Author: AIN Author

ಇಂಗ್ಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಶುಭಮನ್ ಗಿಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರನ್ನು ಎರಡನೇ ಟೆಸ್ಟ್‌ ನಿಮಿತ್ತ ಟೀಮ್‌ ಇಂಡಿಯಾ ಬ್ಯಾಟಿಂಗ್‌ ಕೋಚ್ ವಿಕ್ರಮ್‌ ರಾಥೋಡ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶುಭಮನ್ ಗಿಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರು ಭಾರತ ಟೆಸ್ಟ್‌ ತಂಡದಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಗಿಲ್‌ ರನ್‌ ಗಳಿಸುವಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಅವರು ಶತಕ ಸಿಡಿಸಿದ್ದರು. ಆದರೆ, ಅಂದಿನಿಂದ ಇಲ್ಲಿಯವರಗೂ ಅವರಿಂದ ಒಂದೇ ಒಂದು ಅರ್ಧಶತಕ ಮೂಡಿ ಬಂದಿಲ್ಲ. ಇನ್ನು ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಯ ಮೂಲಕ ಟೆಸ್ಟ್‌ ತಂಡಕ್ಕೆ ಬಂದಿದ್ದ ಶ್ರೇಯಸ್‌ ಅಯ್ಯರ್‌ ಅವರು ನಿರಾಶೆ ಮೂಡಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಶ್ರೇಯಸ್‌ ಅಯ್ಯರ್‌ ಅವರದು 31 ರನ್‌ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಹೈದರಾಬಾದ್‌ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಗಿಲ್‌ ಕ್ರಮವಾಗಿ…

Read More

ಇತ್ತೀಚಿನ ವಾಹನಗಳು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಅದರಲ್ಲಿ ಆಂಡ್ರಾಯ್ಡ್‌ ಆಟೋ ಹಾಗೂ ಆಪಲ್ ಕಾರ್ ಪ್ಲೇ ಕೂಡಾ ಒಂದು. ಇನ್ನು ಆಂಡ್ರಾಯ್ಡ್‌ ಆಟೋದ ಬಗ್ಗೆ ಮಾತನಾಡುವುದಾದರೆ ಇದು ಗೂಗಲ್‌ನ ಇನ್‌-ಕಾರ್ ಇಂಟರ್‌ಫೇಸ್‌. ಇದು ಬಳಕೆದಾರ ಸ್ನೇಹಿ ವೈಶಿಷ್ಟ್ಯವಾಗಿದ್ದು, ಚಾಲನೆಯ ಅನುಭವವನ್ನು ಇನ್ನಷ್ಟು ಉತ್ತಮವಾಗಿಸಲು ಸಹಾಯ ಮಾಡುತ್ತದೆ ಈ ವೈಶಿಷ್ಟ್ಯದಲ್ಲಿ ನೀವು ತಲುಪಬೇಕಾದ ಸ್ಥಳವನ್ನು ತಲುಪಿದ ಬಳಿಕ ಗೂಗಲ್ ಮ್ಯಾಪ್‌ನಲ್ಲಿ ನಿಮ್ಮ ಪಾರ್ಕಿಂಗ್ ಸ್ಥಳವನ್ನು ಸೇವ್ ಮಾಡಲು ಬಳಕೆದಾರರಿಗೆ ಆಂಡ್ರಾಯ್ಡ್‌ ಆಟೋ ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯವು ಸರಳವಾಗಿದೆ ಎಂದುಕೊಂಡರೂ ಸಂಕೀರ್ಣವಾದ ಪಾರ್ಕಿಂಗ್ ಸ್ಥಳಗಳನ್ನು ಹೊಂದಿರುವ ಮಾಲ್‌ಗಳು ಅಥವಾ ಕಮ್ಯುನಿಟಿ ಪಾಕಿಂಗ್ ಸಂದರ್ಭದಲ್ಲಿ ಇದು ಸಹಾಯಕ್ಕೆ ಬರುತ್ತದೆ. ಆಂಡ್ರಾಯ್ಡ್ ಆಟೋ ಬಳಕೆದಾರರಿಗೆ ಇದು ಸ್ಕ್ರೀನ್ ಮೇಲೆ ಹೊಸ ಸೇವ್ ಪಾರ್ಕಿಂಗ್ ಟಾಗಲ್ ಅನ್ನು ಪ್ರದರ್ಶಿಸುತ್ತದೆ. ಇದರ ಮೇಲೆ ಟ್ಯಾಪ್ ಮಾಡುವುದರಿಂದ ಪಾರ್ಕಿಂಗ್ ಸ್ಥಳವನ್ನು ಸೇವ್ ಮಾಡಿಕೊಳ್ಳಬಹುದು. ನಿಮ್ಮ ಸ್ಮಾರ್ಟ್‌ ಫೋನ್‌ ಅನ್ನು ಆಂಡ್ರಾಯ್ಡ್‌ ಆಟೋಗೆ ಲಿಂಕ್ ಮಾಡಿ. ಇದು ನಿಮ್ಮ ಡಿವೈಜ್ ಹಾಗೂ…

Read More

ಪ್ರಭಾಸ್ (Prabhas) ಆಕಾಶದಲ್ಲಿ ತೇಲಾಡುತ್ತಿದ್ದಾರೆ. ಅದಕ್ಕೆ ಕಾರಣ ‘ಸಲಾರ್’ ಚಿತ್ರದ ಗೆಲುವು. ಭರ್ತಿ 700 ಕೋಟಿಯನ್ನು ಗಳಿಸಿ ಮತ್ತೆ ಡಾರ್ಲಿಂಗ್ ಹೀರೋಗೆ ಆನೆ ಬಲ ನೀಡಿದೆ. ಮೂರು ಸೋಲಿನಿಂದ ಒದ್ದಾಡುತ್ತಿದ್ದ ಡಾರ್ಲಿಂಗ್ ಅದೇ ಖುಷಿಯಲ್ಲಿ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಎರಡು ತಿಂಗಳು ಯಾರಿಗೂ ಸಿಗಲ್ಲ ಎಂದು ಘೋಷಿಸಿದ್ದಾರೆ. ಏಕಾಎಕಿ ಯುರೋಪ್‌ಗೆ ಹೊರಟಿದ್ದೇಕೆ ಪ್ರಭಾಸ್? 2 ತಿಂಗಳು ಏನು ಮಾಡಲಿದ್ದಾರೆ? ‘ಸಲಾರ್’ (Salaar) ಇದೊಂದು ಗೆಲುವು ಬೇಕಾಗಿತ್ತು. ಒಂದಲ್ಲ ಎರಡಲ್ಲ. ಭರ್ತಿ ನಾಲ್ಕೈದು ಸಿನಿಮಾ ಮಕಾಡೆ ಮಲಗಿದೆ. ಅಂದರೆ ಹೆಚ್ಚು ಕಮ್ಮಿ ಐದು ವರ್ಷ ಪ್ರಭಾಸ್‌ಗೆ ಗೆಲುವು ದಕ್ಕಿರಲಿಲ್ಲ. ಗೆಲುವನ್ನು ಪಕ್ಕಕ್ಕಿಡಿ. ಈ ಸಿನಿಮಾಗಳಿಂದ ಅವರು ಅತಿ ಹೆಚ್ಚು ಟೀಕೆ ಎದುರಿಸಬೇಕಾಯಿತು. ಹೀಗಾಗಿ ಪ್ರಶಾಂತ್ ನೀಲ್ (Prashanth Neel) ಮೇಲೆ ಭರವಸೆ ಇಟ್ಟಿದ್ದರು. ಕೊನೆಗೂ ನೀಲ್ ಕೈ ಬಿಡಲಿಲ್ಲ. ಮಿಶ್ರ ಪ್ರತಿಕ್ರಿಯೆ ನಡುವೆಯೂ ನೀಲ್ ಮ್ಯಾಜಿಕ್ ಕೆಲಸ ಮಾಡಿತ್ತು. ಬರೋಬ್ಬರಿ 700 ಕೋಟಿಯನ್ನು ಗಳಿಸಿತು. ಹೊಂಬಾಳೆ ಸಂಸ್ಥೆ ಮೀಸೆ ತಿರುವಿತು. ಪ್ರಭಾಸ್…

Read More

ಬಿಗ್ ಬಾಸ್ ಮೊದಲನೇ ರನ್ನರ್ ಅಪ್ ಆದ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿಯು ಡ್ರೋನ್ ಪ್ರತಾಪ್ ಅವರಿಗೆ ಮತ್ತೊಂದು ಬಿಗ್ ಆಫರ್ ನೀಡಿದೆ. ವಾಹಿನಿಯ ಅತ್ಯಂತ ಜನಪ್ರಿಯ ಶೋ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಕಂಟೆಸ್ಟೆಂಟ್ ಆಗಿ ಆಯ್ಕೆಯಾಗಿದ್ದಾರೆ. ಇಂದಿನಿಂದ ರಿಯಾಲಿಟಿ ಶೋದ ಚಿತ್ರೀಕರಣ ಕೂಡ ನಡೆಯುತ್ತಿದೆ. ಡ್ರೋನ್ ಪ್ರತಾಪ್ ಮಾತ್ರವಲ್ಲ, ತುಕಾಲಿ ಸಂತೋಷ್, ಮೈಕಲ್ ಮತ್ತು ಇಶಾನಿ ಕೂಡ ಈ ಬಾರಿ ಗಿಚ್ಚಿಗಿಲಿಗಿಲಿಯಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ. ಮೂವರು ಕೂಡ ಇಂದಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಶ್ರುತಿ, ಕೋಮಲ್, ಸಾಧು ಕೋಕಿಲಾ ನಿರ್ಣಾಕರಾಗಿದ್ದಾರೆ. ಡ್ರೋನ್ ಪ್ರತಾಪ್ (Drone Pratap) ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ರೀತಿಯಲ್ಲಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಆರೋಪ (Allegation) ಮಾಡಿದ್ದರು. ಈಗ ಎಲ್ಲದಕ್ಕೂ ಪ್ರತಾಪ್ ಉತ್ತರ ನೀಡಿದ್ದಾರೆ.  ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಾಪ್, ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು.…

Read More

ಬೆಂಗಳೂರು: ಎಣ್ಣೆ ಪ್ರಿಯರಿಗೆ ಮತ್ತೆ ಶಾಕ್ ಕೊಟ್ಟ ಗ್ಯಾರಂಟಿ ಸರ್ಕಾರ ರಾಜ್ಯ ಬಜೆಟ್ ಹೊಸ್ತಿಲಲ್ಲೇ ಬಿಯರ್ ಬೆಲೆ ಏರಿಕೆ ಮಾಡಿದ ರಾಜ್ಯ ಅಬಕಾರಿ ಇಲಾಖೆ  ಹಾಗೆ ಗುರುವಾರದಿಂದ ಬಿಯರ್ ದರ ₹10 ರಿಂದ ₹15 ರೂ ಹೆಚ್ಚಳ ಮಾಡಲಾಗಿದೆ. ಜನವರಿ 20ರಂದು ಬಿಯರ್ ಅಬಕಾರಿ ಸುಂಕ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದ ಕ್ಯಾಬಿನೆಟ್ ಇದೀಗ ಬಿಯರ್ ದರ ಏರಿಸಿ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ಗುರುವಾರದಿಂದ ಜಾರಿಯಾಗುವಂತೆ ಬಿಯರ್ ಮೇಲಿನ ದರ ಹೆಚ್ಚಳ ಮಾಡಿದೆ. ಬ್ರ್ಯಾಂಡ್ : ಹಳೆ ದರ : ಹೊಸ ದರ 1. KF ಪ್ರಿಮಿಯಂ : ₹ 175: ₹185 2. ಟ್ಯೂಬರ್ಗ್ : ₹ 175: ₹185 3. ಬುಡ್ ವೈಸರ್ : ₹230 : ₹240 4. ಕಾರ್ಲ್ಸ್ ಬರ್ಗ್ : ₹230 : ₹240 5. UB ಸ್ಟ್ರಾಂಗ್ : ₹140 : ₹150 6. KF ಸ್ಟಾರ್ಮ್ : ₹175 :…

Read More

ಜಕಾರ್ತ: ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಅವರನ್ನು ಸತತ ಮೂರನೇ ಬಾರಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (Asian Cricket Council) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಸಿಸಿಯ ಎಲ್ಲಾ ಸದಸ್ಯರು, ಶಾ ಅವರ ನಾಮನಿರ್ದೇಶನವನ್ನು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ಸತತ ಮೂರನೇ ಬಾರಿಗೆ ಈ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ. ಜಯ್ ಶಾ ಅವರ ಅಧಿಕಾರ ವಿಸ್ತರಣೆಯನ್ನು ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಪ್ರಸ್ತಾಪಿಸಿದರು. ಇದಕ್ಕೆ ಉಳಿದ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಇದರಿಂದ ಅವರು ಅಧಿಕಾರದಲ್ಲಿ ಮತ್ತೊಮ್ಮೆ ಮುಂದುವರೆಯಲಿದ್ದಾರೆ.  https://ainlivenews.com/do-you-know-the-benefits-of-eating-jalebi-with-hot-milk/ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಅವರ ಬಳಿಕ ಜಯ್ ಶಾ ಅವರು ಜ.2021ರಲ್ಲಿ ಈ ಅಧಿಕಾರ ವಹಿಸಿಕೊಂಡರು. ಇವರ ನಾಯಕತ್ವದಲ್ಲಿ ಎಸಿಸಿ 2022ರಲ್ಲಿ ಟಿ20 ಸ್ವರೂಪದಲ್ಲಿ ಮತ್ತು 2023ರಲ್ಲಿ ಏಕದಿನ ಸ್ವರೂಪದಲ್ಲಿ ಏಷ್ಯಾಕಪ್ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಿತ್ತು. ಈ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವ…

Read More

ಸಾಮಾನ್ಯವಾಗಿ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಎಂದರೆ ಮಾಂಸಾಹಾರ ತಿನ್ನುವ ಹಿಂದೂಗಳು ಮಟನ್, ಚಿಕನ್, ಮೀನು ಮೊಟ್ಟೆ ಏನನ್ನೂ ಮುಟ್ಟುವುದಿಲ್ಲ. ಅಷ್ಟೇ ಅಲ್ಲ, ಏಕಾದಶಿ, ಹಬ್ಬ ಹರಿದಿನಗಳು, ಸಂಕಷ್ಟಿ, ಅಂಗಾರಕ ಚತುರ್ಥಿ, ಹುಣ್ಣಿಮೆ ಇತ್ಯಾದಿ ವಿಶೇಷ ದಿನಗಳಲ್ಲಿ ಕೂಡಾ ಮಾಂಸಾಹಾರ(non veg) ಸೇವನೆ ವರ್ಜ್ಯ. ಇದು ಏಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆ ಧಾರ್ಮಿಕ ಭಾವನೆ ಮಾತ್ರವಲ್ಲ, ನಿಮ್ಮ ಆರೋಗ್ಯದ ಕಾಳಜಿಯೂ ಇದೆ.  ಮೊದಲನೆಯದಾಗಿ, ಪ್ರಾಣಿ ಹತ್ಯೆ ಮಾಡುವುದು, ಯಾವುದೇ ಜೀವ ತೆಗೆಯುವುದು ಪಾಪ ಎನ್ನುತ್ತದೆ ಹಿಂದೂ ಧರ್ಮ. ಕನಿಷ್ಠ ಪಕ್ಷ ಕೆಲ ದಿನಗಳಿಗಾದರೂ ಮಿತಿ ಹೇರಿದರೆ ಅದರಿಂದ ಪ್ರಾಣಿ ಹತ್ಯೆ ಕೊಂಚ ಮಟ್ಟಿಗೆ ತಡೆಯಬಹುದು ಎಂಬುದು ಮೊದಲ ಸದುದ್ದೇಶ.  ಆರೋಗ್ಯಕ್ಕಾಗಿ ಮನುಷ್ಯನಿಗೆ ಮಾಂಸಾಹಾರ ರುಚಿ ಸಿಕ್ಕ ಮೇಲೆ ಅದು ಚಟವಾಗುವ ಸಾಧ್ಯತೆ ಇದೆ. ನಾಲಿಗೆ ಅದನ್ನೇ ಬೇಕು ಎನ್ನುತ್ತದೆ. ಆದರೆ ಅತಿಯಾದ ಮಾಂಸ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ದೇಹದಲ್ಲಿ ಕೊಬ್ಬು (cholesterol) ಶೇಖರಣೆಯಾಗುತ್ತದೆ. ಕೊಬ್ಬು ಹೆಚ್ಚಾದ ಮೇಲೆ…

Read More

ಉತ್ತರ ಪ್ರದೇಶ: ಮುಗ್ಧತೆ ಮತ್ತು ದೈವತ್ವವನ್ನು ಹೊರಸೂಸುವ ಸುಂದರ ಕಣ್ಣುಗಳ ‘ಬಾಲಕ ರಾಮ’ ಅಯೋಧ್ಯೆ ರಾಮಮಂದಿರದ  ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ರಾಮಲಲ್ಲಾ (Ram Lalla) ನೋಡಲು ಲಕ್ಷಾಂತರ ಭಕ್ತರು ಅಯೋಧ್ಯೆಗೆ ಯಾತ್ರೆ ಮಾಡುತ್ತಿದ್ದಾರೆ. ರಾಮಲಲ್ಲಾ ವಿಗ್ರಹದ ಆಕರ್ಷಣೆಯ ಕೇಂದ್ರಬಿಂದು ಸುಂದರ ಕಣ್ಣುಗಳು. ಈ ಕಣ್ಣುಗಳ ಬಗ್ಗೆ ಕುತೂಹಲಕಾರಿ ಅಂಶವೊಂದನ್ನು ದೇವಶಿಲ್ಪಿ ಅರುಣ್‌ ಯೋಗಿರಾಜ್‌ ಹಂಚಿಕೊಂಡಿದ್ದಾರೆ. ಜನಪ್ರಿಯ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj), ರಾಮಲಲ್ಲಾ ವಿಗ್ರಹ ಕೆತ್ತನೆಯ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಒಂದು ಮಂಗಳಕರ ಸಮಯದಲ್ಲಿ ಕಣ್ಣುಗಳನ್ನು ಪೂರ್ಣಗೊಳಿಸಲು ಕೇವಲ 20 ನಿಮಿಷ ತೆಗೆದುಕೊಂಡೆ. ಕಣ್ಣು ಕೆತ್ತನೆಗೆ ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆ ಬಳಸಿದ್ದೇನೆ ಎಂದು ತಿಳಿಸಿದ್ದಾರೆ.  ರಾಮಲಲ್ಲಾ ವಿಗ್ರಹದ ಕಣ್ಣುಗಳನ್ನು ಕೆತ್ತುವ ಮೊದಲು ಸರಯು ನದಿಯಲ್ಲಿ ಸ್ನಾನ ಮಾಡಿದೆ. ಹನುಮಾನ್‌ ಗರ್ಹಿ ಮತ್ತು ಕನಕ ಭವನದಲ್ಲಿ ಪೂಜೆ ಸಲ್ಲಿಸಿದೆ ಎಂದು ಶಿಲ್ಪಿ ಅರುಣ್‌ ಯೋಗಿರಾಜ್‌ ಹೇಳಿಕೊಂಡಿದ್ದಾರೆ. ಕೆತ್ತನೆ ಬಳಿಕ, ‘ಕಣ್ಣುಗಳು ಚೆನ್ನಾಗಿ ಕಾಣುತ್ತಿವೆಯೇ’ ಎಂದು ತಮ್ಮ ಸ್ನೇಹಿತರನ್ನು ಕೇಳುತ್ತಿದ್ದರಂತೆ. ವಿಗ್ರಹ…

Read More

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಡಿಸಿದ 2024-25ರ ಮಧ್ಯಂತರ ಆಯವ್ಯಯ ಪತ್ರದಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಅವರು ನಿರ್ಮಿಸಿರುವ ʻವಿನಾಶಕಾರಿ ಭಾರತʼದ ವಾಸ್ತವವನ್ನು ಬಚ್ಚಿಟ್ಟು ʻವಿಕಸಿತ ಭಾರತʼ ಎಂಬ ಭ್ರಮಾಲೋಕವನ್ನು ದೇಶದ ಜನತೆಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆದಿ ಮಾತನಾಡಿದ ಅವರು, ಬಡವರು, ಮಹಿಳೆಯರು, ಯುವಕರು ಮತ್ತು ರೈತರನ್ನೊಳಗೊಂಡ ನಾಲ್ಕು ‘ಜಾತಿ’ಗಳ ಅಭಿವೃದ್ದಿಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ನಂಬಿಕೆ ಇಟ್ಟಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದನ್ನೆ ʻವಿಕಸಿತ ಭಾರತʼದ ಕನಸು ಎಂದು ಅವರು ಹೇಳಿಕೊಂಡಿದ್ದಾರೆ. https://ainlivenews.com/do-you-know-the-benefits-of-eating-jalebi-with-hot-milk/ ನರೇಂದ್ರ ಮೋದಿಯವರ (Narendra Modi) 10 ವರ್ಷಗಳ ಆಡಳಿತದಲ್ಲಿ ಕಷ್ಟ, ನಷ್ಟ, ದಮನ, ದೌರ್ಜನ್ಯಕ್ಕೀಡಾಗಿರುವುದು ಇದೇ ಬಡವರು, ಮಹಿಳೆಯರು, ಯುವಕರು ಮತ್ತು ರೈತರು. ಈ ಸಮುದಾಯಗಳ ಪಾಲಿಗೆ ಮೋದಿಯವರ 10 ವರ್ಷಗಳ ಆಡಳಿತ ʻವಿಕಸಿತ ಭಾರತʼ ಅಲ್ಲ ಅದು ʻವಿನಾಶಕಾರಿ ಭಾರತʼ…

Read More

ಬೆಂಗಳೂರು: ಇಲ್ಲೊಂದು ಮಹಿಳೆ ತನ್ನ ಸೋದರಕ್ಕ  ಬ್ಯಾಗ್ನಲ್ಲಿದ್ದ ಚಿನ್ನದ ವಡವೆಗಳನ್ನು ಕದ್ದು ಸಿಕ್ಕಿ ಬಿದ್ದಿದ್ದಾಳೆ… ಈ ಸಂಬಂಧ ಕಂಟ್ಮೋನೆಂಟ್ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು 25ರಂದು ಲಲಿತಾ ಹಾಗು ಆಕೆ ತಂಗಿ ಚಂದ್ರಾಶರ್ಮ  ಸೇರಿದಂತೆ  ಎಂಟು ಜನ ಕೇರಳದ ಪಾಲಕ್ಕಾಡ್ ನಲ್ಲಿರುವ ಸಂಬಂಧಿಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗಿದ್ರು. ಮಾರನೇ ದಿನ ರೈಲಿನಲ್ಲಿ ನಗರಕ್ಕೆ ಆಗಮಿಸಿದರು‌.ಲಲಿತಾ ಬ್ಯಾಗನ್ನು ಚೆಕ್ ಮಾಡಿದಾಗ ಬ್ಯಾಗ್ನಲ್ಲಿದ್ದ 8.51 ಲಕ್ಷ ಮೌಲ್ಯದ 94 ಗ್ರಾಂ ತೂಕದ 2 ನೆಕ್ಲಸ್ ಕಾಣೆಯಾಗಿದ್ವು.   ಈ ಬಗ್ಗೆ  ಕಂಟ್ಮೋನೆಂಟ್ ರೈಲ್ವೇ ಪೊಲೀಸರಿಗೆ ಲಲಿತಾ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಲಿತಾ ಜೊತೆ ಪ್ರಯಾಣ ಬೆಳೆಸಿದ್ದ ಎಲ್ಲರನ್ನ‌ ಪ್ರಶ್ನಿಸಿದ್ದರು. ಅನುಮಾನ ಬಂದು ಮೇರೆಗೆ ಸೋದರ ಸಂಬಂಧಿತೆಯಾಗಿದ್ದ ಚಂದ್ರಾಶರ್ಮನನ್ನ ತೀವ್ರವಾಗಿ ಪ್ರಶ್ನಿಸಿದಾಗ ಕೃತ್ಯವೆಸಗಿರುವುದು ಒಪ್ಪಿಕೊಂಡಿದ್ದಾಳೆ ಎಂದು ರೈಲ್ವೇ ಎಸ್ಪಿ ಡಾ.ಎಸ್.ಕೆ. ಸೌಮ್ಯಲತಾ ತಿಳಿಸಿದ್ದಾರೆ.

Read More