Author: AIN Author

ನವದೆಹಲಿ:- ಕೇಂದ್ರ ಸಚಿವೆ ಸೀತಾರಾಮನ್ ಅವರು ಮಂಡಿಸಿದ 6 ನೇ ಬಜೆಟ್ ನಲ್ಲಿ ಅಭಿವೃದ್ಧಿಗೆ ಪೂರಕವಾಗಿರುವ ಅಂಶಗಳೇನು ಎಂಬುವ ವಿವರವನ್ನು ಇಲ್ಲಿ ತಿಳಿಸಲಾಗಿದೆ ವರದಿ ಪೂರ್ತಿ ಓದಿ. ತಮ್ಮ ಚುಟುಕು ಬಜೆಟ್​ನಲ್ಲಿ ಮುಂದಿನ ದಿನಗಳ ಬಗ್ಗೆ ನಿರ್ಮಲ ಸೀತಾರಾಮನ್ ಅವರು ಸರ್ಕಾರಕ್ಕಿರುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ದೀರ್ಘಾವಧಿಯಲ್ಲಿ ಸ್ವಾವಲಂಬನೆ ಸಾಧಿಸಲು ಸರ್ಕಾರದ ಗುರಿಗಳೇನು, ಯಾವ್ಯಾವ ಕಾರ್ಯಕ್ರಮಗಳಿಗೆ ಒತ್ತುಕೊಡಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದು ಮಂಡಿಸಬಹುದಾದ ಬಜೆಟ್​ನಲ್ಲಿ ಯಾವೆಲ್ಲಾ ಅಂಶಗಳು ಇರಬಹುದು ಎಂಬುದಕ್ಕೆ ಈ ಮಧ್ಯಂತರ ಬಜೆಟ್ ಟ್ರೇಲರ್ ರೀತಿ ಇದೆ. ಬಜೆಟ್​ನಲ್ಲಿ ಸರ್ಕಾರ ಹಾಕಿರುವ ಮತ್ತು ಉದ್ದೇಶಿಸಿರುವ ಯೋಜನೆಗಳ ವಿವರ ಇಲ್ಲಿದೆ. ಸುಸ್ಥಿರ ಅಭಿವೃದ್ಧಿ 2070ರೊಳಗೆ ಕಾರ್ಬನ್ ಹೊರಸೂಸುವಿಕೆಯ ಪ್ರಮಾಣ ಶೂನ್ಯಕ್ಕೆ ತರುವ ಬದ್ಧತೆ ವಿಂಡ್ ಎನರ್ಜಿ ಉತ್ಪಾದನೆಗೆ ವಯಬಿಲಿಟಿ ಗ್ಯಾಪ್ ಫಂಡಿಂಗ್ ಕಲ್ಲಿದ್ದಲು ಅನಿಲೀಕರಣ ಮತ್ತು ಜಲೀಕರಣ ಘಟಕ ಆರಂಭ ಸಿಎನ್​ಜಿ, ಪಿಎನ್​ಜಿ ಮತ್ತು ಒತ್ತಡೀಕೃತ ಬಯೋಗ್ಯಾಸ್​ನ ಮಿಶ್ರಣವನ್ನು ಹಂತ ಹಂತವಾಗಿ ಕಡ್ಡಾಯಗೊಳಿಸಲಾಗುವುದು.…

Read More

ದಾವಣಗೆರೆ:- ತಾಕತ್ತಿದ್ದರೆ ದೇಶ ಇಬ್ಭಾಗ ಮಾಡಿ ನೋಡೋಣ ಎಂದು ಡಿಕೆ ಸುರೇಶ್ ಗೆ ಪ್ರಮೋದ್ ಮುತಾಲಿಕ್ ಸವಾಲ್ ಹಾಕಿದ್ದಾರೆ. ದಕ್ಷಿಣ ಭಾರತದ ಕೂಗು ಎತ್ತಬೇಕಾಗುತ್ತದೆ ಎಂಬ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಈಗಾಗಲೇ ದೇಶ ಇಬ್ಭಾಗಿಸಿ ಪಾಕಿಸ್ತಾನ ನಿರ್ಮಾಣ ಮಾಡಿದ್ದೀರಾ, ನಿಮಗೆ ತಾಕತ್ತಿದ್ದರೆ ಇಬ್ಭಾಗ ಮಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಈ ಹಿನ್ನಲೆ ಕೇಂದ್ರ ಗೃಹಸಚಿವರು ಕೂಡಲೇ ಅವರನ್ನು ಜೈಲಿಗೆ ಹಾಕಬೇಕು. ಈಗಾಗಲೇ ಪಾಕಿಸ್ತಾನ, ಬಾಂಗ್ಲಾದೇಶ ರಚಿಸಿ ಅನುಭವಿಸುತ್ತಿದ್ದೇವೆ. ಕೂಡಲೇ ತಮ್ಮ ಹೇಳಿಕೆ ಹಿಂಪಡೆದು ಡಿ.ಕೆ ಸುರೇಶ್ ಕ್ಷಮೆಯಾಚಿಸಲಿ ಎಂದು ಕಿಡಿಕಾರಿದರು.

Read More

ಬೆಂಗಳೂರು, ಫೆ.01: 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿ ಎನ್ನುವುದಕ್ಕಿಂತ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಂಡ್ಯದಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಅವರ ಅಧ್ಯಕ್ಷತೆಯಲ್ಲಿ ಇಂದು ಪೂರ್ವಭಾವಿ ಸಭೆ ಜರುಗಿತು. ಜಿಲ್ಲಾಡಳಿತದ ಸಹಕಾರದೊಂದಿಗೆ ಸಮ್ಮೇಳನ ಆಯೋಜಿಸುವಂತೆ ಸಲಹೆ ನೀಡಿದ ಮುಖ್ಯಮಂತ್ರಿಗಳು ಕನ್ನಡ ಸಂಘಟನೆಗಳನ್ನೂ ವಿಶ್ವಾಸಕ್ಕೆ ಪಡೆಯಲು ಸೂಚಿಸಿದರು. ಜೂನ್ ಮೊದಲನೇ ವಾರದಲ್ಲಿ ಸಮ್ಮೇಳನ ಆಯೋಜಿಸಲು ಮುಖ್ಯ ಮಂತ್ರಿಗಳು ಸೂಚಿಸಿದರು. ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವಾಗ ಹಿರಿಯರು, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದವರನ್ನು ಪರಿಗಣಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಕನ್ನಡರಥ ಜಾಥಾ, 87 ಜನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೇರಿದಂತೆ ಮೂರು ದಿನಗಳ ಕಾಲ ಕನ್ನಡ ವಿಚಾರ ಗೋಷ್ಠಿ ಮುಂತಾದ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಭೆಗೆ ತಿಳಿಸಿದರು. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 30 ಕೋಟಿ ರೂ.ಗಳ ಅನುದಾನ ಒದಗಿಸಲು ಪರಿಷತ್ ಅಧ್ಯಕ್ಷರು ಮನವಿ ಸಲ್ಲಿಸಿದರು. ಜಿಲ್ಲಾ…

Read More

ಹುಬ್ಬಳ್ಳಿ:- ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಕೆ ಸುರೇಶ್ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಸುರೇಶ್ ಅವರು ಒಬ್ಬ ಸಂಸದನಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಹೀಗೆ ಬೇಜವಾಬ್ದಾರಿ ಮಾತುಗಳನ್ನಾಡುವುದು ಅವರಿಗೆ ಶೋಭೆ ನೀಡೋದಿಲ್ಲ ಎಂದರು. ಕೇಂದ್ರದಿಂದ ರಾಜ್ಯಕ್ಕೆ ಸಿಗುತ್ತಿರುವ ಅನುದಾನಗಳ ಬಗ್ಗೆ ಅವರ ಗ್ರಹಿಕೆ ಸಂಪೂರ್ಣ ತಪ್ಪು, ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಗಳಾಗಿದ್ದ 2004-2014 ರ ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕ ಅನುದಾನ ಕೇವಲ 60,000 ಕೋಟಿ ರೂ. ಮಾತ್ರ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಹತ್ತ ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ 2,36,000 ಕೋಟಿ ರೂ. ಅನುದಾನ ಸಿಕ್ಕಿದೆ. ತೆರಿಗೆ ಸಂಗ್ರಹದಿಂದ ರಾಜ್ಯಕ್ಕೆ ಸಿಗುವ ಅನುದಾನದ ಬಗ್ಗೆ ಹೇಳೋದಾದರೆ, ಸಿಂಗ್ ಅವರ ಅವಧಿಯಲ್ಲಿ ರಾಜ್ಯಕ್ಕೆ 81,000 ಕೋಟಿ ರೂ. ಸಿಕ್ಕರೆ ಮೋದಿ ಅವರ ಅವಧಿಯಲ್ಲಿ 2,82,000 ಕೋಟಿ ರೂ. ಸಿಕ್ಕಿದೆ. ಡಿಕೆ ಸುರೇಶ್ ಮಾತಾಡುವಾಗ ದಾಖಲೆಗಳನ್ನು ಸರಿಯಾಗಿ ನೋಡಿಕೊಂಡು ಮಾತಾಡಬೇಕು ಎಂದು ವಿಜಯೇಂದ್ರ…

Read More

ಅನಾನಸ್ ಹಣ್ಣಿನಲ್ಲಿ ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಅನಾನಸ್‌ನ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ನೀವೇನಾದರು ತೂಕ ಇಳಿಸಿಕೊಳ್ಳಲು ಬಯಸಿದರೆ ನಿಮ್ಮ ಆಹಾರದಲ್ಲಿ ಅನಾನಸ್ ಇದ್ದರೆ ಬಹಳಷ್ಟು ಪ್ರಯೋಜನವಿದೆ. ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿರುವ ಅನಾನಸ್‌ನಿಂದ ರುಚಿಕರವಾದ ಕೇಸರಿ ಬಾತ್ ಅನ್ನ ಮನೆಯಲ್ಲೇ ಮಾಡಬಹುದು. ಹೌದು ಒಂದು ಅನಾನಸ್ ಹಣ್ಣು ಇದ್ದರೆ ಅದರಿಂದ ಬಾತ್ ಮಾಡಬಹುದು. ಅದನ್ನು ಅನಾನಸ್ ಕೇಸರಿ ಬಾತ್ ಅಂತಲೂ ಕರೆಯುತ್ತಾರೆ. ಬಹಳ ಸುಲಭವಾಗಿ ಈ ಖಾದ್ಯ ಮಾಡಬಹುದಾಗಿದ್ದು, ನೈಸರ್ಗಿಕವಾಗಿ ರುಚಿ ಇರುವ ಕಾಣರದಿಂದ ಬಾಯಿ ಚಪ್ಪರಿಸಿ ಇದನ್ನು ಸೇವಿಸಬಹುದು. ಹಾಗಾದರೆ ಅನಾನಸ್ ಹಣ್ಣಿನ ಕೇಸರಿ ಬಾತ್ ಮಾಡುವುದು ಹೇಗೆ?, ಈ ರೆಸಿಪಿ ಮಾಡಲು ಬೇಕಾಗುವ ವಸ್ತುಗಳೇನು? ಯಾವೆಲ್ಲಾ ವಿಧಾನ ಪಾಲಿಸಬೇಕು ಎಂಬ ಕುರಿತು ಮಾಹಿತಿ ಇಲ್ಲಿದೆ ನೋಡಿ. ಅಗತ್ಯವಿರುವ ವಸ್ತುಗಳು: ಅನಾನಸ್ ಹಣ್ಣು-1 ರವೆ – 1 ಕಪ್ ಸಕ್ಕರೆ – ಅಗತ್ಯವಿರುವಂತೆ ತುಪ್ಪ -…

Read More

ಬೆಂಗಳೂರು:- ಗೃಹಜ್ಯೋತಿ ಬಳಕೆದಾರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈ ಕುರಿತಾಗಿ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯನವರು” ಗೃಹಜ್ಯೋತಿ ಯೋಜನೆಯಡಿ ಮಾಸಿಕ 48 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ 70 ಲಕ್ಷ ಗ್ರಾಹಕರಿಗೆ ಇನ್ನುಮುಂದೆ ಮಾಸಿಕ 10% ಹೆಚ್ಚುವರಿ ವಿದ್ಯುತ್ ಬದಲಾಗಿ 10 ಯುನಿಟ್ ಹೆಚ್ಚುವರಿ ಉಚಿತ ವಿದ್ಯುತ್”ನೀಡುವುದಾಗಿ ಹೇಳಿದ್ದಾರೆ. https://twitter.com/siddaramaiah/status/1752922413610766542?ref_src=twsrc%5Etfw%7Ctwcamp%5Etweetembed%7Ctwterm%5E1752922413610766542%7Ctwgr%5E5f06d42478c023f49412309a90240505aa84199f%7Ctwcon%5Es1_c10&ref_url=http%3A%2F%2Fapi-news.dailyhunt.in%2F ಇನ್ನೂ ಮುಂದುವರೆದು ಪ್ರತಿ ಮನೆಗೆ ಭರವಸೆಯ ಬೆಳಕು ಹರಿಸುವ ಸರ್ಕಾರದ ಕಾರ್ಯಕ್ರಮ ಈಗ ಇನ್ನಷ್ಟು ಜನಸ್ನೇಹಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

Read More

ಒಣದ್ರಾಕ್ಷಿಗಳನ್ನು ಅತ್ಯಂತ ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗಿದೆ. ಆದರೆ, ಚಳಿಗಾಲದಲ್ಲಿ ಒಣದ್ರಾಕ್ಷಿಯನ್ನು ಕೆಲವು ಗಂಟೆಗಳ ಕಾಲ ನೆನೆಸುವುದರಿಂದ ಜೀರ್ಣಕಾರಿ ತೊಂದರೆಗಳು, ತೂಕ ಇಳಿಸುವುದು ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಒಣದ್ರಾಕ್ಷಿಗಳು ಕ್ಯಾಲೋರಿಗಳು ಮತ್ತು ಸಕ್ಕರೆಯ ಅಂಶವನ್ನು ಒಳಗೊಂಡ ಅಗತ್ಯವಾದ ಪೋಷಕಾಂಶಗಳು, ಖನಿಜಗಳು ಮತ್ತು ಶಕ್ತಿಯ ಉತ್ತಮ ಮೂಲವಾಗಿದೆ. ಅವು ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತವೆ ಮತ್ತು ಸಾಕಷ್ಟು ಫೈಬರ್, ಜೀವಸತ್ವಗಳು, ಖನಿಜಗಳನ್ನು ಹೊಂದಿರುತ್ತವೆ. ಒಣದ್ರಾಕ್ಷಿ ನೈಸರ್ಗಿಕವಾಗಿ ಸಿಹಿಯಾಗಿರುತ್ತದೆ. ಅದರಲ್ಲಿ ಸಕ್ಕರೆ ಮತ್ತು ಕ್ಯಾಲೊರಿ ಅಂಶ ಹೆಚ್ಚಾಗಿರುತ್ತದೆ. ಅವುಗಳನ್ನು ಮಿತವಾಗಿ ಸೇವಿಸಿದಾಗ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಒಣದ್ರಾಕ್ಷಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಒಣದ್ರಾಕ್ಷಿಯನ್ನು ಅವುಗಳ ಕಚ್ಚಾ ಸ್ಥಿತಿಯಲ್ಲಿ ತೆಗೆದುಕೊಳ್ಳುವುದರಿಂದ ಅವುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ನಂತರ ತಿನ್ನುವುದು ಉತ್ತಮ. ನೆನೆಸಿದ ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ. ತೂಕ ಇಳಿಸಲು ಸಹಕಾರಿ: ಒಣದ್ರಾಕ್ಷಿ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ ಮತ್ತು ಕ್ಯಾಲೋರಿ ಸೇವನೆಯನ್ನು ಹೆಚ್ಚಿಸದೆ ದೇಹವು ತನ್ನ…

Read More

ನವದೆಹಲಿ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿರುವ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಕೋರ್ಟ್‌ ಅನುಮತಿ ನೀಡಿದ 8 ಗಂಟೆಯೊಳಗೆ ಪೂಜೆ (Puja) ಆರಂಭವಾಗಿದೆ. ಜ್ಞಾನವಾಪಿ ಆವರಣದಲ್ಲಿ ಮಧ್ಯರಾತ್ರಿಯಲ್ಲಿ ಧಾರ್ಮಿಕ ಸಮಾರಂಭಗಳನ್ನು ನಡೆಸಲಾಯಿತು. ನೆಲಮಾಳಿಗೆಯಲ್ಲಿರುವ ವಿಗ್ರಹಕ್ಕೆ ಬುಧವಾರ ರಾತ್ರಿ 11 ಗಂಟೆಗೆ ಪೂಜೆ ನಡೆದಿದೆ. ಪೂಜೆಯ ಬಳಿಕ ಮಂಗಳಾರತಿಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಈ ಮೂಲಕ ಜ್ಞಾನವಾಪಿಯಲ್ಲಿ 31 ವರ್ಷಗಳ ಬಳಿಕ ಪೂಜೆ ನಡೆಯಿತು. ಪೂಜೆ ವೇಳೆ ಮಸೀದಿಯ ಆವರಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಪುರಾತತ್ವ ಇಲಾಖೆ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಮಸೀದಿ (Varanasi Gyanvapi Mosque) ನಿರ್ಮಾಣ ಆಗಿರುವುದು ಮಂದಿರದ ಮೇಲೆ ಎಂಬ ಸತ್ಯ ಬಯಲಾದ ಬೆನ್ನಲ್ಲೇ ಹಿಂದೂಗಳಿಗೆ ಈಗ ಪೂಜಾಧಿಕಾರ ದಕ್ಕಿದೆ. ಈ ಪ್ರಾರ್ಥನಾ ಮಂದಿರದಲ್ಲಿ ಸೀಲ್ ಮಾಡಿರುವ ಬೇಸ್‌ಮೆಂಟ್‌ನಲ್ಲಿ ಇರುವ ಹಿಂದೂ ವಿಗ್ರಹಗಳಿಗೆ ಪೂಜೆ ಮಾಡಲು ವಾರಣಾಸಿ ಕೋರ್ಟ್ (Varanasi Court) ಅನುಮತಿ ನೀಡಿತ್ತು.  

Read More

ಹುಬ್ಬಳ್ಳಿ: ನಿರ್ಮಲಾ ಸೀತಾರಾಮನ್ ಅವರು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆ ಮಾಡಿದ್ದಾರೆ. ಯುವ ಸಬಲೀಕರಣಕ್ಕೆ, ರೈತರ ಕ್ಷೇಮಾಭವೃದ್ಧಿ, ಬಡವರ ಕಲ್ಯಾಣ, ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಬಜೆಟ್ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಸ್ಕಿಲ್ ಇಂಡಿಯಾ, ಆಯುಷ್ಮಾನ್ ಭಾರತ, ರಾಷ್ಟ್ರೀಯ ಶಿಕ್ಷಣ ನೀತಿಗೆ ಆದ್ಯತೆ ಕೊಟ್ಟಿದ್ದಾರೆ.  ಕನಿಷ್ಠ ಬೆಂಬಲ ಬೆಲೆಗೆ ಒತ್ತು ಕೊಡುವ ಕೆಲಸವಾಗಿದೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಒತ್ತು ಕೊಡಲಾಗಿದೆ. ಅಭಿವೃದ್ಧಿ ಹೊಂದಿದ ಭಾರತ ಮಾಡಲು ಮೋದಿಯವರ ಸರ್ಕಾರ ಎಲ್ಲಾ ಕೆಲಸ ಮಾಡುತ್ತಿದೆ. ಎಲ್ಲಾ ರಾಜ್ಯಗಳಿಗೆ ಆಗಿರುವ ರೀತಿ ಕರ್ನಾಟಕಕ್ಕೂ ಅನುದಾನ ಹಂಚಿಕೆಯಾಗಿದೆ. ಕಡಿಮೆ ಹಣ ಬಂದಿದೆ ಅನಿಸಿದ್ರೆ ಅದನ್ನು ಚರ್ಚಿಸಲು ವೇದಿಕೆಯಿದೆ. ನೀತಿ ಆಯೋಗದಲ್ಲಿ ಕಾಂಗ್ರೆಸ್‌ನವರೂ ಇದ್ದು ಅಲ್ಲಿ ಚರ್ಚೆ ಮಾಡಬೇಕು ಎಂದರು. https://ainlivenews.com/rbi-gave-a-big-shock-to-paytm-ban-on-transactions-after-february-29/ ನಾನು ಪಕ್ಷ ಕೊಡುವ ಯಾವುದೇ ಜವಾಬ್ದಾರಿಯನ್ನಾದರೂ ನಿರ್ವಹಿಸಲು ಸಿದ್ಧ. ಪಕ್ಷ ಹೇಳಿದ್ರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ. ಬಿಜೆಪಿ ವರಿಷ್ಠರು ಗೌರವಯುತ…

Read More

ಬಳ್ಳಾರಿ: ರಾಜ್ಯದಲ್ಲಿ ಅಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್ ಇಪ್ಪತ್ತು ಸ್ಥಾನ ಗೆಲ್ಲೋದಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಭವಿಷ್ಯ ನುಡಿದಿದ್ದಾರೆ. ಇಧೇವೇಳೆ ಬಿಜೆಪಿ 400 ಸ್ಥಾನ ಗೆದ್ದೇ ಗೆಲ್ಲುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಬಸವ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ, ತಮಿಳುನಾಡು ಕೇರಳದಲ್ಲಿ ಕಾಂಗ್ರೆಸ್ ಕಳೆದ ಬಾರಿ ಬೋನಸ್ ಅಗಿ ಒಂದೇರಡು ಕ್ಷೇತ್ರ ಗೆದ್ದಿದ್ದರು.  ಆದರೆ ಈಗ ಅದು ಕೂಡ ಗೆಲ್ಲೋದಿಲ್ಲ. ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಆರಂಭದಲ್ಲಿ ಇಂಡಿಯಾ ಒಕ್ಕೂಟ ಒಂದೆರಡು ಮೀಟಿಂಗ್ ನಲ್ಲಿ ದೊಡ್ಡ ಸೌಂಡ್ ಮಾಡಿತ್ತು. ಮೂರನೇ ಮೀಟಿಂಗ್ ಡಮಾರ್ ಆಯ್ತು. ಲೋಕಸಭೆಯಲ್ಲಿ ನಾಲ್ಕು ನೂರು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದರು. https://ainlivenews.com/rbi-gave-a-big-shock-to-paytm-ban-on-transactions-after-february-29/ ದೇಶದಲ್ಲಿ ರಾಮಮಂದಿರ ನಿರ್ಮಾಣದ ಬಳಿಕ ಸರ್ವಂ ರಾಮಮಯಂ ಆಗಿದೆ. ರಾಮ ರಾಮ ರಾಮ ದೇಶದ ಎಲ್ಲೇಡೆ ರಾಮ ಭಾವನೆ ಹೆಚ್ಚಾಗಿದೆ. ಹೀಗಾಗಿ ಇದೀಗ ಸಿದ್ದರಾಮಯ್ಯ ಅವರಿಗೆ ಜೈಶ್ರೀರಾಂ ಅನ್ನೋ ಹಾಗೇ ಅಯ್ತು. ನಲವತ್ತು ವರ್ಷದ ರಾಜಕಾರಣದಲ್ಲಿ…

Read More