Author: AIN Author

ಹೊಸಪೇಟೆ:- ಶನಿವಾರ ಎರಡನೇ ದಿನ ಹಂಪಿ ಉತ್ಸವದ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿನಿಮಾ ನಾಯಕ ನಟ ದರ್ಶನ್ ತೂಗುದೀಪ ಮೆರಗು ತಂದರು‌. ದರ್ಶನ್ ನೋಡಿದ ಜನಸ್ತೋಮ ‘ಡಿ ಬಾಸ್’ ಎಂದು ಕೂಗಿ ಸಂತಸ ವ್ಯಕ್ತಪಡಿಸಿದರು. ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜಯನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡು ಹಂಪಿ ಉತ್ಸವ ಆಯೋಜಿಸುವ ಸದಾವಕಾಶ ದೊರಕಿದೆ. ಇದರಿಂದ ಸಂತೋಷ ಹಾಗೂ ಖುಷಿ ಆಗುತ್ತಿದೆ ಎಂದರು. ಸಿನಿಮಾ ನಾಯಕ ನಟ ದರ್ಶನ ಮಾತನಾಡಿ, 2018 ರಲ್ಲಿ ಹಂಪಿ ಉತ್ಸವಕ್ಕೆ ಆಗಮಿಸಿದ್ದೆ. 2024 ರಲ್ಲಿ ಮೊತ್ತೊಮ್ಮೆ ಆಗಮಿಸಿರುವುದು ಸುದೈವ. ಕನ್ನಡ ನಾಡಿನ ಚರಿತ್ರೆಯಲ್ಲಿ ಕೃಷ್ಣ ದೇವರಾಯ, ಸಂಗೊಳ್ಳಿ ರಾಯಣ್ಣ ಹಾಗೂ ಮದಕರಿ ನಾಯಕರ ಹೆಸರು ಎಂದಿಗೂ ಚಿರಸ್ಥಾಯಿಯಾಗಿದೆ. ಕೃಷ್ಣದೇವರಾಯರು ನಮ್ಮೆಲ್ಲರಿಗೂ ಪ್ರೇರಣೆ. ಅವರ ಕಾರಣದಿಂದಲೇ ಇಂದು ನಾವೆಲ್ಲರೂ ಹಂಪಿಯಲ್ಲಿ ಉತ್ಸವ ಆಚರಿಸುತ್ತಿದ್ದೇವೆ. ಕೃಷ್ಣದೇವರಾಯರ ಆತ್ಮ ನಮ್ಮೆಲ್ಲರೊಂದಿಗಿದೆ ಎಂದರು. ಸಚಿವ ಜಮೀರ್ ಅಹ್ಮದ್…

Read More

ತುಮಕೂರು:- ಗುಬ್ಬಿ ಪೊಲೀಸ್ ಠಾಣೆಯಿಂದ ಸರಗಳ್ಳ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಸೇರಿ ನಾಲ್ವರು ಸಿಬ್ಬಂದಿ ಅಮಾನತು ಮಾಡಲಾಗಿದೆ ಪಿಎಸ್‌ಐ ದೇವಿಕಾ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ ತುಮಕೂರು‌ ಎಸ್ಪಿ ಅಶೋಕ್ ಕೆ.ವಿ ಅವರು ಆದೇಶಿಸಿದ್ದಾರೆ. ಕಳೆದ ಗುರುವಾರ ರಾತ್ರಿ ಪೊಲೀಸ್ ಠಾಣೆಯಿಂದಲೇ ಸರಗಳ್ಳ ಸೈಯದ್ ಅಲಿ ಎಂಬಾತ ಎಸ್ಕೇಪ್ ಆಗಿದ್ದ. ಈ ಹಿನ್ನಲೆ ಕರ್ತವ್ಯಲೋಪದಡಿ ಅಮಾನತು ಆದೇಶ ಹೊರಡಿಸಲಾಗಿದೆ. ಇನ್ನು ಪರಾರಿಯಾದ ಆರೋಪಿ ಸೈಯದ್ ಅಲಿ ಪತ್ತೆಗೆ ಮೂರು ತಂಡವನ್ನು ರಚಿಸಲಾಗಿದ್ದು, ಪೊಲೀಸರು ಗದಗ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಶೋಧ ಕಾರ್ಯ ಶುರುಮಾಡಿದ್ದಾರೆ. ಜೊತೆಗೆ ಇಂದು ಶಿರಾ ಬೈಪಾಸ್‌ನಲ್ಲಿ ಬೆಳಗಿನ ಜಾವದವರೆಗೂ ಬಾಂಬೆ, ಗದಗ ಕಡೆ ಹೋಗುವ ಬಸ್‌ಗಳನ್ನ ತಪಾಸಣೆ ಮಾಡಿದ್ದಾರೆ. ಈಗಾಗಲೇ ಬಾಂಬೆಗೆ ತೆರಳಿರುವ ಪೊಲೀಸರ ಮತ್ತೊಂದು ತಂಡ ತನಿಖೆ ಶುರುಮಾಡಿದೆ.,

Read More

ಇತ್ತೀಚೆಗೆ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ಗಳು ಇರುವುದರಿಂದ ಆನ್‌ಲೈನ್ ಮೂಲಕ ಬ್ಯಾಂಕ್​ ವಹಿವಾಟುಗಳನ್ನು ಮಾಡುವವರ ಪ್ರಮಾಣವೂ ಹೆಚ್ಚಾಗಿದೆ. ವಿಶೇಷವಾಗಿ ಗೂಗಲ್​ ಪೇ, ಅಮೆಜಾನ್ ಪೇ, ಪೇಟಿಯಂ ಮತ್ತು ಫೋನ್ ಪೇ ನಂತಹ ಯುಪಿಐ ಆಧಾರಿತ ಅಪ್ಲಿಕೇಶನ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ, ಒಂದುವೇಳೆ ನಿಮ್ಮ ಸ್ಮಾರ್ಟ್​​ಫೋನ್ ಕಳೆದುಹೋದರೆ, ಎಲ್ಲಾದರು ಕಳ್ಳತನವಾದರೆ ಏನು ಗತಿ?, ಈ ಸಂದರ್ಭ ಮೊಬೈಲ್​ನಲ್ಲಿದ್ದ ಫೋನ್ ಪೇ, ಗೂಗಲ್ ಪೇ ಅಕೌಂಟ್ ಅನ್ನು ಏನು ಮಾಡುವುದು. ಈ ರೀತಿಯ ಗೊಂದಲ ಅನೇಕರಿಗೆ ಇರಬಹುದು. ಹೀಗಾದಾಗ ನಿಮ್ಮ ಈ ಅಕೌಂಟ್ ಅನ್ನು ಯಾವರೀತಿ ಸುರಕ್ಷಿತವಾಗಿಸಬಹುದು ಎಂಬುದನ್ನು ನಾವು ತಿಳಿಸುತ್ತೇವೆ. ನಿಮ್ಮ ಸ್ಮಾರ್ಟ್​​ಫೋನ್​ನಲ್ಲಿರುವ ಯುಪಿಐ ಆ್ಯಪ್​ಗಳಲ್ಲಿ ನೀವು ಬ್ಯಾಂಕ್ ಅಕೌಂಟ್ ಅನ್ನು ಲಿಂಕ್ ಮಾಡಿರುತ್ತೀರಿ. ಇದರಲ್ಲಿ ಸಾಕಷ್ಟು ಹಣ ಕೂಡ ಇರಬಹುದು. ಒಂದುವೇಳೆ ನಿಮ್ಮ ಮೊಬೈಲ್ ಕಳೆದು ಹೋದಾಗ ಅಥವಾ ಕಳುವಾದಾಗ ಕೆಲ ಟ್ರಿಕ್ ಉಪಯೋಗಿಸಿ ಅವರು ಯುಪಿಐ ಆ್ಯಪ್ ಓಪನ್ ಮಾಡಿ ಹಣವನ್ನು ದೋಚುವ ಸಾಧ್ಯತೆಗಳಿರುತ್ತದೆ. ಇದಕ್ಕಾಗಿ ನಿಮ್ಮ ಫೋನ್ ಕಳೆದು ಹೋಯಿತು ಎಂದ ಕೂಡಲೇ ಮೊದಲು ನಿಮ್ಮ ಯುಪಿಐ ಅಕೌಂಟ್ ಅನ್ನು ಬ್ಲಾಕ್…

Read More

ಆರೋಗ್ಯದ ವಿಚಾರ ಬಂದಾಗ ಆಹಾರದ ಆಯ್ಕೆ ಬಹಳ ಮುಖ್ಯವಾಗುತ್ತದೆ. ಏಕೆಂದರೆ ನಾವು ತಿನ್ನುವ ಆಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಪ್ರತಿದಿನ ಬಗೆ ಬಗೆಯ ತಿಂಡಿಗಳನ್ನು ತಿನ್ನಲು ಇಷ್ಟಪಡುತ್ತೇವೆ. ಅದರಲ್ಲಿ ಚಪಾತಿ ಕೂಡ ಒಂದು. ಸಕ್ಕರೆ ಕಾಯಿಲೆ ಇರುವವರು ಇದನ್ನು ಕಡ್ಡಾಯವಾಗಿ ತಿನ್ನುತ್ತಾರೆ. ಆದರೆ ಚಪಾತಿಯ ತರಹ ಜೋಳದ ರೊಟ್ಟಿ ಕೂಡ ತಿನ್ನುವವರಿಗೆ ಒಳ್ಳೆಯ ಆರೋಗ್ಯಕರ ಆಹಾರವಾಗಿದೆ. ಚಪಾತಿಗೆ ಹೋಲಿಸಿದರೆ ಇದು ಸ್ವಲ್ಪ ದಪ್ಪ, ಗಟ್ಟಿ ಮತ್ತು ಅಗಲವಾಗಿರುತ್ತದೆ. ನಿಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಜೋಳದ ರೊಟ್ಟಿಯನ್ನು ಸೇರಿಸಿಕೊಂಡು ತಿನ್ನುವುದರಿಂದ ಈ ಕೆಳಗಿನ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿ ಕೊಳ್ಳಬಹುದು. ಬಹುತೇಕ ಜನರಿಗೆ ಗೋಧಿ ಹಿಟ್ಟಿನಿಂದ ಮಾಡಿದ ಪೂರಿ, ಚಪಾತಿ, ಪರೋಟ ಗೊತ್ತಿರುತ್ತದೆ. ಇವುಗಳನ್ನು ಹೊರತುಪಡಿಸಿ ಕೆಲವು ಸ್ವಾದಿಷ್ಟ ರೊಟ್ಟಿಗಳಿವೆ. ಅದುವೇ ಜೋಳದ ರೊಟ್ಟಿ. ಕಡಿಮೆ ಉರಿಯಲ್ಲಿ ಸುಟ್ಟು ಮಾಡಲಾಗುವ ಈ ರೊಟ್ಟಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಇದನ್ನು ಸೇವಿಸಲು ಸಾಧ್ಯವಾಗದಿದ್ದರೆ, ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಬಾರಿಯಾದರೂ ಆಹಾರದಲ್ಲಿ ಜೋಳದ…

Read More

ಸೂರ್ಯೋದಯ: 06:51, ಸೂರ್ಯಾಸ್ತ : 06:08 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ, ಕೃಷ್ಣ ಪಕ್ಷ, ಉತ್ತರಾಯಣಂ, ಹೇಮಂತ ಋತು, ನಕ್ಷತ್ರ :ವಿಶಾಖಾ ತಿಥಿ: ನವಮಿ, ನಕ್ಷತ್ರ: ವಿಶಖಾ, ಕರಣ: ಗರಜ, ರಾಹು ಕಾಲ: 04:30 ನಿಂದ 06:00 ತನಕ ಯಮಗಂಡ: 12:00 ನಿಂದ 01:30 ತನಕ ಗುಳಿಕ ಕಾಲ: 03:00 ನಿಂದ 04:30 ತನಕ ಅಮೃತಕಾಲ: రా.9:15 ನಿಂದ రా.10:53 ತನಕ ಅಭಿಜಿತ್ ಮುಹುರ್ತ: ಮ.12:07 ನಿಂದ ಮ.12:52 ತನಕ ಶ್ರೀ ಸೋಮಶೇಖರ್B.Sc ( ವಂಶಪಾರಂಪರಿತ) ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು. Mob.No.93534 88403 ಮೇಷ ರಾಶಿ ಆರ್ಥಿಕವಾಗಿ ಬಲಶಾಲಿ ಆಗುವಿರಿ. ಸಂಗಾತಿಯ ಮಾತು ಕೇಳದಿದ್ದರೆ ನಿಮಗೆ ದೊಡ್ಡ ನಷ್ಟವನ್ನುಂಟು ಮಾಡುತ್ತದೆ. ಹಣಹೂಡಿಕೆ ವಹಿವಾಟಿನಲ್ಲಿ ವಂಚನೆ ಇರಬಹುದು ಜಾಗರೂಕರಾಗಿರಿ. ಇಂದು ಕೆಲಸದ ವಿಷಯದಲ್ಲಿ ಧನಲಾಭ ಮಿಶ್ರ ದಿನವಾಗಿರುತ್ತದೆ. ವೃತ್ತಿರಂಗದಲ್ಲಿ ಕೆಲವು ಅಡೆತಡೆಗಳು ಎದುರಾಗಿದ್ದರೆ, ಮೇಲಾಧಿಕಾರಿಯ ಸಹಾಯ ದೊರೆಯುವುದು. ರಿಯಲ್ ಎಸ್ಟೇಟು ಉದ್ಯಮದಾರರು…

Read More

ಕೋಲಾರ:- ಹಣದ ಹಿಂದೆ ಹೋಗುತ್ತಿರುವ ಮನುಷ್ಯನಲ್ಲಿ ಪರಿಸರ, ಸಂಸ್ಕೃತಿ, ಸಮಾಜದ ಕುರಿತು ಕಳಕಳಿ ಬೆಳೆಸುವಲ್ಲಿ ಧಾನ್ ಫೌಂಡೇಷನ್ `ಹೊಸ ಸಾಮಾಜಿಕ ಕ್ರಮದ ಕಡೆಗೆ’ ಧ್ಯೇಯವಾಕ್ಯದೊಂದಿಗೆ ನಡೆಸುತ್ತಿರುವ ವಾಕಥಾನ್-2024 ಜಾಗೃತಿ ಜಾಥಾ ಪರಿಣಾಮಕಾರಿಯಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಶಿವಾನಂದಹೊಗಲ ಅಭಿಪ್ರಾಯಪಟ್ಟರು. ನಗರದ ಪತ್ರಕರ್ತರ ಭವನದಲ್ಲಿ ಧಾನ್ ಫೌಂಡೇಷನ್ ನಗರದಲ್ಲಿ ಶನಿವಾರ ನಡೆಸಿದ ಜಾಗೃತಿ ಜಾಥಾ ನಂತರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಸಮಾಜ ಇಂದು ಹಣದ ಹಿಂದೆ ಸಾಗುತ್ತಿದೆ, ಪರಿಸರ ಕಾಳಜಿ ಇಲ್ಲವಾಗಿದೆ, ಸಂಸ್ಕೃತಿಯ ಬಗ್ಗೆ ಕಳಕಳಿ ಮರೆಯಾಗುತ್ತಿದ್ದು, ಭವಿಷ್ಯದಲ್ಲಿ ಇದು ಆತಂಕಕಾರಿ ಎಂದ ಅವರು, ಈ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ತರುವ ಪ್ರಯತ್ನ ಶ್ಲಾಘನೀಯ ಎಂದರು. ಗಾಳಿ,ನೀರು,ಮಣ್ಣು ವಿಷಯುಕ್ತವಾಗುತ್ತಿದೆ, ಕೃಷಿಯಲ್ಲಿ ಅತಿಯಾದ ಕಳೆನಾಶಕ,ರಸಾಯನಿಕ ಗೊಬ್ಬರಗಳ ಬಳಕೆ ಮುಂದಿನ ಪೀಳಿಗೆಯ ಭವಿಷ್ಯವನ್ನು ನಾಶಮಾಡುವಷ್ಟರ ಮಟ್ಟಿಗೆ ಹೆಚ್ಚಳವಾಗಿದ್ದು, ಕೃಷಿಯನ್ನು ವಿವೇಚನೆಯಿಂದ ಮಾಡಬೇಕಾಗಿದೆ ಎಂದರು. ಕೃಷಿಯಲ್ಲಿ ಬಳಸುವ ಮಲ್ಚಿಂಗ್ ಪ್ಲಾಸ್ಟಿಕ್ ಕಾಗದ ಮಣ್ಣಿನೊಂದಿಗೆ ಕರಗಿ ಸಸ್ಯದೇಹ ಸೇರಿ ಕಾಳಿನಲ್ಲೂ ಆವೃತವಾಗುತ್ತಿರುವ…

Read More

ಕೋಲಾರ:- ಸಮಾಜದ ಎಲ್ಲರಿಗು ಸಮಾನವಾದ ಶಿಕ್ಷಣ ದೊರಕಿದಾಗ ಮಾತ್ರ ಸಂವಿಧಾನದ ಧ್ಯೇಯೋದ್ದೇಶ ಈಡೇರಲು ಸಾಧ್ಯವೆಂದು ನೀಡುವ ಹೃದಯ ಫೌಂಡೇಶನ್ ಸಂಸ್ಥಾಪಕ ಆಂಥೋಣಿ ಸುಜ್ಜಿತ್ ಅವ್ರು ತಿಳಿಸಿದರು. ಇಂದು ಕೋಲಾರ ತಾಲೂಕಿನ ಕೋಡಿಕಣ್ಣೂರು ಗ್ರಾಮದ ಮಾತೃಭೂಮಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ್ರು, ಸರ್ಕಾರಿ-ಖಾಸಗಿ ಶಾಲೆಗಳೆಂಬ ಬೇಧಭಾವವಿಲ್ಲದೆ‌ ಬಡವ-ಶ್ರೀಮಂತ ಎನ್ನುವ ಭೇದ-ಭಾವವಿಲ್ಲದೆ ಎಲ್ಲರಿಗು ಸಮಾನತೆಯ ಶಿಕ್ಷಣ ದೊರಕಬೇಕು ಎಂದು ತಿಳಿಸಿದರು. ಗ್ರಾಮೀಣ ಪ್ರದೇಶದ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸೌಲಭ್ಯಗಳನ್ನು ನೀಡಿರುವುದನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂದ ಅವರು ನಮ್ಮ ಫೌಂಡೇಶನ್ ವತಿಯಿಂದ ಗ್ರಾಮದ ಶಾಲೆಗಳನ್ನು ದತ್ತು ಪಡೆದುಕೊಂಡು ಬೇಕಾದ ಎಲ್ಲಾ ರೀತಿಯ ಸೌಲಭ್ಯ, ಸಹಕಾರ ನೀಡಲು ಮುಂದಾಗಿದೆವೇ. ಹಂತ ಹಂತವಾಗಿ ಶೈಕ್ಷಣಿಕ ಪ್ರಗತಿಗೆ ನಮ್ಮ ಅಳಿಲು ಸೇವೆ ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು. ಈಗಿನ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಮಕ್ಕಳು ನಗರ ಮಕ್ಕಳಿಗಿಂತ ಬುದ್ಧಿ, ವಿದ್ಯೆಯಲ್ಲಿ ಹಿಂದುಳಿಯಬಾರದೆಂದು ಗಣಕಯಂತ್ರ ಕಲಿಕೆಯನ್ನು ಕಲಿಯಲು…

Read More

ಕೋಲಾರ:- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಬಿ.ಸಿ.ಮುದ್ದು ಗಂಗಾಧರ್‌, ಮಾಜಿ ಸಚಿವ ಟಿ.ಚನ್ನಯ್ಯ ಅವರ ಮೊಮ್ಮಗ ಅಗಿದ್ದಾರೆ. ಆದರೆ, ನಮ್ಮ ಅಣ್ಣ, ಬಾಲಾಜಿ ಚನ್ನಯ್ಯ ಯಾರದ್ದೋ ಮಾತು ಕೇಳಿಕೊಂಡು ಮೊಮ್ಮಗ ಅಲ್ಲವೆಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ’ ಎಂದು ಮಾಜಿ ಸಚಿವ ಟಿ.ಚನ್ನಯ್ಯ ಅವರ ಪುತ್ರ ಲಕ್ಷ್ಮಿನಾರಾಯಣ ಅವ್ರು, ಹೇಳಿದ್ರು. ಇಂದು ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ‌ಮಾತನಾಡಿ, ‘ಟಿ.ಚನ್ನಯ್ಯ ಅವ್ರು ಮೂವರು ಪತ್ನಿಯರನ್ನು ಹೊಂದಿದ್ದರು. ಅವರಲ್ಲಿ ನನ್ನ ತಾಯಿ ಜಯಲಕ್ಷ್ಮಮ್ಮ ಅವರ ಅಣ್ಣ, ಕೋಲಾರ ತಹಶೀಲ್ದಾರ್‌ ಆಗಿದ್ದ ತಿರುಮಲಯ್ಯ ಅವರ ಮೊಮ್ಮಗ ಮುದ್ದು ಗಂಗಾಧರ್‌. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ತಿಪ್ಪೇನಹಳ್ಳಿ ಗ್ರಾಮದ ನಿವಾಸಿ. ಹೀಗಾಗಿ, ಟಿ.ಚನ್ನಯ್ಯ ಮೊಮ್ಮಗ ಎಂದು ಗುರುತಿಸಿಕೊಳ್ಳಲು ಹಾಗೂ ಪರಿಚಯಿಸಿಕೊಳ್ಳುತ್ತಿರುವುದರಲ್ಲಿ ಯಾವುದೇ ತಪ್ಪು ಇಲ್ಲ’ ಎಂದರು. ಬಾಲಾಜಿ ಚನ್ನಯ್ಯ ಸುಳ್ಳು ಹೇಳಿಕೆ ನೀಡುತ್ತಿದ್ದು, ಕುಟುಂಬಕ್ಕೆ ಇರಿಸು ಮುರಿಸು ಉಂಟಾಗುತ್ತಿದೆ. ಇದರಿಂದ ಹಲವರಿಗೆ ಬೇಸರವೂ ಆಗಿದೆ. ಅವರು ತಮ್ಮ ಆತ್ಮಸಾಕ್ಷಿಗೆ ನಡೆದುಕೊಳ್ಳಬೇಕು, ಯಾವುದೋ ಲಾಭಕ್ಕಾಗಿ,…

Read More

ಹೊಸಪೇಟೆ:- ಸಂಶೋಧನೆ ಮೂಲಕ ಯುವ ಪೀಳಿಗೆಗೆ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸುವ ಕಾರ್ಯ ಆಗಬೇಕಾಗಿದೆ ಎಂದು ಎಂ.ಎಸ್.ದಿವಾಕರ ಅವರು ಹೇಳಿದರು. ಹಂಪಿ ಉತ್ಸವ-2024ರ ಅಂಗವಾಗಿ ಜಿಲ್ಲೆಯ ಕಮಲಾಪುರ-ಹಂಪಿಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಕಮಲಾಪುರ-ಹಂಪಿಯ ಕಮಲ್ ಮಹಲ್ ಹತ್ತಿರದ ಪುರಾತತ್ವ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಫೆ.3 ಮತ್ತು 4ರಂದು ಎರಡು ದಿನಗಳ ಹಮ್ಮಿಕೊಳ್ಳಲಾದ “ವಿಜಯನಗರ ಅಧ್ಯಯನ ಕುರಿತು 26ನೇ ವಾರ್ಷಿಕ ವಿಚಾರ ಸಂಕಿರಣ’’ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ವಿಜಯನಗರವು ಇಂದು ತನ್ನ ಗತವೈಭವವವನ್ನು ಮರಳಿ ಪಡೆದಂತಹ ಅನುಭವವನ್ನು ಹಂಪಿ ಉತ್ಸವದಲ್ಲಿ ನಾವಿಂದು ಕಾಣುತ್ತಿದ್ದೇವೆ. ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಂಶೋಧನೆಗಳು ಹೆಚ್ಚಾಗಬೇಕು. ಈ ಹಿನ್ನೆಲೆಯಲ್ಲಿ ವಿಜಯನಗರ ಅಧ್ಯಯನ ಕುರಿತಾದ ವಾರ್ಷಿಕ ವಿಚಾರ ಸಂಕಿರಣ ಕಾರ್ಯಕ್ರಮವು ಸಹಕಾರಿಯಾಗಿದೆ ಎಂದರು. ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತç ವಿಭಾಗದ…

Read More

ಗದಗ:- ಪ್ರತ್ಯೇಕ ದಕ್ಷಿಣ ಭಾರತದ ಬೇಡಿಕೆ ಇಟ್ಟ ಸಂಸದ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ ಈ ಸಂಬಂಧ ಮಾತನಾಡಿದ ಅವರು, ಸುರೇಶ್ ಆಗ ರೀತಿ ಹೇಳಬೇಕಾದರೆ ಅವರಿಗೆ ಎಷ್ಟು ಕೋಪ ಬಂದಿರಬೇಕು. ಇಡೀ ದಕ್ಷಿಣ ಭಾಗದ ಐದು ರಾಜ್ಯಗಳಿಗೆ ಕೇವಲ 1.8 ಲಕ್ಷ ಕೋಟಿ ಕೊಟ್ಟಿದ್ದೀರಿ. ಆದರೆ ಉತ್ತರ ಪ್ರದೇಶ ಒಂದೇ ರಾಜ್ಯಕ್ಕೆ 2 ಲಕ್ಷ ಕೋಟಿ ಕೊಟ್ಟಿದ್ದೀರಿ. ಕರ್ನಾಟಕದಿಂದ 4 ಲಕ್ಷ ಕೋಟಿ ಜಿಎಸ್ ಟಿ ಕೇಂದ್ರ ಸರ್ಕಾರಕ್ಕೆ ಹೋಗುತ್ತೆ. ಆದರೆ ಇವರು ಬಜೆಟ್ ನಲ್ಲಿ ಕೇವಲ 50 ಸಾವಿರ ಕೋಟಿ ಮಾತ್ರ ಕೊಟ್ಟಿದ್ದೀರಿ. ದೇಶ ಅಖಂಡವಾಗಿಯೇ ಇರಬೇಕು ಆದರೆ ನಮಗೆ ಕೊಡಬೇಕಾಗಿರೋದನ್ನ ಕೊಡಬೇಕು. ನಮಗೆ ಕಡಿಮೆ ಕೊಡ್ತಿರೋದಕ್ಕೆ ಒಳಗೊಳಗೆ ಖುಷಿ ಪಡ್ತಾರೆ. 123 ತಾಲೂಕಿನಲ್ಲಿ ಬರಗಾಲ ಘೋಷಣೆ ಮಾಡಲಾಗಿದೆ ಒಂದು ಕಾಸು ಬಿಡಿಗಾಸು ಕೊಟ್ಟಿದಾರೆಯೇ…? ಇದು ಮಲತಾಯಿ ಧೋರಣೆ ಅಲ್ವೇ, ಆ ಕೋಪಕ್ಕೆ ಹೇಳಿದ್ದಾರೆ ಅಷ್ಟೇ. ಅಖಂಡ ಭಾರತ ಕಾಂಗ್ರೆಸ್ ನ ಕೂಸು…

Read More