್ಚಾಗುತ್ತವೆ. ನಿದ್ರಾಹೀನತೆಗೆ ಸಮಸ್ಯೆಯನ್ನು ಹೋಗಲಾಡಿಸಲು ನಿದ್ದೆಯ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗಿಲ್ಲ.ಅಗತ್ಯವಿದ್ದರೆ, ವೈದ್ಯರನ್ನು ಸಂಪರ್ಕಿಸುವ ಮೂಲಕ ನೀವು ನಿದ್ದೆಯ ಮಾತ್ರೆಗಳ ಸಹಾಯವನ್ನು ತೆಗೆದುಕೊಳ್ಳಬಹುದು. ಆದರೆ ಒಟ್ಟಾರೆ ನಿದ್ರಾಹೀನತೆಯ ಸಮಸ್ಯೆಗೆ ಸಹಜವಾಗಿಯೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸಣ್ಣ ಜೀವನಶೈಲಿಯನ್ನು ಬದಲಾಯಿಸುವ ಮೂಲಕ ನೀವು ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು. ಕೆಫೀನ್ ಸೇವನೆ ತಪ್ಪಿಸಿ: ಸಂಜೆಯ ನಂತರ ಚಹಾ ಮತ್ತು ಕಾಫಿ ತೆಗೆದುಕೊಳ್ಳಬೇಡಿ. ಚಹಾ ಮತ್ತು ಕಾಫಿಯಂತಹ ಪಾನೀಯಗಳು ಕೆಫೀನ್ ಎಂಬ ಸಂಯುಕ್ತವನ್ನು ಹೊಂದಿರುತ್ತವೆ. ಇದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಟೀ, ಕಾಫಿ ಕುಡಿದರೆ ಸುಲಭವಾಗಿ ನಿದ್ದೆ ಬರುವುದಿಲ್ಲ. ಮಲಗುವ ಸಮಯ ನಿಗದಿಪಡಿಸಿ: ಸರಿಯಾದ ಸಮಯಕ್ಕೆ ಮಲಗಿ ಏಳುವುದನ್ನು ರೂಢಿಸಿಕೊಳ್ಳಿ. ಮಲಗುವ ಮುನ್ನ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಬಳಸುವ ಅಭ್ಯಾಸವನ್ನು ಸಹ ತಪ್ಪಿಸಿ. ಮಲಗುವ ಒಂದು ಗಂಟೆ ಮೊದಲು ಲ್ಯಾಪ್‌ಟಾಪ್ ಮತ್ತು ಮೊಬೈಲ್ ಬಳಸುವುದನ್ನು…

Read More

ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಮಧುಮೇಹ ಬಂದಾಗ ಅನ್ನ ಸೇವಿಸಬಾರದು ಚಪಾತಿ ತಿನ್ನಬೇಕು ಎಂದು ಸಾಮಾನ್ಯವಾಗಿ ಎಲ್ಲರೂ ಹೇಳುವುದನ್ನು ಕೇಳಿರುತ್ತವೆ. ಆದರೆ ನೆನಪಿರಲಿ ಗೋಧಿ ಹಿಟ್ಟನ್ನು ಬಳಸಿ ಮಾಡುವ ಚಪಾತಿ ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿ ಇರುವುದಿಲ್ಲ. ಗೋಧಿ ಹಿಟ್ಟಿಗೆ ಪರ್ಯಾಯವಾಗಿ ಈ ಹಿಟ್ಟುಗಳಿಂದ ಮಾಡುವ ಚಪಾತಿ ರೊಟ್ಟಿಗಳನ್ನು ಸೇವಿಸುವ ಮೂಲಕ ಡಯಾಬಿಟೀಸ್ ರೋಗಿಗಳು ತಮ್ಮ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಬಹುದು. ಸಜ್ಜೆ ಹಿಟ್ಟು : ಸಜ್ಜೆ ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಜ್ಜೆ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಅಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಲು ಅನುವು ಮಾಡುವುದಿಲ್ಲ. ಮಧುಮೇಹ ರೋಗಿಗಳು ಸಜ್ಜೆ ಹಿಟ್ಟಿನಿಂದ ಮಾಡಿದ ಚಪಾತಿ, ದೋಸೆಯನ್ನು ಯಾವ್ ಅಳುಕೂ ಇಲ್ಲದೆ ಸೇವಿಸಬಹುದು. ಜೋಳದ ಹಿಟ್ಟು : ಜೋಳ ಕೂಡಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಹಿಟ್ಟು.…

Read More