Author: AIN Author

ಬೆಂಗಳೂರು:- ಯುವತಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಕಿಡಿಗೇಡಿ ಕೊನೆಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. ಚಂದನ್ ಬಂಧಿತನಾಗಿದ್ದು, ಆರ್‌ಪಿಸಿ ಲೇಔಟ್‌ ಹೋಟೆಲ್‌ಗೆ ತನ್ನ ಸ್ನೇಹಿತರ ಜತೆ ಬಂದಾಗ ಆತ ಈ ಕೃತ್ಯ ಎಸಗಿದ್ದ.ಈ ಬಗ್ಗೆ ಹೋಟೆಲ್ ವ್ಯವಸ್ಥಾಪಕಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ವಿಜಯನಗರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಸ್ನೇಹಿತನ ಮಾತು ಕೇಳಿ ಕೆಟ್ಟ: ಗ್ಯಾಸ್ ಡೆಲಿವರಿ ಬಾಯ್ ಆಗಿದ್ದ ಚಂದನ್, ಡಿ.30 ರಂದು ರಾತ್ರಿ 7.30ರಲ್ಲಿ ತನ್ನ ಸ್ನೇಹಿತರ ಜತೆಗೆ ಆರ್‌ಪಿಸಿ ಲೇಔಟ್‌ನಲ್ಲಿರುವ ಹೋಟೆಲ್‌ಗೆ ತಿಂಡಿ ತಿನ್ನಲು ಬಂದಿದ್ದ. ಆ ವೇಳೆ ಹೋಟೆಲ್ ಕ್ಯಾಶ್ ಕೌಂಟರ್‌ನಲ್ಲಿ ನಿಂತಿದ್ದ ಯುವತಿಗೆ ಈ ಸ್ನೇಹಿತರ ಕಣ್ಣಿಗೆ ಬಿದ್ದಿದ್ದಳು. ಆ ಯುವತಿ ಮೈ ಮುಟ್ಟು ನೋಡೋಣ ಎಂದು ಚಂದನ್‌ಗೆ ಆತನ ಸ್ನೇಹಿತರು ಸವಾಲು ಹಾಕಿದ್ದರು. ಈ ಸವಾಲು ಸ್ವೀಕರಿಸಿದ ಚಂದನ್‌, ಕ್ಯಾಶ್ ಕೌಂಟರ್‌ನಲ್ಲಿ ನಿಂತಿದ್ದ ಯುವತಿಯನ್ನು ಹಿಂದಿನಿಂದ…

Read More

ಬೆಂಗಳೂರು:- ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲಿ ಮಂಡನೆಯಾಗುತ್ತಿರುವ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಮುಂದೆ ನಿರೀಕ್ಷೆಗಳ ಮಹಾಪೂರವೇ ಇದೆ. ರಾಜ್ಯದಲ್ಲಿ ವಿವಿಧ ಹಂತಗಳಲ್ಲಿರುವ ನೀರಾವರಿ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ, ಹೊಸ ಮಾರ್ಗಗಳ ನಿರ್ಮಾಣ ಮತ್ತು ಇರುವ ಮಾರ್ಗಗಳ ಮೇಲ್ದರ್ಜೆಗೆ ಕ್ರಮ, ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗೆ ಅಗತ್ಯವಿರುವ ಉಪ ನಗರ ರೈಲು ಹಾಗೂ ವರ್ತುಲ ರೈಲು ಯೋಜನೆ ಹೀಗೆ ಹತ್ತಾರು ನಿರೀಕ್ಷೆಗಳು ಗರಿಗೆದರಿದ್ದು, ಇದ ರಿಂದ ಎಲ್ಲರ ಚಿತ್ತ ಕೇಂದ್ರದ ಬಜೆಟ್‌ನತ್ತ ನೆಟ್ಟಿದೆ. ಕಳೆದ ಒಂದು ದಶಕದಿಂದ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದ್ದು, ಎರಡೂ ಅವಧಿಯಲ್ಲಿ ಕರ್ನಾಟಕದ ಜನ ಅತೀ ಹೆಚ್ಚು ಆ ಪಕ್ಷದ ಸಂಸದರನ್ನು ಗೆಲ್ಲಿಸಿ ದಿಲ್ಲಿಗೆ ಕಳುಹಿಸಿದೆ. ಇದಕ್ಕೆ ಪೂರಕವೆಂಬಂತೆ ರಾಜ್ಯದಲ್ಲಿ ಒಂದು ಅವಧಿಗೆ (2019-2023) ಬಿಜೆಪಿ ಅಧಿಕಾರದಲ್ಲಿತ್ತು. “ಡಬಲ್‌ ಎಂಜಿನ್‌’ ಸರಕಾರದಿಂದ ನೆನಗುದಿಗೆ ಬಿದ್ದಿರುವ ಅನೇಕ ಯೋಜನೆಗಳು ಅನುಷ್ಠಾನಗೊಳ್ಳ ಬಹುದು. ಈ ಮೂಲಕ ರಾಜ್ಯದ ಚಿತ್ರಣ ಬದಲಾ ಗಬಹುದು ಎಂದು ವಿಶ್ಲೇಷಿಸಲಾಗಿತ್ತು. ಅದರಲ್ಲಿ ರೈಲು ಮಾರ್ಗಗಳ ವಿದ್ಯುದ್ದೀಕರಣ, ಪ್ರಮುಖ ನಿಲ್ದಾಣಗಳ ನವೀಕರಣ, ಉಪನಗರ…

Read More

ಕೋವಿಡ್-19 ಸಾಂಕ್ರಾಮಿಕದ ನಂತರ ಉದ್ಯೋಗಿಗಳ ಜೀವನಶೈಲಿಯಲ್ಲೂ ಬದಲಾವಣೆಯಾಗಿದೆ. ಮನೆಯಿಂದ ಕೆಲಸ ಮಾಡುವಾಗ ಆಫೀಸ್ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಿಕೊಂಡು ಕೆಲಸ ಮಾಡುತ್ತಿದ್ದುದನ್ನು ಗಮನಿಸಿದ ಹಲವು ಅಭಿವೃದ್ಧಿ ಹೊಂದಿದ ದೇಶಗಳ ಕಂಪನಿಗಳು ವಾರದಲ್ಲಿ 2 ದಿನದ ಬದಲು 3 ದಿನ ಉದ್ಯೋಗಿಗಳಿಗೆ ರಜೆ ನೀಡುತ್ತಿವೆ. ವಾರದಲ್ಲಿ ಕೇವಲ 4 ದಿನ ಕೆಲಸ ಮಾಡಲು ಅವಕಾಶ ಇರುವ 7 ದೇಶಗಳ ಬಗ್ಗೆ ಮಾಹಿತಿ ಇಲ್ಲಿದೆ. ಬೆಲ್ಜಿಯಂ: 2022ರಲ್ಲಿ ಬೆಲ್ಜಿಯಂ ಯುರೋಪಿಯನ್ ಯೂನಿಯನ್ (EU) 4 ದಿನದ ಕೆಲಸದ ಸಂಸ್ಕೃತಿಯನ್ನು ಐಚ್ಛಿಕವಾಗಿ ಮಾಡಿದ ಮೊದಲ ದೇಶವಾಯಿತು. ಆದರೆ, ಇಲ್ಲಿ ಈ ಮೊದಲು 5 ದಿನ ಕೆಲಸ ಮಾಡುತ್ತಿದ್ದಾಗ ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕಾಗಿತ್ತೋ ಅಷ್ಟೇ ಸಮಯ ವಾರದ 4 ದಿನದಲ್ಲಿ ಮಾಡಿ ಮುಗಿಸಬೇಕಾಗುತ್ತದೆ. ಅಂದರೆ, 4 ದಿನ ಕೆಲಸ ಮಾಡುವವರಿಗೆ ಕೆಲಸದ ಸಮಯದ ಅವಧಿಯನ್ನು ಹೆಚ್ಚು ಮಾಡಲಾಗಿದೆ. ಇಲ್ಲಿ ವಾರಕ್ಕೆ ಒಟ್ಟು ಕೆಲಸದ ಸಮಯ 40 ಗಂಟೆ. ನೆದರ್ಲೆಂಡ್: ಸರ್ಕಾರದ ಅಂಕಿಅಂಶಗಳ ಪ್ರಕಾರ,…

Read More

ದೇಶದ ಅತಿದೊಡ್ಡ ಇ – ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಸ್ಥಾಪಕ ಬಿನ್ನಿ ಬನ್ಸಾಲ್‌ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. 2007ರಲ್ಲಿ ಗೆಳೆಯ ಸಚಿನ್‌ ಬನ್ಸಾಲ್‌ ಜತೆಗೂಡಿ ತಾವು ಸ್ಥಾಪಿಸಿದ್ದ ಸಂಸ್ಥೆಯಿಂದ ಬಿನ್ನಿ ಅಧಿಕೃತವಾಗಿ ಹೊರಬಂದಂತಾಗಿದೆ. 2018ರಲ್ಲಿ ಫ್ಲಿಪ್‌ ಕಾರ್ಟ್‌ ಸಂಸ್ಥೆಯ ಬಹುಪಾಲು ಷೇರುಗಳನ್ನು ಅಮೆರಿಕದ ರೀಟೇಲ್‌ ದಿಗ್ಗಜ ಸಂಸ್ಥೆ ವಾಲ್‌ಮಾರ್ಟ್‌ ಖರೀದಿಸಿತ್ತು. ಬಿನ್ನಿ ಬನ್ಸಾಲ್‌ ಅವರು ‘ಆಪ್‌ ಡೋರ್‌’ ಎನ್ನುವ ಹೊಸ ಸ್ಟಾರ್ಟಪ್‌ ಸ್ಥಾಪನೆಗೆ ಮುಂದಾಗಿದ್ದಾರೆ. ಅದರ ಬೆನ್ನಲ್ಲೇ ಈ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ. ‘ಆಪ್‌ ಡೋರ್‌’ ಸಹ ಇ – ಕಾಮರ್ಸ್‌ ಸಂಸ್ಥೆಯಾಗಿದ್ದು, ಅಮೆಜಾನ್‌ ಮತ್ತು ಎಟ್ಸಿ ಥರದ ಆನ್‌ಲೈನ್‌ ಮಾರುಕಟ್ಟೆ ತಾಣಗಳಲ್ಲಿ ಬ್ರ್ಯಾಂಡ್‌ಗಳು ತಮ್ಮ ವ್ಯವಹಾರಗಳನ್ನು ಯಾವ ರೀತಿ ವೃದ್ಧಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ಸಂಸ್ಥೆಗಳಿಗೆ ಇದು ವರದಿ ನೀಡುತ್ತದೆ. ಇ – ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ನಲ್ಲಿ ಬಿನ್ನಿ ಬನ್ಸಾಲ್‌ ಹಾದಿ * 2007 – ಸಹಪಾಠಿ ಸಚಿನ್‌ ಬನ್ಸಾಲ್‌ ಜತೆಗೂಡಿ ಫ್ಲಿಪ್‌ಕಾರ್ಟ್‌ ಸ್ಥಾಪನೆ * 2016 – ಸಚಿನ್‌ ಬನ್ಸಾಲ್‌…

Read More

ಜನಪ್ರಿಯ ಊಟವೆಂದರೆ ಅದು ಬಾಳೆಹಣ್ಣು ಮತ್ತು ಹಾಲು. ನೈಸರ್ಗಿಕವಾಗಿ ತೂಕ ಪಡೆಯಲುಅಥವಾ ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಜನರಿಗೆ ಇದನ್ನು ಸೇವಿಸಲು ಹೇಳಲಾಗುತ್ತದೆ ಕೂಡ. ಈ ಎರಡೂ ಆಹಾರಗಳು ಒಟ್ಟಿಗೆ ತಿನ್ನುವುದು ತೃಪ್ತಿಕರ ಸಂಯೋಜನೆಯಾಗಿದ್ದರೂ ಅವುಗಳ ಪೌಷ್ಠಿಕಾಂಶದ ಮೌಲ್ಯವನ್ನು ಮರೆಯಬಾರದು. ಆಯುರ್ವೇದದ ಪ್ರಕಾರ ಬಾಳೆಹಣ್ಣು ಮತ್ತು ಹಾಲು ಎರಡೂ ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿಸುತ್ತದೆ. ಅದು ಏಕೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.  ಹಾಲಿನೊಂದಿಗೆ ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯದಲ್ಲ ಏಕೆ?  ಆಯುರ್ವೇದದಲ್ಲಿ ಪ್ರತಿ ಆಹಾರವು ರುಚಿ ಮತ್ತು ಜೀರ್ಣಕ್ರಿಯೆಯ ನಂತರದ ಪರಿಣಾಮವನ್ನು ಹೊಂದಿರುತ್ತದೆ. ಜೊತೆಗೆ ಶಾಖ ಮತ್ತು ತಂಪಾಗಿಸುವ ಶಕ್ತಿಗಳನ್ನು ಅನುಸರಿಸುತ್ತದೆ. ವ್ಯಕ್ತಿಯು ಗ್ಯಾಸ್ಟಿçಕ್ ಆಹಾರವು ಹೇಗೆ ಜೀರ್ಣವಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಹಾಗೂ ಸರಿಯಾದ ಆಹಾರ ಸಂಯೋಜನೆಗಳು ಅತ್ಯಗತ್ಯವಾಗಿರುತ್ತದೆ. ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಅಂದರೆ ಆಯುರ್ವೇದದಲ್ಲಿಹಾಲು ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸುವುದು ಒಳ್ಳೆಯದಲ್ಲ ಎಂದಿದೆ.  ಹಾಲು ಮತ್ತು ಬಾಳೆಹಣ್ಣು ಪರಸ್ಪರ ಪೌಷ್ಟಿಕಾಂಶದ ಕೊರತೆಯನ್ನುತುಂಬುತ್ತವೆ. ಇವುಗಳನ್ನು ಸೇವಿಸುವುದು…

Read More

ಫೆಬ್ರವರಿ 29ರ ನಂತರ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್ ಪೇಮೆಂಟ್, ವ್ಯಾಲೆಟ್ ಮತ್ತು ಫಾಸ್ಟ್‌ಟ್ಯಾಗ್‌ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್‌ಗೆ ಆರ್‌ಬಿಐ ನಿರ್ಬಂಧಿಸಿದೆ. ಈ ಕುರಿತು ಆದೇಶ ಹೊರಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ರಿಸರ್ವ್ ಬ್ಯಾಂಕ್ ಸಮಗ್ರ ವ್ಯವಸ್ಥೆಯ ಲೆಕ್ಕಪರಿಶೋಧಕರ ವರದಿ ಮತ್ತು ಬಾಹ್ಯ ಲೆಕ್ಕಪರಿಶೋಧಕರ ಮೌಲ್ಯಮಾಪನಾ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಠೇವಣಿ, ಕ್ರೆಡಿಟ್ ವ್ಯವಹಾರ ಅಥವಾ ಟಾಪ್ ಅಪ್‌ಗಳನ್ನು ಯಾವುದೇ ಗ್ರಾಹಕ ಖಾತೆಗಳಿಂದ ಸ್ವೀಕರಿಸುವಂತಿಲ್ಲ. ಜೊತೆಗೆ ಈ ಪ್ರಿಪೇಯ್ಡ್, ವಾಲೆಟ್, ಪಾಸ್ಪೆಟ್ಯಾಗ್, ಎನ್‌ಸಿಎಮ್‌ಸಿ ಕಾರ್ಡ್‌ಗಳನ್ನೂ ನೀಡುವಂತಿಲ್ಲ. ಇದನ್ನು ಹೊರತುಪಡಿಸಿ ಬಡ್ಡಿ ಹಣ, ಮರುಪಾವತಿಯನ್ನು ಯಾವುದೇ ಸಮಯದಲ್ಲಿ ಮಾಡಬಹುದು ಎಂದು ತಿಳಿಸಿದೆ. ಸದ್ಯ ಖಾತೆಯಲ್ಲಿರುವ ಹಣವನ್ನು ಗ್ರಾಹಕರಿಗೆ ಬಳಸಲು ಯಾವುದೇ ತಿಂದರೆ ಇಲ್ಲ. ಫೆ.29ರಿಂದ ಗ್ರಾಹಕರಿಗೆ ಮರುಪಾವತಿ ಪ್ರಾರಂಭವಾಗಲಿದೆ. ಮಾರ್ಚ್​ 15ರೊಳಗೆ ಪೂರ್ಣಗೊಳಿಸಬೇಕು ಎಂದು ಆರ್​ಬಿಐ ಹೇಳಿದೆ.

Read More

ನಿತ್ಯ ಜೀವನಕ್ಕೆ ವಿಧವಿಧವಾದ ಪೌಷ್ಟಿಕ ತರಕಾರಿಗಳನ್ನು ಕಡಿಮೆ ಜಾಗದಲ್ಲಿ ಬೆಳೆಯುವ ತರಕಾರಿ ತೋಟವನ್ನು ಪೌಷ್ಟಿಕ ಕೈತೋಟ ಎನ್ನಲಾಗುತ್ತದೆ. ಪೌಷ್ಟಿಕ ಕೈತೋಟವನ್ನು ಬೆಳೆಸುವುದರಿಂದ ರುಚಿ ಶುಚಿಯಾದ ಹಣ್ಣು, ತರಕಾರಿ ಸಿಗುವುದರೊಂದಿಗೆ ಮನುಷ್ಯನ ದೇಹ ರಕ್ಷಣೆಗೆ ಪೌಷ್ಟಿಕ ಕೈತೋಟವನ್ನು ಬೆಳೆಸುವುದರಿಂದ ಕೇವಲ ರುಚಿ ಶುಚಿಯಾದ ಹಣ್ಣು, ತರಕಾರಿ ದೊರೆಯುವದಷ್ಟೇ ಅಲ್ಲ ತರಕಾರಿಗಳಲ್ಲಿಮನುಷ್ಯನ ದೇಹ ರಕ್ಷಣೆಗೆ ಬೇಕಾಗುವ ಪೋಷಕಾಂಶಗಳಾದ ಖನಿಜ ಮತ್ತು ಜೀವ ಸತ್ವಗಳು ಹೇರಳವಾಗಿದ್ದು, ಅವುಗಳ ಲಾಭವೂ ಸಿಗಲಿದೆ.ತರಕಾರಿಗಳು ದೈನಂದಿನ ಜೀವನದಲ್ಲಿ ಅತೀ ಮುಖ್ಯಸ್ಥಾನವನ್ನು ಪಡೆದಿವೆ.ಅದು ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ ದಿನವೂ ಸೇವಿಸಬೇಕು.ಪೌಷ್ಟಿಕ ಕೈತೋಟದ ಮುಖ್ಯ ಉದ್ದೇಶ ಆರ್ಥಿಕ ಲಾಭವಲ್ಲದೇ ಕುಟುಂಬದ ಪೋಷಣೆಯನ್ನು ಹೆಚ್ಚುಸುವುದು ಆಗಿರುತ್ತದೆ.ಈ ಮೂಲಕ ರಾಸಾಯನಿಕವನ್ನು ಹಾಕದ ಶುದ್ಧ ತರಕಾರಿಗಳನ್ನು ಮನೆ ಮಂದಿಗೆ ಉಣಬಡಿಸುವುದಾಗಿದೆ. ಪೌಷ್ಟಿಕ ಕೈತೋಟದ ಉಪಯೋಗಗಳು * ಕುಟುಂಬಕ್ಕೆ ಬೇಕಾಗುವ ಕಡಿಮೆ ಅಥವಾ ಯಾವುದೇ ವೆಚ್ಚವಿಲ್ಲದ ತಾಜಾ ಮತ್ತು ಪೌಷ್ಟಿಕ ತರಕಾರಿಗಳ ಪೂರೈಕೆ * ವರ್ಷಪೂರ್ತಿ ಕೀಟನಾಶಕ ಮತ್ತು ರಾಸಾಯನಿಕ ಮುಕ್ತ ತರಕಾರಿಗಳ ಲಭ್ಯತೆ * ಮನೆಯಲ್ಲಿ ತೋಟದ ಹೆಚ್ಚುವರಿ ತರಕಾರಿಗಳ…

Read More

ಭಾರತದಲ್ಲಿ ಮಗುವನ್ನು ದತ್ತು ಪಡೆಯುವುದು ಹೇಳಿದಷ್ಟು ಸುಲಭವಲ್ಲ. ದತ್ತು ಪಡೆಯುವ ವಿಧಾನ ಸ್ವಲ್ಪ ಕಷ್ಟದಿಂದ ಕೂಡಿದೆ.  ದತ್ತು ತೆಗೆದುಕೊಳ್ಳು ಪ್ರಕ್ರಿಯೆಯು ಪೂರ್ಣಗೊಳ್ಳಲು ಸುಮರು 2 ರಿಂದ 3 ವರ್ಷಗಳು ಬೇಕಾಗುತ್ತದೆ. ಇದೇ ಕಾರಣಕ್ಕೆ ಅನೇಕರು ದತ್ತು ಪಡೆಯುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಭಾರತದಲ್ಲಿ ಸುಮಾರು 3 ಕೋಟಿ 10 ಲಕ್ಷ ಅನಾಥ ಮಕ್ಕಳಿದ್ದಾರೆ. ದತ್ತು ತೆಗೆದುಕೊಳ್ಳುವ ವಿಧಾನ ಭಾರತದಲ್ಲಿ ಸುಲಭವಾಗಿದ್ದರೆ ಅನೇಕರು ಬಹುಬೇಗ ಮಕ್ಕಳನ್ನು ದತ್ತು ಪಡೆಯಬಹುದಿತ್ತು. ಇದ್ರಿಂದ ಅನಾಥ ಮಕ್ಕಳಿಗೆ ಕುಟುಂಬ ಸಿಗ್ತಿತ್ತು. ಮಕ್ಕಳಾಗದವರಿಗೆ ಮಕ್ಕಳು ಸಿಗ್ತಿದ್ದರು. ಕಾನೂನು ಕಠಿಣವಾಗಿರುವ ಕಾರಣ ಐದು ವರ್ಷದಲ್ಲಿ ಕೇವಲ 16,353 ಮಕ್ಕಳನ್ನು ಮಾತ್ರ ದತ್ತು ಪಡೆಯಲು ಸಾಧ್ಯವಾಗ್ತಿದೆ. ಭಾರತದಲ್ಲಿರುವ ಪ್ರತಿಯೊಬ್ಬರೂ, ಭಾರತೀಯ ನಾಗರಿಕರು, ಎನ್‌ಆರ್‌ಐಗಳು ಮತ್ತು ವಿದೇಶಿ ಪ್ರಜೆಗಳು ಮಗುವನ್ನು ದತ್ತು ಪಡೆಯಬಹುದು. ಆದರೆ ಅದಕ್ಕಾಗಿ ಅವರು ಮೊದಲು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ ಮಾಡಿದ ನಿಯಮಗಳನ್ನು  ಪಾಲನೆ ಮಾಡಬೇಕು. ವಿವಿಧ ರೀತಿಯ ನಾಗರಿಕರಿಗೆ ವಿವಿಧ ನಿಯಮಗಳಿವೆ.  ದತ್ತು ಪಡೆಯಲಿರುವ ನಿಯಮಗಳು :…

Read More

ಅಭಿಮಾನಿಗಳಿಗೆ ಬಿಗ್ ಬಾಸ್ ಸೀಸನ್ 10 ರ ವಿನ್ನರ್ ಕಾರ್ತಿಕ್ ವಿಶೇಷ ಮನವಿ ಮಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಗಿನಿಂದ ಕಂಟಿನ್ಯೂ ಆಗಿ ಕರೆ ಬರುತ್ತಲೇ ಇದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಇಂಟರ್‌ವ್ಯೂ ಅಟೆಂಡ್ ಮಾಡುತ್ತಲೇ ಇದ್ದೇನೆ. ಇದರ ನಡುವೆ ಪ್ರೀತಿಯ ಅಭಿಮಾನಿಗಳಲ್ಲಿ ಒಂದು ಕೋರಿಕೆ ಯಾರೆಲ್ಲಾ ಶುಭ ಕೋರಲು ನನಗೆ ಕರೆ ಮಾಡ್ತಿದ್ದೀರಾ ಹಾಗೂ ಮೆಸೇಜ್ ಮಾಡುತ್ತಿದ್ದೀರಾ ಎಲ್ಲರ ಮೆಸೇಜ್ ನೋಡ್ತಿದ್ದೇನೆ. ಆದರೇ ತುಂಬಾ ಮೆಸೇಜ್ ಮತ್ತು ಕರೆ ಬರುತ್ತಿರುವ ಕಾರಣಕ್ಕೆ ಎಲ್ಲರಿಗೂ ಉತ್ತರಿಸಲು ಆಗುತ್ತಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ. ಆದರೆ ನನ್ನ ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸಲು ಇಷ್ಟಪಡುತ್ತೇನೆ. ನಾನು ಒಳಗಡೆ ಹೊಡೆದಾಡುತ್ತಿದ್ದರೆ, ನೀವು ಹೊರಗೆ ಕಷ್ಟಪಡ್ತೀದ್ದೀರಿ. ಎರಡ್ಮೂರು ದಿನಗಳ ನಂತರ ಎಲ್ಲರಿಗೂ ಪರ್ಸನಲ್ ಆಗಿ ಸಿಗುತ್ತೇನೆ. ಫ್ಯಾನ್ಸ್ ಮೀಟ್ ಅಂತಲೇ ಮಾಡುತ್ತೀನಿ. ನನ್ನ ಧನ್ಯವಾದಗಳನ್ನು ನಿಮಗೆ ಅರ್ಪಿಸುತ್ತೇನೆ. ಎಲ್ಲದಕ್ಕೂ ಸ್ವಲ್ಪ ಸಮಯ ನೀಡಿ ಎಂದು ಮನವಿ ಮಾಡಿದ್ದಾರೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಎಂದೆಂದೂ ಚಿರಋಣಿ. ಶುಭ ಕೋರಿದ…

Read More

ಬಾಗಲಕೋಟೆ:- ಜಿಲ್ಲೆಯ ಜಮಖಂಡಿ ಪಟ್ಟಣದ ಎಪಿಎಂಸಿ ಬಳಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್​ಗೆ ಸಿಲುಕಿ ಬಾಲಕ ಸಾವನ್ನಪ್ಪಿದ ಘಟನೆ ಜರುಗಿದೆ. 13 ವರ್ಷದ ನಿಖಿಲ್ ಕೋಳಿ ಮೃತ ಬಾಲಕ ಎನ್ನಲಾಗಿದೆ. ಗೂಳಿ ರಸ್ತೆಯಲ್ಲಿ ಕಾದಾಡುತ್ತ ವಿದ್ಯಾರ್ಥಿ ನಿಖಿಲ್ ಮೇಲೆ ನುಗ್ಗಿಬಂದಿದೆ. ಈ ವೇಳೆ ಗೂಳಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್​ಗೆ ಸಿಲುಕಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಜಮಖಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

Read More