Author: AIN Author

ಲಂಡನ್: ಆಸ್ಟ್ರೇಲಿಯಾಕ್ಕೆ 600 ಕೋಟಿ ರೂ. ಮೌಲ್ಯದ ಕೊಕೇನ್ ರಫ್ತು ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ದಂಪತಿಗೆ ಯುಕೆನಲ್ಲಿ  ಶಿಕ್ಷೆ ವಿಧಿಸಲಾಗಿದೆ. ಅರ್ತಿ ಧೀರ್ (59) ಮತ್ತು ಕವಲ್ಜಿತ್ಸಿನ್ಹ್ ರೈಜಾಡಾ (35) ಶಿಕ್ಷೆಗೆ ಒಳಗಾದ ದಂಪತಿ. ಭಾರತ ಮೂಲದ  ಈ ದಂಪತಿ 512 ಕಿಲೋ ಕೊಕೇನ್ ಅನ್ನು ಮೇ 2021 ರಲ್ಲಿ ಯುಕೆಯಿಂದ ಆಸ್ಟ್ರೇಲಿಯಾಕ್ಕೆ ವಾಣಿಜ್ಯ ವಿಮಾನದ ಮೂಲಕ ಕಳ್ಳಸಾಗಣಿಕೆ ಮಾಡಿದ ಪ್ರಕರಣದಲ್ಲಿ ಈಗ ಶಿಕ್ಷೆ ವಿಧಿಸಲಾಗಿದೆ. ಸೌತ್‌ವಾಕ್ ಕ್ರೌನ್ ಕೋರ್ಟ್‌ನಲ್ಲಿ ಪ್ರಕರಣ ಸಂಬಂಧ ವಿಚಾರಣೆ ನಡೆಯಿತು. ಈಲಿಂಗ್‌ನಲ್ಲಿನ ಹ್ಯಾನ್‌ವೆಲ್‌ನಿಂದ ಬಂದ ದಂಪತಿಯ 12 ರಫ್ತು ಮತ್ತು ಅಕ್ರಮ ಹಣ ವರ್ಗಾವಣೆಯ 18 ಪ್ರಕರಣದ ಕೇಸ್ ಅದೇ ನ್ಯಾಯಾಲಯದಲ್ಲಿ ರಂದು ನಡೆಯಲಿದೆ. ಆಸ್ಟ್ರೇಲಿಯಾನ್ ಬಾರ್ಡರ್ ಫೋರ್ಸ್ ಮಾಹಿತಿಯ ಪ್ರಕಾರ, ಯುಕೆ ಅಧಿಕಾರಿಗಳು ಧೀರ್ ಮತ್ತು ರೈಜಾದಾ, ಕೊಕೇನ್ ರವಾನೆಯನ್ನು ಪತ್ತೆಹಚ್ಚಿದ್ದಾರೆ. ಮಾದಕ ವಸ್ತುಗಳ ಕಳ್ಳಸಾಗಣೆಕೆ ಮಾಡುವ ಉದ್ದೇಶದಿಂದ ವಿಫ್ಲೈ ಸರಕು ಸೇವೆಗಳು ಎಂಬ ಕಂಪನಿಯನ್ನು ದಂಪತಿ ಸ್ಥಾಪಿಸಿದ್ದಾರೆ. ಈ ಹಿಂದೆ ಅವರು…

Read More

ಬೆಂಗಳೂರು:- ಬೆಂಗಳೂರು ವಿವಿ ಕ್ಯಾಂಪಸ್​ ಹಾಸ್ಟೆಲ್ ಊಟದಲ್ಲಿ ಹುಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ಪಾಲಕನನ್ನು ಸಸ್ಪೆಂಡ್ ಮಾಡಲಾಗಿದೆ. ಮಂಜುನಾಥ್​ನನ್ನು ಅಮಾನತುಗೊಂಡ ಪಾಲಕ. ಹಾಸ್ಟೆಲ್ ಊಟದಲ್ಲಿ ಕಳಪೆ ಆಹಾರ ಸೇವಿಸಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಬುಧವಾರ ಹಾಸ್ಟೆಲ್​ಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ತನಿಖೆಯಲ್ಲಿ ಮಂಜುನಾಥ್ ಕರ್ತವ್ಯ ನಿರ್ಲಕ್ಷ್ಯ ಕಂಡು ಬಂದ ಹಿನ್ನೆಲೆ ತಕ್ಷಣ ಸೇವೆಯಿಂದ ಅಮಾನತು ಮಾಡಲಾಗಿದೆ. ಜ್ಞಾನಭಾರತಿ ಕ್ಯಾಂಪಸ್ ಆವರಣದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಲಕರ ಹಾಸ್ಟೆಲ್​​ನಲ್ಲಿ ಮೂರನೇ ಬಾರಿಗೆ, ಊಟದಲ್ಲಿ ಹುಳುಗಳು ಪತ್ತೆಯಾಗಿವೆ. ಯೂನಿರ್ವಸಿಟಿ ಕ್ಯಾಂಪಸ್​ ಮಾತ್ರವಲ್ಲ, ಬನಶಂಕರಿಯ ಬಿಸಿಎಂ ಹಾಸ್ಟಲ್​​ ಊಟದಲ್ಲಿಯೂ ಜಿರಳೆ ಪತ್ತೆಯಾಗಿದೆ. ಇದ್ರಿಂದಾಗಿ ಅಡುಗೆ ಮನೆ ಬಂದ್ ಮಾಡಿ ಸ್ಟುಡೆಂಟ್ಸ್ ಆಕ್ರೋಶ ಹೊರ ಹಾಕಿದ್ದರು. ಅವ್ಯವಸ್ಥೆ ವಿರುದ್ಧ ಸಿಡಿದೆದ್ದಿರುವ ಸ್ಟೂಡೆಂಟ್ಸ್ ಕಟ್ಟುಪಾಡು ಬದಲಾಗದು ಎಂಬ ಶೀರ್ಷಿಕೆಯಡಿ ಕವನ ಬರೆದಿದ್ದರು. ಬದಲಿಸಲು ಮುಂದೆ ಬಂದರೆ ಎತ್ತಂಗಡಿ ಕಟ್ಟಿಟ್ಟ ಬುತ್ತಿ ಎಂದು ಆಕ್ರೋಶ ಹೊರಹಾಕಿದ್ದಾರೆ.

Read More

ನವದೆಹಲಿ:- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಬಜೆಟ್ ಮಂಡಿಸಲಿದ್ದು, ಮೋದಿ ಸರ್ಕಾರದ ಅವಧಿಯ ಕೊನೆಯ ಬಜೆಟ್ ಆಗಿರುವುದರಿಂದ ಸಹಜವಾಗೇ ಕುತೂಹಲಗಳು ಗರಿಗೆದರಿವೆ. ಕೃಷಿ, ಮಧ್ಯಮ ಕೈಗಾರಿಕೆ, ಹೈನುಗಾರಿಕೆ, ಸಾರಿಗೆ, ಮೇಕ್ ಇನ್ ಇಂಡಿಯಾ, ವೈದ್ಯಕೀಯ ಸೇರಿದಂತೆ ವಿವಿಧ ವಲಯಗಳು ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿವೆ. ಜೊತೆಗೆ ಆದಾಯ ತೆರಿಗೆಯಲ್ಲೂ ಸಾಕಷ್ಟು ಬದಲಾವಣೆಗಳನ್ನ ನಿರೀಕ್ಷಿಸಲಾಗಿದೆ. ಇನ್ನೇನು ಲೋಕಸಭೆ ಚುನಾವಣೆ ಕೂಡ ಇರುವ ಕಾರಣ ಚುನಾವಣಾ ದೃಷ್ಠಿಯಿಂದಲೂ ಈ ಬಾರಿಯ ಬಜೆಟ್ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಚುನಾವಣಾ ಪೂರ್ವ ಬಜೆಟ್, ಮಹಿಳೆಯರು, ಬಡವರು, ಯುವಕರು, ರೈತರು ಮತ್ತು ಬುಡಕಟ್ಟು ಜನಾಂಗದವರನ್ನು ಒಳಗೊಂಡಿರುವ ಸಮಾಜದ ಐದು ಪ್ರಮುಖ ವರ್ಗಗಳ ಕಲ್ಯಾಣ ಯೋಜನೆಗಳ ಸುತ್ತ ಕೇಂದ್ರೀಕರಿಸಲಿದೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮೂರನೇ ಅವಧಿಗೆ ಅಧಿಕಾರದ ಗದ್ದುಗೆಯನ್ನು ಏರುವ ಗುರಿ ಹೊಂದಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಅಂತರ್ಗತ ಬೆಳವಣಿಗೆಗೂ ಬದ್ಧವಾಗಿದೆ.…

Read More

ಬೇವು ಒಂದು ಔಷಧೀಯ ಮೂಲಿಕೆಯಾಗಿದ್ದು ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಹಲವಾರು ಸಂಶೋಧನೆಗಳಿಂದ ಸಾಬೀತಾಗಿದೆ. ಬೇವು ಟ್ರೈಟರ್‌ಪೆನಾಯ್ಡ್‌ಗಳು, ಫ್ಲೇವನಾಯ್ಡ್‌ಗಳು, ಕೀಟೋನ್‌ಗಳು ಮತ್ತು ಸ್ಟೀರಾಯ್ಡ್‌ಗಳಂತಹ ಇತರ ಸಂಯುಕ್ತಗಳನ್ನು ಒಳಗೊಂಡಿದೆ. ಬೇವಿನ ಎಲೆಗಳಲ್ಲಿ ಆಸ್ಕೋರ್ಬಿಕ್ ಆಮ್ಲ, ಅಮೈನೋ ಆಮ್ಲ, ನಿಂಬಿನ್, ನಿಮ್ಪಾಂಡಿಯೋಲ್, ಹೆಕ್ಸಾಕೋಸಾನಾಲ್, ನಿಂಬನಾನ್, ಪಾಲಿಫಿನಾಲಿಕ್ ಫ್ಲೇವನಾಯ್ಡ್​ಗಳು, ಕ್ವೆರ್ಸೆಟಿನ್ ಇರುತ್ತದೆ. ಬೇವು ಮಧುಮೇಹ ನಿವಾರಕ ಗುಣಗಳನ್ನು ಹೊಂದಿದ್ದು, ಮಧುಮೇಹ ರೋಗಿಗಳಲ್ಲಿ ಇನ್ಸುಲಿನ್ ಚುಚ್ಚುಮದ್ದಿನ ಅಗತ್ಯವನ್ನು ಕಡಿಮೆ ಮಾಡಲು ಈ ಬೇವು ತುಂಬಾ ಪರಿಣಾಮಕಾರಿಯಾಗಿದೆ. ನಾಲ್ಕು ವಾರಗಳ ಕಾಲ ಬೇವಿನ ಎಲೆಯ ರಸ ಮತ್ತು ಬೀಜದ ಎಣ್ಣೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನವು ಸೂಚಿಸುತ್ತದೆ. ಇಲಿಗಳ ಮೇಲೆ ಪರೀಕ್ಷಿಸಿದಾಗ, ಬೇವಿನ ಬೇರು ಮತ್ತು ತೊಗಟೆಯ ಸಾರಗಳು ರಕ್ತದಲ್ಲಿನ ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ ಎಂಬುದು ಸಾಬೀತಾಗಿದೆ. ಟೈಪ್ 2 ಮಧುಮೇಹಿಗಳಲ್ಲಿ ಇನ್ಸುಲಿನ್ ಪ್ರತಿರೋಧವು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಹೀಗಾಗಿ ಬೇವಿನ…

Read More

ಬೆಂಗಳೂರು:- ಗೃಹಜ್ಯೋತಿ ಜಾರಿ ಬಳಿಕ ಗ್ರಾಹಕರು ಬಾಕಿ ವಿದ್ಯುತ್ ಬಿಲ್ ಪಾವತಿಗೆ ವಿಳಂಬ ಮಾಡಲಾಗ್ತಿದೆ ಹೀಗಾಗಿ 100 ರೂ ಬಾಕಿ ಇದ್ರೂ ಕನೆಕ್ಷನ್ ಕಟ್ ಮಾಡಿ ಅಂತ ಇಂಧನ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಹೀಗಾಗಿ ಬಾಕಿ ಕರೆಂಟ್ ಬಿಲ್ ಕಟ್ಟದ ಗ್ರಾಹಕರಿಗೆ ಮೀಟರ್ ರೀಡರ್ ಗಳಿಂದ ಅರಿವು ಮೂಡಿಸಲಾಗಿದೆ‌.ಗೃಹಜ್ಯೋತಿ ಅನುಷ್ಠಾನ ಬಳಿಕ ಗ್ರಾಹಕರಿಂದ ಕೋಟ್ಯಾಂತರ ರೂ ಕರೆಂಟ್ ಬಾಕಿ ಇದೆ ಹೀಗಾಗಿ ಕಟ್ಟುನಿಟ್ಟಾಗಿ ವಿದ್ಯುತ್ ಬಿಲ್ ಕಲೆಕ್ಷನ್ ಮಾಡುವಂತೆ ಮೀಟರ್ ರೀಡರ್ ಗಳಿಗೆ ಎಸ್ಕಾಂಗಳು ಸೂಚನೆ ನೀಡುತ್ತಿದ್ದಾರೆ.ಇದರಿಂದ ಗ್ರಾಹಕರ ಬಳಿ ಒತ್ತಡ ಹಾಕಿ ಕರೆಂಟ್ ಬಾಕಿ ಬಿಲ್ ಕಟ್ಟಿಸಿಕೊಳ್ಳು ಎಸ್ಕಾಂ ಸಿಬ್ಬಂದಿ ಮುಂದಾಗಿದ್ದಾರೆ.

Read More

ಹೆಚ್ಚು ನೀರು ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ನಿಮಗೆ ಗೊತ್ತೆ?, ಆಹಾರ ತಜ್ಞರ ಪ್ರಕಾರ ಇಂಥಾ ಆಹಾರಗಳನ್ನು ಸೇವಿಸಿದ ನಂತರ ನೀರು ಕುಡಿದರೆ ಗ್ಯಾಸ್ ಅಸಿಡಿಟಿ, ಅಜೀರ್ಣ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಹಾರದ ಹೊರತಾಗಿ, ನಾವು ತಿಂದ ನಂತರ ನೀರು ಕುಡಿದರೆ ನಮ್ಮ ಆರೋಗ್ಯಕ್ಕೆ ಹಾನಿಯಾಗುವ ಅನೇಕ ಅಂಶಗಳಿವೆ. ಹಾಗಾದರೆ ಯಾವ ಪದಾರ್ಥಗಳನ್ನು ತಿಂದ ನಂತರ ನೀರು ಕುಡಿಯಬಾರದು ಎಂದು ಈ ಲೇಖನದ ಮೂಲಕ ತಿಳಿಯೋಣ. ಆಹಾರ ಸೇವಿಸಿದ ನಂತರ ನೀರು ಕುಡಿಯಬೇಡಿ  ಸಾಮಾನ್ಯವಾಗಿ ಸಿಹಿ ತಿಂದು ನೀರು ಕುಡಿಯುತ್ತಾರೆ. ಆದರೆ ಹಾಗೆ ಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ ಸಿಹಿ ತಿಂದು ನೀರು ಕುಡಿದರೆ, ಗಂಟಲು ನೋವು ಅಥವಾ ಕೆಮ್ಮು ಬರಬಹುದು. ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಆಮ್ಲಾ, ಸೀಸನಲ್ ಇತ್ಯಾದಿಗಳನ್ನು ತಿಂದ ನಂತರ ನಮ್ಮ ಜೀರ್ಣಾಂಗ ವ್ಯವಸ್ಥೆಯು ಆಮ್ಲವನ್ನು ಬಿಡುಗಡೆ ಮಾಡುತ್ತದೆ. ಮತ್ತು ಈ ಹಣ್ಣುಗಳನ್ನು ತಿಂದ ನಂತರ ನೀರು ಕುಡಿದರೆ pH ಸಮತೋಲನವು…

Read More

ಸೂರ್ಯೋದಯ: 06:52, ಸೂರ್ಯಾಸ್ತ : 06:07 ಪುಷ್ಯ ಮಾಸ, ಕೃಷ್ಣ ಪಕ್ಷ, ಉತ್ತರಾಯಣಂ, ಹೇಮಂತ ಋತು, ತಿಥಿ: ಷಷ್ಟಿ, ನಕ್ಷತ್ರ: ಚಿತ್ತ, ಯೋಗ: ಧ್ರುತಿ, ಕರಣ: ವನಿಜಾ, ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ:09:00 ನಿಂದ 10:30 ತನಕ ಅಮೃತಕಾಲ: రా.8:42 ನಿಂದ రా.10:29 ತನಕ ಅಭಿಜಿತ್ ಮುಹುರ್ತ: ಮ.12:07 ನಿಂದ ಮ.12:52 ತನಕ ಮೇಷ ರಾಶಿ: ರಾಜಕಾರಣಿಗಳಿಗೆ ವಿಶೇಷ ಸ್ಥಾನಮಾನ ನಿಮ್ಮ ಚಾಣಕ್ಷತನದಿಂದ ಮಂತ್ರಿಸ್ಥಾನ ಲಭ್ಯ, ಹಿತೈಷಿಗಳ ಸಹಕಾರ, ರಿಯಲ್ ಎಸ್ಟೇಟ್ ಮತ್ತು ಗುತ್ತಿಗೆ ಉದ್ಯಮದಾರರ ಮನಸ್ಸಿನಲ್ಲಿ ಒಂದು ಕೆಲಸ ತುಂಬಾ ದಿನದಿಂದ ಕಾಡುತ್ತಿದ್ದು ಇಂದು ಸಕಾಲ ಗೊಳ್ಳಲಿದೆ, ಪ್ರೇಮಿಗಳ ಬಾಂಧವ್ಯ ಉತ್ತಮಗೊಳ್ಳಲಿದೆ, ಆರೋಗ್ಯದಲ್ಲಿ ಸುಧಾರಣೆ, ಆಸ್ತಿ ಲೋಪ ದೋಷ ನಿವಾರಣೆ, ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬೀಳಲಿದೆ, ಕಚೇರಿಯಲ್ಲಿ ವ್ಯವಹರಿಸುವಾಗ ಜಾಗ್ರತೆವಹಿಸಿ, ಸಹೋದ್ಯೋಗಿಗಳ ಜೊತೆ ಹಾಗೂ ಗ್ರಾಹಕರೊಡನೆ ವಾಗ್ವಾದ ಬೇಡ, ಉದ್ಯೋಗ ಬದಲಾವಣೆ ಮತ್ತು ಮನೆ…

Read More

ಬೆಳಗಾವಿ:- ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುಲಬಾಂಧವರ ಸಹಯೋಗದೊಂದಿಗೆ, ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಲಾಗಿದೆ. ನಿಜಶರಣ ಅಂಬಿಗರ ಚೌಡಯ್ಯ ಅವರ 904 ನೇ ಜಯಂತಿ ಉತ್ಸವ ಬೆಳಗಾವಿಯಲ್ಲಿ ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಜಯಂತಿಯನ್ನು ಬ್ರಹತ್ ಜನಜಾಗ್ರತಿ ಸ್ವಾಭಿಮಾನ ಸಮಾವೇಶವನ್ನಾಗಿ ಆಚರಿಸಲು ಕರೆ ನೀಡಲಾಗಿದೆ. ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ, ಲಕ್ಷಾಂತರ ಸಂಖ್ಯೆಯಲ್ಲಿ ಕೋಳಿ – ಬೆಸ್ತ್ರ ಸಮಾಜ ಬಾಂಧವರಿದ್ದರೂ ಅಸಂಘಟಿತವಾಗಿದ್ದಾರೆ. ಫೆಬ್ರವರಿ 4 ಕ್ಕೆ ಏಕೆ ಈ ಜಯಂತಿ, ರಾಜ್ಯದಲ್ಲಿ, ಜಿಲ್ಲೆಯಲ್ಲಿ, ಬಹುತೇಕ ಕಡೆ ಜನೇವರಿ 21 ಜಯಂತಿಯನ್ನು ಆಚರಿಸಿದ್ದಾರೆ, ಸಂಘ ಮತ್ತು ಸಂಘಟನೆಯನ್ನು ಬಲಪಡಿಸಲು ಬೆಳಗಾವಿ ಜಿಲ್ಲಾ, ಸಂಘದಿಂದ ಪೆಬ್ರವರಿ 4 ರಂದು ಆಚರಿಸಲು ನಿರ್ಧರಿಸಲಾಗಿದೆ. ಈ ದಿನದ ಮಹತ್ವ : ಛತ್ರಪತಿ ಶಿವಾಜಿ ಮಹಾರಾಜರ ಆತ್ಮೀಯ ವೀರ ಧೀರ ಕೋಳಿ ಸಮಾಜದ ಹೆಮ್ಮಯ ಪುತ್ರ ಶಿವಾಜಿ ಮಹಾರಾಜರ ಸೇನೆಯ ಸಿಂಹ ಎಂದೆ ಗುರ್ತಿಸಿಕೊಂಡ ತಾನಾಜಿ ಮಾಲಸೂರೆ ಅವರ ಪುಣ್ಯ ದಿನ ಫೆಬ್ರವರಿ…

Read More

ನವದೆಹಲಿ:- ನಾಳೆ ಕೇಂದ್ರ ಬಜೆಟ್‌ ಮಂಡನೆ ಆಗಲಿದ್ದು, ಬೆಳಕ್ಕೆ 11 ಗಂಟೆಗೆ ಹೊಸದಾಗಿ ಲೋಕಾರ್ಪಣೆಯಾದ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡನೆ ಆಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ ಆರನೇ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿರುವ ಮೋದಿ ಸರ್ಕಾರ ನಾಳೆಯ ಬಜೆಟ್‌ನಲ್ಲಿ ಜನಾಕರ್ಷಕ ನಿರ್ಣಯಗಳನ್ನೇನಾದ್ರೂ ಪ್ರಕಟಿಸುತ್ತಾ? ಇಲ್ಲವೇ, ಮೂಲಧನ ವ್ಯಯವನ್ನು ಹೆಚ್ಚಿಸುವ ಮೂಲಕ ಆರ್ಥಿಕ ವ್ಯವಸ್ಥೆಗೆ ಬೂಸ್ಟ್ ನೀಡುತ್ತಾ? ಇಲ್ಲವೇ, ಜನ ಕಲ್ಯಾಣ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸಮತೋಲನ ಸಾಧಿಸುತ್ತಾ?..ಜನಪ್ರಿಯತೆಯ ಹಳಿ ಮೇಲೆ ಸಾಗುತ್ತಾ? ಇಂತಹ ಹಲವು ಪ್ರಶ್ನೆಗಳ ಬಗ್ಗೆ ಇದೀಗ ವಿಸ್ತೃತ ಚರ್ಚೆಗಳು ನಡೆಯುತ್ತಿವೆ.ಇದು ವೋಟ್ ಆನ್ ಅಕೌಂಟ್ ಆದರೂ ಚುನಾವಣೆ ಸನಿಹದಲ್ಲಿರುವ ಕಾರಣ ವಿವಿಧ ವರ್ಗಗಳ ಮೇಲೆ ಮೋದಿ ಸರ್ಕಾರ ಕೃಪೆ ತೋರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ರೈತರಿಗೆ ಏನು ಸಿಗಬಹುದು? * ಪಿಎಂ ಕಿಸಾನ್ ಮೊತ್ತ 9ಸಾವಿರಕ್ಕೆ ಹೆಚ್ಚಾಗಬಹುದು * ಎಲ್ಲರಿಗೂ ಅಲ್ಲದಿದ್ರೂ ಮಹಿಳಾ ರೈತರಿಗೆ ಈ ಗಿಫ್ಟ್ ಸಿಗಬಹುದು…

Read More

ರಾಂಚಿ:- ಹೇಮಂತ್ ಸೋರೆನ್ ಅರೆಸ್ಟ್ ಹಿನ್ನೆಲೆ ಚಂಪಾಯಿ ಸೋರೆನ್ ಮುಂದಿನ ಜಾರ್ಖಂಡ್ ಸಿಎಂ ಆಗಿ ಆಯ್ಕೆ ಆಗಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿರುವ ಆಡಳಿತ ಪಕ್ಷದ ಶಾಸಕರು, ಚಂಪಾಯಿ ಸೋರೆನ್‍ರನ್ನು ಮುಖ್ಯಮಂತ್ರಿ ಮಾಡುವಂತೆ ಮನವಿ ಮಾಡಿದ್ದಾರೆ. ಗುರುವಾರ ಚಂಪಾಯಿ ಸೋರೇನ್ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಸಂಭವ ಇದೆ. ಇನ್ನೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಸೋರೆನ್ ಅವರನ್ನು ಬುಧವಾರ ಸಂಜೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.

Read More