Author: AIN Author

ಕಂಡಕ್ಟರ್, ಸ್ಟಾಫ್ ನರ್ಸ್ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಂತೆ BMTC ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 2503 ಕಂಡಕ್ಟರ್, ಸ್ಟಾಫ್ ನರ್ಸ್ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಂಡಕ್ಟರ್, ಸ್ಟಾಫ್ ನರ್ಸ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. BMTC ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹುದ್ದೆಗಳ ಸಂಖ್ಯೆ: 2503 ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ ಹುದ್ದೆಯ ಹೆಸರು: ಕಂಡಕ್ಟರ್, ಸ್ಟಾಫ್ ನರ್ಸ್ ಸಂಬಳ: BMTC ನಿಯಮಗಳ ಪ್ರಕಾರ BMTC ಹುದ್ದೆಯ ವಿವರಗಳು ಕಂಡಕ್ಟರ್: 2500 ಸಹಾಯಕ ಲೆಕ್ಕಾಧಿಕಾರಿ: 1 ಸ್ಟಾಫ್ ನರ್ಸ್: 1 ಔಷಧಿಕಾರ: 1 BMTC ನೇಮಕಾತಿ 2024 ಅರ್ಹತಾ ವಿವರಗಳು ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: BMTC ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ…

Read More

ಬೆಂಗಳೂರು:- ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಂದ 50 ರೂಪಾಯಿ ಸಂಗ್ರಹ ವಿಚಾರವಾಗಿ ಶಿಕ್ಷಣ ಇಲಾಖೆ ಸಮರ್ಥಿಸಿಕೊಂಡಿದ್ದಾರೆ. 2023ರ ಫೆಬ್ರವರಿಯಲ್ಲಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಲು ಸರ್ಕಾರ ಆದೇಶಿಸಿದೆ ಎಂದು ಪರೋಕ್ಷವಾಗಿ ಬಿಜೆಪಿ ಅವಧಿಯಲ್ಲಿ ಆದೇಶವಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟನೆ ನೀಡಿದೆ. ಕಳೆದ 4 ವರ್ಷಗಳಿಂದಲೂ ಈ ಶುಲ್ಕ ಇದೆ. ಪರೀಕ್ಷೆ ನಡೆಸಲು ಖರ್ಚು ವೆಚ್ಚಕ್ಕೆ ಪ್ರತಿ ವಿದ್ಯಾರ್ಥಿಯಿಂದ 50 ರೂ. ಸಂಗ್ರಹ ಮಾಡಲಾಗುತ್ತೆ ಎಂದು ಸ್ಪಷ್ಟಿಕರಣ ನೀಡಿದೆ. ಈ ವಿಚಾರವಾಗಿ ಶಿವಮೊಗ್ಗದಲ್ಲಿ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, 50 ರೂಪಾಯಿ ತೆಗೆದುಕೊಳ್ಳುವ ನಿಯಮ ಮಾಡಿದ್ದು ಬಿಜೆಪಿಯವರೇ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಜಾರಿ ಮಾಡಿದ್ದು. ಹೆಚ್.ಡಿ.ಕುಮಾರಸ್ವಾಮಿ ಮೊದಲು ಬಿಜೆಪಿಯವರನ್ನು ಪ್ರಶ್ನೆ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ. 2 ಸಾವಿರ ರೂ. ಜೆಡಿಎಸ್​​, ಬಿಜೆಪಿಯವರೇ ಪಡೆಯುತ್ತಿದ್ದಾರೆ ಅಲ್ವಾ. ಬಿಜೆಪಿ, ಜೆಡಿಎಸ್​ನವರಿಗೆ ಜಾಸ್ತಿ ಗ್ಯಾರಂಟಿ ಹೋಗ್ತಿರೋದು. ಅದರ ಬಗ್ಗೆ ಚರ್ಚೆ ಮಾಡಲು ಹೆಚ್​.ಡಿ.ಕುಮಾರಸ್ವಾಮಿಗೆ ಕೇಳುತ್ತೇನೆ ಎಂದು ಕಿಡಿಕಾರಿದ್ದಾರೆ.

Read More

ಬೆಂಗಳೂರು: ಸಿದ್ದರಾಮಯ್ಯ ಹೃದಯಪೂರ ಕೇವಲ ಟಿಪ್ಪು ಇರುವುದು ಎಂದು ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕುಂಕುಮ ಹಾಕಲು ಸಿದ್ದರಾಮಯ್ಯ ಹಿಂದೇಟು ಹಾಕ್ತಾರೆ. ಸಿದ್ದರಾಮಯ್ಯಗೆ ಟಿಪ್ಪು ಮೈತುಂಬ ತುಂಬಿಕೊಂಡಿದ್ದಾನೆ. ಟೋಪಿಯನ್ನು ಬೇಡ ಎಂದರೂ ಹಾಕಿಕೊಳ್ಳುತ್ತಾರೆ. ಕುಂಕುಮ ಹಾಕಿಕೊಳ್ಳಲು ಹಿಂದೇಟು ಹಾಕುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. https://ainlivenews.com/looking-for-govt-jobs-then-heres-your-chance/ ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದಾನೆ. ಆದರೆ ಕೇಸರಿ ಪೇಟ ಕಿತ್ತು ಬಿಸಾಕ್ತಾರೆ. ಸಿದ್ದರಾಮಯ್ಯ ಹೃದಯದ ತುಂಬಾ ಟಿಪ್ಪು ಇದ್ದಾನೆ. ಅವರು ನಾಮ ಇಡದಿದ್ರೆ, ಏನೂ ತೊಂದರೆ ಇಲ್ಲ. ಮೊದಲು ಹೃದಯದಲ್ಲಿ ರಾಮನ ಇಟ್ಕೊಳ್ಳಿ. ನಂತರ ಹಣ ಬಿಡುಗಡೆ ಮಾಡಿ. ಮೇಕೆದಾಟು ಯೋಜನೆ ಜಾರಿಯ ಬಗ್ಗೆ ತಮಿಳುನಾಡಿನ ಬ್ರದರ್ಸ್ ಜೊತೆಗೆ ಕಾಂಗ್ರೆಸ್ ನಾಯಕರು ಮಾತನಾಡಲಿ ಎಂದಿದ್ದಾರೆ.

Read More

ಬೆಂಗಳೂರು:  ಸಂಸದ ಡಿ.ಕೆ. ಸುರೇಶ್‌, “ಭಾರತ ವಿಭಜನೆ” ಬಗ್ಗೆ ಮಾತನಾಡಿದ್ದರು. ಇದಕ್ಕೆ ದೇಶಾದ್ಯಂತ ವ್ಯಾಪಕ ಟೀಕೆ, ಆಕ್ರೋಶಗಳು ವ್ಯಕ್ತವಾಗುತ್ತಲೇ ಇವೆ ಬಿಜೆಪಿ ಕಾರ್ಯಕರ್ತರು ಡಿ.ಕೆ. ಬ್ರದರ್ಸ್‌ ಮನೆಗೆ ಮುತ್ತಿಗೆ ಹಾಕಲಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ ಅವರ ನಿವಾಸದ ಬಳಿ ಹೆಚ್ಚಿನ ಪೊಲೀಸ್‌ ಭದ್ರತೆಯನ್ನು ನಿಯೋಜನೆ ಮಾಡಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಆಗಮಿಸುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಮನೆಯ ಸ್ವಲ್ಪ ದೂರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸುಮಾರು 35ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡ ಬಿಜೆಪಿ ಕಾರ್ಯಕರ್ತರನ್ನು ಬಿಎಂಟಿಸಿ ಬಸ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಹೀಗಾಗಿ ಬಿಜೆಪಿ ಯುವ ಮುಖಂಡರಾದ ಅನಿಲ್ ಶೆಟ್ಟಿ, ಪ್ರಶಾಂತ್, ಸಂದೀಪ್ ರವಿ, ಪ್ರತಾಪ್ ಸೇರಿ 35ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ.

Read More

ಬಿಗ್ ಬಾಸ್ (Big Boss) ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಾರ್ಟ್ ಮೆಂಟ್ ನಲ್ಲಿ ಪಾರ್ಕಿಂಗ್ ಮಾಡಿದ್ದ ಕಾರನ್ನು (Car) ತೆಗೆಯಲು ಹೋಗಿ ಪಿಲ್ಲರ್ ಗೆ ಕಾರು ಗುದ್ದಿಸಿದ್ದಾರೆ ಎನ್ನುವ ಮಾಹಿತಿ ಇದೆ. ಬ್ರೇಕ್ ತುಳಿಯಲು ಹೋಗಿ ಎಕ್ಸಿಲೇಟರ್ ತುಳಿದದ್ದು ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮಾಹಿತಿಗಳ ಪ್ರಕಾರ ಸೋನು ಇತ್ತೀಚೆಗಷ್ಟೇ ಕಾರು ಕಲಿಯಲು ಆರಂಭಿಸಿದ್ದಾರಂತೆ. ಹಾಗಾಗಿ ಎಕ್ಸಿಲೇಟರ್ ಮತ್ತು ಬ್ರೇಕ್ ನಡುವಿನ ಗೊಂದಲದಿಂದಾಗಿ ಅಪಾರ್ಟ್ ಮೆಂಟ್ ನ ಪಿಲ್ಲರ್ ಗೆ ಕಾರು ಗುದ್ದಿಸಿದ್ದಾರೆ. ಕೈಗೆ ಮತ್ತು ಕಾಲುಗಳಿಗೆ ಸಣ್ಣಪುಟ್ಟ ಏಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಕಾರನ್ನು ಅವರೇ ಚಲಾಯಿಸುತ್ತಿದ್ದರೋ ಅಥವಾ ಬೇರೆ ಯಾರಾದರೋ ಚಲಾಯಿಸುತ್ತಿದ್ದರೋ ಎನ್ನುವುದಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಅವರು ಕೂಡ ಈ ಕುರಿತಂತೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಗುದ್ದಿದ ರಭಸಕ್ಕಂತೂ ಕಾರು ನುಜ್ಜುಗುಜ್ಜಾಗಿದೆಯಂತೆ. ಹಾಟ್ ಹಾಟ್ ಫೋಟೋ ಶೂಟ್ ಗಳ ಮೂಲಕವೇ ಸಖತ್ ಫೇಮಸ್ ಆದವರು…

Read More

ಆರಂಭದಲ್ಲೇ ಕ್ಯಾನ್ಸರ್ ಪತ್ತೆಹಚ್ಚುವ ನಿಟ್ಟಿನಲ್ಲಿ ಹೆಚ್ಚಿನ ತಪಾಸಣೆ ಅವಶ್ಯಕತೆಯಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾನ್ಸರ್ ಸ್ಕ್ರೀನಿಂಗ್ ಗೆ ಒತ್ತು ನೀಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಕ್ಯಾನ್ ವಾಕ -2024” ಕ್ಯಾನ್ಸರ್ ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.. ಆರೋಗ್ಯ ಇಲಾಖೆ ಹಾಗೂ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು, ಜೆಎಸ್ ಕ್ಯಾನ್ಸರ್ ಫೌಂಡೇಶನ್, ನವೋದಯ ಇನ್ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕ್ಯಾನ್ ವಾಕ್’ ಜಾಗೃತಿ ನಡಿಗೆ ಕಾರ್ಯಕ್ರಮಕ್ಕೆ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ನಿಯಮಿತ ವ್ಯಾಯಾಮ, ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಸೇರಿದಂತೆ ಆರೋಗ್ಯಪೂರ್ಣ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಮೂಲಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಅನ್ನು ಪತ್ತೆ ಮಾಡುವ ಮೂಲಕ ಅಮೂಲ್ಯ ಜೀವವನ್ನು ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದೆ.…

Read More

ಕನ್ನಡದ ‘ದಿಯಾ’ ಹಾಗೂ ತೆಲುಗಿನ ‘ದಸರಾ’ ಸಿನಿಮಾ ಖ್ಯಾತಿಯ ದೀಕ್ಷಿತ್‌ ಶೆಟ್ಟಿ ಅಭಿನಯದ “ಕೆಟಿಎಂ’ ಸಿನಿಮಾ ತನ್ನ ಟೀಸರ್‌ ಮೂಲಕ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಚಿತ್ರತಂಡ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ನೀಡುತ್ತಿದೆ. ಕೆಟಿಎಂ ಸಿನಿಮಾದ ಹಾಡುಗಳು ಕೇಳುಗರನ್ನು ಮೋಡಿ ಮಾಡುತ್ತಿವೆ.  ಈ ಹಿಂದೆ ಬಿಡುಗಡೆಯಾಗಿದ್ದ ಎರಡು ಸಾಂಗ್ಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ‌. ಮಿಲಿಯನ್ ವೀವ್ಸ್ ಪಡೆದುಕೊಂಡಿರುವ ಕೆಟಿಎಂ ಹಾಡುಗಳು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚು ಮಾಡಿವೆ‌. ಇದೀಗ ಕೆಟಿಎಂ ಸಿನಿಮಾದ ಮೂರನೇ ಹಾಡು ಅನಾವರಣಗೊಂಡಿದೆ. ಎಲ್ಲಾ ನೀನೇನೆ ಎಂಬ ಮೆಲೋಡಿ ಗಾನಬಜಾನಕ್ಕೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು, ಚೇತನ್ ರಾವ್ ಸಂಚಿತ್ ಹೆಗ್ಡೆ ಜೊತೆಗೂಡಿ ಧ್ವನಿಯಾಗುವುದರ ಜೊತೆಗೆ ಸಂಗೀತ ಒದಗಿಸಿದ್ದಾರೆ. ಎಲ್ಲಾ ನೀನೇನೆ ಎನ್ನುತ್ತಾ ದೀಕ್ಷಿತ್ ಸಂಜನಾ ದಾಸ್ ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ಹಿಂದೆ “ಅಥರ್ವ’ ಸಿನಿಮಾ ನಿರ್ದೇಶಿಸಿದ್ದ ಅರುಣ್‌ “ಕೆಟಿಎಂ’ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. “ಮಹಾಸಿಂಹ ಮೂವೀಸ್‌’ ಬ್ಯಾನರ್‌ನಲ್ಲಿ ವಿನಯ್‌…

Read More

 ಕಿಚ್ಚನ ಜೊತೆಗಿನ ಸಂಗೀತಾ ಶೃಂಗೇರಿ ಸ್ಪೆಷಲ್ ಫೋಟೋ ಶೇರ್ ಮಾಡಿ ವಿಶೇಷ ಸಾಲುಗಳನ್ನು ಬರೆದಿದ್ದಾರೆ. ‘ನಮ್ಮ ಬಿಗ್ ಬಾಸ್ ನೀವೇ’ ಎಂದು ಸಂಗೀತಾ(Sangeetha Sringeri) ಹಾಡಿಹೊಗಳಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10ರ (Bigg Boss Kannada 10) ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ. 2ನೇ ರನ್ನರ್ ಅಪ್ ಆಗಿ ಸಂಗೀತಾ ಸ್ಥಾನ ಪಡೆದಿದ್ದಾರೆ. ಇದೀಗ ಕಿಚ್ಚನ ಬಗ್ಗೆ ವಿಶೇಷವಾಗಿ ಪೋಸ್ಟ್ ಶೇರ್ ಮಾಡಿದ್ದಾರೆ. ನಮ್ಮ ಕರುನಾಡ ‘ಅಭಿನಯ ಚಕ್ರವರ್ತಿ’, ನಮ್ಮೆಲ್ಲರ ಪ್ರೀತಿಯಾ ಕಿಚ್ಚನಿಗೆ ನಾನು ಎಂದೆಂದೂ ಆಭಾರಿ. ಮೊದಲನೇ ವಾರದಿಂದ ಕೊನೆಯ ದಿನದವರೆಗೂ ಬಹಳ ಸೂಕ್ಷ್ಮತೆಯಿಂದ, ಕಾಳಜಿಯಿಂದ ಕಂಡಿರಿ, ತಿದ್ದಿ ಸರಿ ದಾರಿ ತೋರಿದಿರಿ. https://www.facebook.com/photo?fbid=921427719352172&set=pcb.921427766018834 ನಮ್ಮ ಬಿಗ್ ಬಾಸ್ ನೀವೇ ಎಂದು ನಟಿ ಬರೆದಿದ್ದಾರೆ. ಕಷ್ಟಕರವಾದ ಬಿಗ್ ಬಾಸ್ ಜರ್ನಿಯನ್ನು ಅಡ್ವೆಂಚರ್ ಆಗಿ ಬದಲಾಯಿಸಿದ ಕಿಚ್ಚ ಅವರಿಗೆ ಧನ್ಯವಾದ. ನಿಮ್ಮ ನಿರೂಪಣೆ ಈ ಶೋವನ್ನು ಅದ್ಭುತವಾಗಿಸಿದೆ ಎಂದು ನಟಿ ಬರೆದಿದ್ದಾರೆ. ಫಿನಾಲೆ ದಿನ ಕಿಚ್ಚನ…

Read More

ಡ್ರೋನ್ ‍ಪ್ರತಾಪ್ (Drone Pratap) ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದೇ ಇದ್ದರೂ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರಿಗೆ ಹೇಳಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸೋದಾಗಿ ಡ್ರೋನ್ ಪ್ರತಾಪ್ ಹಣ ಪಡೆದು ವಂಚಿಸಿದ್ದಾರೆ ಎಂದು ಚಂದನ್ ಕುಮಾರ್ ಗೌಡ ಎನ್ನುವವರು ದೂರು ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ಡ್ರೋನ್ ಪ್ರತಾಪ್ ತಮ್ಮಿಂದ ಎರಡು ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತರಿಗೆ ಚಂದನ್ ಕುಮಾರ್ ದೂರು ನೀಡಿದ್ದಾರೆ. ಈ ಕುರಿತಂತೆ ಡ್ರೋನ್ ಪ್ರತಾಪ್ ಜೊತೆ ಮಾತನಾಡಿರುವ ಆಡಿಯೋವನ್ನೂ ಅವರು ನೀಡಿದ್ದಾರೆ. ಚಂದನ್ ಕುಮಾರ್ ಮತ್ತು ಡ್ರೋನ್ ಆಡಿದ ಆಡಿಯೋದಲ್ಲಿ , ನಂದು ಸ್ವಲ್ಪ ಕಾಂಟ್ರವರ್ಸಿ ಅದ್ಮೇಲೆ ಯುತ್ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡ್ತೇವೆ ಬಾ ಅಂದ್ರು. ಆಗ ನಾನು ಹೆಚ್ ಡಿಕೆ ಜೊತೆ ಇದ್ದೆ ಎಂದು ಡ್ರೋನ್ ಹೇಳ್ತಾರೆ. ದೂರುದಾರ ಚಂದನ್,’ ತುಂಬಾ ಜನಪ್ರಿಯವಾಗಿದ್ರಿ ಅಂತಾರೆ. ಮತ್ತೆ ಡ್ರೋನ್ ಪ್ರತಾಪ್ , ನನ್ನ ಭಾವಚಿತ್ರ…

Read More

ಪೂನಂಪಾಂಡೆ ಸಾವಿನ ಪೋಸ್ಟ್ ಹಾಕಿ ಮೆಸೇಜ್ ಕೊಡೋ ಅಗತ್ಯವಿರಲಿಲ್ಲ ಎಂದು ಪೂನಂಪಾಂಡೆ ಸಾವಿನ ಗಿಮಿಕ್ ಬಗ್ಗೆ ನಟಿ ರಾಗಿಣಿ ದ್ವಿವೇದಿ ಬೇಸರ ವ್ಯಕ್ತಪಡಿಸಿದ್ದಾರೆ. ನಂಗೂ 32 ವರ್ಷ, ಅವರಿಗೂ 32 ವರ್ಷ. ಈ ರೀತಿ ಮಾಧ್ಯಮಗಳನ್ನ ಬಳಸಿಕೊಳ್ಳುವುದು ಸರಿ ಇಲ್ಲ. ನನಗೂ ಸಾವಿನ ಸುದ್ದಿ ಕೇಳಿ ಶಾಕ್ ಆಗಿತ್ತು ಎಂದು ಹೇಳಿದ್ದಾರೆ. ಬಳಿಕ, ಪೂನಂಪಾಂಡೆ ನನಗೇನು ಪರಿಚಯವಿಲ್ಲ. ಒಂದು ವೇದಿಕೆಯನ್ನ ಈ ರೀತಿ ಬಳಸಿಕೊಂಡಿದ್ದು ಸರಿ ಇಲ್ಲ. ಬೇರೆ ರೀತಿಯಲ್ಲೂ ಜಾಗೃತಿ ಮೂಡಿಸಬಹುದಾಗಿತ್ತು ಎಂದು ಹೇಳಿದ್ದಾರೆ. ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ಇನ್ಸ್ಟಾದಲ್ಲಿ ಪೂನಂ ಅವರ ಮ್ಯಾನೇಜರ್ ಗರ್ಭಕೋಶ ಕಂಠ ಕ್ಯಾನ್ಸರ್ (Cancer)ನಿಂದಾಗಿ ಪೂನಂ ನಿಧನರಾಗಿದ್ದಾರೆ (Death) ಎಂದು ಪೋಸ್ಟ್ ಹಾಕಿ ಇಡೀ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಪೂನಂ ನಿಧನ ಇಡೀ ದೇಶವೇ ಚರ್ಚೆ ಮಾಡುವಂತೆ ಮಾಡಿತ್ತು. ಪೂನಂ ಸತ್ತಿರುವ ಸಮಾಚಾರದ ಹೊರತಾಗಿ ಬೇರೆ ಯಾವ ಫೋಟೋಗಳು ಆಚೆ ಬರಲಿಲ್ಲ. ಹಾಗಾಗಿ ಸಹಜವಾಗಿಯೇ ಸಾವಿನ ಬಗ್ಗೆ ಅನುಮಾನ ಮೂಡಿತ್ತು.…

Read More