Author: AIN Author

ಬೆಂಗಳೂರು:- ನಗರದಲ್ಲಿ ಆಟೋ ಚಾಲಕರಿಂದ ನಿಯಮ ಉಲ್ಲಂಘನೆ ಹಿನ್ನೆಲೆ, ಸಂಚಾರಿ ಪೊಲೀಸರಿಂದ ಸ್ಪೆಷಲ್ ಡ್ರೈವ್ ನಡೆಸಲಾಗಿದೆ. ದಕ್ಷಿಣ ವಿಭಾಗದ ಸಂಚಾರಿ ಪೊಲೀಸರಿಂದ ಕಾರ್ಯಾಚರಣೆ ನಡೆದಿದ್ದು, ನಿಯಮ ಉಲ್ಲಂಘನೆ ಮಾಡಿರೋ ಆಟೋ ಚಾಲಕರ ವಿರುದ್ಧ ಕೇಸ್ ದಾಖಲು ಮಾಡಲಾಗುತ್ತಿದೆ. ಇಂದು 599 ಆಟೋಗಳನ್ನ ಸಂಚಾರಿ ಪೊಲೀಸರು ತಪಾಸಣೆ ಮಾಡಿದ್ದಾರೆ. ಈ ವೇಳೆ ಕೆಲ ಚಾಲಕರಿಂದ ನಿಯಮ ಉಲ್ಲಂಘನೆ ಹಿನ್ನೆಲೆ, 177 ಚಾಲಕರ ಮೇಲೆ ಕೇಸ್ ದಾಖಲಾಗಿದೆ. ಎಲೆಕ್ಟ್ರಾನಿಕ್ ಸಿಟಿ, ಹೆಚ್ ಎಸ್ ಆರ್ ಲೇಔಟ್, ಮಡಿವಾಳ ಸೇರಿದಂತೆ 13 ಸಂಚಾರಿ ಠಾಣೆಗಳಲ್ಲಿ ಕೇಸ್ ದಾಖಲಾಗಿದೆ.

Read More

ಪೀಣ್ಯ ದಾಸರಹಳ್ಳಿ‌ : ವಿದ್ಯಾರ್ಥಿಗಳು ಚೆನ್ನಾಗಿ ಓದಿ ಜೀವನದಲ್ಲಿ ಉತ್ತಮ ಭವಿಷ್ಯ ಕಂಡುಕೊಂಡು ಹೆತ್ತವರಿಗೆ ಹೆಸರು ತಂದು ಕೊಡುವ ಮಕ್ಕಳಾಗಬೇಕು. ಹಾಗೇ ಉತ್ತಮ ಪ್ರಜೆಗಳಾಗಬೇಕು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಶಾಲೆಗೆ ಕೀರ್ತಿಯನ್ನು ತಂದುಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಶಾಸಕ ಎಸ್ ಮುನಿರಾಜು ತಿಳಿಸಿದರು. ದಾಸರಹಳ್ಳಿ‌ ಕ್ಷೇತ್ರದ ಭುವನೇಶ್ವರಿ ನಗರದ ಮಾಸ್ಟರ್ಸ್‌ ಪದವಿ ಪೂರ್ವಕಾಲೇಜು ಹಾಗೂ ವಿಜಯ ಭಾರತಿ ಸ್ಕೂಲ್ ಕ್ಯಾಂಪಸ್‌ ‌ನಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ಕಾರ್ಯಾಗಾರವನ್ನು ಉದ್ಘಾಟಿಸಿ ಬಳಿಕ ಮಾತಾನಡಿದರು. ಶಾಲಾ ಕಾಲೇಜಿಗಳಲ್ಲಿ ವಿದ್ಯಾಭ್ಯಾಸ ಸಂಧರ್ಭದಲ್ಲಿ ಬೇರೆ ಕಡೆ ಗಮನ ಹರಿಸದೇ ಉತ್ತಮ ಭವಿಷ್ಯ ರೂಪಿಸಿಕೊಂಡರೆ ಜೀವನದಲ್ಲಿ ನೆಮ್ಮದಿಯಾಗಿರಬಹುದು ಎಂದರು. 10 ನೇ ತರಗತಿಯಲ್ಲಿ ವಿಜ್ಞಾನ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯಕ್ಕೆ ಸಂಬಂಧ ಪಟ್ಟ ಎಲ್ಲಾ ಎನ್.ಸಿ.ಆರ್.ಟಿ. ಪುಸ್ತಕದಲ್ಲಿರುವ ಪ್ರಯೋಗಗಳನ್ನು ಮಕ್ಕಳಿಂದಲೇ ಮಾಡಿಸುವ ಕಾರ್ಯಾಗಾರವನ್ನು ನಿವೃತ್ತ ಶಿಕ್ಷಣಾಧಿಕಾರಿ,ಹಾಗು ಪ್ರಾಂಶುಪಾಲರಾದ ಟಿ ಎಂ ಪಾರ್ಥ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಪ್ರಾಂಶುಪಾಲ ಡಾ. ಕೆ ಎಸ್ ಮಲ್ಲಿಕಾರ್ಜುನ ಮಾತನಾಡಿ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಎಲ್ಲಾ…

Read More

ಬಾಗಲಕೋಟೆ : ಈ ದೇಶದಲ್ಲಿ ಕೆಲವರಿಂದ ಕಿಡಿಗೇಡಿತನ ಕೆಲಸಗಳು ನಡೆಯುತ್ತಿವೆ. ಚುನಾವಣೆ ಬಂದಾಗ ಕೋಮು ಗಲಭೆ, ಜಾತಿ ಗಲಭೆ ಎಬ್ಬಿಸಿ ಆ ಮೂಲಕ ಲಾಭ ಪಡೆಯಲು ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಬ್ಯಾನರ್‌ಗಳಿಗೆ ಕಲ್ಲೆಸೆತದ ಘಟನೆ ಪ್ರಸ್ತಾಪಿಸಿ ಮಾತನಾಡಿದರು. ಸಂವಿಧಾನ ವಿರೋಧಿ ನಡವಳಿಕೆಗಳು ನಡೆಯುತ್ತಿವೆ. ಬಿಜೆಪಿಗರಿಗೆ ಹನುಮ ಬೇಕಾಗಿಲ್ಲ, ರಾಮನೂ ಬೇಕಾಗಿಲ್ಲ. ಅವರಿಗೆ ಮತ ಬೇಕಾಗಿದೆ. ಆ ಮತಗಳ ಲಾಲಸೆ, ಆಸೆಗೆ ಹೀನ ಕೃತ್ಯಕ್ಕೆ ಇಳಿಯುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು. ಹನುಮಧ್ವಜ ವಿಚಾರ ಇಟ್ಟುಕೊಂಡು ಮೈಸೂರು ಭಾಗದಲ್ಲಿ ಬಿಜೆಪಿ ಗಟ್ಟಿ ನೆಲೆಯೂರಲು ಪ್ರಯತ್ನ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲೆಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲ ಹೀಗೆ ಮಾಡುತ್ತಾರೆ. ಎಲೆಕ್ಷನ್ ಮುಗಿಯುವವರೆಗೂ ಬಿಜೆಪಿ ಕೆಲಸವೇ ಇದು. ಯಾವತ್ತಾದರೂ ಅವರು ಅಭಿವೃದ್ಧಿ ಕೆಲಸಗಳನ್ನು ಹೇಳಿದ್ದಾರಾ? ಅಧಿಕಾರ ಪಡೆಯೋಕೆ ಹಿಂದುಗಳು ಅನ್ನೋದು, ಎಲೆಕ್ಷನ್ ಮುಗಿದ ಮೇಲೆ…

Read More

ಥಾಣೆ:- ಸಂತ ಗಡ್ಗೆ ಮಹಾರಾಜ್ ಪ್ರಾಥಮಿಕ ಮತ್ತು ಮಾಧ್ಯಮಿಕ ಆಶ್ರಮ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 109 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಜರುಗಿದೆ. ಈ ಶಾಲೆಯಲ್ಲಿ 1 ರಿಂದ 10 ನೇ ತರಗತಿಯ 200 ವಿದ್ಯಾರ್ಥಿಗಳು ಇದ್ದಾರೆ. ನಾಲ್ವರು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲರನ್ನೂ ಚಿಕಿತ್ಸೆ ನಂತರ ಶಹಾಪುರದ ಉಪವಿಭಾಗದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಶಹಾಪುರ ತಹಸೀಲ್ದಾರ್ ಕೋಮಲ್ ಠಾಕೂರ್ ಪಿಟಿಐಗೆ ತಿಳಿಸಿದ್ದಾರೆ. ಮಧ್ಯಾಹ್ನದ ಊಟಕ್ಕಾಗಿ ವಿದ್ಯಾರ್ಥಿಗಳಿಗೆ ಆಹಾರ ಮತ್ತು ಸಿಹಿ ಖಾದ್ಯವನ್ನು ನೀಡಲಾಗಿತ್ತು, 109 ಜನರಲ್ಲಿ 63 ಹುಡುಗಿಯರು ಮತ್ತು 46 ಹುಡುಗರು ವಾಂತಿ ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರು ಹೇಳಿದರು. ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸ್ಥಿತಿಗತಿ ವಿಚಾರಿಸಿದರು. ಪೀಡಿತ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಸಹ ವೈದ್ಯಕೀಯ ಸೌಲಭ್ಯದ ಹೊರಗೆ ಜಮಾಯಿಸಿದರು, ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರನ್ನು ನಿಯೋಜಿಸಲಾಗಿದೆ. ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ…

Read More

ಹೈದರಾಬಾದ್:- ಕುಡಿದ ಮತ್ತಿನಲ್ಲಿ ಬಸ್ ಕಂಡಕ್ಟರ್ ಗೆ ಮಹಿಳೆ ಹಲ್ಲೆ ನಡೆಸಿದ ಘಟನೆ ಹೈದರಾಬಾದ್ ಜರುಗಿದೆ. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ನಲ್ಲಿ ಮಹಿಳೆ ಕೆಟ್ಟದಾಗಿ ವರ್ತಿಸಿರುವ ಘಟನೆ ನಡೆದಿದೆ. ಬಸ್ ಕಂಡಕ್ಟರ್ ಮೇಲೆ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ದೈಹಿಕ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ಕುಡಿದ ಮತ್ತಿನಲ್ಲಿ ಮಹಿಳೆ ವಾಗ್ವಾದದ ವೇಳೆ ಕಂಡಕ್ಟರ್‌ಗೆ ಒದ್ದಿದ್ದಾಳೆ. ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರೊಂದಿಗೆ ಮಹಿಳೆ ಅಸಭ್ಯವಾಗಿ ವರ್ತಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಯಾಣ ದರ ಅಥವಾ ಟಿಕೆಟ್‌ಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. TSRTC ಮಹಿಳೆಯ ವಿರುದ್ಧ ದೂರು ದಾಖಲಿಸಿದೆ ಮತ್ತು ಕಾನೂನು ಜಾರಿ ಸಂಸ್ಥೆಗಳು ಈ ವಿಷಯದ ಬಗ್ಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿವೆ.

Read More

ಲಕ್ನೋ: ಉತ್ತರ ಪ್ರದೇಶದ (UP) 16 ಲೋಕಸಭಾ ಕ್ಷೇತ್ರಗಳಿಗೆ (Lok Sabha Seats) ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಅಧಿಕೃತವಾಗಿ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದಾರೆ. I.N.D.I.A ಒಕ್ಕೂಟದ ಮಿತ್ರಪಕ್ಷವಾದ ಕಾಂಗ್ರೆಸ್‌ಗೆ 11 ಸ್ಥಾನಗಳನ್ನ ಕಾಯ್ದಿರಿಸಿದೆ ಎಂದು ಹೇಳಿದ ಒಂದು ದಿನದ ನಂತರ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ (Dimple Yadav) ಅವರು ಮೈನ್‌ಪುರಿಯಿಂದ ಸ್ಪರ್ಧಿಸಲಿದ್ದಾರೆ. ಇನ್ನೂ ಶಫೀಕರ್ ರೆಹಮಾನ್ ಬಾರ್ಕ್ ಸಂಭಾಲ್‌ ಕ್ಷೇತ್ರದಿಂದ ಸ್ಪರ್ಧಿಸಿದ್ರೆ, ರವಿದಾಸ್ ಮೆಹ್ರೋತ್ರಾ ಲಕ್ನೋದಿಂದ ಕಣಕ್ಕಿಳಿಯಲಿದ್ದಾರೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 11 ಒಬಿಸಿಗಳು, ಓರ್ವ ಮುಸ್ಲಿಂ, ಓರ್ವ ದಲಿತ, ಓರ್ವ ಠಾಕೂರ್, ಓರ್ವ ಟಂಡನ್ ಮತ್ತು ಓರ್ವ ಖತ್ರಿ ಅಭ್ಯರ್ಥಿಗಳಿದ್ದಾರೆ.  11 OBC ಅಭ್ಯರ್ಥಿಗಳಲ್ಲಿ ನಾಲ್ವರು ಕುರ್ಮಿ, ಮೂರು ಯಾದವ್, ಇಬ್ಬರು ಶಾಕ್ಯ, ಒಬ್ಬ ನಿಶಾದ್ ಮತ್ತು ಒಬ್ಬ…

Read More

ರಾಮನಗರ:- ನಾಪತ್ತೆ ಆಗಿದ್ದ ಗಂಡ, ಮುತೈದೆ ರೀತಿ ಹೆಣ್ಣಾಗಿ ಪತ್ತೆಯಾಗಿದ್ದು, ರಾಮನಗರ ಜಿಲ್ಲಾ ಕೇಂದ್ರದಲ್ಲಿ ವಿಚಿತ್ರ ಘಟನೆಗೆ ಸಾಕ್ಷಿ ಆಗಿದೆ. ಇದರಿಂದ ಪೊಲೀಸರೇ ಶಾಕ್ ಆಗಿದ್ದಾರೆ. ಇದು ಲಕ್ಷ್ಮಣರಾವ್ ಎಂಬಾತ ವಿಜಯಲಕ್ಷ್ಮಿ ಆಗಿ ಬದಲಾದ ವಿಚಿತ್ರ ಕಥೆ. ತನ್ನ ಗಂಡನನ್ನು ಸ್ತ್ರೀ ರೂಪದಲ್ಲಿ ಕಂಡು ಪತ್ನಿ ಮೂರ್ಛೆಹೋದ ಘಟನೆಯೂ ನಡೆದಿದೆ. ಲಕ್ಷ್ಮಣ ರಾವ್ ಎಂಬಾತ ತನ್ನ ಮದುವೆಗೂ ಮುನ್ನ ಚಿಕನ್ ಅಂಡಗಿಯಲ್ಲಿ ಕೆಲಸ ಮಾಡಿಕೊಂಡಿದ್ದ. 2015 ರಲ್ಲಿ ಆತನಿಗೆ ಮದುವೆ ಮಾಡಿಕೊಡಲಾಗಿತ್ತು. ರಾಮನಗರ ಪಟ್ಟಣದಲ್ಲಿ ಪತ್ನಿ ಜೊತೆ ಲಕ್ಷ್ಮಣ್ ವಾಸವಿದ್ದ. ಅನ್ಯೋನ್ಯವಾಗಿದ್ದ ಲಕ್ಷ್ಮಣ್ ರಾವ್ ದಂಪತಿಗೆ ಇಬ್ಬರು ಗಂಡು ಮಕ್ಕಳು ಆದರು. ಆದರೆ ಮದುವೆ ಆದ ಎರಡೇ ವರ್ಷಕ್ಕೆ ಗಂಡ ಲಕ್ಷ್ಮಣ್ ಮನೆಯಿಂದ ನಾಪತ್ತೆಯಾಗಿಬಿಟ್ಟ. ಲಕ್ಷ್ಮಣ್ 2017 ಮಾರ್ಚ್ ತಿಂಗಳಲ್ಲಿ ಮನೆ ಬಿಟ್ಟು ಹೋಗಿದ್ದ. ಸಾಲ‌ ಮಾಡಿಕೊಂಡ ವಿಚಾರಕ್ಕೆ ಲಕ್ಷ್ಮಣ್ ಜಿಗುಪ್ಸೆಗೊಂಡಿದ್ದನಂತೆ. ಪತಿ ಲಕ್ಷ್ಮಣ್ ರಾವ್ ವಾಪಾಸ್ ಬರದ ಕಾರಣ ಪತ್ನಿ ದೂರು ದಾಖಲಿಸಿದ್ದಳು. ರಾಮನಗರ ಐಜೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ…

Read More

ಬೆಂಗಳೂರು:- ನ್ಯಾಯಮೂರ್ತಿ ಪಿಎಸ್ ದಿನೇಶ್ ಕುಮಾರ್ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಬುಧವಾರ ಅನುಮತಿ ನೀಡಿದೆ ಜನವರಿ 19 ರಂದು, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಕೊಲೀಜಿಯಂ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಕುಮಾರ್ ಅವರನ್ನು ನೇಮಿಸಲು ಶಿಫಾರಸು ಮಾಡಿತ್ತು. ಆಗಿನ ಮುಖ್ಯ ನ್ಯಾಯಮೂರ್ತಿ ಪಿಬಿ ವರಾಳೆ ಅವರಿಗೆ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಿದ ನಂತರ ತೆರವಾದ ಸ್ಥಾನಕ್ಕೆ ಕುಮಾರ್ ಅವರನ್ನು ಶಿಫಾರಸು ಮಾಡಲಾಗಿತ್ತು. ನ್ಯಾಯಮೂರ್ತಿ ಕುಮಾರ್ ಅವರು ಫೆಬ್ರವರಿ 24 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಮತ್ತೊಂದು ನಿರ್ಧಾರದಲ್ಲಿ, ಜಾರ್ಖಂಡ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನ್ಯಾಯಾಂಗ ಅಧಿಕಾರಿ ಅರುಣ್ ಕುಮಾರ್ ರೈ ಅವರನ್ನು ಮೇಲ್ದರ್ಜೆಗೆ ಏರಿಸಲು ಅನುಮೋದನೆ ನೀಡಲಾಗಿದೆ.

Read More

ಮಂಡ್ಯ:- ಮಂಡ್ಯ ಕೆರಗೋಡಿನಲ್ಲಿ ನಿಷೇಧಾಜ್ಞೆ ಮುಂದುವರಿದಿದ್ದು, ರಾಜ್ಯದ ಹಲವೆಡೆ ಧ್ವಜ ವಿವಾದ ವ್ಯಾಪಿಸಿದೆ. ಕೆರಗೋಡು ಗ್ರಾಮದಲ್ಲಿ ಸದ್ಯ 200ಕ್ಕೂ ಹೆಚ್ಚು ಪೊಲೀಸರು ಮೊಕ್ಕಾಂ ಹೂಡಿದ್ದು, ನಿಷೇಧಾಜ್ಞೆ ಮುಂದುವರೆದಿದೆ. ಅತ್ತ ಪೊಲೀಸರ ಲಾಠಿ ಚಾರ್ಜ್‌‌ನಲ್ಲಿ ಗಾಯಗೊಂಡವರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಬುಧವಾರ ಭೇಟಿ ನೀಡಿ, ಧೈರ್ಯ ಹೇಳಿದ್ದಾರೆ. ಪ್ರತಿಭಟನೆ ವೇಳೆ ಪೊಲೀಸರು ಕರೆದೊಯ್ದಿದ್ದ 9ನೇ ತರಗತಿ ಬಾಲಕನ ಮನೆಗೂ ಅವರು ತೆರಳಿದ್ದಾರೆ. ಈ ವೇಳೆ, ಅವರನ್ನ ತಡೆದ ಪೋಷಕರು ಯಾರೂ ಬರೋದು ಬೇಡ. ಯಾವ ಧ್ವಜವಾದ್ರೂ ಹಾರಾಡ್ಲಿ ನಮಗೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 9 ರಂದು ನಡೆದ ಘಟನೆ ಖಂಡಿಸಿ ಬಜರಂಗದಳ ಮಂಡ್ಯ ನಗರ ಬಂದ್​​​​ಗೆ ಕರೆ ಕೊಟ್ಟಿದೆ. ನಾಳೆಯಿಂದ ಮನೆ ಮನೆ ಮೇಲೆ ಹನುಮ ಹಾಗೂ ಕೇಸರಿ ಧ್ವಜ ಹಾರಾಟ ಅಭಿಯಾನಕ್ಕೂ ತೀರ್ಮಾನಿಸಿದೆ. ಮತ್ತೊಂದೆಡೆ, ಈ ಘಟನೆ ಖಂಡಿಸಿ ಫೆಬ್ರವರಿ 7 ರಂದು ಸಮಾನ ಮನಸ್ಕ ವೇದಿಕೆ ಮಂಡ್ಯ ನಗರ ಬಂದ್​ಗೆ ಕರೆಕೊಟ್ಟಿದೆ. ಮಂಡ್ಯದಲ್ಲಿ ಕಿಚ್ಚು ಹಚ್ಚಿದ್ದ ಧ್ವಜ…

Read More

ಮಂಡ್ಯ: ಕೆರಗೋಡು ಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಾದಯಾತ್ರೆ ಸಮಯದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಜೆಡಿಎಸ್ ಕಾರಣ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು. ಪಾದಯಾತ್ರೆ ಸಂಪೂರ್ಣವಾಗಿ ರಾಜಕೀಯ ಪ್ರೇರಿತ. ಕೆರಗೋಡು ಜನರಿಗೂ ಯಾತ್ರೆಗೂ ಯಾವುದೇ ಸಂಬಂಧವಿಲ್ಲ. ಅಲ್ಲಿನ ಜನರು ಇಂತಹ ಪ್ರಚೋದನೆಗೆ ಒಳಗಾಗುವವರೂ ಅಲ್ಲ. ಹೊರಗಿನಿಂದ ಜನರನ್ನು ಕರೆತಂದು ಬೇಕೆಂತಲೇ ಗಲಾಟೆ ಮಾಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು. ಬಿಜೆಪಿಯವರು ಮಂಡ್ಯದಲ್ಲಿ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ. ಇದಕ್ಕೆ ಜೆಡಿಎಸ್‌ನವರು ಬೆಂಬಲ ನೀಡುತ್ತಿದ್ದಾರೆ. ಧರ್ಮಾಧಾರಿತ ರಾಜಕಾರಣ ಮಾಡುವುದಕ್ಕೆ ಇದು ಮಂಗಳೂರಲ್ಲ. ಮಂಡ್ಯದ ಜನರು ನಿಮ್ಮ ಮಾತುಗಳಿಂದ ಪ್ರೇರಿತರಾಗಿ ಬಿಜೆಪಿ ಪರ ಒಲವು ತೋರುತ್ತಾರೆಂದು ಭಾವಿಸಿದ್ದರೆ ಅದು ಮೂರ್ಖತನ. ಹೋರಾಟದ ನೆಲದಲ್ಲಿರುವ ಅವರಿಗೆ ನಿಮ್ಮ ಢೋಂಗಿತನ ಏನೆಂಬುದು ಗೊತ್ತಿದೆ ಎಂದರು.

Read More