Author: AIN Author

ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ಅವರು ರಾಜಕೀಯ ಪ್ರೇರಿತವಾಗಿ ಬೇರೆ ರಾಷ್ಟ್ರ, ಇನ್ನೊಂದು, ಮತ್ತೊಂದು ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ತಿಳುವಳಿಕೆ ಕೊರತೆ ಇದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತೀವ್ರ ವಾಗ್ದಾಳಿ ನಡೆಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ” ಕಾಂಗ್ರೆಸ್ ಪಕ್ಷದವರು ಅಂಕಿಅಂಶ ಆಧಾರದಲ್ಲಿ ಮಾತನಾಡಬೇಕು” ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳೇ ನಿಮ್ಮ ಹಣಕಾಸು ಸಚಿವರು. ಒಂದು ಬಾರಿಯಾದರೂ ಜಿಎಸ್‍ಟಿ ಕೌನ್ಸಿಲ್ ಸಭೆಗೆ ಹೋಗಿದ್ದಾರಾ? ಅವರು ಹಣಕಾಸು ಸಚಿವರಾಗಿ ರಾಜ್ಯವನ್ನು ಪ್ರತಿನಿಧಿಸುತ್ತಿಲ್ಲ ಎಂದು ಟೀಕಿಸಿದರು. ಹಿಂದಿನ ಅವಧಿ ಮತ್ತು ಈ ಅವಧಿಯಲ್ಲೂ ಆ ಕೆಲಸ ಮಾಡಿಲ್ಲ ಎಂದರು. ಬಿಜೆಪಿ ಕೇಂದ್ರ ಸರಕಾರವು ವಿಕೇಂದ್ರೀಕರಣ ಮೂಲಕ ವಿವಿಧ ರಾಜ್ಯಗಳಿಗೆ ಹಣಕಾಸು ಹಂಚಿಕೆ ಮಾಡಿದೆ. ಯುಪಿಎ ಸರಕಾರದಲ್ಲಿ ಎಷ್ಟು ಹಣ ಕೊಟ್ಟಿದ್ದರು; ನಮ್ಮ ಸರಕಾರದಲ್ಲಿ ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ಗಮನಿಸಿ ಮಾತನಾಡಬೇಕಿತ್ತು ಎಂದು ಸವಾಲೆಸೆದರು.

Read More

ರಾಯ್‍ಪುರ: ಚತ್ತೀಸ್‍ಗಢದ (Chhattisgarh) ನಕ್ಸಲ್ ಪೀಡಿತ ಜಿಲ್ಲೆಯಾದ ದಂತೇವಾಡದಲ್ಲಿ (Dantewada) ನಕ್ಸಲರು ನಿರ್ಮಾಣ ಮಾಡಿಕೊಂಡ 10 ಅಡಿ ಆಳದ ಸುಮಾರು 130 ಅಡಿ ಉದ್ದದ ಸುರಂಗ ಪತ್ತೆಯಾಗಿದೆ. ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ ನಡೆಸಿ ಭದ್ರತಾ ಪಡೆಗಳು ಹಿಂತಿರುಗುತ್ತಿದ್ದಾಗ ಈ ಅಡಗುತಾಣ ಪತ್ತೆಯಾಗಿದೆ. 10 ಅಡಿ ಆಳದ ಸುರಂಗವನ್ನು ಮೊದಲು ಸ್ಥಳೀಯ ಬುಡಕಟ್ಟು ಯುವಕರನ್ನು ಒಳಗೊಂಡಿರುವ ಜಿಲ್ಲಾ ಮೀಸಲು ಗಾರ್ಡ್ ಜವಾನರು ಪತ್ತೆ ಹಚ್ಚಿದ್ದಾರೆ. ಇದುವರೆಗೂ ಪತ್ತೆಯಾದ ನಕ್ಸಲರ ಅಡುಗು ತಾಣಗಳಲ್ಲಿ ಇದು ಭಾರೀ ದೊಡ್ಡದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಜನರ ಸಂಚಾರ ಇಲ್ಲದ ಪ್ರದೇಶದಲ್ಲಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ. ಜಿಲ್ಲಾ ಮೀಸಲು ಗಾರ್ಡ್‍ನ ನಮ್ಮ ಜವಾನರೊಬ್ಬರು ಅದನ್ನು ಪತ್ತೆಹಚ್ಚಿದ್ದಾರೆ. ಇದು ಹೊಂಚು ಹಾಕಿ ದಾಳಿ ನಡೆಸಲು ನಿರ್ಮಾಣ ಮಾಡಿರಬಹುದು ಎಂದು ಪೊಲೀಸರು (Police) ತಿಳಿಸಿದ್ದಾರೆ. ಜಿಲ್ಲಾ ಪೊಲೀಸರು ಹಂಚಿಕೊಂಡಿರುವ ಸುರಂಗದ ವೀಡಿಯೊದಲ್ಲಿ ಸುರಂಗದ ಪ್ರವೇಶದ ಸ್ಥಳಗಳನ್ನು ಮಣ್ಣು ಮತ್ತು ಕೋಲುಗಳಿಂದ ಮುಚ್ಚಲಾಗಿದೆ. ಕಿರಿದಾದ ಸುರಂಗವು ಪ್ರತಿ ಆರು ಮೀಟರ್ ತೆರೆದುಕೊಂಡಿದೆ.…

Read More

ಮೈಸೂರು: ಪತ್ನಿಯ ಶೀಲ ಶಂಕಿಸಿ 12 ವರ್ಷಗಳ ಕಾಲ ಪತ್ನಿಯನ್ನ ದಿಗ್ಬಂಧನದಲ್ಲಿ ಇರಿಸಿದ್ದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಹೆಚ್.ಮಟಕೆರೆ ಗ್ರಾಮದಲ್ಲಿ ನಡೆದಿದೆ. ಗೃಹಿಣಿ ಸಹನಾಳನ್ನು ಪತಿ ಸಣ್ಣಾಲಯ್ಯ 12 ವರ್ಷದಿಂದ ಅಜ್ಞಾತವಾಸದಲ್ಲಿರಿಸಿರುವ ಘಟನೆ ನಡೆದಿದೆ. ಅಂದಹಾಗೆ, ಸಣ್ಣಾಲಯ್ಯನಿಗೆ ಸಹನಾ 3ನೇ ಪತ್ನಿ. ಸಣ್ಣಾಲಯ್ಯ ಸ್ವಭಾವತಃ ಅನುಮಾನದ ಪಿಶಾಚಿ. ಅದರಿಂದಾಗಿಯೇ ಆತನ ಇಬ್ಬರು ಪತ್ನಿಯರು ಬೇಸತ್ತು ದೂರವಾಗಿದ್ದರು. 12 ವರ್ಷದ ಹಿಂದೆ ಸಹನಾ ಸಣ್ಣಾಲಯ್ಯನನ್ನು ವಿವಾಹವಾಗಿದ್ದರು. ಸಹನಾ – ಸಣ್ಣಾಲಯ್ಯ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈಗ 3ನೇ ಪತ್ನಿಯಾದ ಸಹನಾ ಮೇಲೂ ತನ್ನ ಅನುಮಾನದ ದೃಷ್ಟಿ ಹರಿಸಿದ್ದ ಆತ, ಮನೆಯಲ್ಲಿ ದಿಗ್ಬಂಧನ ಮಾಡಿ, ಮನೆ ಭದ್ರಪಡಿಸಿ ಯಾರೊಂದಿಗೂ ಮಾತನಾಡದಂತೆ ಎಚ್ಚರ ವಹಿಸಿದ್ದ. ಇದು ದಂಪತಿಗಳಿಬ್ಬರ ನಡುವೆ ಕಲಹಕ್ಕೆ ಕಾರಣವಾಗಿ, ಹಲವಾರು ಬಾರಿ ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ನಡೆದಿತ್ತು. ಸಣ್ಣಾಲಯ್ಯ ತಪ್ಪು ತಿದ್ದಿಕೊಳ್ಳದೇ ತನ್ನ ಚಾಳಿ ಮುಂದುವರೆಸುತ್ತಿದ್ದ. ವಿಷಯ ತಿಳಿದು ವಕೀಲ ಸಿದ್ದಪ್ಪಾಜಿ, ಸಾಂತ್ವನ ಕೇಂದ್ರದ ಜಶೀಲ, ಎ.ಎಸ್.ಐ ಸುಭಾನ್ ಸೇರಿ ಇತರರ ತಂಡ ಸಹನಾ…

Read More

ಬೆಂಗಳೂರು: ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷರ  ನೇಮಕಾತಿ ಪಟ್ಟಿ ಬಿಡುಗಡೆಗೆ ಎದ್ದಿರುವ ಗೊಂದಲ ಬಗೆಹರಿಸಲು  ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಸಚಿವರ ಡಿನ್ನರ್ ಮೀಟಿಂಗ್ ನಡೆಯಿತು. ಎಲ್ಲಾ ಸಚಿವರನ್ನು ಊಟಕ್ಕೆ ಆಹ್ವಾನಿಸಿದ್ದ ಸಿಎಂ, ನಿಗಮ, ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿ ಬಿಡುಗಡೆಯ ನಂತರ ಎದ್ದಿರುವ ಗೊಂದಲ ಬಗೆಹರಿಸಲು ಮುಂದಾದರು ಎಂದು ಹೇಳಲಾಗಿದೆ. ಕೆಲವು ಸಚಿವರ ಗಮನಕ್ಕೆ ತಾರದೆ ನೇಮಕಾತಿ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ವೇಳೆ, ಲೋಕಸಭಾ ಚುನಾವಣೆ ವಿಚಾರದ ಬಗ್ಗೆಯೂ ಅನೌಪಚಾರಿಕವಾಗಿ ಚರ್ಚಿಸಲಾಗಿದೆ. ಮುಂದಿನ ತಂತ್ರಗಾರಿಕೆ, ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ. ಡಿನ್ನರ್ ಮೀಟಿಂಗ್​​ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಭಾಗವಹಿಸಿದ್ದರು. ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವ ಕುರಿತೂ ಚರ್ಚೆ ನಡೆದಿದೆ. ಸಚಿವರಿಗೆ ಕೆಲವು ಸೂಚನೆಗಳನ್ನು ನೀಡಿದ ಸಿದ್ದರಾಮಯ್ಯ, ಕಾಂಗ್ರೆಸಿನಿಂದ ಆಗುತ್ತಿರುವ ಎಡವಟ್ಟುಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಶಾಸಕರು ಕೊಟ್ಟ ಹೇಳಿಕೆಯನ್ನು ಬಿಜೆಪಿ ದೊಡ್ಡದು ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಅನಗತ್ಯ ಹೇಳಿಕೆಗಳನ್ನು ನೀಡಬೇಡಿ. ಶಾಸಕಾಂಗ ಸಭೆಯಲ್ಲಿ ಶಾಸಕರಿಗೂ ಹೇಳುತ್ತೇನೆ.‌ ನಮ್ಮ ಮಾತು‌ ಬಿಜೆಪಿಗೆ…

Read More

ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಭಾರತದ ಜನತೆಯ ಕ್ಷಮೆಯಾಚಿಸಿ ಎಂದು ಮಾಲ್ಡೀವ್ಸ್‌ (Maldives) ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು (Mohamed Muizzu) ಅವರಿಗೆ ಮಾಲ್ಡೀವ್ಸ್ ಜುಮ್ಹೂರಿ ಪಕ್ಷದ (ಜೆಪಿ) ನಾಯಕ ಖಾಸಿಮ್ ಇಬ್ರಾಹಿಂ ಒತ್ತಾಯಿಸಿದ್ದಾರೆ. ಮಾಲ್ಡೀವಿಯನ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ದೇಶದ ಪ್ರಮುಖ ಪ್ರತಿಪಕ್ಷ MDP. ಈ ಪಕ್ಷ ದೇಶದ ಅಧ್ಯಕ್ಷರ ವಿರುದ್ಧ ದೋಷಾರೋಪಣೆಯ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಇದು ಸರ್ಕಾರದ ಪರ ಸಂಸದರು ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ಸದನದಲ್ಲಿ ಘರ್ಷಣೆ ಉಂಟುಮಾಡಿದ ನಂತರದ ಬೆಳವಣಿಗೆಯಾಗಿದೆ. ಯಾವುದೇ ದೇಶವಾಗಲಿ ಅಥವಾ ನಮ್ಮ ನೆರೆಹೊರೆಯ ದೇಶದ ಸಂಬಂಧದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ನಾವು ಮಾತನಾಡಬಾರದು. ನಮ್ಮ ರಾಜ್ಯಕ್ಕೆ ನಾವು ಬಾಧ್ಯತೆಯನ್ನು ಹೊಂದಿದ್ದೇವೆ. ಅದನ್ನು ಪರಿಗಣಿಸಬೇಕು ಎಂದು ಖಾಸಿಮ್‌ ತಿಳಿಸಿದ್ದಾರೆ. https://ainlivenews.com/rbi-gave-a-big-shock-to-paytm-ban-on-transactions-after-february-29/ ಡಿಕ್ರಿಯನ್ನು ರದ್ದುಗೊಳಿಸಬಾರದು. ಏಕೆಂದರೆ ಅದು ರಾಷ್ಟ್ರಕ್ಕೆ ನಷ್ಟವನ್ನು ಉಂಟುಮಾಡುತ್ತದೆ. ಅದನ್ನು ಮಾಡಲು ಸಾಧ್ಯವಿಲ್ಲ. ಇದನ್ನು ಮಾಡಬಾರದು ಎಂದು ನಾನು ಮುಯಿಜ್ಜುಗೆ ಹೇಳುತ್ತೇನೆ. ಚೀನಾ ಪ್ರವಾಸದ ನಂತರ…

Read More

ಗರ್ಭಿಣಿಯರು ದೈಹಿಕವಾಗಿ ಹಲವು ಬದಲಾವಣೆಗಳಿಗೆ ಒಳಗಾಗುತ್ತಾರೆ ದೃಷ್ಟಿಯ ಸಮಸ್ಯೆ ಕೂಡ ಈ ಸಂದರ್ಭದಲ್ಲಿ ಒಂದಾಗಿದ್ದು  ಬಹಳ ಜನಕ್ಕೆ ಇದರಿಂದ ಕಣ್ಣಿನ ಮೇಲೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಸಂಶೋಧನೆ ಪ್ರಕಾರ ಶೇಕಡ 70ರಷ್ಟು ಮಹಿಳೆಯರು ಗರ್ಭ ಧರಿಸಿರುವ ಮೇಲೆ ದೃಷ್ಟಿಯಲ್ಲಿ ಬದಲಾವಣೆ ಅನುಭವಿಸುತ್ತಾರೆ. ಗರ್ಭವಸ್ಥೆಯಲ್ಲಿ ಕಾಣಿಸಿಕೊಳ್ಳಬಹುದು ಲಕ್ಷಣಗಳು ತಾತ್ಕಾಲಿಕವಾಗಿರುತ್ತವೆ ಮಗುವಿನ ಜನನದ ನಂತರ ನಿವಾರಣೆಯಾಗುತ್ತದೆ ಹಾಗೆ ಗಂಭೀರ ಸಮಸ್ಯೆ ಏನೆಂದರೆ ತೇಲುವಂತೆ ಕಾಣುವುದು, ಕಳಪಡಿಸುವ ದೀಪಗಳು, ಪ್ರಭಾವವಲಯ ದೃಷ್ಟಿಗೆ ಕೆಲವು ಕಾಣದಿರುವುದು,  ಭಾಗಶಃ ದೃಷ್ಟಿ ನಷ್ಟದಿಂದ ಗಂಭೀರ ಸಮಸ್ಯೆ ಹೀಗೆ ಮಹಿಳೆಯರ ಮೇಲೆ ಇಂಥ ಪರಿಣಾಮಗಳು ಆಗುತ್ತವೆ ಒಂದು ವೇಳೆ ಇಂಥ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಕಾಣಬೇಕು ಎಚ್ಚರವಹಿಸಿ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಸಮಸ್ಯೆಯನ್ನು ನಿಯಂತ್ರಿಸಲು ನಿಯಮಿತವಾದ ಕಣ್ಣಿನ ಪರೀಕ್ಷೆ ರಕ್ತದೊತ್ತಡ ಹಾಗು ರಕ್ತದಲ್ಲಿನ ಸಕ್ಕರೆ ಅಂಶ ಇದೆಯೇ ಎಂದು ಪರೀಕ್ಷಿಸಬೇಕು ಕಾರ್ಬೋ ಹೈಡ್ರೇಟ್‌ ಇರುವಂತಹ ಆಹಾರ ಪದಾರ್ಥ ಮತ್ತು ಸಿಹಿಯುಕ್ತ ಪಾನಿಯ ಸೇವಿಸಬೇಡಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಟಮಿನ್…

Read More

ಡೊಳ್ಳು ಬಾರಿಸಿದ ಪವನ್ ಒಡೆಯರ್ ಮತ್ತೊಂದು ಗೂಗ್ಲಿಗೆ ಸಜ್ಜಾಗಿದ್ದಾರೆ. ಅರ್ಥಾತ್ ಪವನ್ ಒಡೆಯರ್ ತಮ್ಮದೇ ಒಡೆಯರ್ ಮೂವೀಸ್ ಬ್ಯಾನರ್ ನಡಿಯಲ್ಲಿ ಚೊಚ್ಚಲ ಬಾರಿಗೆ ನಿರ್ಮಾಣದ ಮಾಡಿದ್ದ ಡೊಳ್ಳು ಎಲ್ಲೆಡೆ ಮಾರ್ಧನಿಸಿತ್ತು. ಪ್ರಶಸ್ತಿಗಳ ಬೇಟೆಯಾಡಿತ್ತು. ರಾಷ್ಟ್ರಪ್ರಶಸ್ತಿಯಿಂದ ಹಿಡಿದು ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು. ಕರ್ನಾಟಕದ ಜನಪದ ಕಲೆ ಡೊಳ್ಳುಗೆ ಕೈಗನ್ನಡಿ ಹಿಡಿದ್ದ ಈ ಚಿತ್ರಕ್ಕೆ ಸಾಗರ್ ಪುರಾಣಿಕ್ ಆಕ್ಷನ್ ಕಟ್ ಹೇಳಿದ್ದರು. 2021 ರಲ್ಲಿ ಬಿಡುಗಡೆಯಾದ ಡೊಳ್ಳು ಸಿನಿಮಾ ಸಂಪ್ರದಾಯವನ್ನು ಪುನರುಜ್ಜೀವನಗೊಳಸಿ, ಸಾಂಸ್ಕೃತಿಕ ವೈವಿಧ್ಯತೆಯ ಮೇಲೆ ಬೆಳಕು ಚೆಲ್ಲಿತ್ತು. ಈ ಚಿತ್ರದ ಬಗ್ಗೆ ಇಷ್ಟೆಲ್ಲಾ ವಿವರ ಹೇಳೋದಿಕ್ಕೆ ಕಾರಣ ಈ ಜೋಡಿ ಮತ್ತೆ ಒಂದಾಗುತ್ತಿದೆ. ಡೊಳ್ಳು ಜೋಡಿ ಈಗ ಮತ್ತೊಂದು ಚಿತ್ರಕ್ಕಾಗಿ ಸಜ್ಜಾಗಿದೆ. ಒಡೆಯರ್ ಮೂವೀಸ್ ಬ್ಯಾನರ್ ಮೂರನೇ ಕಾಣಿಕೆಯಾಗಲಿರುವ ಈ ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಲಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ. ಉತ್ತರ ಕರ್ನಾಟಕದ ಕಥೆಯಾದ್ರೂ ಅದು ದೇಶ ಎಲ್ಲಾ ಸುತ್ತಲಿದೆ. ಇದೊಂದು ಹೊಸ ಬಗೆಯ…

Read More

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲಾ ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಅನುಭವಿ ಆರಂಭಿಕ ಬ್ಯಾಟರ್‌ ರೋಹಿತ್‌ ಶರ್ಮಾ ಅವರ ನಾಯಕತ್ವವನ್ನು ಟೀಮ್ ಇಂಡಿಯಾ ಮಾಜಿ ಚೀಫ್‌ ಸೆಲೆಕ್ಟರ್‌ ಮತ್ತು ಮಾಜಿ ವೇಗಿ ಚೇತನ್‌ ಶರ್ಮಾ ಗುಣಗಾನ ಮಾಡಿದ್ದಾರೆ. ಒಡಿಐ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಸೋಲಿಲ್ಲದ ಸರದಾರನಂತೆ ಫೈನಲ್‌ಗೆ ದಾಪುಗಾಲಿಟ್ಟಿತ್ತು. ಆದರೆ, ನವೆಂಬರ್ 19ರಂದು ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ವೈಫಲ್ಯ ಕಂಡು ರನ್ನರ್ಸ್‌ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟಿತು. “ತಂಡದ ಸಲುವಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿರುವ ಕೆಲವೇ ಆಟಗಾರರ ಪೈಕಿ ರೋಹಿತ್‌ ಶರ್ಮಾ ಒಬ್ಬರು. ತಂಡದ ಸಲುವಾಗಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. ವೈಯಕ್ತಿಕ ಗುರಿ ಸಾಧನೆ ಬಿಟ್ಟು ತಂಡಕ್ಕಾಗಿ ಆಡುವ ಆಟಗಾರ. ಮುಂಚೂಣಿಯಲ್ಲಿ ನಿಂತು ಜವಾಬ್ದಾರಿಯೊಂದಿಗೆ ತಂಡವನ್ನು ಈವರೆಗೆ ಮುನ್ನಡೆಸಿದ್ದಾರೆ. ಒಡಿಐನಲ್ಲಿ ಆರಂಭಿಕ ಬ್ಯಾಟರ್‌ಗಳು ಮೊದಲ 10 ಓವರ್‌ಗಳಲ್ಲಿ 80 ರನ್‌ ತಂದುಕೊಟ್ಟಾಗ ಉಳಿದ ಬ್ಯಾಟರ್‌ಗಳು ತಂಡದ ಮೊತ್ತವನ್ನು 300ರ ಗಡಿ ದಾಟಿಸಬಹುದು. ವಿಶ್ವಕಪ್‌ ಫೈನಲ್‌ನಲ್ಲಿ ಅದು ಸಾಧ್ಯವಾಗಲಿಲ್ಲ,” ಎಂದು ಖಾಸಗಿ ವಾಹಿನಿಗೆ…

Read More

ಕಳೆದ ಸಾಲಿನ ಮುಂಗಾರಿಗೆ ಹೋಲಿಸಿದರೆ, ಶೇ.86.65 ರಷ್ಟು ಇದ್ದ ರಾಗಿ ಇಳುವರಿ ಪ್ರಮಾಣ ಈ ಬಾರಿ ಅರ್ಧದಷ್ಟು ದಾಟಿದೆ ಶೇ.49 ರಷ್ಟು ಮಾತ್ರ ರಾಗಿಯ ಇಳುವರಿಯಾಗಿದೆ. ರಾಗಿಯು ಜಿಲ್ಲೆಯ ಮುಖ್ಯ ಬೆಳೆಗಳಲ್ಲಿ ಒಂದಾಗಿದೆ. ಕಳೆದ ವರ್ಷ 2022ರ ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ ಮಳೆಯಾಗಿತ್ತು. ಈ ಪರಿಣಾಮವಾಗಿ ಸಕಾಲದಲ್ಲಿಯೇ ಬಿತ್ತನೆಯಾಗಿತ್ತು. ಜಿಲ್ಲೆಯಲ್ಲಿ ಎಂಆರ್‌1, ಎಂಆರ್‌5, ಎಂಆರ್‌6, ಜಿಪಿಯು 28, ಜಿಪಿಯು 46 ರಾಗಿ ತಳಿಯನ್ನೇ ಬಿತ್ತನೆ ಮಾಡಲಾಗುತ್ತಿದೆ. ಜತೆಗೆ ರೈತರು ಸಹ ಕಳೆದ ಮುಂಗಾರಿನಲ್ಲಿ ಕೃಷಿ ಚಟುವಟಿಕೆ ನಡೆಸಿದ್ದರು. ಹಾಗಾಗಿ ಕಳೆದ ಹಂಗಾಮಿನಲ್ಲಿ ರಾಗಿ ಸಮೃದ್ಧವಾಗಿ ಬೆಳೆದಿತ್ತು. ಈ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿಇಳುವರಿ ಕಂಡಿತ್ತು. ಪ್ರತಿ ವರ್ಷದಂತೆ ಈ ಬಾರಿಯು 85 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ‍್ಯ ಆಗಬೇಕಿತ್ತು. ಅದರೆ, ಸಕಾಲದಲ್ಲಿ ಮಳೆಯಾಗದ ಕಾರಣ ಈ ಬಾರಿ 63 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಮಳೆ ಕೊರತೆ ಪರಿಣಾಮ ಬಿತ್ತನೆ ಕಾರ‍್ಯವೂ ಮುಂದೂಡುವ ಪರಿಸ್ಥಿತಿ ಎದುರಾಗಿತ್ತು. ಹಾಗಾಗಿ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌…

Read More

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳಿಗೆ ಬ್ರೇಕ್‌ ಹಾಕುವಂತೆ ಬಿಎಂಆರ್‌ಸಿಎಲ್‌ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಹೀಗಾಗಿ ನಮ್ಮ ಮೆಟ್ರೋ ಸಂಸ್ಥೆಯು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಈಗಾಗಲೇ ನಮ್ಮ ಮೆಟ್ರೋದಲ್ಲಿ ಹಲವು ನಿಮಯಗಳಿದ್ದು, ಅದನ್ನು ಮೀರಿದವರಿಗೆ ದಂಡ ಕೂಡ ವಿಧಿಸಲಾಗುತ್ತಿದೆ. ಇನ್ನು ದಂಡದ ದರವನ್ನು ನಮ್ಮ ಮೆಟ್ರೋ ರೈಲುಗಳಲ್ಲಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಹಾಕಲಾಗಿದೆ. ಈ ಪಟ್ಟಿಯಲ್ಲಿ ಒಂದು ನಿಯಮದ ದಂಡದ ದರ ಬದಲಾಗುತ್ತಿದ್ದು, ಒಂದಲ್ಲ, ಎರಡಲ್ಲ ಬರೋಬ್ಬರಿ 20ಪಟ್ಟು ಹೆಚ್ಚಿಸಲಾಗಿದೆ. ಒಮ್ಮೆ ಭೇಟಿ ನೀಡಿ ಮಹಿಳಾ ಪ್ರಯಾಣಿಕರ ಮೇಲಾಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಬ್ರೇಕ್‌ ಹಾಕಲು ನಮ್ಮ ಮೆಟ್ರೋ ಈ ದಂಡದ ಮೊತ್ತವನ್ನು ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಮ್ಮ ಮೆಟ್ರೋ ಅಸಭ್ಯ ವರ್ತನೆಗೆ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಈ ಮೊದಲು 500 ರೂಪಾಯಿ ಇದ್ದ ದಂಡವನ್ನು 10,000 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ವರದಿಯಾಗಿದೆ.…

Read More