Author: AIN Author

ಚಾಮರಾಜನಗರ:- ಜಿಲ್ಲೆಯ ಅರ್ಧನಾರೀಪುರ ಚೆಕ್ ಪೋಸ್ಟ್ ಬಳಿ ಅಕ್ರಮ ಮದ್ಯ ಸಾಗಾಣಿಕೆ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕೊಳ್ಳೇಗಾಲ ಡಿವೈಎಸಪಿ ಧರ್ಮೆಂದ್ರ ಕುಮಾರ್ ಹಾಗೂ ಇನ್ಸಪೆಕ್ಟರ್ ಶಶಿಕುಮಾರ್ ರವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಇನ್ನೂ ಕರ್ನಾಟಕದಿಂದ ತಮಿಳುನಾಡು ಕಡೆಗೆ ಅಕ್ರಮವಾಗಿ ಮಧ್ಯ ಸಾಗಣೆ ಮಾಡಲಾಗಿತ್ತಿತ್ತು. ಆರೋಪಿ ಮಗೇಶ್ ಕುಮಾರ್ ಬಿನ್ ಮಣಿ ಬಂಧಿತ ಆರೋಪಿ ಆಗಿದ್ದು, ತಮಿಳುನಾಡಿನ ಶಿರಾಮೊಗೆ ಗ್ರಾಮದ ನಿವಾಸಿ ಎನ್ನಲಾಗಿದೆ. ದಾಳಿ ವೇಳೆ ಅಕ್ರಮ ಸಾಗಾಣಿಕೆ ವಾಹನವೂ ಸೀಜ್ ಮಾಡಲಾಗಿದ್ದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಒಡೆಯರಪಾಳ್ಯದ ಅಂಜನಾದ್ರಿ ಬಾರಿಂದ ಅಕ್ರಮ ಮದ್ಯ ಮಾರಾಟ ನಡೆದಿದೆ. ಅಕ್ರಮ ಮದ್ಯ ಮಾರಾಟದ ಹಿನ್ನಲೆ ಅಂಜನಾದ್ರಿ ಬಾರ್ ಮೇಲೆ ಪೋಲೀಸರ ಕ್ರ‌ಮ ಕೈಗೊಂಡಿದ್ದು, ದಾಳಿಯಲ್ಲಿ ಒಡೆಯರ್ ಪಾಳ್ಯ ಉಪ ಠಾಣೆಯ ಮುಖ್ಯಪೇದೆ ದೊಡ್ಡವೀರ ಶೆಟ್ಟಿ, ಪೇದೆಗಳಾದ ಶಿವಕುಮಾರ್ ಮಂಜುನಾಥ್ ಮತ್ತು ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ದಶರಥ್ ಭಾಗವಹಿಸಿದ್ದರು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ರವರು ಪ್ರಕರಣ ದಾಖಲಿದ್ದಾರೆ.

Read More

ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮಕ್ಕೆ ಇಂದು ಬಿಗ್‌ಬಾಸ್ ವಿಜೇತ ಕಾರ್ತಿಕ್ ಮಹೇಶ್ ಭೇಟಿ ನೀಡಲಿದ್ದಾರೆ. ಈ ಬಾರಿಯ ಕನ್ನಡ ಬಿಗ್‌ಬಾಸ್ ಸೀಸನ್ 10 ವಿಜೇತರಾಗಿರುವ ಕಾರ್ತಿಕ್ ಮಹೇಶ್ (Karthik Mahesh) ಹೆಗ್ಗೋಠಾರಕ್ಕೆ ಭೇಟಿ ನೀಡುವ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗ್ರಾಮಸ್ಥರು ಅವರಿಗಾಗಿ ಮೆರವಣಿಗೆ ಮತ್ತು ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಕಾರ್ತಿಕ್ ಮೂಲತಃ ಮೈಸೂರಿನವರು. ಆದರೆ ಹುಟ್ಟಿದ್ದು ತಾಯಿಯ ತವರು ಹೆಗ್ಗೋಠಾರ ಗ್ರಾಮದಲ್ಲಿ. ಹಾಗಾಗಿ ಅವರಿಗೆ ಹೆಗ್ಗೋಠಾರ ಗ್ರಾಮದೊಂದಿಗೆ ಅವಿನಾವಭಾವ ಸಂಬಂಧವಿದೆ. ಮಧ್ಯಾಹ್ನ 2 ಗಂಟೆಗೆ ಗ್ರಾಮಸ್ಥರು ಕಾರ್ತಿಕ್‌ಗಾಗಿ ಮೆರವಣಿಗೆ ಮತ್ತು ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದಾರೆ. ಸಂಜೆ ಗ್ರಾಮಸ್ಥರು ಮತ್ತು ಸಂಬಂಧಿಕರು ಆಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಕಾರ್ತಿಕ್ ಇರಲಿದ್ದಾರೆ.

Read More

ಚಿತ್ರದುರ್ಗ:- ಕನಕ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಅವರು ಸ್ಪೋಟಕ ಹೇಳಿಕೆ ನೀಡಿದ್ದು, ಜಾತಿ ಕಾರಣಕ್ಕೆ ಚನ್ನಕೇಶವ ದೇವಸ್ಥಾನದ ಗರ್ಭಗುಡಿಗೆ ಬಿಡಲಿಲ್ಲ ಎಂದು ಆರೋಪ ಮಾಡಿದ್ದಾರೆ. ಸಾಣೇಹಳ್ಳಿಯಲ್ಲಿ ನಡೆದ ಪರಿವರ್ತನೆ ಹಾದಿಯಲ್ಲಿ ಮಠಗಳು ಗೋಷ್ಠಿಯಲ್ಲಿ ಮಾತನಾಡಿದ ಈಶ್ವರಾನಂದಪುರಿ ಸ್ವಾಮೀಜಿ, ಬಾಗೂರು ಗ್ರಾಮದ ಚನ್ನಕೇಶವ ದೇವಸ್ಥಾನದ ಗರ್ಭಗುಡಿಗೆ ಬಿಡಲಿಲ್ಲ. ನಾವು ದೇವಸ್ಥಾನಕ್ಕೆ ಹೋಗಿದ್ದೆವೆಂಬ ಕಾರಣಕ್ಕೆ ಸ್ವಚ್ಛಗೊಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕುರುಬ ಸಮುದಾಯದ ಸ್ವಾಮೀಜಿ ಒಳಗೆ ಬಂದರೆಂಬ ಕಾರಣಕ್ಕೆ ಸ್ವಚ್ಛಗೊಳಿಸಿದ್ದಾರೆ. ನಾವು ಹೋಗಿದ್ದಕ್ಕಾಗಿ ದೇಗುಲ ಸ್ವಚ್ಛವಾಯಿತೆಂದು ಟಾಂಗ್ ಕೊಟ್ಟ ಸ್ವಾಮೀಜಿ, ಇನ್ಮುಂದೆ ಎಂದಿಗೂ ಚನ್ನಕೇಶವ ದೇವಸ್ಥಾನಕ್ಕೆ ನಾವು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ವೈಕುಂಠ ಏಕಾದಶಿಗೆ ದೇಗುಲಕ್ಕೆ ಹೋಗಿದ್ದಾಗ ನರಕ ತೋರಿಸಿಬಿಟ್ಟರು. ಪೂಜಾರಿ ಹೆಣ್ಣುಮಕ್ಕಳಿಗೆಲ್ಲಾ ಗರ್ಭಗುಡಿ ಪ್ರವೇಶಿಸಲು ಬಿಟ್ಟಿದ್ದರು. ಮಠಾಧೀಶರಾದ ನಮಗೇ ಚನ್ನಕೇಶವ ದೇಗುಲದ ಗರ್ಭಗುಡಿಗೆ ಬಿಡಲಿಲ್ಲ. ಮುಜರಾಯಿ ಇಲಾಖೆ ದೇಗುಲ ಎಂದು ಗೊತ್ತಿದ್ದರೆ ಪ್ರತಿಭಟಿಸುತ್ತಿದ್ದೆವು. ಉಡುಪಿಯಲ್ಲಿ ಕನಕದಾಸರು ಪ್ರತಿಭಟಿಸಿದಂತೆ ಪ್ರತಿಭಟನೆ ಮಾಡ್ತಿದ್ದೆವು. ಆದ್ರೆ, ಆಗ ಮುಜರಾಯಿ ಇಲಾಖೆ ದೇಗುಲ ಎಂಬುದು ನಮಗೆ ತಿಳಿದಿರಲಿಲ್ಲ ಎಂದು…

Read More

ಹಾಸನ :- ಜಿಲ್ಲೆ ಅರಸಿಕೆರೆಯಲ್ಲಿ ಮಡಿವಾಳ ಮಾಚಿದೇವ ಜಯಂತಿಯ ಆಚರಣೆಯನ್ನು ಇಂದು ತಾಲೂಕು ಆಡಳಿತ ವತಿಯಿಂದ ತಾಲೂಕು ಕಚೇರಿ ಕಂದಾಯ ಭವನದಲ್ಲಿ ಆಚರಿಸಲಾಯಿತು. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಶ್ರೀ ಕೆಎಂ ಶಿವಲಿಂಗೇಗೌಡ ರವರು ದೀಪ ಬೆಳಗಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಬಾಗೇಶಪುರ ಶಿವಣ್ಣ ಮಾಜಿ ಅಧ್ಯಕ್ಷ ಶಿವಕುಮಾರ್ ತಾಲೂಕು ತಹಸಿಲ್ದಾರ್ ಎಮ್ ಜಿ ಸಂತೋಷ್ ಕುಮಾರ್ ತಾಲೋಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಸಮಾಜದ ಮುಖಂಡರಾದ ಅಶೋಕ್. ದೇವರಾಜು. ಡಿ ಎಂ ಕುರ್ಕೆ ಸುರೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು

Read More

ಕೇವಲ ಚಿತ್ರರಂಗಕ್ಕಷ್ಟೆ ಸೀಮಿತವಾಗಿದ್ದ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಇನ್ನು ಎರಡು ತಿಂಗಳಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಈ ಸಂದರ್ಭದಲ್ಲಿ ಅವರು ತಮ್ಮ ರಾಜಕೀಯ ಜೀವನ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದು ಅವರ ನೂತನ ಪಕ್ಷಕ್ಕೆ ‘ತಮಿಳ್ ವೆಟ್ರಿ ಕಳಗಂ’ ಎಂದು ಹೆಸರನ್ನು ಘೋಷಿಸಿದ್ದಾರೆ. ಸದ್ಯ ಹೊಸ ಪಕ್ಷದ ಹೆಸರು ಘೋಷಿಸಿರುವ ವಿಜಯ್ ಅವರು ತಮ್ಮ ರಾಜಕೀಯ ಜರ್ನಿಗೆ ಭದ್ರ ಬುನಾದಿ ಹಾಕುತ್ತಿದ್ದಾರೆ. ಇತ್ತೀಚೆಗೆ 200 ಸದಸ್ಯರ ಸಾಮಾನ್ಯ ಸದಸ್ಯರ ಸಭೆ ನಡೆಸಿದ್ದ ವಿಜಯ್ ಅವರು ರಾಜಕೀಯ ಪಕ್ಷದ ಹೆಸರಿಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದೀಗ ಚುನಾವಣಾ ಆಯೋಗದ ಒಪ್ಪಿಗೆ ಬಳಿಕ ಪಕ್ಷದ ಹೆಸರು ಪ್ರಕಟವಾಗಿದೆ. ನಟ ವಿಜಯ್ ಅವರ ಆಪ್ತರು ಹೇಳುವ ಪ್ರಕಾರ, ಕೇರಳ ಮತ್ತು ಕರ್ನಾಟಕದಲ್ಲಿ ಅವರ ಬಲವಾದ ಮತ್ತು ಸಂಘಟಿತ ಅಭಿಮಾನಿಗಳನ್ನು ಗಮನಿಸಿದರೆ ಪಕ್ಷದ ವ್ಯಾಪ್ತಿಯು ತಮಿಳುನಾಡು ರಾಜ್ಯವನ್ನು ಮೀರಿ ವಿಸ್ತರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹೊಸ ರಾಜಕೀಯ…

Read More

ಕುವೈತ್ ಆಂತರಿಕ ಸಚಿವಾಲಯ ಕುಟುಂಬಕ್ಕೆ ವೀಸಾಗೆ ಅನುಮತಿ ನೀಡಿದ್ದು ಈ ಮೂಲಕ ಬಹುಕಾಲದ ಬೇಡಿಕೆ ಒಂದು ಈಡೇರಿದೆ ಕೋವಿಡ್ ಸಂದರ್ಭದಲ್ಲಿ ನಿರ್ಬಂಧ ಗೊಳಿಸಲಾಗಿದ್ದ ಫ್ಯಾಮಿಲಿ ವಿಸ ನಿಯಮವನ್ನು ಕುರಿತು ಸರ್ಕಾರ ಸಡಿಲಗೊಳಿಸಿದ್ದು ಪ್ರಾರಂಭಿಕ ಹಂತದಲ್ಲಿ ಮೆಡಿಕಲ್ ಫ್ಯಾಮಿಲಿ ವಿಸಾ ಮಾತ್ರ ನೀಡಿತ್ತು ಇದೀಗ ಹೊಸ ಶರತುಗಳೊಂದಿಗೆ ಫ್ಯಾಮಿಲಿ ಸೂಚಿಸಿ ಜನವರಿ 28ರ ಭಾನುವಾರದಂದು ಹೊಸ ಆದೇಶ ಜಾರಿಗೆ ಬಂದಿದೆ ಎಂದು ಉಪ ಪ್ರಧಾನಿ ರಕ್ಷಣಾ ಸಚಿವ ಶೇಕ್ಫಾದು ಸಹ ತಿಳಿಸಿದ್ದಾರೆ. ಕುಟುಂಬದ ವಿಷಯಗಳಿಗೆ ಅರ್ಜಿ ಸಲ್ಲಿಸುವ ಹಣಕಾಸು ಮತ್ತು ಶೈಕ್ಷಣಿಕ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ ನಿಯಮ ಪ್ರಕಾರ ಕುಟುಂಬ ಸದಸ್ಯರು ಕುವೈತ್ ಕರೆತರಲು ಬಯಸುವ ವ್ಯಕ್ತಿಗೆ 800 ಕೇಡಿ (2.1 ಲಕ್ಷ ರೂ.) ಸಂಬಳವಿರಬೇಕು. ಒಂದು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ದುಡಿಯುವವರಿಗೆ ಇದರಿಂದಲೂ ವಿನಾಯಿತಿ ನೀಡಲಾಗಿದೆ ಇದು ಮಾತ್ರ ಆ ವ್ಯಕ್ತಿ ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಎಂದು ಷರತ್ತು ಹೆಚ್ಚಿಸಲಾಗಿದೆ ಕುಟುಂಬ ವಿಚಾರಕ್ಕೆ ಕೆಲಸ ಒಂದು ಸಾಮಾಜಿಕ ಸೇವಾ…

Read More

ಸಮಂತಾ (Samantha) ಮತ್ತೆ ಮೈ ಕೊಡವಿ ಎದ್ದು ನಿಂತಿದ್ದಾರೆ. ಮೈಯೋಸಿಟಿಸ್ ಖಾಯಿಲೆಯನ್ನು ಪಕ್ಕಕ್ಕೆ ಇಟ್ಟು ಹೊಸ ಸಾಹಸದ ಮೊದಲ ಝಲಕ್ ತೋರಿಸಿದ್ದಾರೆ. ಇನ್ನೇನು ಸ್ಯಾಮ್ ಬಣ್ಣದ ಲೋಕದ ಬದುಕು ಮುಗಿಯಿತು. ಹೀಗಂತ ಅಂದುಕೊಂಡವರಿಗೆ ಭರ್ಜರಿ ಕಾಣಿಕೆ ಕೊಡಲು ಸಜ್ಜಾಗಿದ್ದಾರೆ. ಹಾಗಿದ್ದರೆ ಸಮಂತಾ ಇನ್ಯಾವ ರೀತಿ ನಮ್ಮ ಮನೆ ಮನಕ್ಕೆ ಲಗ್ಗೆ ಹಾಕಲಿದ್ದಾರೆ ? ಅವರು ಹಂಚಿಕೊಂಡ ದಿವ್ಯ ಕನಸಾದರೂ ಏನು? ಅದರ ಮಾಹಿತಿ ಇಲ್ಲಿದೆ. ಸಮಂತಾಗೆ ಎರಡು ವರ್ಷ ಅಷ್ಟೇನೂ ಸುಖದಾಯಕವಾಗಿರಲಿಲ್ಲ. ಮೊದಲ ಕಾರಣ ಎಲ್ಲರಿಗೂ ಗೊತ್ತು. ಅದು ವರ್ಷದಿಂದ ಕಾಡುತ್ತಿರುವ ಮೈಯೋಸೀಟಿಸ್. ಅದರಿಂದ ಹೊರ ಬರಲು ಎಲ್ಲೆಲ್ಲಿಗೋ ಹೋಗಿ ಚಿಕಿತ್ಸೆ ಪಡೆದು ಬಂದರು. ಅದಕ್ಕಾಗಿ ಸಿನಿಮಾ ರಂಗದಿಂದ ತಾತ್ಕಾಲಿಕವಾಗಿ ದೂರವಾದರು. ಆದರೆ ಭಕ್ತಗಣದ ಜೊತೆ ಸಂಪರ್ಕದಲ್ಲಿದ್ದರು. ಈಗ ಹೊಸದೊಂದು ಯುದ್ಧ ಮುಗಿಸಿ ಬಂದಿದ್ದಾರೆ. ಸದ್ಯದಲ್ಲೇ ಇವರ ವೆಬ್‌ಸೀರೀಸ್ ಸಿಟಾಡೆಲ್ ಓಟಿಟಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಒಂದು ಗೆಲುವಿಗೆ ಸ್ಯಾಮ್ ಕಾದಿದ್ದಾರೆ. ಕಾರಣ ಈ ಹಿಂದಿನ ಎರಡು ಮೂರು ಸಿನಿಮಾ ಕೈ ಹಿಡಿಯಲಿಲ್ಲ.…

Read More

ಖ್ಯಾತ ನಟಿಯೊಬ್ಬರು 12 ವರ್ಷದ ಹಿಂದೆ ಮಾಡಿದ್ದ ಪೋಸ್ಟ್ ​ಒಂದು ಸಂಕಷ್ಟ ತಂದಿದ್ದು ಆಕೆ ಕ್ಷಮೆಯಾಚಿಸಿದ್ದಾರೆ. ಬೆಂಗಳೂರು ಮೂಲದ ನಟಿ ಧನ್ಯಾ ಬಾಲಕೃಷ್ಣ 12 ವರ್ಷಗಳ ಹಿಂದೆ ನಡೆದ ಸಿಎಸ್​ಕೆ ಹಾಗೂ ಆರ್​ಸಿಬಿ ನಡುವಿನ ಪಂದ್ಯದ ಕುರಿತು ಸಾಮಾಜಿಕ ಜಾಲತಾಣದಲ್‌ಇ ಬರೆದುಕೊಂಡಿದ್ದರು. ಈ ವಿಚಾರ ಈಗ ಸದ್ದು ಮಾಡುತ್ತಿದ್ದು, ಅವರು ತಮಿಳು ಜನರ ಕ್ಷಮೆಯಾಚಿಸಿದ್ದಾರೆ. ಧನ್ಯಾ ಬಾಲಕೃಷ್ಣ, ತೆಲುಗು, ತಮಿಳು ಚಿತ್ರರಂಗದ ಜನಪ್ರಿಯ ಪೋಷಕ ನಟಿ. ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದೀಗ ಇವರ ನಟನೆಯ ತಮಿಳು ಸಿನಿಮಾ ‘ಲಾಲ್ ಸಲಾಂ’ ಬಿಡುಗಡೆ ಆಗಲಿದ್ದು, ಇದರ ನಡುವೆ ಧನ್ಯಾ ಅವರದ್ದು ಎನ್ನಲಾಗುತ್ತಿರುವ ಹಳೆಯ ಪೋಸ್ಟ್ ಒಂದು ವೈರಲ್ ಆಗಿ ವಿವಾದ ಸೃಷ್ಟಿಸಿದೆ. ‘ಲಾಲ್ ಸಲಾಂ’ ಸಿನಿಮಾ ಬಿಡುಗಡೆಗೆ ತಡೆ ಒಡ್ಡುವ ಬೆದರಿಕೆಯನ್ನು ಸಹ ಕೆಲವರು ಹಾಕಿದ್ದು, ಇದೀಗ ನಟಿ ಧನ್ಯಾ ಬಾಲಕೃಷ್ಣ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಧನ್ಯಾ ಅವರ ಪೋಸ್ಟ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ತಂಡವನ್ನು ಕಟುವಾಗಿ ಟೀಕಿಸಿರುವ ಅವರು, ನೀವು ನೀರು,…

Read More

ನುಗ್ಗೇಕಾಯಿಯಯು ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಆದರೆ ನುಗ್ಗೆ ಸೊಪ್ಪು ಉತ್ತಮ ಆಹಾರವಾಗಿದ್ದು ಹಲವು ತೊಂದರೆಗಳಿಗೆ ಸಮರ್ಥ ಔಷಧಿಯೂ ಆಗಿದೆ. ಇದು ರುಚಿಕರವೂ, ಹೆಚ್ಚಿನ ನಾರು ಹೊಂದಿರುವ ಸೊಪ್ಪೂ ಆಗಿರುವ ಕಾರಣ ದಕ್ಷಿಣ ಭಾರತದಲ್ಲಿ ಸಾಂಬಾರ್ ಅಥವಾ ಪಲ್ಯದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ನುಗ್ಗೆಕಾಯಿಯಂತೆ ನುಗ್ಗೆ ಸೊಪ್ಪಿನಲ್ಲಿಯೂ ಹಲವಾರು ಆಂಟಿ ಆಕ್ಸಿಡೆಂಟುಗಳೂ ಮತ್ತು ಇತರ ಅಗತ್ಯ ಪೋಷಕಾಂಶಗಳೂ ಲಭ್ಯವಿದ್ದು ಮುಖ್ಯವಾಗಿ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುವಲ್ಲಿ ಹಾಗೂ ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ. ಆರೋಗ್ಯ ಸಮಸ್ಯೆಗಳಿಗೆ ನುಗ್ಗೆ ಸೊಪ್ಪಿನ ಮನೆ ಮದ್ದುಗಳು ಇಲ್ಲಿದೆ * ನುಗ್ಗೆ ಸೊಪ್ಪಿನಿಂದ ಸಾರು ತಯಾರಿಸಿ, ಅದಕ್ಕೆ ಬೆಳ್ಳುಳ್ಳಿ ರಸ ಬೆರೆಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ. * ನುಗ್ಗೆ ಸೊಪ್ಪಿನ ರಸವನ್ನು ಕುದಿಸಿ ಕುಡಿಯುತ್ತಿದ್ದರೆ ಮಲಬದ್ಧತೆ ಸಮಸ್ಯೆ ಯೂ ದೂರವಾಗುತ್ತದೆ. * ನುಗ್ಗೆಸೊಪ್ಪು, ಹೆಚ್ಚಿದ ಶುಂಠಿ, ಹರಳು ಗಿಡದ ಎಲೆ, ತುಳಸಿ ಎಲೆಗಳನ್ನು ಎಳ್ಳೆಣ್ಣೆಯಲ್ಲಿ ಹುರಿದು ಬಟ್ಟೆಯಲ್ಲಿ ಕಟ್ಟಿ ಬೆನ್ನುನೋವು ಇರುವ ಜಾಗಕ್ಕೆ ಬಿಸಿ ಶಾಖವಿಟ್ಟರೆ ಬೆನ್ನುನೋವು ಕಡಿಮೆಯಾಗುತ್ತದೆ.…

Read More

ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿ ಆಡುತ್ತಿರುವ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಮೊದಲ ಪಂದ್ಯದಲ್ಲಿ 28 ರನ್‌ಗಳ ಸೋಲುಂಡಿದ್ದ ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡಕ್ಕೆ ಇದೀಗ ಗಾಯದ ಮೇಲೆ ಬರೆ ಎಂಬಂತೆ ಎರಡನೇ ಟೆಸ್ಟ್‌ಗೆ ಸ್ಟಾರ್‌ ಆಟಗಾರರಾದ ಬ್ಯಾಟರ್‌ ಕೆಎಲ್‌ ರಾಹುಲ್‌ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಸೇವೆ ಇಲ್ಲವಾಗಿದೆ. ಗಾಯದ ಸಮಸ್ಯೆ ಎದುರಿಸಿರುವ ಈ ಆಟಗಾರರು ವೈಝಾಗ್‌ನಲ್ಲಿ ಫೆ.2ರಂದು ಶುರುವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಇನ್ನು ಮತ್ತೊಂದು ಆಘಾತ ಎಂಬಂತೆ ರಾಜ್‌ಕೋಟ್‌ನಲ್ಲಿ ನಡೆಯಬೇಕಿರುವ 3ನೇ ಟೆಸ್ಟ್‌ ಪಂದ್ಯಕ್ಕೂ ಆಲ್‌ರೌಂಡರ್ ಜಡೇಜಾ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ. ಸ್ನಾಯು ಸೆಳೆತದ ಸಮಸ್ಯೆ ಎದುರಿಸಿರುವ ರವೀಂದ್ರ ಜಡೇಜಾ ಸಂಪೂರ್ಣ ಫಿಟ್‌ ಆಗಲು ಸಮಯ ತೆಗೆದುಕೊಳ್ಳಲಿದೆ. ಹೀಗಾಗಿ ಸರಣಿಯ ಮೂರನೇ ಪಂದ್ಯದಲ್ಲಿ ಆಡುವುದು ಕೂಡ ಅನುಮಾನವಾಗಿದೆ. ಟೀಮ್ ಇಂಡಿಯಾಗೆ ಇದು ಬಹುದೊಡ್ಡ ಹಿನ್ನಡೆ ಆಗಿದೆ. ಟೂರ್ನಿ ಆರಂಭಕ್ಕೂ ಮೊದಲೇ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ…

Read More