Author: AIN Author

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಲು ಕಾಂಗ್ರೆಸ್ ನಾಯಕರು ಸಜ್ಜಾಗ್ತಿದ್ದಾರೆ.ರಾಜ್ಯಕ್ಕೆ ಬರಬೇಕಾದ ಪರಿಹಾರ ನೀಡದೇ, ಮಲತಾಯಿ ಧೋರಣೆ ಮಾಡ್ತಿದ್ದಾರೆ ಎಂದು ದೆಹಲಿ ಚಲೋ ಹಮ್ಮಿಕೊಂಡಿದ್ದಾರೆ.. ಸಿಎಂ, ಡಿಸಿಎಂ, ಸಚಿವರು, ಶಾಸಕರೆಲ್ಲಾ ಫೆಬ್ರವರಿ ಏಳು ರಂದು ರಾಷ್ಟ್ರ ರಾಜಧಾನಿಯಲ್ಲಿ ರಣಕಹಳೆ ಮೊಳಗಿಸಲು ಮುಂದಾಗಿದ್ದಾರೆ. ಯೆಸ್.. ಅನುಧಾನ ತಾರತಮ್ಯ, ಕೇಂದ್ರ ಬಜೆಟ್ ನಲ್ಲಿ ರಾಜ್ಯ ಕಡೆಗಣನೆ ವಿರೋಧಿಸಿ ಸಂಸದ ಡಿ.ಕೆ ಸುರೇಶ್ ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಸೆಟೆದು ನಿಂತಿದೆ. ತಾರತಮ್ಯ ಹೀಗೆ ಮುಂದುವರೆದರೆ ಪ್ರತ್ಯೇಕ ರಾಷ್ಟ್ರ ಧ್ವನಿ ಎತ್ತಬೇಕಾಗುತ್ತೆ ಅಂತಾ ಡಿ.ಕೆ ಸುರೇಶ್ ಹೇಳಿದ್ದೇ ತಡ, ಕೋಲಾಹಲವೇ ಸೃಷ್ಠಿಯಾಗಿತ್ತು. ಈಗ ಕಾಂಗ್ರೆಸ್ ನಾಯಕರೆಲ್ಲಾ ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳೋಕೆ ತೀರ್ಮಾನ ಮಾಡಿದ್ದಾರೆ. ಪ್ರಧಾನಿ ಮೋದಿ ಮಲತಾಯಿ ಧೋರಣೆ ಮಾಡ್ತಿದ್ದಾರೆಂದು ಫೆಬ್ರವರಿ ಏಳನೇ ತಾರೀಖು ದೆಹಲಿ ಚಲೋ ಹಮ್ಮಿಕೊಂಡಿದ್ದಾರೆ. ಸಿಎಂ, ಡಿಸಿಎಂ, ಸಚಿವರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರೆಲ್ಲರೂ ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಐದು ವರ್ಷಗಳಿಂದ ರಾಜ್ಯಕ್ಕೆ ಬರಬೇಕಾದ…

Read More

ದೆಹಲಿ:- ಕಾಂಗ್ರೆಸ್ ಸಂಸದರ ‘ಪ್ರತ್ಯೇಕ ರಾಷ್ಟ್ರ’ ಹೇಳಿಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಸದಸ್ಯ ಸುರೇಶ್ ಅವರು ದಕ್ಷಿಣ ರಾಜ್ಯಗಳನ್ನು ಒಳಗೊಂಡ ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಟ್ಟಿದ್ದರು. ಈ ಹೇಳಿಕೆಯು ಸಂವಿಧಾನ ಮತ್ತು ಅದರ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಾಗಿದೆ. ಕಾಂಗ್ರೆಸ್ ಸದಸ್ಯರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಈ ವಿಷಯವನ್ನು ಲೋಕಸಭೆಯ ನೈತಿಕ ಸಮಿತಿಗೆ ಉಲ್ಲೇಖಿಸಬೇಕೆಂದುಒತ್ತಾಯಿಸುತ್ತೇನೆ ಎಂದಿದ್ದಾರೆ. ಸೋನಿಯಾ ಗಾಂಧಿಯವರು ಕ್ಷಮೆಯಾಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಇದು ಸಂಸದರಾಗಿ ಪ್ರಮಾಣ ವಚನದ ಉಲ್ಲಂಘನೆಯಾಗಿದೆ. ಈ ವಿಷಯವನ್ನು ನೈತಿಕ ಸಮಿತಿಗೆ ಕಳುಹಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು. ಅವರು ಮಾಡದಿದ್ದರೆ ನೀವೂ ದೇಶದ ತುಕಡೇ ತುಕಡೆಯಲ್ಲಿ ಭಾಗಿಯಾಗಿದ್ದೀರಿ ಎಂದು ದೇಶ ನಂಬುತ್ತದೆ. ಜೋಶಿ ಅವರು ಸದನದಲ್ಲಿ ಹೇಳಿಕೆ ನೀಡುತ್ತಿದ್ದಂತೆ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳ ಇಂಡಿಯಾ ಬ್ಲಾಕ್‌ನ ಸದಸ್ಯರು ಆಕ್ಷೇಪ ವ್ಯಕ್ತ…

Read More

ಹಾಸನ:- ತಲೆ ಮೇಲೆ ಕಲ್ಲು ಎತ್ತಿಹಾಕಿ ಅಪರಿಚಿತ ವ್ಯಕ್ತಿಯ ಬರ್ಬರ ಕೊಲೆ ನಡೆದ ಘಟನೆ ಹಾಸನ ಹೊರವಲಯದ ಬುಸ್ತೇನಹಳ್ಳಿ ಗ್ರಾಮದ ನಿರ್ಜನ ಪ್ರದೇಶವಾದ ಹಾಸನ-ಬೆಂಗಳೂರು ರೈಲ್ವೆ ಟ್ರ್ಯಾಕ್ ಬಳಿ ಜರುಗಿದೆ. ಮೇಲ್ನೋಟಕ್ಕೆ ಮೃತ ವ್ಯಕ್ತಿ ಕೂಲಿ ಕಾರ್ಮಿಕ ಅಥವಾ ಕುರಿಗಾಹಿ ಎಂದು ಶಂಕಿಸಲಾಗಿದ್ದು, ಎರಡು ದಿನಗಳ ಹಿಂದೆ ಆತನನ್ನು ರಾತ್ರಿ ವೇಳೆಯಲ್ಲಿ ಜೊತೆಗೆ ಕರೆತಂದಿರುವ ಹಂತಕರು, ಮೃತದೇಹ ಪತ್ತೆಯಾಗಿರುವ ಸ್ಥಳದಲ್ಲೇ ಎಣ್ಣೆ ಪಾರ್ಟಿ ಮಾಡಿದ್ದಾರೆ. ಬಹುಶಃ ಮೃತ ವ್ಯಕ್ತಿಗೆ ಕಂಠಪೂರ್ತಿ ಕುಡಿಸಿ ಅಮಲಿನಲ್ಲಿದ್ದವನ ಮೇಲೆ ಬಾಟಲ್​ನಿಂದ ಹಲ್ಲೆ ಮಾಡಿ, ಬಳಿಕ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ಎರಡು ದಿನಗಳ ಬಳಿಕ ಅಂದರೆ ಇಂದು ಸ್ಥಳೀಯರು ಜಮೀನಿನ ಬಳಿ ಬಂದಾಗ ಮೃತದೇಹ ಬಿದ್ದಿರುವುದು ಪತ್ತೆಯಾಗಿದೆ. ಕೂಡಲೇ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಹಾಸನ ಬಡಾವಣೆ ಠಾಣೆ ಪೊಲೀಸರು ಪರೀಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಹಾಸನದ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಜೊತೆಗೆ ಬಂದವರು ಕುಡಿದ ಅಮಲಿನಲ್ಲಿ ಜಗಳ…

Read More

ಬಿಗ್‌ ಬಾಸ್‌ ಕನ್ನಡ 10ರ ಹಾಟ್ ಬ್ಯೂಟಿ ತನಿಷಾ ಕುಪ್ಪಂಡ (Tanisha Kuppanda) ಅವರಿಗೆ ವರ್ತೂರು ಸಂತೋಷ್ (Varthur Santhosh) ಸರ್ಪ್ರೈಸ್‌ವೊಂದನ್ನು ಕೊಟ್ಟಿದ್ದಾರೆ. ತನಿಷಾರ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟು ವರ್ತೂರು ಅಚ್ಚರಿ ಮೂಡಿಸಿದ್ದಾರೆ ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರೇಮ ಪಕ್ಷಿಗಳಾಗಿ ತನಿಷಾ- ವರ್ತೂರು ಸಂತೋಷ್ ಹೈಲೆಟ್ ಆಗಿದ್ದರು. ಬಿಗ್ ಬಾಸ್ ಶೋ ಮುಗಿದ ಮೇಲೆ ಇಬ್ಬರೂ ಜೊತೆಯಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ತನಿಷಾ- ವರ್ತೂರು ಸಂತೋಷ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ತನಿಷಾರ ಮುಂದಾಳತ್ವದ ಹೋಟೆಲ್‌ಗೆ ಸಡನ್ ಭೇಟಿ ನೀಡಿ ಬೆಂಕಿ ಮುಖದಲ್ಲಿ ಸಂತೋಷ್ ನಗು ಮೂಡಿಸಿದ್ದಾರೆ. ಸಂತೋಷ್ ದಿಢೀರ್ ಭೇಟಿ ತನಿಷಾಗೆ ಖುಷಿ ಕೊಟ್ಟಿದೆ. ಈ ವೇಳೆ, ಇಬ್ಬರು ಜೊತೆಯಾಗಿ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ತನಿಷಾ- ವರ್ತೂರು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಬ್ಬರ ಮದುವೆ ಯಾವಾಗ? ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಇನ್ನೂ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಸುದೀಪ್, ವರ್ತೂರುಗೆ ಇರುವ…

Read More

ಬೆಂಗಳೂರು: ಇತೀಚೆಗೆ ಬೆಂಗಳೂರು ಎಷ್ಟು ಸೇಫ್ ಅನ್ನೋ ಭಯ ಶುರುವಾಗಿದೆ . ಯಾಕಂದ್ರೆ ಹಗಲು ಅನ್ನೋಲ್ಲ.. ರಾತ್ರಿ ಅನ್ನಲ್ಲ ರಾಬರಿ, ಕಳ್ಳತನ, ದರೋಡೆ ನಡೀತಾನೇ ಇವೆ . ಹೀಗೆ ನಿನ್ನೆ ಮಟ ಮಟ ಮಧ್ಯಾಹ್ನನವೇ ರಾಬರಿಯೊಂದು ನಡೆದಿದೆ.. ಠಾಣೆಯೊಂದರ ಸ್ವಲ್ಪ ದೂರದಲ್ಲೇ ಗನ್ ಇಟ್ಟು, ಮಚ್ಚು ತೋರಿಸಿ ಲಕ್ಷಾಂತರ ರೂಪಾಯಿ ದೋಚಿದ್ದಾರೆ.. ಹೌದು ಬೆಂಗಳೂರಿನಲ್ಲಿ ನಡೆಯೋ ಕೆಲ ಕ್ರೈಂಗಳನ್ನ ನೋಡಿದ್ರೆ ನಿಜಕ್ಕೂ ಸೇಫ್ಟಿ ಇದ್ಯಾ ಇಲ್ಲಿ ಅನ್ನೋ ಅನುಮಾನ ಮೂಡದೆ ಇರೋದಿಲ್ಲ.. ಹಾಡು ಹಗಲೇ ಕೆಲವೊಮ್ಮೆ ಭಯಂಕರ ಘಟನೆಗಳು ನಡೆದುಬಿಡುತ್ವೆ.. ನಿನ್ನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋದು ಕೂಡ ಅದೇ.. ಠಾಣೆಯಿಂದ 600ಮೀಟರ್ ದೂರ ಅನ್ಸುತ್ತೆ.. ಏಕಾ ಏಕಿ ಡಿಯೋ ಬೈಕ್ ನಲ್ಲಿ ಎಂಟ್ರಿ ಕೊಟ್ಟಿದ್ದ ನಾಲ್ವರು ಒಬ್ಬ ವ್ಯಕ್ತಿಯನ್ನ ಅಡ್ಡ ಹಾಕಿ ಆತನ ತಲೆಗೆ ಗನ್ ಇಟ್ಟು, ಮಚ್ಚು ತೋರಿಸಿ ಹದಿನೈದು ಲಕ್ಷ ದರೋಡೆ ಮಾಡಿದ್ದಾರೆ.. ಅಂದ್ಹಾಗೆ ನಿನ್ನೆ ಎಕ್ಸಾಟ್ಲಿ ಮಧ್ಯಾಹ್ನ 1.30ರ ಸಮಯ ಅನ್ಸುತ್ತೆ ಆ ಟೈಮಲ್ಲಿ…

Read More

ತುಮಕೂರು:- ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರು ವರಿಷ್ಠರು ಫೈನಲ್ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದ 28 ಲೋಕಸಭಾ ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಕಳಿಸಲಾಗುತ್ತೆ ಎಂದಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಸೋಮಣ್ಣ ಸಂಚಾರ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರದ ವರಿಷ್ಠರು ಒಪ್ಪಿಗೆ ಸೂಚಿಸಿದರೆ ನಮ್ಮದೇನು ಅಭ್ಯಂತರ ಇಲ್ಲ. ಸೋಮಣ್ಣ ಎಲ್ಲರಿಗಿಂತ ಹಿರಿಯರಿದ್ದಾರೆ. ಪಕ್ಷ ಒಗ್ಗಟ್ಟಾಗಿ ಎಲ್ಲಾ ತೀರ್ಮಾನ ಮಾಡುತ್ತದೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಸೋಮಣ್ಣ ಸ್ಪರ್ಧಿಸುವುದಕ್ಕೆ ಯಾರ ವಿರೋಧವೂ ಇಲ್ಲ ಎಂದು ಹೇಳಿದ್ದಾರೆ. ಎಷ್ಟು ಮಹಿಳೆಯರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಸಿಗುತ್ತೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬರುವ ದಿನಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂದು ಸುಮ್ಮನಾದರು. ಬಡವರ ಜೊತೆಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಈ‌ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ 40% ಅಂತಾ ಹೇಳಿದ್ದರು. ಆದರೆ ಇಂದು ಕಾಂಗ್ರೆಸ್ ಮುಖಂಡ ಶಿವರಾಮ್​ರವರು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರವೇ 40 ಕಮಿಷನ್…

Read More

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆ ರದ್ದು ಆಗುತ್ತೆ ಎಂಬ ಶಾಸಕ ಬಾಲಕೃಷ್ಣ (Balakrishna) ಹೇಳಿಕೆ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ದೂರು ನೀಡಿದೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ಶಾಸಕರಾದ ಸ್ವರೂಪ್, ಸುರೇಶ್ ಬಾಬು, ಕರೆಮ್ಮ ನಾಯಕ್ ಒಳಗೊಂಡ ನಿಯೋಗ ಮುಖ್ಯ ಚುನಾವಣೆ ಆಯುಕ್ತರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಚುನಾವಣೆ ಮುಂಚೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಘೋಷಣೆ ಮಾಡಿತ್ತು. ಗ್ಯಾರಂಟಿ ಹಿನ್ನಲೆ ಜನ ಕಾಂಗ್ರೆಸ್ ಅವರನ್ನ ಆಯ್ಕೆ ಮಾಡಿದ್ರು. ಇತ್ತೀಚೆಗೆ ಶಾಸಕ ಬಾಲಕೃಷ್ಣ ಹೇಳಿಕೆ ಬಹಿರಂಗವಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದೇ ಹೋದರೆ ಗ್ಯಾರಂಟಿ ರದ್ದು ಮಾಡೋ ಬಗ್ಗೆ ಮಾತಾಡಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಹಲವಾರು ಸಮಯದಲ್ಲಿ ಗ್ಯಾರಂಟಿ ಮುಂದಿಟ್ಟುಕೊAಡು ಬ್ಲ್ಯಾಕ್‌ಮೇಲ್ ಸಂಸ್ಕೃತಿ ಪ್ರಾರಂಭ ಮಾಡಿದ್ದಾರೆ. ಇದು ಖಂಡನೀಯ. ಹೀಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಕೂಡಲೇ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ…

Read More

ಬೆಂಗಳೂರು : ಪಾಪ ವಯಸ್ಸಾದ ಕಾಲದಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರಿಗೆ ಮನೆಯಲ್ಲಿ ಇಂತಹ ನೋವು ಕೊಟ್ಟಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದರು. ಹೆಚ್​ಡಿಕೆ ಕೇಸರಿ ಶಾಲು ಧರಿಸಿದ ವಿಚಾರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಬಿಜೆಪಿಯ ಸ್ಪೋಕ್ಸ್ ಪರ್ಸನ್ (ವಕ್ತಾರ) ಆಗಿದ್ದಾರೆ. ಮನುಷ್ಯನ ಸಿದ್ಧಾಂತ ಚೇಂಜ್ ಆದಾಗ, ಅವ್ರು ಏನೇ ಹೇಳಿದ್ರೂ ಪ್ರಸಾದ ಅಂತ ಸ್ವೀಕಾರ ಮಾಡ್ತೀನಿ ಎಂದು ಕುಟುಕಿದರು. ದೇವೇಗೌಡರ ಸಿದ್ಧಾಂತವನ್ನು ಹತ್ತಿರದಿಂದ ನೋಡಿದ್ದೇನೆ. ನಮಗೂ ಮಕ್ಕಳಿದ್ದಾರೆ, ವಯಸ್ಸಾದ ಕಾಲದಲ್ಲಿ ಏನಾಗುತ್ತೋ, ಏನೋ..? ನನಗೆ ಈಗಲೇ ಭಯವಾಗುತ್ತಿದೆ. ಅಸೆಂಬ್ಲಿಯಲ್ಲಿ ನೋಡಿದ್ರಲ್ಲಾ.. ಯಾರು ಯಾರಿಗೆ ಕಲ್ಲು ಹೊಡೆದ್ರು ಅಂತ. ನನ್ನ ಬಳಿ ಅವರದ್ದು ದೊಡ್ಡ ಪಟ್ಟಿಯೇ ಇದೆ ಎಂದು ಪರೋಕ್ಷವಾಗಿ ದೇವೇಗೌಡರ ಕುಟುಂಬ ಕಲಹ ಬಗ್ಗೆ ಕೆದಕಿದರು.

Read More

ಕೊಪ್ಪಳ:- ರಾಜ್ಯದ ಅನೇಕ ಕಡೆ ಮಂಗನಬಾವು ಹೆಚ್ಚಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಕೂಡ ತೀರ್ವವಾಗಿದೆ. ಜಿಲ್ಲೆಯ ನೂರಾರು ಮಕ್ಕಳು ಮಂಗನ ಬಾವುವಿನ ವೈರಸ್ ತಗುಲಿದ್ದರಿಂದ ಪರದಾಡುತ್ತಿದ್ದಾರೆ. ಯಾವುದೇ ಆಸ್ಪತ್ರೆಗೆ ಹೋದರೂ ಕೂಡ ಮಂಗನ ಬಾವುವಿನಿಂದ ಬಳಲುತ್ತಿರುವ ಮಕ್ಕಳು ಕಾಣಸಿಗುತ್ತಿದ್ದಾರೆ. ಇನ್ನು ಮಂಗನ ಬಾವು, ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಬೇಗನೆ ಹರಡುತ್ತದೆ. ಅದರಲ್ಲೂ ಮಕ್ಕಳಲ್ಲಿ ಬೇಗನೆ ಹರಡುವುದರಿಂದ ಜಿಲ್ಲೆಯ ಅನೇಕ ಮಕ್ಕಳು ಮಂಗನ ಬಾವುವಿಗೆ ಹೈರಾಣಾಗಿವೆ. ಮಂಗನ ಬಾವು ವೈರಾಣುವಿಗೆ ತುತ್ತಾಗಿರುವ ಮಕ್ಕಳು ತೀರ್ವ ಜ್ವರ ಮತ್ತು ಮುಖದ ಕೆಳಗಿನ ಬಾಗ ಊದಿಕೊಳ್ಳುತ್ತದೆ. ನೋವು ಕೂಡಾ ತೀರ್ವವಾಗಿ ಬಾಧಿಸುತ್ತದೆ. ಕೆಲವರಲ್ಲಿ ವೈರಾಣುವಿನ ಲಕ್ಷಣಗಳು ಸೂಕ್ಷ್ಮವಾಗಿದ್ದರೆ, ಇನ್ನು ಕೆಲವರಲ್ಲಿ ತೀರ್ವವಾಗಿವೆ. ಹೀಗಾಗಿ ಅನೇಕ ಮಕ್ಕಳು, ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಹೋಗುತ್ತಿದ್ದರೆ, ತೀರ್ವ ಜ್ವರವಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮಕ್ಕಳಲ್ಲಿ ಮಾತ್ರವಲ್ಲ, ದೊಡ್ಡವರಲ್ಲಿಯೂ ಕೂಡ ಮಂಗನಬಾವು ಉಂಟಾಗಿದ್ದು, ಜ್ವರ ಸೇರಿದಂತೆ ಅನೇಕ ರೀತಿಯ ತೊಂದೆರೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಮಾತನಾಡಿದ…

Read More

ಬೆಂಗಳೂರು : ಮೂರು ಡಿಸಿಎಂ ಮಾಡಿ ಎಂದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಸಹಕಾರಿ ಸಚಿವ ಕೆ‌.ಎನ್. ರಾಜಣ್ಣ ವಿರುದ್ಧ ಮಾಜಿ ಸಚಿವ ಬಿ. ಶಿವರಾಂ ಕಿಡಿಕಾರಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರನ್ನೇ ಬ್ಲ್ಯಾಕ್​​ಮೇಲ್ ಮಾಡುತ್ತಿದ್ದಾರೆ. ಹೈಕಮಾಂಡ್​​ ವಿರುದ್ಧವೇ ಮಾತನಾಡಿದ್ದಾರೆ. ನೀವು ಕೆ‌.ಎನ್. ರಾಜಣ್ಣರಿಗೆ ವಾರ್ನ್ ಮಾಡಿದ್ರಾ..? ಎಂದು ರಾಜಣ್ಣ ವಿರುದ್ಧ ನೇರವಾಗಿ ಅಸಮಾಧಾನ ಹೊರಹಾಕಿದರು. 28 ಕ್ಷೇತ್ರ ಗೆಲ್ಲಬೇಕು ಅಂದರೆ ಇರುವಂತಹ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿಕೊಂಡು ಹೋಗಬೇಕು. ತುಮಕೂರಿನಲ್ಲಿ ಜನ ಬಹಳ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಾರೋ ಒಬ್ಬರ ಕೈಯಲ್ಲಿ ಕಾಂಗ್ರೆಸ್ ಇಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಹಾಸನ ಕ್ಷೇತ್ರ ಗೆಲ್ಲಲು ಬಹಳ ಕಷ್ಟ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು. ಕೆಪಿಸಿಸಿ ಅಧ್ಯಕ್ಷರು ನನಗೆ ಮಾಧ್ಯಮದ ಮುಂದೆ ಏನು ಹೇಳಬಾರದು ಎಂದು ವಾರ್ನಿಂಗ್ ಮಾಡಿದ್ದಾರೆ. ಆದರೆ, ನಿಮ್ಮ ಒತ್ತಡಕ್ಕೆ ಮಣಿದು ಉತ್ತರ ಕೊಡುತ್ತಿದ್ದೇನೆ. ಒಂದಂತು ಸತ್ಯ ಅವರು ಏಕವಚನದಲ್ಲಿ ಮಾತನಾಡಿದ್ದು ನನಗೆ ಬೇಜಾರಾಗಿದೆ ಎಂದು ಬಿ. ಶಿವರಾಂ ಬೇಸರ ವ್ಯಕ್ತಪಡಿಸಿದರು.

Read More