Author: AIN Author

ಇತ್ತೀಚಿನ ಅಧ್ಯಯನಗಳ ಪ್ರಕಾರ, ಬಾದಾಮಿಯ ನಿಯಮಿತ ಸೇವನೆಯಿಂದ ಮಧುಮೇಹ ಪೂರ್ವ ಹಂತದಲ್ಲಿರುವ ವ್ಯಕ್ತಿಳಿಗೆ ಮಧುಮೇಹ ಸಂಬಂಧಿತ ತೊಂದರೆಗಳು ಎದುರಾಗುವ ಸಾಧ್ಯತೆ ಕಡಿಮೆಗೊಳ್ಳುತ್ತದೆ. ವಿಶೇಷವಾಗಿ ಯುವ ಜನಾಂಗ ಈ ಅಭ್ಯಾಸದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ: ವಾಲ್​ನಟ್ಸ್ ಮೂಳೆಗಳು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಾಲ್​ನಟ್ಸ್ ಹಾಲು ವಾಲ್​ನಟ್ ಮತ್ತು ನೀರಿನಿಂದ ಮಾಡಿದ ಸಸ್ಯ ಆಧಾರಿತ ಹಾಲಿನ ಪರ್ಯಾಯವಾಗಿದೆ. ವಾಲ್‌ನಟ್ಸ್‌ನ ಪೌಷ್ಟಿಕಾಂಶದ ಪ್ರೊಫೈಲ್‌ನಿಂದಾಗಿ ಇದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಹೃದಯದ ಆರೋಗ್ಯ: ವಾಲ್‌ನಟ್ಸ್‌ನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಹೃದ್ರೋಗದ ಅಪಾಯವನ್ನು ಕಡಿಮೆಗೊಳಿಸುತ್ತವೆ. ಸಮತೋಲಿತ ಆಹಾರದ ಭಾಗವಾಗಿ ವಾಲ್​ನಟ್ ಹಾಲನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಉತ್ಕರ್ಷಣ ನಿರೋಧಕ ಸಮೃದ್ಧ: ವಾಲ್‌ನಟ್‌ಗಳು ಪಾಲಿಫಿನಾಲ್‌ಗಳು ಮತ್ತು ವಿಟಮಿನ್ ಇಯಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದ ವಿರುದ್ಧ…

Read More

ಕಳೆದ ವಾರ ಏರಿದ್ದ ಚಿನ್ನ, ಬೆಳ್ಳಿ ಬೆಲೆ ತುಸು ಕಡಿಮೆ ಆಗಿದೆ. ಭಾರತ ಹಾಗೂ ವಿದೇಶಗಳಲ್ಲಿ ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 20 ರೂನಷ್ಟು ಇಳಿಕೆಯಾಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 10 ಪೈಸೆ ತಗ್ಗಿದೆ. ವಿದೇಶಗಳಲ್ಲಿ ಬಹುತೇಕ ಕಡಿಮೆ ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,550 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 58,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,550 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 5ಕ್ಕೆ):- 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,100 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,380 ರೂ ಬೆಳ್ಳಿ ಬೆಲೆ…

Read More

ಬೆಂಗಳೂರು:- ಫೆಬ್ರವರಿ 9 ಮತ್ತು 10 ರಂದು ಎರಡು ದಿನ ಕೇಂದ್ರ ಸಚಿವ ಅಮಿತ್ ಶಾ ಮೈಸೂರು ಮತ್ತು ದಾವಣಗೆರೆಗೆ ಭೇಟಿ ನೀಡಲಿದ್ದಾರೆ. ಇದೆ ವೇಳೆ ಸುತ್ತೂರು ಜಾತ್ರಾ ಮಹೋತ್ಸವದಲ್ಲೂ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಬಳಿಕ ಅಮಿತ್​ ಶಾ ರಾಜ್ಯ ನಾಯಕರ ಜೊತೆ ಸರಣಿ ಸಭೆ ನಡೆಸಲಿದ್ದಾರೆ. ಬಿಜೆಪಿ ನಾಯಕರು ಈಗಾಗಲೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕಾರಿಣಿ ಸಭೆಗಳನ್ನು ನಡೆಸಿದ್ದಾರೆ. ಈ ಸಭೆಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಟಿಕೆಟ್​ ನೀಡಬೇಕು ಎಂಬ ವಿಚಾರವಾಗಿ ನಾಯಕರು ಕಾರ್ಯಕರ್ತರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿಸ್ದಾರೆ. ಫೆಬ್ರವರಿ 9 ಮತ್ತು 10 ರಂದು ರಾಜ್ಯಕ್ಕೆ ಭೇಟಿ ನೀಡಲಿರುವ ಅಮಿತ್​ ಶಾ ಅವರ ಮುಂದೆ ವರದಿ ಒಪ್ಪಿಸಲಿದ್ದಾರೆ. ಅಮಿತ್​ ಶಾ ಸಭೆಯಲ್ಲಿ ರಾಜ್ಯ ನಾಯಕರ ನಡುವಿನ ವೈಮನಸ್ಸು ಕೂಡ ಶಮನಗೊಳ್ಳುವ ಸಾಧ್ಯತೆಯೂ ಇದೆ. ಹಾಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗು ಸಾಧ್ಯತೆ ಇದೆ.

Read More

ಟಿ20 ವಿಶ್ವಕಪ್​ನ ವೇಳಾಪಟ್ಟಿ ಪ್ರಕಟವಾಗಿದ್ದು,ಅಂದ್ರೆ ಯಾವ ಸಮಯದಲ್ಲಿ ನಡೆಯುತ್ತದೆ ಎಂಬ ಮಾಹಿತಿ ಮಾತ್ರ ಪ್ರಕಟವಾಗಿರಲಿಲ್ಲ.ಅಂದರೆ ಎಷ್ಟು ಗಂಟೆಗೆ ಪಂದ್ಯ ಶುರುವಾಗಲಿದೆ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿ ಉಳಿದಿತ್ತು.ಇದೀಗ ಭಾರತ ತಂಡದ ಪಂದ್ಯಗಳ ಸಮಯ ಬಹಿರಂಗವಾಗಿದೆ. ಟೀಮ್ ಇಂಡಿಯಾದ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಜೂನ್ 1 ರಿಂದ ಈ ಬಾರಿಯ ಚುಟುಕು ವಿಶ್ವಕಪ್ ಕದನ ಶುರುವಾಗಲಿದ್ದು, ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಭಾರತದ ಪಂದ್ಯಗಳು ಯುಎಸ್​ಎನಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ಆರಂಭವಾಗಲಿದ್ದು, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ನೇರ ಪ್ರಸಾರವಾಗಲಿದೆ. ಇಲ್ಲಿ ಭಾರತ ಮತ್ತು ಯುಎಸ್​ಎ ನಡುವೆ 10.30 ಗಂಟೆಗಳ ಸಮಯ ವ್ಯತ್ಯಾಸವಿದೆ. ಅತ್ತ ಯುಎಸ್​ಎನಲ್ಲಿ ರಾತ್ರಿಯಾಗಿದ್ದರೆ, ಇತ್ತ ಭಾರತದಲ್ಲಿ ಬೆಳಿಗ್ಗೆಯಾಗಿರುತ್ತದೆ. ಹೀಗಾಗಿಯೇ ಭಾರತದ ಪಂದ್ಯಗಳನ್ನು ಯುಎಸ್​ಎನಲ್ಲಿ ಬೆಳಿಗ್ಗೆ ಆಯೋಜಿಸಲು ನಿರ್ಧರಿಸಲಾಗಿದೆ. ಇದರಿಂದ ವೀಕ್ಷಕರ ಕೊರತೆ ಉಂಟಾಗುವುದಿಲ್ಲ. ಹೀಗಾಗಿ ಭಾರತದ ಪಂದ್ಯಗಳಿಗೆ ಬೆಳಿಗ್ಗೆ ಸಮಯ ನಿಗದಿ ಮಾಡಲಾಗಿದೆ. ಭಾರತ ಮತ್ತು ಪಾಕ್…

Read More

ಶಿವಮೊಗ್ಗ:- ಎಸ್​ಎಸ್​ಎಲ್​ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ 50 ರೂ. ವಸೂಲಿ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಟೇ ನೀಡಿದ್ದಾರೆ. ನಾವು ಗೃಹಲಕ್ಷ್ಮಿ 2 ಸಾವಿರ ಕೊಟ್ಟು, ಗೃಹ ಜ್ಯೋತಿ ಕೊಟ್ಟು, ಫ್ರೀಯಾಗಿ ಬಸ್ಸಿನಲ್ಲಿ ಓಡಾಡಿಸುತ್ತೇವೆ. ಈ ಮೊದಲು ಪರೀಕ್ಷಾ ಶುಲ್ಕ 60 ರೂಪಾಯಿ ನಿಗದಿಯಾಗಿತ್ತು. ನಾವು 10 ರೂ. ಕಡಿಮೆ ಮಾಡಿದ್ದೇವೆ. ಮುಂದೆ ಏನಾದರೂ ಇನ್ನೂ ಅನುಕೂಲವಾದ್ರೆ ಕಡಿಮೆ ಮಾಡುತ್ತೇವೆ ಎಂದರು. ಇನ್ನು ಅವರು ಹುಡುಕುವ ಕೆಲಸವನ್ನು ನಿಲ್ಲಿಸಬೇಕು. ಇಲ್ಲದಿರುವುದನ್ನು ಹುಡುಕಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಇದು ಉಪಯೋಗ ‌ಇಲ್ಲ, ಬಿಜೆಪಿಯವರ ಆರೋಪಗಳಿಗೆ ಉತ್ತರ ಕೊಡದಿರುವುದೇ ಸೂಕ್ತವಾಗಿದೆ. ಇನ್ನು ಕುಮಾರಸ್ವಾಮಿ ಅವರು ಪ್ರಶ್ನೆ ಕೇಳುವ ಮೊದಲು ಸ್ವಲ್ಪ ತಿಳಿದುಕೊಳ್ಳೋದು ಒಳ್ಳೆಯದು, ಇಲ್ಲದಿರುವುದನ್ನು ಹುಡುಕಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ವಿರೋಧ ಪಕ್ಷದವರಂತಹ ದಡ್ಡರು ಯಾರೂ ಇಲ್ಲವೆಂದು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಮಾ.1ರ ಮಧ್ಯಾಹ್ನ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಸುವ ವಿಚಾರದಲ್ಲಿ ಕೆಲವು ಧರ್ಮಕ್ಕೆ ಒಲವು…

Read More

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವತಿಯಿಂದ 2023-24 ರ ಜನವರಿ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣಕ್ರಮಗಳ ಪ್ರವೇಶಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. B.A./ B.Com./ B.Sc./ B.B.A./ B.C.A./ B.S.W./ B.Lib.I.Sc./ M.A./ M.Sc./ M.B.A./ M.LiB.I.Sc./ M.C.A./ M.S.W./ PG Certificate/ Diploma/ UG Certificate ಶಿಕ್ಷಣಕ್ರಮಗಳಿಗೆ 2024 ಫೆಬ್ರವರಿ 09 ರಿಂದ ಬೆಂಗಳೂರು ಪ್ರಾದೇಶಿಕ ಕೇಂದ್ರ-೦1, ಬಾಪೂಜಿನಗರ ಇಲ್ಲಿ ಆನ್ಲೈನ್ ಮೂಲಕ ಪ್ರವೇಶಾತಿಯನ್ನು ಪ್ರಾರಂಭಿಸಿದ್ದು, 2024 ಮಾರ್ಚ್ 31 ಪ್ರವೇಶಾತಿಯ ಅಂತಿಮ ದಿನಾಂಕವಾಗಿರುತ್ತದೆ. ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ www.ksoumysuru.ac.in ದಲ್ಲಿ ಲಭ್ಯವಿರುವ ವಿವರಣಾ ಪುಸ್ತಕದಲ್ಲಿ ಎಲ್ಲಾ ವಿವರಗಳು ನೀಡಿದ್ದು, ಆಸಕ್ತ ವಿದ್ಯಾರ್ಥಿಗಳು ಅದರನ್ವಯ ಅರ್ಹ ಶಿಕ್ಷಣಕ್ರಮಗಳಿಗೆ ವೆಬ್ಸೈಟ್ನಲ್ಲಿ ಲಭ್ಯವಿರುವ ಆನ್ಲೈನ್ ಅಡ್ಮಿಷನ್ ಪೋರ್ಟಲ್ ಮೂಲಕ ಅಥವಾ ಖುದ್ದು ಅಗತ್ಯ ದಾಖಲಾತಿಗಳೊಂದಿಗೆ ಬಾಪೂಜಿನಗರ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ಪ್ರವೇಶಾತಿ ಪರ್ಣ ಪ್ರಕ್ರಿಯೆಯನ್ನು ಮಾಡಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು Onlineನಲ್ಲಿ ಅರ್ಜಿ ಸಲ್ಲಿಸಿ ಅಥವಾ ಪ್ರಾದೇಶಿಕ ಕೇಂದ್ರಕ್ಕೆ ದಾಖಲಾತಿಗಳೊಂದಿಗೆ ಭೇಟಿ ನೀಡಿ…

Read More

ಚಿಕ್ಕಬಳ್ಳಾಪುರ:- ಇತ್ತೀಚೆಗೆ ದೆಹಲಿ ಪ್ರವಾಸ ಮುಗಿಸಿ ರಾಜ್ಯಕ್ಕೆ ಆಗಮಿಸಿದ ಬಳಿಕ ಸುಧಾಕರ್​ ಚಿಕ್ಕಬಳ್ಳಾಪುರದಲ್ಲಿ ಮಿಂಚಿನ ಸಂಚಾರ ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೂ 2-3 ತಿಂಗಳು ಬಾಕಿ ಇದ್ದು, ಈಗಾಗಲೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಚೇಳೂರು ತಾಲೂಕಿನ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರಾಶ್ಚರವು, ಚಾಕವೇಲು, ಸಜ್ಜಲವಾರಪಲ್ಲಿ ನಲ್ಲಗುಟ್ಲಪಲ್ಲಿ ಗಂಗಮ್ಮ ಬೆಟ್ಟ, ಪಾಳ್ಯಾಕೆರೆ ಗ್ರಾಮಗಳಿಂದ ನಿನ್ನೆ ಚುನಾವಣಾ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವರಿಷ್ಠರು ಸಮ್ಮತಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ನನ್ನ ಸ್ಪರ್ಧೆಗೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ಹೆಚ್​ಡಿ ಕುಮಾರಸ್ವಾಮಿ ಸಮ್ಮತಿಸಿದ್ದಾರೆ. ಒಬ್ಬ ಸಂಸದ ಏನು ಮಾಡಬಹುದೆಂದು ತೋರಿಸುತ್ತೇನೆ. ಕೆ. ಸುಧಾಕರ್ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ಸುಧಾಕರ್. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ತಮ್ಮ ಪಾತ್ರವೂ ಇದೆ. ಎಂಟಿಬಿ ನಾಗರಾಜ್, ನಾನು ರಿಸ್ಕ್ ತೆಗೆದುಕೊಂಡು ಬಿಜೆಪಿ ಸೇರಿದ್ದೆವು. ಆದರೆ, ನಮ್ಮ ತ್ಯಾಗಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಅನ್ಯಾಯವಾಗಿದೆ ಎಂದರು.

Read More

ಮಿರಾಮಾರ್ ಫಿಲ್ಮ್ಸ್ ಮತ್ತು ಫ್ರೈಡೇ ಫಿಲಂ ಹೌಸ್ ಸಹಯೋಗದಲ್ಲಿ ನಿರ್ಮಾಣಗೊಂಡ ಹಾಗೂ ಕೆ.ಎಂ.ಚೈತನ್ಯ ನಿರ್ದೇಶನದ “ಅಬ್ಬಬ್ಬ” ಚಿತ್ರದ ಟ್ರೇಲರ್ ಅನ್ನು ನಟ ಡಾಲಿ ಧನಂಜಯ್ ಇಂದು ಲೂಲೂ ಮಾಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಇದೇ ತಿಂಗಳು – ಫೆಬ್ರವರಿ 16ಕ್ಕೆ ಈ ಚಿತ್ರ ತೆರೆ ಕಾಣಲು ಸಜ್ಜಾಗಿದೆ. ಚಿತ್ರದಲ್ಲಿ ಲಿಖಿತ್ ಶೆಟ್ಟಿ, ಅಮೃತಾ ಐಯ್ಯಂಗಾರ್, ಅಜಯ್ ರಾಜ್, ಧನರಾಜ್ ಆಚಾರ್, ತಾಂಡವ್ ರಾಮ್, ಶರತ್ ಲೋಹಿತಾಶ್ವ ಹಾಗು ವಿಜಯ್ ಚೆಂಡೂರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರ ಹಾಸ್ಯದ ಚಟಾಕಿಯನ್ನು ಹಚ್ಚಲು ಸಜ್ಜಾಗಿದೆ. ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೋಸ್ ಬಿಡುಗಡೆ ಮಾಡಲಿದೆ.

Read More

ಹೊಸಪೇಟೆ:- ಕುಟುಂಬದವರು ಪ್ರೀತಿಯಿಂದ ಸೇರಲು ಮನೆ ಹಬ್ಬ ಮಾಡುತ್ತೇವೆ. ಆದರೆ, ಇಡೀ ಊರ ಜನರು ಒಗ್ಗೂಡಲು ಮಾಡುವ ಹಬ್ಬ, ಊರ ಹಬ್ಬ ಅಂದ್ರೆ ಅದು ಹಂಪಿ ಉತ್ಸವ ಎಂದು ಹಿರಿಯ ಚಲನಚಿತ್ರ ನಟ ವಿ.ರವಿಚಂದ್ರನ್ ಅವರು ಹಂಪಿ ಉತ್ಸವವನ್ನು ಬಣ್ಣಿಸಿದರು. ಹಂಪಿ ಉತ್ಸವ-2024ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ವೇದಿಕೆಯಲ್ಲಿ ಫೆ.04ರಂದು ಸಹ ಕಿಕ್ಕಿರಿದು ಸೇರಿದ್ದ ಜನಸ್ತೋಮ ಉದ್ದೇಶಿಸಿ ಅವರು ಮಾತನಾಡಿದರು. ಹಂಪಿ ಅಂದ್ರೆ ತಮ್ಮ ಮೈ ಝುಮ್ಮೆನ್ನುತ್ತದೆ ಎಂದು ಭಾವುಕರಾದ ಅವರು, ಹಂಪಿಯಲ್ಲಿನ ಒಂದೊಂದು ಶಿಲೆಗಳು ಇಲ್ಲಿನ ಒಂದೊಂದು ಕಥೆ ಹೇಳುತ್ತವೆ. ಇಲ್ಲಿನ ಕಲಾಶಿಲ್ಪ ಅವಿಸ್ಮರಣೀಯವಾಗಿದೆ. ಅಂತಹ ಕಲಾವಿದರ ಸೇವೆಯನ್ನು ಸ್ಮರಿಸುವ ಕಾರ್ಯವನ್ನು ಇಂತಹ ಉತ್ಸವಗಳು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಹಂಪಿ ಸುಮ್ಮನೇ ಆಗಿಲ್ಲ. ಇದಕ್ಕೆ ಅದ್ಭುತ ಇತಿಹಾಸವಿದೆ. ಹಲವರು ಸೇರಿ ನಿರ್ಮಿಸಿದ ಸಂಪತ್ತು ಇದು. ಇದನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಗೊತ್ತಿರೋದು ಪ್ರೀತಿ:- ನನಗೆ ಗೊತ್ತಿರೋದು ಕೇವಲ ಪ್ರೀತಿ ಎಂದು ತಿಳಿಸಿದ ಅವರು, ತಾವು ನಟಿಸಿದ…

Read More

ಹೊಸಪೇಟೆ:-ಫೆ.2 ರಿಂದ ಆರಂಭವಾದ ಹಂಪಿ ಉತ್ಸವ ಅಭೂತಪೂರ್ವವಾಗಿ ನೆರವೇರಿದೆ. 3 ದಿನಗಳ ಉತ್ಸವಕ್ಕೆ ಭಾನುವಾರ ಹಂಪಿ ಗಾಯಿತ್ರಿ ಪೀಠದ ವೇದಿಕೆಯಲ್ಲಿ ವಿದ್ಯಕ್ತವಾಗಿ ಸಮಾರೋಪ ಸಮಾರಂಭ ಆಯೋಜಿಸುವ ಮೂಲಕ ತೆರೆ ಎಳೆಯಲಾಯಿತು. ಉತ್ಸವದಲ್ಲಿ 12 ಲಕ್ಷಕ್ಕೂ ಜನರು ಭಾಗಿಯಾಗಿ ಉತ್ಸವ ಸವಿ ಸವಿದರು. ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಮಾತನಾಡಿ, ಮೂರು ದಿನಗಳ ನಾಡಹಬ್ಬದಂತೆ ಹಂಪಿ ಉತ್ಸವ ಜರುಗಿದೆ. ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳು ಉತ್ತಮ ಕಾರ್ಯನಿವಹಿಸಿದ್ದು ಎಲ್ಲರಿಗೂ ಅಭಿನಂದನೆಗಳು ಹಾಗೂ ಧನ್ಯವಾದ. ಹಂಪಿ ಉತ್ಸವಕ್ಕೆ ಯಾವುದೇ ಪಕ್ಷ ಬೇಧ ಇಲ್ಲ. ಎಲ್ಲರೂ ನಮ್ಮ ನಾಡಿನ ಉತ್ಸವ ಎಂದೇ ಪಾಲ್ಗೊಂಡಿದ್ದಾರೆ. ಈ ಹಿಂದಿನ ಎಲ್ಲಾ ಉತ್ಸವಗಳಿಂತಲೂ ಅಧಿಕ ಜನಸ್ತೋಮ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಿದ್ದಾರೆ. ಮೂರು ದಿನದ ನಾಡಹಬ್ಬಕ್ಕೆ ಅಚ್ಚುಕಟ್ಟಾಗಿ ಪೊಲೀಸ್ ಇಲಾಖೆ ಬಂದೋಬಸ್ತ್ ಕಾರ್ಯನಿರ್ವಹಿಸಿದೆ. ಕಿರಿದಾದ ರಸ್ತೆ ಹಾಗೂ ಅಧಿಕ ವಾಹನ ದಟ್ಟಣೆಯಿಂದ ಟ್ರಾಫಿಕ್ಸ್ ಸಮಸ್ಯೆ…

Read More