Author: AIN Author

ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿಗಾಗಿ ಸತ್ತಂತೆ ನಾಟಕವಾಡಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಮೇಲೆ ಎಫ್.ಐ.ಆರ್ (F.I.R) ದಾಖಲಾಗಿದೆ. ಅಲಿ ಕಾಶಿಪ್ ಅನ್ನೋ ವಕೀಲರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೂನಂ ಮತ್ತು ಆಕೆಯ ಮ್ಯಾನೇಜರ್ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಈ ಪ್ರಕರಣದ ಕುರಿತಂತೆ ಪೂನಂ ಮೇಲೆ  ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಔಷಧಿ ಕಂಪನಿಗಳು ಈಕೆಗೆ ಹಣ ನೀಡಿ, ಈ ರೀತಿ ನಾಟಕವಾಡುವಂತೆ ಮಾಡಿವೆ ಎನ್ನುವ ಆರೋಪವಿತ್ತು. ಈ ಕುರಿತಂತೆ ಸ್ವತಃ ಪೂನಂ ಸ್ಪಷ್ಟನೆ ನೀಡಿದ್ದಾರೆ. ತಾವು ಸತ್ತಿರುವುದಾಗಿ ಹೇಳಿಕೊಂಡಿದ್ದರ ಹಿಂದೆ ನಿಜವಾದ ಕಾಳಜಿ ಇತ್ತು. ಯಾವುದೇ ಔಷಧಿ ಕಂಪನಿಗಳು ತಮಗೆ ಹಣ ನೀಡಿಲ್ಲ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ತಾಯಿ ಕೂಡ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳು ಹೇಗೆ ನರಳುತ್ತಾರೆ ಎನ್ನುವುದನ್ನು ಸ್ವತಃ ನಾನು ನೋಡಿದ್ದೇನೆ. ಸದ್ಯ ತಾಯಿ ಆರೋಗ್ಯವಾಗಿದ್ದಾರೆ. ಅವರ ನೋವನ್ನು ನೋಡಿಯೇ ನಾನು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ…

Read More

ತಮಿಳು ನಟ ಧನುಷ್ (Dhanush) ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  (Shivaraj Kumar)ನಟನೆಯ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾ ಜನವರಿಯಲ್ಲಿ ರಿಲೀಸ್ ಆಗಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆದ ದೊಡ್ಡ ಸಿನಿಮಾಗಳಲ್ಲಿ ಈ ಸಿನಿಮಾ ಕೂಡ ಒಂದಾಗಿತ್ತು. ಬಾಕ್ಸ್ ಆಫೀಸಿನಲ್ಲೂ ಉತ್ತಮ ಗಳಿಕೆ ಮಾಡಿತ್ತು. ಇದೀಗ ಈ ಚಿತ್ರ ಒಟಿಟಿಗೆ (OTT) ಬರಲು ಸಿದ್ಧವಾಗಿದೆ ಫೆಬ್ರವರಿ 9ರಂದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಹಿಂದಿ ಹೊರತಾಗಿ ಉಳಿದೆಲ್ಲ ಭಾಷೆಯಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ. ಹಿಂದಿ ವರ್ಷನ್ ಅನ್ನು ತಡವಾಗಿ ರಿಲೀಸ್ ಮಾಡಲಾಗುವುದು ಎಂದಿದ್ದಾರೆ ನಿರ್ಮಾಣ ಸಂಸ್ಥೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಮೊದಲು ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಬಹಳ ಸದ್ದು ಮಾಡಿತ್ತು ಕ್ಯಾಪ್ಟನ್ ಮಿಲ್ಲರ್ ಸಿನಿಮಾ.  ರಜನಿಕಾಂತ್ ಜೈಲರ್ ನಲ್ಲಿ ನರಸಿಂಹ ಆಗಿ ದರ್ಶನ ಕೊಟ್ಟು ಕ್ರೇಜ್ ಕ್ರಿಯೇಟ್ ಮಾಡಿದ್ದ ಟಗರು ಶಿವನ ಹೊಸ ಅವತಾರ ನೋಡಿ…

Read More

ಸ್ಯಾಂಟಿಯಾಗೊ: ದಕ್ಷಿಣ ಅಮೆರಿಕದ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚಿಗೆ  ಕನಿಷ್ಠ 51ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮಧ್ಯ ಚಿಲಿಯ ಸುಮಾರು 10 ಲಕ್ಷ ನಿವಾಸಿಗಳು ವಾಸಿಸುವ ವಾಲ್ಪಾರೈಸೊ ಪ್ರದೇಶದ ಅನೇಕ ಭಾಗಗಳಲ್ಲಿ ಕಾಡ್ಗಿಚ್ಚು ವೇಗವಾಗಿ ಹರಡುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರ್‌ಗಳು ಮತ್ತು ಟ್ರಕ್‌ಗಳನ್ನು ಬಳಸಿ ಬೆಂಕಿ ನಂದಿಸಲು ಹೆಣಗಾಡುತ್ತಿದ್ದಾರೆ.   ಕರಾವಳಿಯ ಪ್ರವಾಸಿ ನಗರವಾದ ವಿನಾ ಡೆಲ್ ಮಾರ್ ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ ಮತ್ತು ರಕ್ಷಣಾ ತಂಡಗಳು ಎಲ್ಲಾ ಪೀಡಿತ ಪ್ರದೇಶಗಳನ್ನು ತಲುಪಲು ಹರಸಾಹಸ ಪಡುತ್ತಿದ್ದಾರೆ ಎಂದು ಚಿಲಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ದಶಕದಿಂದ ಚಿಲಿಯಲ್ಲಿ ಕಾಡ್ಗಿಚ್ಚಿನ ಪ್ರಮಾಣ ಏರಿಕೆಯಾಗುತ್ತಿದೆ. ದೇಶದ್ಯಾಂತ 92 ಕಡೆ ಬೆಂಕಿ ಕಾಣಿಸಿಕೊಂಡಿದ್ದು, https://ainlivenews.com/are-you-eating-too-late-if-so-stop-now-otherwise-your-health-will-suffer/ ಘಟನೆಯಿಂದ 43,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶಗಳಿಗೆ ಹಾನಿಯಾಗಿದೆ. ಬೇಸಿಗೆ ತಿಂಗಳಿನಲ್ಲಿ ಚಿಲಿಯಲ್ಲಿ ಕಾಡ್ಗಿಚ್ಚು ಸಾಮಾನ್ಯ. ಕಳೆದ ವರ್ಷ ಸುಮಾರು 27 ಜನರು ಸಾವನ್ನಪ್ಪಿದ್ದರೆ  4,00,000 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶಕ್ಕೆ ಹಾನಿಯಾಗಿತ್ತು. ಅರಣ್ಯ ಪ್ರದೇಶದ ಬಳಿ ಜನ ವಸತಿ ಬಹಳ ಬೇಗ…

Read More

ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿಗಾಗಿ ಸತ್ತಂತೆ ನಾಟಕವಾಡಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಔಷಧಿ ಕಂಪನಿಗಳು ಈಕೆಗೆ ಹಣ ನೀಡಿ, ಈ ರೀತಿ ನಾಟಕವಾಡುವಂತೆ ಮಾಡಿವೆ ಎನ್ನುವ ಆರೋಪವಿತ್ತು. ಈ ಕುರಿತಂತೆ ಸ್ವತಃ ಪೂನಂ ಸ್ಪಷ್ಟನೆ ನೀಡಿದ್ದಾರೆ. ತಾವು ಸತ್ತಿರುವುದಾಗಿ ಹೇಳಿಕೊಂಡಿದ್ದರ ಹಿಂದೆ ನಿಜವಾದ ಕಾಳಜಿ ಇತ್ತು. ಯಾವುದೇ ಔಷಧಿ ಕಂಪನಿಗಳು ತಮಗೆ ಹಣ ನೀಡಿಲ್ಲ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ತನ್ನ ತಾಯಿ ಕೂಡ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳು ಹೇಗೆ ನರಳುತ್ತಾರೆ ಎನ್ನುವುದನ್ನು ಸ್ವತಃ ನಾನು ನೋಡಿದ್ದೇನೆ. ಸದ್ಯ ತಾಯಿ ಆರೋಗ್ಯವಾಗಿದ್ದಾರೆ. ಅವರ ನೋವನ್ನು ನೋಡಿಯೇ ನಾನು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ನಿರ್ಧಾರ ಮಾಡಿದ್ದು. ನೀವು ಟೀಕೆಗಳನ್ನು ಮಾಡುತ್ತಿದ್ದೀರಿ. ಆದರೆ, ನಾನು ಮಾಡಿದ್ದರ ಹಿಂದಿನ ಪರಿಣಾಮವನ್ನೂ ನೀವು ಗಮನಿಸಬೇಕು ಎಂದು ಅವರು ಪೋಸ್ಟ್ ಮಾಡಿದ್ದಾರೆ. ಗರ್ಭಕಂಠ ಕ್ಯಾನ್ಸರ್ ಕುರಿತಾಗಿ ಜಾಗೃತಿ ಮೂಡಿಸುವುದಕ್ಕಾಗಿ ತಾನು ಸತ್ತಿರುವುದಾಗಿ…

Read More

ತಾವು ಮೂರು ವರ್ಷಗಳಿಂದ ಫೈಬ್ರೊಮ್ಯಾಲ್ಜಿಯಾ (Fibromyalgia) ಕಾಯಿಲೆಯಿಂದ ಬಳಲುತ್ತಿರುವುದಾಗಿ ನಟಿ, ರಾಜಕಾರಣಿ ಪೂನಂ ಕೌರ್ (Poonam Kaur) ಹೇಳಿಕೊಂಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿರುವ ಪೂನಂ ಕೌರ್, ಈ ಕಾಯಿಲೆಯಿಂದಾಗಿ ಬಟ್ಟೆ ಹಾಕಿಕೊಳ್ಳಲು ಕಷ್ಟ ಪಡುತ್ತಿದ್ದೇನೆ ಎಂದಿದ್ದಾರೆ. ಈ ಕಾಯಿಲೆಗೆ ತುತ್ತಾದವರ ಬದುಕು ನರಕ. ದೀರ್ಘಕಾಲದ ಅಸ್ವಸ್ಥತೆ, ಖಿನ್ನತೆ, ತಲೆ ನೋವು, ದೇಹದ ಸ್ನಾಯುಗಳು ಬಿಗಿಯಾಗಿ ನೋವು ಹೀಗೆ ನಾನಾ ರೀತಿಯ ಸಂಕಟವನ್ನು ಅನುಭವಿಸಬೇಕಾಗುತ್ತಿದೆ. ಮೂರು ವರ್ಷಗಳಿಂದ ನಾನು ಈ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಫೈಬ್ರೊಮ್ಯಾಲ್ಜಿಯಾ ಕಾರಣದಿಂದಾಗಿ ಅವರು ಎರಡು ವರ್ಷಗಳ ಕಾಲ ಸಡಿಲವಾದ ಬಟ್ಟೆಗಳನ್ನು ಧರಿಸಿದ್ದಾರಂತೆ. ನಾಟಿ ವೈದ್ಯೆ ಡಾ.ಮಂತೇನ ಅವರ ಬಳಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಅವರು ಮಾತನಾಡಿದ್ದಾರೆ. ಸಿನಿಮಾ ನಟನೆ, ರಾಜಕಾರಣ ಮತ್ತು ಸಮಾಜಮುಖಿ ಕೆಲಸಗಳ ಮೂಲಕ ಪೂನಂ ಕೌರ್ ಗುರುತಿಸಿಕೊಂಡಿದ್ದಾರೆ. ಕಾಯಿಲೆ ಕಾರಣದಿಂದಾಗಿ ಅವರು ಸಿನಿಮಾ ರಂಗದಿಂದ ಸ್ವಲ್ಪ ದಿನಗಳ ಕಾಲ ದೂರವೂ ಉಳಿದಿದ್ದರು.

Read More

ಇತ್ತೀಚೆಗಷ್ಟೇ ತೆಲುಗಿನ ಖ್ಯಾತ ನಟ ಚಿರಂಜೀವಿಗೆ (Shivaraj Kumar) ದೇಶ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ (Padma Vibhushan) ದೊರೆತಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್ ಹೈದರಾಬಾದ್ ನ ಚಿರಂಜೀವಿ (Chiranjeevi) ಮನೆಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಂದಿಸಿದ ಫೋಟೋವನ್ನು ಚಿರಂಜೀವಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿರಂಜೀವಿ ಕುಟುಂಬಕ್ಕೂ ಮತ್ತು ಡಾ.ರಾಜ್ ಕುಮಾರ್ ಕುಟುಂಬಕ್ಕೂ ಮೊದಲಿನಿಂದಲೂ ಒಳ್ಳೆಯ ನಂಟಿದೆ. ಅನೇಕ ಕಾರ್ಯಕ್ರಮಗಳಲ್ಲಿ ಚಿರಂಜೀವಿ ಕುಟುಂಬ ಭಾಗಿಯಾಗಿದೆ. ಹಾಗಾಗಿ ಶಿವರಾಜ್ ಕುಮಾರ್, ಭೇಟಿ ನೀಡಿ ಅಭಿನಂದಿಸಿದ್ದಾರೆ. ಶಿವಣ್ಣ ಒಟ್ಟಿಗೆ ಕಳೆದ ಸಮಯವನ್ನು ಚಿರು ನೆನಪಿಸಿಕೊಂಡಿದ್ದಾರೆ.

Read More

ಇಸ್ಲಾಮಾಬಾದ್: ಪಾಕಿಸ್ತಾನ ಹಾಕಿ ಫೆಡರೇಶನ್‌ನ (PHF) ಎಂದಿಗೂ ಮುಗಿಯದ ಅಗ್ನಿಪರೀಕ್ಷೆ ಮುಂದುವರೆದಿದೆ. ಕಳೆದ ಆರು ತಿಂಗಳಿಂದ ಪಾಕಿಸ್ತಾನ (Pakistan) ಹಾಕಿ ಆಟಗಾರರಿಗೆ ಸಂಬಳ ನೀಡಿಲ್ಲ. ವೈದ್ಯಕೀಯ ಸೌಲಭ್ಯಗಳನ್ನೂ ಸರಿಯಾಗಿ ಕಲ್ಪಿಸುತ್ತಿಲ್ಲ ಎಂಬ ಆಪಾದನೆ ಕೇಳಿಬಂದಿದೆ. ಪರಿಣಾಮವಾಗಿ ಫೆಡರೇಷನ್‌ ಹಾಗೂ ಹಿರಿಯ ಆಟಗಾರ ನಡುವೆ ಘರ್ಷಣೆ ಏರ್ಪಟ್ಟಿದೆ. ಹಣಕಾಸಿನ ಕೊರತೆಯಿಂದಾಗಿ ರಾಷ್ಟ್ರೀಯ ಸಂಸ್ಥೆಯು ಕಳೆದ ಆರು ತಿಂಗಳಿಂದ ತನ್ನ ಉದ್ಯೋಗಿಗಳಿಗೆ ವೇತನ ನೀಡಿಲ್ಲ. ಲಾಹೋರ್‌ನಲ್ಲಿರುವ ಪ್ರಧಾನ ಕಚೇರಿ ಮತ್ತು ಕರಾಚಿಯ ಉಪ ಕಚೇರಿಯಲ್ಲಿರುವ ಪಿಹೆಚ್‌ಎಫ್‌ನ ಎಲ್ಲಾ ಉದ್ಯೋಗಿಗಳು ಕಳೆದ ಆರು ತಿಂಗಳಿನಿಂದ ತಮ್ಮ ಸಂಬಳವನ್ನು ಪಡೆಯಲು ಇನ್ನೂ ಕಾಯುತ್ತಿದ್ದಾರೆ. 80 ಕ್ಕೂ ಹೆಚ್ಚು ಕಚೇರಿ ಮತ್ತು ಉದ್ಯೋಗಿಗಳು ಕಳೆದ ಆರು ತಿಂಗಳಿಂದ ಯಾವುದೇ ವೈದ್ಯಕೀಯ ಸೌಲಭ್ಯಗಳನ್ನು ಪಡೆಯದೆ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಹಿರಿಯ ಆಟಗಾರರು ಕೂಡ ಒಮಾನ್‌ನಲ್ಲಿ ಇತ್ತೀಚಿನ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಿದ್ದಕ್ಕಾಗಿ ಕಳೆದ 4-5 ತಿಂಗಳಿಂದ ತಮ್ಮ ಗುತ್ತಿಗೆ ವೇತನ ಅಥವಾ ಭತ್ಯೆಗಳನ್ನು ಪಾವತಿಸಿಲ್ಲ ಎಂದು ಆರೋಪಿಸಿದ್ದಾರೆ. ಪಾಕ್…

Read More

ಧಾರವಾಡ: ನಿನ್ನೆಯಷ್ಟೇ ಧಾರವಾಡದ ಅಂಬೇಡ್ಕರ್ ನಗರದಲ್ಲಿ ಕೊಲೆ ಪ್ರಕರಣವೊಂದು ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಧಾರವಾಡದಲ್ಲಿ ಮತ್ತೊಂದು ಕೊಲೆ ನಡೆದಿದೆ. ಧಾರವಾಡದ ಹೊರವಲಯದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಕಾರಿನಲ್ಲಿದ್ದ ಹಲವರು ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ  ಓರ್ವ ಸಾವಿಗೀಡಾಗಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ. ಅಳ್ನಾವರ ತಾಲೂಕಿನ ಅರವಟಗಿಯ ಕಲ್ಲನಗೌಡ ಪಾಟೀಲ ಎಂಬಾತ ಹತ್ಯೆಗೀಡಾಗಿದ್ದು,  ತಡಸಿನಕೊಪ್ಪದ ಸುನೀಲ ಜಕ್ಕಣ್ಣನವರ ಎಂಬಾತ ಗಾಯಗೊಂಡಿದ್ದಾನೆ. ಈ ಇಬ್ಬರ ಹತ್ಯೆಗೂ ಸಂಚು ರೂಪಿಸಲಾಗಿತ್ತು. ಹತ್ಯೆ ಮಾಡಿದವರು ಯಾರು ಎಂಬುದು ಗೊತ್ತಾಗಿಲ್ಲ. ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಕಲ್ಲನಗೌಡ ಪಾಟೀಲ ಎಂಬಾತ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಸಾವಿಗೀಡಾಗಿದ್ದಾನೆ.

Read More

ಹುಬ್ಬಳ್ಳಿ: ಮಂಡ್ಯ ಜಿಲ್ಲೆಯಲ್ಲಿ ಹನುಮ ಧ್ವಜ ವಿಷಯವಾಗಿ ಕರೆ ನೀಡಿದ ಬಂದ್ ನ್ನು ಬಿಜೆಪಿ ಬೆಂಬಲಿಸಲಿದೆ. ಹನುಮ ಧ್ವಜಕ್ಕೆ ಎಲ್ಲಿ ಅವಮಾನ ಆಗಿದೆಯೋ ಅಲ್ಲಿಯೇ ಸನ್ಮಾನವಾಗಬೇಕು ಎಂದು ವಿಧಾನಪರಿಷತ್ತು ವಿರೋಧ ಪಕ್ಷದ ಮುಖ್ಯ ಸಚೇತಕಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎನ್.ರವಿಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಕೆರಗೋಡ ಸ್ಥಳೀಯ ಸರ್ಕಾರ ಹನುಮ ಧ್ವಜ ಹಾರಿಸಲು ಅನುಮತಿ ನೀಡಿದರೆ, ರಾಜ್ಯ ಸರ್ಕಾರ ಧ್ವಜ ಕಿತ್ತು ಹಾಕುತ್ತದೆ. ಎಲ್ಲಿಯೇ ಆಗಲಿ ಕೋಮು ಸಂಘರ್ಷ ಸೃಷ್ಟಿಸುವ ಯಾವ ಕೆಲಸವನ್ನು ಬಿಜೆಪಿ‌ ಮಾಡುತ್ತಿಲ್ಲ ಎಂದರು.ಕೇಂದ್ರದಿಂದ ರಾಜ್ಯಕ್ಕೆ ಯುಪಿಎ-ಎನ್ ಡಿಎ ಸರ್ಕಾರ ಅವಧಿಯಲ್ಲಿ ಎಷ್ಟು ಅನುದಾನ ಬಂದಿದೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ‌ ಶ್ವೇತ ಪತ್ರ ಹೊರಡಿಸಲಿ. ಎನ್ ಡಿಎ ಸರ್ಕಾರದ ಅವಧಿಯಲ್ಲಿ‌ ಹೆಚ್ಚು ಅನುದಾನ ಬಂದಿದೆ ಎಂದಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ ಎಂದು‌ ಸಿದ್ದರಾಮಯ್ಯ ಅವರಿಗೆ ಸವಾಲೆಸೆದರು. ಟೋಪಿ ಹಾಕಿಕೊಳ್ಳುವ ಸಿಎಂ‌ ಸಿದ್ದರಾಮಯ್ಯ ಅವರಿಗೆ ತಿಲಕ ಹಚ್ಚಿಕೊಳ್ಳಲು ಯಾಕೆ ಅಸಡ್ಡೆ ತೋರುತ್ತಿದ್ದಾರೆ…

Read More

ಸೂರತ್: ಇಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ (Ranji Trophy) ಅನುಭವಿ ಬ್ಯಾಟರ್ ಮನೀಶ್ ಪಾಂಡೆ (Manish Pandey ) ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು (Karnataka Team) ರೈಲ್ವೇಸ್ ವಿರುದ್ಧ 1 ವಿಕೆಟ್ ರೋಚಕ ಗೆಲುವು ಸಾಧಿಸಿದೆ. 226 ರನ್ ಗೆಲುವಿನ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಒಂದು ಹಂತದಲ್ಲಿ 214ಕ್ಕೆ ಒಂಬತ್ತು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯ ವಿಕೆಟ್‍ಗೆ ಗೆಲುವಿಗೆ 12 ರನ್‍ಗಳು ಬೇಕಾಗಿತ್ತು. ಈ ವೇಳೆ ಹೋರಾಟ ನಡೆಸಿದ ಪಾಂಡೆ ತಂಡಕ್ಕೆ ಗೆಲುವು ತಂದುಕೊಟ್ಟರು. ಮನೀಶ್ ಪಾಂಡೆ 121 ಎಸೆತಗಳಲ್ಲಿ 67 ರನ್ ಗಳಿಸಿ (6 ಬೌಂಡರಿ, 1 ಸಿಕ್ಸರ್) ಅಜೇಯರಾಗಿ ಉಳಿದರು. ಕಡೆಯದಾಗಿ ಕಣಕ್ಕಿಳಿದ ವಾಸುಕಿ ಕೌಶಿಕ್ ಎರಡು ಎಸೆತಗಳಲ್ಲಿ ಅಜೇಯ 1 ರನ್ ಗಳಿಸಿದರು. ರವಿಕುಮಾರ್ ಸಮರ್ಥ್ (35), ಅನೀಶ್ ಕೆವಿ (34), ಶ್ರೀನಿವಾಸ ಶರತ್ (23) ಹಾಗೂ ವಿಜಯಕುಮಾರ್ ವೈಶಾಖ (38) ತಂಡಕ್ಕೆ ಉತ್ತಮ ಮೊತ್ತ ನೀಡಿದರು. ಎರಡೂ ಇನ್ನಿಂಗ್ಸ್‌ಗಳಿಂದ ತಲಾ…

Read More