Author: AIN Author

ಎಳನೀರು ಅನೇಕ ಪೌಷ್ಟಿಕಾಂಶಗಳ ಆಗರವಾಗಿದೆ. ಇದು ದೇಹವನ್ನು ಹೈಡ್ರೇಟ್ ಆಗಿಡುತ್ತದೆ. ಆದರೆ, ಈ ಎಳನೀರಿಗೆ ಎಂದಾದರೂ ನೀವು ಕಾಮಕಸ್ತೂರಿ ಬೀಜ ಹಾಕಿಕೊಂಡು ಕುಡಿದಿದ್ದೀರಾ? ಇದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು? ಎಳನೀರು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಎಲೆಕ್ಟ್ರೋಲೈಟ್‌ಗಳಂತಹ ಪೋಷಕಾಂಶಗಳಿಂದ ತುಂಬಿರುತ್ತದೆ. ಅದಕ್ಕೆ ಕಾಮಕಸ್ತೂರಿ ಬೀಜಗಳನ್ನು ಸೇರಿಸಿದಾಗ ಅದು ದೇಹಕ್ಕೆ ನೈಸರ್ಗಿಕ ಶೀತಕವಾಗುತ್ತದೆ. ಇದು ನಿಮ್ಮ ದೇಹವು ಆಮ್ಲೀಯತೆಯಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಎಳನೀರಿನಲ್ಲಿ ಕರಗುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಹೀಗಾಗಿ, ನಿರ್ಜಲೀಕರಣದಿಂದ ಬಳಲುತ್ತಿರುವ ಜನರಿಗೆ ಇದು ಉತ್ತಮ ಪಾನೀಯವಾಗಿದೆ. ಕಡಿಮೆ ಕ್ಯಾಲೋರಿಗಳಿರುವುದರಿಂದ ಎಳನೀರನ್ನು ಮಧುಮೇಹಿಗಳು ಕೂಡ ಸೇವಿಸಬಹುದು. ಕಾಮಕಸ್ತೂರಿ ಬೀಜಗಳು ನೈಸರ್ಗಿಕ ಶೀತಕವಾಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕಾಮಕಸ್ತೂರಿ ಬೀಜಗಳು ದೇಹದಲ್ಲಿನ ಅಧಿಕ ಶಾಖವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಎಳನೀರಿನೊಂದಿಗೆ ಕಾಮಕಸ್ತೂರಿ ಬೀಜವನ್ನು ಹಾಕಿಕೊಂಡು ಕುಡಿಯುವುದರಿಂದ ಆಮ್ಲೀಯತೆಯನ್ನು ನಿವಾರಿಸಬಹುದು. ಇದು ದೇಹದಲ್ಲಿ…

Read More

ನಿದ್ದೆ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ದೇಹದ ಆರೋಗ್ಯ ಕಾಪಾಡಿಕೊಳ್ಳಲು, ಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ನಿದ್ದೆ ಅಗತ್ಯವಾಗಿದೆ  ಹೀಗಾಗಿ ಪ್ರತೀ ಆರೋಗ್ಯವಂತ ವ್ಯಕ್ತಿಗೆ ಕನಿಷ್ಠ 8 ರಿಂದ 9 ಗಂಟೆಗಳ ನಿದ್ದೆ ಅಗತ್ಯವಾಗಿದೆ. ಕೆಲವೊಮ್ಮೆ ಹೇಗೆ ಮಲಗಿದರೂ ನಿದ್ದೆ ಬರುವುದಿಲ್ಲ. ಕೆಲವರಿಗೆ ಎಸಿ ಇಲ್ಲದೆ ನಿದ್ದೆ ಬರದಿದ್ದರೆ, ಇನ್ನೂ ಕೆಲವರಿಗೆ ಮೆತ್ತನೆಯ ಹಾಸಿಗೆ ಇಲ್ಲದೆ ನಿದ್ದೆ ಬರದು. ನಿಮಗೆ ಗೊತ್ತಾ ನೆಲದ ಮೇಲೆ ಮಲಗುವುದರಿಂದ ಒಂದಷ್ಟು ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಅರೇ ಇದೇನಿದು ಅಂತೀರಾ? ಇಲ್ಲಿದೆ ನೋಡಿ! ನೆಲದ ಮೇಲೆ ಮಲಗುವುದರಿಂದ ಬೆನ್ನುಮೂಳೆಯು ಉತ್ತಮ ಸ್ಥಿತಿಯಲ್ಲಿರುತ್ತದೆ. ಇದು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ನೆಲದ ಮೇಲೆ ಮಲಗುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ನೆಲದ ಮೇಲೆ ಮಲಗುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದು ಯಾವುದೇ ತೊಡಕುಗಳು ಇಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಲು ಸಾಧ್ಯವಿದೆ. ಇದಲ್ಲದೆ, ಒತ್ತಡ, ದೈಹಿಕ- ಮಾನಸಿಕ ಅಸ್ವಸ್ಥತೆಯನ್ನು ತೊಡೆದುಹಾಕುತ್ತದೆ. ನೆಲದ ಮೇಲೆ…

Read More

ಪ್ರಸಕ್ತ ಕಾಲದಲ್ಲಿ ಕೆಟ್ಟ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಸೇವನೆಯಿಂದ ಮಧುಮೇಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಅನಿಯಮಿತ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಉಂಟಾಗುವ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಆರಂಭಿಕವಾಗಿ ಆಯಾಸ, ಹಠಾತ್ ತೂಕ ಹೆಚ್ಚಾಗುವುದು ಅಥವಾ ನಷ್ಟ, ಹೆಚ್ಚಿದ ಹಸಿವು, ಆಗಾಗ್ಗೆ ಮೂತ್ರ ವಿಸರ್ಜನೆ, ಮಸುಕಾದ ದೃಷ್ಟಿ, ನಡವಳಿಕೆಯಲ್ಲಿ ಕಿರಿಕಿರಿ, ಇತ್ಯಾದಿ ಅನುಭವ ಉಂಟಾಗುತ್ತದೆ. ನೀವು ಮಧುಮೇಹದೊಂದಿಗೆ ಹೋರಾಡುತ್ತಿದ್ದರೆ ಇಲ್ಲಿ ನೀಡಲಾದ ಮನೆಮದ್ದುಗಳು ನಿಮಗೆ ಸಹಾಯಕವಾಗಬಹುದು. – ಹಾಗಲಕಾಯಿಯ ರಸದಲ್ಲಿ ಅರ್ಧ ನಿಂಬೆಹಣ್ಣು, ಚಿಟಿಕೆ ಕರಿಮೆಣಸು ಮತ್ತು ಉಪ್ಪನ್ನು ರುಚಿಗೆ ತಕ್ಕಷ್ಟು ಸೇರಿಸಿ ವಾರದಲ್ಲಿ ಮೂರು ದಿನ ಮಧುಮೇಹದಿಂದ ಮುಕ್ತಿ ಸಿಗುತ್ತದೆ. – ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ವಾರಕ್ಕೆ ಎರಡು ಬಾರಿ ಕುಡಿಯುವುದರಿಂದ ಮಧುಮೇಹಕ್ಕೆ ಪರಿಹಾರ ಸಿಗುತ್ತದೆ. – ನಿತ್ಯದ ಊಟದ ನಂತರ ಸೊಪ್ಪನ್ನು ತಿನ್ನುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ. –…

Read More

ಭಾರತದಲ್ಲಿ ವರದಕ್ಷಿಣೆ ಪಿಡುಗು ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಹೆಣ್ಣು ಹೆತ್ತವರಿಗೆ ಇದು ಶಾಪ ಎಂದೇ ಬಿಂಬಿತವಾಗ್ತಿದೆ. ಹಿಂದಿನ ಕಾಲದಲ್ಲಿ ವರದಕ್ಷಿಣೆ ಉದ್ದೇಶ ಬೇರೆಯಿತ್ತು. ಆದ್ರೆ ಬರ್ತಾ ಬರ್ತಾ ಇದ್ರ ವ್ಯಾಖ್ಯಾನ ಬದಲಾಯ್ತು.  ಭಾರತದ ಮೂಲೆ ಮೂಲೆಯಲ್ಲಿ ಈಗ್ಲೂ ವರದಕ್ಷಿಣೆ ಪದ್ಧತಿ ಜಾರಿಯಲ್ಲಿದೆ. ಹೆಣ್ಣು ಹೆತ್ತವರು ವರದಕ್ಷಿಣೆ ನೀಡಲು ಪರದಾಡ್ತಿದ್ದಾರೆ. ವರದಕ್ಷಿಣೆ ನೀಡುವಂತೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವ, ವರದಕ್ಷಿಣೆ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಈಗ್ಲೂ ವರದಿಯಾಗ್ತಿವೆ.  ಭಾರತ ದಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆ ಸೇರಿದಂತೆ ಅನೇಕ ಕಾಯ್ದೆ ಜಾರಿಯಲ್ಲಿದೆ. ಆದ್ರೆ ಇದ್ರ ಬಗ್ಗೆ ಅನೇಕರಿಗೆ ತಿಳುವಳಿಕೆಯಿಲ್ಲ. ಮಾಹಿತಿ ಕೊರತೆಯಿಂದಾಗಿ ಜನರು ವರದಕ್ಷಿಣೆ ವಿರುದ್ಧ ಹೋರಾಡಲು ಸಾಧ್ಯವಾಗ್ತಿಲ್ಲ. ನಾವಿಂದು ಈ ಕಾನೂನಿನ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.   ವರದಕ್ಷಿಣೆ ಎಂದ್ರೇನು ? : ಮದುವೆಯ ಸಮಯದಲ್ಲಿ ತಂದೆ ತನ್ನ ಮಗಳಿಗೆ ನೀಡಿದ ವಸ್ತುವನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಭಾರತದಿಂದಲೂ ವರದಕ್ಷಿಣೆ ಪದ್ಧತಿ ನಡೆದುಕೊಂಡು…

Read More

ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ ಸಮಸ್ಯೆ ಎಲ್ಲರಲ್ಲೂ ಕಂಡುಬರುತ್ತಿದೆ. ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಯಾವ ಆಹಾರ ಸೇವಿಸಬೇಕು? ಯಾವುದನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳಿ. ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಅದನ್ನು ನಿಯಂತ್ರಣದಲ್ಲಿಡಲು ಅನೇಕ ವಿಧದ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಹಾಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಗೋಧಿ, ಹೆಸರು ಬೇಳೆ, ಮಸೂರ, ಟೊಮೆಟೊ, ಸೋರೆಕಾಯಿ, ಹುಣಸೆಹಣ್ಣು, ಹಾಗಲಕಾಯಿ, ಕುಂಬಳಕಾಯಿ, ಹಸಿರು ಸೊಪ್ಪುಗಳು, ತರಕಾರಿ, ಹಣ್ಣುಗಳನ್ನು ಸೇವಿಸಿ ಜೊತೆಗೆ ಜೀರಿಗೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಉತ್ತಮ. ಆದರೆ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಆಹಾರದಲ್ಲಿ ಉಪ್ಪು, ಸಕ್ಕರೆ ಮತ್ತು ಅಧಿಕ ಕೊಬ್ಬಿನ ಆಹಾರಗಳನ್ನು ಸೇವಿಸಬಾರದು. ಮೊಟ್ಟೆ,ಬೆಣ್ಣೆ,ಎಣ್ಣೆಯುಕ್ತ ಆಹಾರ, ಮಸಾಲೆಯುಕ್ತ ಆಹಾರ, ಮಾಂಸ, ತುಪ್ಪ, ಕೇಕ್, ಪಿಜ್ಜಾ. ಪ್ಯಾಕೆಟ್ ಆಹಾರ, ಜಂಕ್ ಫುಡ್ ಇಂತಹ ಆಹಾರಗಳಿಂದ ದೂರವಿರಿ.

Read More

Gold ಪ್ರಿಯರಿಗೆ ಶಾಕ್ ಇದ್ದು, ಚಿನ್ನದ ರೇಟ್ ನಲ್ಲಿ ಹೆಚ್ಚಳಕಂಡಿದೆ. ಚಿನ್ನದ ಬೆಲೆ ಭಾರತದಲ್ಲಿ ಗ್ರಾಮ್​ಗೆ 15 ರೂನಷ್ಟು ಏರಿದರೆ ಬೆಳ್ಳಿ ಬೆಲೆ ಗ್ರಾಂಗೆ 20 ಪೈಸೆ ಹೆಚ್ಚಳಗೊಂಡಿದೆ. ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 55 ರೂನಷ್ಟು ಹೆಚ್ಚಾಗಿದೆ. ಬಹುತೇಕ ದೇಶಗಳಲ್ಲಿ ಚಿನ್ನದ ಬೆಲೆ ಏರಿದೆ. ಕಳೆದ 10 ದಿನದಲ್ಲಿ ಬೆಳ್ಳಿ ಬೆಲೆ 1 ಗ್ರಾಮ್​ಗೆ ಒಂದು ರುಪಾಯಿ ಇಪ್ಪತ್ತು ಪೈಸೆಯಷ್ಟು ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,600 ರುಪಾಯಿ ಆಗಿದೆ. 100 ಗ್ರಾಮ್ ಬೆಲೆ 7,650 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 58,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,400 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 4ಕ್ಕೆ):- 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ:…

Read More

ಬಿಗ್‌ಬಾಸ್ ಶೋ ಒಂದು ವ್ಯಕ್ತಿತ್ವದ ಆಟ ಎಂದು ಕಾರ್ತಿಕ್ ಮಹೇಶ್ ಹೇಳಿದ್ದಾರೆ. ಚಾಮರಾಜನಗರಕ್ಕೆ ನಿನ್ನೆ ಭೇಟಿ ನೀಡಿದ ಅವರು, ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠಕ್ಕೆ ತೆರಳಿ ಸಿದ್ದಬಸವರಾಜಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಇದೇ ವೇಳೆ ಸಂಘ ಸಂಸ್ಥೆ ಹಾಗೂ ಅಭಿಮಾನಿಗಳು ಕಾರ್ತಿಕ್‌ಗೆ ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಕಾರ್ತಿಕ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯುವಕ, ಯುವತಿಯರು ಮುಗಿಬಿದ್ದರು. ಬಳಿಕ ಮಾತನಾಡಿದ ಕಾರ್ತಿಕ್, ನಾನು ಹುಟ್ಟಿದ್ದು ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ. ಹಾಗಾಗಿ ಬಾಲ್ಯ ಕಳೆಯಲು ಇಲ್ಲಿಗೆ ಬರುತ್ತಿದ್ದೆ. ಇಲ್ಲಿಗೆ ಬಂದರೆ ನನಗೆ ತುಂಬಾ ಖುಷಿಯಾಗುತ್ತದೆ. ನನ್ನ ಗೆಲುವು ನನ್ನ ಕುಟುಂಬ ಹಾಗು ಅಭಿಮಾನಿಗಳಿಂದ ಸಾಧ್ಯವಾಗಿದ್ದು, ಹುಟ್ಟೂರು ಹಾಗೂ ಬೆಳೆದು ಬಂದ ದಾರಿ ಎಂದಿಗೂ ಮರೆಯಬಾರದು. ಬಿಗ್‌ಬಾಸ್ ಗೆದ್ದ ನಂತರ ಒಳ್ಳೆಯ ಆಫರ್‌ಗಳು ಬರುತ್ತಿವೆ. ಮುಂದೆ ದೊಡ್ಡ ಹೆಜ್ಜೆಯಿಡುವ ಯೋಚನೆಯಿದೆ ಎಂದರು. ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿರೋದು ಖುಷಿಯಾಗಿದೆ. ಅದಕ್ಕೆ ಅವರು ಆರ್ಹರಾಗಿದ್ದಾರೆ. ವಿನಯ್ ನನ್ನ ಜೊತೆಗೆ ಫೈನಲ್‌ನಲ್ಲಿ ಇರ್ತಾರೆ ಎಂಬ ಆಸೆಯಿತ್ತು.…

Read More

ಲಂಡನ್​: ಮುಂಜಾನೆ ಬೇಗ ಎದ್ದು ವೇಗದ ನಡಿಗೆ ಅಥವಾ ಬ್ರಿಸ್ಕ್ ವಾಕ್ ಮಾಡಿದರೆ ಹಲವಾರು ಪ್ರಯೋಜನಗಳಿವೆ. ಸಾಮಾನ್ಯವಾಗಿ ಬಹುತೇಕ ಮಂದಿ ಮುಂಜಾನೆ ವಾಕ್ ಗೆ ತೆರಳುತ್ತಾರೆ. ಇದರಲ್ಲಿ ಕೆಲವರು ವೇಗವಾಗಿ ನಡೆಯುತ್ತಾರೆ. ಇನ್ನು ಕೆಲವರು ನಿಧಾನವಾಗಿ ನಡೆಯುತ್ತಾರೆ. ಇದನ್ನೆಲ್ಲಾ ನಾವು ನೋಡಿರುತ್ತೇವೆ. ಆದ್ರೆ ಈ ದೇಶದಲ್ಲಿ ವಾಕಿಂಗ್‌ ಮಾಡಿದರೆ ವಿದ್ಯುಚ್ಛಕ್ತಿಯನ್ನೂ ಉತ್ಪಾದಿಸಬಹುದು ಎಂದು ಪ್ರಯೋಗದ ಮೂಲಕ ತಿಳಿಸಿಕೊಟ್ಟಿದೆ. ಹೌದು ಇಂಗ್ಲೆಂಡ್​ನ ಶ್ರಾಪ್‌ಶೈರ್‌ನಲ್ಲಿರುವ ಪಾದಚಾರಿ ಮಾರ್ಗದಲ್ಲಿ ಈ ಪ್ರಯೋಗ ಮಾಡಲಾಗಿದೆ. ಇಲ್ಲಿಯ ಫುಟ್​ಪಾಥ್​ ಮೇಲೆ ನೀವು ನಡೆಯುವಾಗ ನಿಮ್ಮ ಶಕ್ತಿಯು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿತವಾಗುತ್ತದೆ. ಇಂಥದ್ದೊಂದು ಮ್ಯಾಜಿಕ್​ ಇಲ್ಲಿ ಮಾಡಲಾಗಿದೆ. ಈ ಫುಟ್‌ಪಾತ್​ನಲ್ಲಿ ಜನರು ನಡೆದಾಡುವಾಗ ಶಕ್ತಿಯು ಉತ್ಪತ್ತಿಯಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಟೆಲ್ಫೋರ್ಡ್ ಮತ್ತು ವ್ರೆಕಿನ್ ಕೌನ್ಸಿಲ್ ಟೆಲ್ಫೋರ್ಡ್ ರೈಲು ನಿಲ್ದಾಣದಿಂದ ಪಟ್ಟಣಕ್ಕೆ ಹೋಗುವ ಕಾಲ್ನಡಿಗೆಯಲ್ಲಿ ಸಿಲ್ವರ್ ಸ್ವಾಲೋ ಫುಟ್‌ಬ್ರಿಡ್ಜ್ ಜೊತೆಗೆ ಪಾದಚಾರಿ ಮಾರ್ಗವನ್ನು ಸ್ಥಾಪಿಸಿದೆ, ಇದು ಪಾದಚಾರಿಗಳ ಹೆಜ್ಜೆಗಳ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಮತ್ತು ಅದನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸುತ್ತದೆ. ಈ 6-ಮೀಟರ್ ಉದ್ದದ ಸ್ಮಾರ್ಟ್…

Read More

ಹೊಸಪೇಟೆ:- ಶನಿವಾರ ಎರಡನೇ ದಿನ ಹಂಪಿ ಉತ್ಸವದ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿನಿಮಾ ನಾಯಕ ನಟ ದರ್ಶನ್ ತೂಗುದೀಪ ಮೆರಗು ತಂದರು‌. ದರ್ಶನ್ ನೋಡಿದ ಜನಸ್ತೋಮ ‘ಡಿ ಬಾಸ್’ ಎಂದು ಕೂಗಿ ಸಂತಸ ವ್ಯಕ್ತಪಡಿಸಿದರು. ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜಯನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡು ಹಂಪಿ ಉತ್ಸವ ಆಯೋಜಿಸುವ ಸದಾವಕಾಶ ದೊರಕಿದೆ. ಇದರಿಂದ ಸಂತೋಷ ಹಾಗೂ ಖುಷಿ ಆಗುತ್ತಿದೆ ಎಂದರು. ಸಿನಿಮಾ ನಾಯಕ ನಟ ದರ್ಶನ ಮಾತನಾಡಿ, 2018 ರಲ್ಲಿ ಹಂಪಿ ಉತ್ಸವಕ್ಕೆ ಆಗಮಿಸಿದ್ದೆ. 2024 ರಲ್ಲಿ ಮೊತ್ತೊಮ್ಮೆ ಆಗಮಿಸಿರುವುದು ಸುದೈವ. ಕನ್ನಡ ನಾಡಿನ ಚರಿತ್ರೆಯಲ್ಲಿ ಕೃಷ್ಣ ದೇವರಾಯ, ಸಂಗೊಳ್ಳಿ ರಾಯಣ್ಣ ಹಾಗೂ ಮದಕರಿ ನಾಯಕರ ಹೆಸರು ಎಂದಿಗೂ ಚಿರಸ್ಥಾಯಿಯಾಗಿದೆ. ಕೃಷ್ಣದೇವರಾಯರು ನಮ್ಮೆಲ್ಲರಿಗೂ ಪ್ರೇರಣೆ. ಅವರ ಕಾರಣದಿಂದಲೇ ಇಂದು ನಾವೆಲ್ಲರೂ ಹಂಪಿಯಲ್ಲಿ ಉತ್ಸವ ಆಚರಿಸುತ್ತಿದ್ದೇವೆ. ಕೃಷ್ಣದೇವರಾಯರ ಆತ್ಮ ನಮ್ಮೆಲ್ಲರೊಂದಿಗಿದೆ ಎಂದರು. ಸಚಿವ ಜಮೀರ್ ಅಹ್ಮದ್…

Read More

ತುಮಕೂರು:- ಗುಬ್ಬಿ ಪೊಲೀಸ್ ಠಾಣೆಯಿಂದ ಸರಗಳ್ಳ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಸೇರಿ ನಾಲ್ವರು ಸಿಬ್ಬಂದಿ ಅಮಾನತು ಮಾಡಲಾಗಿದೆ ಪಿಎಸ್‌ಐ ದೇವಿಕಾ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ ತುಮಕೂರು‌ ಎಸ್ಪಿ ಅಶೋಕ್ ಕೆ.ವಿ ಅವರು ಆದೇಶಿಸಿದ್ದಾರೆ. ಕಳೆದ ಗುರುವಾರ ರಾತ್ರಿ ಪೊಲೀಸ್ ಠಾಣೆಯಿಂದಲೇ ಸರಗಳ್ಳ ಸೈಯದ್ ಅಲಿ ಎಂಬಾತ ಎಸ್ಕೇಪ್ ಆಗಿದ್ದ. ಈ ಹಿನ್ನಲೆ ಕರ್ತವ್ಯಲೋಪದಡಿ ಅಮಾನತು ಆದೇಶ ಹೊರಡಿಸಲಾಗಿದೆ. ಇನ್ನು ಪರಾರಿಯಾದ ಆರೋಪಿ ಸೈಯದ್ ಅಲಿ ಪತ್ತೆಗೆ ಮೂರು ತಂಡವನ್ನು ರಚಿಸಲಾಗಿದ್ದು, ಪೊಲೀಸರು ಗದಗ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಶೋಧ ಕಾರ್ಯ ಶುರುಮಾಡಿದ್ದಾರೆ. ಜೊತೆಗೆ ಇಂದು ಶಿರಾ ಬೈಪಾಸ್‌ನಲ್ಲಿ ಬೆಳಗಿನ ಜಾವದವರೆಗೂ ಬಾಂಬೆ, ಗದಗ ಕಡೆ ಹೋಗುವ ಬಸ್‌ಗಳನ್ನ ತಪಾಸಣೆ ಮಾಡಿದ್ದಾರೆ. ಈಗಾಗಲೇ ಬಾಂಬೆಗೆ ತೆರಳಿರುವ ಪೊಲೀಸರ ಮತ್ತೊಂದು ತಂಡ ತನಿಖೆ ಶುರುಮಾಡಿದೆ.,

Read More