Author: AIN Author

ಶಿವಮೊಗ್ಗ:- ಪ್ರತ್ಯೇಕ ದಕ್ಷಿಣ ಭಾರತ ದೇಶದ ಬಗ್ಗೆ ಸಂಸದ ಡಿಕೆ ಸುರೇಶ್ ಮಾತಾಡಿರುವುದನ್ನು ಸಿದ್ದರಾಮಯ್ಯ ಒಪ್ಪಿಲ್ಲ, ಅವರ ನಿಲುವನ್ನು ತಾನು ಸ್ವಾಗತಿಸುವುದಾಗಿ ಈಶ್ವರಪ್ಪ ಹೇಳಿದರು. ಸುರೇಶ್ ಮತ್ತು ಡಿಕೆ ಶಿವಕುಮಾರ್ ಜಿನ್ನಾ ಸಂಸ್ಕೃತಿಯ ಪ್ರತಿಪಾದಕರಾಗಿದ್ದಾರೆ, ಭಾರತ ಎರಡು ಹೋಳಾಗಿ ಹಿಂದೂಸ್ತಾನ-ಪಾಕಿಸ್ತಾನ ಅಗಿದ್ದು ಅವರಿಗೆ ಸಮಾಧಾನವಾಗಿಲ್ಲ, ಭಾರತೀಯರೆಲ್ಲ ಇನ್ನೂ ಆ ನೋವಿನಿಂದ ಹೊರಬಂದಿಲ್ಲ, ಅದರೆ ಇವರು ದೇಶವನ್ನು ಮತ್ತಷ್ಟು ಒಡೆಯುವ ಹುನ್ನಾರ ಮಾಡಿದಂತಿದೆ ಎಂದು ಈಶ್ವರಪ್ಪ ಹೇಳಿದರು. ಸಿದ್ದರಾಮಯ್ಯ ಅವರು ಸುರೇಶ್ ಹೇಳಿರುವುದನ್ನು ಒಪ್ಪಿಲ್ಲ ಓಕೆ; ಅದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸೋನಿಯ ಗಾಂಧಿ ಏನು ಹೇಳುತ್ತಾರೆ ಅನೋದು ಬಹಳ ಮುಖ್ಯ, ಅವರ ಅಭಿಪ್ರಾಯಗಳನ್ನು ದೇಶದ ಮುಂದೆ ಇಡಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.

Read More

ನೆಲಮಂಗಲ: ಕತ್ತು ಕೊಯ್ದ ಯುವಕನ ಬರ್ಭರ ಕೊಲೆ ನಡೆದ ಘಟನೆ ನೆಲಮಂಗಲ ಸಮೀಪದ ಸೆಂಚುರಿ ಪಾರ್ಕ್ ಬಡಾವಣೆ ರೈಸ್ ಮಿಲ್ ಹಿಂಭಾಗ ಹುಸ್ಕೂರು ಬಳಿ ಜರುಗಿದೆ. ಶ್ರೀನಿವಾಸ್ 28 ಮೃತ ಆಟೋ ಚಾಲಕ. ಮೃತ ಶ್ರೀನಿವಾಸ್ ಮೂಲತಃ ಬೆಂಗಳೂರಿನ ತಣಿಸಂದ್ರ ಮೂಲದವ ಎನ್ನಲಾಗಿದೆ. ಹಣಕಾಸಿನ ವಿಚಾರದಲ್ಲಿ ಗಲಾಟೆ ನಡೆದು ಕೊಲೆ ಶಂಕೆ ವ್ಯಕ್ತವಾಗಿದೆ. ಸ್ಥಳಯರ ಮಾಹಿತಿ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಾಲಿವುಡ್ ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಮ್ಯಾನೇಜರ್‌ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ ನಟಿಗೆ 32 ವರ್ಷ ವಯಸ್ಸಾಗಿತ್ತು. “ಪೂನಂ ಪಾಂಡೆ ಅವರು ಕೊನೆಯುಸಿರೆಳೆದಾಗ ಅವರ ತವರು ಕಾನ್ಪುರದಲ್ಲಿದ್ದರು. ಅವರ ಅಂತ್ಯಕ್ರಿಯೆಯ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ” ಎಂದು ಅವರ PR ತಂಡ ಹೇಳಿಕೆಯಲ್ಲಿ ತಿಳಿಸಿದೆ. “ಈ ಮುಂಜಾನೆ ನಮಗೆ ಕಠಿಣವಾಗಿದೆ. ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದೇವೆ ಎಂದು ನಿಮಗೆ ತಿಳಿಸಲು ತುಂಬಾ ದುಃಖವಾಗಿದೆ. ಅವಳೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವಂತ ರೂಪವೂ ಶುದ್ಧ ಪ್ರೀತಿ ಮತ್ತು ದಯೆಯಿಂದ ಭೇಟಿಯಾಯಿತು” ಎಂದು ತಂಡವು ಮತ್ತಷ್ಟು ಹೇಳಿದೆ. ಗರ್ಭಕಂಠದ ಕ್ಯಾನ್ಸರ್‌ನ ಕಾರಣದಿಂದಾಗಿ ಇಂದು ನಾವು ಪೂನಮ್‌ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ದುಃಖವಾಗುತ್ತಿದೆ. ಆಕೆಯೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವಗಳಿಗೂ ಶುದ್ಧ ಪ್ರತಿ ಹಾಗೂ ದಯೆಯಿಂದ ಭೇಟಿಯಾಗುತ್ತಿದ್ದರು. ಈ ದುಃಖದ ಸಮಯದಲ್ಲಿ ನಾವು ನಮ್ಮ ಖಾಸಗಿತನಕ್ಕಾಗಿ ವಿನಂತಿ ಮಾಡುತ್ತಿದ್ದೇವೆ. ಆಕೆಯೊಂದಿಗೆ ಹಂಚಿಕೊಂಡ ಎಲ್ಲಾ ಕ್ಷಣಗಳನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ’…

Read More

ಬೆಳಗಾವಿ:- ಚಿಕ್ಕೋಡಿ ತಾಲ್ಲೂಕಿನ ಕೆರೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪ್ರಕಾಶ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಸ್ಪರ್ಧಿಸುತ್ತೀರಾ ಅಂತ ಕೇಳಿದಾಗ ಕೆಂಡಾಂಡಲರಾದರು. ಹೈಕಮಾಂಡ್ ತನಗೆ ಸ್ಪರ್ಧಿಸಲು ಹೇಳಿದರೂ ಕೇಳಲ್ಲ, ಎಂಪಿಯಾಗಿ ದೆಹಲಿಗೆ ಹೋಗುವುದು ಸುತಾರಾಂ ಇಷ್ಟವಿಲ್ಲ ಎಂದು ತಮ್ಮ ಗಿರಿಜಾ ಮೀಸೆಯಿಂದ ಜನರ ನಡುವೆ ಕೂಡಲೇ ಗುರುತಿಸಲ್ಪಡುವ ಹುಕ್ಕೇರಿ ಹೇಳುತ್ತಾರೆ. ತನಗೆ ಫುಟ್ಬಾಲ್ ಆಗೋದು ಇಷ್ಟವಿಲ್ಲ, ಇಲ್ಲಿಂದ ಒದ್ದರೆ ದೆಹಲಿ, ಅಲ್ಲಿಂದ ಒದ್ದರೆ ಇಲ್ಲಿ-ಬೇಕಾಗಿಲ್ಲ, ಶಿಕ್ಷಕರ ಕ್ಷೇತ್ರದ ಸದಸ್ಯನಾಗೇ ಮುಂದುವರಿಯುತ್ತೇನೆ ಎಂದು ಹೇಳಿದ ಅವರು ಯಾರ ಹೆಸರನ್ನೂ ಕೂಡ ಶಿಫಾರಸ್ಸು ಮಾಡಲ್ಲ, ಚಿಕ್ಕೋಡಿಯಿಂದ ಯಾರು ಸ್ಪರ್ಧಿಸುತ್ತಾರೆ ಅನ್ನೋದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ ಎಂದರು.

Read More

ಚಿಂತಾಮಣಿ:- ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಬೈನಹಳ್ಳಿ ಗ್ರಾಮದ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು ವಿದ್ಯಾರ್ಥಿನಿಯಿಂದ ಶೌಚಗೃಹ ಕ್ಲೀನಿಂಗ್ ವಿಡಿಯೋ ವೈರಲ್ ಆಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶೌಚಗೃಹ ಸ್ವಚ್ಛಗೊಳಿಸಲು ಬಳಸಬಾರದು ಎಂಬ ಶಿಕ್ಷಣ ಇಲಾಖೆಯ ಆದೇಶವಿದೆ. ಆದರೆ ಈ ಆದೇಶವನ್ನು ಧಿಕ್ಕರಿಸಿ ಶಿಕ್ಷಕರು ವಿದ್ಯಾರ್ಥಿಗಳ ಕೈಯಲ್ಲಿ ಶೌಚಾಲಯ ಕ್ಲೀನಿಂಗ್ ಮಾಡಿಸಿದ್ದಾರೆ. ವಿದ್ಯಾರ್ಥಿನಿ ಶೌಚಾಲಯ ಕ್ಲೀನ್ ಮಾಡುತ್ತಿದ್ದ ವಿಡಿಯೋವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ. ಘಟನೆಗೆ ಕಾರಣವಾದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸ್ಥಳೀಯರು ಇದೀಗ ಆಗ್ರಹಿಸಿದ್ದಾರೆ

Read More

ಬೆಂಗಳೂರು : ಕಾಂಗ್ರೆಸ್ಸಿನ ತುಕ್ಡೇ ತುಕ್ಡೇ ಗ್ಯಾಂಗ್‌ ಗುಲಾಮರು ಲೋಕಸಭಾ ಚುನಾವಣೆ ಸಮೀಪ ಬರುತ್ತಿದ್ದಂತೆ ಬಾಲ ಬಿಚ್ಚುತ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಸೋತು ಸುಣ್ಣವಾಗಿರುವ ಕಾಂಗ್ರೆಸ್ ಈಗ ದೇಶ ವಿಭಜಿಸುವ ಕುತಂತ್ರಕ್ಕೆ ಇಳಿಯುತ್ತಿದೆ ಎಂದು ಕುಟುಕಿದೆ. ದೇಶ ಒಡೆಯಲು ಕಾಂಗ್ರೆಸ್​ ಇದುವರೆಗೂ ಮಾಡಿರುವ ಕುತಂತ್ರಗಳನ್ನು ಬಿಜೆಪಿ ಪಟ್ಟಿ ಮಾಡಿದೆ. ಜಿನ್ನಾ-ನೆಹರು ಕುತಂತ್ರದ ಫಲ ಪಾಕಿಸ್ಥಾನ ಸೃಷ್ಟಿ. ದೇಶ ಒಡೆಯಲು ನೆಹರು ಅವರಿಂದ 370ನೇ ವಿಧಿ ಗಿಫ್ಟ್. ಖಲಿಸ್ಥಾನಿ ಉಗ್ರ ಭಿಂದ್ರನ್‌ ವಾಲೆಗೆ ಇಂದಿರೆಯ ಬಲ. ಯಾತ್ರೆ ಮಾಡುತ್ತಾ ದೇಶ ವಿರೋಧಿಗಳನ್ನು ಒಂದುಗೂಡಿಸಿದ ರಾಹುಲ್. ಸಂಸದ ಡಿ.ಕೆ. ಸುರೇಶ್‌ ಅವರಿಂದ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಎಂದು ಛೇಡಿಸಿದೆ. ಡಿಕೆಸು ಜವಾಬ್ದಾರಿ ಅರಿತು ಮಾತನಾಡಬೇಕು ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಕೂಗೆಬ್ಬಿಸಿದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ತನ್ನ ಜವಾಬ್ದಾರಿ ಅರಿತು…

Read More

ಪೀಣ್ಯ ದಾಸರಹಳ್ಳಿ‌: ನನ್ನ ಕ್ಷೇತ್ರದಲ್ಲಿ ಕಳಪೆ ಕಾಮಾಗಾರಿಗೆ ಅವಕಾಶವಿಲ್ಲ,ಯಾವುದೇ ಕಾರಣಕ್ಕೂ ಗುಣಮಟ್ಟದ ಕಾಮಗಾರಿ ಇಲ್ಲದೆ ಹೋದರೆ ಬಿಲ್ ತಡೆಹಿಡಿಯುತ್ತೆನೆ ಶಾಸಕ ಎಸ್ ಮುನಿರಾಜು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು. ನನ್ನ ಕ್ಷೇತ್ರದಲ್ಲಿ ಕಳಪೆ ಕಾಮಗಾರಿ ಮಾಡುವುದಕ್ಕೆ ಬಿಡುವುದಿಲ್ಲ ಹಲವು ಕಾಮಗಾರಿಗಳಲ್ಲಿ ಹಿಂದೆ ಅಕ್ರಮ ನೆಡೆದಿದ್ದು ಅವುಗಳಲ್ಲಿ ಕೆಲವನ್ನು ಲೋಕಯುಕ್ತರು ಪರಿಶೀಲನೆ ಮಾಡಿ ಹೋಗಿದ್ದಾರೆ ಇನ್ನೂ ಕೆಲವು ನಾಗಮೋಹನ್ ದಾಸ್ ಕಮಿಟಿಯಲ್ಲಿ ತನಿಖೆ ನಡೆಯುತ್ತಿದೆ.ಗುಣಮಟ್ಟದ ಕಾಮಾಗಾರಿ ಮಾಡಿ ಬಿಲ್ ಪಡೆಯಲಿ ಕಳಪೆ ಕಾಮಗಾರಿ ಮಾಡಲು ಎಂದಿಗೂ ಬಿಡುವುದಿಲ್ಲ ಎಂದರು. ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದ್ದು ಕಳಪೆ ಕಾಮಗಾರಿ ನಡೆದರೆ ಸಹಿಸುವುದಿಲ್ಲ ಜನರ ಅಪೇಕ್ಷೆಯಂತೆ ಗುಣಮಟ್ಟದ ಕಾಮಗಾರಿ ನಡೆಸಿ ಕ್ರಿಯಾ ಯೋಜನೆಯಂತೆ ಕೆಲಸ ನಿರ್ವಹಿಸಿ ಯಾವುದರಲ್ಲೂ ಲೋಪವಾಗಬಾರದು ಜನರು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು. ಕೆಲಸ ನಿರ್ವಹಣೆ ವೇಳೆ ಸಹಕಾರ ನೀಡಬೇಕು ಕ್ಷೇತ್ರದ ಜನರ ಮೂಲಭೂತ ಸಮಸ್ಯೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದೆಂದು ತಿಳಿಸಿದರು ಈ ಸಂದರ್ಭದಲ್ಲಿ ಮುಖಂಡರುಗಳಾದ ಆನಂದ್ ರೆಡ್ಡಿ , ಮಂಜುನಾಥ ಹೆಚ್ ಎಸ್ ಅಧಿಕಾರಿ ವೆಂಕಟೇಶ್…

Read More

ವರ್ತೂರು ಸಂತೋಷ್ (Varthur Santhosh) ಬಿಗ್ ಬಾಸ್‌ನಲ್ಲಿ ಕೊನೆವರೆಗೂ ಇದ್ದು ಬಂದಿದ್ದಾರೆ. ಆದರೆ ಸುಮ್ಮನೆ ಬಂದಿಲ್ಲ. ಕರುನಾಡಿನ ಮನಸನ್ನು ಗೆದ್ದಿದ್ದಾರೆ. ಅನೇಕ ವಿವಾದಗಳಿಂದ ಸೋತು ಹೋಗಿದ್ದವರನ್ನು ಜನರೇ ಎದ್ದು ನಿಲ್ಲಿಸಿ ಬಹುಪರಾಕ್ ಹಾಕಿದ್ದಾರೆ. ಹೀಗಾಗಿಯೇ ಇಂದು ಸಂತೋಷ್ ಬೆಂಕಿಯಲ್ಲಿ ಅರಳಿದ ಹೂವಾಗಿ ನಿಂತಿದ್ದಾರೆ. ಇದೀಗ ಮದುವೆ ವಿವಾದದ ಬಗ್ಗೆ ವರ್ತೂರು ಸಂತೋಷ್ ಮಾತನಾಡಿದ್ದಾರೆ. ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ (Bigg Boss Kannada 10) ಹೋಗೋವರೆಗೆ ಇವರು ಯಾರೆಂದು ಕರುನಾಡಿಗೆ ಅರಿವು ಇರಲಿಲ್ಲ. ಕಾರಣ ಸೋಷಿಯಲ್ ಮೀಡಿಯಾದಲ್ಲಿ ಇವರು ಹೆಸರು ಮಾಡಿದ್ದರು. ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿದ್ದರು. ಅದಕ್ಕಾಗಿ ಎಲ್ಲೆಲ್ಲೋ ಸುತ್ತಾಡಿದ್ದರು. ಆದರೆ ಜನ ಸಾಮಾನ್ಯರಿಗೆ ಇದರ ಬಗ್ಗೆ ಅರಿವು ಇರಲಿಲ್ಲ. ಆದರೆ ಯಾವಾಗ ಒಂದೊಂದಾಗಿ ಇವರ ಬಗ್ಗೆ ವಿಚಾರ ಗೊತ್ತಾಗುತ್ತಾ ಹೋಯಿತೋ ಏಕಾಏಕಿ ಸ್ಟಾರ್ ಆದರು. ವರ್ತೂರು ಸಂತೋಷ್ ಕನ್ನಡ ನಾಡಿನ ಮನೆ ಮಗನಾದರು. ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಸಂತೋಷ್ ಹುಟ್ಟು ಹಾಕಿದ್ದ ಅಥವಾ…

Read More

ಮುಂಬೈ:- ಇಲ್ಲಿನ 6 ಕಡೆಗಳಲ್ಲಿ ಬಾಂಬ್​ ಇಟ್ಟಿರುವುದಾಗಿ ಟ್ರಾಫಿಕ್​ ಪೊಲೀಸ್​ ಕಂಟ್ರೋಲ್​ ರೂಂಗೆ ಬೆದರಿಕೆ ಕರೆ ಬಂದಿದೆ. ನಗರದ 6 ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ತಲುಪಿತ್ತು. ಈ ಮಾಹಿತಿಯನ್ನು ತಕ್ಷಣವೇ ಮುಂಬೈ ಪೊಲೀಸರಿಗೆ ನೀಡಲಾಯಿತು. ಮಾಹಿತಿ ಪಡೆದ ಮುಂಬೈ ಪೊಲೀಸರು ಸಂದೇಶ ಕಳುಹಿಸಿದವ ಬಗ್ಗೆ ಮಾಹಿತಿ ಪತ್ತೆ ಹಚ್ಚಲು ಆರಂಭಿಸಿದ್ದಾರೆ. ಮುಂಬೈ ನಗರದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯ ಫೋನ್ ಅಥವಾ ಸಂದೇಶ ಬಂದಿರುವುದು ಇದೇ ಮೊದಲಲ್ಲ. ಈ ಮೊದಲು ಮುಂಬೈ ಪೊಲೀಸ್ ಮತ್ತು ಕಂಟ್ರೋಲ್ ರೂಂಗೆ ಬೆದರಿಕೆಗಳು ಬಂದಿವೆ. ಆದರೆ ಯಾವುದನ್ನೂ ನೆಗ್ಲೆಕ್ಟ್​ ಮಾಡುವಂತಿಲ್ಲ.

Read More

ಕಲಬುರ್ಗಿ:- ಪಾನಿಪುರಿ ಬಿಲ್ ವಿಚಾರಕ್ಕೆ ನಡೆದ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಕಲಬುರಗಿಯಲ್ಲಿ ನಡೆದಿದೆ..ಅಳಂದ ತಾಲೂಕಿನ ಧಂಗಾಪುರ ಬಳಿ ಘಟನೆ ನಡೆದಿದ್ದು ಭೀಮಶ್ಯಾ ಕೊಲೆಯಾದ ದುರ್ದೈವಿಯಾಗಿದ್ದಾನೆ. ರಮೇಶ್ ಹಾಗು ಪ್ರವೀಣ್ ನಡುವೆ ಪಾನಿಪುರಿ ತಿನ್ನೋ ವೇಳೆ ಜಗಳವಾಗಿದೆ. ಪಾನಿಪುರಿ ತಿಂದು ಪ್ರವೀಣ್ 40 ರೂಪಾಯಿ ಫೋನ್ ಪೇ ಮಾಡಿದ್ದ. ಆದ್ರೆ ಫೋನ್ ಪೇ ಸೆಂಡ್ ಆಗದ ಹಿನ್ನಲೆ ಪಕ್ಕದಲ್ಲಿದ್ದ ರಮೇಶ್ ಹಣ ಕೊಡಲು ಮುಂದಾಗಿದ್ದಾನೆ. ಕೂಡಲೇ ರೊಚ್ಚಿಗೆದ್ದ ಪ್ರವೀಣ್ ನನಗೇ ನೀನು ಹಣ ಕೊಡಲು ಬರ್ತಿಯೇನು ಅಂತ ಪ್ರಶ್ನೆ ಮಾಡಿ ಜಗಳ ತೆಗೆದಿದ್ದಾನೆ. ಅದೇ ಜಗಳ ನಂತ್ರ ಮನೆ ಬಳಿ ರಿಪಿಟ್ ಆಗಿದೆ..ಇದೇವೇಳೆ ಇಬ್ಬರ ಜಗಳ ಬಿಡಿಸಲು ಹೋದ ರಮೇಶನ ತಂದೆ ಭೀಮಶ್ಯಾ ಮೇಲೆ ಪ್ರವೀಣ್ ಹಲ್ಲೆ ಮಾಡಿದ್ದಾನೆ..ಗಂಭೀರವಾಗಿ ಗಾಯಗೊಂಡಿದ್ದ ಭೀಮಶ್ಯಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಕುರಿತು ನಿಂಬರ್ಗಾ ಪೋಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ..

Read More