Author: AIN Author

ಬೆಂಗಳೂರು:- ರಾಜ್ಯದ ಹಿತ ಕಾಯಲು ನಾನು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಜನರ ಹಿತ ಕಾಯಲು ನಾನು ಯಾವುದೇ ಹೋರಾಟಕ್ಕೂ ಸಿದ್ಧನಿದ್ದೇನೆ. ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ಮಾತನಾಡಿದರೆ ಅದನ್ನು ಬಿಜೆಪಿಯವರು ತಿರುಚಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದ ಹಿತ ಕಾಯಲು ನಾನು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದರು. ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ನಾನು ಮಾತನಾಡಿದ್ದೆ. ಉತ್ತರ ಪ್ರದೇಶಕ್ಕೆ 33% ರಷ್ಟು ಹಣವನ್ನು ನೀಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ತೆರಿಗೆಯ ಹಣವನ್ನು ವಾಪಸ್ ಕೊಡಿ ಎಂದು ಪ್ರಶ್ನೆ ಮಾಡಿದ್ದು ಹೇಗೆ ತಪ್ಪಾಗುತ್ತದೆ? ರಾಜ್ಯದಲ್ಲಿ ಬರಗಾಲ ತಾಂಡವ ಆಡುತ್ತಿದೆ. 224 ತಾಲೂಕು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಆಗಿದೆ. ಆದರೂ ಸಹ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ನಾನು ಮಾತನಾಡಿದ್ದೇನೆ. ಅದರಲ್ಲಿ ಯಾವುದೇ ಹಿಂಪಡೆಯುವ ಪ್ರಶ್ನೆ ಇಲ್ಲ. ನಾಡಿನ ಹಿತಕ್ಕೋಸ್ಕರ ನನ್ನ ಹೋರಾಟ ಎಂದರು. ಬಿಜೆಪಿಯವರು ಎಷ್ಟೇ…

Read More

ಬೆಂಗಳೂರು:- ಸಿದ್ದರಾಮಯ್ಯ ಹೃದಯಪೂರ ಕೇವಲ ಟಿಪ್ಪು ಇರುವುದು ಎಂದು ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕುಂಕುಮ ಹಾಕಲು ಸಿದ್ದರಾಮಯ್ಯ ಹಿಂದೇಟು ಹಾಕ್ತಾರೆ. ಸಿದ್ದರಾಮಯ್ಯಗೆ ಟಿಪ್ಪು ಮೈತುಂಬ ತುಂಬಿಕೊಂಡಿದ್ದಾನೆ. ಟೋಪಿಯನ್ನು ಬೇಡ ಎಂದರೂ ಹಾಕಿಕೊಳ್ಳುತ್ತಾರೆ. ಕುಂಕುಮ ಹಾಕಿಕೊಳ್ಳಲು ಹಿಂದೇಟು ಹಾಕುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ. ಆದರೆ ಕೇಸರಿ ಪೇಟ ಕಿತ್ತು ಬಿಸಾಕ್ತಾರೆ. ಸಿದ್ದರಾಮಯ್ಯ ಹೃದಯದ ತುಂಬಾ ಟಿಪ್ಪು ಇದ್ದಾನೆ. ಅವರು ನಾಮ ಇಡದಿದ್ರೆ, ಏನೂ ತೊಂದರೆ ಇಲ್ಲ. ಮೊದಲು ಹೃದಯದಲ್ಲಿ ರಾಮನ ಇಟ್ಕೊಳ್ಳಿ. ನಂತರ ಹಣ ಬಿಡುಗಡೆ ಮಾಡಿ. ಮೇಕೆದಾಟು ಯೋಜನೆ ಜಾರಿಯ ಬಗ್ಗೆ ತಮಿಳುನಾಡಿನ ಬ್ರದರ್ಸ್ ಜೊತೆಗೆ ಕಾಂಗ್ರೆಸ್ ನಾಯಕರು ಮಾತನಾಡಲಿ ಎಂದಿದ್ದಾರೆ.

Read More

ಬೆಂಗಳೂರು:- ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಂದ 50 ರೂಪಾಯಿ ಸಂಗ್ರಹ ವಿಚಾರವಾಗಿ ಶಿಕ್ಷಣ ಇಲಾಖೆ ಸಮರ್ಥಿಸಿಕೊಂಡಿದ್ದಾರೆ. 2023ರ ಫೆಬ್ರವರಿಯಲ್ಲಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಲು ಸರ್ಕಾರ ಆದೇಶಿಸಿದೆ ಎಂದು ಪರೋಕ್ಷವಾಗಿ ಬಿಜೆಪಿ ಅವಧಿಯಲ್ಲಿ ಆದೇಶವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟನೆ ನೀಡಿದೆ. ಕಳೆದ 4 ವರ್ಷಗಳಿಂದಲೂ ಈ ಶುಲ್ಕ ಇದೆ. ಪರೀಕ್ಷೆ ನಡೆಸಲು ಖರ್ಚು ವೆಚ್ಚಕ್ಕೆ ಪ್ರತಿ ವಿದ್ಯಾರ್ಥಿಯಿಂದ 50 ರೂ. ಸಂಗ್ರಹ ಮಾಡಲಾಗುತ್ತೆ ಎಂದು ಸ್ಪಷ್ಟಿಕರಣ ನೀಡಿದೆ. ಈ ವಿಚಾರವಾಗಿ ಶಿವಮೊಗ್ಗದಲ್ಲಿ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, 50 ರೂಪಾಯಿ ತೆಗೆದುಕೊಳ್ಳುವ ನಿಯಮ ಮಾಡಿದ್ದು ಬಿಜೆಪಿಯವರೇ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಜಾರಿ ಮಾಡಿದ್ದು. ಹೆಚ್.ಡಿ.ಕುಮಾರಸ್ವಾಮಿ ಮೊದಲು ಬಿಜೆಪಿಯವರನ್ನು ಪ್ರಶ್ನೆ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ. 2 ಸಾವಿರ ರೂ. ಜೆಡಿಎಸ್​​, ಬಿಜೆಪಿಯವರೇ ಪಡೆಯುತ್ತಿದ್ದಾರೆ ಅಲ್ವಾ. ಬಿಜೆಪಿ, ಜೆಡಿಎಸ್​ನವರಿಗೆ ಜಾಸ್ತಿ ಗ್ಯಾರಂಟಿ ಹೋಗ್ತಿರೋದು. ಅದರ ಬಗ್ಗೆ ಚರ್ಚೆ ಮಾಡಲು ಹೆಚ್​.ಡಿ.ಕುಮಾರಸ್ವಾಮಿಗೆ ಕೇಳುತ್ತೇನೆ ಎಂದು ಕಿಡಿಕಾರಿದ್ದಾರೆ.

Read More

ಚಿಕ್ಕಮಗಳೂರು:- ಮಲೆನಾಡಿನಲ್ಲಿ ಮಂಗನ ಕಾಯಿಲೆಗೆ ಮೊದಲ ಬಲಿ ಆಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ವಯೋಸಹಜ ಅನಾರೋಗ್ಯದಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ 79 ವರ್ಷದ ವೃದ್ಧ ಬಳಲುತ್ತಿದ್ದರು. ಇವರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಇದೀಗ ಕೊನೆಯುಸಿರೆಳೆದಿದ್ದಾರೆ. ರೆಡ್ ಝೋನ್​ನಲ್ಲಿ ತಪಾಸಣೆ ಮಾಡಿದಾಗ ವೃದ್ಧನಲ್ಲಿ ಕೆಎಫ್​ಡಿ ಪತ್ತೆಯಾಗಿದೆ. ವೃದ್ಧನ ಸಾವಿನಿಂದ ಮಲೆನಾಡಿನ ಜನರಲ್ಲಿ ಆತಂಕ ಹೆಚ್ಚಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ 10 ದಿನಗಳಲ್ಲಿ ಬರೊಬ್ಬರಿ 21 ಜನರಿಗೆ ಸೋಂಕು ತಗುಲಿದ್ದು, ಬಿಸಿಲು ಹೆಚ್ಚಾದಂತೆ ಕಾಯಿಲೆ ಹೆಚ್ಚಾಗುವ ಆತಂಕವೂ ಜನರಲ್ಲಿ ಮನೆ ಮಾಡಿದೆ. ಇನ್ನು ಈ ಸೋಂಕು ಹರಡುವಿಕೆ ತಡೆಗೆ ಸದ್ಯ ರೋಗ ನಿರೋಧಕ ಲಸಿಕೆ ಇಲ್ಲವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಳ್ಳುವುದೊಂದೇ ದಾರಿ ಮತ್ತು ಅತೀ ಅವಶ್ಯಕ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Read More

ದಾವಣಗೆರೆ:- ಶ್ರೀರಾಮ ಕೇವಲ ಬಿಜೆಪಿ ಸ್ವತ್ತಲ್ಲ, ಎಲ್ಲರ ಸ್ವತ್ತು ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶ್ರೀರಾಮ ಕೇವಲ ಬಿಜೆಪಿಯವರ ಸ್ವತ್ತಲ್ಲ, ಅವರು ಎಲ್ಲರ ಸ್ವತ್ತು ಎಂದು ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ನಮ್ಮ ಜಾತಿಯವರ ರಕ್ತ ಕೊಡಿ ಅಂತಾ ಕೇಳ್ತೀರಾ. ಏನಪ್ಪಾ ರೇಣುಕಾಚಾರ್ಯ ನೀನು ಹೀಗೇನಾದರೂ ಕೇಳ್ತಿಯಾ ಎಂದು ವ್ಯಂಗ್ಯ ಮಾಡಿದ್ದಾರೆ. ಜೀವ ಉಳಿಸಲು ಮುಸ್ಲಿಮರ ರಕ್ತನಾದರೂ ಕೊಡು, ದಲಿತರ ರಕ್ತನಾದರೂ ಕೊಡು ಎಂದು ಗೋಗರೆಯುತ್ತೇವೆ. ರಕ್ತ ಹಾಕಿಸಿಕೊಂಡು ಬಂದು ಹಿಂದೂ, ಮುಸ್ಲಿಂ ಎಂದು ಹೊಡೆದಾಡುತ್ತೇವೆ. ಭಕ್ತ ಕನಕದಾಸರು ಮೊದಲು ತಿಮ್ಮಪ್ಪನಾಯಕ, ಪಾಳೆಗಾರರಾಗಿದ್ದರು. ಬಳಿಕ ಆಸ್ತಿಯನ್ನು ತ್ಯಜಿಸಿ ಭಕ್ತ ಕನಕದಾಸರಾದರು ಎಂದಿದ್ದಾರೆ. ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಜನಿಸಿದರು. ಆದರೆ ಕನಕದಾಸರು ಕುರುಬರಾಗಿ ಉಳಿದಿಲ್ಲ, ವಿಶ್ವಮಾನವರಾಗಿದ್ದಾರೆ. ಕುವೆಂಪು ಹೇಳುತ್ತಾರೆ ಎಲ್ಲರೂ ಹುಟ್ಟುವಾಗ ವಿಶ್ವಮಾನವರಾಗಿ ಜನಿಸುತ್ತಾರೆ. ಬೆಳೆಯುತ್ತಾ ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ನಾವು ಅಲ್ಪಮಾನವರಾಗುತ್ತೇವೆ. ಮನುಷ್ಯರಾಗಿ ಅಂತಾ ಗಾಂಧೀಜಿ, ಡಾ.ಅಂಬೇಡ್ಕರ್ ಎಲ್ಲರೂ ಹೇಳಿದ್ದಾರೆ. ಪರಸ್ಪರ ಪ್ರೀತಿಸಿ, ದ್ವೇಷಿಸಬೇಡಿ ಎಂದು ಮಹಾಪುರುಷರು…

Read More

ಹೊಸಪೇಟೆ :- ಹಂಪಿ ಉತ್ಸವ ಅಂಗವಾಗಿ ಹಂಪಿಯ ಶ್ರೀ ವಿರುಪಾಕ್ಷೇಶ್ವರ ವೇದಿಕೆಯಲ್ಲಿ ಫೆಬ್ರವರಿ 3ರಂದು ಮಹಿಳಾ ಗೋಷ್ಠಿ ನಡೆಯಿತು. ಮರಿಯಮ್ಮನಹಳ್ಳಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದರಾದ ಡಾ.ಕೆ. ನಾಗರತ್ನಮ್ಮ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮತನಾಡಿದ ಅವರು ಸಾಹಿತ್ಯದ ಅರಿವಿದ್ದಾಗ ಮಾತ್ರ ಕಲಾವಿದರಾಗಲು ಸಾಧ್ಯ. ˌನನ್ನ ಇಡೀ ಜೀವನವನ್ನು ನಾಟಕರಂಗಕ್ಕೆ ಅರ್ಪಿಸಿಕೊಂಡಿರುವ ಸಂತಪ್ತಿ ಇದೆ. ಉನ್ನತ ವ್ಯಾಸಂಗ ಮಾಡದಿದ್ದರುˌರಂಗಭೂಮಿಯಲ್ಲಿನ ಜೀವಮಾನದ ಸಾಧನೆಗೆ ಗೌರವ ಡಾಕ್ಟರೇಟ್ ಪಡೆದ ಹೆಮ್ಮೆ ಇದೆ ಎಂದರು. ಬೆಳಗಾವಿಯ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿಗಳಾದ ಡಾ ಎಎಂ.ಜಯಶ್ರೀ ಅವರು `ಸಂಸ್ಕೃತಿ ಕಾಪಿಟ್ಟ ಮಹಿಳೆಯರು’ ವಿಷಯದ ಕುರಿತು ಮಾತನಾಡಿ, ಸದ್ಗುಣಗಳ ಸಾರವೇ ಸಂಸ್ಕೃತಿಯಾಗಿದ್ದು, ವಿಜಯನಗರ ಸಾಮ್ರಾಜ್ಯದ ಕಾಲದಿಂದ ಇಲ್ಲಿಯವರೆಗೆ ಸಾವಿರಾರು ವರ್ಷಗಳ ಪಾಠದ ತಿರುಳೆ ಸಂಸ್ಕೃತಿಯಾಗಿದೆ. ಸ್ಮಾರಕಗಳಲ್ಲಿ ಮಹಿಳೆಯರ ದಿನನಿತ್ಯದ ಕಾರ್ಯವನ್ನು ಕಾಣಬಹುದಾಗಿದೆ ಎಂದರು. ಲೇಖಕರಾದ ಸುಧಾ ಚಿದಾನಂದಗೌಡ ಅವರು `ಶಿಕ್ಷಣದ ಬೆಳಕಿನಲ್ಲಿ ಮಹಿಳೆ-ಮಿತಿ ಮತ್ತು ಪರಿಹಾರ’ ವಿಷಯದ ಬಗ್ಗೆ ಮಾತನಾಡಿ, ವಚನಸಾಹಿತ್ಯದ ಮೂಲಕ ಮಹಿಳೆ ಬೆಳಕಿನ ಕಿರಣವನ್ನು…

Read More

ವಿಜಯಪುರ:- ಧರ್ಮದಲ್ಲಿ ರಾಜಕಾರಣ ಇರಬೇಕೆ ವಿನಹ ರಾಜಕಾರಣದಲ್ಲಿ ಧರ್ಮ ಇರಬಾರದು ಎಂದು DCM ಡಿಕೆಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಧರ್ಮ ಎಂದರೆ ಬದುಕು, ಎಲ್ಲರನ್ನು ಪ್ರೀತಿಸೋ ಮಾರ್ಗ, ಧರ್ಮ ಎಂದರೆ ಸಮಾನತೆ ಎಂದು ಡಿವಿಜಿ ಸಾಲುಗಳ ಮೂಲಕ ವಿವರಿಸಿದರು. ಧರ್ಮದಲ್ಲಿ ರಾಜಕಾರಣ ಇರಬೇಕು, ರಾಜಕಾರಣದಲ್ಲಿ ಧರ್ಮ ಇರಬಾರದು. ಆದರೆ, ಇತ್ತೀಚೆಗೆ ಅದು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಜನರ ಸಹಕಾರದಿಂದ ಮಠಗಳು ಬೆಳೆಯುತ್ತವೆ. ಜೊತೆಗೆ ಪೀಠಾಧಿಪತಿಗಳು ಸಾಧನೆ‌ ಮಾಡಲು ಸಾಧ್ಯ ಎಂದು ಹೇಳಿದರು. ಇನ್ನೂ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಯಾವುದೇ ಧರ್ಮ ಕೂಡ ಶಾಂತಿ ಸಹೋದರತೆಯನ್ನು ಸಾರುತ್ತದೆ. ಧರ್ಮ ಯಾವುದಾದರೂ ದೇವರು ಒಬ್ಬನೇ, ಎಲ್ಲದರಲ್ಲೂ ದೇವರನ್ನು ನೋಡುತ್ತೇವೆ ಎಂದರು.

Read More

ಹೊಸಪೇಟೆ (ವಿಜಯನಗರ):- ಜಿಲ್ಲಾಡಳಿತವು ಈ ಭಾರಿ ಹಂಪಿ ಉತ್ಸವದ ಅಂಗವಾಗಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೃಷಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಡಳಿತವು ಮಾತಂಗ ಪರ್ವತ ಆವರಣದಲ್ಲಿ ಹಮ್ಮಿಕೊಂಡ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕಾರ ಅವರು ಫೆ.3ರಂದು ಸಿರಿಧಾನ್ಯ ಪಾಕ ಸ್ಪರ್ಧೆಯ ಸ್ಥಳಕ್ಕೆ ಭೇಟಿ ನೀಡಿದರು. ಮಹಿಳೆಯರು ಬಗೆಬಗೆಯ ದವಸಧಾನ್ಯಗಳಿಂದ ಸಿದ್ಧಪಡಿಸಿದ್ದ ತಿನಿಸುಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಸಹಾಯಕ ಆಯುಕ್ತರಾದ ಮಹದ್ ಅಲಿ ಅಕ್ರಮ ಷಾಹ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಈರಣ್ಣ ಬಿರಾದಾರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶರಣಪ್ಪ ಮುದಗಲ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಸೇರಿದಂತೆ ಇತರರು ಇದ್ದರು.

Read More

ಹಂಪಿ,ಫೆ.03:- ಇತಿಹಾಸ ಪ್ರಸಿದ್ಧ ಹಂಪಿ ಉತ್ಸವ-2024ರ ಅಂಗವಾಗಿ ಸಾಸಿವೆ ಕಾಳು ಗಣಪ ವೇದಿಕೆಯಲ್ಲಿ ಆಯೋಜಿಸಿದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿ.ಚಂದ್ರಕಾಂತ ಅವರ ಗಜಲ್ ಗಾಯನವು ನೆರೆದ ಎಲ್ಲ ಪ್ರೇಕ್ಷಕರನ್ನು ರಸದೌತಣ ನೀಡಿತಲ್ಲದೆ ಎಲ್ಲರನ್ನು ರಂಜಿಸಿತು. ಮಾಲಕಂಸ ರಾಗದಲ್ಲಿ ಸುದರ್ಶನ ಫಾಕಿ ಅವರು ವಿರಚಿಸಿದ “ಶಾಯದ್ ಮೈಂ ಜಿಂದಗಿ ಕೀ………” ಗಜಲ್ ಮೂಲಕ ಗಾಯನವನ್ನು ಪ್ರಾರಂಭಿಸಿದರು. ನಂತರ ದರ್ಬಾರಿ ರಾಗದಲ್ಲಿ ಭೂಪಿಂದರ್ ಸಿಂಗ್ ಅವರು ರಚಿಸಿದ “ಆಸಮಾಂ ಸೇ ಉತಾರಾ ಗಯಾ…” ಗಜಲ್ ಸುಶ್ರಾವ್ಯವಾಗಿ ಹಾಡಿ ಎಲ್ಲರ ಗಮನ ಸೆಳೆದರು. ಸಂಗೀತ ಶಿಕ್ಷಕ ಗುರುಶಾಂತಯ್ಯ ಸ್ಥಾವರಮಠ ಹಾರ್ಮೋನಿಯಂ ಸಾಥ್ ಮತ್ತು ವೀರಭದ್ರಯ್ಯ ಸ್ಥಾವರಮಠ ಅವರು ತಬಲಾ ಸಾಥ್ ನೀಡಿದರು.

Read More

ಹಂಪಿ:- ಫೆ. 03 ಹಂಪಿ ಉತ್ಸವದ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ಮಲಪನಗುಡಿ ಗ್ರಾಮದ ಬಳಿ ನಿರ್ಮಿಸಲಾಗಿದ್ದ ಬೃಹತ್ ಕುಸ್ತಿ ಅಖಾಡದಲ್ಲಿ ಮದಗಜಗಳಂತೆ ಸೆಣೆಸಾಡಿದ ಕುಸ್ತಿಪಟುಗಳು. ಅಂತಿಮವಾಗಿ ಬೆಳಗಾವಿಯ ಮುಸ್ಲಿಕ್ ಆಲಂ ರಾಜಾಸಾಬ್ ಹಂಪಿ ಕೇಸರಿ ಪಟ್ಟವನ್ನು ತಮ್ಮದಾಗಿಸಿಕೊಂಡರು. ಮುಧೋಳಿನ ಸದಾಶಿವ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮದವೇರಿದ ಮದಗಜಗಳಂತಹ ಹುಮ್ಮಸ್ಸು, ಎದುರಾಳಿಯನ್ನು ಕೆಡವಿಹಾಕುವ ಕೆಚ್ಚು, ಭುಜತಟ್ಟಿಕೊಂಡು ಕೈ ಕೈ ಮಿಲಾಯಿಸಿ ಕುಸ್ತಿಪಟುಗಳು ಪ್ರತಿಸ್ಪರ್ಧಿಗಳನ್ನು ಮಣಿಸುವ ದೃಶ್ಯ ನೋಡುಗರಲ್ಲಿ ರೋಮಾಂಚನ, ಗೆದ್ದವರಿಗೆ ಚಪ್ಪಾಳೆಯ ಮೆಚ್ಚುಗೆ… ಇವು ಶನಿವಾರ ಮಲಪನಗುಡಿ ಗ್ರಾಮದ ಬಳಿಯ ಕುಸ್ತಿ ಅಖಾಡದಲ್ಲಿ ಕಂಡು ಬಂದ ದೃಶ್ಯಗಳು. ನೆತ್ತಿಯ ಮೇಲೆ ಸೂರ್ಯ ಆಗಮಿಸಿದ್ದರಿಂದ ಮೇಲೆ ರಣರಣ ಬಿಸಿಲು, ಅಖಾಡದಲ್ಲಿ ಕುಸ್ತಿ ಪಂದ್ಯಾಟದ ಬಿಸಿ ನೆರೆದಿದ್ದ ಸಮೂಹದವರ ಬೆವರಿಳಿಸುತ್ತಿದ್ದರೆ, ಪೈಲ್ವಾನರು ಸಹ ತಮ್ಮ ಎದುರಾಳಿಗಳ ಬೆವರಿಳಿಸುವಲ್ಲಿ ನಿರತರಾಗಿದ್ದ ದೃಶ್ಯ ಎಂಥವರನ್ನೂ ಕುತೂಹಲದಿಂದ ನಿಂತು ವೀಕ್ಷಿಸುವಂತೆ ಮಾಡಿತ್ತು. ಹೊಸಪೇಟೆ-ಹಂಪಿಯ ದಾರಿಯಲ್ಲಿನ ಮಲಪನಗುಡಿ ಗ್ರಾಮದ ಬಳಿಯ ನಿರ್ಮಿಸಲಾಗಿರುವ ಕುಸ್ತಿ ಅಖಾಡದಲ್ಲಿ ಹಂಪಿ ಉತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ…

Read More