Author: AIN Author

ವಿಜಯನಗರ:- ಹಂಪಿ ಉತ್ಸವದ ನಿಮಿತ್ತವಾಗಿ ತುಂಗಭದ್ರಾ ತಟದಲ್ಲಿ ತುಂಗಭದ್ರಾ ಆರತಿ ಜರುಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಹಂಪಿಯಲ್ಲಿ ತುಂಗಭದ್ರಾ ನದಿಯ ದಡದಲ್ಲಿ ತುಂಗಭದ್ರಾ ಆರತಿ ನಡೆದಿದೆ. ಹಂಪಿ ಉತ್ಸವದ ನಿಮಿತ್ತ ತುಂಗಭದ್ರಾ ಆರತಿ ಆಯೋಜನೆ ಮಾಡಲಾಗಿದೆ. ಶ್ರೀ ವಿರೂಪಾಕ್ಷ ದೇಗುಲದಿಂದ ಭುವನೇಶ್ವರ ದೇವಿಯ ಮೆರವಣಿಗೆ ನಡೆದಿದೆ. ತುಂಗಾರಾತಿ ವೇಳೆಯಲ್ಲಿ ತಾಯಿ ಭುವನೇಶ್ವರ ದೇವಿಯ ಪೂಜೆ ಕೈಂಕಾರ್ಯಗಳು ಜರುಗಿದ್ದು, ತಂಗಾರತಿ ವೇಳೆ ಹಂಪಿಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳಿಂದ ಮೆರವಣಿಗೆ ನಡೆದಿದೆ. ತುಂಗಭದ್ರಾ ಆರತಿಯ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ತುಂಗಭದ್ರಾ ಆರತಿಯ ವೇಳೆ ವಿದೇಶಿ ಪ್ರವಾಸಿಗರು ಕುಣಿದು ಕುಪ್ಪಳಿಸಿದ್ದಾರೆ. ವಿಜಯನಗರ ಕ್ಷೇತ್ರದ ಶಾಸಕ ಎಚ್.ಆರ್. ಗವಿಯಪ್ಪ, ಡಿಸಿ ದಿವಾಕರ್, ಎಸ್ಪಿ ಶ್ರೀಹರಿಬಾಬು ಬಿ.ಎಲ್, ಸಿಇಓ ಸದಾಶಿವ ಪ್ರಭು ತುಂಗಭದ್ರಾ ಆರತಿಯಲ್ಲಿ ಭಾಗಿಯಾಗಿದ್ದರು.

Read More

ಗದಗ:- ಭ್ರಷ್ಟ ಪುರಸಭೆ ಸದಸ್ಯರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕರವೇ‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೇಟ್ಟಿ ಬಣದಿಂದ ಪ್ರತಿಭಟನೆ ಜರುಗಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಪುರಸಭೆಗೆ ದಿಢೀರ್ ಮುತ್ತಿಗೆ ಹಾಕಿದ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಸದಸ್ಯರನ್ನ ಅಮಾನತುಗೊಳಿಸುವಂತೆ ಹಲವು ಬಾರಿ ಆಗ್ರಹಿಸಿದರು. ಅದರೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಲಾಗಿದೆ. ಪುರಸಭೆ ಸದಸ್ಯರ ಮಕ್ಕಳೂ‌ ಸಹ ಗುತ್ತಿಗೆದಾರರಾಗಿದ್ದು ಕಾನೂನು ಬಾಹೀರ ಎಂದು ಆರೋಪಿಸಿದ್ದಾರೆ. ಅಭಿವೃದ್ಧಿಗೆ ಬೇಕಾದ ಸಾಮಗ್ರಿಗಳನ್ನ ತಮ್ಮ ಸ್ವಂತಕ್ಕೆ ಬಳಕೆ ಆರೋಪ ಮಾಡಲಾಗಿದೆ.ಪುರಸಭೆ ಸದಸ್ಯೆ ಜಯಕ್ಕ ಕಳ್ಳಿ ವಿರುದ್ಧ ಕಾರ್ಯಕರ್ತರ ಆರೋಪಿಸಿದ್ದಾರೆ. ಇಂತಹ ಸದಸ್ಯರ ವಿರುದ್ಧ ಕಾನೂನು ಕ್ರಮಕ್ಕೆ ಕರವೇ ಪ್ರವೀಣ ಶೆಟ್ಟಿ ಬಣದ‌ ಕಾರ್ಯಕರ್ತರು ಆಗ್ರಹಿಸಿದರು.

Read More

ಗೋಕಾಕ:- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ದೇಶದ ಆರ್ಥಿಕ ರಂಗಕ್ಕೆ ಆಧಾರ ಸ್ತಂಭವಾಗಿರುವ ಒಟ್ಟು ಆರು ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೃಷಿ, ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ, ಸಾರಿಗೆ, ಆರೋಗ್ಯ ಮತ್ತು ವಸತಿ ಕ್ಷೇತ್ರಗಳತ್ತ ಹೆಚ್ಚು ಗಮನ ಕೇಂದ್ರಿಕರಿಸಿದ್ದಾರೆ. ಮಾತ್ರವಲ್ಲ, ಹೊಸ ಉದ್ಯೋಗ ಸೃಷ್ಟಿ, ಸಂಶೋಧನೆ, ಆವಿಷ್ಕಾರಕ್ಕೂ ಒತ್ತು ನೀಡಿದ್ದಾರೆ. ದೇಶದ ಬೆನ್ನೆಲುಬಾದ ರೈತರಿಗೆ ಡೈರಿ ಉದ್ಯಮದಲ್ಲಿರುವ ರೈತರಿಗೆ ನೆರವು, ರಾಸುಗಳಿಗೆ ಕಂಡುಬರುವ ಕಾಲುಬಾಯಿ ರೋಗ ತಡೆಗೆ ಕ್ರಮ, 4 ಕೋಟಿ ರೈತರಿಗೆ ಬೆಳೆ ವಿಮೆ ಯೋಜನೆಯಂತಹ ಯೋಜನೆಗಳು ಮೆಚ್ಚುವಂತದ್ದಾಗಿದೆ ಎಂದು ಅವರು ತಿಳಿಸಿದ್ದಾರೆ. ಜತೆಗೆ ದೇಶದಲ್ಲಿರುವ ಪ್ರಮುಖ ಪ್ರವಾಸೋದ್ಯಮಗಳ ಅಭಿವೃದ್ಧಿಗೆ ಶೂನ್ಯ ಬಡ್ಡಿ ಸಾಲ ನೀಡುತ್ತಿರುವುದು ಕೂಡ ಪರೋಕ್ಷವಾಗಿ ಲಕ್ಷಾಂತರ ಉದ್ಯೋಗಗಳ ಸೃಷ್ಟಿಗೂ ಕಾರಣವಾಗಿದೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆ ತರುವ ಉದ್ದೇಶ ಹೊಂದಿದೆ. ಇ ವಾಹನಗಳಿಗೆ ಚಾರ್ಜಿಂಗ್‌ ಸ್ಟೇಷನ್‌ ಹೆಚ್ಚಿಸುವುದು,…

Read More

ಹುಬ್ಬಳ್ಳಿ: ಕೇಂದ್ರದ ಬಜೆಟ್ ಜನಪರ ಕಾಳಜಿಯಿಂದ ಕೂಡಿದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಇಂದು ಕೇಂದ್ರ ವಿತ್ತ ಸಚಿವರಾದ ಸನ್ಮಾನ್ಯ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಜನಪರ ಕಾಳಜಿಯ ಬಜೆಟ್. ದೇಶದಲ್ಲಿ ಹಾಲು ಉತ್ಪಾದನಾ ಡೇರಿಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ, ಪ್ರತ್ಯೇಕ ಮತ್ಸ ಸಂಪದ ಯೋಜನೆ ವಿಸ್ತರಣೆ ಸ್ವಾಗತಾರ್ಹ. ರಾಜ್ಯದ ಪ್ರವಾಸೋದ್ಯಮಕ್ಕೆ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ, ಸಣ್ಣ ನಗರಗಳಿಗೂ ಮೆಟ್ರೋ ವಿಸ್ತರಣೆ, 40 ಸಾವಿರ ರೈಲ್ವೆ ಕೋಚ್ ಬದಲಾವಣೆಗೆ ಕ್ರಮ, ದೇಶದಲ್ಲಿ ಹಾಲು ಉತ್ಪಾದನಾ ಡೇರಿಗಳ ಸಂಖ್ಯೆ ಹೆಚ್ಚಳ, ಬಾಡಿಗೆ ಮನೆಗಳು, ಕೊಳೆಗೇರಿಗಳಲ್ಲಿ ವಾಸಿಸುವ ಜನರಿಗೆ ಹೊಸ ಮನೆ ಖರೀದಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೆರವು ನೀಡವುದು ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ. ಪಶುವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಒತ್ತು, ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ತೀರ್ಮಾನ ಶ್ಲಾಘನೀಯ. ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ದಂತಹ ಕ್ಷೇತ್ರಗಳ ಆದ್ಯತೆಯ ವಲಯಗಳ ಸುಧಾರಣೆಗೆ ಒತ್ತು…

Read More

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ ನಂ 30ರ ರೇಣುಕಾ ನಗರ, ಗಾಂಧಿ ನಗರ, ರಾಮಕೃಷ್ಣ ನಗರ, ಸೆಂಟ್ರಲ್ ಎಕ್ಸಸೈಜ್ ಕಾಲೋನಿಯ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡುವ ಕಾಮಗಾರಿಗೆ ಮತ್ತು ರೇಣುಕಾ ನಗರ ಉದ್ಯಾನವನದ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ, ವಾರ್ಡಿನ ಹಿರಿಯರು, ಪ್ರಮುಖರು, ಯುವಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

Read More

ಹಾವೇರಿ:- ಹಾವೇರಿಗೆ ಆಗಮಿಸಿದ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಹಾವೇರಿ ಜಿಲ್ಲೆಯ ಬಿಜೆಪಿ ಮುಖಂಡರು , ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ಹಾವೇರಿ ಜಿಲ್ಲಾದ್ಯಕ್ಷ ಅರುಣ್ ಕುಮಾರ್ ಪೂಜಾರ್ ಪದ ಗ್ರಹಣ ಕಾರ್ಯಕ್ರಮ ಹಿನ್ನೆಲೆ ಹಾವೇರಿಗೆ ವಿಜಯೇಂದ್ರ ಭೇಟಿ ನೀಡಿದರು. ಈ ವೇಳೆ ಹಾವೇರಿ ನಗರದಲ್ಲಿ ವಿಜಯೇಂದ್ರ ಅವರು ರೋಡ್ ಶೋ ನಡೆಸಿದ್ದಾರೆ. ಹಾವೇರಿ ನಗರದಲ್ಲಿ ಬಿ.ವೈ ವಿಜಯೇಂದ್ರ ರೋಡ್ ಶೋಗೆ ಮಾಜಿ ಸಚಿವ ಬಿ‌ಸಿ ಪಾಟೀಲ್, ಬಿಜೆಪಿ ಜಿಲ್ಲಾದ್ಯಕ್ಷ ಅರುಣ್ ಕುಮಾರ್ ಪೂಜಾರ್ ಸೇರಿದಂತೆ ಹಲವು ಮುಖಂಡರು ವಿಜಯೇಂದ್ರಗೆ ಸಾಥ್ ನೀಡಿದ್ದಾರೆ. ಬೃಹತ್‌ ಹೂವಿನ ಹಾರ ಹಾಕಿ ವಿಜಯೇಂದ್ರಗೆ ಕಾರ್ಯಕರ್ತರು ಸ್ವಾಗತ ಕೋರಿದ್ದಾರೆ.

Read More

ಬೆಂಗಳೂರು:- ಈ ಬಾರಿ ಕೇಂದ್ರ ಬಜೆಟ್ ಕೃಷಿಕರಿಗೆ ಮತ್ತೆ ನಿರಾಸೆ ಮೂಡಿಸಿದೆ. ಇದೊಂದು ಚುನಾವಣಾ ಗಿಮಿಕ್ ಬಜೆಟ್‌ ಎಂದಷ್ಟೇ ಹೇಳಬಹುದು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ ಅನ್ನದಾತರಿಗೆ ಆದ್ಯತೆ ಎಂಬ ಘೋಷಣೆ ಇದೆ. ಅದರೆ ನಿರೀಕ್ಷಿತ ದೂರ ದೃಷ್ಟಿ ಚಿಂತನೆಯ ಯೋಜನೆಗಳು ಇದರಲ್ಲಿ ಕಾಣುತ್ತಿಲ್ಲ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ. ರಸಗೊಬ್ಬರಗಳ ಬೆಲೆ ಇಳಿಸಬೇಕೆಂಬ ರೈತರ ಕೂಗಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಕಳೆದ 10 ವರ್ಷಗಳಿಂದ ಗೊಬ್ಬರದ ಬೆಲೆ ಏರಿಕೆಯಿಂದ ಕೃಷಿಕ ದೊಡ್ಡ ಹೊರೆ ಹೊರುವಂತಾಗಿದೆ. ಸಬ್ಸಿಡಿಯೂ ಹೆಚ್ಚಳ ಮಾಡಿಲ್ಲ . ಬರ ನಿರ್ವಹಣೆ, ಸಂಕಷ್ಟದಲ್ಲಿ ಇರುವ ರೈತರಿಗೆ ನೆರವಿನ ಯೋಜನೆಗಳು ಇಲ್ಲ‌. ಕರ್ನಾಟಕದ ಪಾಲಿಗಂತೂ ತಂಬಾ ನಿರಾಶಾದಾಯಕವಾಗಿದೆ. ನೇರ ತೆರಿಗೆ ಹೆಚ್ಚಳವಾಗಿದೆ. ಅಲ್ಲದೆ ಆದಾಯ ತೆರಿಗೆ ಸ್ಲಾಬ್ ಪರಿಷ್ಕರಣೆ ಮಾಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ…

Read More

ಹಾವೇರಿ: ಕೇಂದ್ರ ಸರ್ಕಾರ ಬಡವರ ಪರ, ದೀನ ದಲಿತರ ಪರ, ಮಹಿಳೆಯ ಪರವಾಗಿರುವ ಬಜೆಟ್ ಮಂಡನೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಕೇಂದ್ರ ಬಜೆಟ್ ಮೇಲೆ ಪ್ರತಿಕ್ರಿಯೆ ನೀಡಿದ ಅವರು, ಇದು ಕಾಂಗ್ರೆಸ್ ನವರಿಗೆ ಸಹಜವಾಗೇ ನಿರಾಶಾದಾಯಕ ಬಜೆಟ್. ಆದರೆ ಜನರಿಗೆ ಆಶಾದಾಯಕವಾಗಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಾಗಿದೆ. ಹೊಸದಾಗಿ ಯಾವುದೇ ತೆರಿಗೆ ಹಾಕಿಲ್ಲ. ಏಳು ಲಕ್ಷದವರೆಗೆ ತೆರಿಗೆ ರಿಯಾಯಿತಿ ಕೊಟ್ಟಿದ್ದಾರೆ. ಒಂದೂವರೆ ಕೋಟಿ ಲಕ್ಷ ಮೂಲಭೂತ ಸೌಕರ್ಯಕ್ಕೆ ಮೀಸಲಿಟ್ಟಿದ್ದಾರೆ ಎಂದು ಹೇಳಿದರು. ಇದು ಪೂರ್ಣ ಪ್ರಮಾಣದ ಬಜೆಟ್ ಅಲ್ಲ. ಜೂನ್ ನಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿ ಉತ್ತಮ ಬಜೆಟ್ ಕೊಡುತ್ತಾರೆ ಎಂದು ಹೇಳಿದರು.

Read More

ಬಳ್ಳಾರಿ:- ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ರಾಜ್ಯದಲ್ಲಿ ಅಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವುದಿಲ್ಲ ಎಂದರು. ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಕಳೆದ ಬಾರಿ ಬೋನಸ್ ಅಗಿ ಒಂದೆರಡು ಕ್ಷೇತ್ರ ಗೆದ್ದಿದ್ದರು. ಈಗ ಅದು ಕೂಡ ಗೆಲ್ಲೋದಿಲ್ಲ ಎಂದರು. ಆರಂಭದಲ್ಲಿ ಇಂಡಿಯಾ ಒಕ್ಕೂಟ ದೊಡ್ಡ ಸೌಂಡ್ ಮಾಡಿತ್ತು. ಒಂದು ಮತ್ತು ಎರಡನೇಯ ಮೀಟಿಂಗ್ ದೊಡ್ಡ ಸೌಂಡ್ ಮಾಡಿತ್ತು. ಮೂರನೇ ಮೀಟಿಂಗ್ ಡಮಾರ್ ಅಯಿತು. ದೇಶದಲ್ಲಿ ರಾಮಮಂದಿರ ನಿರ್ಮಾಣದ ಬಳಿಕ ಸರ್ವಂ ರಾಮಮಯಂ ಆಗಿದೆ. ಲೋಕಸಭೆಯಲ್ಲಿ 400 ಸ್ಥಾನ ಗೆದ್ದೇ ಗೆಲ್ಲುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು. ರಾಮ ರಾಮ ರಾಮ ದೇಶದ ಎಲ್ಲೆಡೆ ರಾಮಮಯ ಹೆಚ್ಚಾಗಿದೆ. ಹೀಗಾಗಿ ಇದೀಗ ಸಿದ್ದರಾಮಯ್ಯ ಅವರಿಗೆ ಜೈಶ್ರೀರಾಂ ಅನ್ನೋ ಹಾಗೇ ಅಯಿತು. 40 ವರ್ಷದ ರಾಜಕಾರಣದಲ್ಲಿ ರಾಮಮಂದಿರ ಕಟ್ಟಬೇಕೆಂದು ಒಮ್ಮೆಯೂ ಹೇಳಿಲ್ಲ. ಸಿದ್ದರಾಮಯ್ಯ ಬಾಯಿಯಲ್ಲಿ ಜೈಶ್ರೀರಾಂ ಬಂದಿದೆ. ಅಂದರೆ ಕಾಂಗ್ರೆಸ್ ನವರಿಗೆ ಗೊತ್ತಾಗಿದೆ ಬಿಜೆಪಿ ಗೆಲ್ಲುತ್ತದೆ ಎಂದು…

Read More

ಬೆಂಗಳೂರು:- ಕೇಂದ್ರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ತಾರತಮ್ಯ ಆಗುತ್ತಿದೆ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದೇಶದ ಸಾರ್ವಭೌಮ್ಯತೆ ಅತಿ ಮುಖ್ಯವಾದದ್ದು, ನಾವು ಒಕ್ಕೂಟ ವ್ಯವಸ್ಯೆಯನ್ನು ಒಪ್ಪಿಕೊಂಡಿರುವುದರಿಂದ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಮುಂದೆ ಬೇಡಿಕೆಗಳನ್ನಿಡುತ್ತವೆ ಎಂದರು. ತೆರಿಗೆ ಹಣ ಹಂಚಿಕೆ ವಿಷಯಕ್ಕೆ ಬಂದರೆ, ತೆರಿಗೆಗಳಿಂದ ಸಂಗ್ರಹವಾಗುವ ಅತಿಹೆಚ್ಚು ಮೊತ್ತವನ್ನು ಕೇಂದ್ರಕ್ಕೆ ಸಲ್ಲಿಸುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದ ಸಿದ್ದರಾಮಯ್ಯ, ರಾಜ್ಯಕ್ಕೆ ಸಿಗುತ್ತಿರುವ ಪಾಲು ಬಹಳ ಕಡಿಮೆಯಾಗಿದೆ ಎಂದರು. 15ನೇ ಹಣಕಾಸು ಬಜೆಟ್ ನಲ್ಲಿ 14ನೇ ಹಣಕಾಸು ಬಜೆಟ್ ಗಿಂತ ಕಡಿಮೆ ಅನುದಾನ ರಾಜ್ಯಕ್ಕೆ ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು. ರಾಯಚೂರಲ್ಲಿ ಏಮ್ಸ್ ಸೇರಿದಂತೆ ರಾಜ್ಯದ ಹಲವಾರು ಬೇಡಿಕೆಗಳನ್ನು ಬಜೆಟ್ ನಲ್ಲಿ ಕಡೆಗಣಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

Read More