Author: AIN Author

ಬೆಂಗಳೂರು: ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ (BMTC Accident) ಬಸ್​ಗೆ ಮತ್ತೊಂದು ಬಲಿಯಾಗಿದೆ. ಹರಿಶ್ಚಂದ್ರ ಘಾಟ್ ಬಳಿ  ಬಿಎಂಟಿಸಿ  ಬಸ್​ ಹರಿದು ಇಂಜಿನಿಯರ್‌ ವಿದ್ಯಾರ್ಥಿನಿ  ಮೃತಪಟ್ಟಿದ್ದಾಳೆ . ವಿದ್ಯಾರ್ಥಿನಿ ಕುಸುಮಿತಾ(21) ಮೃತ ದುರ್ದೈವಿಯಾಗಿದ್ದು ಅಪಘಾತದಿಂದ ವಿದ್ಯಾರ್ಥಿಗೆ ತಲೆ ಹಾಗೂ ಮುಖದ ಭಾಗಕ್ಕೆ ಬಲವಾದ ಗಾಯಗಳಾಗಿದ್ದು ಅವಳನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಪ್ರಾಣ ಹೋಗಿದೆ. ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿ ಕುಸುಮಿತಾ(21) ಅಪಘಾತಕ್ಕೆ ಬಲಿಯಾದ ವಿಧ್ಯಾರ್ಥಿನಿ.ಯಾಗಿದ್ದು ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಬಳಿಕ ಬಸ್‌ ಚಾಲಕ ಪರಾರಿಯಾಗಿದ್ದಾನೆ. ಈ ರೀತಿ ಚಾಲಕರ ನಿರ್ಲಕ್ಷ್ಯಕ್ಕೆ ಎಷ್ಟು ಜನ ಅಮಾಕರು ಬಲಿಯಾಗಬೇಕೆ ಗೊತ್ತಿಲ್ಲ ಇದರ ವಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ‘ಕಿಲ್ಲರ್’ ಬಿಎಂಟಿಸಿ! ಅಕ್ಟೋಬರ್ 09 : ಬಿಎಂಟಿಸಿಗೆ ಮೂರು ವರ್ಷದ ಮಗು ಬಲಿ ಅಕ್ಟೋಬರ್ 14 : ಬಸ್​ ಡಿಕ್ಕಿಗೆ ಇಂಜಿನಿಯರಿಂಗ್​ ವಿದ್ಯಾರ್ಥಿ ಸಾವು ಅಕ್ಟೋಬರ್ 22 : ಬೈಕ್​ಗೆ ಬಸ್​ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು ಅಕ್ಟೋಬರ್ 29 : ಬಿಎಂಟಿಸಿ ಬಸ್​ ಡಿಕ್ಕಿಗೆ…

Read More

ಚಾಮರಾಜನಗರ:- ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಂತಿರುವ ತಮಿಳುನಾಡಿನ ಬಣ್ಣಾರಿ ರಸ್ತೆಯ ದಿಂಬಂ ಘಾಟ್ ನ ರಸ್ತೆಯ ತಡೆಗೋಡೆ ಮೇಲೆ ಜೋಡಿ ಚಿರತೆಗಳು ವಿಶ್ರಮಿಸುತ್ತಿದ್ದ ದೃಶ್ಯ ಕಾರಿನಲ್ಲಿ ತೆರಳುತ್ತಿದ್ದವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದೀಗ ಸಖತ್ ವೈರಲ್ ಆಗಿದೆ. ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ದಿಂಬಂ ರಸ್ತೆಯ ತಡೆಗೋಡೆ ಮೇಲೆ ಜೋಡಿ ಚಿರತೆಗಳು ವಿಶ್ರಮಿಸುತ್ತ ಕುಳಿತಿದ್ದ ದೃಶ್ಯವನ್ನ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದವರು ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಈ ವೇಳೆ ಎರಡೂ ಚಿರತೆಗಳು ಗರ್ಜಿಸುತ್ತಾ ರಸ್ತೆ ಪಕ್ಕದಲ್ಲಿ ಕುಳಿತದನ್ನು ಕಂಡು ಪ್ರಯಾಣಿಕರು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಆದರೂ ಧೈರ್ಯದಿಂದಲೇ ಸಮೀಪದಲ್ಲಿದ್ದ ಚಿರತೆಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿದ್ದಾರೆ. ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಕೆಲವೊಮ್ಮೆ ಬಹಿರ್ದೆಸೆವೆ ತೆರಳಿ ಚಿರತೆ ದಾಳಿಗೆ ಒಳಗಾಗಿ ಮೃತ ಪಟ್ಟಿರುವ ಘಟನೆಗಳು ಈ ಹಿಂದೆ ನಡೆದಿತ್ತು. ಹಾಗಾಗಿ ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರವಾಹನ ಸವಾರರು ಜಾಗರೂಕರಾಗಿ ಚಲಿಸಿ ಎಂದು ಅರಣ್ಯ ಇಲಾಖೆ ಎಚ್ಚರಿಸಿದ್ದಾರೆ.

Read More

ಭಾರತ ಕ್ರಿಕೆಟ್‌ ತಂಡದ ಆಟಗಾರ ಹಾಗೂ ಕರ್ನಾಟಕ ರಣಜಿ ತಂಡದ ನಾಯಕ ಮಯಾಂಕ್ ಅಗರ್ವಾಲ್​ ಅವರಿಗೆ ವಿಮಾನದಲ್ಲಿ ವಿಷಪ್ರಾಶನ ಮಾಡಲಾಗಿದೆ ಎಂದು ವರದಿಯಾಗಿದೆ. ಮಯಾಂಕ್‌ ಅಗರ್ವಾಲ್‌ ವಿಮಾನದಲ್ಲಿ ನೀರು ಕುಡಿದ ಬೆನ್ನಲ್ಲಿಯೇ ಅವರು ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತ್ರಿಪುರಾದ ಅಗರ್ತಲದಿಂದ ಸೂರತ್​ಗೆ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಸೀಟಿನ ಮುಂಭಾಗದಲ್ಲಿ ಇರಿಸಲಾಗಿದ್ದ ನೀರನ್ನು ಮಾಯಾಂಕ್ ಕುಡಿದಿದ್ದರು. ನೀರು ಕುಡಿಯುತ್ತಿದ್ದಂತೆಯೇ ನಾಲಗೆ, ಬಾಯಿ, ಕೆನ್ನೆ ಸುಟ್ಟು ಹೋದ ಅನುಭವ ಆಗಿದೆ. ಮಾತನಾಡಲು ಸಾಧ್ಯವಾಗದೆ ಮಯಾಂಕ್ ಬಿದ್ದಿದ್ದಾರೆ. ಕೂಡಲೇ ಅವರನ್ನು ಅಗರ್ತಲದ ಐಎಲ್​ಎಸ್​ ಆಸ್ಪತ್ರೆಗೆ ರವಾನಿಸಲಾಗಿದೆ. ಮಯಾಂಕ್‌ ಅಗರ್ವಾಲ್‌ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಮಾನದ ಸಿಬ್ಬಂದಿ ನೀರಿನ ಬಾಟಲ್‌ ವಶಕ್ಕೆ ಪಡೆದುಕೊಂಡು, ತನಿಖೆ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ ಕುಡಿಯುವ ನೀರಿನಲ್ಲಿ ಆಸಿಡ್‌ ಮಿಶ್ರ ಮಾಡಿರುವ ಶಂಕೆ ವ್ಯಕ್ತವಾಗಿದೆ.

Read More

ಮೈಸೂರು:- ಹುಣಸೂರು ತಾಲೂಕಿನ ಕಡೇಮನಗುನಹಳ್ಳಿ ಗ್ರಾಮದಲ್ಲಿ ಮಗಳನ್ನು ಮದುವೆ ಮಾಡಿಕೊಡುವುದಾಗಿ 25 ಲಕ್ಷ ರೂ. ಹಣ ಪಡೆದು ವಂಚಿಸಿದ ಪ್ರಕರಣ ಈಗ ರೋಚಕ ತಿರುವು ಪಡೆದುಕೊಂಡಿದೆ. ವೆಂಕಟೇಶ್, ಲಕ್ಷ್ಮಿ ವಂಚಿಸಿದ ಕುಟುಂಬ. ವೆಂಕಟೇಶ್ ಕಳೆದ ವರ್ಷ ಮಗಳನ್ನು ಮದುವೆ ಮಾಡಿಕೊಡುವುದಾಗಿ ಅಶೋಕ್ ಎಂಬ ವ್ಯಕ್ತಿಗೆ ಒಪ್ಪಿಗೆ ನೀಡಿದ್ದರು. ಆದರೆ ಕೊನೆಗೆ ಮದುವೆಗೆ ಒಪ್ಪದೆ 2023ರ ಆಗಸ್ಟ್ 10 ರಲ್ಲಿ ಅಶೋಕ್ ಮೇಲೆ 850 ಅಡಿಕೆ ಮರ ಕಡಿದಿದ್ದ ಸುಳ್ಳು ಆರೋಪವನ್ನು ಕುಟುಂಬ ಮಾಡಿತ್ತು. ಇದೀಗ ಪ್ರಕರಣ ರೋಚಕ ತಿರುವು ಪಡೆದಿದೆ. ಕಳೆದ ವರ್ಷ ವೆಂಕಟೇಶ್, ಲಕ್ಷ್ಮಿ ದಂಪತಿ ತಮ್ಮ ಮಗಳನ್ನು ಅಶೋಕ್‌ಗೆ ಕೊಟ್ಟು ಮದುವೆ ಮಾಡುಕೊಡುವುದಾಗಿ ಒಪ್ಪಿಗೆ ನೀಡಿದ್ದರು. ಒಪ್ಪಂದದ ನಂತರ ಅಶೋಕ್ ಬಳಿ ಹುಡುಗಿ ಎರಡು ಲಕ್ಷ ಹಣ ಪಡೆದಿದ್ದು, ಆಕೆಯ ತಂದೆ 15 ಲಕ್ಷ ರೂ. ತಾಯಿ 8 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ. ಒಪ್ಪಂದದ ನಂತರ ಒಂದು ವರ್ಷದ ಅಂತರದಲ್ಲಿ 25 ಲಕ್ಷ ರೂ. ಹಣವನ್ನು ಕುಟುಂಬ ವಸೂಲಿ…

Read More

ಬೆಂಗಳೂರು: ಬೆಳಗ್ಗೆ ಅಮ್ಮ ತಿಂಡಿ ಕೊಡಲು ಲೇಟ್‌ ಮಾಡಿದಕ್ಕೆ ಮಗ ತಾಯಿಯನ್ನೇ ಕೊಲೆಗೈದ ಘಟನೆ  ಕೆ.ಆರ್. ಪುರಂನ ಜಸ್ಟೀಸ್ ಭೀಮಯ್ಯ ಲೇಔಟ್ ನಲ್ಲಿ ನಡೆದಿದೆ ಡಿಪ್ಲೋಮಾ ಓದುತ್ತಿದ್ದ  ತಿಂಡಿ ಕೊಡಲು ಲೇಟ್‌ ಮಾಡಿದ್ದೆ ತಡ ಸಿಟ್ಟಿಗೆದ್ದ ಮಗ ಪವನ್ (17) ತಾಯಿ ನೇತ್ರ(40 )ಗೆ ರಾಡ್‌ ನಿಂದ ಹೊಡೆದು ಕೊಲೆಗೈದಿರುವ ಘಟನೆ ಜಸ್ಟೀಸ್ ಭೀಮಯ್ಯ ಲೇಔಟ್ ನಲ್ಲಿನಡೆದಿದ್ದು ಆ ನಂತರ ತಾನೇ ಪೊಲೀಸರಿಗೆ ಶಣಾಗಿದ್ದಾನೆ. ಈ ಬಗ್ಗೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

Read More

ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ವಿಶಾಖಪಟ್ಟಣಂ ವೈಜಾಗ್‌ನ ಡಾ. ವೈಎಸ್ ರಾಜಶೇಖರ ರೆಡ್ಟಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ರಜತ್ ಪಟಿದಾರ್ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿದೆ. ಕೆ.ಎಲ್. ರಾಹುಲ್ ಹಾಗೂ ರವೀಂದ್ರ ಜಡೇಜಾ ಸ್ಥಾನಕ್ಕೆ ಹೊಸ ಆಟಗಾರರ ಎಂಟ್ರಿ ಆಗಿದೆ. ಮೊಹಮ್ಮದ್ ಸಿರಾಜ್​ಗೆ ವಿಶ್ರಾಂತಿ ನೀಡಲಾಗಿದೆ. ಮೂರನೇ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಸ್ಥಾನ ಪಡೆದುಕೊಂಡಿದ್ದಾರೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಆಂಗ್ಲರು ಮೊದಲ ಪಂದ್ಯ ಗೆದ್ದು 1-0 ಮುನ್ನಡೆಯಲ್ಲಿದ್ದರೆ, ಎರಡನೇ ಟೆಸ್ಟ್​ ಗೆದ್ದು ಭಾರತ ಕಮ್​ಬ್ಯಾಕ್ ಮಾಡುವ ಪ್ಲಾನ್​ ಮಾಡಿದೆ. ಭಾರತ ತಂಡ ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಟಿದಾರ್, ಕೆ.ಎಸ್ ಭರತ್ (ವಿ.ಕೀ.), ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ,…

Read More

ಬೆಂಗಳೂರು: ಶಾಲಾ-ಕಾಲೇಜುಗಳಿಗೆ ಮೊಬೈಲ್ (Mobile) ಕೊಂಡೊಯ್ಯಬಾರದು ಅನ್ನೋದು ನಿಯಮ. ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ರೆ ಮೊಬೈಲ್ ಕಥೆ ಅಷ್ಟೆ. ಫೈನ್ ಹಾಕೋದು, ಪೇರೆಂಟ್ಸ್ ಗೆ ಕಂಪ್ಲೆಂಟ್ ಮಾಡೋದು ಮಾಡಿ ವಿದ್ಯಾರ್ಥಿಗಳಲ್ಲಿ ಲೆಕ್ಚರರ್ಸ್ ಸದಾ ಭಯ ಇಟ್ಟಿರ್ತಾರೆ. ಇಷ್ಟಿದ್ದರು ಕೂಡ ಕಾಲೇಜು ವಿದ್ಯಾರ್ಥಿಗಳು ಕದ್ದು ಮುಚ್ಚಿ ಮೊಬೈಲ್ ಬಳಸ್ತಾರೆ. ವಿರಾಮದಲ್ಲೋ, ಲಂಚ್ ಬ್ರೇಕ್, ಕಾಲೇಜು ಸಮಯ ಮುಗಿದ ಬಳಿಕ ಮೊಬೈಲ್ ಬಳಸಿದ್ರೆ ಯಾರೂ ಕೇಳೊಕೆ ಬರೊಲ್ಲ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪ್ರಿನ್ಸಿಪಾಲ್ (Principal) ಮೊಬೈಲ್ ಹೊಡೆದು ಹಾಕಿದ್ದಾರೆ ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ ಹೊಸಕೋಟೆಯ (Hosakote) ಖಾಸಗಿ ಕಾಲೇಜಿನ ವಿದ್ಯಾರ್ಥಿ ಸೂರ್ಯ ಮೊಬೈಲ್ ತೆಗೆದುಕೊಂಡು ಹೋಗಿದ್ದ. ಈ ಹಿಂದೆಯೇ ಕ್ಲಾಸ್ ರೂಂಗೆ ಮೊಬೈಲ್ ತರದಂತೆ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್ ನಾಗರಾಜ್ ವಾರ್ನ್ ಮಾಡಿದ್ರಂತೆ. ಪ್ರಿನ್ಸಿಪಾಲ್ ಮಾತಿಗೆ ಕಿಮ್ಮತ್ತು ಕೊಡದ ವಿದ್ಯಾರ್ಥಿಗಳು, ಕಾಲೇಜಿಗೆ ಮೊಬೈಲ್ ಕೊಂಡೊಯ್ತಿದ್ರು. ಪಾಠದ ನಡುವೆಯೇ ಮೊಬೈಲ್‍ನಲ್ಲಿ ಆಟ ಕಾಮನ್ ಆಗೋಗಿತ್ತು. ವೆಲ್ಡಿಂಗ್ ಟ್ರೈನಿಂಗ್ ಕ್ಲಾಸ್ ನಡೆಯುತ್ತಿರೋ ವೇಳೆ ಸೂರ್ಯ ಹಾಗೂ ಆತನ ಸ್ನೇಹಿತರು ರೀಲ್ಸ್…

Read More

ಕೋಲ್ಕತಾ :- ಚಿಕ್ಕಪ್ಪನಿಂದಲೇ 11 ವರ್ಷದ ಬಾಲಕಿಯ ಶಿರಚ್ಛೇದ ನಡೆದಿದ್ದು, ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಪಿ ಬಾಲಕಿಯ ಶಿರಚ್ಛೇದ ಮಾಡುವ ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಿದ್ದನೆ ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಜನವರಿ 29 ರಿಂದ ನಾಪತ್ತೆಯಾಗಿದ್ದ ಬಾಲಕಿಯ ಮುಂಡ ಮತ್ತು ತಲೆ ಮಾಲ್ಡಾ ನಗರದ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದೆ. ಹುಡುಗಿಯ 27 ವರ್ಷದ ಚಿಕ್ಕಪ್ಪನನ್ನು ಸಿಸಿಟಿವಿ ಫೂಟೇಜ್ ಮೂಲಕ ಪತ್ತೆಹಚ್ಚಲಾಗಿದೆ. ಹುಡುಗಿ ಕಾಣೆಯಾಗುವ ಮೊದಲು ಆತ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದ. ಆರೋಪಿ ಮೊದಲಿಗೆ ಪೊಲೀಸರನ್ನು ದಾರಿತಪ್ಪಿಸಲು ಪ್ರಯತ್ನಿಸಿದ. ಆದರೆ ನಂತರ ಆಕೆಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವ್ಯಕ್ತಿಯನ್ನು ಬಂಧಿಸಿ 12 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ನಗರದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದು, ಅಮಾನುಷವಾಗಿ ಕೊಲೆ ಮಾಡಿರುವ ಬಾಲಕಿಯ ಚಿಕ್ಕಪ್ಪನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸಿದ್ದಾರೆ. ಘಟನೆಯನ್ನು ಖಂಡಿಸಿ ಬಿಜೆಪಿ, ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ(ಎಂ)…

Read More

ಸಾಕಷ್ಟು ಮಂದಿ ಯಾವುದೇ ಉಪಯೋಗ ಇಲ್ಲ ಎಂದು ಈರುಳ್ಳಿ ಸಿಪ್ಪೆಯನ್ನು ತಿಪ್ಪೆಗೆ ಸುರಿಯುತ್ತಾರೆ. ಆದರೆ ಕೆಲವು ಜನರಿಗೆ ಮಾತ್ರ ಈರುಳ್ಳಿ ಸಿಪ್ಪೆಯನ್ನು ಕೂಡಾ ಉಪಯೋಗಿಸಬಹುದು ಎಂಬ ಬಗ್ಗೆ ತಿಳಿದಿರುತ್ತದೆ. ಅವುಗಳಿಂದಾಗುವ ಪ್ರಯೋಜನಗಳನ್ನು ತಿಳಿದರೆ ನೀವು ಕೂಡಾ ನಾಳೆಯಿಂದ ಈರುಳ್ಳಿ ಸಿಪ್ಪೆಯನ್ನು ಬಳಸಲು ಆರಂಭಿಸುತ್ತೀರಿ ಈರುಳ್ಳಿ ಸಿಪ್ಪೆಗಳನ್ನು ಒಣಗಿಸಿ ಸಂಗ್ರಹಿಸಿಟ್ಟು ಅಡುಗೆಯಲ್ಲಿ ಬಳಸಬಹುದು. ಅವು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈರುಳ್ಳಿ ಸಿಪ್ಪೆಯು ಅನೇಕ ಪೋಷಕಾಂಶಗಳ ಮೂಲವಾಗಿದೆ. ಇದು ವಿಟಮಿನ್ ಎ ಅನ್ನು ಹೊಂದಿರುತ್ತದೆ. ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸುತ್ತದೆ. ಅಲ್ಲದೆ ದೇಹಕ್ಕೆ ಅನೇಕ ರೀತಿಯಲ್ಲಿ ಶಕ್ತಿ ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಇ ಕೂಡ ಇದೆ. ಇದು ಚರ್ಮಕ್ಕೆ ತುಂಬಾ ಅವಶ್ಯಕ. ಹಾಗಂತಾ ಒಣ ಸಿಪ್ಪೆಯನ್ನು ತಿನ್ನೋದು ಹೇಗೆ ಎಂದು ನೀವು ಪ್ರಶ್ನಿಸಬಹುದು. ಹೀಗಾಗಿಯೇ ನಾವು ಈರುಳ್ಳಿ ಸಿಪ್ಪೆಯನ್ನು ಅಡುಗೆಯಲ್ಲಿ ಹೇಗೆ ಬಳಸುವುದು ಎಂದು ಇಲ್ಲಿ ಹೇಳುತ್ತೇವೆ ಕೇಳಿ. ಸಾಂಬಾರುಗಳಲ್ಲಿ ಬಳಸಿ ಸೊಪ್ಪಿನ ಸಾರು ಇಷ್ಟ ಪಡುವವರು ಬಹಳ ಮಂದಿ ಇದ್ದಾರೆ.…

Read More

ಬೆಂಗಳೂರು: ಇದೇ ಮೊದಲ ಬಾರಿಗೆ ಕಾಲೇಜು ಆವರಣದಲ್ಲಿ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, 23 ಕಾಲೇಜುಗಳ 800 ವಾಹನಗಳ ಮಾಲೀಕರಿಗೆ ದಂಡ ಹಾಕಿದ್ದಾರೆ.‌ ಅಪ್ರಾಪ್ತ ಮಕ್ಕಳಿಗೆ ಬೈಕ್‌ ಕೊಟ್ಟು ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪದಡಿ ಪೋಷಕರಿಗೆ ದಂಡ ವಿಧಿಸಲಾಗಿದೆ. ಮಕ್ಕಳಿಗೆ ಬೈಕ್‌ ಕೊಡುವ ಮುನ್ನ ಎಚ್ಚರ ವಹಿಸಬೇಕು ಎಂದು ಅವರ ಪೋಷಕರಿಗೆ ಸಲಹೆ ನೀಡಿದ್ದಾರೆ ವಿದ್ಯಾರ್ಥಿಗಳು ಮಾಡುವ ತಪ್ಪಿಗೆ ಪೋಷಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಲೈಸೆನ್ಸ್ ಇಲ್ಲದೆ ವಿದ್ಯಾರ್ಥಿಗಳು ವಾಹನಗಳನ್ನ ಚಲಾಯಿಸುತ್ತಿದ್ದರು. ಇದನ್ನು ಗಮನಿಸಿರುವ ಪೊಲೀಸರು ಕಾರ್ಯಾಚರಣೆ ನಡೆಸಿ, 23 ಕಾಲೇಜು 800 ವಾಹನಗಳ ಮಾಲೀಕರಿಗೆ ದಂಡ ಹಾಕಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಸರ್ಕ್ಯೂಲರ್ ಹೊರಡಿಸಲು ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಅಪ್ರಾಪ್ತರು ವಾಹನ ತರದಂತೆ ಸರ್ಕ್ಯೂಲರ್ ಹೊರಡಿಸಬೇಕು ಎಂದು ತಿಳಿಸಿದ್ದಾರೆ. ತಪ್ಪಿದರೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಾಲೇಜು ಆವರಣದಲ್ಲಿದ್ದ ಸುಮಾರು 800 ವಾಹನಗಳಿಗೆ ಈಗಾಗಲೇ ದಂಡ ಬಿದ್ದಿದೆ. ಪರೀಕ್ಷೆ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುವಂತಿಲ್ಲ.…

Read More