Author: AIN Author

ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ವಿಧಿವಶರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೂನಂ ಇದೀಗ 32ನೇ ವಯಸ್ಸಿಗೆ ನಿಧನರಾಗಿದ್ದಾರೆ. ಅವರ ಹಠಾತ್‌ ನಿಧನ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ. ಮಾಡೆಲ್ ಕಂ ನಟಿಯಾಗಿದ್ದ ಪೂನಂ ಪಾಂಡೆ ಸದಾ ಕಾಂಟ್ರವರ್ಸಿಗಳಿಂದ ಸದ್ದು ಮಾಡುತ್ತಿದ್ದರು. ಇದೀಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ ಪೂನಂ  (ಫೆ.2)ರಂದು ಇಹಲೋಕ ತ್ಯಜಿಸಿದ್ದಾರೆ. 2013ರಲ್ಲಿ ನಶಾ ಎನ್ನುವ ಸಿನಿಮಾದ ಮೂಲಕ ಬಾಲಿವುಡ್​ ಸಿನಿಮಾ ರಂಗಕ್ಕೆ ಎಂಟ್ರಿಯಾದ ಪೂನಂ ಪಾಂಡೆ 1991 ಮಾರ್ಚ್​ 11 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದ್ದರು. ಮಾಡೆಲ್ ಆಗಿಯೇ ಜೀವನ ಆರಂಭಿಸಿದ ಇವರು, ಗ್ಲಾಡ್ರಾಗ್ಸ್ ಮ್ಯಾನ್‌ಹಂಟ್ ಮತ್ತು ಮೆಗಾಮಾಡೆಲ್ ಸ್ಪರ್ಧೆಯ ಅಗ್ರ 9 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಮಾಡೆಲ್ ನಂತರ ಬಾಲಿವುಡ್​ನಿಂದ ಆಫರ್ ಬರಲಾರಂಭಿಸಿದವು. ಇದರಿಂದ 2013ರಲ್ಲಿ ನಶಾ ಎನ್ನುವ ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಪೂನಂ ಪಾಂಡೆ ವಿವಾದಿತ ನಟಿ ಎಂತಲೇ ಹೆಚ್ಚಾಗಿ ಫೇಮಸ್ ಆಗಿದ್ದರು. ಇದಕ್ಕೆ ಕಾರಣ ಕೂಡ ಇದೆ. 2011ರಲ್ಲಿ ಟೀಮ್​ ಇಂಡಿಯಾ…

Read More

ಬೆಂಗಳೂರು:- ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಪಿಜಿಗಳದ್ದೇ ಕಾರುಬಾರು. ಯುವಕ ಯುವತಿಯರು ವಾಸ್ತವ್ಯ ಹೂಡುತ್ತಾರೆ. ಇದೀಗ ಪೊಲೀಸ್ ಇಲಾಖೆ ಸುರಕ್ಷತೆ ಮತ್ತು ಭದ್ರತೆ ಸಲುವಾಗಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಪಿಜಿಗಳಿಗೆ ಅಪರಿಚಿತ ವ್ಯಕ್ತಿಗಳ ಎಂಟ್ರಿ, ಕಳ್ಳತನ, ಕಿರುಕುಳ ಸೇರಿದಂತೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಮಾಡಲು 10 ಅಂಶಗಳ ಮಾರ್ಗಸೂಚಿ ಹೊರಡಿಸಲಾಗಿದೆ. ಪೇಯಿಂಗ್‌ ಗೆಸ್ಟ್‌’ ಮಾರ್ಗಸೂಚಿ ಪಿಜಿ ಆರಂಭಿಸಲು ಬಿಬಿಎಂಪಿ ಪರವಾನಗಿ ಕಡ್ಡಾಯ ಪಿಜಿ ವಾಸಕ್ಕೆ ಬರುವ ಎಲ್ಲರ ಗುರುತಿನ ಚೀಟಿ ಸಂಗ್ರಹ ಮಾಡ್ಬೇಕು ಸಿಸಿಟಿವಿ, ಅಗ್ನಿ ಸುರಕ್ಷತಾ ವ್ಯವಸ್ಥೆ ಹೊಂದಿರಬೇಕು ಮಾದಕ ವಸ್ತು ಸೇವನೆ, ಕಾನೂನು ಬಾಹಿರ ಚಟುವಟಿಕೆಗೆ ನಿರ್ಬಂಧ ಮಾಡಬೇಕು ಪೊಲೀಸ್ ಪರೀಕ್ಷೆ ಬಳಿಕ ಆಡುಗೆ ಕೆಲಸ, ಸೆಕ್ಯೂರಿಟಿ ಗಾರ್ಡ್ ನೇಮಕ ವಿದೇಶಿ ಪ್ರಜೆಗಳ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು ವಾಸಕ್ಕೆ ಇದ್ದವರನ್ನ ಬಿಟ್ಟು ತಾತ್ಕಾಲಿಕ ವಾಸ ಕಲ್ಪಿಸಬಾರದು ರಾತ್ರಿ 10 ರಿಂದ ಬೆಳಗ್ಗೆ 6 ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ ಸ್ಥಳೀಯ ಠಾಣೆ, ತುರ್ತು ಕರೆ 112, 103, 1930…

Read More

ಬೆಂಗಳೂರು:- ವಿಜಯನಗರದಲ್ಲಿ ಹಂಪಿ ಉತ್ಸವದಲ್ಲಿ ಕುಂಕುಮ ಹಾಕಲು ಸಿಎಂ ಸಿದ್ದರಾಮಯ್ಯ ಹಿಂದೇಟು ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ ಸಿದ್ದರಾಮಯ್ಯ ಮಾತೆತ್ತಿದರೆ ನಾನು ಹಿಂದೂ ಅಂತಾರೆ. ನಮ್ಮ ತಂದೆ ಹೆಸರಲ್ಲಿ ರಾಮ ಇದೆ ಎಂದು ಹೇಳ್ಳುತ್ತಾರೆ. ಹಾಗಿದ್ದರೆ ಕುಂಕುಮ ಬೇಡ ಅಂತಾ ಯಾಕೆ ಅನ್ನಿಸುತ್ತದೆ ಎಂದು ಕಿಡಿಕಾರಿದ್ದಾರೆ. ಮಂಗಳಕರವಾದದ್ದು ಯಾವುದೂ ಸಿದ್ದರಾಮಯ್ಯಗೆ ಬೇಡ. ಅವರಿಗೆ ಬೇಕಿರುವುದು ಅಮಂಗಳಕರವಾದದ್ದೆ ಎಂದು ವಾಗ್ದಾಳಿ ಮಾಡಿದ್ದಾರೆ. ಸಿ.ಟಿ.ರವಿ ಬಗ್ಗೆ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವಾಚ್ಯ ಶಬ್ದದಿಂದ ನಿಂದನೆ ವಿಚಾರವಾಗಿ ಮಾತನಾಡಿದ ಅವರು, ನರೇಂದ್ರಸ್ವಾಮಿರಿಂದ ಕಾಂಗ್ರೆಸ್​ ಪಕ್ಷ ಹೇಳಿಸಿದೆ. ನಾನು ರಾಷ್ಟ್ರಧ್ವಜಕ್ಕೆ ಅಗೌರವ ತರುವ ರೀತಿಯಲ್ಲಿ ಮಾತನಾಡಿಲ್ಲ. ತಾಲಿಬಾನ್ ಧ್ವಜ ಹಾಕಿದ್ವಾ, ಹನುಮಧ್ವಜ ಹಾಕಿದ್ದೇವೆ ಎಂದಿದ್ದೆ. ಇದರಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಆಗುವಂತಹದ್ದು ಎಲ್ಲಿ ಆಗಿದೆ ಎಂದು ಸ್ಪಷ್ಟನೆ ನೀಡಿದರು

Read More

ವಿಜಯನಗರ:- ಸಿಎಂ ಸಿದ್ದರಾಮಯ್ಯ ಅವರು ಹಂಪಿ ಉತ್ಸವ’ಕ್ಕೆ ಚಾಲನೆ ನೀಡಿದ್ದಾರೆ. ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ನಗಾರಿ ಬಾರಿಸಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಕನ್ನಡ ಮತ್ತು ಸಂಸ್ಕ್ರತಿ ಸಚಿವ ಸಚಿವ ಶಿವರಾಜ್ ತಂಗಡಗಿ, ಸಚಿವ ಬಿ. ನಾಗೇಂದ್ರ, ಶಾಸಕರಾದ ಭರತ್ ರೆಡ್ಡಿ ಮತ್ತು ಎಂ.ಪಿ.ಲತಾ ಭಾಗಿ ಸಿಎಂಗೆ ಸಾಥ್​ ನೀಡಿದರು. ಹಂಪಿ ಉತ್ಸವ’ಕೆ ಚಾಲನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಸರ್ಕಾರ ಬಂದ ಕೂಡಲೇ 5 ಗ್ಯಾರಂಟಿ ಜಾರಿ ಮಾಡಿದ್ದೇವೆ. ನಮ್ಮನ್ನು ಟೀಕೆ ಮಾಡಿದವರು ಗ್ಯಾರಂಟಿಗಳನ್ನು ಅನುಸರಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು. ಇಂದು ರಾಜ್ಯದಲ್ಲಿ ಭೀಕರ ಬರಗಾಲವಿದೆ. 30 ಲಕ್ಷ ರೈತರಿಗೆ ತಲಾ 2,000 ರೂಪಾಯಿ ಪರಿಹಾರ ನೀಡಿದ್ದೇವೆ. ಗ್ಯಾರಂಟಿಗಳ ಜೊತೆಗೆ ಬರ ಪರಿಹಾರ ನೀಡಿದ್ದೇವೆ. ಗ್ಯಾರಂಟಿಗಳಿಂದ ಹಣ ಉಳಿಯುತ್ತಿದೆ, ಎಲ್ಲೆಡೆ ಓಡಾಡುತ್ತಿದ್ದಾರೆ. ಇದನ್ನು ವಿದೇಶಗಳಲ್ಲಿ…

Read More

ಇವತ್ತು ನಾವು ಖಾರ ಮತ್ತು ರುಚಿಯಾಗಿರುವ ಕ್ಯಾರೆಟ್ ಚಟ್ನಿ ಮಾಡುವುದರ ಕುರಿತು ತಿಳಿಯೋಣ. ಈ ಮಿಶ್ರಣವನ್ನು ಶುದ್ಧವಾದ ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ 2 ದಿನಗಳವರೆಗೆ ಹಾಗೇ ಇಡಬಹುದಾಗಿದೆ, ಹಾಗಾದ್ರೆ ಬನ್ನಿ ಈ ಚಟ್ನಿಯನ್ನು ಹೇಗೆ ಮಾಡುವುದುಯ ಎನ್ನುವುದನ್ನು ಇಲ್ಲಿ ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ವಿವರಿಸಲಾಗಿದೆ. ಬೇಕಾಗುವ ಸಾಮಗ್ರಿಗಳು: * ಕ್ಯಾರೆಟ್ 3-4 * ಕೆಂಪು ಮೆಣಸಿನ ಪುಡಿ- 2ಚಮಚ * ಕರಿಮೆಣಸಿನ ಪುಡಿ- 1 ಚಮಚ * ಶುಂಠಿ- ಸ್ವಲ್ಪ * ಬೆಳ್ಳುಳ್ಳಿ-2 * ಬಾದಾಮಿ-2 * ಗಸೆಗಸೆ- 2 ಚಮಚ * ಏಲಕ್ಕಿ-3 * ವಿನಿಗರ್- 1 ಚಮಚ * ಸಕ್ಕರೆ- 1 ಚಮಚ ಮಾಡುವ ವಿಧಾನ: * ಚಿಕ್ಕ ತುಂಡಾಗಳಾಗಿ ಕ್ಯಾರೆಟ್‍ಗಳನ್ನು ಕತ್ತರಿಸಿ ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಸೇರಿಸಬೇಕು. * ಈ ಮಿಶ್ರಣಕ್ಕೆ ಒಂದು ಕಪ್ ನೀರು ಹಾಕಿ ಕ್ಯಾರೆಟ್ ಬೆಂದು ಆ ಮಿಶ್ರಣದಲ್ಲಿ ನೀರು…

Read More

ಮಕ್ಕಳಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆಯಂತೆ. ಆದರೆ ಹೊಟ್ಟೆಯಲ್ಲಿ ಹುಳ ಹೆಚ್ಚಾದರೆ ದೇಹ ಈ ಸೂಚನೆಗಳನ್ನು ನೀಡುತ್ತದೆಯಂತೆ. ಹೊಟ್ಟೆಯಲ್ಲಿ ಹುಳು ಹೆಚ್ಚಾದರೆ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆಯಂತೆ. ಹೊಟ್ಟೆಯಲ್ಲಿ ಸೋಂಕು, ನೋವು, ಹೊಟ್ಟೆ ಸೆಳೆತ, ವಾಂತಿ, ಹಸಿವಿನ ಕೊರತೆ, ದೇಹದಲ್ಲಿ ದುರ್ಬಲತೆ, ನಾಲಿಗೆ ಬೆಳ್ಳಗಾಗುವುದು, ಕಣ್ಣು ಕೆಂಪಾಗುವುದು, ದೇಹದಲ್ಲಿ ಕಲೆಗಳು, ದದ್ದುಗಳು, ಚರ್ಮದಲ್ಲಿ ತುರಿಕೆ, ಬಾಯಿಯಲ್ಲಿ ದುರ್ವಾಸನೆ, ಕಂಡುಬರುತ್ತದೆಯಂತೆ. ಹಾಗಾಗಿ ಈ ಹೊಟ್ಟೆಯ ಹುಳಗಳನ್ನು ನಿವಾರಿಸಲು ಹಸಿ ಪಪ್ಪಾಯವನ್ನು ಸೇವಿಸಿ. ಇದು ಹುಳಗಳನ್ನು ನಾಶ ಮಾಡುತ್ತದೆಯಂತೆ. ಹಾಗೇ ತುಳಸಿ ಎಲೆಗಳನ್ನು ಜಗಿದು ಅದರ ರಸ ಸೇವಿಸಿ. ಇದು ಹುಳಗಳನ್ನು ನಾಶ ಮಾಡುವುದರ ಜೊತೆಗೆ ಹೊಟ್ಟೆಯ ಸೆಳೆತವನ್ನು ನಿವಾರಿಸುತ್ತದೆ. ಹಾಗೇ ಹಾಲಿಗೆ ಜೇನುತುಪ್ಪ ಮಿಶ್ರಣ ಮಾಡಿ ಕುದಿಸಿ ಸೇವಿಸಿ.

Read More

ಸೂರ್ಯೋದಯ: 06:51, ಸೂರ್ಯಾಸ್ತ : 06:08 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ, ಕೃಷ್ಣ ಪಕ್ಷ, ಉತ್ತರಾಯಣಂ, ಹೇಮಂತ್ ಋತು, ನಕ್ಷತ್ರ : ವಿಶಾಖ ತಿಥಿ: ಅಷ್ಟಮಿ, ಯೋಗ: ಗಂಡ, ಕರಣ: ಕೌಲವ, ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: రా.10:02 ನಿಂದ రా.11:43 ತನಕ ಅಭಿಜಿತ್ ಮುಹುರ್ತ: ಮ.12:07 ನಿಂದ ಮ.12:52 ತನಕ ಮೇಷ: ಕ್ಯಾಂಟೀನ್ ಬೇಕರಿ ಅಂತಹ ಸಣ್ಣ ಪುಟ್ಟ ವ್ಯಾಪಾರ ಪ್ರಾರಂಭಿಸಿ, ಹೋಟೆಲ್ ಮಾಲಕರಿಗೆ ಸಿಹಿ ಸುದ್ದಿ, ಸಾರಿಗೆ ಮಾಲಕರಿಗೆ ನಷ್ಟ, ಪತ್ರಿಕೋದ್ಯಮಿಗಳಿಗೆ ಶುಭಕಾಲ, ಮಹಿಳೆಯರ ಬಟ್ಟೆ ಮತ್ತು ಸೌಂದರ್ಯವರ್ಧಕ ಸಾಧನಗಳ ವ್ಯಾಪಾರದಲ್ಲಿ ಧನ ಲಾಭ, ಉದ್ಯೋಗ ಕ್ಷೇತ್ರದಲ್ಲಿ ಕಿರುಕುಳ ಸ್ವಯಂ ನಿವೃತ್ತಿಯ ಬಗ್ಗೆ ಚಿಂತನೆ, ಜೂಜಾಟದಲ್ಲಿ ಹಣ ಹೂಡುವ ಮುನ್ನ ಒಮ್ಮೆ ಯೋಚಿಸಿ, ಮರುವಿವಾಹ ಆಕಾಂಕ್ಷೆಗಳಿಗೆ ವಿವಾಹಯೋಗವಿದೆ, ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ…

Read More

ವಿಜಯನಗರ.ಫೆಬ್ರವರಿ.02 ರಾಜ್ಯದ ಸಂಸ್ಕೃತಿ ಹಾಗೂ ಕಲೆ ಬಿಂಬಿಸುವ ನಿಟ್ಟಿನಲ್ಲಿ ಅದ್ದೂರಿಯಾಗಿ ಹಂಪಿ ಉತ್ಸವ ಆಯೋಜಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ಹೇಳಿದರು. ಶುಕ್ರವಾರ ಹೊಸಪೇಟೆ ನಗರದ ನೂತನ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಮಾಧ್ಯಮ ಮಿತ್ರರೊಂದಿಗೆ ಅವರು ಮಾತನಾಡಿದರು. ಅಖಂಡ ಭಾರತ ಹಾಗೂ ಅಖಂಡ ಕರ್ನಾಟಕ ಹಾಗೇಯೇ ಉಳಿಯಬೇಕು. ಕನಕಗಿರಿ ಉತ್ಸವ ಆಯೋಜಿಸುವ ನಿಟ್ಟಿನಲ್ಲಿ ನಾಳೆ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆ ಆಯೋಜನೆ ಕುರಿತು ನಿರ್ಧಾರ ಕೈಗೊಳ್ಳಲಾ ಗುವುದು. ಸರ್ಕಾರರದಿಂದಲೇ ಆನೆಗುಂದಿ ಉತ್ಸವ ಸಹ ಆಚರಿಸಲಾಗುವುದು ಎಂದು ಸಚಿವ ತಂಗಡಗಿ ಶಿವರಾಜ್ ಸಂಗಪ್ಪ ಪ್ರರ್ತಕರ್ತರ ಪ್ರಶ್ನೆಗೆ ಉತ್ತರಿಸಿದರು.

Read More

ವಿಜಯನಗರ ಜಿಲ್ಲೆ ಫೆ.02 ಹಂಪಿಯ ಪ್ರವಾಸದಲ್ಲಿದ್ದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಫೆ.2ರಂದು, ಮೃತ ರೈತ ಮುಖಂಡ ಜೆ‌. ಕಾರ್ತಿಕ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ನೂತನ ಕಚೇರಿಗೆ ಚಾಲನೆ ನೀಡಿದ ನಂತರ ಮುಖ್ಯಮಂತ್ರಿಗಳು ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ನೇರವಾಗಿ ರೈತ ಮುಖಂಡ ಕಾರ್ತಿಕ ಅವರ ನಿವಾಸಕ್ಕೆ ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಮೃತ ರೈತನ ಕುಟುಂಬ ವರ್ಗದವರಿಗೆ 5 ಲಕ್ಷ ರೂ. ಹಣಕಾಸಿನ ನೆರವು ಘೋಷಣೆ ಮಾಡಿದ್ದೇವೆ. ಅವರ ಕುಟುಂಬ ವರ್ಗದವರ ಜೊತೆಗೆ ನಾವಿರುತ್ತೇವೆ ಎಂದು ಹೇಳಿದರು. ಮಗಳಿಗೆ ಶಿಕ್ಷಣ ಕೊಡುತ್ತೇವೆ: ಮಗಳಿಗೆ ಉತ್ತಮ ಶಿಕ್ಷಣ ನೀಡಬೇಕು ಅನ್ನುವುದು ನಮ್ಮ ಬಹುದೊಡ್ಡ ಆಸೆಯಿತ್ತು. ಅದರಂತೆ ಕಾರ್ತಿಕ ಅವರ ಮಗಳ ಶಿಕ್ಷಣಕ್ಕೆ ಆರ್ಥಿಕ ಅನುಕೂಲ ಮಾಡಿಕೊಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಮಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಜೆ. ಕಾರ್ತಿಕ್ ಅವರ ತಾಯಿ ಜೆ. ಬಸಮ್ಮ ಅವರು ತಿಳಿಸಿದರು. ಈ…

Read More

ಬೆಂಗಳೂರು: ಶಾಸಕ ಬಾಲಕೃಷ್ಣ ಹೇಳಿಕೆ ಮತ್ತು ಕಾಂಗ್ರೆಸ್ (Congress) ನಾಯಕ ಬಿ. ಶಿವರಾಂ ಹೇಳಿಕೆ ಅವರ ವೈಯಕ್ತಿಕವಾದದ್ದು. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ 50% ಕಮಿಷನ್ ಇದೆ ಎಂಬ ಶಿವರಾಂ ಹೇಳಿಕೆ ಹಾಗೂ ಗ್ಯಾರಂಟಿ ರದ್ದು ಮಾಡಲಾಗುತ್ತದೆ ಎಂಬ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಸಿಎಂ ಗಮನಕ್ಕೆ ಅವರು ತಂದಿದ್ದರೆ ಸಿಎಂ ಕ್ರಮ ತೆಗೆದುಕೊಳ್ತಾರೆ. ಶಿವರಾಂ ಹೇಳಿಕೆ, ಬಾಲಕೃಷ್ಣ ಹೇಳಿಕೆಗಳು ವೈಯಕ್ತಿಕ ಹೇಳಿಕೆಗಳು. ಅವು ಪಕ್ಷದ ಹೇಳಿಕೆಗಳಲ್ಲ. ಅವರು ಏನೋ ಹೇಳಿರುತ್ತಾರೆ. ಅದು ಅವರ ವಯಕ್ತಿಕ ಅಭಿಪ್ರಾಯ ಎಂದಿದ್ದಾರೆ. ತುಮಕೂರಿನಿಂದ ಮುದ್ದ ಹನುಮೇಗೌಡ ಅವರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೆ ಟಿಕೆಟ್ ಎಂದು ಹೈಕಮಾಂಡ್ ತೀರ್ಮಾನ ಮಾಡಲಿದೆ. ಪಕ್ಷದಲ್ಲಿ ಯಾರಿಗೆ ತೀರ್ಮಾನ ಮಾಡಿ ಟಿಕೆಟ್ ಕೊಡ್ತಾರೋ ಅವರಿಗೆ ನಾವು ಕೆಲಸ ಮಾಡುತ್ತೇವೆ. ನಮ್ಮ ಅಭಿಪ್ರಾಯ ಪಕ್ಷಕ್ಕೆ ಹೇಳಿದ್ದೇವೆ ಎಂದಿದ್ದಾರೆ.

Read More