Author: AIN Author

ಬಳ್ಳಾರಿ:- ಜಿಲ್ಲೆಯಲ್ಲಿ 8 ಕ್ಯಾಂಟೀನ್​ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಸರ್ಕಾರದಿಂದ 3.38 ಕೋಟಿ ರೂಪಾಯಿ ಬಿಲ್ ಬಾಕಿ ಇರುವುದರಿಂದ ನಿರ್ವಹಣೆ ಸಾಧ್ಯವಾಗದೆ ಕ್ಯಾಂಟೀನ್​ಗಳು ಮುಚ್ಚಿವೆ. ಕಾಂಗ್ರೆಸ್‍ ಸರ್ಕಾರದ ಮಹತ್ವಾಕಾಂಕ್ಷೆ‌ಯ ಗ್ಯಾರಂಟಿ ಯೋಜನೆಗಳಿಂದಾಗಿ ಇಂದಿರಾ ಕ್ಯಾಂಟೀನ್​ಗಳು ಮುಚ್ಚುವಂತಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ ಬಳ್ಳಾರಿ ನಗರದ ಜಿಲ್ಲಾಸ್ಪತ್ರೆ, ವಿಮ್ಸ್, ಮೋತಿ ವೃತ್ತ, ಎಪಿಎಂಸಿ ಆವರಣದ ಕ್ಯಾಂಟೀನ್‌ಗಳು ಮುಚ್ಚಿವೆ. ಬಳ್ಳಾರಿ ನಗರವೊಂದರಲ್ಲೇ ಸರ್ಕಾರ 3.38 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ. 2021 ರಿಂದಲೇ ಕೋಟಿ ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಖಾಸಗಿ ಏಜೆನ್ಸಿ ಮೂಲಕ ಇಂದಿರಾ ಕ್ಯಾಂಟೀನ್​ಗಳನ್ನು ನಡೆಸಲಾಗುತ್ತಿದೆ. ಇದೀಗ, ಬಿಲ್ ಬಿಡುಗಡೆಯಾಗದ ಕಾರಣ ಕ್ಯಾಂಟೀನ್ ನಡೆಸುವುದು ಕಷ್ಟ ಎಂದು ಖಾಸಗಿ ಏಜೆನ್ಸಿಗಳು ಅವುಗಳನ್ನು ಮುಚ್ಚಿವೆ. ರೇಷನ್, ತರಕಾರಿ, ಗ್ಯಾಸ್, ಸಿಬ್ಬಂದಿ‌ ಸಂಬಳಕ್ಕೂ ಹಣ ಇಲ್ಲದೆ ಕ್ಯಾಂಟೀನ್​ಗಳನ್ನು ಬಂದ್ ಮಾಡಲಾಗಿದೆ ಎಂದು ಖಾಸಗಿ ಏಜೆನ್ಸಿಗಳು ತಿಳಿಸಿವೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು ಇಂದಿರಾ ಕ್ಯಾಂಟೀನ್.…

Read More

ಒನ್​ಪ್ಲಸ್ ಕಂಪನಿಯ ಪ್ರೀಮಿಯಂ ಸ್ಮಾರ್ಟ್​ಫೋನ್ ಒನ್​ಪ್ಲಸ್ ಏಸ್ 3 ಕಳೆದ ವರ್ಷ ಅನಾವರಣಗೊಂಡಿತ್ತು. ಇದಕ್ಕೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಒನ್​ಪ್ಲಸ್ ಏಸ್ 3V ಸ್ಮಾರ್ಟ್​ಫೋನ್ ಈ ಹಿಂದೆ ಬಿಡುಗಡೆಯಾದ ಒನ್​ಪ್ಲಸ್ ಏಸ್ 2V ನ ಉತ್ತರಾಧಿಕಾರಿಯಾಗಿದೆ. ಲಾಂಚ್‌ಗೂ ಮುನ್ನ ಫೋನ್‌ನ ಪ್ರೊಸೆಸರ್ ಮತ್ತು ಡಿಸ್‌ಪ್ಲೇ ಬಗ್ಗೆ ಮಾಹಿತಿ ಬಹಿರಂಗವಾಗಿದೆ. Weibo ನಲ್ಲಿ ಫೋನ್‌ಗೆ ಸಂಬಂಧಿಸಿದ ಕೆಲ ಫೀಚರ್ಸ್ ಸೋರಿಕೆ ಆಗಿದೆ. 1.5K ರೆಸಲ್ಯೂಶನ್ ಹೊಂದಿರುವ OLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಟಿಪ್ಸ್ಟರ್ ಸೋರಿಕೆ ಮಾಡಿದ್ದಾರೆ. ಈ ಫೋನ್ 120Hz ರಿಫ್ರೆಶ್ ದರವನ್ನು ಹೊಂದಿರುತ್ತದೆ. ಪ್ರೊಸೆಸರ್‌ಗೆ ಸಂಬಂಧಿಸಿದಂತೆ, ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7 ಜನ್ 3 ಚಿಪ್‌ಸೆಟ್‌ನೊಂದಿಗೆ ಬರಬಹುದು ಎಂದು ಹೇಳಲಾಗಿದೆ. ಒನ್​ಪ್ಲಸ್ ಏಸ್ 3V ನ ಬ್ಯಾಟರಿ ವಿಶೇಷಣಗಳನ್ನು ಸಹ ಇಲ್ಲಿ ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಫೋನ್ 5000 mAh ಬ್ಯಾಟರಿ ಶಕ್ತಿಯನ್ನು ಪಡೆಯಬಹುದು. ಇದರೊಂದಿಗೆ, 100W ವೇಗದ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗುತ್ತದೆ. ಈ ಫೋನ್ ಫ್ರೇಮ್ ಪ್ಲಾಸ್ಟಿಕ್‌ನಲ್ಲಿ ಬರಬಹುದು ಮತ್ತು…

Read More

ಬೆಂಗಳೂರು:- ಬಿಜೆಪಿ ಸೇರ್ಪಡೆಯ ಊಹಾಪೋಹ ಸುದ್ದಿಗಳಿಗೆ ಶಾಸಕ ಲಕ್ಷ್ಮಣ್ ಸವಧಿ ಸ್ಪಷ್ಟನೆ ಕೊಟ್ಟಿದ್ದಾರೆ. ದೇವನಹಳ್ಳಿ ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು, ಇಲ್ಲಾ ಎಂದು ಕಡ್ಡಿ‌ ತುಂಡಾಗುವಂತೆ ಬಿಜೆಪಿ ಸೇರ್ಪಡೆಯನ್ನು ನಿರಾಕರಿಸಿದ್ದಾರೆ. ಈಗಾಗಲೇ ಹತ್ತು ಸಲ ಹೇಳಿದ್ದೇನೆ. ಈಗ ಹನ್ನೊಂದು ಸಲ ಹೇಳ್ತಿದ್ದೇನೆ. ಮುಂದೆಯೂ ಹೇಳ್ತೇನೆ. ನಾನು ಬಿಜೆಪಿಗೆ ಸೇರಲ್ಲ ಎಂದರು. ಇದೇ ವೇಳೆ ಕೆರೆಗೋಡು ದ್ವಜ-ದಂಗಲ್ ರಾಜಕೀಯದ ಪ್ರಶ್ನೆಗೆ ಕೆಂಡಾಮಂಡಲ ಆದ ಸವದಿ, ವಿನಾಕಾರಣ ಮಾಧ್ಯಮಗಳು ಕೆರೆಗೋಡು ವಿಷಯವನ್ನು ರಾಜಕೀಯ‌ ಮಾಡ್ತಿವೆ. ಕಾಂಗ್ರೆಸ್-ಬಿಜೆಪಿ ಪಕ್ಷಗಳೆರಡು ರಾಮ-ಹನುಮನನ್ನ ರಾಜಕೀಯ ಮಾಡ್ತಿವೆ ಎಂದಿದ್ದಕ್ಕೆ ಲಕ್ಷ್ಮಣ್ ಸವದಿ ಕೋಪಗೊಂಡಿದ್ದಾರೆ. ನೀವೆ ಮಂಡ್ಯದ ಪ್ರಜೆಯಾಗಿ ಮಾತನಾಡಿ ಎಂದು ಮರುಪ್ರಶ್ನೆ..!? ಮಾಡಿದ್ದಾರೆ. ಮಾಧ್ಯಮಗಳಿಗೆ ಸುದ್ದಿಮಾಡಲು ಅನೇಕ ವಿಷಯಗಳಿವೆ..!?ರಾಜ್ಯದಲ್ಲಿ ಮಳೆಯಿಲ್ಲ ಬರ ಇದೆ. ಬೇರೆ ಅನೇಕ ವಿಷಯಗಳಿವೆ, ಈ ಬಗ್ಗೆ ನೀವ್ಯಾರು ಮಾತನಾಡ್ತಿಲ್ಲ..!!ರಾಮ ಮತ್ತು ಹನುಮಂತನ ನ್ನು ಹಿಡಿದುಕೊಂಡಿದ್ದೀರಿ ಎಂದು ಲಕ್ಷ್ಮಣ್ ಸವದಿ ಕೋಪವಾಗಿದ್ದಾರೆ. ಇನ್ನೂ ಇದೇ ವೇಳೆ ಕೇಂದ್ರ ಬಜೆಟ್ ಮಂಡನೆ ವಿಚಾರವಾಗಿ ಮಾತನಾಡಿದ ಅವರು, 2024ರ ಕೇಂದ್ರದ…

Read More

ಹುಬ್ಬಳ್ಳಿ: ನಾನು ಕಾಂಗ್ರೆಸ್ಸಿಗೆ ಹೋಗುತ್ತೇನೆ ಎಂಬ ಸುದ್ದಿ ಹಬ್ಬಿತ್ತು. ಆದರೆ ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ. ಬಿಜೆಪಿಯಲ್ಲೇ ಮುಂದುವರಿಯುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟಪಡಿಸಿದರು. ಇದರಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬಿಜೆಪಿಗೆ ಮರಳಿದ ಬೆನ್ನಲ್ಲೇ ಮುನೇನಕೊಪ್ಪ ತಮ್ಮ ಬಗ್ಗೆ ಇದ್ದ ಊಹಾಪೋಹಗಳಿಗೆ ಬ್ರೇಕ್‌ ಹಾಕಿದಂತಾಗಿದೆ. ಪತ್ರಿಕಾಗೋಷ್ಠಿ ಈ ಮಾತು ಸ್ಪಷ್ಟಪಡಿಸಿದ ಅವರು, ನನ್ನ ಮನೆಯಲ್ಲಿ ನಡೆದ ಕೆಲ ಕಹಿ ಘಟನೆಗಳಿಂದ ರಾಜಕೀಯದಿಂದ ದೂರ ಉಳಿದು ಐದು ತಿಂಗಳಿನಿಂದ ಮೌನಕ್ಕೆ ಜಾರಿದ್ದೆ ಅಷ್ಟೇ ಎಂದರು. ರಾಜಕೀಯದಲ್ಲಿ ಸಕ್ರಿಯವಾಗಿಲ್ಲದ ಕಾರಣ ನನ್ನ ಬಗ್ಗೆ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಮುನೇನಕೊಪ್ಪ ಕಾಂಗ್ರೆಸ್‌ ಸೇರುತ್ತಾರೆ, ಮುನೇನಕೊಪ್ಪ ಕಾಂಗ್ರೆಸ್‌ನಿಂದ ಲೋಕಸಭೆ ಅಭ್ಯರ್ಥಿ ಆಗುತ್ತಾರೆ. ಈ ಎಲ್ಲ ಉಹಾಪೋಹಗಳಿಗೆ ಪುಷ್ಟಿನೀಡುವಂತೆ ಕಾಂಗ್ರೆಸ್‌ ನಾಯಕರು ನನಗೆ ಆಹ್ವಾನ ನೀಡಿದ್ದರು. ಆದರೆ, ನಾನಾಗಿಯೇ ಯಾರ ಮನೆಗೂ ಹೋಗಿರಲಿಲ್ಲ. ಆಹ್ವಾನ ನೀಡಿದ ಕಾಂಗ್ರೆಸ್‌ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಎಂದರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರಿಗೆ ಪಕ್ಷದಲ್ಲಿ ನೋವಾಗಿದ್ದರಿಂದ ಕಾಂಗ್ರೆಸ್‌ ಸೇರಿದ್ದರು. ಅವರು…

Read More

ನವದೆಹಲಿ: 20 ವರ್ಷದ ಯುವಕ ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕತೆಗೆ ತಿರಸ್ಕರಿಸಿದ್ದಕ್ಕೆ ಸ್ನೇಹಿತನನ್ನೇ (Friend) ಕೊಲೆ ಮಾಡಿರುವ ಘಟನೆ ದೆಹಲಿಯ (Delhi)  ಡಿಡಿಎ ಪಾರ್ಕ್ ಮೋರಿ ಗೇಟ್ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶ (Uttar Pradesh)  ಜಲೋನ್ ಜಿಲ್ಲೆಯ ರುದೂರಪುರ ಗ್ರಾಮದ ಪ್ರಮೋದ್ ಕುಮಾರ್ ಶುಕ್ಲಾ ಎಂದು ಗುರುತಿಸಲಾಗಿದೆ. ರಾಕೇಶ್ ತೋಮರ್ ಅವರ ಅಂಗಡಿಯಲ್ಲಿರುವ ಖೋಯಾ ಮಂಡಿಯಲ್ಲಿ ಪ್ರಮೋದ್ ಕೆಲಸ ಮಾಡುತ್ತಿದ್ದು, ಅಲ್ಲೇ ಪಕ್ಕದಲ್ಲಿದ್ದ ಮೋರಿ ಗೇಟ್‌ನಲ್ಲಿರುವ ರೈನ್ ಬಸೇರಾದಲ್ಲಿ ಗೆಳೆಯ ರಾಜೇಶ್ ಜೊತೆಗೆ ವಾಸಿಸುತ್ತಿದ್ದ. ಪ್ರಮೋದ್ ಕೊಲೆಯ ಹಿಂದಿನ ದಿನ ಗೆಳೆಯರಿಬ್ಬರು ಜೊತೆಗೆ ಇದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಬಳಿಕ ಕಾಣೆಯಾಗಿದ್ದ ಆರೋಪಿ ರಾಜೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದಾನೆ. ಸ್ನೇಹಿತನೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸುವಂತೆ ಒತ್ತಡ ನೀಡಿದ್ದ. ಆದರೆ ಅಸ್ವಾಭಾವಿಕ ಲೈಂಗಿಕತೆಯನ್ನು ಪ್ರಮೋದ್ ನಿರಾಕರಿಸಿದ್ದಾನೆ. ಇದಕ್ಕೆ ಮತ್ತಷ್ಟು ಕೋಪಗೊಂಡ ರಾಜೇಶ್ ಜಗಳ ಮಾಡಿದ್ದಾನೆ. ನಂತರ ದಾರುಣವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.…

Read More

ವಾಟ್ಸಾಪ್‌ ಹೊಸ ಹೊಸ ವೈಶಿಷ್ಟ್ಯಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸುತ್ತಲೇ ಇರುತ್ತದೆ. ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಈ ಮೆಸೇಜಿಂಗ್ ಅಪ್ಲಿಕೇಷನ್ ಮತ್ತೊಂದು ಫೀಚರ್ ಅನ್ನು ಪರಿಚಯಿಸುತ್ತಿದೆ. ವಿಂಡೋಸ್ ಬಳಕೆದಾರರಿಗೆ ಅಪರಿಚಿತ ಫೋನ್ ಸಂಖ್ಯೆ ಅಥವಾ ತಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಇಲ್ಲದ ಫೋನ್‌ ಸಂಖ್ಯೆಗಳೊಂದಿಗೆ ಚಾಟ್‌ಗಳನ್ನು ಮಾಡಲು ಅನುವು ಮಾಡಿಕೊಡುವಂತಹ ಫೀಚರ್ ಇದಾಗಿದೆ. ಸದ್ಯದ ವರದಿಯ ಪ್ರಕಾರ ವಾಟ್ಸಾಪ್‌ ಹೊಸ ಸ್ಕ್ರೀನ್ ಅನ್ನು ಪರಿಚಯಿಸುತ್ತಿದೆ. ಅದರಲ್ಲಿ ಫೋನ್‌ ಸಂಖ್ಯೆಯನ್ನು ನಮೂದಿಸಲು ಸಾಧ್ಯವಾಗುತ್ತದೆ. ಹೀಗಾಗಿ ನೀವು ನಿಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಇಲ್ಲದ ಹೊಸ ಫೋನ್‌ ನಂಬರ್ ಅನ್ನು ನಮೂದಿಸಿ ತಕ್ಷಣ ಚಾಟಿಂಗ್ ಆರಂಭಿಸಬಹುದಾಗಿದೆ. ಅಂದರೆ ಸಂವಹನವನ್ನು ಇನ್ನಷ್ಟು ಸುಲಭ ಮತ್ತು ಸರಳವಾಗಿಸುವ ಸಲುವಾಗಿ ವಾಟ್ಸಾಪ್ ಇಂತಹದ್ದೊಂದು ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಇದಲ್ಲದೆ, ಹೊಸ ಚಾಟ್‌ ಪರದೆಯೊಳಗಿನ ಸರ್ಚ್‌ ಬಾರ್‌ನಲ್ಲಿ ನಮೂದಿಸುವ ಮೂಲಕ ನೀವು ಫೋನ್‌ ಸಂಖ್ಯೆಗಳನ್ನು ಹುಡುಕುವುದನ್ನು ಮುಂದುವರಿಸಬಹುದು ಎಂಬುದೂ ಗಮನಾರ್ಹ. ಇದನ್ನು ಹಿಂದಿನ ಅಪ್‌ಡೇಟ್‌ನಲ್ಲಿ ಈಗಾಗಲೇ ಅಳವಡಿಸಲಾಗಿದೆ. ನಿಮ್ಮ ವಾಟ್ಸಾಪ್‌ ಖಾತೆಯಲ್ಲಿ ಈ ವೈಶಿಷ್ಟ್ಯತೆ…

Read More

ಬೆಂಗಳೂರು:- ಜನವರಿ ತಿಂಗಳು ಮುಗಿಯುತ್ತಿದ್ದಂತೆ ಚಳಿ ಕಡಿಮೆ ಆಗಿದ್ದು, ಉಷ್ಣಾಂಶ ಹೆಚ್ಚಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಮುಂದುವರೆಯಲಿದೆ. ಬಳ್ಳಾರಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲೂ ಒಣಹವೆ ಮುಂದುವರೆಯಲಿದೆ. ಉತ್ತರ ಒಳನಾಡು ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಚಳಿ ಇದೆ. ವಿಜಯಪುರದಲ್ಲಿ 12.0 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ನಿರ್ಮಲ ಆಕಾಶವಿರುತ್ತದೆ. 31 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್​ಎಎಲ್​ನಲ್ಲಿ 30.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 16.1 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.4 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 16.4 ಡಿಗ್ರಿ ಸೆಲ್ಸಿಯಸ್​…

Read More

ಕೆಲವೊಮ್ಮೆ ರೆಫ್ರಿಜರೇಟರ್    ದೋಷಗಳಿಂದ  ಹೆಚ್ಚೆಚ್ಚು  ಐಸ್ ಉತ್ಪತ್ತಿಯಾಗಿ ಗಣಿಕರಣಗೊಳ್ಳುತ್ತದೆ ಇದರಿಂದ ಫ್ರಿಡ್ಜ್ ನಲ್ಲಿ ಸ್ಥಳವಕಾಶದ ಕೊರತೆ ಉಂಟಾಗುತ್ತದೆ. ಆದ್ರೆ ಸಾಮಾನ್ಯವಾಗಿ ಹಳೆಯ  ಫ್ರಿಡ್ಜ್‌ʼನಲ್ಲಿ ಈ ಸಮಸ್ಯೆ ಹೆಚ್ಚು ಫ್ರಿಡ್ಜ್‌ʼನಲ್ಲಿ ಐಸ್ ನಿರ್ಮಾಣವಾಗುವುದನ್ನು ತಡೆಯಲು ಫ್ರೀಜರ್ ತಾಪಮಾನವನ್ನು 18 ಡಿಗ್ರಿ ಹೊಂದಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ ಫ್ರೀಜರ್, ಈ ತಾಪಮಾನಕ್ಕಿಂತ ಹೆಚ್ಚಿದರೆ ಕಡಿಮೆ ಮಾಡಿ ಫ್ರೀಜರ್ ನಲ್ಲಿ ಮಂಜುಗಡ್ಡೆ ನಿರ್ಮಾಣವಾಗುವುದನ್ನು ತಡೆಗಟ್ಟಲು ಅದನ್ನು ಖಾಲಿ ಬಿಡಬೇಡಿ ಅಗತ್ಯ ಸಾಮಾನುಗಳನ್ನು ತುಂಬಿಸಬೇಕು ಹೆಚ್ಚಿನ ಜಾಗವಿದ್ದಾಗದೆ ನಂತರ ಮಂಜುಗಡ್ಡೆಯಾಗಿ ಬದಲಾಗುತ್ತದೆ ಆಗಾಗ ನಿಯಮಿತವಾಗಿ ಶುಚಿಗೊಳಿಸುವುದನ್ನು ಮುಖ್ಯ ಅದೇ ರೀತಿ ಪದೇ ಪದೇ ಹೆಚ್ಚು ಫ್ರಿಡ್ಜ್ ಬಾಗಿಲನ್ನು ತೆಗೆಯಬಾರದು ಹೆಚ್ಚಿನ ಫ್ರಿಡ್ಜ್‌ʼಗಳ ಕೆಳಭಾಗದಲ್ಲಿ ಮೆದುಗೊಳುವೆ ಹೊಂದಿದ್ದು ಅದು ನೀರನ್ನು ಹರಿಸುತ್ತದೆ ಮೆದುಗೊಳವೆ ಹಾಳಾಗಿ ಹೋಗಿದ್ರೆ ಫ್ರೀಜರ್ ನಲ್ಲಿ ಐಸ್ ನಿರ್ಮಾಣವಾಗಬಹುದು ಫ್ರಿಜ್ ನ ಹಿಂಭಾಗದಲ್ಲಿ ಕಂಡೆನ್ಸರ್ ಕಾಯಿಲ್ ಇರುತ್ತದೆ ಇದು ಫ್ರಿಡ್ಜ್‌ʼನ್ನು ಆನ್ ಮಾಡಲು ಮತ್ತು ತಂಪಾಗಿಸಲು ಸಹಾಯ ಮಾಡುತ್ತದೆ ಅದು ಕೊಳಕು ಮತ್ತು ಮಂಜುಗಡ್ಡೆಯಿಂದ ಸರಿಯಾಗಿ ಕಾರ್ಯ…

Read More

ಭಾರತದಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,270 ರುಪಾಯಿ ಆಗಿದೆ. ಅಂತಾರಾಷ್ಟ್ರೀಯವಾಗಿ ಅಮೆರಿಕ ಮೊದಲಾದ ಕೆಲವೆಡೆ ಚಿನ್ನದ ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಉಳಿದಂತೆ ಬೇರೆಡೆ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆ ಎಲ್ಲೆಡೆ ವ್ಯತ್ಯಯ ಕಂಡಿಲ್ಲ. ಇನ್ನೂ ಬೆಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರದಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರವರಿ 1ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,000 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,270 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ? 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,000 ರೂ 24 ಕ್ಯಾರಟ್​ನ 10…

Read More

ಟೀಮ್ ಇಂಡಿಯಾದ ಮಹಿಳಾ ಸ್ಟಾರ್ ಆಲ್ ರೌಂಡರ್ ದೀಪ್ತಿ ಶರ್ಮಾ ಅವರಿಗೆ ಉತ್ತರಪ್ರದೇಶ ಸರ್ಕಾರ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್ ಪಿ) ಹುದ್ದೆ ನೀಡಿ ಗೌರವಿಸಿದೆ ಕಳೆದ ಹಲವು ವರ್ಷಗಳಿಂದ ಮಹಿಳಾ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ಎಲ್ಲಾ ಸ್ವರೂಪದ ಕ್ರಿಕೆಟ್ ನಲ್ಲಿ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ದೀಪ್ತಿ ಶರ್ಮಾ, ಡಿಸೆಂಬರ್ 2023ರ ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಡೆದಿದ್ದು, ಇತ್ತೀಚೆಗೆ ಬಿಸಿಸಿಐ ಈ ಪ್ರಶಸ್ತಿಯನ್ನು ಶರ್ಮಾ ಅವರಿಗೆ ಹಸ್ತಾಂತರಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಡಿಎಸ್ ಪಿ ಹುದ್ದೆಯ ಆದೇಶ ಪತ್ರ ಪಡೆದಿರುವುದ್ದು ಸರ್ಕಾರಕ್ಕೆ ವಿನಮ್ರನಾಗಿರುತ್ತೇನೆ ಎಂದು ದೀಪ್ತಿಶರ್ಮಾ ತಿಳಿಸಿದ್ದಾರೆ. ಟೀಮ್ ಇಂಡಿಯಾದ 26 ವರ್ಷದ ಸ್ಪಿನ್ ಆಲ್ ರೌಂಡರ್ ಐಸಿಸಿ ಜನವರಿ 30 (ಮಂಗಳವಾರ) ಪ್ರಕಟಿಸಿದ ಟಿ20-ಐ ಕ್ರಿಕೆಟ್ ನ ಮಹಿಳಾ ನೂತನ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದಿರುವ ದೀಪ್ತಿ ಶರ್ಮಾ, ಇತ್ತೀಚೆಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ತಮ್ಮ…

Read More