Author: AIN Author

ಕಲಬುರಗಿ: ಪ್ರೀತಿಸಿ ಮದ್ವೆಯಾಗಿದ್ದ ಜೋಡಿ ಮೂರೇ ತಾಸಿಗೆ ನೇಣಿಗೆ ಶರಣಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಯಡ್ರಾಮಿ ತಾಲೂಕಿನ ಮಾಗಣಗೇರಾದಲ್ಲಿ ಘಟನೆ ನಡೆದಿದ್ದು ನೇಣಿಗೆ ಶರಣಾದ ಜೋಡಿಯನ್ನ ಶಶಿಕಲಾ & ಗೊಲ್ಲಾಳಪ್ಪ ಅಂತ ಗುರುತಿಸಲಾಗಿದೆ. ಬೇರೊಬ್ಬ ಹುಡುಗನ ಜೊತೆ ಶಶಿಕಲಾಗೆ ನಿಶ್ಚಿತಾರ್ಥವಾದ ಹಿನ್ನಲೆ ಶಶಿಕಲಾಳನ್ನ ನಿನ್ನೆ ಸಂಜೆ ಮನೆಯಿಂದ ಕರೆದೂಯ್ದು ಮದ್ವೆಯಾಗಿದ್ದ ಗೊಲ್ಲಾಳಪ್ಪ.ವಿಪರ್ಯಾಸ ಅಂದ್ರೆ ಮದ್ವೆಯಾದ ಬೆನ್ನಲ್ಲೇ ಓಡಿಹೋದ ಜೋಡಿ ಮರಕ್ಕೆ ನೇಣು ಬಿಗಿದುಕೊಂಡು ಸುಸೈಡ್ ಮಾಡಿಕೊಂಡಿದೆ. ಮಾತ್ರವಲ್ಲ ಸಾಯೋಕು ಮುನ್ನ ಈ ಜೋಡಿ ಸೆಲ್ಫಿ ತೆಗೆಸಿಕೊಂಡಿದೆ. ಯಡ್ರಾಮಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ…

Read More

ಬೆಳಗಾವಿ:  ದನದ ಕೊಠಡಿಯಂತಿರುವ ವರ್ಗಕೊಣೆಗಳು, ಸುಣ್ಣ ಬಣ್ಣದ ಭಾಗ್ಯ ಕಾಣದ ಶಾಲಾ ಕೊಠಡಿಗಳು ಶಾಲಾ ಕಾರ್ಯಲಯದಲ್ಲಿ ಸಂವಿದಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ ಸೇರಿದಂತೆ ಯಾವಬ್ಬ ಸ್ವತಂತ್ರ ಹೋರಾಟಗಾರರು ಮಹಾನ ವ್ಯಕ್ತಿಗಳ ಭಾವಚಿತ್ರ ಇರುವುದಿಲ್ಲ ಇದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೊಡ ಪಟ್ಟದಣ ಶಾಲೆಯೊಂದರ ದು:ಸ್ಥಿತಿ ಮಲ್ಲಿಕಾರ್ಜುನ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದ ದು:ಸ್ಥಿತಿ ಶಾಲಾ ಮೈದಾನದ ತುಂಬೆಲ್ಲ ಅರಿಶಿನ ಒಣಗಿಸಲು ಹಾಕಿದ್ದಾರೆ, ಇದರಿಂದ ಮಕ್ಕಳಿಗೆ ಆಟ ಆಡಲು ತೊಂದರೆಯಾಗುತ್ತಿದೆ, ಮಕ್ಕಳ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ ಖಾಸಗಿ ವ್ಯಕ್ತಿಗಳ ಆಮಿಷಕ್ಕೆ ಒಳಗಾಗಿ ಶಾಲಾ ಮೈದಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಅನ್ನೋ ಅನುಮಾನ ಡಿಟವಾಗಿದೆ ಈ ಶಾಲೆ ಅನುದಾನಿತ ಶಾಲೆಯಾಗಿದ್ದು,ಸರ್ಕಾರದ ಅನುದಾನವನ್ನು ಎಲ್ಲಿ ಉಪಯೋಗಿಸಿಕೊಂಡರು..? ಶಾಲಾ ಅನುದಾನವನ್ನು ಶಾಲೆಗೆ ಉಪಯೋಗಿಸಿದ್ದೆಯಾದರೆ ಶಾಲೆ ಇಂತಹ ದುಸ್ಥಿತಿಗೆ ಬರ್ತಾ ಇರಲಿಲ್ಲ ಶಾಲೆಗೆ ಕಾಂಪೌಂಡ್ ಕೂಡ ಇಲ್ಲಾ, ಶೌಚಾಲಯವಂತೂ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದೆ, ಇದರಿಂದ ಮಕ್ಕಳು ಬಹಿರ್ದೆಶೇಯನ್ನೇ ಅವಲಂಬಿಸಿದ್ದಾರೆ ಶೌಚಾಲಯದಲ್ಲಿ ಗುಟುಕಾ ಸೇರಿದಂತೆ ತಂಬಾಕು ಉತ್ಪನಗಳ…

Read More

ಗದಗ: ಯಶ್ ಬರ್ತಡೇ ವೇಳೆ ಬ್ಯಾನರ್ ಕಟ್ಟುವಾಗ ಅಭಿಮಾನಿಗಳ ಸಾವು ಪ್ರಕರಣ ಹಿನ್ನೆಲೆಯಲ್ಲಿ  ಗಾಯಾಳುಗಳಿಗೂ ಆರ್ಥಿಕ ಸಹಾಯ ಮಾಡಿದ ನಟ ಯಶ್ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜ.7 ರ ತಡರಾತ್ರಿ ನಡೆದಿದ್ದ ಘಟನೆಯಾಗಿದ್ದು ಜ.8 ರಂದು ಯಶ್ ಬರ್ತಡೇ ಹಿನ್ನೆಲೆ ರಾತ್ರಿ ಕಟೌಟ್ ನಿರ್ಮಿಸುವ ವೇಳೆ ಅವಘಡ ಆಗಿತ್ತು  ಕಟೌಟ್ ಗೆ ವಿದ್ಯುತ್ ತಂತಿ ಸ್ಪರ್ಶವಾಗಿ ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿದ್ರು..ಹನುಂತ‌ ಹರಿಜನ(21) ಮುರಳಿ ನಡುವಿನಮನಿ (20) ನವೀನ್ ಗಾಜಿ (19 ಯುವಕರು ಸಾವು ಘಟನೆಯಲ್ಲಿ ಇನ್ನುಳಿದ ನಾಲ್ಕು ಜನ ಯುವಕರಿಗೆ ಗಂಭೀರ ಗಾಯವಾಗಿತ್ತು..‌ ಮಂಜುನಾಥ, ಪ್ರಕಾಶ, ಹನುಮಂತ‌ ಹಾಗೂ ನಾಗರಾಜ ಅನ್ನೋರಿಗೆ ಗಂಭೀರ ಗಾಯವಾಗಿತ್ತು ಘಟ‌ನೆ ನಡೆದ ದಿನವೇ ಸೂರಣಗಿ ಗ್ರಾಮಕ್ಕೆ ಸ್ವತಃ ನಟ ಯಶ್ ಅವರೇ ಭೇಟಿ ಕೊಟ್ಟಿದ್ದರು ಬಳಿಕ ಜ.17 ರಂದು ಯಶ್ ಆಪ್ತರು ಮೃತ ಯುವಕರ ಕುಟುಂಬಸ್ಥರಿಗೆ ತಲಾ 05 ಲಕ್ಷ ರೂ. ಚೆಕ್ ವಿತರಿಸಿದ್ರು.. ಅದೇ ವೇಳೆ ಗಾಯಾಳುಗಳ ಬ್ಯಾಂಕ್…

Read More

ಕಲಬುರಗಿ:  ಈ ಬಾರಿಯ ಕಲಬುರಗಿ ಲೋಕಸಭೆಗೆ ಸ್ಪರ್ಧಿಸಲು ನಮ್ಮ ಪಕ್ಷದವರೇ 10 ಜನ ಟಿಕೆಟ್ ಕೇಳ್ತಿದ್ದಾರೆ ಆದ್ರೆ ವರಿಷ್ಠರು ಟಿಕೆಟ ನನಗೇ ಕೊಡ್ತಾರೆ ಅಂತ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಉಮೇಶ್ ಜಾಧವ್ ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕು ನಮ್ಮ ಬಿಜೆಪಿಯಲ್ಲಿ ಮಾತ್ರ ಇದೆ..ಆದ್ರೆ ಈ ಪದ್ದತಿ ಕಾಂಗ್ರೆಸ್ ಪಕ್ಷದಲ್ಲಿದೆಯಾ ಅಂತ ಪ್ರಶ್ನೆ ಮಾಡಿದ್ರು. ಅದೇ ಇರಲಿ ಈ ಬಾರಿ ಕಲಬುರಗಿ ಟಿಕೆಟ್ ಮತ್ತೆ ನನಗೇ ಕೊಡ್ತಾರೆ ಯಾಕ್ ಕೊಡಲ್ಲ ಅಂತ ಹೇಳಿದ್ರು..

Read More

ಬೆಂಗಳೂರು: ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿಯವರಿಗೆ ‘ಭಾರತ ರತ್ನ’ ಪ್ರಶಸ್ತಿ ಘೋಷಿಸಿದ ಕೇಂದ್ರ ಬಿಜೆಪಿ ಸರಕಾರದ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸ್ವಾಗತಿಸಿದ್ದಾರೆ. ಇದೊಂದು ಉತ್ತಮ ನಿರ್ಧಾರ. ಅರ್ಹತೆಯನ್ನು ಗುರುತಿಸಿ ಈ ಆಯ್ಕೆ ಮಾಡಲಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನವನ್ನು ಪ್ರಕಟಿಸಿದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದು, ಇದಕ್ಕಾಗಿ ಮೋದಿಜೀ ಮತ್ತು ಅವರ ಸಂಪುಟದ ಸದಸ್ಯರಿಗೆ ಧನ್ಯವಾದಗಳು ಮತ್ತು ಅಡ್ವಾಣಿಯವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಅಡ್ವಾಣಿ ಅವರು ಭಾರತದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಕೇಂದ್ರ ಗೃಹ ಸಚಿವ ಮತ್ತು ಮಾಹಿತಿ- ತಂತ್ರಜ್ಞಾನ ಸಚಿವರಾಗಿ ಅವರು ಸಮರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಂಸದೀಯ ನಡೆಯೂ ಆದರ್ಶಪ್ರಾಯವಾಗಿವೆ ಎಂದು ವಿಜಯೇಂದ್ರ ಅವರು ಮೆಚ್ಚುಗೆ ಸೂಚಿಸಿದ್ದಾರೆ.

Read More

ಬೆಂಗಳೂರು: ಕಳ್ಳರು ಚಾಪೆ ಕೆಳಗೆ ನುಸುಳಿದ್ರೆ, ಪೊಲೀಸರು ರಂಗೋಲಿ ಕೆಳಗಡೆ ನುಸಳುತ್ತಾರೆ ಅನ್ನೊ ಮಾತಿದೆ.. ಖತರ್ನಾಕ್ ಕಳ್ಳರು‌ ಅದೆಂಥೆತಾ ಖತರ್ನಾಕ್ ಕೆಲಸಕ್ಕೆ ಮುಂದಾದ್ರೂ ಪೊಲೀಸರು ಬಗ್ಗು ಬಡೀತಾರೆ.. ಅದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಸ್ಟೋರಿ ಇದೆ ನೋಡಿ.. ಈ ಫೋಟೋದಲ್ಲಿ  ಸಣ್ಣ ಸಣ್ಣ ಕವರ್‌ನಲ್ಲಿರುವ ಇದನ್ನು ನೋಡಿದ್ರೆ ಯಾವುದೇ ಚಾಕಲೇಟ್ ಅಥವಾ ಯಾವುದೋ ಸ್ವೀಟ್ ಅನ್ನಿಸತ್ತೆ ಅಲ್ವಾ.. ಆದ್ರೆ ಇದು ಸ್ವೀಟ್ ಅಲ್ಲಾ ಚಾಕ್ಲೇಟೋ ಅಲ್ಲ.. ಹೌದು.. ಇದು ಮಾದಕ ವಸ್ತುವಾದ ಚರಸ್.. ಯಸ್.. ಇದು ಎಲ್ಲಿಂದ ಬಂತು, ಹೇಗೆ ಬಂತು ಅಂತ‌ ಕೇಳಿದ್ರೆ ನೀವು ಸಹ ಆಶ್ಚರ್ಯ ಪಡ್ತೀರಾ.. ಈ ಖತರ್ನಾಕ್ ಗಳು ಇಂಡಿಯನ್ ಪೋಸ್ಟ್‌ ಮೂಲಕ ಮಾದಕವಸ್ತುಗಳನ್ನು ಪಾರ್ಸೆಲ್ ತರಿಸ್ತಾಯಿರೋದು ಇದೀಗ ಬೆಳಕಿಗೆ ಬಂದಿದೆ.. ಬೇರೆ ಬೇರೆ  ರಾಜ್ಯಗಳಿಂದ ಪೋಸ್ಟ್ ಮೂಲಕ ನಗರಕ್ಕೆ ಮಾದಕವಸ್ತು ಸಫ್ಲೈ‌ ಮಾಡುವ ಜಾಲ ಇದೀಗ ಪತ್ತೆಯಾಗಿದೆ.. ಜಾರ್ಖಂಡ್ ಮೂಲದ ರಿತಿಕ್ ಎಂಬಾತನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.. ಖಚಿತ ಮಾಹಿತಿ ಮೇರೆಗೆ ಪೋಸ್ಟ್ ಟ್ರ್ಯಾಪ್…

Read More

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಲಾಲ್‌ ಕೃಷ್ಣ ಅಡ್ವಾನಿ (LK Advani) ಅವರಿಗೆ ಭಾರತ ರತ್ನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರತಿಷ್ಠಿತ ‘ಭಾರತ ರತ್ನ’ ಗೌರವಕ್ಕೆ ಪಾತ್ರರಾದ ಹಿರಿಯ ರಾಜಕಾರಣಿ, ಬಿಜೆಪಿ ಧೀಮಂತ ಮತ್ತು ಮಾಜಿ ಉಪಪ್ರಧಾನಿ ಶ್ರೀ ಎಲ್ ಕೆ ಅಡ್ವಾಣಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಅಭಿನಂದಿಸಿದ್ದಾರೆ. https://x.com/hd_kumaraswamy/status/1753681114328367373?t=v3lbJlpHC6y3BiuuZwkKVw&s=08 ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರತಿಷ್ಠಿತ ‘ಭಾರತ ರತ್ನ’ ಗೌರವಕ್ಕೆ ಪಾತ್ರರಾದ ಹಿರಿಯ ರಾಜಕಾರಣಿ, ಬಿಜೆಪಿ ಧೀಮಂತ ಮತ್ತು ಮಾಜಿ ಉಪಪ್ರಧಾನಿ ಶ್ರೀ ಎಲ್ ಕೆ ಅಡ್ವಾಣಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅಂತಹ ಉನ್ನತ ಮಟ್ಟದ ವ್ಯಕ್ತಿಗೆ ಈ ಅರ್ಹ ಪ್ರಶಸ್ತಿಯನ್ನು ಗುರುತಿಸಿ ಘೋಷಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಧನ್ಯವಾದಗಳು. ಭಾರತೀಯ ರಾಜಕೀಯದಲ್ಲಿ ನಿಷ್ಠೆ, ಬದ್ಧತೆ, ಸ್ನೇಹಪರತೆ ಮತ್ತು…

Read More

ನವದೆಹಲಿ : ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾನಿ ಅವರು ಭಾರತ ರತ್ನ ಪ್ರಶಸ್ತಿ ಭಾಜನರಾಗಿದ್ದಾರೆ. ಇವರಿಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡುವ ಮೂಲಕ ಶುಭ ಕೋರಿದ್ದಾರೆ. ಪ್ರಧಾನಿ ಮೋದಿಯವರು ಎಕ್ಸ್​ ಪೋಸ್ಟ್​ ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಎಲ್​ ಕೆ ಅಡ್ವಾಣಿಯವರಿಗೆ ಭಾರತರತ್ನ ಪ್ರಶಸ್ತಿ ಸಿಗಲಿದೆ ಎನ್ನುವ ಸುದ್ದಿಯನ್ನು ಹಂಚಿಕೊಳ್ಳಲು ತುಂಬ ಸಂತೋಷವಾಗುತ್ತದೆ. ಈಗಾಗಲೇ ಅವರಿಗೆ ಕರೆ ಮಾಡಿ ಶುಭಕೋರಿದ್ದೇನೆ, ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಇವರು ಒಬ್ಬರು, ಭಾರತದ ಅಭಿವೃದ್ದಿಗೆ ಅವರ ಕೊಡುಗೆ ಸ್ಮರಣೀಯ ಎಂದು ಪೋಸ್ಟ್​​ ಮಾಡಿದ್ದಾರೆ. ‘ಭಾರತ ರತ್ನ’ ಲಾಲ್ ಕೃಷ್ಣ ಅಡ್ವಾಣಿ ಅವರ ಕಿರುಪರಿಚಯ ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ ಅವರು ಭಾರತದಲ್ಲಿ ಸುದೀರ್ಘ ಮತ್ತು ಪ್ರಭಾವಶಾಲಿ ರಾಜಕೀಯ ವೃತ್ತಿಜೀವನವನ್ನು ಹೊಂದಿದ್ದಾರೆ. ಅಡ್ವಾಣಿ ಅವರು ನವೆಂಬರ್ 8, 1927 ರಂದು ವಿಭಜನೆಯ ಪೂರ್ವ ಸಿಂಧ್‌ನಲ್ಲಿ ಜನಿಸಿದರು. 1947 ರಲ್ಲಿ, ವಿಭಜನೆಯ ನಂತರ ಅವರು  ದೆಹಲಿಗೆ ವಲಸೆ ಬಂದರು. 1951…

Read More

ಬೆಂಗಳೂರು: ಮೂರು ದಿನಗಳಿಂದ ಸುದ್ದಿ ನೋಡುತ್ತಿದ್ದೇನೆ, ನನ್ನ ಮಾತನ್ನ ತಿರುಚಲಾಗಿದೆ. ನಾನು ನನ್ನ ರಾಜ್ಯದ ಜನರ ಹಿತ, ಕನ್ನಡಿಗರ ಗೌರವಕ್ಕಾಗಿ ಎಂದೂ ಹಿಂದೆ ಸರಿದಿಲ್ಲ. ಕೆಲವರು ನನ್ನ ಹೇಳಿಕೆಯನ್ನು ತಿರುಚಿ ನಾನು ದೇಶದ ವಿಭಜನೆ ಹೇಳಿಕೆ ನೀಡಿದ್ದೇನೆಂದು ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ. ಅವರೆಲ್ಲರಿಗೂ ಒಳ್ಳೆಯದಾಗಲಿ, ನನ್ನನ್ನ ನಾಯಕನನ್ನಾಗಿ ಬಿಂಬಿಸುತ್ತಿದ್ದಾರೆ. ಅವರೆಲ್ಲರಿಗೂ ಒಳ್ಳೆಯದಾಗಲಿ, ನಾನು ಕನ್ನಡಕ್ಕಾಗಿ ಕರ್ನಾಟಕದ ಹಿತಕ್ಕಾಗಿಯಾವುದೇ ತ್ಯಾಗಕ್ಕೂ ಸಿದ್ದನಿದ್ದೇನೆ. ರಾಜ್ಯದ ಯಾವ ಪೊಲೀಸ್ ಠಾಣೆಗಾದರೂ ದೂರು ಕೊಡಲಿ, ಯಾವ ಕೋರ್ಟಿನಲ್ಲಾದರೂ ದೂರು ನೀಡಲಿ ಆ ಕೇಸನ್ನ ಎದುರಿಸಲಿಕ್ಕೆ ಜನರ ಆಶೀರ್ವಾದದಿಂದ ಸಿದ್ದನಿದ್ದೇನೆ. ಉಳಿದ ವಿಚಾರಗಳನ್ನು ನಾನು ಚರ್ಚಿಸಲು ಹೋಗಲ್ಲ ಇಲ್ಲಿ ಮಾದ್ಯಮದವರು ನಾನು ಏನು ಹೇಳುತ್ತೇನೆ ಎಂದು ಕಾಯುತ್ತಿದ್ದಾರೆ. ಕನ್ನಡಿಗರಿಗಾದ ಅನ್ಯಾಯವನ್ನು ಪ್ರಶ್ನಿಸಿದರೆ ದೇಶ ದ್ರೋಹದ ಹಣೆಪಟ್ಟಿಯನ್ನ ಬಿಜೆಪಿಯವರು ಕಟ್ಟುತ್ತಿದ್ದಾರೆ. ಈ ರಾಜ್ಯದಿಂದ 3-4 ಬಾರಿಗೂ ಮಿಗಲಾಗಿ 25 ಸ್ಥಾನಗಳನ್ನ ನೀಡಿದ್ದೇವೆ. ಅಖಂಡ ಕರ್ನಾಟಕದ ನಾಲ್ಕು ಲಕ್ಷ ಕೋಟಿ ತೆರಿಗೆಯ ಲೆಕ್ಕ ಕೊಡಿ ಎಂದು ಕೇಳಿದರೆ ದೇಶದ್ರೋಹಿ ಆಗ್ತೀನಾ?…

Read More

ನಿನ್ನೆಯಷ್ಟೇ ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ಇನ್ಸ್ಟಾದಲ್ಲಿ ಪೂನಂ ಅವರ ಮ್ಯಾನೇಜರ್ ಗರ್ಭಕೋಶ ಕಂಠ ಕ್ಯಾನ್ಸರ್ (Cancer)ನಿಂದಾಗಿ ಪೂನಂ ನಿಧನರಾಗಿದ್ದಾರೆ (Death) ಎಂದು ಪೋಸ್ಟ್ ಹಾಕಿ ಇಡೀ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಪೂನಂ ನಿಧನ ಇಡೀ ದೇಶವೇ ಚರ್ಚೆ ಮಾಡುವಂತೆ ಮಾಡಿತ್ತು. ಪೂನಂ ಸತ್ತಿರುವ ಸಮಾಚಾರದ ಹೊರತಾಗಿ ಬೇರೆ ಯಾವ ಫೋಟೋಗಳು ಆಚೆ ಬರಲಿಲ್ಲ. ಹಾಗಾಗಿ ಸಹಜವಾಗಿಯೇ ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಇದೀಗ ಪೂನಂ ಬದುಕಿರುವ ಸುದ್ದಿಯನ್ನು ಸ್ವತಃ ಪೂನಂ ಅವರೇ ನೀಡಿದ್ದಾರೆ. ತಾನು ಬದುಕಿದ್ದೇನೆ. ಹಾಗೆ ಮಸೇಜ್ ಮಾಡಲು ಕಾರಣವಿದೆ. ಗರ್ಭಕೋಶ ಕಂಠ ಕ್ಯಾನ್ಸರ್ ಕುರಿತಾದ ಜಾಗೃತಿ ಮೂಡಿಸಬೇಕಿತ್ತು. ಹಾಗಾಗಿ ಈ ಪೋಸ್ಟ್ ಮಾಡಲಾಯಿತು. ದಯವಿಟ್ಟು ಈ ಕ್ಯಾನ್ಸರ್ ಕುರಿತಂತೆ ಜಾಗೃತ ವಹಿಸಿ ಎಂದು ಪೂನಂ ವಿಡಿಯೋ ಮೂಲಕ ಹೇಳಿದ್ದಾರೆ. ಪೂನಂ ಬದುಕಿರುವ ಸಮಾಚಾರ ತಿಳಿದು ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಜಗತ್ತನ್ನೇ ಫೂಲ್ ಮಾಡಿದ ಪೂನಂರನ್ನು ಕೆಲವರು ತರಾಟೆಗೂ ತೆಗೆದುಕೊಂಡಿದ್ದಾರೆ. ಏನೇ ಇರಲಿ.. ಈ ಮಾರ್ಗದ ಮೂಲಕ…

Read More