Author: AIN Author

ಬೆಂಗಳೂರು: ಕುಮಾರಸ್ವಾಮಿ (HD Kumaraswamy) ಅವರು ಬಿಜೆಪಿ (BJP) ವಕ್ತಾರರಾಗಿದ್ದಾರೆ. ದೇವೇಗೌಡರಿಗೆ ಇಷ್ಟು ನೋವು ತರುತ್ತಾರೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಹೇಳಿದ್ದಾರೆ. ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಳ್ಳಬಾರದಿತ್ತು, ಅವರು ಪಕ್ಷದ ಶಾಲು ಹಾಕಿಕೊಳ್ಳಬೇಕಿತ್ತು. ನಾನು ಕೇಸರಿ ಶಾಲು ಹಾಕುವುದಿಲ್ಲ ಎಂಬ ದೇವೇಗೌಡರ (HD Devegowda) ಹೇಳಿಕೆ ಬಗ್ಗೆ ಡಿಸಿಎಂ ಪ್ರತಿಕ್ರಿಯಿಸಿದರು ದೇವೇಗೌಡರ ಸಿದ್ಧಾಂತವನ್ನು ನಾನು ಕಂಡಿದ್ದೇನೆ. ಮಕ್ಕಳಿಗಾಗಿ ಅವರು ಏನೆಲ್ಲಾ ಮಾಡಬೇಕು. ನನಗೆ ವಯಸ್ಸಾದ ಮೇಲೆ ನಮ್ಮ ಮನೆಗಳಲ್ಲಿ ಯಾವೆಲ್ಲಾ ಸಮಸ್ಯೆಗಳು ಬರುತ್ತವೆಯೋ ಗೊತ್ತಿಲ್ಲ. ಇದನೆಲ್ಲಾ ನೋಡಿದರೆ ನನಗೂ ಭಯವಾಗುತ್ತದೆ. ಪರಿಸ್ಥಿತಿ ನಾವು ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ಹೋಗಬೇಕಾಗುವಂತೆ ಮಾಡುತ್ತದೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ ಎಂದರು. ಕನಕಪುರದಲ್ಲಿ ಕಲ್ಲು ಹೊಡೆಯುವವರನ್ನು ಶಾಸಕರು ಸಂಸದರನ್ನಾಗಿ ಮಾಡಿದರೆ ದೇಶ ಒಡೆಯುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿದ ಅವರು ಕನಕಪುರದ ಜನರನ್ನು ಕೇಳಿ. ಅವರು ಅವರ ಮನೆಯವರೂ ಕಲ್ಲು ಹೊಡೆಯುತ್ತಿದ್ದರಲ್ಲ.…

Read More

ಹಂಪಿ : ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಎಸಗಿರುವ ಅನ್ಯಾಯವನ್ನು ವಿರೋಧಿಸಿ ಫೆಬ್ರವರಿ 7 ರಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಹಂಪಿ ವಿಶ್ವವಿದ್ಯಾಲಯ ಆವರಣದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ರಾಜ್ಯಕ್ಕೆ ಕೇಂದ್ರ ಬಜೆಟ್ ನಿಂದ ಅನ್ಯಾಯವಾಗಿರುವ ಕಾರಣಕ್ಕೆ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,. ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಏನನ್ನೂ ನೀಡದೇ ರಾಜ್ಯಕ್ಕೆ ಅನ್ಯಾಯವನ್ನು ಎಸೆಗಲಾಗಿದೆ. ರಾಜ್ಯಕ್ಕೆ ಬರಗಾಲದ ಪರಿಹಾರವಾಗಿ ಎನ್ ಡಿಆರ್ ಎಫ್ ನಿಂದ 4663 ಕೋಟಿ ರೂ. ಮೊತ್ತವನ್ನು ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಿ ನಾಲ್ಕು ತಿಂಗಳೂ ಕಳೆದಿದ್ದರೂ , ಕೇಂದ್ರದಿಂದ ಯಾವ ಸ್ಪಂದನೆಯೂ ದೊರೆತಿಲ್ಲ. ಈ ಎಲ್ಲ ಕಾರಣಗಳಿಗಾಗಿ ಅನಿವಾರ್ಯವಾಗಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ತಾನೂ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ದೇಶ ಅಖಂಡವಾಗಿರಬೇಕು: ಸಂಸದ ಡಿ.ಕೆ.ಸುರೇಶ್ ಅವರ ದೇಶವನ್ನು ಇಬ್ಭಾಗವಾಗಿಸುವ ಹೇಳಿಕೆ…

Read More

ಭಾರತ ಚಿತ್ರರಂಗದ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಅಭಿಮಾನಿಗಳಿಗೆ ಮತ್ತೊಮ್ಮೆ ಒದಗಿ ಬಂದಿದೆ. 10ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆ ದಿನಗಣನೆ ಆರಂಭವಾಗಿದ್ದು, ದೇಶದ ಸ್ಟಾರ್ ನಟರು ಇದೇ ಫೆಬ್ರವರಿ 23 ರಿಂದ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಅದರ ಭಾಗವಾಗಿ ನಿನ್ನೆ (feb.2) ದುಬೈನಲ್ಲಿ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಸಿಸಿಎಲ್ ಗೆ ಚಾಲನೆ ನೀಡಲಾಗಿದೆ. ಬುರ್ಜ್ ಖಲೀಫಾದಲ್ಲಿ ಕಟ್ಟಡದ ಮೇಲೆ ಸಿಸಿಎಲ್ ಪ್ರೋಮೋ ಝಲಕ್ ಪ್ರದರ್ಶಿಸಲಾಯಿತು. ಈ ದೃಶ್ಯವನ್ನು ಕಣ್ತುಂಬಿಕೊಂಡ ಸ್ಟಾರ್ಟ್ ರೋಮಾಂಚನಗೊಂಡರು. ಪ್ರೋಮೋ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡದಿಂದ ಕಿಚ್ಚ ಸುದೀಪ್, ಹಿಂದಿಯಿಂದ ಸೊಹೈಲ್ ಖಾನ್ , ತಮಿಳುಚಿತ್ರರಂಗದಿಂದ ಆರ್ಯ ಮತ್ತು ಜೀವಾ , ತೆಲುಗಿನಿಂದ ತಮನ್ ಮತ್ತು ಸುಧೀರ್ ಬಾಬು, ಬಂಗಾಳಿಯಿಂದ ಜಿಸ್ಸು ಸೇನ್‌ಗುಪ್ತಾ , ಪಂಜಾಬಿಯಿಂದ ಬುನ್ನು ಧಿಲ್ಲೋನ್ ಮತ್ತು ಸೋನು ಸೂದ್, ಮಲಯಾಳಂನಿಂದ ಇಂದ್ರಜಿತ್ ಸುಕುಮಾರನ್ ಮತ್ತು ಉನ್ನಿ ಮುಕುಂದನ್ ಸೇರಿದಂತೆ CCL ನ ಎಲ್ಲಾ 8 ತಂಡಗಳ…

Read More

ಬೆಂಗಳೂರು: ದೈಹಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದ ಫಿಟ್ನೆಸ್‌ ತರಬೇತುದಾರ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. 45 ವಯಸ್ಸಿನ ಸೈಕ್ಲಿಸ್ಟ್, ಫಿಟ್ನೆಸ್ ತರಬೇತುದಾರ ಅನೀಲ್ ಕಡ್ಸೂರ್ ಶುಕ್ರವಾರ ಬೆಳಗ್ಗೆ ಹೃದಯಘಾತದಿಂದ ನಿಧನರಾದರು. ತೀವ್ರ ಅಸ್ವಸ್ಥರಾಗಿದ್ದ ಅನೀಲ್‌ರನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಪ್ರತಿದಿನಿ 100 ಕಿ.ಮೀ‌ ಸೈಕ್ಲಿಂಗ್ ಮಾಡಿ ಅನಿಲ್‌ ಕ್ರಿಯಾಶೀಲರಾಗಿದ್ದರು. 100 ಕ್ಕೂ ಹೆಚ್ಚು ಸೈಕ್ಲಿಂಗ್‌ನ್ನು ಪೂರ್ತಿಗೊಳಿಸಿದ್ದರು. ಸೈಕ್ಲಿಂಗ್ ಮಾಡುವವರಿಗೆ ಸ್ಫೂರ್ತಿಯಾಗಿದ್ದರು. 42 ತಿಂಗಳು ನಿರಂತರವಾಗಿ, ಸೆಂಚ್ಯೂರಿ ರೇಡ್ ಮಾಡಿ ಗಮನ ಸೆಳೆದಿದ್ದರು. ಉತ್ತಮ ಹಾಗೂ ಕಠಿಣ ಸೈಕ್ಲಿಂಗ್ ಪಟುಗಳಾಗಲು ಸಲಹೆ ನೀಡುತ್ತಿದ್ದರು. ಸೈಕ್ಲಿಂಗ್ ಮಾಡುವ ಬಹುತೇಕ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರು.

Read More

ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ (Ind vs Eng) ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯಗೊಂಡಿದೆ. 336 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿರುವ ಭಾರತ (Team India) ಬೃಹತ್‌ ಮೊತ್ತದತ್ತ ದಾಪುಗಾಲಿಟ್ಟಿದೆ. ವಿಶಾಖಪಟ್ಟಣಂನ ಡಾ.ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಮೊದಲ ದಿನದಾಟದಲ್ಲಿ 93 ಓವರ್‌ಗಳಲ್ಲಿ 336 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿದೆ. ಆರಂಭಿಕರಾಗಿ ರೋಹಿತ್ ಶರ್ಮಾ (Rohit Sharma) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) ಜೋಡಿ ಮೊದಲ ವಿಕೆಟ್‌ಗೆ 17.3 ಓವರ್‌ಗಳಲ್ಲಿ 40 ರನ್‌ ಕಲೆಹಾಕಿತ್ತು. ರೋಹಿತ್‌ 41 ಎಸೆತಗಳಲ್ಲಿ ಎದುರಿಸಿ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪ,ಮೊತ್ತಕ್ಕೆ ಔಟಾಗಿ ಪೆವಿಲಿಯನ್‌ನತ್ತ ಮುಖ ಮಾಡಿದರು. ಶುಭಮನ್‌ ಗಿಲ್‌ 46 ಎಸೆತಗಳಲ್ಲಿ 34 ರನ್‌, ಶ್ರೇಯಸ್‌ ಅಯ್ಯರ್‌ 59 ಎಸೆತಗಳಲ್ಲಿ 27 ರನ್‌, ರಜತ್‌ ಪಾಟಿದಾರ್‌ 72 ಎಸೆತಗಳಲ್ಲಿ 32 ರನ್‌, ಅಕ್ಷರ್‌ ಪಟೇಲ್‌…

Read More

ಮುಂಬೈ: ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟ ಪೂನಂ ಪಾಂಡೆ (Poonam’s Pandey) ಸಾವಿನ ಸುತ್ತ ಅನುಮಾನದ ಹುತ್ತ ದಟ್ಟವಾಗಿ ಬೆಳೆಯಲು ಆರಂಭವಾಗಿದೆ. ಹೌದು. ಸಾಮಾಜಿಕ ಜಾಲತಾಣದಲ್ಲಿ (Social Media) ನಿಧನ ಸುದ್ದಿ ಪ್ರಕಟವಾದ ಬಳಿಕ ಇಲ್ಲಿಯವರೆಗೆ ಪೂನಂ ಪಾಂಡೆಯವರ ಯಾವುದೇ ಫೋಟೋ ಲಭ್ಯವಾಗಿಲ್ಲ. ಈ ಕಾರಣಕ್ಕೆ ಪ್ರಚಾರದ ಹುಚ್ಚಿಗೆ ಈ ಸುದ್ದಿಯನ್ನು ಹರಿಬಿಡಲಾಗಿದ್ಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಪೂನಂ ಪಾಂಡೆ ಅವರ ಮ್ಯಾನೇಜರ್‌ ಅವರನ್ನು ಕೇಳಿದರೆ ನಮಗೆ ಅವರ ಸಹೋದರಿ ಅವರಿಂದ ನಿಧನರಾದ ಸುದ್ದಿ ತಿಳಿದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಖಚಿತ ಪಡಿಸಲು ಸಹೋದರಿ ಅವರಿಗೆ ಕರೆ ಮಾಡಿದರೆ ಅವರ ಮೊಬೈಲ್‌ ಸಂಖ್ಯೆ ಸ್ವಿಚ್‌ ಆಫ್‌ ಆಗಿದೆ ಕಳೆದ ವರ್ಷ ಪೂನಂ ಪಾಂಡೆ ಅವರು ಬ್ರೈಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದರು. ‘ನಿಮ್ಮ ಮುಂದೆ ಒಂದು ದೊಡ್ಡ ಸುದ್ದಿ ಬರುತ್ತಿದೆ. ಎಲ್ಲರಿಗೂ ಸರ್​ಪ್ರೈಸ್ ಆಗಲಿದೆ. ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡೋದು ಎಂದರೆ ನನಗೆ ಖುಷಿ.…

Read More

ಲಂಡನ್: ಆಸ್ಟ್ರೇಲಿಯಾಕ್ಕೆ (Australia) 600 ಕೋಟಿ ರೂ. ಮೌಲ್ಯದ ಕೊಕೇನ್ (Cocaine) ರಫ್ತು ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ದಂಪತಿಗೆ ಯುಕೆನಲ್ಲಿ (U.K) ಶಿಕ್ಷೆ ವಿಧಿಸಲಾಗಿದೆ. ಅರ್ತಿ ಧೀರ್ (59) ಮತ್ತು ಕವಲ್ಜಿತ್ಸಿನ್ಹ್ ರೈಜಾಡಾ (35) ಶಿಕ್ಷೆಗೆ ಒಳಗಾದ ದಂಪತಿ. ಭಾರತ ಮೂಲದ (Indian Origin Couple)  ಈ ದಂಪತಿ 512 ಕಿಲೋ ಕೊಕೇನ್ ಅನ್ನು ಮೇ 2021 ರಲ್ಲಿ ಯುಕೆಯಿಂದ ಆಸ್ಟ್ರೇಲಿಯಾಕ್ಕೆ ವಾಣಿಜ್ಯ ವಿಮಾನದ ಮೂಲಕ ಕಳ್ಳಸಾಗಣಿಕೆ ಮಾಡಿದ ಪ್ರಕರಣದಲ್ಲಿ ಈಗ ಶಿಕ್ಷೆ ವಿಧಿಸಲಾಗಿದೆ. ಸೌತ್‌ವಾಕ್ ಕ್ರೌನ್ ಕೋರ್ಟ್‌ನಲ್ಲಿ ಪ್ರಕರಣ ಸಂಬಂಧ ವಿಚಾರಣೆ ನಡೆಯಿತು. ಈಲಿಂಗ್‌ನಲ್ಲಿನ ಹ್ಯಾನ್‌ವೆಲ್‌ನಿಂದ ಬಂದ ದಂಪತಿಯ 12 ರಫ್ತು ಮತ್ತು ಅಕ್ರಮ ಹಣ ವರ್ಗಾವಣೆಯ 18 ಪ್ರಕರಣದ ಕೇಸ್ ಅದೇ ನ್ಯಾಯಾಲಯದಲ್ಲಿ ಮಂಗಳವಾರ (ಫೆ.6) ರಂದು ನಡೆಯಲಿದೆ

Read More

ವಾಷಿಂಗ್ಟನ್: ಮಾಜಿ ಪ್ರೇಮಿ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಆಕೆಯ ಮೂಗನ್ನೇ ಪ್ರೇಮಿ ಕಚ್ಚಿರುವ ಘಟನೆ ಅಮೇರಿಕಾದ (America) ಬೆಕ್ಸಾರ್‌ನಲ್ಲಿ ನಡೆದಿದೆ. ಬೆಕ್ಸಾರ್‌ನಲ್ಲಿ (Bexar) ಯುವತಿಯೊಬ್ಬಳು ಮಾಜಿ ಪ್ರಿಯಕರನಿಗೆ ತಿಳಿಯದೇ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಹಲವು ಸಮಯದ ನಂತರ ಯುವಕನಿಗೆ ಗೆಳತಿ ಕ್ಲಬ್‌ನಲ್ಲಿ ಕೆಲಸ ಮಾಡುತ್ತಿರುವ ವಿಚಾರ ಗೊತ್ತಾಗಿದೆ ಈ ವಿಚಾರ ತಿಳಿದ ಬಳಿಕ ಪ್ರೇಯಸಿಗೆ ಕರೆ ಮಾಡಿ ವಿಚಾರಿಸಿದ್ದಾನೆ. ಆದರೆ ಯುವತಿ ಕರೆಯನ್ನು ತಿರಸ್ಕರಿಸಿದ್ದಾಳೆ. ಸಿಟ್ಟಾದ ಯುವಕ ಮನೆಗೆ ನುಗ್ಗಿ ಕಿಟಕಿಯನ್ನು ಒಡೆದು ಪ್ರೇಯಸಿಯನ್ನು ಪ್ರಶ್ನೆ ಮಾಡಿದ್ದಾನೆ. ಬಳಿಕ ಆಕೆಯ ಮೂಗನ್ನೇ ಕಚ್ಚಿ ಹುಚ್ಚಾಟ ಮಾಡಿದ್ದಾನೆ. ಒಂದು ವರ್ಷದ ಹಿಂದೆ ಈ ಘಟನೆ ನಡೆದಿದ್ದು ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Read More

ಹೈದರಾಬಾದ್: ತಂದೆ ಜೊತೆ ಗುಡಿಸಲಿನಲ್ಲಿ (Hut)  ಮಲಗಿದ್ದ ಒಂದು ವರ್ಷ ಮಗು ಮೇಲೆ ಬೀದಿ ನಾಯಿಗಳು  (Street Dogs) ದಾಳಿ ಮಾಡಿ ತಿಂದಿರುವ ಘಟನೆ ತೆಲಂಗಾಣದ (Telangana)  ಶಂಶಾಬಾದ್‌ನಲ್ಲಿ ನಡೆದಿದೆ. ಕೆ. ನಾಗರಾಜು (1) ಮೃತಪಟ್ಟ ಮಗು. ಮಗುವಿನ ತಂದೆ ಸೂರ್ಯಕುಮಾರ್ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಶಂಶಾಬಾದ್‌ನ ರಾಜೀವ್ ಗೃಹಕಲ್ಪ ಸಂಕೀರ್ಣದ ಬಳಿ ಗುಡಿಸಲಿನಲ್ಲಿ ಹಿರಿಯ ಮಗನಾದ ನಾಗರಾಜು ಮತ್ತು 20 ದಿನದ ಮಗುವಿನ ಜೊತೆ ಮಲಗಿದ್ದ. ಈ ವೇಳೆ ಬೀದಿ ನಾಯಿಗಳ ಗುಂಪು ಗುಡಿಸಲಿಗೆ ನುಗ್ಗಿ ಮಕ್ಕಳ ಮೇಲೆ ದಾಳಿ ನಡೆಸಿವೆ ತಡರಾತ್ರಿ 1:30 ರ ಹೊತ್ತಿಗೆ ಸೂರ್ಯಕುಮಾರ್‌ನನ್ನು ಸ್ಥಳೀಯರು ಎಬ್ಬಿಸಿ ಬೀದಿ ನಾಯಿಗಳ ಗುಂಪು ಮಗುವಿನ ಮೇಲೆ ದಾಳಿ ನಡೆಸಿ ತಿನ್ನುತ್ತಿದ್ದವು ಎಂದು ತಿಳಿಸಿದ್ದಾರೆ. ವಿಷಯ ತಿಳಿದ ಸೂರ್ಯ ಹೋಗಿ ನೋಡಿದಾಗ ಮಗು ನಾಯಿಗಳ ಪಾಲಾಗಿತ್ತು.

Read More

ದೆಹಲಿ: ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಮುಂದಿನವಾರದಿಂದಲೇ ʻಭಾರತ್‌ʼ ಬ್ರ್ಯಾಂಡ್‌ ಅಕ್ಕಿ (Bharat Rice) ಮಾರಾಟ ಆರಂಭಿಸುವುದಾಗಿ ಕೇಂದ್ರ ಸರ್ಕಾರ (Union Governmen) ತಿಳಿಸಿದೆ. ಕೇಂದ್ರ ಸರ್ಕಾರವೇ ನೇರವಾಗಿ ಜನಸಾಮಾನ್ಯರಿಗೆ ಪ್ರತಿ ಕೆಜಿಗೆ 29 ರೂ.ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ. ಅಲ್ಲದೇ ಸಗಟು ಖರೀದಿದಾರರು ತಮ್ಮ ಬಳಿ ಹೊಂದಿರುವ ಅಕ್ಕಿ ಸಂಗ್ರಹದ ಪ್ರಮಾಣವನ್ನೂ ಬಹಿರಂಗಪಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ ಈ ಬಗ್ಗೆ ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ (Sanjeev Chopra) ಮಾತನಾಡಿದ್ದು, ಕಳೆದ ಒಂದು ವರ್ಷದಲ್ಲಿ ಚಿಲ್ಲರೆ ಮತ್ತು ಸಗಟು ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಶೇ.15ರಷ್ಟು ಹೆಚ್ಚಳವಾಗಿದೆ. ವಿವಿಧ ಮಾದರಿಯ ಅಕ್ಕಿ ರಫ್ತಿನ ಮೇಲೆ ನಿಯಂತ್ರಣ ಹೇರಿದ್ದರೂ ದರ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಮುಂದಿನ ವಾರದಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವೇ ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 29 ರೂ. ನಂತೆ ಅಕ್ಕಿ ಮಾರಾಟ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ʻಭಾರತ್‌ ಬ್ರ್ಯಾಂಡ್‌ʼ…

Read More