Author: AIN Author

ಹೊಸಪೇಟೆ(ವಿಜಯನಗರ).ಫೆಬ್ರವರಿ.04 ಹುದುಗಿಸಿಟ್ಟ ಬಾಂಬ್ ಹುಡುಕಿದ ಲೂಸಿ, ಅಪರಾಧಿ ಪತ್ತೆ ಹಚ್ಚಿದ ಬ್ರೂನೋ, ಕದ್ದವಸ್ತು ಕಂಡುಹಿಡಿದ ಸಿಂಬಾ, ಹೀಗೆ ವಿಜಯನಗರ ಜಿಲ್ಲಾ ಪೊಲೀಸ್‌ ಶ್ವಾನದಳದ ಕರ್ತವ್ಯದ ಕರಾಮತ್ತು ಕಣ್ದುಂಬಿ ಕೊಂಡ ಜನರು, ಶುಕುನಗಳ ಜಾಣ್ಮೆಗೆ ಮಾರು ಹೋದರು. ಈ‌ ಚಿತ್ರಣ ಕಂಡುಬಂದಿದ್ದು, ಕಮಲಾಪುರದ ಹವಾಮಾ ಕಚೇರಿ ಹಿಂಭಾಗದ ಆವರಣದಲ್ಲಿ. ಹಂಪಿ ಉತ್ಸವ -2024ದ ಕಡೆಯ ದಿನ ಭಾನುವಾರ ಆಯೋಜಿಸಲಾದ ಶ್ವಾನ ಪ್ರದರ್ಶನ ಜನರಿದಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿತು. ಇದೇ ಮೊದಲ ಬಾರಿ ಹಂಪಿ ಉತ್ಸವದ ಶ್ವಾನ ಪ್ರದರ್ಶನದಲ್ಲಿ ಪೊಲೀಸ್ ಶ್ವಾನಗಳು ಭಾಗವಹಿಸಿದ್ದವು. ಒಂದವರೆ ವರ್ಷದ ಬ್ರೂನೋ ಡಾಬರ್‌ಮನ್ ಜಾತಿ ಸೇರಿದ ನಾಯಿ. ಸುಮಾರು 19 ಅಪರಾಧ ಪ್ರಕರಣಗಳಲ್ಲಿ ಬ್ರೂನೋ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ. ಲಾಬ್ರಡಾರ್ ಜಾತಿ ಸೇರಿದ ಎರೆಡು ವರ್ಷದ ಲೂಸಿ ಬಾಂಬ್ ಪತ್ತೆ ಹಚ್ಚುವಲ್ಲಿ ನಿಷ್ಣಾಂತಳು. ಇನ್ನೂ ಇದೇ ಜಾತಿಗೆ ಸೇರಿದ ಸಿಂಬಾ ಒಂದವರೆ ವರ್ಷದವನಾಗಿದ್ದು, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ಕಾರ್ಯದಲ್ಲಿ ನೆರವಾಗುತ್ತಾನೆ. ತರಬೇತುದಾರ ಆಜ್ಞೆ…

Read More

ಕಲಬುರಗಿ: ವರ್ಣ ಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಭಾಜರಾಗಿರುವ ಕಲ್ಯಾಣ ಕರ್ನಾಟಕದ ಹಿರಿಯ ಚಿತ್ರಕಲಾವಿದ ಬಸವರಾಜ ಜಾನೆಯವರ ಅಭಿನಂದನಾ ಸಮಾರಂಭ ಇವತ್ತು ಕಲಬುರಗಿಯಲ್ಲಿ ಜರುಗಿತು.ನಗರದ ಕೆಇಬಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ಅಲ್ಲಮ ಪ್ರಭು ಪಾಟೀಲ್ ಚಾಲನೆ ನೀಡಿದ್ರು.. ಖ್ಯಾತ ಕಲಾವಿದರಾದ ನಾಡೋಜ ಡಾ.ಜೆ ಎಸ್ ಖಂಡೇರಾವ್ ಡಾ.ವಿ ಜಿ ಅಂದಾನಿಹಾಗು ಡಾ.ಸೋಮಶೇಖರ್ ಅಪ್ಪುಗೆರೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ರು.. ಕಾರ್ಯಕ್ರಮ ಕುರಿತು ಶ್ರೀಮತಿ ಮಂಜುಳಾ ಜಾನೆ ಪ್ರಾಸ್ತಾವಿಕವಾಗಿ ಮಾತನಾಡಿದರು.

Read More

ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಆಡಳಿತಾ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಮತ್ತು ಇ.ಟಿ.ಸಿ.ಎಂ ನರ್ಸಿಂಗ್ ಕಾಲೇಜು ಇವರ ಸಹಯೋಗದೊಂದಿಗೆ ಕ್ಯಾನ್ಸರ್ ತಡೆಗಟ್ಟುವಿಕೆ ಕುರಿತಂತೆ ಕಾಲ್ನಡಿಗೆ ಜನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿಗಳಾದ ಡಾ|| ಶಂಕರ್ ವಣಿಕ್ಯಾಳ್ರವರು ಇದೇ ಸಂದರ್ಭದಲ್ಲಿ ಮಾತನಾಡಿದ ಅವ್ರು, ಸಾರ್ವಜನಿಕರು ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಇತ್ತೀಚಿನ ದಿನಗಳಲ್ಲಿ ಕೆಲವರು ಸೇವನೆ ಮಾಡುವಂತಹ ಆಹಾರ ಪದಾರ್ಥಗಳಾದ ಫಿಜ್ಹಾ, ಬರ್ಗರ್, ಪಾನಿಪುರಿ, ಗೋಬಿಮಂಚೂರಿ, ಚೈನಿಸ್ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದಾರೆ ಇದು ಒಳ್ಳೆಯ ಆಹಾರ ಪದ್ಧತಿಯಲ್ಲ ಇಂತಹ ಆಹಾರಗಳನ್ನು ಸೇವನೆ ಮಾಡುವುದರಿಂದಾಗಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗಿದೆ ಆದ್ದರಿಂದ ನಾವೇಲ್ಲರು ಕೂಡ ಇಂತಹ ಫಾಟ್ಪುಡ್ ಸೇವನೆ ಮಾಡದಂತೆ ತಿಳುವಳಿಕೆ ಮೂಡಿಸಲು ಕಾರ್ಯಪ್ರವೃತರಾಗಬೇಕು ಹಾಗೂ ಮುಖ್ಯವಾಗಿ ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಪಾನ್ಮಸಾಲ, ಹನ್ಸ್, ಕಡ್ಡಿಪುಡಿ ಇತ್ಯಾದಿ ತಂಬಾಕು…

Read More

ಬೆಂಗಳೂರು: ಎನ್ ಡಿಎ ಮೈತ್ರಿಕೂಟದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಎ.ಪಿ.ರಂಗನಾಥ್ ಅವರು ಕಣಕ್ಕೆ ಇಳಿದಿದ್ದು, ಜೆಡಿಎಸ್ ಪಕ್ಷದಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಪ್ರಕಟಣೆ ಹೊರಡಿಸಿ ದ್ದಾರೆ. ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಅವರನ್ನು ಮೇಲುಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಉಸ್ತುವಾರಿಗಳ ಪಟ್ಟಿ ಹೀಗಿದೆ: *ಯಲಹಂಕ: ಎನ್.ಕೃಷ್ಣಪ್ಪ, ಎ.ಎಂ.ಪ್ರವೀಣ್ ಕುಮಾರ್ *ಕೆ.ಆರ್. ಪುರ: ಡಿ. ಎ.ಸುರೇಶ್, ಸತೀಶ್ *ಬ್ಯಾಟರಾಯನಪುರ: ಎನ್.ವೇಣುಗೋಪಾಲ್, *ಅಂಜನೇಗೌಡ, ಟಿ.ಎನ್.ಹರೀಶ್ ಕುಮಾರ್ *ಯಶವಂತಪುರ: ಜವರಾಯಿಗೌಡ, ತಾರಾ ಲೋಕೇಶ್, ಜಿಟಿ ವೆಂಕಟೇಶ್ *ರಾಜರಾಜೇಶ್ವರಿ ನಗರ: ಆರ್. ಚನ್ನಕೇಶವ ಮೂರ್ತಿ, ವಿ.ಕೃಷ್ಣಮೂರ್ತಿ *ದಾಸರಹಳ್ಳಿ: ಬಿ.ಅಂದಾನಪ್ಪ, ಎಂ.ಮುನಿಸ್ವಾಮಿ *ಮಹಾಲಕ್ಷ್ಮಿ ಲೇಔಟ್: ಎಂ.ಚಂದ್ರೇಗೌಡ, ಬಿ.ಭಡ್ರೆಗೌಡ, ಹೆಚ್.ಎನ್.ದೇವರಾಜು *ಮಲ್ಲೇಶ್ವರಂ: ಉತ್ಕರ್ಷ, ಶೈಲಾ, ಎನ್. ಚಂದ್ರಶೇಖರ್ *ಹೆಬ್ಬಾಳ: ಎ.ರುದ್ರಪ್ಪ, ಸೈಯ್ಯದ್ ಮೋಹಿದ್ ಅಲ್ತಾಫ್ *ಪುಲಕೇಶಿನಗರ: ಆಫ್ರೋಜ್ ಬೇಗ್, ಅನುರಾಧ *ಸರ್ವಜ್ಞನಗರ: ತಾಯಣ್ಣ ರೆಡ್ಡಿ, ಜಿ.ಮೋಹನ್ ಕುಮಾರ್ *ಸರ್ ಸಿವಿ ರಾಮನ್ ನಗರ: ಪ್ರಶಾಂತಿ ಗಾಂವ್ಕರ್,…

Read More

ಬೆಂಗಳೂರು: ಇನ್ನೇನು ಎಸ್‌ಎಸ್‌ಎಲ್ಸಿಯ ಪೂರ್ವ ಸಿದ್ದತೆ ಪರೀಕ್ಷೆ ಶುರುವಾಗುತ್ತದೆ.. ವಿಧ್ಯಾರ್ಥಿಗಳು ಎಲ್ಲಾ ರೀತಿಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಆದ್ರೆ ಇದಕ್ಕೆ ಇದೀಗ ರಾಜಕೀಯ ತಿರುವು ಪಡೆದು ಸರ್ಕಾರದ ವಿರುದ್ಧ ಹರಿಹಾರುತ್ತಿದ್ದಾರೆ..  ಅದೇನು ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ. ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಶಿಕ್ಷಣ ಇಲಾಖೆಯ ಮೇಲೆ ಆಕ್ರೋಶ ಹೊರ ಹಾಕುತಿದ್ದಾರೆ. ಎಸ್‌ಎಸ್‌ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಪ್ರತಿಯೊಬ್ಬ ವಿದ್ಯಾರ್ಥಿಯಿಂದ 50 ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಶಿಕ್ಷಣ ಇಲಾಖೆಯ ವಿರುದ್ಧ ಕಿಡಿಕಾದಿದ್ದರು. ರಾಜ್ಯ ಸರ್ಕಾರದ ವಿರುದ್ಧ ಗರಂ ಆಗಿದ್ರು .. ಇದೀಗ ಶಿಕ್ಷಣ ಇಲಾಖೆ ಅದಕ್ಕೆ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಮಾಡುವುದಕ್ಕೆ 2023ರ ಫೆಬ್ರವರಿಯಲ್ಲಿ ಸರ್ಕಾರವೇ ಆದೇಶ ಹೊರಡಿಸಿತ್ತು. ಆ ಆದೇಶವನ್ನು ಪಾಲಿಸುತ್ತಿದ್ದೀವಿ. ಕಳೆದ 4 ವರ್ಷಗಳಿಂದ ಈ ಶುಲ್ಕ ಇದೆ. ಪರೀಕ್ಷಾ ಖರ್ಚು ಭರಿಸಲು ಈ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂದು ಹೇಳುವ ಮೂಲಕ…

Read More

ವಿಶಾಖಪಟ್ಟಣಂ: ಇಂಗ್ಲೆಂಡ್‌ (India-England 2nd Test) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟರ್‌ ಶುಭಮನ್‌ ಗಿಲ್‌ (Shubman Gill) ಅವರ ಅಮೋಘ ಶತಕದಾಟದೊಂದಿಗೆ ಭಾರತ ತಂಡವು 78.3 ಓವರ್‌ಗೆ 255 ರನ್‌ ಗಳಿಸಿ ಆಲೌಟ್‌ ಆಗಿದೆ. ಇಂಗ್ಲೆಂಡ್‌ ಗೆಲುವಿಗೆ 399 ರನ್‌ಗಳ ಗುರಿ ನೀಡಿದೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ಶುಭಮನ್ ಗಿಲ್ ಅವರ ಶತಕದ ನೆರವಿನಿಂದ ಭಾರತ 255 ರನ್ ಗಳಿಸಿತು. 28/0 ಇರುವಾಗಲೇ ರೋಹಿತ್ ಶರ್ಮಾ (13) ಮತ್ತು ಯಶಸ್ವಿ ಜೈಸ್ವಾಲ್ (17) ಎರಡು ಆರಂಭಿಕ ವಿಕೆಟ್‌ಗಳನ್ನು ಭಾರತ ಕಳೆದುಕೊಂಡಿತು. ಈ ವೇಳೆ ಶುಭಮನ್‌ ಗಿಲ್‌ ತಂಡದ ಪರ ಲಯ ಕಾಯ್ದುಕೊಂಡು, 104 ರನ್ (147 ಬಾಲ್‌, 11 ಫೋರ್‌, 2 ಸಿಕ್ಸರ್‌) ಗಳಿಸಿದರು. ಅಕ್ಷರ್ ಪಟೇಲ್ ಕೂಡ 45 ರನ್ ಗಳಿಸಿ ಅರ್ಧಶತಕ ವಂಚಿತರಾದರು. ಶ್ರೇಯಸ್‌ ಅಯ್ಯರ್‌ (29), ರಜತ್‌ ಪಾಟಿದಾರ್‌ (9), ಶ್ರೀಕಾಂತ್‌ ಭರತ್‌ (6), ರವಿಚಂದ್ರನ್‌ ಅಶ್ವಿನ್‌ (29) ರನ್‌…

Read More

ಬೆಂಗಳೂರು: ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಗೃಹ ಸಚಿವ ಅಮಿತ್ ಶಾ (Amit Shah) ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅಮಿತ್ ಶಾ ಇದೇ ಫೆಬ್ರವರಿ 9 ಮತ್ತು 10ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವಕ್ಕೆ (Suttur Jatra Mahotsava) ಅಮಿತ್‌ ಶಾ ಆಗಮಿಸಲಿದ್ದಾರೆ.  ಫೆ.10 ಶನಿವಾರ ಸಂಜೆ 5 ಗಂಟೆಗೆ ಶ್ರೀಮತಿ ಪಾರ್ವತಮ್ಮ ಮತ್ತು ಡಾ. ಶ್ರೀ ಶಾನಮೂರು ಶಿವಶಂಕರಪ್ಪ ಅತಿಥಿಗೃಹವನ್ನು ಅಮಿತ್‌ ಶಾ ಉದ್ಘಾಟಿಸಲಿದ್ದಾರೆ.  ಈ ಕಾರ್ಯಕ್ರಮದಲ್ಲೇ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರನ್ನು ಸನ್ಮಾನಿಸಲಾಗುತ್ತದೆ. ಅಧ್ಯಕ್ಷತೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಹಿಸಲಿದ್ದರೆ ಹೆಚ್‌ಡಿ ಕುಮಾರಸ್ವಾಮಿ, ಬಸವರಾಜ್‌ ಬೊಮ್ಮಾಯಿ, ಆರ್‌ ಅಶೋಕ, ವಿಜಯೇಂದ್ರ, ಸಿಟಿ ರವಿ, ಪ್ರಭಾಕರ ಕೋರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Read More

ಬೆಂಗಳೂರು: ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಜೆಡಿಎಸ್ –ಬಿಜೆಪಿ ಮೈತ್ರಿ, ಮುಂಬರುವ ಲೋಕಸಭೆ ಚುನಾವಣೆಗೆ ನಡೆದಿರುವ ಸಿದ್ಧತೆ, ಕ್ಷೇತ್ರ ಹಂಚಿಕೆ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ನಿಖಿಲ್ ಅವರು ಮಾಜಿ ಪ್ರಧಾನಿಗಳ ಜತೆ ಚರ್ಚಿಸಿದರು. ಪಕ್ಷದ ಕಚೇರಿಯಲ್ಲಿ ವಿವಿಧ ಲೋಕಸಭೆ ಕ್ಷೇತ್ರಗಳ ಮುಖಂಡರ ಜತೆ ಸಭೆಗಳನ್ನು ನಡೆಸಿದ್ದು ಹಾಗೂ ಆ ಸಭೆಗಳ ಫಲಶ್ರುತಿ, ಗೋವಾ ಮುಖ್ಯಮಂತ್ರಿಗಳಾದ ಪ್ರಮೋದ್ ಸಾವಂತ್ ಅವರು, ಬಿಜೆಪಿ ರಾಷ್ಟ್ರೀಯ ನಾಯಕರ ಜತೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ತೆರಳಿ ನಡೆಸಿರುವ ಚರ್ಚೆಗಳ ಮಾಹಿತಿಯನ್ನು ನಿಖಿಲ್ ಅವರು ಮಾಜಿ ಪ್ರಧಾನಿಗಳಿಗೆ ವಿವರಿಸಿದರು. ಪಕ್ಷ ಸಂಘಟನೆಗಾಗಿ ತಾವು ಕೈಗೊಂಡಿರುವ ಉಪಕ್ರಮಗಳ ಬಗ್ಗೆಯೂ ನಿಖಿಲ್ ಅವರು ಮಾಜಿ ಪ್ರಧಾನಿಗಳ ಗಮನಕ್ಕೆ ತಂದರು. ಬಳಿಕ, ಯಾವುದೇ ಸಂದರ್ಭದಲ್ಲಿಯೂ ಚುನಾವಣೆ ದಿನಾಂಕ ಘೋಷಣೆ ಆಗಬಹುದು. ಅದಕ್ಕೆ ಪಕ್ಷ ತಯಾರಿರಬೇಕು. ಯುವ ಜನತಾದಳ…

Read More

ನಟ ಧನುಷ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  (Shivaraj Kumar)ನಟನೆಯ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾ ಜನವರಿಯಲ್ಲಿ ರಿಲೀಸ್ ಆಗಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆದ ದೊಡ್ಡ ಸಿನಿಮಾಗಳಲ್ಲಿ ಈ ಸಿನಿಮಾ ಕೂಡ ಒಂದಾಗಿತ್ತು. ಬಾಕ್ಸ್ ಆಫೀಸಿನಲ್ಲೂ ಉತ್ತಮ ಗಳಿಕೆ ಮಾಡಿತ್ತು. ಇದೀಗ ಈ ಚಿತ್ರ ಒಟಿಟಿಗೆ (OTT) ಬರಲು ಸಿದ್ಧವಾಗಿದೆ.  ಫೆಬ್ರವರಿ 9ರಂದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಹಿಂದಿ ಹೊರತಾಗಿ ಉಳಿದೆಲ್ಲ ಭಾಷೆಯಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ. ಹಿಂದಿ ವರ್ಷನ್ ಅನ್ನು ತಡವಾಗಿ ರಿಲೀಸ್ ಮಾಡಲಾಗುವುದು ಎಂದಿದ್ದಾರೆ ನಿರ್ಮಾಣ ಸಂಸ್ಥೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಮೊದಲು ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಬಹಳ ಸದ್ದು ಮಾಡಿತ್ತು ಕ್ಯಾಪ್ಟನ್ ಮಿಲ್ಲರ್ ಸಿನಿಮಾ.  ರಜನಿಕಾಂತ್ ಜೈಲರ್ ನಲ್ಲಿ ನರಸಿಂಹ ಆಗಿ ದರ್ಶನ ಕೊಟ್ಟು ಕ್ರೇಜ್ ಕ್ರಿಯೇಟ್ ಮಾಡಿದ್ದ ಟಗರು ಶಿವನ ಹೊಸ ಅವತಾರ ನೋಡಿ ಶಿವಣ್ಣನ ಅಭಿಮಾನಿಗಳು ಫಿದಾ…

Read More

ಕ್ಯಾನ್ಸರ್ ಕುರಿತಾಗಿ ಜಾಗೃತಿ ಮೂಡಿಸುವುದಕ್ಕಾಗಿ ತಾನು ಸತ್ತಿರುವುದಾಗಿ ಮ್ಯಾನೇಜರ್ ಮೂಲಕ ಸುದ್ದಿ ಮಾಡಿಸಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ, ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) ಮಾತ್ರ ನಟಿಯ ಬೆಂಬಲಕ್ಕೆ (Support) ನಿಂತಿದ್ದಾರೆ. ಪೂನಂ ಮಾಡಿದ ಕೆಲಸ ಉತ್ತಮವಾದದ್ದು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನೀವು ಮಾಡಿದ ಕೆಲಸಕ್ಕೆ ಟೀಕೆಗಳು ಬರಬಹುದು. ಆದರೆ, ನೀವು ಮಾಡಿದ ಕೆಲಸ ಮೆಚ್ಚುವಂಥದ್ದು. ನಿಮ್ಮಿಂದಾಗಿ ಗರ್ಭಕಂಠ ಕ್ಯಾನ್ಸರ್ ಕುರಿತಂತೆ ವ್ಯಾಪಕವಾಗಿ ಪ್ರಚಾರ ಸಿಕ್ಕಿದೆ. ನಿಮ್ಮಂತೆಯೇ ನಿಮ್ಮ ಆತ್ಮ ಕೂಡ ಸುಂದರ. ನಿಮಗೆ ಮತ್ತಷ್ಟು ಆಯುಷ್ಯ ಹೆಚ್ಚಲಿ ಎಂದು ವರ್ಮಾ ಬರೆದುಕೊಂಡಿದ್ದಾರೆ. ಗರ್ಭಕಂಠ ಕ್ಯಾನ್ಸರ್ (Cervical cancer) ಕುರಿತಂತೆ ಜಾಗೃತಿ ಮೂಡಿಸುವುದಕ್ಕಾಗಿ ವಾಮಮಾರ್ಗ ಹಿಡಿದಿರುವ ಬಾಲಿವುಡ್ ನಟಿ, ಕಾಂಟ್ರವರ್ಸಿ ಕ್ವೀನ್‌ ಪೂನಂ ಪಾಂಡೆಯನ್ನು (Poonam Pandey) ಅರೆಸ್ಟ್ ಮಾಡಬೇಕು ಎಂದು ಅಭಿಮಾನಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್‌ ಪೂನಂ ಪಾಂಡೆ’ (Boycott)…

Read More