Author: AIN Author

ಹೊಸಪೇಟೆ :- ಹಂಪಿ ಉತ್ಸವದ ಇತಿಹಾಸ, ವಿಜಯನಗರ ಸಾಮ್ರಾಜ್ಯದ ಗತವೈಭವ ಹಾಗೂ ನಾಡಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಗಾಯಿತ್ರಿ ಪೀಠದ ವೇದಿಕೆಯ ಮೇಲೆ ಮರುಕಳಿಸುವಂತೆ ಹಂಪಿ ಉತ್ಸವ-2024 ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಮೃತ ಹಸ್ತದಿಂದ ಉತ್ಸವಕ್ಕೆ ಚಾಲನೆ ದೊರೆತ ನಂತರ, ಶುಕ್ರವಾರ ಮುಖ್ಯವೇದಿಕೆಯಲ್ಲಿ, ಸಂಗೀತ ನಿರ್ದೇಶಕ ಸಾಧುಕೋಕಲ ತಂಡದಿಂದ ರಸಮಂಜರಿ ಪ್ರಸ್ತುತ ಪಡಿಸಿದರು. ಸಾಧುಕೋಕಿಲ ತಂಡದ ಸಂಗೀತ ಸಂಯೋಜಕ ಪವೀಣ್‌ ಡಿ ರಾವ್ ಸಂಯೋಜಿಸಿದ ಹಂಪಿ ಉತ್ಸವ ಗೀತೆ ಗಾಯನಕ್ಕೆ ಕಲಾವಿದರು ನೃತ್ಯ ರೂಪಕ ಪ್ರದರ್ಶಿಸಿದರು. ಪ್ರೇಕ್ಷಕರು ಕರತಾಡನದಿಂದ ಸಂತಸ ವ್ಯಕ್ತಪಡಿಸಿದರು. ಸಂಗೀತ ಮಾಂತ್ರಿಕ ಸಾಧು‌ಕೋಕಿಲ ಹಂಪಿ ಉತ್ಸವಕ್ಕೆ ಈ ಗೀತ ಸಂಯೋಜನೆ ರಾಷ್ಟ್ರಗೀತೆ ಇದ್ದಂತೆ ಎಂದು ಪ್ರಶಂಸೆ ವ್ಯಕ್ತಪಿಡಿದರು. ಪವೀಣ್‌ ಡಿ ರಾವ್ ಅನುಪಸ್ಥತಿಯಲ್ಲಿ ಅವರ ಕಲಾತಂಡಕ್ಕೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವೇಣು ವಾದ‌ನಗಳ ಸಮ್ಮಿಳನದ ಸಂಗೀತ ಸಂಯೋಜನೆ:- ಖ್ಯಾತ ಕೊಳಲು ವಾದಕ ಪಂಡಿತ ಪ್ರವೀಣ್ ಗೋಳ್ಕಿಂಡಿ ನೇತೃತ್ವದ 22 ಕಲಾವಿದರು, ಸಪ್ತ ಸ್ವರಗಳನ್ನು ಪ್ರತಿನಿಧಿಸುವ ವೇಣು…

Read More

ದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ನೀಡಿದ ಹೇಳಿಕೆಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇಡೀ ಸಂಸತ್ತೇ ಒಂದು ಬಾರಿ ನಗೆಗಡಲಲ್ಲಿ ತೇಲಿದ ಪ್ರಸಂಗವೊಂದು ನಡೆದಿದೆ. ಸಂಸತ್ತಿನಲ್ಲಿ ಬಜೆಟ್ ಅಧಿವೇಶನದಲ್ಲಿ (Budget Session) ಮಾತನಾಡುತ್ತಾ ಪ್ರಧಾನಿ ಮೋದಿಯವರತ್ತ ನೋಡಿ, ನಿಮಗೆ ಬಹುಮತ ಇದೆ. ಈ ಹಿಂದೆ 330-340 ಅವರು ಸ್ಥಾನಗಳನ್ನು ಹೊಂದಿದ್ರಿ. ಈ ಬಾರಿ ಅದು 400 ದಾಟುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಇದನ್ನು ಕೇಳಿ ಬಿಜೆಪಿ (BJP) ನಾಯಕರು ಜೋರಾಗಿ ಚಪ್ಪಾಳೆ ತಟ್ಟಿದ್ದು, ಸಂಸತ್ ಭವನ ನಗೆಗಡಲಲ್ಲಿ ಮುಳುಗಿತು. ಸ್ವತಃ ಪ್ರಧಾನಿ ಮೋದಿಯವರು (Narendra Modi) ಕೂಡ ಜೋರಾಗಿ ನಗತೊಡಗಿದರು. ಇದರ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. https://x.com/BJP4India/status/1753357337728041412?s=20 ವೀಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ‘400 ಪಾರ್’ ಕೇಳಿದ ನಂತರ ಪ್ರಧಾನಿ ಮೋದಿ ನಗಲು ಆರಂಭಿಸಿದ್ದಾರೆ. ಜೊತೆಗೆ ಆಡಳಿತ ಪಕ್ಷದ ಸಂಸದರು ಮೇಜು ಕುಟ್ಟಿ, ಚಪ್ಪಾಳೆ ತಟ್ಟಿ ಘೋಷಣೆ ಕೂಗುವುದನ್ನು ಕಾಣಬಹುದಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ…

Read More

ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ (Ashok Gehlot) ಕೋವಿಡ್‌-19 ಹಾಗೂ ಹಂದಿ ಜ್ವರ ಪಾಸಿಟಿವ್‌ ಕಾಣಿಸಿಕೊಂಡಿದೆ. ಈ ಕರಿತು ಅಶೋಕ್‌ ಗೆಹ್ಲೋಟ್‌ ಅವರೇ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಹಾಗಾಗಿ ವೈದ್ಯರ ಸಲಹೆ ಮೇರೆಗೆ ನಾನು ಪರೀಕ್ಷೆಗೆ ಒಳಗಾಗಿದ್ದು ಕೋವಿಡ್‌-19 ಹಾಗೂ ಹಂದಿಜ್ವರ ಪಾಸಿಟಿವ್‌ (Covid 19 And Swine Flu) ಎಂದು ದೃಢಪಟ್ಟಿದೆ. ಇದರಿಂದಾಗಿ ಮುಂದಿನ ಏಳು ದಿನಗಳವರೆಗೆ ನಾನು ಯಾರನ್ನೂ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಬದಲಾದ ಕಾಲಮಾನದಲ್ಲಿ ಪಕ್ಷದ ಮುಖಂಡರೂ ತಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪಕ್ಷದ ಮುಖಂಡರು ಸಹ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಾರೆ. ಮುಂದಿನ ಚಿಕಿತ್ಸೆಗಾಗಿ ಅಶೋಕ್‌ ಗೆಹ್ಲೋಟ್‌ ಅವರನ್ನು ಜೈಪುರದ SMS ಆಸ್ಪತ್ರೆಯ ಐಡಿಎಚ್ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ

Read More

ಕಲಬುರ್ಗಿ:- ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ನಕಲಿ ವೈದ್ಯರ ಕ್ಲಿನಿಕ್​ಗಳ ಮೇಲೆ ದಾಳಿ ನಡೆಸಿದ್ದು 109 ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. KPME ಅನುಮತಿ ಪಡೆಯದೆ ರಾಜಾರೋಷವಾಗಿ ಜನರಿಗೆ ಚಿಕಿತ್ಸೆ ನೀಡಿ ಜನರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಆರೋಗ್ಯ ಇಲಾಖೆ, ತಹಶೀಲ್ದಾರ್, ಪೊಲೀಸ್ ಟೀಂ ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಕಲಬುರಗಿ ಜಿಲ್ಲೆಯಲ್ಲಿ 109 ನಕಲಿ ವೈದ್ಯರು ಪತ್ತೆಯಾಗಿದ್ಧಾರೆ. ಅಧಿಕಾರಿಗಳು ನಕಲಿ ವೈದ್ಯರ ಕ್ಲಿನಿಕ್​ಗಳ ಮೇಲೆ ದಾಳಿ ನಡೆಸಿದ್ದು ಭರ್ಜರಿ ಭೇಟೆಯಾಡಿದ್ದಾರೆ. ಜಿಲ್ಲೆಯಲ್ಲಿ 109 ನಕಲಿ ವೈದ್ಯರನ್ನು ಪತ್ತೆ ಮಾಡಿ 43 ಕ್ಲಿನಿಕ್​ಗಳನ್ನ ಬಂದ್ ಮಾಡಿಸಿದ್ದಾರೆ. KPME ಅನುಮತಿ ಪಡೆಯದೆ ಚಿಕಿತ್ಸೆ ನೀಡ್ತಿರುವ ಕ್ಲಿನಿಕ್​ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ನೀಡಿದ ಮೇಲೂ ಅನುಮತಿ ಪಡೆಯದಿದ್ರೆ ಕ್ರಿಮಿನಲ್…

Read More

ಹುಬ್ಬಳ್ಳಿ: ‘ಡಾ. ಬಿ.ಆರ್‌. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಧಾರವಾಡ ಜಿಲ್ಲಾ ಘಟಕದಿಂದ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ 1ನೇ ಬಸ್‌ ನಿಲ್ದಾಣ ಬಳಿ ಮಾರ್ಚ್‌ 3ರಂದು 51 ಜೋಡಿ ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ’ ಎಂದು ಸಮಿತಿ ಮುಖಂಡರವೀಂದ್ರ ಕಲ್ಯಾಣಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಹಟ್ಟಿಯ ಮರುಳಸಿದ್ಧ ಶಿವಾಚಾರ್ಯರು, ಶ್ರೀಕಾರ ದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಆಸಕ್ತರು ತಮ್ಮ ವಯಸ್ಸಿನ ದಾಖಲಾತಿಗಳೊಂದಿಗೆ ಫೆ.25ರೊಳಗೆ ಹೆಸರು ನೋಂದಣಿ ಮಾಡಿಸಬಹುದು. ನೋಂದಣಿಗೆ ಮೊ: 99165 60584, 99455 67573 ಸಂಪರ್ಕಿಸಬಹುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಮೇಶ ಕಾಂಬಳೆ,ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಪಾತರದ, ಉಡಚಪ್ಪ ಕಾಕಣ್ಣವರ, ಸಂತೋಷ ದೊಡಮನಿ, ಮಲ್ಲಿಕಾರ್ಜುನ ಬಿಳಾರ, ಮಲ್ಲಿಕಾರ್ಜುನ ಯಾತಗೇರಿ, ಸಂಗಮೇಶ ದೊಡಮನಿ, ವಿರೂಪಾಕ್ಷ ಚಲವಾದಿ, ಶರಣಪ್ಪ ದೊಡಮನಿ ಇತರರು ಇದ್ದರು.

Read More

ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೇ 16ರಂದು ಮಂಡಿಸಲಿರುವ ಬಜೆಟ್‌ನಲ್ಲಿ ರಾಮ ಮತ್ತು ಹನುಮ ಕ್ಷೇತ್ರಗಳ ಅಭಿವೃದ್ಧಿಗೆ ಭಾರಿ ಅನುದಾನ ಕೊಡುವ ತಯಾರಿ ನಡೆಸಿದ್ದು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ’ ಎಂಬ ಬಿಜೆಪಿ ಮತ್ತು ಪರಿವಾರದ ಸಂಘಟನೆಗಳ ಆಪಾದನೆಗೆ ತಿರುಗೇಟು ಕೊಡಲು ಮುಂದಾಗಿದ್ದಾರೆ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ವಿಷಯವನ್ನು ಮುಂದಿಟ್ಟು ಬಿಜೆಪಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತು. ‘ನಾವೂ ರಾಮಭಕ್ತರೇ. ಅಯೋಧ್ಯೆಗೂ ಹೋಗುತ್ತೇವೆ. ಬಿಜೆಪಿ ರಾಜಕೀಯಗೊಳಿಸಿರುವ ರಾಮ ನಮ್ಮ ರಾಮನಲ್ಲ; ಗಾಂಧೀಜಿಯ ನಮ್ಮ ರಾಮ’ ಎಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರತಿಪಾದಿಸಿದ್ದರು. ಈ ವಾದವನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದರು. ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ವಿಷಯವನ್ನು ಮುಂದಿಟ್ಟು ಬಿಜೆಪಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತು. ‘ನಾವೂ ರಾಮಭಕ್ತರೇ. ಅಯೋಧ್ಯೆಗೂ ಹೋಗುತ್ತೇವೆ. ಬಿಜೆಪಿ ರಾಜಕೀಯಗೊಳಿಸಿರುವ ರಾಮ ನಮ್ಮ ರಾಮನಲ್ಲ; ಗಾಂಧೀಜಿಯ ನಮ್ಮ ರಾಮ’ ಎಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರತಿಪಾದಿಸಿದ್ದರು. ಈ ವಾದವನ್ನು ಬಿಜೆಪಿ ನಾಯಕರು ಕಟುವಾಗಿ…

Read More

ಆನೇಕಲ್:- ರೈತರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಸಿಮೆ ಬದನೆ ಪಡವಲ ಬೆಳೆ ಜೊತೆ ಚಪ್ಪರ ನಾಶ ಮಾಡಿದ ಘಟನೆ ಬನ್ನೇರುಘಟ್ಟ ಸಮೀಪದ ಭೂತಾನಹಳ್ಳಿ ಬಳಿ ಜರುಗಿದೆ. ವೆಂಕಟೇಶ್ ಎಂಬ ರೈತರಿಗೆ ಸೇರಿದ ತೋಟ ಇದಾಗಿದ್ದು, ರಾತ್ರಿ ಬಂದಿದ್ದ ಒಂಟಿ ಸಲಗದಿಂದ ಬೆಳೆನಾಶ ಮಾಡಲಾಗಿದೆ. ಬಿರು ಬೇಸಿಗೆಯಲ್ಲು ಸೀಮೆಬದನೆ ಬೆಳೆದಿದ್ದೆ. ಪಡವಲ ಬೆಳೆ ನಾಟಿ ಮಾಡಿದ್ದೆ. ಆದ್ರೆ ರಾತ್ರಿ ಬಂದ ಕಾಡಾನೆ ಬೆಳೆ ನಾಶ ಮಾಡಿದೆ. ಈ ಹಿಂದೆ ಸಹ ಕಾಡಾನೆಗಳಿಂದ ಬೆಳೆನಾಶ ಮಾಡಲಾಗಿದೆ. ಇಲ್ಲಿಯವರೆಗೆ ಅರಣ್ಯ ಇಲಾಖೆ ಪರಿಹಾರ ನೀಡಿಲ್ಲ ಎಂದು ರೈತ ವೆಂಕಟೇಶ್ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದೆ.

Read More

ಧಾರವಾಡ, ಫೆಬ್ರುವರಿ ೨: ಬೈರಿದೇವರ ಕೊಪ್ಪ ಸಮೀಪ ವೇಗವಾಗಿ ಬಂದ ಬಿಆರ್‌ಟಿಎಸ್‌ ಬಸ್‌ ಜೆಸಿಬಿಗೆ ಡಿಕ್ಕಿಯಾದ ನಂತರ ಉಂಟಾಗಿದ್ದ ಗಲಾಟೆಯನ್ನು ಶಮನಗೊಳಿಸಿದ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಘಟನೆ ನಡೆದಿದೆ. ಧಾರವಾಡ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವ ಸಂತೋಷ್‌ ಲಾಡ್‌ ಅವರು ಧಾರವಾಡದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಬೈರಿದೇವರ ಕೊಪ್ಪ ಬಳಿ ವೇಗವಾಗಿ ಬಂದ ಬಿಆರ್‌ಟಿಎಸ್‌ ಬಸ್‌ ಜೆಸಿಬಿಗೆ ಡಿಕ್ಕಿಯಾಗಿತ್ತು. ಇದರಿಂದ ರೊಚ್ಚಿಗೆದ್ದ ಸುತ್ತಮುತ್ತಲಿನ ಜನ ಗಲಾಟೆ ಆರಂಭಿಸಿದ್ದರು. ರಸ್ತೆಯನ್ನು ಬ್ಲಾಕ್‌ ಮಾಡಿ ವಾಹನಗಳ ಸಂಚಾರಕ್ಕೆ ಅಡ್ಡಿ ಮಾಡಿದ್ದರು. ಇದೇ ವೇಳೆ ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಸಂತೋಷ್‌ ಲಾಡ್‌ ಅವರು ಘಟನೆಯ ಮಾಹಿತಿ ಪಡೆದು ಜನರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿ ವಾಹನ ಸಂಚಾರ ಆಗುವಂತೆ ಮಾಡಿದರು. ಸಚಿವ ಸಂತೋಷ್‌ ಲಾಡ್‌ ಅವರ ಈ ನಡೆಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸದಾ ಜನರ ಸಂಕಷ್ಟಕ್ಕೆ ಮಿಡಿಯುವ ಸಂತೋಷ್‌ ಲಾಡ್‌ ಅವರ…

Read More

ಬೆಂಗಳೂರು :- ಹೊರ ರಾಜ್ಯಗಳಿಂದ ಅಂಚೆ ಮೂಲಕ ಮೂಲಕ ನಗರಕ್ಕೆ ಮಾದಕವಸ್ತು ಆಮದಾಗಿದ್ದು, ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಡ್ರಗ್ಸ್​ ಬಂದ ಪಾರ್ಸಲ್​​ ಅನ್ನು ವಶಪಡಿಸಿಕೊಂಡಿದ್ದಾರೆ. ಅಂಚೆ ಮೂಲಕ ಡ್ರಗ್ಸ್​​ ಬಂದ ವಿಚಾರವನ್ನು ತಿಳಿದ ಸಿಸಿಬಿ ಪೊಲೀಸರು ಕೂಡಲೆ ಫಿಲ್ಡ್​​ಗೆ ಇಳಿದಿದ್ದಾರೆ. ಚರಸ್ ಮಾದಕ ವಸ್ತು ಗಿಫ್ಟ್ ಬಾಕ್ಸ್ ರೂಪದಲ್ಲಿ ಅಂಚೆ ಮೂಲಕ ನಗರಕ್ಕೆ ಬಂದಿದೆ. ಈ ಗಿಫ್ಟ್​ ಬಾಕ್ಸ್​ ಅನ್ನು ಜಾರ್ಖಂಡ್ ಮೂಲದ ರಿತಿಕ್ ರಾಜ್ ಎಂಬುವನು ಪಡೆಯುತ್ತಿದ್ದಾಗ, ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಂತರ ಸಿಸಿಬಿ ಪೊಲೀಸರು ಆರೋಪಿಯಿಂದಲೇ ಬಾಕ್ಸ್ ಓಪನ್ ಮಾಡಿಸಿದ್ದಾರೆ. ಬಾಕ್ಸ್ ಓಪನ್ ಮಾಡಿದಾಗ ಚರಸ್ ಇರುವುದು ಪತ್ತೆಯಾಗಿದೆ. ಸುಮಾರು 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಪತ್ತೆಯಾಗಿದೆ. ಕೇರಳ ಮೂಲದ ಆರೋಪಿ ಅದಿತ್ ಸರ್ವೋತ್ತಮ್ ರಿಷಿಕೇಷದಿಂದ ಅಂಚೆ ಮೂಲಕ ಚರಸ್ ಕಳುಸಿದ್ದನು. ಇತ್ತ ರಿತಿಕ್​ ರಾಜ್​ ಅರೆಸ್ಟ್​ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಅದಿತ್ ಸರ್ವೋತ್ತಮ್ ತಲೆಮರೆಸಿಕೊಂಡಿದ್ದಾನೆ

Read More

ಅಥಣಿ :ತಾಲೂಕಿನ ಸಂಬರಗಿ ಗ್ರಾಮದಲ್ಲಿ ಮಹಿಳೆ ಮೇಲೆ ಹಲ್ಯ ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಮಹಿಳೆ ಸಕ್ಕುಭಾಯಿ ಕಂಟೇಕರ (50) ಸೋದರ ಸಂಬಂಧಿ ಕರೆಪ್ಪ ಕಂಟೇಕರ (53) ಚಾಕುವಿನಿಂದ ಇರಿದು ಹತ್ಯಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಗಾಯಾಳು ಮಹಿಳೆ ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಗದ್ದೆ ಕೆಲಸದಿಂದ ಮನೆ ಕಡೆಗೆ ಬರುವಾಗ ಆಕಸ್ಮಿಕವಾಗಿ ಹಿಂದಿನಿಂದ ಬಂದು ಹಲ್ಲೆ ಮಾಡಿದ್ದಾನೆ ಗಾಯಾಳು ಮಹಿಳೆಯನ್ನ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಥಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಧಾಖಲಾಗಿದೆ.

Read More