Author: AIN Author

ತುಮಕೂರು: ಅನುಮಾನಸ್ಪದವಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಹಿರೇಹಳ್ಳಿ ರೈಲ್ವೆ ಹಳಿ ಮೇಲೆ ಶವ ಪತ್ತೆಯಾಗಿದೆ. ಅನ್ನಪೂರ್ಣ 50 ಮೃತ‌ ದುರ್ದೈವಿಯಾಗಿದ್ದು, ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟಿದ್ದ ಅನ್ನಪೂರ್ಣ  ಶವವಾಗಿ ಪತ್ತೆಯಾಗಿದ್ದಾರೆ. ಮಹಿಳೆಯರ ಬೋಗಿಯಲ್ಲಿದ್ದ ಅನ್ನಪೂರ್ಣ ಲಗೇಜ್ ಗಳು ಸುಮಾರು 20 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿವೆ. ತಲೆಗೆ ಕೈಗೆ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಚಿನ್ನಾಭರಣಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರೈಲಿನಿಂದ ತಳ್ಳಿರಬಹುದು ಎಂದು ಕುಟುಂಬಸ್ಥರಿಂದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ‌ ಅರಣ್ಯ ಭವನದಲ್ಲಿ ಸ್ಟೆನೋ ಅಧಿಕಾರಿಯಾಗಿದ್ದ ಅನ್ನಪೂರ್ಣ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಹೋಗಿ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಇನ್ನೂ ಘಟನೆ ಸಂಬಂಧ ತುಮಕೂರು ರೈಲ್ವೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬಿಗ್ ಬಾಸ್’ ಕನ್ನಡ ಸೀಸನ್ 10ರ (Bigg Boss Kannada 10) ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ತೆರೆಬಿದ್ದಿದೆ. ದೊಡ್ಮನೆಯ ಆಟ ಮುಗಿದ ಮೇಲೆ ಮತ್ತೆ ಬಿಗ್‌ ಬಾಸ್‌ ಸ್ಪರ್ಧಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಜ.28ರಂದು ಬಿಗ್ ಬಾಸ್ ಫಿನಾಲೆಗೆ ಬ್ರೇಕ್ ಬಿದ್ದಿತ್ತು. ಇದಾದ 3 ದಿನಗಳ ಬಳಿಕ ಇಂದು (ಜ.31) ಭೇಟಿಯಾಗಿದ್ದಾರೆ. ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಜೊತೆ ವಿನಯ್, ಸಂಗೀತಾ (Sangeetha), ನಮ್ರತಾ ಕೂಡ ಹೈಲೆಟ್ ಆಗಿದ್ದರು. ಇದೀಗ ಅವರ ಜೊತೆ ಕ್ಯಾಮೆರಾಗೆ ನಮ್ರತಾ ಪೋಸ್ ನೀಡಿದ್ದಾರೆ. ಭೇಟಿಯಾಗಿರುವ ಫೋಟೋಗಳನ್ನು ನಮ್ರತಾ (Namratha Gowda) ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಕಪ್ಪು ಬಣ್ಣದ ಸೂಟ್‌ನಲ್ಲಿ ವಿನಯ್ ಹೈಲೆಟ್ ಆಗಿದ್ದರೆ, ಹಸಿರು ಮತ್ತು ಪಿಂಕ್ ಬಣ್ಣದ ಸೀರೆಯಲ್ಲಿ ನಮ್ರತಾ ಮಿಂಚಿದ್ದಾರೆ. ಸಂಗೀತಾ ಮತ್ತು ಕಾರ್ತಿಕ್ ಕೂಡ ಫೋಟೋಗೆ ನಮ್ರತಾ ಜೊತೆ ಪೋಸ್ ನೀಡಿದ್ದಾರೆ. ಇದು ವಾಹಿನಿಯ ಸ್ಪೆಷಲ್ ಶೂಟ್‌ವೊಂದಕ್ಕಾಗಿ ‘ಬಿಗ್ ಬಾಸ್’ ಸ್ಪರ್ಧಿಗಳು…

Read More

ಇದೇ ಮೊದಲ ಬಾರಿಗೆ ಪ್ರಭುದೇವ್ ಮತ್ತು ಶಿವರಾಜ್ ಕುಮಾರ್ ನಟಿಸಿರುವ ಕರಟಕ ದಮನಕ (Karataka Damanaka) ಸಿನಿಮಾ ಶಿವರಾತ್ರಿ ದಿನದಂದು ರಿಲೀಸ್ (Release)ಆಗಲಿದೆ. ಮಾರ್ಚ್ 8 ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಶಿವರಾತ್ರಿಗೆ ಶಿವಣ್ಣನ ಚಿತ್ರದ ಅಬ್ಬರ ಕೇಳಿ ಬರಲಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗಿರುವ, ಯೋಗರಾಜ್ ಭಟ್ (Yogaraj Bhat) ನಿರ್ದೇಶನದ ಈ ಸಿನಿಮಾಗೆ ವಿಚಿತ್ರವಾಗಿರುವಂಥ ಶೀರ್ಷಿಕೆ ಇಡಲಾಗಿದೆ. ಈವರೆಗೂ ಟೈಟಲ್ ವಿಷಯದಲ್ಲಿ ಉಪೇಂದ್ರ ಮಾತ್ರ ತಲೆಕೆಡಿಸುತ್ತಿದ್ದರು. ಇದೀಗ ಆ ಸಾಲಿಗೆ ಯೋಗರಾಜ್ ಭಟ್ಟರು ಕೂಡ ಸೇರ್ಪಡೆಗೊಂಡಿದ್ದಾರೆ. ಟೈಟಲ್ ನೋಡಿದವರು, ಏನ್ ಗುರು ಇದರ ಅರ್ಥ ಎಂದು ಕೇಳುವಂತಾಗಿದೆ. ಟೈಟಲ್ ಇಟ್ಟಾಗಿನಿಂದ ಈವರೆಗೂ ‘ಕರಟಕ ದಮನಕ’ ಎಂದರೇನು ಎನ್ನುವ ಕುರಿತು ಯೋಗರಾಜ್ ಭಟ್ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಈ ಕುರಿತು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದ್ದರು. ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ…

Read More

‘ಅನಿಮಲ್’ (Animal) ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ತೃಪ್ತಿ ದಿಮ್ರಿಗೆ (Tripti Dimri) ಬಾಲಿವುಡ್‌ನಲ್ಲಿ ಭಾರೀ ಅವಕಾಶಗಳು ಹರಿದು ಬರುತ್ತಿವೆ. ರಣ್‌ಬೀರ್ (Ranbir Kapoor) ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ಮೇಲೆ ತೃಪ್ತಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇದರ ನಡುವೆ ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ನಟಿ ವಿಶ್ ಮಾಡಿದ್ದಾರೆ. ನಟಿ ತೃಪ್ತಿ ಎಂಗೇಜ್ ಆಗಿದ್ದಾರೆ. ಹೋಟೆಲ್ ಉದ್ಯಮಿ ಸ್ಯಾಮ್ ಮರ್ಚೆಂಟ್ (Sam Merchant) ಜೊತೆ ಹಲವು ವರ್ಷಗಳಿಂದ ಸ್ನೇಹ ಹೊಂದಿದ್ದಾರೆ. ಇತ್ತೀಚೆಗೆ ಗೆಳೆಯ ಸ್ಯಾಮ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಶುಭಕೋರಿದ್ದಾರೆ. ಕಳೆದ ವರ್ಷ ಆಪ್ತರ ಮದುವೆಯಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಇಬ್ಬರು ಡೇಟಿಂಗ್ ಮಾಡುತ್ತಿರೋದರ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇದಕ್ಕೂ ಮುನ್ನ ಅನುಷ್ಕಾ ಶರ್ಮಾ (Anushka Sharma) ಸಹೋದರ ಕರ್ಣೇಶ್ ಶರ್ಮಾ ಜೊತೆ ನಟಿ ಡೇಟಿಂಗ್ ಮಾಡುತ್ತಿದ್ದರು. ಕೆಲ ಮನಸ್ತಾಪಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು.

Read More

‌ನವದೆಹಲಿ: ಕಳೆದ 10 ವರ್ಷಗಳಲ್ಲಿ ನೇರ ತೆರಿಗೆ ಪ್ರಮಾಣದಲ್ಲಿ ಶೇ.3 ರಷ್ಟು ಹೆಚ್ಚಳವಾಗಿದೆ. 2024-25ರ ಆರ್ಥಿಕ ವರ್ಷಕ್ಕೆ ತೆರಿಗೆ ಸಂಗ್ರಹ 26.02 ಟ್ರಿಲಿಯನ್ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ.  ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 2024-25ನೇ ಸಾಲಿನ ಮಧ್ಯಂತರ ಬಜೆಟ್‌ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ನೇರ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಸರ್ಕಾರ ಮುಂದಾಗಿದೆ. ಮಧ್ಯಂತರ ಬಜೆಟ್‌ನಲ್ಲಿ (Interim Budget) ಆದಾಯ ತೆರಿಗೆ ಸ್ಲ್ಯಾಬ್​ಗಳು ಕಳೆದ ಹಣಕಾಸು ವರ್ಷದ್ದೇ ಆಗಿರುವುದರಿಂದ ತೆರಿಗೆದಾರರಿಗೆ ಯಾವುದೇ ಪರಿಹಾರ ಅಥವಾ ಆತಂಕ ಇಲ್ಲ. ಆದರೆ ಪರಿಹಾರ ನಿರೀಕ್ಷೆ ಮಾಡಿದ್ದವರಿಗೆ ಬೇಸರ ತಂದಿದೆ. ಹಾಲಿ ಸ್ಲ್ಯಾಬ್ ಪ್ರಕಾರ 7 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. 2023-24ರ ಬಜೆಟ್‌ನಲ್ಲಿ (Union Budget 2023) ವಾರ್ಷಿಕ 7 ಲಕ್ಷ ರೂ.ವರೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಏರಿಕೆ ಮಾಡುವ ಮೂಲಕ ಸಂಬಳದಾರರಿಗೆ ಸೀತಾರಾಮನ್‌ ಸಿಹಿ…

Read More

ನವದೆಹಲಿ: ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಪ್ರಯೋಜನಗಳ ವಿಸ್ತರಣೆ ಮಾಡಲಾಗುತ್ತದೆ. ಬಾಡಿಗೆ ಮನೆಗಳು, ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ಹೊಸ ಮನೆಯನ್ನು ಖರೀದಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ನೆರವು ನೀಡಲಾಗುತ್ತದೆ ಎಂದು ತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ-ಜನ ಆರೋಗ್ಯ ಯೋಜನೆ (AB-PMJAY) ವಿಶ್ವದಲ್ಲೇ ಅತಿ ದೊಡ್ಡ ಸಾರ್ವಜನಿಕ ನಿಧಿಯ ಆರೋಗ್ಯ ವಿಮಾ ಯೋಜನೆಯಾಗಿದ್ದು, ದ್ವಿತೀಯ ಮತ್ತು ತೃತೀಯ ಆರೈಕೆಗಾಗಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ಗಳನ್ನು ಒದಗಿಸುತ್ತದೆ. ಕಳೆದ ವರ್ಷ ಡಿಸೆಂಬರ್ 27ರವರೆಗೆ 12 ಕೋಟಿ ಕುಟುಂಬಗಳಿಗೆ ಸೇರಿದ 55 ಕೋಟಿ ಜನ ಈ ಯೋಜನೆಗೆ ಒಳಪಟ್ಟಿದ್ದರು. ಭಾರತೀಯ ಆರ್ಥಿಕತೆ ಕಳೆದ ಒಂದು ದಶಕದಲ್ಲಿ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ. 2014ರಿಂದ ಭಾರತ ದೈತ್ಯ ಸವಾಲುಗಳನ್ನು ಎದುರಿಸಿತ್ತು. ಆದರೆ ಸರ್ಕಾರ ಈ ಅಡೆತಡೆಗಳನ್ನು ನಿವಾರಿಸಿದೆ ಮತ್ತು ರಚನಾತ್ಮಕ ಸುಧಾರಣೆಗಳನ್ನು ಪ್ರಾರಂಭಿಸಿದೆ. ಜನಪರ ಸುಧಾರಣೆಗಳಿಗೆ ಒತ್ತು ನೀಡಲಾಗಿದೆ. ಉದ್ಯೋಗ ಸೃಷ್ಟಿ ಮತ್ತು…

Read More

ಬೆಂಗಳೂರು: ಇಂದಿನಿಂದ ಬಿಯರ್ ದರ ದುಬಾರಿಯಾಗಲಿದೆ. ಪ್ರತಿ ಬಾಟಲಿಗೆ 5 ರೂ. ನಿಂದ 12 ರೂಪಾಯಿವರೆಗೆ ಬಿಯರ್ ದರ ಹೆಚ್ಚಳವಾಗಿದೆ. ಪ್ರತಿ 650 ಮಿಲಿ ಬಿಯರ್ ಬಾಟಲಿಗೆ 8-10 ರೂ. ವರೆಗೆ ದರ ಹೆಚ್ಚಾಗಲಿದೆ. ಕರ್ನಾಟಕ ಅಬಕಾರಿ ನಿಯಮಗಳು, 1968ಕ್ಕೆ ತಿದ್ದುಪಡಿ ಮಾಡಲು ಕರಡು ಅಧಿಸೂಚನೆ ರೂಪಿಸಲಾಗಿದ್ದು, ಇದರಲ್ಲಿ ದರ ಹೆಚ್ಚಳವನ್ನು ಪ್ರಸ್ತಾಪಿಸಲಾಗಿದೆ.ದರ ಹೆಚ್ಚಳಕ್ಕೆ ಅವಕಾಶ ನೀಡುವ ಹೊಸ ನಿಯಮಗಳು ಇಂದಿನಿಂದ ಆರಂಭಗೊಂಡಿದೆ. ಕರ್ನಾಟಕದಲ್ಲಿ ತಯಾರಿಸಲಾದ ಅಥವಾ ರಾಜ್ಯಕ್ಕೆ ಆಮದು ಮಾಡಿಕೊಳ್ಳುವ ಬಿಯರ್‌ ಬಾಟಲಿಯ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡಾ 185 ರಿಂದ ಶೇಕಡಾ 195 ಕ್ಕೆ ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ.

Read More

ನವದೆಹಲಿ:  ಸರ್ಕಾರವು ಕೈಗಾರಿಕೆ ಮತ್ತು ಕೃಷಿ ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ರೈತರಿಗೆ ರಸಗೊಬ್ಬರ ಹಾಗೂ ಇತರೆ ಅಗತ್ಯ ವಸ್ತುಗಳನ್ನು ನೀಡುತ್ತಿದೆ. ರೈತರಿಗಾಗಿ ಅನೇಕ ವಿಷಯಗಳಲ್ಲಿ ಸಹಾಯಧನ ನೀಡುತ್ತಿದೆ. ಅವರನ್ನು ಆರ್ಥಿಕವಾಗಿ ಬಲಪಡಿಸಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ನೀಡಲಾಗುತ್ತಿದೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಇಂದು ನೂರಾರು ಯೋಜನೆಗಳು ನಡೆಯುತ್ತಿವೆ ಎಂದು ವಿತ್ತ ಮಂತ್ರಿ ತಿಳಿಸಿದರು. ಇಂದು ಉದ್ಯೋಗ ಪಡೆಯುವ ಬದಲು ಜನರು ಉದ್ಯೋಗ ನೀಡುತ್ತಿದ್ದಾರೆ. ಇಂದು ಹೆಚ್ಚಿನ ಯುವಕರು ಉದ್ಯೋಗದಾತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಸಾಕಷ್ಟು ಕೆಲಸ ಮಾಡುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಇಂತಹ ಹಲವು ವೇದಿಕೆಗಳನ್ನು ಸಣ್ಣ ಕೈಗಾರಿಕೆಗಳಿಗೆ ಒದಗಿಸಲಾಗುತ್ತಿದ್ದು, ಇದರಿಂದ ಅವು ವಿಶ್ವದರ್ಜೆಯಾಗುತ್ತವೆ ಎಂದರು. ದೇಶದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಕಳೆದ 10 ವರ್ಷಗಳಿಂದ ಶ್ರಮಿಸುತ್ತಿದ್ದೇವೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನರ ಅಭಿವೃದ್ಧಿಗಾಗಿ ಲಕ್ಷ ಕೋಟಿಗಳ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಮುಂದೆಯೂ ಮುಂದುವರಿಸಲಿದೆ ಎಂದು…

Read More

ಬೆಂಗಳೂರು: ನಗರದಲ್ಲಿ ಆಟೋ ಚಾಲಕರಿಂದ ನಿಯಮ ಉಲ್ಲಂಘನೆ ಹಿನ್ನೆಲೆ, ಸಂಚಾರಿ ಪೊಲೀಸರಿಂದ ಸ್ಪೆಷಲ್ ಡ್ರೈವ್ ನಡೆಸಲಾಗಿದೆ. ದಕ್ಷಿಣ ವಿಭಾಗದ ಸಂಚಾರಿ ಪೊಲೀಸರಿಂದ ಕಾರ್ಯಾಚರಣೆ ನಡೆದಿದ್ದು, ನಿಯಮ ಉಲ್ಲಂಘನೆ ಮಾಡಿರೋ ಆಟೋ ಚಾಲಕರ ವಿರುದ್ಧ ಕೇಸ್ ದಾಖಲು ಮಾಡಲಾಗುತ್ತಿದೆ. ಕಳೆದ ಮೂರು ದಿನದಿಂದ ಸಂಚಾರಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು ದಂಡ ವಿಧಿಸುತ್ತಿದ್ದಾರೆ. ಜ.29ರಂದು ಶಾಲಾ-ಕಾಲೇಜು ಸುತ್ತಮುತ್ತ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ನಗರದ ವಿವಿಧ ಕಡೆಗಳಿಂದ ಒಟ್ಟು 2 ಸಾವಿರ ಪ್ರಕರಣಗಳನ್ನು ದಾಖಲಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ದ ಒಟ್ಟು 9,85,000 ದಂಡ ವಸೂಲಿ ಮಾಡಲಾಗಿದೆ. ಜ.29ರಂದು ವಸೂಲಿಯಾದ ದಂಡ ಹೆಲ್ಮೆಟ್ ರಹಿತ ಸವಾರಿಯ 132 ಪ್ರಕರಣ ಸಂಬಂಧ 64,800 ರೂ ದಂಡ ವಸೂಲಿಯಾಗಿದೆ. ಟ್ರಿಪೆಲ್ ರೈಡಿಂಗ್ ನ 375 ಪ್ರಕರಣ ಸಂಬಂಧ 1,84,100 ರೂ ದಂಡ. ನೋ ಎಂಟ್ರಿ ಉಲ್ಲಂಘನೆಯ 27 ಪ್ರಕರಣ ಸಂಬಂಧ 13,500 ರೂ ದಂಡ. ಫುಟ್ ಪಾತ್ ನಲ್ಲಿ ಸವಾರಿ ಸಂಬಂಧ 1,466 ಪ್ರಕರಣ ದಾಖಲಿಸಿ 7,22,600 ರೂ…

Read More

ನವದೆಹಲಿ: 2024ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲಖ್​ಪತಿ ದೀದಿ ಯೋಜನೆ ಕುರಿತು ಪ್ರಸ್ತಾಪಿಸಿದರು.ಈ ಯೋಜನೆಯ ಮೂಲಕ 2025ರ ವೇಳೆಗೆ ಲಕ್ಷಾಂತರ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಲಾಗುವುದು. ಮೀನುಗಾರಿಕೆ ಯೋಜನೆಯನ್ನು ಉತ್ತೇಜಿಸಲು ಸರ್ಕಾರ ಕೆಲಸ ಮಾಡುತ್ತದೆ. ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಸರ್ಕಾರ 5 ಇಂಟಿಗ್ರೇಟೆಡ್ ಆಕ್ವಾ ಪಾರ್ಕ್‌ಗಳನ್ನು ತೆರೆಯಲಿದೆ ಎಂದು ಹೇಳಿದರು.

Read More